Short News

'2011ರ ವಿಶ್ವಕಪ್ ಗೆದ್ದ ತಂಡದ ಸದಸ್ಯನ ಜತೆ ಬುಕ್ಕಿಗೆ ನಂಟು'

'2011ರ ವಿಶ್ವಕಪ್ ಗೆದ್ದ ತಂಡದ ಸದಸ್ಯನ ಜತೆ ಬುಕ್ಕಿಗೆ ನಂಟು'

2011ರಲ್ಲಿ ವಿಶ್ವಕಪ್ ಗೆದ್ದ ಟೀಂ ಇಂಡಿಯಾದ ಪ್ರಮುಖ ಆಟಗಾರರೊಬ್ಬರಿಗೂ ಜನಪ್ರಿಯ ಬುಕ್ಕಿಗೂ ನಂಟಿತ್ತು ಎಂದು ತನಿಖಾಧಿಕಾರಿ ಬಿ.ಬಿ ಮಿಶ್ರಾ ಅವರು ಸ್ಫೋಟಕ ಮಾಹಿತಿ ನೀಡಿದ್ದಾರೆ. ಆದರೆ, ಆ ಆಟಗಾರ ಯಾರು ಎಂಬುದನ್ನು ಬಹಿರಂಗಪಡಿಸಿಲ್ಲ. ಸುಪ್ರೀಂಕೋರ್ಟಿನಿಂದ ನೇಮಕಗೊಂಡಿರುವ ಐಪಿಎಸ್ ಅಧಿಕಾರಿ ಬಿ. ಬಿ ಶರ್ಮಾ ಅವರು ಇಂಡಿಯನ್ ಪ್ರೀಮಿಯರ್ ಲೀಗ್ 2013ರ ಅಕ್ರಮಗಳ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಬುಕ್ಕಿಯೊಬ್ಬ ತನ್ನೊಂದಿಗೆ ಸಂಪರ್ಕದಲ್ಲಿದ್ದ ಆಟಗಾರ ಹಾಗೂ ಇಬ್ಬರ ನಡುವಿನ ಸಂಭಾಷಣೆ ಸಾಕ್ಷ್ಯವನ್ನು ನೀಡುವುದಾಗಿ ಮುಂದೆ ಬಂದಿದ್ದ ಎಂದಿದ್ದಾರೆ.
ಜಿಯೋ-ಏರ್‌ಟೆಲ್ ಅಸ್ತಿತ್ವಕ್ಕೆ ಧಕ್ಕೆ ತಂದಿದೆ ಆಪಲ್ 'ಇ-ಸಿಮ್'!

ಜಿಯೋ-ಏರ್‌ಟೆಲ್ ಅಸ್ತಿತ್ವಕ್ಕೆ ಧಕ್ಕೆ ತಂದಿದೆ ಆಪಲ್ 'ಇ-ಸಿಮ್'!

ಮೊನ್ನೆ ತಾನೆ ಮಾರುಕಟ್ಟೆಗೆ ಕಾಲಿಟ್ಟಿರುವ ಆಪಲ್ ಐಫೋನ್ Xs, ಐಫೋನ್ Xs ಮ್ಯಾಕ್ಸ್ ಹಾಗೂ ಐಫೋನ್ Xr ಸ್ಮಾರ್ಟ್‌ಫೋನ್‌ಗಳಲ್ಲಿ ಡ್ಯುಯಲ್ ಸಿಮ್ ಹಾಕಿಕೊಳ್ಳುವ ಹೊಸ ಅವಕಾಶವನ್ನು ಆಪಲ್ ಮಾಡಿಕೊಟ್ಟಿದೆ. ಆಂಡ್ರಾಯ್ಡ್ ಫೋನ್‌ಗಳಲ್ಲಿ ಇರುವುದಕ್ಕಿಂತ ಭಿನ್ನ ಮಾದರಿಯಲ್ಲಿ ಬಂದಿರುವ ಇ-ಸಿಮ್‌ನಿಂದಾಗಿ ಟೆಲಿಕಾಂ ಆಪರೇಟರ್‌ಗಳ ಅಸ್ತಿತ್ವವೇ ಅಲುಗಾಡುತ್ತದೆ ಎಂಬ ಭೀತಿ ಈಗ ಎದುರಾಗಿದೆ. ಇ-ಸಿಮ್‌ನಿಂದ ಒಂದು ನೆಟ್‌ವರ್ಕ್‌ ನಿಂದ ಇನ್ನೊಂದು ನೆಟ್‌ವರ್ಕ್‌ಗೆ ಬದಲಾಗುವುದು ಅತ್ಯಂತ ಸುಲಭವಾಗಿದೆ. ಟೆಲಿಕಾಂ ಕಂಪನಿಗಳ ಕಚೇರಿಗೆ ಹೋಗದೇ, ಕೇವಲ ಫೋನ್‌ನಲ್ಲಿರುವ ಸೆಟ್ಟಿಂಗ್ಸ್ ಬದಲಿಸಿದರೆ ಸಾಕು ನೆಟ್‌ವರ್ಕ್ ಕೂಡ ಬದಲಾಗಲಿದೆ.
ಹೊಸದಾಗಿ ಬಿಡುಗಡೆಗೊಂಡ ಮಹೀಂದ್ರಾ ಮರಾಜೊ ಕಾರಿಗೆ ಫುಲ್ ಡಿಮ್ಯಾಂಡ್

ಹೊಸದಾಗಿ ಬಿಡುಗಡೆಗೊಂಡ ಮಹೀಂದ್ರಾ ಮರಾಜೊ ಕಾರಿಗೆ ಫುಲ್ ಡಿಮ್ಯಾಂಡ್

ದೇಶಿಯ ವಾಹನ ತಯಾರಕ ಸಂಸ್ಥೆಯಾದ ಮಹೀಂದ್ರಾ ಮಾರುಕಟ್ಟೆಯಲ್ಲಿ ಎಂಪಿಪಿ ಕಾರಿನ ಬೇಡಿಕೆಯು ಹೆಚ್ಚುತ್ತಿರುವ ಕಾರಣ ಗ್ರಾಹಕರಿಗೆ ಅನುಕುಣವಾಗಿ ಮರಾಜೊ ಎಂಪಿವಿ ಕಾರನ್ನು ಸೆಪ್ಟೆಂಬರ್ 3ರಂದು ಬಿಡುಗಡೆಗೊಳಿಸಿತ್ತು. ಶಾರ್ಕ್ ವಿನ್ಯಾಸವನ್ನು ಮತು ಪ್ರೀಮಿಯಮ್ ಫೀಚರ್‍‍ಗಳಿಂದ ಸಜ್ಜುಗೊಂಡ ಈ ಕಾರಿಗೆ ಇದೀಗ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆ ಇದೆ. ಈ ಕಾರಿನ ಬುಕ್ಕಿಂಗ್ ಹೆಚ್ಚುತ್ತಿರುವ ಕಾರಣ ಆಗಸ್ಟ್ ತಿಂಗಳಿನಲ್ಲಿ ಸುಮಾರು 1,762 ಯೂನಿಟ್ ಕಾರುಗಳನ್ನು ತಮ್ಮ ಡೀಲರ್‍‍ಗಳ ಯಾರ್ಡ್‍ಗೆ ತಲುಪಿಸಲಾಗಿದೆ.
58 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ಪಿಜಿಸಿಐಎಲ್

58 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ಪಿಜಿಸಿಐಎಲ್

ಪಿಜಿಸಿಐಎಲ್ 58 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು 4 ಅಕ್ಟೋಬರ್ 2018 ಕೊನೆಯ ದಿನವಾಗಿದೆ. ಪವರ್ ಗ್ರೀಡ್ ಕಾರ್ಪೋರೇಷನ್ ಆಫ್ ಇಂಡಿಯಾ ಲಿಮಿಟೆಡ್ (ಪಿಜಿಸಿಐಎಲ್) ಡಿಪ್ಲೊಮಾ ಟ್ರೈನಿ, ಜ್ಯೂನಿಯರ್ ಆಫೀಸರ್ ಟ್ರೈನಿ, ಜ್ಯೂನಿಯರ್ ಟೆಕ್ನಿಶಿಯನ್ ಟ್ರೈನಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಆಯ್ಕೆಯಾದ ಅಭ್ಯರ್ಥಿಗಳು ದೇಶದ ಯಾವುದೇ ನಗರದಲ್ಲಿ ಕೆಲಸ ಮಾಡಲು ಸಿದ್ಧರಿರಬೇಕು. ಡಿಪ್ಲೊಮಾ ಟ್ರೈನಿ/ ಜ್ಯೂನಿಯರ್ ಆಫೀಸರ್ ಟ್ರೈನಿ ಹುದ್ದೆಗೆ 16500 ರೂ. ವೇತನ ನಿಗದಿ ಮಾಡಲಾಗಿದೆ. 
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more