Short News

ಏಷ್ಯನ್ ಗೇಮ್ಸ್: ಟೆನಿಸ್ ಡಬಲ್ಸ್ ನಲ್ಲಿ ಫೈನಲ್ ಗೆ ಲಗ್ಗೆ ಇಟ್ಟ ಬೋಪಣ್ಣ-ಶರಣ್ ಜೋಡಿ

ಏಷ್ಯನ್ ಗೇಮ್ಸ್: ಟೆನಿಸ್ ಡಬಲ್ಸ್ ನಲ್ಲಿ ಫೈನಲ್ ಗೆ ಲಗ್ಗೆ ಇಟ್ಟ ಬೋಪಣ್ಣ-ಶರಣ್ ಜೋಡಿ

ಏಷ್ಯಾನ್ ಗೇಮ್ಸ್ 5ನೇ ದಿನವೂ ಭಾರತದ ಪದಕ ಬೇಟೆ ಮುಂದುವರೆದಿದೆ. ಈಗಾಗಲೇ ಭಾರತದ ಖಾತೆಯಲ್ಲಿ 17 ಪದಕಗಳಿದ್ದು ಪುರುಷರ ಟೆನಿಸ್ ಡಬಲ್ಸ್ ನಲ್ಲಿ ಭಾರತಕ್ಕೆ ಒಂದೋ ಚಿನ್ನ, ತಪ್ಪಿದರೆ ಬೆಳ್ಳಿಯಂತೂ ಖಾತ್ರಿಯಾಗಿದೆ. ಗುರುವಾರ ನಡೆದ ಪುರುಷರ ಟೆನಿಸ್ ಡಬಲ್ಸ್ ಸೆಮಿ ಫೈನಲ್ಸ್ ನಲ್ಲಿ ಭಾರತದ ರೋಹನ್ ಬೋಪಣ್ಣ ಮತ್ತು ದಿವಿಜ್ ಶರಣ್ ಜೋಡಿ ಜಪಾನ್ ನ ಷೊ ಶಿಮಾಬುಕುರೊ-ಕೈಟೊ ಯುಸುಗಿ ಜೋಡಿಯನ್ನು 4-6, 6-3, 10-8 ರಿಂದ ಸೋಲಿಸಿ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟಿದೆ. ಇನ್ನೊಂದೆಡೆ ಮಿಶ್ರ ಡಬಲ್ಸ್ ವಿಭಾಗದಲ್ಲಿ ಭಾರತದ ಅಂಕಿತ ರೈನಾ ಹಾಗೂ ರೋಹನ್ ಬೋಪಣ್ಣ ಜೋಡಿಯು ಕ್ವಾರ್ಟರ್ ಫೈನಲ್ ಹಂತಕ್ಕೆ ಪ್ರವೇಶಿಸಿದ್ದಾರೆ.
ಪಂಚತಂತ್ರ' ಫಸ್ಟ್ ಲುಕ್ ಬಿಡುಗಡೆ ಮಾಡಲಿದ್ದಾರೆ ಶಿವಣ್ಣ

ಪಂಚತಂತ್ರ' ಫಸ್ಟ್ ಲುಕ್ ಬಿಡುಗಡೆ ಮಾಡಲಿದ್ದಾರೆ ಶಿವಣ್ಣ

ಯೋಗರಾಜ್ ಭಟ್ ತುಂಬಾ ಇಷ್ಟಪಟ್ಟು ನಿರ್ದೇಶನ ಮಾಡಿರುವ ಸಿನಿಮಾ 'ಪಂಚತಂತ್ರ'. ಹೊಸ ಕಲಾವಿದರನ್ನಿಟ್ಟು ಹೊಸ ರೀತಿ ಮನರಂಜನೆ ನೀಡಲು ಮುಂದಾಗಿರುವ ಭಟ್ಟರು ಇತ್ತೀಚಿಗಷ್ಟೆ ರೋಮ್ಯಾಂಟಿಕ್ ಹಾಡೊಂದಕ್ಕೆ ಸುದ್ದಿಯಾಗಿದ್ದರು. ಈಗ 'ಪಂಚತಂತ್ರ' ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗುತ್ತಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಪಂಚತಂತ್ರ ಚಿತ್ರದ ಫಸ್ಟ್ ಲುಕ್ ರಿಲೀಸ್ ಮಾಡುತ್ತಿದ್ದು, ಇಂದು ಸಂಜೆ 5.30ಕ್ಕೆ ಅನಾವರಣ ಮಾಡಲಿದ್ದಾರೆ.
ಸುಳ್ಳು ಹೇಳಿ 'ಬಿಗ್ಬಾಸ್' ಮನೆಗೆ ಬಂದ್ರಾ ಈ ಸ್ಪರ್ಧಿ !?

ಸುಳ್ಳು ಹೇಳಿ 'ಬಿಗ್ಬಾಸ್' ಮನೆಗೆ ಬಂದ್ರಾ ಈ ಸ್ಪರ್ಧಿ !?

ಸ್ನೇಹಿತ ಶಿವಾಶೀಶ್ ಜೊತೆಗೆ 'ವಿಚಿತ್ರ ಜೋಡಿ'ಯಾಗಿ 'ಬಿಗ್ ಬಾಸ್-12' ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಸೌರಭ್ ಪಟೇಲ್ ಬಗ್ಗೆ ಒಂದು ಬ್ರೇಕಿಂಗ್ ನ್ಯೂಸ್ ಬಾಲಿವುಡ್ ಅಂಗಳದಿಂದ ಬಂದಿದೆ. ತಮ್ಮ ಹೆಸರು ಹಾಗೂ ವೃತ್ತಿ ಬಗ್ಗೆ ಸುಳ್ಳು ಹೇಳಿ ಸೌರಭ್ ಪಟೇಲ್ 'ಬಿಗ್ ಬಾಸ್' ಮನೆಗೆ ಬಂದಿದ್ದಾರಂತೆ. ತಾವು ರೈತ ಅಂತ ಹೇಳಿಕೊಂಡು ಸೌರಭ್ ಪಟೇಲ್ 'ಬಿಗ್ ಬಾಸ್'ಗೆ ಬಂದರು. ಆದ್ರೀಗ, ಸೌರಭ್ ಪಟೇಲ್ ರೈತ ಅಲ್ಲ. ರಶ್ಮಿಶರ್ಮಾ ಹಾಗೂ BAGಫಿಲ್ಮ್ಸ್ ಎಂಬ ಪ್ರೊಡಕ್ಷನ್ ಹೌಸ್ ನಲ್ಲಿ ಸೌರಭ್ ಅಸಿಸ್ಟೆಂಟ್ ಕಾಸ್ಟಿಂಗ್ ಡೈರೆಕ್ಟರ್ ಆಗಿದ್ದರು ಎಂದು ಬಾಲಿವುಡ್ ಲೈಫ್ ವರದಿ ಮಾಡಿದೆ. ಈತನ ನಿಜ ನಾಮ ಸಾಹಿಲ್ ರಾಮೇಶ್ವರ್ ಪಟೇಲ್ ಎನ್ನಲಾಗಿದೆ.
ಮಾರುತಿ ಸುಜುಕಿ ಕಾರುಗಳನ್ನು ನಿರ್ಮಾಣ ಮಾಡಲಿದೆ ಟೊಯೊಟಾ

ಮಾರುತಿ ಸುಜುಕಿ ಕಾರುಗಳನ್ನು ನಿರ್ಮಾಣ ಮಾಡಲಿದೆ ಟೊಯೊಟಾ

ಸುಜುಕಿ ಮೋಟಾರ್ಸ್ ಮತ್ತು ಟೊಯೊಟಾ ಮೋಟಾರ್ಸ್ ಸಂಸ್ಥೆಗಳು ಹೊಸ ಕಾರುಗಳ ಉತ್ಪಾದನೆಗಾಗಿ ಕೈಜೋಡಿಸಿದ್ದು, ಸಹಭಾಗಿತ್ವ ಆಧಾರದ ಮೇಲೆ ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಗುಣವಾಗಿ ಹೊಸ ಕಾರು ಉತ್ಪನ್ನಗಳನ್ನು ತಯಾರಿಸಲು ಬೃಹತ್ ಬಂಡವಾಳ ಹೂಡಿಕೆ ಮಾಡುತ್ತಿವೆ. ಕಳೆದ ವರ್ಷ ಫೆಬ್ರುವರಿಯಲ್ಲಿಯೇ ಟೊಯೊಟಾ ಮತ್ತು ಸುಜುಕಿ ಮೋಟಾರ್ಸ್ ಜಂಟಿಯಾಗಿ ಕಾರು ಉತ್ಪಾದಿಸುವ ಬಗ್ಗೆ ಮಾತುಕತೆ ನಡೆಸಿದ್ದವು. ಆದ್ರೆ ಕಾರಣಾಂತರಗಳಿಂದ ಹೊಸ ಯೋಜನೆ ಬಗ್ಗೆ ತಟಸ್ಥವಾಗಿದ್ದ ಎರಡು ಸಂಸ್ಥೆಗಳು ಇದೀಗ ಮಹತ್ವದ ನಿರ್ಣಯಕ್ಕೆ ಬಂದಿದ್ದು, ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಗಾಗಿ ಹೊಸ ಒಪ್ಪಂದ ಮಾಡಿಕೊಂಡಿವೆ.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more