Short News

ಏಷ್ಯನ್ ಗೇಮ್ಸ್: ಕಬಡ್ಡಿಯಲ್ಲಿ ಬೆಳ್ಳಿ ಗೆದ್ದ ಭಾರತದ ವನಿತೆಯರು

ಏಷ್ಯನ್ ಗೇಮ್ಸ್: ಕಬಡ್ಡಿಯಲ್ಲಿ ಬೆಳ್ಳಿ ಗೆದ್ದ ಭಾರತದ ವನಿತೆಯರು

ಭಾರತದ ಪುರುಷರ ಕಬಡ್ಡಿ ತಂಡ ಏಷ್ಯಾನ್ ಗೇಮ್ಸ್ ನ ಸೆಮಿಫೈನಲ್ ನಲ್ಲಿ ಇರಾನ್ ವಿರುದ್ಧ ಸೋತ ಬಳಿಕ ಮಹಿಳಾ ಕಬಡ್ಡಿ ತಂಡವೂ ಇರಾನ್ ಎದುರು ಅಘಾತವನ್ನನುಭವಿಸಿದೆ. ಮಹಿಳಾ ಕಬಡ್ಡಿ ಫೈನಲ್ ಪಂದ್ಯದಲ್ಲಿ ಭಾರತ ಇರಾನ್ ಎದುರು ಸೋಲನುಭವಿಸಿದೆ. ಶುಕ್ರವಾರ ನಡೆದ ಏಷ್ಯನ್ ಗೇಮ್ಸ್ ಕಬಡ್ಡಿ ಫೈನಲ್ ಪಂದ್ಯದಲ್ಲಿ ಭಾರತದ ಮಹಿಳೆಯರು ಇರಾನ್ ವಿರುದ್ಧ 27-24 ಅಂತರದ ಸೋಲನುಭವಿಸಿದರು. ಹೀಗಾಗಿ ಚಿನ್ನದ ನಿರೀಕ್ಷೆಯಲ್ಲಿದ್ದ ಭಾರತಕ್ಕೆ ಬೆಳ್ಳಿ ಪದಕ ಲಭಿಸಿದೆ.
ವರ್ಲ್ಡ್ ರಸ್ಲಿಂಗ್ ನಲ್ಲಿ ಬೆನ್ನು ಬೆನ್ನಿಗೆ ಪದಕ ಗೆದ್ದ ಮೊದಲ ಭಾರತೀಯ ಸಜನ್

ವರ್ಲ್ಡ್ ರಸ್ಲಿಂಗ್ ನಲ್ಲಿ ಬೆನ್ನು ಬೆನ್ನಿಗೆ ಪದಕ ಗೆದ್ದ ಮೊದಲ ಭಾರತೀಯ ಸಜನ್

ಸ್ಲೋವಾಕಿಯಾದ ಟ್ರ್ನಾವಾದಲ್ಲಿ ನಡೆದ ಜೂನಿಯರ್ ವರ್ಲ್ಡ್ ರಸ್ಲಿಂಗ್ ಚಾಂಪಿಯನ್ ಶಿಪ್ ನಲ್ಲಿ ಭಾರತದ ಸಜನ್ ಭನ್ವಾಲ್ ಅವರು ಪುರುಷರ 77 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ಜಯಿಸಿದ್ದಾರೆ. ಈ ಗೆಲುವಿನೊಂದಿಗೆ ಜೂನಿಯರ್ ರಸ್ಲಿಂಗ್ ಚಾಂಪಿಯನ್ ಶಿಪ್ ನಲ್ಲಿ ಬೆನ್ನು ಬೆನ್ನಿಗೆ ಭಾರತಕ್ಕೆ ಪದಕ ತಂದ ಮೊದಲ ಭಾರತೀಯ ಎಂಬ ಹಿರಿಮೆಗೂ ಸಜನ್ ಪಾತ್ರರಾಗಿದ್ದಾರೆ. ಈ ವಿಭಾದಲ್ಲಿ ಚಿನ್ನದ ಪದಕ ರಷ್ಯಾದ ಇಸ್ಲಾಮ್ ಒಪಿವ್ ಅವರ ಪಾಲಾಯಿತು. ಸೋನೀಪತ್ ಉತ್ತಮ ಪ್ರದರ್ಶನ ತೋರಿದರಾದರೂ ಒಪಿವ್ ಅವರು ಟೆಕ್ನಿಕಲ್ ಸುಪೀರಿಯರ್ ವಿಭಾಗದಲ್ಲಿ 8-0 ಅಂತರದಲ್ಲಿ ಪಾಯಿಂಟ್ ಕದ್ದು ಚಿನ್ನ ತನ್ನದಾಗಿಸಿಕೊಂಡರು.
ಬಿಡುಗಡೆಗೆ ಮುಂಚೆಯೇ ಫ್ಯಾಮಿಲಿ ಪ್ರೇಕ್ಷಕರ ಮನಗೆದ್ದ 'ಇರುವುದೆಲ್ಲವ ಬಿಟ್ಟು'

ಬಿಡುಗಡೆಗೆ ಮುಂಚೆಯೇ ಫ್ಯಾಮಿಲಿ ಪ್ರೇಕ್ಷಕರ ಮನಗೆದ್ದ 'ಇರುವುದೆಲ್ಲವ ಬಿಟ್ಟು'

ಇಡೀ ಫ್ಯಾಮಿಲಿಯನ್ನೇ ಚಿತ್ರಮಂದಿರಕ್ಕೆ ಕರೆದುಕೊಂಡು ಬಂದಿದೆ ಈ ಸಿನಿಮಾ. ಹೌದು, ಮೇಘನಾ ರಾಜ್, ತಿಲಕ್ ಹಾಗೂ ಶ್ರೀ ಮಹಾದೇವ್ ಅಭಿನಯದ 'ಇರುವುದೆಲ್ಲವ ಬಿಟ್ಟು' ಸಿನಿಮಾ ಇದೇ ವಾರ (ಸೆಪ್ಟೆಂಬರ್ 21) ರಾಜ್ಯಾದ್ಯಂತ ತೆರೆಕಾಣುತ್ತಿದೆ. ಈಗಾಗಲೇ ಟ್ರೈಲರ್, ಹಾಡುಗಳು, ಪ್ರಮೋಷನ್ ಮೂಲಕ ಎಲ್ಲರ ಗಮನ ಸೆಳೆದಿರುವ ಈ ಚಿತ್ರವನ್ನ ಇಡೀ ಕುಟುಂಬ ಜೊತೆ ನೋಡಬೇಕು ಎಂದು ಚಿತ್ರತಂಡ ವಿಶೇಷವಾಗಿ ಹೇಳುತ್ತಲೇ ಇದೆ. ಇದೇ ಉದ್ದೇಶದಿಂದ ಒಂದು ಹೊಸ ರೀತಿಯ ಪ್ರಯತ್ನವನ್ನ ಮಾಡಿ ಗೆದ್ದಿದೆ ಚಿತ್ರತಂಡ. 'ಇರುವುದೆಲ್ಲವ ಬಿಟ್ಟು' ಚಿತ್ರ ಪಬ್ಲಿಕ್ ಪ್ರೀಮಿಯರ್ ಶೋ ಮಾಡಿ ಜನರ ಮನಸ್ಸು ಗೆದ್ದಿದೆ.
'ಕೇಜಿ ಲೆಕ್ಕದಲ್ಲಿ ಹಣ ತೂಕ ಹಾಕಿ ಕೈ ಹೈ ಕಮಾಂಡ್ ಗೆ ತಲುಪಿಸಿದ್ದಾರೆ'

'ಕೇಜಿ ಲೆಕ್ಕದಲ್ಲಿ ಹಣ ತೂಕ ಹಾಕಿ ಕೈ ಹೈ ಕಮಾಂಡ್ ಗೆ ತಲುಪಿಸಿದ್ದಾರೆ'

"ಲೆಕ್ಕಕ್ಕೆ ತೋರಿಸದ ನಗದು, ಹವಾಲ ವ್ಯವಹಾರ ಮತ್ತು ಭ್ರಷ್ಟಾಚಾರದ ಡೀಲ್ ಇವೆಲ್ಲ ಕಾಂಗ್ರೆಸ್ ಪಕ್ಷದ ಆಧಾರ ಸ್ತಂಭ. ಕಾಂಗ್ರೆಸ್ ಹಾಗೂ ಭ್ರಷ್ಟಾಚಾರ ಒಂದಕ್ಕೊಂದು ಸಮಾನಾರ್ಥಕ ಪದಗಳು" ಎಂದು ಬಿಜೆಪಿ ನಾಯಕ ಸಂಬಿತ್ ಪಾತ್ರ ವಿರೋಧ ಪಕ್ಷವಾದ ಕಾಂಗ್ರೆಸ್ ವಿರುದ್ಧ ಬುಧವಾರ ನವದೆಹಲಿಯಲ್ಲಿ ಗಂಭೀರವಾದ ಆರೋಪ ಮಾಡಿದ್ದಾರೆ. ಕರ್ನಾಟಕದಿಂದ ಎಐಸಿಸಿಗೆ ಹಣ ವರ್ಗಾವಣೆ ಮಾಡುವುದಕ್ಕೆ ಹವಾಲ ಜಾಲ ನೆರವು ನೀಡಿದೆ ಅನ್ನೋದಿಕ್ಕೆ ಸಾಕ್ಷ್ಯವಿದೆ. ಸ್ವತಃ ಕಾಂಗ್ರೆಸ್ ಪಕ್ಷ ಹವಾಲ ಜಾಲವನ್ನು ನಡೆಸುತ್ತಿದೆ. ಇನ್ನು ಡಿ.ಕೆ.ಶಿವಕುಮಾರ್ ಅವರ ಚಾಲಕ ಆದಾಯ ತೆರಿಗೆ ಇಲಾಖೆ ಬಳಿ ನೀಡಿರುವ ಹೇಳಿಕೆ ಬಿಜೆಪಿ ಹತ್ತಿರ ಇದೆ ಎಂದಿದ್ದಾರೆ.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more