Short News

ಏಷ್ಯನ್ ಗೇಮ್ಸ್ 2018: ಪುರುಷರ ಕ್ವಾಡ್ರಪಲ್ ನಲ್ಲಿ ಭಾರತಕ್ಕೆ ಚಿನ್ನದ ಪದಕ

ಏಷ್ಯನ್ ಗೇಮ್ಸ್ 2018: ಪುರುಷರ ಕ್ವಾಡ್ರಪಲ್ ನಲ್ಲಿ ಭಾರತಕ್ಕೆ ಚಿನ್ನದ ಪದಕ

ಇಂಡೊನೇಷ್ಯಾದ ಜಕಾರ್ತಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ನಲ್ಲಿ ಭಾರತ ಮತ್ತೊಂದು ಸ್ವರ್ಣಪದಕ ಗಳಿಸುವಲ್ಲಿ ಯಶಸ್ವಿಯಾಗಿದೆ. 18 ನೇ ಏಷ್ಯನ್ ಗೇಮ್ಸ್ ನ ಆರನೇ ದಿನವಾದ ಇಂದು ಭಾರತದ ಪುರುಷರ ರೋಯಿಂಗ್ ಕ್ವಾಡ್ರಪಲ್ ಸ್ಕಲ್ಸ್‌(4 ಜನರ ತಂಡ) ತಂಡ ಸ್ಕಲ್ಸ್ ರಾವಿಂಗ್ ನಲ್ಲಿ ಚಿನ್ನದ ಪದಕ ಪಡೆಯಿತು. ತಂಡದಲ್ಲಿದ್ದ ಸವರ್ಣ್ ಸಿಂಗ್, ದತ್ತು ಬಬನ್ ಭೋಕನಲ್ ಹಾಗೂ ಓಂ ಪ್ರಕಾಶ್ 6:17.13 ಸಮಯದಲ್ಲಿ ಈ ಗುರಿಯನ್ನು ಮುಟ್ಟಿದರು.ಇದಕ್ಕೂ ಮುನ್ನ ಭಾರತದ ರೋಹಿತ್ ಕುಮಾರ್ ಮತ್ತು ಭಗವಾನ್ ದಾಸ್ ಅವರು ಲೈಟ್ ವೇಟ್ ಡಬಲ್ ಸ್ಕಲ್ಸ್ ರಾವಿಂಗ್ ನಲ್ಲಿ ಕಂಚಿನ ಪದಕ ಪಡೆದ ಸಾಧನೆ ಮಾಡಿದ್ದರು.
ಪಾಕಿಸ್ತಾನ ವಿರುದ್ಧ ಭಾರತಕ್ಕೆ 8 ವಿಕೆಟ್ ಭರ್ಜರಿ ಜಯ

ಪಾಕಿಸ್ತಾನ ವಿರುದ್ಧ ಭಾರತಕ್ಕೆ 8 ವಿಕೆಟ್ ಭರ್ಜರಿ ಜಯ

ದುಬೈನಲ್ಲಿ ನಡೆಯುತ್ತಿರುವ ಏಷ್ಯಾ ಕಪ್ ಕ್ರಿಕೆಟ್ ಪಂದ್ಯಾಟದ 5ನೇ ಪಂದ್ಯದಲ್ಲಿ ಭಾರತ ತಂಡ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ 8 ವಿಕೆಟ್ ಜಯ ಸಾಧಿಸಿದೆ. ನಾಯಕ ರೋಹಿತ್ ಶರ್ಮ ಅರ್ಧ ಶತಕ (52) ಮತ್ತು ಶಿಖರ್ ಧವನ್ 46 ರನ್ ನೆರವಿನಿಂದ ಭಾರತ ಏಷ್ಯಾ ಕಪ್ ದ್ವಿತೀಯ ಸೆಣಸಾಟದಲ್ಲಿ ಮುನ್ನಡೆ ಪಡೆದಿದೆ. ಟಾಸ್ ಗೆದ್ದು ಬ್ಯಾಟಿಂಗ್ ಗೆ ಇಳಿದಿದ್ದ ಪಾಕಿಸ್ತಾನ 43.1 ಓವರ್ ಮುಕ್ತಾಯಕ್ಕೆ ಎಲ್ಲಾ ವಿಕೆಟ್ ಕಳೆದು 162 ರನ್ ಪೇರಿಸಿ ಭಾರತಕ್ಕೆ 163 ರನ್ ಗುರಿ ನೀಡಿತ್ತು.
ಇಂದಿನ (ಸೆ.20) ದ್ವಾದಶ ರಾಶಿಗಳ ನಿತ್ಯ ಭವಿಷ್ಯ

ಇಂದಿನ (ಸೆ.20) ದ್ವಾದಶ ರಾಶಿಗಳ ನಿತ್ಯ ಭವಿಷ್ಯ

ಮೇಷ : ಉದ್ಯೋಗದಲ್ಲಿ ಉನ್ನತ ಸ್ಥಾನಪ್ರಾಪ್ತಿ. ವೃಷಭ : ರಾಜಕಾರಣಿಗಳಿಗೆ ಉತ್ತಮವಾದ ದಿನ. ಬಹುದಿನಗಳ ಕನಸು ನೆರವೇರುತ್ತದೆ. ಮಿಥುನ: ಷೇರುಪೇಟೆ ವ್ಯವಹಾರದವರಿಗೆ ಅನುಕೂಲ. ಕಟಕ : ಹೊಸ ಉದ್ಯೋಗದ ಬಗ್ಗೆ ಯೋಚಿಸುವಿರಿ.. ಸಿಂಹ: ವಿವೇಚನೆಯಿಂದ ಕಾರ್ಯಪ್ರವೃತ್ತರಾಗಿ. ಕನ್ಯಾ: ಮೇಲಧಿಕಾರಿಯಿಂದ ಸಹಕಾರ. ವ್ಯಾಪಾರ- ವ್ಯವಹಾರದಲ್ಲಿ ಚಿಂತೆ ದೂರ. ತುಲಾ: ಹಣಕಾಸಿನ ವಿಷಯದಲ್ಲಿ ಹಿಡಿತವಿರಲಿ. ವೃಶ್ಚಿಕ: ಉನ್ನತ ಅಧಿಕಾರಿಗಳ ಸಂತೋಷಕ್ಕಾಗಿ ಹೆಚ್ಚು ಹಣ ವ್ಯಯ ಮಾಡುವಿರಿ. ಧನುಸ್ಸು:ಹಿರಿಯರಿಂದ ದುಃಖ. ದೂರ ಪ್ರಯಾಣ ಒಳ್ಳೆಯದಲ್ಲ.
ಭಾರತದಲ್ಲಿ ಇರುವವರೆಲ್ಲರೂ ಹಿಂದೂಗಳೇ: ಮೋಹನ್ ಭಾಗವತ್

ಭಾರತದಲ್ಲಿ ಇರುವವರೆಲ್ಲರೂ ಹಿಂದೂಗಳೇ: ಮೋಹನ್ ಭಾಗವತ್

ಭಾರತದಲ್ಲಿರುವ ಪ್ರತಿಯೊಬ್ಬರೂ ಗುರುತಿನ ವಿಚಾರದಲ್ಲಿ ಹಿಂದೂಗಳೇ ಎಂದು ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದರು.

ಆರ್‌ಎಸ್‌ಎಸ್‌ ದೆಹಲಿಯಲ್ಲಿ ಆಯೋಜಿಸಿದ್ದ ಉಪನ್ಯಾಸ ಸರಣಿಯ ಮೂರನೇ ದಿನ ಮಾತನಾಡಿದ ಅವರು, ಹಿಂದೂಯಿಸಂ, ಶಿಕ್ಷಣ ಮತ್ತು ಜಾತಿ ಕುರಿತ ಆರ್‌ಎಸ್ಎಸ್‌ನ ದೃಷ್ಟಿಕೋನವನ್ನು ವಿವರಿಸಿದರು.

ಭಾರತೀಯ ಅಥವಾ ಹಿಂದುತ್ವ ಸಿದ್ಧಾಂತವು ಇತರೆ ಸಿದ್ಧಾಂತಗಳೊಂದಿಗೆ ಹೊಂದಿಕೊಳ್ಳುತ್ತದೆ. ಭಾರತದಲ್ಲಿ ವಾಸಿಸುವ ಪ್ರತಿಯೊಬ್ಬನೂ ಕೂಡ ಹಿಂದು. ಇದು ಅವರ ಗುರುತಿನ ವಿಚಾರದಲ್ಲಿಯೂ ಹೌದು ಮತ್ತು ರಾಷ್ಟ್ರೀಯತೆಯ ವಿಚಾರದಲ್ಲಿಯೂ ಹೌದು ಎಂದು ಭಾಗವತ್ ಹೇಳಿದರು.

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more