Short News

ಏಷ್ಯನ್ ಗೇಮ್ಸ್ : ಟೆನಿಸ್‌ನಲ್ಲಿ ಭಾರತಕ್ಕೆ ಚಿನ್ನ ಗೆದ್ದು ಕೊಟ್ಟ ಬೋಪಣ್ಣ-ದಿವಿಜ್

ಏಷ್ಯನ್ ಗೇಮ್ಸ್ : ಟೆನಿಸ್‌ನಲ್ಲಿ ಭಾರತಕ್ಕೆ ಚಿನ್ನ ಗೆದ್ದು ಕೊಟ್ಟ ಬೋಪಣ್ಣ-ದಿವಿಜ್

ಅನುಭವಿ ಆಟಗಾರ ರೋಹನ್ ಬೋಪಣ್ಣ ಮತ್ತು ಯುವ ಆಟಗಾರ ದ್ವಿವಿಜ್ ಶರಣ್ ಅವರು ಏಷ್ಯನ್ ಗೇಮ್ಸ್‌ 2018ರ ಪುರುಷರ ಡಬಲ್ಸ್‌ನಲ್ಲಿ ಚಿನ್ನ ಗೆದ್ದಿದ್ದಾರೆ. ಕಜಕಿಸ್ತಾನದ ಬುದ್ಲಿಕ್ ಅಲೆಸ್ಕಾ, ಯಸ್ವೆ ಡೆನ್ನಿಸ್ ಅವರನ್ನು 4-6, 6-3, 10-8 ರಲ್ಲಿ ಮಣಿಸಿ ಚಿನ್ನದ ಪದಕಕ್ಕೆ ಕೊರಳೊಡಿದ್ದಾರೆ. ನಿನ್ನೆಯಷ್ಟೆ ಮಹಿಳಾ ಟೆನಿಸ್ ಸಿಂಗಲ್ಸ್‌ನಲ್ಲಿ ಅಂಕಿತಾ ರೈನಾ ಕಂಚಿನ ಪದಕ ಗೆದ್ದಿದ್ದರು. ಇಂದು ಚಿನ್ನ ಒಲಿದಿದ್ದು ಟೆನಿಸ್‌ನಲ್ಲಿ ಭಾರತಕ್ಕೆ ಒಲಿಯುತ್ತಿರುವ ಎರಡನೇ ಪದಕ ಇದಾಗಿದೆ. ಇನ್ನೂ ಪುರುಷರ ಸಿಂಗಲ್ಸ್‌, ಮಹಿಳೆಯರ ಡಬಲ್ಸ್‌ ಬಾಕಿ ಇದ್ದು ಪದಕದ ನಿರೀಕ್ಷೆ ಇದೆ. ಸದ್ಯ ಭಾರತ ಒಟ್ಟು 22 ಪದಕ ಗೆದ್ದಂತಾಗಿದೆ.
'ಕೇಜಿ ಲೆಕ್ಕದಲ್ಲಿ ಹಣ ತೂಕ ಹಾಕಿ ಕೈ ಹೈ ಕಮಾಂಡ್ ಗೆ ತಲುಪಿಸಿದ್ದಾರೆ'

'ಕೇಜಿ ಲೆಕ್ಕದಲ್ಲಿ ಹಣ ತೂಕ ಹಾಕಿ ಕೈ ಹೈ ಕಮಾಂಡ್ ಗೆ ತಲುಪಿಸಿದ್ದಾರೆ'

"ಲೆಕ್ಕಕ್ಕೆ ತೋರಿಸದ ನಗದು, ಹವಾಲ ವ್ಯವಹಾರ ಮತ್ತು ಭ್ರಷ್ಟಾಚಾರದ ಡೀಲ್ ಇವೆಲ್ಲ ಕಾಂಗ್ರೆಸ್ ಪಕ್ಷದ ಆಧಾರ ಸ್ತಂಭ. ಕಾಂಗ್ರೆಸ್ ಹಾಗೂ ಭ್ರಷ್ಟಾಚಾರ ಒಂದಕ್ಕೊಂದು ಸಮಾನಾರ್ಥಕ ಪದಗಳು" ಎಂದು ಬಿಜೆಪಿ ನಾಯಕ ಸಂಬಿತ್ ಪಾತ್ರ ವಿರೋಧ ಪಕ್ಷವಾದ ಕಾಂಗ್ರೆಸ್ ವಿರುದ್ಧ ಬುಧವಾರ ನವದೆಹಲಿಯಲ್ಲಿ ಗಂಭೀರವಾದ ಆರೋಪ ಮಾಡಿದ್ದಾರೆ. ಕರ್ನಾಟಕದಿಂದ ಎಐಸಿಸಿಗೆ ಹಣ ವರ್ಗಾವಣೆ ಮಾಡುವುದಕ್ಕೆ ಹವಾಲ ಜಾಲ ನೆರವು ನೀಡಿದೆ ಅನ್ನೋದಿಕ್ಕೆ ಸಾಕ್ಷ್ಯವಿದೆ. ಸ್ವತಃ ಕಾಂಗ್ರೆಸ್ ಪಕ್ಷ ಹವಾಲ ಜಾಲವನ್ನು ನಡೆಸುತ್ತಿದೆ. ಇನ್ನು ಡಿ.ಕೆ.ಶಿವಕುಮಾರ್ ಅವರ ಚಾಲಕ ಆದಾಯ ತೆರಿಗೆ ಇಲಾಖೆ ಬಳಿ ನೀಡಿರುವ ಹೇಳಿಕೆ ಬಿಜೆಪಿ ಹತ್ತಿರ ಇದೆ ಎಂದಿದ್ದಾರೆ.
ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಬಜಾಜ್ ಡಾಮಿನಾರ್ 400..

ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಬಜಾಜ್ ಡಾಮಿನಾರ್ 400..

ದೇಶಿಯ ವಾಹನ ತಯಾರಕ ಸಂಸ್ಥೆಯಾದ ಬಜಾಜ್ ಆಟೊ 2016ರಲ್ಲಿ ತಮ್ಮ ಡಾಮಿನಾರ್ 400 ಬೈಕ್ ಅನ್ನು ಮಾರುಕಟ್ಟೆಯಲ್ಲಿ ಪರಿಚಯಿಸಿದ್ದು, ಇದೀಗ ಬಜಾಜ್ ಸಂಸ್ಥೆಯು ಈ ಬೈಕ್ ಸ್ಪೋರ್ಟ್ಸ್ ಕ್ರೂಸರ್‍‍ನಂತೆ ಕಾಣಲು ಬೇಕಾಗುವ ಉಪಕರಣಗಳನ್ನು ಅಳವಡಿಸಲಾಗಿದೆ.

ಹೌದು, ಬಜಾಜ್ ಡಾಮಿನಾರ್ 400 ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡಿದ್ದು, ಹಲವಾರು ಅಪ್ಡೇಟ್‍‍ಗಳನ್ನು ಪಡೆದುಕೊಂಡಿದೆ. ಅಲ್ಲದೆ ಸಂಸ್ಥೆಯು ಶೀಘ್ರವೇ ಅಪ್ಡೇಟೆಡ್ ಡಾಮಿನಾರ್ 400 ಬೈಕ್ ಅನ್ನು ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ.

ದಸರಾದಲ್ಲಿ ಕುಶಲ ತೋಪು ಸಿಡಿಸುವ ಪೊಲೀಸ್ ಸಿಬ್ಬಂದಿಗಳ ತಾಲೀಮು ಶುರು

ದಸರಾದಲ್ಲಿ ಕುಶಲ ತೋಪು ಸಿಡಿಸುವ ಪೊಲೀಸ್ ಸಿಬ್ಬಂದಿಗಳ ತಾಲೀಮು ಶುರು

ಸೆ.19ರಿಂದ ಕುಶಲ ತೋಪು ಸಿಡಿಸುವ ಪೊಲೀಸ್ ಸಿಬ್ಬಂದಿಗಳಿಂದ ತಾಲೀಮು ನಡೆಯುತ್ತಿದ್ದು, ಮೈಸೂರು ಅರಮನೆಯ ಆವರಣದಲ್ಲಿ ಫಿರಂಗಿ ಗಾಡಿ ಗಳಿಗೆ ಮೈಸೂರು ನಗರ ಪೊಲೀಸ್ ಆಯುಕ್ತ ಸುಬ್ರಮಣ್ಯೇಶ್ವರ ರಾವ್ ಪೂಜೆ ಸಲ್ಲಿಸಿದರು. ವಿಜಯ ದಶಮಿದಿನ ಅರಮನೆ ಮತ್ತು ಬನ್ನಿ ಮಂಟಪದಲ್ಲಿ ಸಿಡಿ ಮದ್ದಿನ ಪ್ರದರ್ಶನ ಇರುವ ಕಾರಣ ಇಂದಿನಿಂದ ತಾಲೀಮು ನಡೆಯುತ್ತಿದ್ದು, ಪ್ರತಿ ವರ್ಷದಂತೆ ಫಿರಂಗಿ ಸಿಡಿ ಮದ್ದಿನ ಜವಬ್ದಾರಿಯನ್ನು ಸೂಕ್ಷ್ಮವಾಗಿ ನಿಭಾಯಿಸುವ ಹಾಗೂ ಸುರಕ್ಷತೆ ಜವಾಬ್ದಾರಿ ಹೊತ್ತಿದ್ದೇವೆ ಎಂದು ಸುಬ್ರಮಣ್ಯೇಶ್ವರ ರಾವ್ ತಿಳಿಸಿದ್ದಾರೆ.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more