Short News

ಏಷ್ಯನ್ ಗೇಮ್ಸ್: 10,000 ಮೀ.ನಲ್ಲಿ ಭಾರತದ ಕೈತಪ್ಪಿದ ಚೊಚ್ಚಲ ಕಂಚು!

ಏಷ್ಯನ್ ಗೇಮ್ಸ್: 10,000 ಮೀ.ನಲ್ಲಿ ಭಾರತದ ಕೈತಪ್ಪಿದ ಚೊಚ್ಚಲ ಕಂಚು!

ಏಷ್ಯನ್ ಗೇಮ್ಸ್ ನ ಪುರುಷರ 10,000ಮೀ. ಓಟದಲ್ಲಿ ಜಿ ಲಕ್ಷ್ಮಣನ್ ಇದೇ ಮೊದಲ ಬಾರಿಗೆ ಭಾರತ ಪರ ಕಂಚಿನ ಪದಕ ಗೆದ್ದಿದ್ದರು. ಆದರೆ ಓಡುವಾಗ ಲಕ್ಷ್ಮಣ್ ಕಾಲು ಟ್ರ್ಯಾಕ್ ನ ಹೊರ ಅಂಚಿಗೆ ತಾಗಿದ ಕಾರಣ ಸ್ಪರ್ಧೆಯಿಂದ ಅವರನ್ನು ಅನರ್ಹಗೊಳಿಸಲಾಯಿತು. ಹೀಗಾಗಿ ಭಾರತ ಪಾಲಾಗಿದ್ದ ಕಂಚು ಮತ್ತೆ ಕೈತಪ್ಪಿದೆ. ಏಷ್ಯನ್ ಗೇಮ್ಸ್ ನ ಪುರುಷರ 10,000 ಮೀ. ಓಟವನ್ನು 29 ನಿಮಿಷ 44.91 ಸೆಕೆಂಡ್ ಗಳಲ್ಲಿ ಪೂರ್ಣಗೊಳಿಸಿದ್ದ ಜಿ ಲಕ್ಷ್ಮಣನ್ ಅವರು ಇದೇ ಮೊದಲ ಬಾರಿಗೆ ಭಾರತ ಪರ ಕಂಚಿನ ಪದಕ ಗೆದ್ದಿದ್ದರು. ಆದರೆ ಕಂಚು ಘೋಷಣೆಯಾದ ಕೆಲವೇ ಕ್ಷಣಗಳ ಬಳಿಕ, ವಿಡಿಯೋ ಚಿತ್ರೀಕರಣವನ್ನು ಪರಿಶೀಲಿಸಿ ಲಕ್ಷ್ಮಣನ್ ಅವರನ್ನು ಅನರ್ಹಗೊಳಿಸಲಾಯಿತು.
5 ದಿನದಲ್ಲಿ ಹೂಡಿಕೆದಾರರ 8.47 ಲಕ್ಷ ಕೋಟಿ ಷೇರು ಪೇಟೆಯಲ್ಲಿ ಮಟಾಶ್

5 ದಿನದಲ್ಲಿ ಹೂಡಿಕೆದಾರರ 8.47 ಲಕ್ಷ ಕೋಟಿ ಷೇರು ಪೇಟೆಯಲ್ಲಿ ಮಟಾಶ್

ಷೇರು ಮಾರುಕಟ್ಟೆಯು ನಿರಂತರವಾಗಿ ಇಳಿಕೆ ಕಾಣುತ್ತಿದ್ದು, ಹೂಡಿಕೆದಾರರ 8.47ಲಕ್ಷ ಕೋಟಿ ರುಪಾಯಿಯು 5ದಿನಗಳಲ್ಲಿ ಕೊಚ್ಚಿಹೋಗಿದೆ. ಕಳೆದ ವಾರದ ಆರಂಭದಿಂದ ಲೆಕ್ಕ ಹಿಡಿದು ಹೇಳುವುದಾದರೆ ಬಿಎಸ್ ಇ 5%ಕುಸಿತ ಕಂಡಿದೆ. ಸೋಮವಾರದಂದು ಸೆನ್ಸೆಕ್ಸ್ 536.58ಅಂಶಗಳಷ್ಟು ಇಳಿಕೆ ಕಂಡು, ಒಟ್ಟಾರೆಯಾಗಿ ದಿನಾಂತ್ಯಕ್ಕೆ 36,305.02ಕ್ಕೆ ತಲುಪಿತು. ಆ ಮೂಲಕ ಕಳೆದ 5ಟ್ರೇಡಿಂಗ್ ಸೆಷನ್ ನಲ್ಲಿ 4.68% ಅಥವಾ 1,785.62ಅಂಶಗಳನ್ನು ಕಳೆದುಕೊಂಡಂತೆ ಆಗುತ್ತದೆ. ಮಾರುಕಟ್ಟೆ ಬಗ್ಗೆ ಇರುವ ನಕಾರಾತ್ಮಕ ನಂಬಿಕೆ ಪರಿಣಾಮವಾಗಿ ಬಿಎಸ್ಇಯಲ್ಲಿ ಲಿಸ್ಟ್ ಆಗಿರುವಂಥ ಕಂಪೆನಿಗಳು 8,47,974.15ಕೋ ರುಪಾಯಿ ಇಳಿದು 1,47,89,045ಕೋಟಿ ತಲುಪಿದವು.
ಹಣಕಾಸು ಮಾರುಕಟ್ಟೆ ಚಟುವಟಿಕೆಗಳ ಮೇಲೆ ಆರ್ಬಿಐ, ಸೆಬಿ ಸೂಕ್ತ ಕ್ರಮ

ಹಣಕಾಸು ಮಾರುಕಟ್ಟೆ ಚಟುವಟಿಕೆಗಳ ಮೇಲೆ ಆರ್ಬಿಐ, ಸೆಬಿ ಸೂಕ್ತ ಕ್ರಮ

ಹಣಕಾಸು ಮಾರುಕಟ್ಟೆಯಲ್ಲಿನ ಚಟುವಟಿಕೆಗಳ ನಿಕಟ ಮೇಲ್ವಿಚಾರಣೆ ಹಾಗು ಅಗತ್ಯವಿದ್ದಲ್ಲಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಹಾಗು ಸೆಬಿ ಹೇಳಿವೆ. ಈಕ್ವಿಟಿ ಹಾಗೂ ಸಾಲ ಮಾರುಕಟ್ಟೆಗಳಲ್ಲಿನ ಭಾರೀ ಕುಸಿತದ ಹಿನ್ನೆಲೆಯಲ್ಲಿ ಆರ್ಬಿಐ ಮತ್ತು ಸೆಬಿ ಈ ಕ್ರಮಕ್ಕೆ ಮುಂದಾಗಿವೆ. "ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಸೆಕ್ಯುರಿಟೀಸ್ ಅಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ ಹಣಕಾಸು ಮಾರುಕಟ್ಟೆಗಳಲ್ಲಿ ಇತ್ತೀಚಿನ ಬೆಳವಣಿಗೆಗಳನ್ನು ನಿಕಟವಾಗಿ ಗಮನಿಸುತ್ತಿವೆ ಮತ್ತು ಅಗತ್ಯವಿದ್ದರೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲು ಸಿದ್ಧವಾಗಿವೆ" ಎಂದು ತಿಳಿಸಲಾಗಿದೆ.
65ರ ಗುರುವಿನಿಂದ 28ರ ಶಿಷ್ಯೆ ಗರ್ಭಿಣಿ, ಅನೂಪ್​-ಜಸ್ಲೀನ್​ ಪ್ರೀತಿ ನಡುವೆ ಅಬಾರ್ಶನ್ ಕಥೆ!

65ರ ಗುರುವಿನಿಂದ 28ರ ಶಿಷ್ಯೆ ಗರ್ಭಿಣಿ, ಅನೂಪ್​-ಜಸ್ಲೀನ್​ ಪ್ರೀತಿ ನಡುವೆ ಅಬಾರ್ಶನ್ ಕಥೆ!

ಹಿಂದಿಯ ಬಿಗ್ಬಾಸ್​ ಸೀಸನ್​ 12ರ ಸ್ಪರ್ಧಿಗಳಾಗಿ ಎಂಟ್ರಿ ಕೊಟ್ಟಿರುವ ಭಜನ್​ ಕಿಂಗ್​​ ಅನೂಪ್​ ಜಲೋಟಾ(65)ಹಾಗೂ ಜಸ್ಲೀನ್​ ಮಥಾರು(28)ಜೋಡಿ ಸದ್ಯ ಟಾಕ್​​​ ಆಫ್​​ ದಿ ಟೌನ್​ ಆಗಿದ್ದಾರೆ. ಮಗಳ ವಯಸ್ಸಿನ ಈಕೆ,ಅನೂಪ್​​ಗೆ ಗರ್ಲ್​​ಫ್ರೆಂಡ್​ ಅನ್ನೋ ವಿಷಯ ಕೇಳಿ ಜನ ಶಾಕ್ ಆಗಿದ್ದಾರೆ. ಇಬರಿಬ್ಬರಿಗೆ ಆಪ್ತವಾಗಿರುವ ಮಾಡೆಲ್​ ಅನೀಶಾ ಸಿಂಗ್​ ಎಂಬಾಕೆ ಕಳೆದ ವರ್ಷ ಜಸ್ಲೀನ್​​ ಅನೂಪ್​​​ರಿಂದ ಗರ್ಭವತಿಯಾಗಿದ್ದಳು ಎಂದು ಹೇಳಿದ್ದಾರೆ. ಜಲೋಟಾ ಅವರ ನಿರ್ಲಕ್ಷತನದಿಂದ ತಾನು ಪ್ರೆಗ್ನೆಂಟ್​ ಆಗಿದ್ದಾಗಿ ಜಸ್ಲೀನ್​​ ಹೇಳುತ್ತಿದ್ದಳು ಈ ವಿಚಾರವಾಗಿ ಕಿತ್ತಾಡುತ್ತಿದ್ದರು. ಬಳಿಕ ಮಗುವನ್ನು ತೆಗೆಸಲಾಯಿತು ಎಂದಿದ್ದಾಳೆ.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more