Short News

ಏಷ್ಯನ್ ಗೇಮ್: ಸೆಮಿಪೈನಲ್ ಗೆ ಲಗ್ಗೆ ಇಟ್ಟ ಭಾರತದ ಮಹಿಳೆಯರ ಹಾಕಿ ಟೀಂ

ಏಷ್ಯನ್ ಗೇಮ್: ಸೆಮಿಪೈನಲ್ ಗೆ ಲಗ್ಗೆ ಇಟ್ಟ ಭಾರತದ ಮಹಿಳೆಯರ ಹಾಕಿ ಟೀಂ

ಏಶ್ಯನ್ ಗೇಮ್ಸ್ ನ ಹಾಕಿಯಲ್ಲಿ ಥಾಯ್ಲೆಂಡ್ ವಿರುದ್ಧ 5-0 ಅಂತರದಲ್ಲಿ ಭರ್ಜರಿ ಜಯಗಳಿಸಿದ ಟೀಂ ಇಂಡಿಯಾದ ಮಹಿಳೆಯರು ಅಜೇಯವಾಗಿ ಸೆಮಿಫೈನಲ್ ಪ್ರವೇಶಿಸಿದೆ. ಭಾರತದ ರಾಣಿ ಹ್ಯಾಟ್ರಿಕ್ ಗೋಲು ( 37 ನಿ. 46 ನಿ. 55 ನಿ.), ಮೊನಿಕಾ (51 ನಿ.) ಮತ್ತು ನವ್ ಜೋತ್ (54 ನಿ.) ತಲಾ 1 ಗೋಲು ಜಮೆ ಮಾಡಿ ತಂಡಕ್ಕೆ ಭರ್ಜರಿ ಗೆಲುವು ತಂದು ಕೊಟ್ಟರು.ಸೆಮಿಫೈನಲ್ ನಲ್ಲಿ ಜಪಾನ್ ಇಲ್ಲವೇ ಮಲೇಷ್ಯಾದ ತಂಡವನ್ನು ಟೀಂ ಇಂಡೊಇಯಾ ವನಿತೆಯರು ಎದುರಿಸಲಿದೆ.
ಟೀಂ ಇಂಡಿಯಾ ದಾಳಿ ಸರ್ವಪತನ ಕಂಡ ಪಾಕ್ , ಭಾರತಕ್ಕೆ ಗೆಲ್ಲಲು 163 ರನ್ ಟಾರ್ಗೆಟ್

ಟೀಂ ಇಂಡಿಯಾ ದಾಳಿ ಸರ್ವಪತನ ಕಂಡ ಪಾಕ್ , ಭಾರತಕ್ಕೆ ಗೆಲ್ಲಲು 163 ರನ್ ಟಾರ್ಗೆಟ್

ದುಬೈ ನಲ್ಲಿ ನಡೆಯುತ್ತಿರುವ ಏಷ್ಯಾ ಕಪ್ 2018 ರ ಹೂವೋಲ್ಟೇಜ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 43.1 ಓವರ್‌ ಗೆ ತನ್ನಲ್ಲಾ ವಿಕೆಟ್ ಕಳೆದುಕೊಂಡು 162 ರನ್‌ ಗಳಿಸಿದ್ದು, ಭಾರತಕ್ಕೆ ಗೆಲ್ಲಲು 163 ರನ್ ಗಳ ಸುಲಭ ಟಾರ್ಗೆಟ್ ನೀಡಿದೆ. ಭಾರತದ ಪರ ನಿಖರ ದಾಳಿ ಸಂಘಟಿಸಿದ ಭುವನೇಶ್ವರ್ ಕುಮಾರ್ ಹಾಗೂ ಕೇದರ್ ಜಾಧವ್ ತಲಾ ಮೂರು, ಜಸ್ಪ್ರೀತ್ ಬುಮ್ರಾ ಎರಡು ಹಾಗೂ ಕುಲ್‌ದೀಪ್ ಯಾದವ್ ಒಂದು ವಿಕೆಟ್ ಪಡೆದರು.
ತೆಲಂಗಾಣದಲ್ಲಿ ಮತ್ತೊಂದು ಮರ್ಯಾದಾ ಹತ್ಯೆ, ಯುವತಿ ತಂದೆಯಿಂದಲೇ ಮಾರಕಾಸ್ತ್ರಗಳಿಂದ ಭೀಕರ ಹಲ್ಲೆ!

ತೆಲಂಗಾಣದಲ್ಲಿ ಮತ್ತೊಂದು ಮರ್ಯಾದಾ ಹತ್ಯೆ, ಯುವತಿ ತಂದೆಯಿಂದಲೇ ಮಾರಕಾಸ್ತ್ರಗಳಿಂದ ಭೀಕರ ಹಲ್ಲೆ!

ತೆಲಂಗಾಣದ ಮಿರ್ಯಾಲಗುಡದಲ್ಲಿ ಗರ್ಭಿಣಿ ಪತ್ನಿ ಅಮೃತಾಳ ಎದುರಲ್ಲೇ ನಡೆದ ಪ್ರಣಯ್ ಎಂಬ ಯುವಕನ ಬರ್ಬರ ಹತ್ಯೆ ವಿಚಾರ ದೇಶದಾದ್ಯಂತ ಸುದ್ದಿಯಲ್ಲಿರುವಾಗಲೇ ಕುಟುಂಬದ ಮರ್ಯಾದೆಗಾಗಿ ತಂದೆಯೊಬ್ಬರು ತನ್ನ ಮಗಳು ಹಾಗೂ ಅಳಿಯನ ಮೇಲೆ ಮಾರಕಾಸ್ತ್ರಗಳಿಂದ ಹಾಡು ಹಗಲೇ ಹಲ್ಲೆ ನಡೆಸಿರುವ ಭೀಕರ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ. ತೆಲಂಗಾಣದ ಎರ್ರಂಗಡದಲ್ಲಿನಲ್ಲಿ ನವಜೋಡಿಯಾಗಿರುವ ಮಾಧವಿ ಹಾಗೂ ಆಕೆಯ ಪತಿ ಸಂದೀಪ್ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದಾಗ ಮಾಧವಿಯ ತಂದೆ ನರಸಿಂಹಾಚಾರಿ ಏಕಾಎಕಿ ಮಾರಕಾಸ್ತ್ರದಿಂದ ಹಲ್ಲೆ ನಡೆಸಿದ್ದಾರೆ. ಇಬ್ಬರೂ ಖಾಸಗಿ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ.
ಮಾವೋವಾದಿ ನಂಟು; ಒಂದು ಸಾಕ್ಷ್ಯವಾದರೂ ಕೋರ್ಟ್ ಮುಂದಿಡಿ ಎಂದ ಸುಪ್ರೀಂ

ಮಾವೋವಾದಿ ನಂಟು; ಒಂದು ಸಾಕ್ಷ್ಯವಾದರೂ ಕೋರ್ಟ್ ಮುಂದಿಡಿ ಎಂದ ಸುಪ್ರೀಂ

ಮಾವೋವಾದಿ ನಕ್ಸಲರ ಜತೆಗೆ ಐವರು ಸಾಮಾಜಿಕ ಹೋರಾಟಗಾರರ ನಂಟಿದೆ ಎಂದು ವಾದ ಮುಂದಿಟ್ಟಿದ್ದೀರಲ್ಲಾ, ಮಾವೋವಾದಿಗಳನ್ನು ಈ ಐವರು ಬೆಂಬಲಿಸಿದ್ದಾರೆ ಎಂಬುದನ್ನು ಸಾಬೀತುಪಡಿಸುವಂಥ 'ಒಂದು ದಾಖಲೆ'ಯನ್ನು ನಮ್ಮ ಮುಂದೆ ಹಾಜರುಪಡಿಸಿ ಎಂದು ಸುಪ್ರೀಂ ಕೋರ್ಟ್ ಬುಧವಾರ ಪುಣೆ ಪೊಲೀಸರನ್ನು ಕೇಳಿದೆ. ವಕೀಲೆ ಹಾಗೂ ಕಾರ್ಮಿಕ ಒಕ್ಕೂಟದ ಕಾರ್ಯಕರ್ತೆ ಸುಧಾ ಭಾರದ್ವಾಜ್, ತೆಲುಗು ಕವಿ ವರವರ ರಾವ್, ಸಾಮಾಜಿಕ ಕಾರ್ಯಕರ್ತರಾದ ಗೌತಮ್ ನವಲಖ ಹಾಗೂ ವಕೀಲರಾದ ಅರುಣ್ ಫೆರೇರಾ ಮತ್ತು ವೆರ್ನಾನ್ ಗೋನ್ಸಾಲ್ವೆಸ್ ಅವರನ್ನು ಆಗಸ್ಟ್ 26 ಬಂಧಿಸಲಾಗಿತ್ತು. ಮಾವೋವಾದಿಗಳ ಜತೆಗೆ ಇವರಿಗೆ ಸಂಪರ್ಕ ಇದೆ ಎಂಬ ಆರೋಪದ ಮೇಲೆ ಬಂಧಿಸಲಾಗಿತ್ತು.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more