Maruti: ಪುಟ್ಟ ಮಾರುತಿ ಹೈಬ್ರಿಡ್ ಕಾರು ಕಾಣಿಸಿಕೊಂಡಿದೆ
ಆಟೋಮೊಬೈಲ್ಸ್
- 2 hr, 24 min ago
ಮಾರುತಿ ಸುಜುಕಿ ಸಣ್ಣ ಕಾಂಪ್ಯಾಕ್ಟ್ ಎಸ್ಯುವಿ ವಿಭಾಗದಲ್ಲಿ ಬಲೆನೊ, ಫ್ರಾಂಕ್ಸ್ನಂತಹ ಎಸ್ಯುವಿಗಳೊಂದಿಗೆ ಮಾರಾಟದಲ್ಲಿ ಧೂಳೆಬ್ಬಿಸುತ್ತಿದೆ. ಈಗಾಗಲೇ ಫ್ರಾಂಕ್ಸ್ ಎಸ್ಯುವಿಯನ್ನು ಭಾರತದಲ್ಲಿ ನಾಲ್ಕು ಲಕ್ಷಕ್ಕೂ ಹೆಚ್ಚು ಮಂದಿ ಖರೀದಿಸಿದ್ದಾರೆ. ಫ್ರಾಂಕ್ಸ್ಗಿಂತ ಮುಂಚೆ ಬಲೆನೊ ಉತ್ತಮ ಮಾರಾಟ ಕಾಣುತ್ತಿತ್ತು, ಆದರೆ ಈಗ ಫ್ರಾಂಕ್ಸ್ ಎಲ್ಲವನ್ನು ಹಿಂದಿಕ್ಕಿ ಕಾಂಪ್ಯಾಕ್ಟ್ ಎಸ್ಯುವಿ ವಿಭಾಗದಲ್ಲಿ ಮುನ್ನುಗ್ಗುತ್ತಿದೆ. ಹಾಗಾಗಿ ಈ ಕಾರಿನಿಂದ ಇನ್ನೂ ಹೆಚ್ಚಿನ ಮಾರಾಟದೊಂದಿಗೆ ಲಾಭ ಗಳಿಸಿಲು ಮಾರುತಿ ಸುಜುಕಿ ಹೊಸ ಫ್ರಾಂಕ್ಸ್ ಹೈಬ್ರಿಡ್ ಕಾರಿನ ಬಿಡುಗಡೆಗೆ ಸಜ್ಜಾಗಿದೆ.