Short News

ಎರಡನೇ ಟೆಸ್ಟ್ : ಇಂಗ್ಲೆಂಡ್ 396/7ಕ್ಕೆ ಡಿಕ್ಲೆರ್ , ಸಂಕಷ್ಟದಲ್ಲಿ ಭಾರತ

ಎರಡನೇ ಟೆಸ್ಟ್ : ಇಂಗ್ಲೆಂಡ್ 396/7ಕ್ಕೆ ಡಿಕ್ಲೆರ್ , ಸಂಕಷ್ಟದಲ್ಲಿ ಭಾರತ

ಭಾರತ ವಿರುದ್ಧ ಕ್ರಿಕೆಟ್ ಕಾಶಿ ಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟದಲ್ಲಿದಲ್ಲಿ ಇಂಗ್ಲೆಂಡ್ 88.1 ಓವರ್‌ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 396 ರನ್‌ಗಳ ಬೃಹತ್ ಮೊತ್ತ ಪೇರಿಸಿ ಡಿಕ್ಲೇರ್ ಘೋಷಿಸಿಕೊಂಡಿದೆ. ಈ ಮೂಲಕ ಮೊದಲ ಇನ್ನಿಂಗ್ಸ್‌ನಲ್ಲಿ 289 ರನ್‌ಗಳ ಬೃಹತ್ ಮುನ್ನಡೆ ಕಾಉಯ್ದುಕೊಂಡಿದೆ. ಬಳಿಕ ಬ್ಯಾಟಿಂಗ್ ಗೆ ಇಳಿದ ಭಾರತ ಕಳಪೆ ಪ್ರದರ್ಶನ ತೋರಿದ್ದು, 13 ರನ್ ಗಳಿಸುವುದರೆಡೆಗೆ ಆರಂಭಿಕರಾದ ಮುರಳಿ ವಿಜಯ್ (0) ಹಾಗೂ ಕೆಎಲ್ ರಾಹುಲ್ (10) ಪೆವಿಲಿನ್ ಸೇರಿದ್ದಾರೆ. ಊಟದ ವಿರಾಮದ ವೇಳೆ ಭಾರತದ ಸ್ಕೋರ್ 17/2.
ನೋಡಿ ಬದನೆಕಾಯಿ ತಿಂದರೆ ಈ ಕಾಯಿಲೆಯನ್ನು ನಿಯಂತ್ರಿಸಬಹುದು

ನೋಡಿ ಬದನೆಕಾಯಿ ತಿಂದರೆ ಈ ಕಾಯಿಲೆಯನ್ನು ನಿಯಂತ್ರಿಸಬಹುದು

ಬದನೆಯಲ್ಲಿರುವಂತಹ ಆ್ಯಂಟಿಆಕ್ಸಿಡೆಂಟ್ ಹೃದಯದ ಕಾಯಿಲೆಯ ಅಪಾಯ ತಗ್ಗಿಸುವುದು ಎಂದು ಅಧ್ಯಯನಗಳು ಹೇಳಿವೆ. ಹೃದಯ ಕಾಯಿಲೆಗೆ ಕಾರಣವಾಗುವಂತಹ ಕೆಟ್ಟ ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್ ಗಳು ಬದನೆ ಸೇವನೆಯಿಂದ ಕಡಿಮೆಯಾಗುವುದು. ಹೃದಯದ ಕಾಯಿಲೆಯನ್ನು ದೂರವಿಡಲು ಬದನೆ ತಿನ್ನಿ. ಬದನೆಕಾಯಿಯಲ್ಲಿ ನಾರಿನಾಂಶವು ಅತ್ಯಧಿಕವಾಗಿದ್ದು, ಇದು ಜೀರ್ಣಕ್ರಿಯೆ ಮತ್ತು ದೇಹವು ಸಕ್ಕರೆ ಅಂಶವನ್ನು ಹೀರಿಕೊಳ್ಳುವ ಪ್ರಕ್ರಿಯೆನ್ನು ನಿಧಾನಗೊಳಿಸಿ ರಕ್ತದಲ್ಲಿನ ಸಕ್ಕರೆ ಮಟ್ಟ ಕಾಪಾಡುವುದು. ನಿಧಾನಗತಿಯ ಹೀರಿಕೊಳ್ಳುವಿಕೆಯ ಕಾರಣದಿಂದಾಗಿ ರಕ್ತದಲ್ಲಿನ ಸಕ್ಕರೆ ಮಟ್ಟವು ಸ್ಥಿರವಾಗಿದ್ದು, ಏರಿಕೆಯಾಗದಂತೆ ತಡೆಯುವುದು.
ಫ್ಲಿಪ್ಕಾರ್ಟ್ ಫ್ಲಸ್ ಯೋಜನೆ ಆರಂಭ!

ಫ್ಲಿಪ್ಕಾರ್ಟ್ ಫ್ಲಸ್ ಯೋಜನೆ ಆರಂಭ!

ತನ್ನ ಗ್ರಾಹಕರಿಗೆ ಶೂನ್ಯ ಶುಲ್ಕ ಸದಸ್ಯತ್ವ ನೀಡಲು ಫ್ಲಿಪ್ಕಾರ್ಟ್ ಫ್ಲಸ್ ಯೋಜನೆ ಆರಂಭಿಸಿದೆ. ಜಗತ್ತಿನ ದೈತ್ಯ ಸಂಸ್ಥೆ ಅಮೆಜಾನ್ ಸಂಸ್ಥೆಯ ಅಮೆಜಾನ್ ಪ್ರೈಂ ಕಾರ್ಯಕ್ರಮದಂತೆ ಫ್ಲಿಪ್ಕಾರ್ಟ್ ಪ್ಲಸ್ ಯೋಜನೆ ಮೂಲಕ ಗ್ರಾಹಕರಿಗೆ ವಿಶೇಷ ಸೌಲಭ್ಯ ನೀಡುವುದು ಇದರ ಉದ್ದೇಶವಾಗಿದೆ. ಫ್ಲಿಪ್ಕಾರ್ಟ್ ಪ್ಲಸ್ ಸದಸ್ಯತ್ವಕ್ಕೆ ಹಣ ಪಾವತಿಸಬೇಕಿಲ್ಲ. ಫ್ಲಿಪ್ಕಾರ್ಟ್ ಫ್ಲಸ್ ಸದಸ್ಯತ್ವ ಪಡೆದವರು ಒಂದೇ ದಿನದಲ್ಲಿ ಉಚಿತವಾಗಿ ಡಿಲೆವರಿ, ಡಿಸ್ಕೌಂಟ್ ಸೇಮ್ ಡೇ ಡಿಲೆವರಿ, ಎಕ್ಸ್ ಕ್ಲ್ಯೂಸಿವ್ ಡೀಲ್ಸ್, ಪ್ರೈಂ ವಿಡಿಯೋ, ಮ್ಯೂಸಿಕ್, ಸಿನಿಮಾ ಸೇರಿದಂತೆ ಅನೇಕ ಸೌಲಭ್ಯವನ್ನು ಗ್ರಾಹಕರು ಪಡೆಯಲಿದ್ದಾರೆ.
ಕೊಡಗು : ಮಳೆ, ಗುಡ್ಡ ಕುಸಿತ 5 ಜನರು ಸಾವು

ಕೊಡಗು : ಮಳೆ, ಗುಡ್ಡ ಕುಸಿತ 5 ಜನರು ಸಾವು

ಭಾರಿ ಮಳೆ ಮತ್ತು ಗುಡ್ಡ ಕುಸಿತದಿಂದಾಗಿ ಕೊಡಗಿನಲ್ಲಿ 24 ಗಂಟೆಯಲ್ಲಿ 5 ಜನರು ಮೃತಪಟ್ಟಿದ್ದಾರೆ. ಪ್ರವಾಹದಲ್ಲಿ ಸಿಲುಕಿರುವ ಜನರನ್ನು ರಕ್ಷಣೆ ಮಾಡಲು ಸೇನಾಪಡೆ ಆಗಮಿಸಿದೆ. ಮಳೆ ಮತ್ತು ಗುಡ್ಡ ಕುಸಿತದಿಂದಾಗಿ ಕೊಡಗಿನಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಪ್ರವಾಹ ಪೀಡಿತ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗುತ್ತಿದೆ. ಮಳೆ ಮತ್ತು ಗುಡ್ಡ ಕುಸಿತದಿಂದಾಗಿ ಕಳೆದ 24 ಗಂಟೆಗಳಲ್ಲಿ ಕೊಡಗಿನಲ್ಲಿ 5 ಜನರು ಮೃತಪಟ್ಟಿದ್ದಾರೆ. ಶನಿವಾರ ಬೆಳಗ್ಗೆಯಿಂದ ರಕ್ಷಣಾ ಕಾರ್ಯಾಚರಣೆ ಚುರುಕಾಗಲಿದ್ದು, ಸೇನಾಪಡೆ ರಕ್ಷಣಾ ಕಾರ್ಯದಲ್ಲಿ ತೊಡಗಲಿದೆ.

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more