Short News

ಏಷ್ಯನ್ ಗೇಮ್ಸ್ : ಈಕ್ವೆಸ್ಟ್ರಿಯನ್ ನಲ್ಲಿ ಭಾರತಕ್ಕೆ ಬೆಳ್ಳಿ ಪದಕ

ಏಷ್ಯನ್ ಗೇಮ್ಸ್ : ಈಕ್ವೆಸ್ಟ್ರಿಯನ್ ನಲ್ಲಿ ಭಾರತಕ್ಕೆ ಬೆಳ್ಳಿ ಪದಕ

ಏಷ್ಯನ್ ಗೇಮ್ಸ್ 2018ರಲ್ಲಿ ಭಾನುವಾರದಂದು ಈಕ್ವೆಸ್ಟ್ರಿಯನ್ ಸ್ಪರ್ಧೆಯಲ್ಲಿ ಭಾರತಕ್ಕೆ ಬೆಳ್ಳಿ ಪದಕ ಲಭಿಸಿದೆ. 26 ವರ್ಷ ವಯಸ್ಸಿನ ಮಿರ್ಜಾ ಫೌದ್ ಅವರು ಸೈನರ್ ಮೆಡಿಕೋಟ್ ಕುದುರೆ ಏರಿ ರಜತ ಪದಕ ಕೊರಳಿಗೇರಿಸಿಕೊಂಡರು. ಜಪಾನ್ ನ ಯೋಶಿಕಿ ಅವರು ಚಿನ್ನದ ಪದಕ ಗೆದ್ದರು. ಥೈಲ್ಯಾಂಡ್ ನ ಸ್ಪರ್ಧಿ ಕಂಚಿನ ಪದಕ ಗಳಿಸಿದರು. 1982ರ ಏಷ್ಯನ್ ಗೇಮ್ಸ್ ನಂತರ ಇದೇ ಮೊದಲ ಬಾರಿಗೆ ಈ ಸ್ಪರ್ಧೆಯಲ್ಲಿ ವೈಯಕ್ತಿಕ ಪದಕ ಲಭಿಸಿದೆ. ಈ ಪದಕದ ಮೂಲಕ ಭಾರತವು 7 ಚಿನ್ನ, 7 ಬೆಳ್ಳಿ, 17 ಕಂಚಿನ ಪದಕದೊಂದಿಗೆ 31 ಪದಕ ಗಳಿಸಿ ಪದಕ ಪಟ್ಟಿಯಲ್ಲಿ 9ನೇ ಸ್ಥಾನಕ್ಕೇರಿದೆ.
ನಿಮ್ಮ ಮಕ್ಕಳಿಗೆ ಹಣಕಾಸು ನಿರ್ವಹಣೆಯ ಬಗ್ಗೆ ತಿಳಿಸುವುದು ಹೇಗೆ?

ನಿಮ್ಮ ಮಕ್ಕಳಿಗೆ ಹಣಕಾಸು ನಿರ್ವಹಣೆಯ ಬಗ್ಗೆ ತಿಳಿಸುವುದು ಹೇಗೆ?

  • ಹಣಕಾಸು ನಿರ್ವಹಣೆಯ ಮೊದಲ ಪಾಠಗಳನ್ನು ಚಿಕ್ಕಂದಿನಲ್ಲಿಯೇ ಕಲಿಯಬೇಕಾಗುತ್ತದೆ. ಜೀವನದಲ್ಲಿ ಆರ್ಥಿಕವಾಗಿ ಯಶಸ್ಸು ಗಳಿಸಬೇಕಾದರೆ ಮೊದಲು ಸಂಪತ್ತನ್ನು ಸೃಷ್ಟಿಸಬೇಕಾಗುತ್ತದೆ ಹಾಗೂ ಅದನ್ನು ಸಮರ್ಪಕವಾಗಿ ನಿರ್ವಹಣೆಯನ್ನೂ ಮಾಡಬೇಕಾಗುತ್ತದೆ. ಹೀಗಾಗಿ ಹಣಕಾಸು ಶಿಸ್ತಿನ ಬಗ್ಗೆ ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿಯೇ ತಿಳಿಸಿಕೊಡುವುದು ಅವಶ್ಯ. ಸಣ್ಣ ಸಣ್ಣ ಉಳಿತಾಯಗಳಿಂದ ದೊಡ್ಡ ಸಂಪತ್ತು ಸೃಷ್ಟಿಸುವ ಹಾಗೂ ಆ ಮೂಲಕ ತಮ್ಮ ಕನಸುಗಳನ್ನು ನನಸಾಗಿರುವ ಮಾರ್ಗೋಪಾಯಗಳನ್ನು ಚಿಕ್ಕ ಮಕ್ಕಳಿಗೆ ಹೇಳಿಕೊಡುವುದು ಪಾಲಕರಾದವರ ಕರ್ತವ್ಯವಾಗಿದೆ.

ನೆಗಳಗುಳಿಯಲ್ಲಿ ಕಲ್ಲಿನ ಲಾರಿಗಳಿಂದ ಹಾಳಾದ ರಸ್ತೆ: ರೊಚ್ಚಿಗೆದ್ದ ಗ್ರಾಮಸ್ಥರು

ನೆಗಳಗುಳಿಯಲ್ಲಿ ಕಲ್ಲಿನ ಲಾರಿಗಳಿಂದ ಹಾಳಾದ ರಸ್ತೆ: ರೊಚ್ಚಿಗೆದ್ದ ಗ್ರಾಮಸ್ಥರು

ಕಲ್ಲಿನ ಲಾರಿಗಳು ಓಡಾಡುವುದರಿಂದ ಮಂಗಳೂರಿನ ನೆಗಳಗುಳಿ ಗ್ರಾಮದಲ್ಲಿ ರಸ್ತೆ ಹಾಳಾಗಿದ್ದು ಸ್ಥಳೀಯರು ಪರಿತಪಿಸವಂತಾಗಿದೆ. ಈ ಸಂಬಂಧ ಲಾರಿಗ ಓಡಾಟ ಸ್ಥಗಿತಗೊಳಿಸುವಂತೆ ಒತ್ತಾಯಿಸಿ ನೆಗಳಗುಳಿ ನಿವಾಸಿಗಳು ಅಳಿಕೆ ಗ್ರಾಮಪಂಚಾಯತ್ ಗೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದರು. ಘನ ವಾಹನಗಳ ಸಂಚಾರದಿಂದ ನೆಗಳಗುಳಿ ರಸ್ತೆ ಹಾಳಾಗುತ್ತದ್ದು ,ದುರಸ್ತಿ ಬಳಿಕವೂ ಕಲ್ಲಿನ ಲಾರಿಗಳು ಓಡಾಟಕ್ಕೆ ಮುಂದಾಗಿರುವುದನ್ನು ಸ್ಥಗಿತಗೊಳಿಸಬೇಕೆಂದು ಒತ್ತಾಯಿಸಿದರು. ಕೋಟೆತ್ತಡ್ಕದಲ್ಲಿರುವ ಅಳಿಕೆ ಗ್ರಾಮ ಪಂಚಾಯತಿ ನಿವೇಶನ ಸಮತಟ್ಟು ಮಾಡುವ ನೆಪದಲ್ಲಿ ಹಲವು ಲಾರಿಗಳು ನೆಗಳಗುಳಿ ರಸ್ತೆಯಲ್ಲಿ ಸಂಚರಿಸುತ್ತಿದ್ದವು.
ಬಿಜೆಪಿ ಸರ್ಕಾರ ರಚನೆ ಮಾಡುವ ಹೊಣೆ ಯಡಿಯೂರಪ್ಪ ಹೆಗಲಿಗೆ

ಬಿಜೆಪಿ ಸರ್ಕಾರ ರಚನೆ ಮಾಡುವ ಹೊಣೆ ಯಡಿಯೂರಪ್ಪ ಹೆಗಲಿಗೆ

ಕರ್ನಾಟಕದಲ್ಲಿ ಮತ್ತೆ ಬಿಜೆಪಿ ಸರ್ಕಾರ ರಚನೆ ಆಗಲಿದೆಯೇ?. ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಲಿದ್ದಾರೆಯೇ?. ಬಿಜೆಪಿ ಸರ್ಕಾರ ರಚನೆ ಮಾಡುವ ಸಂಪೂರ್ಣ ಜವಾಬ್ದಾರಿಯನ್ನು ಶಾಸಕರು ಯಡಿಯೂರಪ್ಪ ಅವರಿಗೆ ನೀಡಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಬುಧವಾರ ವಿಶೇಷ ಸಭೆ ಬಳಿಕ ಬಿ.ಎಸ್.ಯಡಿಯೂರಪ್ಪ ಶಾಸಕರೊಂದಿಗೆ ರಹಸ್ಯ ಸಭೆ ನಡೆಸಿದರು. ಈ ಸಮಯದಲ್ಲಿ ರಾಜ್ಯದಲ್ಲಿ ಸರ್ಕಾರ ರಚನೆ ಮಾಡುವ ಕುರಿತು ಚರ್ಚೆಗಳು ನಡೆದಿವೆ. 'ಈಗ ಆಪರೇಷನ್ ಕಮಲಕ್ಕೆ ಕೈ ಹಾಕುವುದು ಬೇಡ, ಇದರ ಪರಿಣಾಮ ಲೋಕಸಭೆ ಚುನಾವಣೆಯ ಮೇಲೆ ಉಂಟಾಗಲಿದೆ' ಎಂದು ಕೆಲವು ಶಾಸಕರು ಅಭಿಪ್ರಾಯಪಟ್ಟರು.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more