Short News

ಭಾರತ v ಇಂಗ್ಲೆಂಡ್ 2ನೇ ಟೆಸ್ಟ್: ಮೊದಲ ದಿನ ಪಂದ್ಯ ಮಳೆಗೆ ಆಹುತಿ

ಭಾರತ v ಇಂಗ್ಲೆಂಡ್ 2ನೇ ಟೆಸ್ಟ್: ಮೊದಲ ದಿನ ಪಂದ್ಯ ಮಳೆಗೆ ಆಹುತಿ

ಲಂಡನ್ ನ ಲಾರ್ಡ್ಸ್ ಸ್ಟೇಡಿಯಂನಲ್ಲಿ ನಡೆಯಲಿದ್ದ ಭಾರತ vs ಇಂಗ್ಲೆಂಡ್ ಎರಡನೇ ಟೆಸ್ಟ್ ನ ಮೊದಲ ದಿನ ಪಂದ್ಯ ಮಳೆಗೆ ಆಹುತಿಯಾಗಿದೆ. ಆರಂಭಿಕ ದಿನವಾದ ಗುರುವಾರ (ಆ.9) ಬೆಳಗ್ಗಿನಿಂದಲೂ ಸುರಿದ ಮಳೆಯಿಂದಾಗಿ ಪಂದ್ಯ ರದ್ದಾಯಿತು. ಮೊದಲ ಟೆಸ್ಟ್ ನಲ್ಲಿ ಭಾರತ ಆಂಗ್ಲರೆದುರು 31 ರನ್ ಗಳಿಂದ ಸೋತಿತ್ತು. ಹೀಗಾಗಿ ದ್ವಿತೀಯ ಟೆಸ್ಟ್ ಗೆದ್ದುಕೊಳ್ಳುವತ್ತ ಭಾರತ ಚಿತ್ತ ನೆಟ್ಟಿತ್ತು. ಆದರೆ ಮೊದಲ ದಿನವಾದ ಗುರುವಾರ ಮಳೆ ಪಂದ್ಯಕ್ಕೆ ಅಡ್ಡಿಪಡಿಸಿತು. ಭಾರತೀಯ ಕಾಲಮಾನ 3.30pmಗೆ ಆರಂಭವಾಗಬೇಕಿದ್ದ ಪಂದ್ಯ ಮುಂದೂಡಲ್ಪಟ್ಟಿತು. ಟಾಸ್ ನಡೆಸುವುದಕ್ಕೂ ಮಳೆ ಅವಕಾಶ ಕೊಡಲಿಲ್ಲ.
ಮುಂಗಾರಿನ ಆರ್ಭಟಕ್ಕೆ ರಾಜ್ಯದಲ್ಲಿ ಬಲಿಯಾಗಿದ್ದು 155 ಜನ

ಮುಂಗಾರಿನ ಆರ್ಭಟಕ್ಕೆ ರಾಜ್ಯದಲ್ಲಿ ಬಲಿಯಾಗಿದ್ದು 155 ಜನ

ಪ್ರತಿಬಾರಿ ಕಣ್ಣಾಮುಚ್ಚಾಲೆಯಾಡುತ್ತಿದ್ದ ಮುಂಗಾರು ಮಳೆ, ಈ ಬಾರಿ ರಾಜ್ಯದ ಅನೇಕ ಕಡೆ ಅಬ್ಬರಿಸಿದೆ. ಮಲೆನಾಡು ಪ್ರದೇಶಗಳಲ್ಲಿ ವಿಪರೀತ ಮಳೆಯಿಂದ ಜನರು ಕಂಗಾಲಾಗಿದ್ದಾರೆ. ಏಪ್ರಿಲ್‌ನಿಂದ ಇದುವರೆಗೂ ಮಳೆಯ ಆರ್ಭಟಕ್ಕೆ ಜೀವ ಕಳೆದುಕೊಂಡವರ ಸಂಖ್ಯೆ 155. ಪ್ರವಾಹದಿಂದ ತತ್ತರಿಸಿರುವ ಕೊಡಗು ಈ ವರ್ಷದ ಅತಿ ಹೆಚ್ಚು ಹಾನಿಗೆ ಒಳಗಾದ ಪ್ರದೇಶವಾದರೂ, ಮಳೆಗೆ ಬಲಿಯಾದವರ ಸಂಖ್ಯೆ ಹೆಚ್ಚು ಇರುವುದು ಬಳ್ಳಾರಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ. ಈ ಎರಡೂ ಜಿಲ್ಲೆಗಳಲ್ಲಿ ತಲಾ 11 ಮಂದಿ ಮಳೆ ಸಂಬಂಧಿ ಕಾರಣಗಳಿಂದ ಮೃತಪಟ್ಟಿದ್ದಾರೆ.
ಒಂದು ದಿನದ ಸಂಬಳ ಕೊಡಗಿಗೆ ನೀಡಿದ ಕೆಎಸ್‌ಆರ್‌ಟಿಸಿ ಸಿಬ್ಬಂದಿ

ಒಂದು ದಿನದ ಸಂಬಳ ಕೊಡಗಿಗೆ ನೀಡಿದ ಕೆಎಸ್‌ಆರ್‌ಟಿಸಿ ಸಿಬ್ಬಂದಿ

ಪ್ರವಾಹ ಪೀಡಿತ ಕೊಡಗಿನ ಜನರ ನೋವಿಗೆ ಸ್ಪಂದಿಸಿರುವ ರಾಜ್ಯ ರಸ್ತೆ ಸಾರಿಗೆ ಸಿಬ್ಬಂದಿ ನೆರೆ ಪೀಡಿತ ಜನರಿಗಾಗಿ ಉದಾರ ನೆರವು ನೀಡಿದ್ದಾರೆ. ಕೆಎಸ್‌ಆರ್‌ಟಿಸಿಯ ನಾಲ್ಕೂ ನಿಗಮಗಳ ಎಲ್ಲ ಸಿಬ್ಬಂದಿ ತಮ್ಮ ಒಂದು ದಿನದ ಸಂಬಳವನ್ನು ಕೊಡಗಿನ ಸಹಾಯಕ್ಕೆಂದು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದ್ದಾರೆ. ಕೆಎಸ್‌ಆರ್‌ಟಿಸಿಯ 1.16 ಲಕ್ಷ ಸಿಬ್ಬಂದಿಯ ಒಂದು ದಿನದ ವೇತನದ ಒಟ್ಟು ಮೊತ್ತ 11.80 ಕೋಟಿ ಆಗಲಿದೆ. ಈ ಬೃಹತ್ ಮೊತ್ತವನ್ನು ಅವರು ಪ್ರವಾಹ ಪೀಡಿತ ಕೊಡಗಿನ ಜನರ ಉಪಯೋಗಕ್ಕಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದ್ದಾರೆ.
ಬಿರ್ಲಾ ಒಡೆತನದ MORE ಖರೀದಿಗೆ ಮುಂದಾದ ಅಮೆಜಾನ್

ಬಿರ್ಲಾ ಒಡೆತನದ MORE ಖರೀದಿಗೆ ಮುಂದಾದ ಅಮೆಜಾನ್

ಇ ರೀಟೈಲರ್ ಫ್ಲಿಪ್ ಕಾರ್ಟ್ ಖರೀದಿಯನ್ನು ವಾಲ್ಮಾರ್ಟ್ ಮುಗಿಸುತ್ತಿದ್ದಂತೆ, ಇತ್ತ ಅಮೆಜಾನ್ ಕೂಡಾ ತನ್ನ ಜಾಲ ವಿಸ್ತರಣೆಗೆ ಮುಂದಾಗಿದೆ. ಕುಮಾರ್ ಮಂಗಳಂ ಬಿರ್ಲಾ ಒಡೆತನದ ಆಹಾರ ಹಾಗೂ ದಿನಸಿ ಸೂಪರ್ ಮಾರ್ಕೆಟ್ ಮಳಿಗೆ 'ಮೋರ್' ಜಾಲವನ್ನು ಖರೀದಿಸಲು ಅಮೆಜಾನ್ ಮುಂದಾಗಿರುವ ಸುದ್ದಿ ಬಂದಿದೆ. ಗೋಲ್ಡ್ ಮನ್ ಸಾಚ್ಸ್ ಹಾಗೂ ಸಮರ ಕ್ಯಾಪಿಟಲ್ ನೆರವಿನಿಂದ ಅಮೆಜಾನ್ ಈ ಡೀಲ್ ಕುದುರಿಸಲು ಯತ್ನಿಸುತ್ತಿದೆ. ಸರಿ ಸುಮಾರು 4,500 ರಿಂದ 5,000 ಕೋಟಿ ರು ಮೌಲ್ಯದ ಒಪ್ಪಂದ ಇದಾಗಿದೆ ಎಂದು ಎಕಾನಾಮಿಕ್ಸ್ ಟೈಮ್ಸ್ ವರದಿ ಮಾಡಿದೆ.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more