Short News

ಸೈಬರ್ ವಂಚಕನ ಖತರ್ನಾಕ್ ಐಡಿಯಾ; ಬೆಚ್ಚಿಬಿದ್ದ ನಗರದ ರಾಯಭಾರಿ ಕಚೇರಿ!!

ಸೈಬರ್ ವಂಚಕನ ಖತರ್ನಾಕ್ ಐಡಿಯಾ; ಬೆಚ್ಚಿಬಿದ್ದ ನಗರದ ರಾಯಭಾರಿ ಕಚೇರಿ!!

ವಿವಿಧ ರೀತಿಯಲ್ಲಿ ಜನರನ್ನು ವಚಿಸುವ ಸೈಬರ್ ವಂಚಕರು ಇದೀಗ ಜಪಾನ್‌ ರಾಯಭಾರಿ ಹೆಸರು ಹಾಗೂ ಕಚೇರಿ ವಿಳಾಸ ದುರ್ಬಳಕೆ ಮಾಡಿಕೊಂಡು ಅನ್‌ಲೈನ್‌ ವಂಚನೆ ನಡೆಸಲು ಯತ್ನಿಸಿದ್ದಾರೆ ಅದರೆ, ದೊಡ್ಡ ಅಪಾಯವೊಂದನ್ನು ತಪ್ಪಿಸಿಕೊಂಡಿರುವ ನಗರದ ನಿವಾಸಿಯೋರ್ವರು ಕೊನೆಗೂ 20 ಸಾವಿರ ರೂ. ಹಣ ಕಳೆದುಕೊಂಡಿರುವ ಪ್ರಕರಣ ವರದಿಯಾಗಿದೆ.ಬೆಂಗಳೂರು ನಗರದ ಕಬ್ಬನ್ ರಸ್ತೆಯಲ್ಲಿರುವ ಜಪಾನ್‌ ರಾಯಭಾರಿ ಹೆಸರಿನಲ್ಲಿ ವಂಚನೆ ನಡೆಸಲಾಗಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿರಪರಿಚಿತ ಹೆಸರುಗಳನ್ನು ಹೊಂದಿರುವ ವಿದೇಶಗಳಿಂದ ಬರುವ ರಾಯಭಾರಿಗಳ ಹೆಸರನ್ನು ಬಳಸಿಕೊಂಡು ವಂಚನೆ ನಡೆಸಲು ಜಾಲ ಬೀಸಲಾಗಿದೆ.

ಒಡಿಶಾದಲ್ಲಿ ಸೈಕ್ಲೋನ್: ಐದು ಕರಾವಳಿ ಜಿಲ್ಲೆಗಳಲ್ಲಿ ಹೈಅಲರ್ಟ್

ಒಡಿಶಾದಲ್ಲಿ ಸೈಕ್ಲೋನ್: ಐದು ಕರಾವಳಿ ಜಿಲ್ಲೆಗಳಲ್ಲಿ ಹೈಅಲರ್ಟ್

ಒಡಿಶಾ ರಾಜ್ಯದಲ್ಲಿ ಸೈಕ್ಲೋನ್ ಪ್ರವೇಶ ಮಾಡಿದ್ದು, ಜನತೆ ಪ್ರವಾಹದ ಭೀತಿ ಎದುರಿಸುತ್ತಿದ್ದಾರೆ. ಒಡಿಶಾದ ಐದು ಕರಾವಳಿ ಜಿಲ್ಲೆಗಳಾದ ಗಂಜಮ್, ಗಣಪತಿ, ಪುರಿ,ನಯಾಘರ್, ಮತ್ತು ಕುಂದ್ರಾ ಸೇರಿದಂತೆ ಸುತ್ತಮುತ್ತ ಗುರುವಾರ ರಾತ್ರಯಿಂದಲೇ ಹೈ ಅಲರ್ಟ್ ಘೋಷಿಸಲಾಗಿದೆ. ಈ ಬಗ್ಗೆ ಅಲ್ಲಿನ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅತ್ಯವಶ್ಯಕ ಪರಿಹಾರ ಸಾಮಾಗ್ರಿಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳಲು ಸೂಚಿಸಿದ್ದಾರೆ. ಇನ್ನು ದಕ್ಷಿಣ ಒಡಿಶಾ,ಉತ್ತರ ಆಂಧ್ರಪ್ರದೇಶ,ಕಾಳಿಂಗಪಟ್ಟಣ,ಪುರಿ,ಗೋಪಾಲಪುರದಲ್ಲಿ ಸೆ.20 ಮತ್ತು 21ರಂದು ಸೈಕ್ಲೋನ್ 60-70ಕಿ.ಮೀ ವೇಗದಲ್ಲಿ ಅಪ್ಪಳಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
ತೆಂಡೂಲ್ಕರ್ ಕೊಡುಗೆ ಅಪಾರ, ಆದರಿದು ಹೊಸ ಅಧ್ಯಾಯಕ್ಕೆ ಸಕಾಲ: ಡೇವಿಡ್

ತೆಂಡೂಲ್ಕರ್ ಕೊಡುಗೆ ಅಪಾರ, ಆದರಿದು ಹೊಸ ಅಧ್ಯಾಯಕ್ಕೆ ಸಕಾಲ: ಡೇವಿಡ್

ಸಚಿನ್ ತೆಂಡೂಲ್ಕರ್ ಅವರು ಕೇರಳ ಬ್ಲಾಸ್ಟರ್ಸ್ ತಂಡ ತೊರೆದಿದ್ದು ಇಂಡಿಯನ್ ಸೂಪರ್ ಲೀಗ್ ನಲ್ಲಿ ಹೊಸ ಅಧ್ಯಾಯ ಶುರು ಮಾಡಲು ದಾರಿಯಾದಂತಾಗಿದೆ ಎಂದು ಕೇರಳ ಬ್ಲಾಸ್ಟರ್ಸ್ ಕೋಚ್, ಲಿವರ್ ಪೂಲ್ ಮತ್ತು ಹಮ್ ಯುನೈಡೆಟ್ ತಂಡದ ಮಾಜಿ ಗೋಲ್ ಕೀಪರ್ ಡೇವಿಡ್ ಜೇಮ್ಸ್ ಹೇಳಿದ್ದಾರೆ. ಕೇರಳ ಬ್ಲಾಸ್ಟರ್ಸ್ ಫುಟ್ಬಾಲ್ ಕ್ಲಬ್ ನ ಸಹ ಮಾಲಕರಾಗಿದ್ದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರು ಕಳೆದ ವಾರ ತನ್ನ ಕೈಯಲ್ಲಿದ್ದ ಕ್ಲಬ್ ನ 20 ಶೇ. ಪಾಲನ್ನು ಮಾರಾಟ ಮಾಡಿದ್ದರು.
ಕೊಡಗಿನಲ್ಲಿ ಪ್ರವಾಸೋದ್ಯಮ ಕುಸಿದರೆ ಜನರಿಗೆ ಸಂಕಷ್ಟ!

ಕೊಡಗಿನಲ್ಲಿ ಪ್ರವಾಸೋದ್ಯಮ ಕುಸಿದರೆ ಜನರಿಗೆ ಸಂಕಷ್ಟ!

ಸೆಪ್ಟಂಬರ್ ಮತ್ತು ಅಕ್ಟೋಬರ್ ತಿಂಗಳು ಎಂದರೆ ಕೊಡಗಿಗೆ ಅತಿಥಿಗಳು ಬರುವ ಕಾಲ ಎಂದೇ ಹೇಳಲಾಗುತ್ತಿತ್ತು. ಕಾರಣ ಆ ವೇಳೆಗೆ ಭೋರ್ಗರೆದು ಸುರಿಯುತ್ತಿದ್ದ ಮಳೆಯೂ ಕಡಿಮೆಯಾಗಿ ಬಿಸಿಲು ಕಾಣಿಸಿಕೊಳ್ಳುತ್ತಿತ್ತು. ಕೆಸರುಮಯ ರಸ್ತೆಗಳು ಒಣಗಿ, ಎಲ್ಲೆಡೆ ಹಸಿರು ಕಂಗೊಳಿಸುತ್ತಿತ್ತು. ಸಣ್ಣಗೆ ನಡುಕ ಹುಟ್ಟಿಸುವ ಚಳಿಗಾಳಿ ಮುದ ನೀಡುತ್ತಿತ್ತು. ಆದರೆ ಈ ಬಾರಿಯ ಮಹಾಮಳೆ ಕೊಡಗಿನಲ್ಲಿ ಅದರಲ್ಲೂ ಮಡಿಕೇರಿ ಮತ್ತು ಸೋಮವಾರಪೇಟೆ ತಾಲೂಕಿಗೆ ಸೇರುವ ಕೆಲವು ಗ್ರಾಮಗಳನ್ನು ಅಲ್ಲೋಲ ಕಲ್ಲೋಲ ಮಾಡಿದೆ. ಇದರಿಂದ ಭಯಗೊಂಡ ಪ್ರವಾಸಿಗರು ಇದೀಗ ಇತ್ತ ಬರಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಪ್ರವಾಸೋದ್ಯಮ ಕುಂಠಿತಗೊಂಡಿದೆ.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more