Short News

ನೆಕ್ಸ್ಟ್ ಟೈಮ್ ಪೊಲೀಸ್‌ ಹಿಡಿದರೆ ದುಡ್ಡು ಕೊಡಬೇಡಿ.! ಸ್ಮಾರ್ಟ್‌ಫೋನ್ ತೋರಿಸಿ.!

ನೆಕ್ಸ್ಟ್ ಟೈಮ್ ಪೊಲೀಸ್‌ ಹಿಡಿದರೆ ದುಡ್ಡು ಕೊಡಬೇಡಿ.! ಸ್ಮಾರ್ಟ್‌ಫೋನ್ ತೋರಿಸಿ.!

ಬೆಂಗಳೂರಿನ ಟ್ರಾಫಿಕ್‌ನಲ್ಲಿ ಗಾಡಿ ಓಡಿಸುವದೇ ಒಂದು ಸಾಹಸ, ಇದರ ಮಧ್ಯೆ ಟ್ರಾಫಿಕ್ ಪೊಲೀಸರ ಕಿರಿಕಿರಿಯೂ ಸೇರಿದರೆ ಇನ್ನು ತಲೆ ನೋವು. ಯಾವುದೇ ಕಾರಣಕ್ಕೆ ಡ್ರೈವಿಂಗ್ ಲೈಸೆನ್ಸ್ ಮತ್ತು ರಿಜಿಸ್ಟ್ರೆಷನ್ ಸರ್ಟಿಫೀಕೆಟ್ (DL-RC) ಇದ್ದು, ಮನೆಯಲ್ಲಿಯೂ ಬಿಟ್ಟು ಬಂದರೆ ಅಥಾವ ಕಳೆದು ಹೋಗಿದರೆ ಸುಮ್ಮನೆ ದಂಡವನ್ನು ಪಾವತಿಸಬೇಕು. ಇಲ್ಲವೇ ಫೊಲೀಸರ ಮುಂದೆ ಹಲ್ಲುಕಿರಿಯಬೇಕು ಜೊತೆಗೆ ಅವರಗೆ ನೂರೋ ಇನ್ನೂರೋ ನೀಡಿ ಕೈಬೆಚ್ಚಗೆ ಮಾಡಿ ಹೋಗಬೇಕು. ಇಷ್ಟು ಮಾಡುವಷ್ಟರಲ್ಲಿ ಟೈಮ್‌ ಆಗಿ ಹೋಗಿ ನಾವು ಹೊಗುತ್ತಿದ್ದ ಕೆಲಸಕ್ಕೆ ಟೈಮ್ ಆಗಿರುತ್ತದೆ.

ಕೇರಳದಲ್ಲಿ ವರುಣದ ಅಬ್ಬರ : ಸಾವಿನ ಸಂಖ್ಯೆ 47ಕ್ಕೆ ಏರಿಕೆ

ಕೇರಳದಲ್ಲಿ ವರುಣದ ಅಬ್ಬರ : ಸಾವಿನ ಸಂಖ್ಯೆ 47ಕ್ಕೆ ಏರಿಕೆ

ದೇವರನಾಡು ಕೇರಳದಲ್ಲಿ ಮುಂಗಾರು ಮಳೆ ಮತ್ತೆ ಆರ್ಭಟಿಸಿದೆ. ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಮಳೆಗೆ ಇಡುಕ್ಕಿ, ಮಲಪ್ಪುರಂ, ಕಂಜೂರ್, ಎರ್ನಾಕುಲಂ, ಕಲ್ಲಿಕೋಟೆ ಸೇರಿದಂತೆ 8 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಇತ್ತ ಭಾರಿ ಮಳೆಯಿಂದಾಗಿ ಮಲ್ಲಾಪೆರಿಯಾರ್ ಅಣೆಕಟ್ಟಿಗೆ ಭಾರಿ ಪ್ರಮಾಣದ ನೀರು ಹರಿಯುತ್ತಿದ್ದು, ಮಧ್ಯಾಹ್ನದ ವೇಳೆಗೆ ಡ್ಯಾಂ ಗರಿಷ್ಠ ಮಟ್ಟ ಅಂದರೆ 142 ಅಡಿ ತಲುಪಲಿದೆ. ಆಗ ಡ್ಯಾಂನ ಎಲ್ಲ 13 ಗೇಟ್ ಗಳನ್ನು ತೆರೆದು ನೀರನ್ನು ಹೊರಬಿಡಲಾಗುತ್ತಿದೆ. ಇನ್ನು ಕೇರಳದಲ್ಲಿ ಮಳೆಯಿಂದಾಗಿ ಸಾವನ್ನಪ್ಪಿದವರ ಸಂಖ್ಯೆ 47ಕ್ಕೇ ಏರಿಕೆಯಾಗಿದೆ.
24 ಗಂಟೆಗಳಲ್ಲಿ ಭಾರೀ ಮಳೆ, ಕರಾವಳಿಯಲ್ಲಿ ಹೈ ಅಲರ್ಟ್‌

24 ಗಂಟೆಗಳಲ್ಲಿ ಭಾರೀ ಮಳೆ, ಕರಾವಳಿಯಲ್ಲಿ ಹೈ ಅಲರ್ಟ್‌

ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಮುಂದಿನ 24 ಗಂಟೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ ಜಿಲ್ಲೆಗಳಿಗೆ ತುರ್ತು ಮುನ್ನೆಚ್ಚರಿಕೆ ಸಂದೇಶ ರವಾನಿಸಿರುವ ಇಲಾಖೆ ಮೀನುಗಾರರು ಸಮುದ್ರ ಅಥವಾ ನದಿಗಳಲ್ಲಿ ಮೀನುಗಾರಿಕೆಗೆ ತೆರಳಬಾರದು ಎಂದು ಎಚ್ಚರಿಸಿದೆ. ಮಕ್ಕಳು ನೀರು ತುಂಬಿರುವ ತಗ್ಗು ಪ್ರದೇಶಕ್ಕೆ ತೆರಳದಂತೆ ಪೋಷಕರು ಎಚ್ಚರಿಕೆ ವಹಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಕರೆ ನೀಡಿದ್ದಾರೆ. ಮಳೆಯಿಂದ ಯಾವುದೇ ರೀತಿಯ ತೊಂದರೆಯಾದಲ್ಲಿ ಜಿಲ್ಲಾಧಿಕಾರಿ ಕಚೇರಿಯ ನಿಯಂತ್ರಣ ಕೊಠಡಿ ದೂರವಾಣಿ ಸಂಖ್ಯೆ 1077ಗೆ ಕರೆಮಾಡಿ ಮಾಹಿತಿ ನೀಡಬಹುದು.
ಎಚ್ಡಿಕೆ ಆಸೆ : ಪ್ರತಿ ತಿಂಗಳು ಜಿಲ್ಲೆಯೊಂದರಲ್ಲಿ ರೈತರ ಜತೆ ಸಂವಾದ

ಎಚ್ಡಿಕೆ ಆಸೆ : ಪ್ರತಿ ತಿಂಗಳು ಜಿಲ್ಲೆಯೊಂದರಲ್ಲಿ ರೈತರ ಜತೆ ಸಂವಾದ

ರಾಜ್ಯದಲ್ಲಿ ಸ್ಥಿರ ಸರ್ಕಾರ ನೀಡುವುದರ ಜೊತೆಗೆ ಜನಪರ ಆಡಳಿತದ ಮೂಲಕ ಅಭಿವೃದ್ದಿ ಸಾಧಿಸುವುದು ತಮ್ಮ ಗುರಿ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. ಇನ್ನು ಮುಂದೆ ಪ್ರತಿ ತಿಂಗಳೂ ರಾಜ್ಯದ ಯಾವುದಾದರೊಂದು ಜಿಲ್ಲೆಯಲ್ಲಿ ಒಂದು ದಿನ ಬೆಳಗ್ಗೆಯಿಂದ ಸಂಜೆಯವರೆಗೆ ರೈತರೊಂದಿಗೆ ಚರ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು. ರಾಜ್ಯದಲ್ಲಿ ಅತಿವೃಷ್ಟಿಯಿಂದ ಕರಾವಳಿ ಹಾಗೂ ಮಲೆನಾಡು ಪ್ರದೇಶದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ ನಗರ ಸ್ಥಳಿಯ ಸಂಸ್ಥೆಗಳ ಚುನಾವಣೆ ನಂತರ ಆ ಭಾಗದ ಜಿಲ್ಲೆಗಳಿಗೆ ತೆರಳಿ ಎರೆಡೆರಡು ದಿನ ಇದ್ದು ಸಮಸ್ಯೆಗಳನ್ನು ಆಲಿಸಿ ಪರಿಹರಿಸಲು ಕ್ರಮ ವಹಿಸಲಾಗುವುದು ಎಂದರು.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more