Short News

ಭಾರತದಲ್ಲಿ ಪ್ರಾರಂಭವಾಯಿತು ಜೆಬಿಎಲ್ ಆನ್‌ಲೈನ್ ಮಳಿಗೆ..! ಶೇ.50ರಷ್ಟು ರಿಯಾಯಿತಿ..!

ಭಾರತದಲ್ಲಿ ಪ್ರಾರಂಭವಾಯಿತು ಜೆಬಿಎಲ್ ಆನ್‌ಲೈನ್ ಮಳಿಗೆ..! ಶೇ.50ರಷ್ಟು ರಿಯಾಯಿತಿ..!

ಆಡಿಯೋ ಬ್ರ್ಯಾಂಡ್ ಕಂಪೆನಿ ಜೆಬಿಎಲ್ ತನ್ನ ಆನ್ ಲೈನ್ ಸ್ಟೋರ್ ನ್ನು ಭಾರತದಲ್ಲಿ ತೆರೆದಿದೆ. ಇದು ಸ್ಯಾಮ್ ಸಂಗ್ ನ ಅಂಗಸಂಸ್ಥೆಯಾಗಿದೆ ಮತ್ತು ಹಾರ್ಮನ್ ಇಂಟರ್ ನ್ಯಾಷನಲ್ ನ ಒಂದು ಭಾಗವಾಗಿದೆ. ಪ್ರೊಡಕ್ಟ್ ಗಳ ವೈಶಿಷ್ಟ್ಯತೆಗಳನ್ನು ತಿಳಿಸುವುದು ಮತ್ತು ಬೇರೆಬೇರೆ ಬೆಲೆಯ ಜೆಬಿಎಲ್ ಪ್ರೊಡಕ್ಟ್ ಗಳಾದ ಹೆಡ್ ಫೋನ್, ಬ್ಲೂಟೂತ್ ಪೊರ್ಟೇಬಲ್ ಸ್ಪೀಕರ್ ಗಳು, ಮಲ್ಟಿಮೀಡಿಯಾ ಪ್ರೊಡಕ್ಟ್ ಗಳನ್ನು ಮಾರಾಟ ಮಾಡುತ್ತದೆ.  ಸದ್ಯ ಕಂಪೆನಿಯು ಜೆಬಿಎಲ್ ಗೋ+ಬ್ಲೂಟೂತ್ ಸ್ಪೀಕರ್ ನ್ನು 3,499ರುಪಾಯಿಗೆ ಮತ್ತು ಜೆಬಿಎಲ್ T205BT ವಯರ್ ಲೆಸ್ ಹೆಡ್ ಫೋನ್ ನ್ನು 2,999 ರುಪಾಯಿಗೆ ಇ ಕಾಮರ್ಸ್ ಪೋರ್ಟಲ್ ನಲ್ಲಿ ಮಾರಾಟಕ್ಕಿಟ್ಟಿದೆ.
ಧನಂಜಯ್-ಸೂರಿ ಚಿತ್ರಕ್ಕೆ ಎಂಟ್ರಿ ಕೊಟ್ಟ ಮತ್ತಿಬ್ಬರು ನಟಿಯರು

ಧನಂಜಯ್-ಸೂರಿ ಚಿತ್ರಕ್ಕೆ ಎಂಟ್ರಿ ಕೊಟ್ಟ ಮತ್ತಿಬ್ಬರು ನಟಿಯರು

'ಟಗರು' ಚಿತ್ರದ ನಂತರ ನಿರ್ದೇಶಕ ಸೂರಿ ಮತ್ತು ಡಾಲಿ ಧನಂಜಯ್ ಜೋಡಿಯಲ್ಲಿ ಇನ್ನೊಂದು ಸಿನಿಮಾ ಬರ್ತಿದೆ. ಈ ಚಿತ್ರಕ್ಕೆ 'ಪಾಪ್ ಕಾರ್ನ್ ಮಂಕಿ ಟೈಗರ್' ಎಂದು ಹೆಸರಿಡಲಾಗಿದೆ. ಧನಂಜಯ್ ನಾಯಕನಾಗಿದ್ದು, ನಿವೇದಿತಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಇದೀಗ, ಮತ್ತಿಬ್ಬರು ಹೊಸ ನಟಿಯರು ಈ ಚಿತ್ರದಲ್ಲಿ ಅಭಿನಯಿಸಲಿದ್ದಾರೆ ಎಂಬ ಸುದ್ದಿ ಬಹಿರಂಗವಾಗಿದೆ. ಶ್ರೀನಿವಾಸ ಎಂಬ ಪಾತ್ರದಲ್ಲಿ ಧನಂಜಯ್ ಹಾಗೂ ದೇವಿಕಾ ಪಾತ್ರದಲ್ಲಿ ನಿವೇದಿತಾ ಬಣ್ಣ ಹಚ್ಚಲಿದ್ದು, ಸಪ್ತಮಿ ಹಾಗೂ ಅಮೃತಾ ಎಂಬ ನಟಿಯರು ಈ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಗಿರಿಜಾ ಮತ್ತು ನಂದಿನಿ ಎಂಬ ಪಾತ್ರಗಳನ್ನ ಇವರಿಬ್ಬರು ಪೋಷಿಸಲಿದ್ದಾರೆ.
ದೇವರ ನಾಡು ಕೇರಳದಲ್ಲಿ ನಿಲ್ಲದ ಮಹಾಮಳೆ: 57 ಜನ ಸಾವು,  ಎಲ್ಲಾ ಜಿಲ್ಲೆಗಳಿಗೂ ರೆಡ್ ಅಲರ್ಟ್ ಘೋಷಣೆ !

ದೇವರ ನಾಡು ಕೇರಳದಲ್ಲಿ ನಿಲ್ಲದ ಮಹಾಮಳೆ: 57 ಜನ ಸಾವು, ಎಲ್ಲಾ ಜಿಲ್ಲೆಗಳಿಗೂ ರೆಡ್ ಅಲರ್ಟ್ ಘೋಷಣೆ !

ದೇವರನಾಡು ಕೇರಳದಲ್ಲಿ ಹಿಂದೆಂದೂ ಕಾಣದ ಶತಮಾನದ ಮಳೆಯಾಗುತ್ತಿದ್ದು, ವರುಣ ತಣ್ಣಗಾಗುತ್ತಿರುವ ಲಕ್ಷಣ ಕಾಣುತ್ತಿಲ್ಲ. ಭಾರಿ ಮಳೆಗೆ ಈ ವರೆಗೆ 57 ಕ್ಕೂ ಹೆಚ್ಚು ಜನ ಬಲಿಯಾಗಿದ್ದಾರೆ. ಮಾತ್ರವಲ್ಲ 14 ಜಿಲ್ಲೆಗಳನ್ನು ಹೊಂದಿರುವ ಕೇರಳ ರಾಜ್ಯದ 34 ಅಣೆಕಟ್ಟುಗಳಲ್ಲಿ ನೀರು ಗರಿಷ್ಟ ಮಟ್ಟ ತಲುಪಿದ್ದು, ಎಲ್ಲಾ ಡ್ಯಾಂ ನ ಗೇಟ್ ಗಳನ್ನು ತೆರೆಯಲಾಗಿದೆ. ಇನ್ನು ಇಡುಕ್ಕಿ ಡ್ಯಾಂ ನಿಂದ ಪ್ರತೀ 1 ಸೆಕೆಂಡಿಗೆ ಬರೊಬ್ಬರಿ 8.5ಲಕ್ಷ ಲೀಟರ್ ನೀರು ಹೊರಹೋಗುತ್ತಿದೆ. ಇದರ ಜತೆಗೆ 14ಜಿಲ್ಲೆಗಳಲ್ಲಿ ಕೂಡ ರೆಡ್ ಅಲರ್ಟ್ ಘೋಷಿಸಲಾಗಿದೆ. ಮಳೆಯ ಪರಿಣಾಮದಿಂದ 25ರಂದು ಕೊನೆಗಳ್ಳುವ ಓಣಂ ಹಬ್ಬವನ್ನು ಆಚರಿಸದಿರಲು ನಿರ್ಧರಿಸಲಾಗಿದೆ.
ಚಾಲೆಂಜರ್ಸ್ ಟ್ರೋಫಿ: ವಿಮೆನ್ ಗ್ರೀನ್ ತಂಡಕ್ಕೆ ಗೆಲುವು

ಚಾಲೆಂಜರ್ಸ್ ಟ್ರೋಫಿ: ವಿಮೆನ್ ಗ್ರೀನ್ ತಂಡಕ್ಕೆ ಗೆಲುವು

ಬೆಂಗಳೂರಿನ ಆಲೂರು ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮಹಿಳೆಯರ ಟಿ20 ಚಾಲೆಂಜರ್ಸ್ ಟ್ರೋಫಿಯ ಎರಡನೆಯ ಪಂದ್ಯದಲ್ಲಿ ಇಂಡಿಯಾ ವಿಮೆನ್ ಗ್ರೀನ್ ತಂಡ ಇಂಡಿಯಾ ವಿಮೆನ್ ಬ್ಲೂ ತಂಡವನ್ನು 7ವಿಕೆಟ್‌ಗಳಿಂದ ಸೋಲಿಸಿತು. ಇದು ಬ್ಲೂ ತಂಡಕ್ಕೆ ಸತತ ಎರಡನೆಯ ಸೋಲಾಗಿದೆ. ಮೊದಲ ಪಂದ್ಯದಲ್ಲಿ ರೆಡ್ ತಂಡದ ವಿರುದ್ಧ ಮಿಥಾಲಿ ರಾಜ್ ಪಡೆ ಸೋಲು ಅನುಭವಿಸಿತ್ತು. ಮಳೆಯ ಕಾರಣ ಪಂದ್ಯವನ್ನು 17ಓವರ್‌ಗಳಿಗೆ ಇಳಿಸಲಾಗಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಬ್ಲೂ ತಂಡ ರನ್ ಗಳಿಸಲು ಪರದಾಡಿತು.ಗುರಿ ಬೆನ್ನತ್ತಿದ ಗ್ರೀನ್ ತಂಡವು 78ರನ್‌ ಗಳಿಸಿದ್ದಾಗ ಮತ್ತೆ ಮಳೆ ಕಾಟ ಆರಂಭವಾಯಿತು. ಇದರಿಂದ ವಿಜೆಡಿ ನಿಯಮದ ಆಧಾರದಲ್ಲಿ ಗ್ರೀನ್ ತಂಡ ಗೆದ್ದಿತು.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more