ಪೋಷಕರೇ ಎಚ್ಚರ! ಮಕ್ಕಳ ಮೋಜಿಗಿಂತ ಜೀವ ಮುಖ್ಯ: ಈ ವಿಡಿಯೋ ನೋಡಿ

ಆಘಾತಕಾರಿ ಘಟನೆಯೊಂದರಲ್ಲಿ, ಚಲಿಸುವ ಕಾರಿನ ಸನ್‌ರೂಫ್ ಮೂಲಕ ಹೊರ ಬಂದರೆ ಆಗುವ ಅಪಾಯಗಳ ಬಗ್ಗೆ ವಿಡಿಯೋವೊಂದು ಮತ್ತೆ ಗಮನ ಸೆಳೆದಿದೆ. ಬಾಲಕನೊಬ್ಬ ಚಲಿಸುವ ಕಾರಿನಲ್ಲಿ ಸನ್‌ರೂಫ್‌ನಿಂದ ತಲೆ ಹೊರತೆಗೆದು ಕೆಳಮಟ್ಟದ ರೈಲ್ವೆ ತಡೆಗೋಡೆಗೆ ಡಿಕ್ಕಿ ಹೊಡೆದ ಕಾರಣ ಗಂಭೀರವಾಗಿ ಗಾಯಗೊಂಡಿದ್ದಾನೆ. ಸನ್‌ರೂಫ್ ‌ನಿಂದ ಹೊರನಿಲ್ಲುವ ಅಪಾಯಕಾರಿ ಅಭ್ಯಾಸಗಳನ್ನು ನಿಗ್ರಹಿಸಲು ಮತ್ತು ಎಲ್ಲಾ ರಸ್ತೆ ಬಳಕೆದಾರರಿಗೆ ಸುರಕ್ಷಿತ ಪ್ರಯಾಣದ ಬಗ್ಗೆ ಅರಿವಿರಲು ಕಾನೂನುಗಳ ಕಠಿಣ ಜಾರಿಯ ತುರ್ತು ಅಗತ್ಯವನ್ನು ಈ ಘಟನೆ ಮತ್ತೊಮ್ಮೆ ಒತ್ತಿಹೇಳುತ್ತಿದೆ.

Hyundai: ಹ್ಯುಂಡೈ ಕಾರುಗಳ ಬೆಲೆ ಇಳಿಕೆ: ರೂ.2.4 ಲಕ್ಷ ಬೆಲೆ ಕಡಿತ

ಪ್ರಮುಖ ಕಾರು ತಯಾರಕ ಕಂಪನಿಯಾಗಿರುವ ಹುಂಡೈ (Hyundai) ಇಂದು ಪ್ರಯಾಣಿಕ ವಾಹನಗಳ ಮೇಲಿನ ಇತ್ತೀಚಿನ GST ದರ ಕಡಿತದ ಸಂಪೂರ್ಣ ಪ್ರಯೋಜನವನ್ನು ತನ್ನ ಗ್ರಾಹಕರಿಗೆ ವರ್ಗಾಯಿಸುವುದಾಗಿ ಘೋಷಿಸಿದೆ. ಇದರ ಪರಿಷ್ಕೃತ GST ದರಗಳು ಸೆಪ್ಟೆಂಬರ್ 22, 2025 ರಿಂದ ಜಾರಿಗೆ ಬರುತ್ತದೆ ಎಂದು ಹ್ಯುಂಡೈ ತಿಳಿಸಿದೆ. ಇದರೊಂದಿಗೆ, ಭಾರತದಾದ್ಯಂತ ಹುಂಡೈ ಗ್ರಾಹಕರು ತಮ್ಮ ನೆಚ್ಚಿನ ಹುಂಡೈ ಕಾರುಗಳನ್ನು ಹೆಚ್ಚು ಕೈಗೆಟುಕುವ ಬೆಲೆಯಲ್ಲಿ ಖರೀದಿಸಲು ಸಾಧ್ಯವಾಗುತ್ತದೆ. ಇದು ಈ ಹಬ್ಬದ ಸೀಸನ್‌ನಲ್ಲಿ ಕಾರು ಮಾಲೀಕತ್ವದ ಸಂತೋಷವನ್ನು ಮತ್ತಷ್ಟು ಹೆಚ್ಚಿಸುತ್ತದೆ.

ಬೆಂಗಳೂರಲ್ಲಿ Sunday Ride ಎಂದು ವಿಡಿಯೋ ಹಂಚಿಕೊಂಡ ಡಿ.ಕೆ ಶಿವಕುಮಾರ್, ಜನರ ಮಸ್ತ್‌ ರಿಯಾಕ್ಷನ್‌!


Renault: 300 ಕ್ಕೂ ಹೆಚ್ಚು ಕಾರುಗಳ ಡೆಲಿವರಿ ನೀಡಿದ ರೆನಾಲ್ಟ್

ಜನಪ್ರಿಯ ಫ್ರೆಂಚ್ ಕಾರು ತಯಾರಕ ಕಂಪನಿಯಾಗಿರುವ ರೆನಾಲ್ಟ್ ಗ್ರೂಪ್‌ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ 'ರೆನಾಲ್ಟ್ ಇಂಡಿಯಾ', ಕೇರಳದಾದ್ಯಂತ ತನ್ನ ಜನಪ್ರಿಯ ಮಾಡಲ್‌ಗಳ 300 ಕ್ಕೂ ಹೆಚ್ಚು ಗ್ರಾಹಕ ವಿತರಣೆಗಳನ್ನು ಘೋಷಿಸಿದೆ. ರಾಜ್ಯದ ಪ್ರಮುಖ ಹಬ್ಬವಾಗಿರುವ ಓಣಂ ಸಂದರ್ಭವಾಗಿ ರಾಜ್ಯದ ಜನ ಹೆಚ್ಚಿನ ವಾಹನ ಖರೀದಿಗಳನ್ನು ಮಾಡುತ್ತಾರೆ. ಗಮನಾರ್ಹವಾಗಿ, ಕಂಪನಿಯು ಕೇರಳದಲ್ಲಿ ಹೊಸದಾಗಿ ಬಿಡುಗಡೆಯಾದ ರೆನಾಲ್ಟ್ ಟ್ರೈಬರ್ ಒಂದೇ ಮಾಡಲ್‌ಗೆ ಹತ್ತು ದಿನಗಳ ಅವಧಿಯಲ್ಲಿ 100 ಕ್ಕೂ ವಿತರಣೆಗಳೊಂದಿಗೆ ಅಗಾಧ ಪ್ರತಿಕ್ರಿಯೆಯನ್ನು ಪಡೆದಿರುವುದಾಗಿ ಕಂಪನಿ ಹೇಳಿಕೊಂಡಿದೆ.
Advertisement

19 ಕಿ.ಮೀ ಮೈಲೇಜ್.. 5-ಸೀಟರ್, 7.95 ಲಕ್ಷ.. Citroen Basalt X..

ಇತ್ತೀಚಿಗೆ ಹೊಚ್ಚ ಹೊಸ ಸಿಟ್ರನ್ ಬಸಾಲ್ಟ್ ಎಕ್ಸ್ (Citroen Basalt X) ಕೂಪೆ ಎಸ್‌ಯುವಿಯನ್ನು ಮಾರಾಟಕ್ಕೆ ತರಲಾಗಿತ್ತು. ಇದು ತುಂಬಾ ಅಚ್ಚುಕಟ್ಟಾದ ವಿನ್ಯಾಸ ಹಾಗೂ ಹತ್ತಾರು ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಕೈಗೆಟುಕುವ ಬೆಲೆಯಲ್ಲಿಯೂ ಸಿಗುತ್ತದೆ. ಈ ಕಾರಿಗೆ 'ಟಾಟಾ ಕರ್ವ್' ಪ್ರಬಲವಾದ ಎದುರಾಳಿಯಾಗಿದೆ. ನಾವಿಲ್ಲಿ ಈ ನೂತನ 'ಬಸಾಲ್ಟ್ ಎಕ್ಸ್'ನ ಬೆಲೆ ಮತ್ತು ವಿಶೇಷತೆಗಳ ಕುರಿತ ಪ್ರಮುಖಾಂಶಗಳು ಏನೆಂಬುದನ್ನು ಸಂಪೂರ್ಣವಾಗಿ ವಿವರಿಸಿದ್ದೇವೆ.

Mahindra: ಮಹೀಂದ್ರಾ ಕಾರುಗಳ ಬೆಲೆ ಭಾರೀ ಇಳಿಕೆ: ರೂ. 1.5 ಲಕ್ಷ ಕಡಿತ

ಭಾರತದ ಪ್ರಮುಖ SUV ತಯಾರಕರಾದ ಮಹೀಂದ್ರಾ (Mahindra), ತನ್ನ ಸಂಪೂರ್ಣ ಇಂಧನ ಚಾಲಿತ SUV ಗಳನ್ನು ಹೊಸ GST ಪರಿಷ್ಕರಣೆಗಳಿಗೆ ಅನುಗುಣವಾಗಿ ಬೆಲೆ ಇಳಿಕೆ ಮಾಡಿ ಮಾರಾಟ ಮಾಡುವುದಾಗಿ ಘೋಷಿಸಿದೆ. ಸೆಪ್ಟೆಂಬರ್ 3, 2025 ರಂದು ಭಾರತ ಸರ್ಕಾರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ನೇತೃತ್ವದಲ್ಲಿ ನಡೆದ 56 ನೇ GST ಕೌನ್ಸಿಲ್ ಸಭೆಯಲ್ಲಿ GST 2.0 ಘೋಷಣೆಯ ನಂತರ ಈ ಬೆಳವಣಿಗೆ ನಡೆದಿದೆ. ಸೆಪ್ಟೆಂಬರ್ 6, 2025 ರಿಂದ ಮಹೀಂದ್ರಾ ತನ್ನ ಕಾರುಗಳ ಮೇಲೆ ಈ ಪ್ರಯೋಜನಗಳನ್ನು ನೀಡುವುದಾಗಿ ಪ್ರಕಟಣೆಯಲ್ಲಿ ತಿಳಿಸಿದೆ. ಯಾವ ಕಾರಿನ ಮೇಲೆ ಎಷ್ಟು ಬೆಲೆ ಇಳಿಕೆ ಆಗಲಿದೆ ಬನ್ನಿ ನೋಡೋಣ.

ಖರ್ಚಿಲ್ಲದೆ ನಿತ್ಯ 156 ಕಿ.ಮೀ ಓಡುವ ಹೊಸ ಸ್ಕೂಟರ್ ಬಿಡುಗಡೆ

ದೇಶೀಯವಾಗಿ ಎಲೆಕ್ಟ್ರಿಕ್ ವಾಹನಗಳ ತಯಾರಿಕೆಯಲ್ಲಿ ಪರಿಣತಿ ಹೊಂದಿರುವ ನ್ಯುಮರೋಸ್ ಮೋಟಾರ್ಸ್ (Numeros Motors), ತನ್ನ ಬಹುಪಯೋಗಿ ಇ-ಸ್ಕೂಟರ್ 'ಡಿಪ್ಲೋಸ್ ಮ್ಯಾಕ್ಸ್'ನ ಸುಧಾರಿತ ಆವೃತ್ತಿಯಾದ 'ಡಿಪ್ಲೋಸ್ ಮ್ಯಾಕ್ಸ್+' (Diplos Max+) ಅನ್ನು ಬಿಡುಗಡೆ ಮಾಡಿದೆ. ಹೊಸ ಡಿಪ್ಲೋಸ್ ಮ್ಯಾಕ್ಸ್+ ಐದು ಹೊಸ ಅಪ್ಡೇಟ್‌ಗಳೊಂದಿಗೆ ಬಂದಿದೆ. ಇದು ಹೊಸ ಡಸೈನ್ ಮತ್ತು ಡ್ಯುಯಲ್ ಕಲರ್ ವೇರಿಯೆಂಟ್ ‌ಗಳನ್ನು ಹೊಂದಿದೆ. 4.0 kWh ಸಾಮರ್ಥ್ಯದ ಡ್ಯುಯಲ್ ಲಿಕ್ವಿಡ್ ಇಮ್ಮರ್ಶನ್ ಕೂಲಿಂಗ್ ಬ್ಯಾಟರಿ ಪ್ಯಾಕ್, ಗಂಟೆಗೆ 70 ಕಿ.ಮೀ. ಗರಿಷ್ಠ ವೇಗ, 156 ಕಿ.ಮೀ.ಗಳ (IDC) ಸುಧಾರಿತ ರೇಂಜ್ ಮತ್ತು ಹೆಚ್ಚಿನ ಪಿಕ್ - ಅಪ್ ಇದರ ಪ್ರಮುಖ ಆಕರ್ಷಣೆಗಳಾಗಿವೆ.

ಟೊಯೋಟಾ ಕಾರುಗಳ ಬೆಲೆ ಇಳಿಕೆ... ಬರೋಬ್ಬರಿ 3.49 ಲಕ್ಷ ರೂ. ಕಡಿತ

ಪ್ರಮುಖ ಕಾರು ತಯಾರಕರಾದ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ಇತ್ತೀಚಿನ ಜಿಎಸ್‌ಟಿ ದರ ಕಡಿತದ ಪ್ರಯೋಜನಗಳನ್ನು ತನ್ನ ಗ್ರಾಹಕರಿಗೆ ಸಂಪೂರ್ಣವಾಗಿ ವರ್ಗಾಯಿಸುವುದಾಗಿ ಘೋಷಿಸಿದೆ. ಪರಿಷ್ಕೃತ ಬೆಲೆಗಳು ಸೆಪ್ಟೆಂಬರ್ 22, 2025 ರಿಂದ ಜಾರಿಗೆ ಬರಲಿವೆ. ಈ ಕ್ರಮವು ಖರೀದಿದಾರರಿಗೆ ಕೈಗೆಟುಕುವಿಕೆ ಮತ್ತು ಹಬ್ಬದ ಋತುವಿನಲ್ಲಿ ಕಂಪನಿಗೆ ಬೇಡಿಕೆಯನ್ನು ಹೆಚ್ಚಿಸಲಿದೆ. ಈ ಬೆಳವಣಿಗೆಯು ಕಾರುಗಳ ಬೆಲೆಯಲ್ಲಿ ಪ್ರಮುಖ ಬದಲಾವಣೆ ಮತ್ತು ಭಾರತೀಯ ವಾಹನ ಮಾರುಕಟ್ಟೆಯಾದ್ಯಂತ ಹಬ್ಬದ ಋತುವಿನ ಮಾರಾಟವನ್ನು ಉತ್ತೇಜಿಸುವ ನಿರೀಕ್ಷೆಯಿದೆ ಎಂದು ಟೊಯೋಟಾ ವಿಶ್ವಾಸ ವ್ಯಕ್ತಪಡಿಸಿದೆ. ಯಾವ ಮಾಡಲ್‌ ಮೇಲೆ ಎಷ್ಟು ಇಳಿಕೆಯಾಗಿದೆ ಬನ್ನಿ ನೊಡೋಣ.

468 ಕಿ.ಮೀ ಓಡುತ್ತೆ.. 5-ಸೀಟರ್, ಅಗ್ಗದ VinFast VF6 ಕಾರಿನ..

ನಿನ್ನೆಯಷ್ಟೇ ಹೊಚ್ಚ ಹೊಸ ವಿನ್‌ಫಾಸ್ಟ್ ವಿಎಫ್6 (VinFast VF6) ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆಗೊಂಡಿದೆ. ಇದು ಆಕರ್ಷಕವಾದ ವಿನ್ಯಾಸ ಹಾಗೂ ಹತ್ತಾರು ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಅಗ್ಗದ ದರದಲ್ಲೂ ಲಭ್ಯವಿದೆ. ಈ ಕಾರು ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್ ಹಾಗೂ ಟಾಟಾ ಕರ್ವ್ ಇವಿಗಳಿಗೂ ಪ್ರಬಲವಾದ ಸ್ಪರ್ಧೆಯೊಡ್ಡಲಿದೆ. ನಾವಿಲ್ಲಿ ಈ ನೂತನ 'ವಿಎಫ್6'ರ ಬೆಲೆ ಹಾಗೂ ವಿಶೇಷತೆಗಳ ಕುರಿತ ಪ್ರಮುಖಾಂಶಗಳು ಏನೆಂಬುದನ್ನು ತಿಳಿಸಿಕೊಟ್ಟಿದ್ದೇವೆ.

Renault: ಜಿಎಸ್‌ಟಿ ಬದಲಾವಣೆ.. ರೆನಾಲ್ಟ್ ಕಾರುಗಳ ಬೆಲೆ ರೂ.96,000..

ರೆನಾಲ್ಟ್ ಇಂಡಿಯಾ (Renault India) ಭರ್ಜರಿ ಸಿಹಿಸುದ್ದಿಯೊಂದನ್ನು ನೀಡಿದೆ. ಕೇಂದ್ರ ಸರ್ಕಾರವು ಕಾರುಗಳ ಮೇಲಿನ ಜಿಎಸ್‌ಟಿ (GST) ಪ್ರಮಾಣವನ್ನು ದೊಡ್ಡ ಮಟ್ಟದಲ್ಲಿ ಕಡಿತಗೊಳಿಸಿದೆ. ಇದರ ಸಂಪೂರ್ಣ ಪ್ರಯೋಜನವನ್ನು ಗ್ರಾಹಕರಿಗೆ ವರ್ಗಾಯಿಸುವುದಾಗಿ ಕಂಪನಿಯು ಘೋಷಿಸಿದೆ. ವಿವಿಧ ಕಾರುಗಳ ಬೆಲೆಯನ್ನು ರೂಪಾಂತರಗಳಿಗೆ (ವೇರಿಯೆಂಟ್) ಅನುಗುಣವಾಗಿ ರೂ.40,000 ರಿಂದ ರೂ.96,000 ವರೆಗೆ ಇಳಿಸಿದೆ. ಹೊಸ ದರಗಳು ಸೆಪ್ಟೆಂಬರ್ 22 ರಿಂದ ಅಧಿಕೃತವಾಗಿ ಜಾರಿಗೆ ಬರಲಿವೆ.

ಕೇಂದ್ರ ನೌಕರರಿಗಾಗಿ ಹೊಸ UPS ಯೋಜನೆ..NPS ನಿಂದ UPSಗೆ!

ಭಾರತದ ಏಕೀಕೃತ ಪಿಂಚಣಿ ಯೋಜನೆಯು ಸರ್ಕಾರಿ ನೌಕರರಿಗೆ ನಿವೃತ್ತಿಯ ನಂತರ ಖಚಿತವಾದ ಪ್ರಯೋಜನಗಳನ್ನು ನೀಡುತ್ತದೆ, ನಿಯಮಗಳು ಏಪ್ರಿಲ್ 1, 2025 ರಿಂದ ಜಾರಿಗೆ ಬರುತ್ತವೆ.

VinFast: 500+ ಕಿ.ಮೀ ರೇಂಜ್.. ಹೊಸ ವಿನ್‌ಫಾಸ್ಟ್ ವಿಎಫ್7..

ಬಹುನೀರಿಕ್ಷಿತ ವಿನ್‌ಫಾಸ್ಟ್ ವಿಎಫ್7 (VinFast VF7) ಎಲೆಕ್ಟ್ರಿಕ್ ಎಸ್‌ಯುವಿ, ಶನಿವಾರ ಮಾರಾಟಕ್ಕೆ ಬಂದಿದೆ. ಇದು ತುಂಬಾ ಅಚ್ಚುಕಟ್ಟಾದ ವಿನ್ಯಾಸ ಮತ್ತು ವಿವಿಧ ಅತುತ್ತಮವಾದ ವೈಶಿಷ್ಟ್ಯಗಳನ್ನು ಪಡೆದುಕೊಂಡಿದ್ದು, ಸ್ಪರ್ಧಾತ್ಮಕ ಬೆಲೆಯಲ್ಲಿಯೂ ಮಾರಾಟಕ್ಕೆ ಬಂದಿದೆ. ಈ ಕಾರು ಮಹೀಂದ್ರಾ ಎಕ್ಸ್ಇವಿ 9ಇ (Mahindra XEV 9e) ಹಾಗೂ ಟಾಟಾ ಹ್ಯಾರಿಯರ್ (Tata Harrier EV) ಮಾಡೆಲ್‌ಗಳಿಗೂ ಪ್ರಬಲವಾದ ಪ್ರತಿಸ್ಪರ್ಧಿಯಾಗಲಿದೆ. ಬನ್ನಿ, ಈ ನೂತನ ಕಾರಿನ ಬೆಲೆ ಹಾಗೂ ವಿಶೇಷತೆಗಳ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.
Advertisement

ಪರಿಣಾಮಕಾರಿ ನಿವೃತ್ತಿ ಯೋಜನೆಗಾಗಿ ಪ್ರಮುಖ ತಂತ್ರಗಳು!

ಸುರಕ್ಷಿತ ಭವಿಷ್ಯಕ್ಕಾಗಿ ಆರಂಭಿಕ ನಿವೃತ್ತಿ ಯೋಜನೆಯ ಮಹತ್ವ, ಚಕ್ರಬಡ್ಡಿಯ ಪ್ರಯೋಜನಗಳು ಮತ್ತು ಕಾರ್ಯತಂತ್ರದ ಹೂಡಿಕೆ ಆಯ್ಕೆಗಳನ್ನು ಅನ್ವೇಷಿಸಿ.

VinFast: ಹೊಸ ಬ್ರ್ಯಾಂಡ್ ವಿನ್‌ಫಾಸ್ಟ್‌ನ VF6 ಕಾರು ಬಿಡುಗಡೆ..

ವಿಯೆಟ್ನಾಂ ಮೂಲದ ವಿನ್‌ಫಾಸ್ಟ್ (VinFast), ಭಾರತದ ಕಾರು ಮಾರುಕಟ್ಟೆಯನ್ನು ಅಧಿಕೃತವಾಗಿ ಪ್ರವೇಶಿಸಿದೆ. ನವದೆಹಲಿಯಲ್ಲಿ ಶನಿವಾರ ನಡೆದ ಅದ್ದೂರಿ ಸಮಾರಂಭದಲ್ಲಿ ಹೊಚ್ಚ ಹೊಸ 'ವಿಎಫ್6' ಕಾರನ್ನು ಬಿಡುಗಡೆಗೊಳಿಸಿದೆ. ಇದೊಂದು ಎಲೆಕ್ಟ್ರಿಕ್ ಎಸ್‌ಯುವಿಯಾಗಿದೆ. ಅತ್ಯಾಧುನಿಕವಾದ ವಿನ್ಯಾಸ ಹಾಗೂ ಹತ್ತಾರು ವೈಶಿಷ್ಟ್ಯಗಳನ್ನು ಪಡೆದುಕೊಂಡಿದ್ದು, ಕೈಗೆಟುಕುವ ಬೆಲೆಯಲ್ಲಿಯೂ ಮಾರಾಟಕ್ಕೆ ಬಂದಿದೆ. ಬನ್ನಿ, ಈ ನೂತನ ಕಾರಿನ ಬೆಲೆ ಹಾಗೂ ವಿಶೇಷತೆಗಳ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.

ರೂ.1.19 ಲಕ್ಷ.. ಬಲಿಷ್ಠವಾದ ಹೊಸ TVS Ntorq 150ಗೆ..

ಬಹುನಿರೀಕ್ಷಿತ ಟಿವಿಎಸ್ ಎನ್‌ಟಾರ್ಕ್ 150 (TVS Ntorq 150) ಸ್ಕೂಟರ್ ಗುರುವಾರ ಅದ್ದೂರಿಯಾಗಿ ಬಿಡುಗಡೆಗೊಂಡಿದೆ. ಇದು ರೂ.1.19 ಲಕ್ಷದಿಂದ ರೂ.1.29 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. 149.7 ಸಿಸಿ ಸಿಂಗಲ್-ಸಿಲಿಂಡರ್ ಏರ್-ಕೋಲ್ಡ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 40 ಕಿ.ಮೀ ವರೆಗೆ ಮೈಲೇಜ್ ಕೊಡಬಹುದು ಎಂದು ಅಂದಾಜಿಸಲಾಗಿದೆ. ಫುಲ್ ಟಿಎಫ್‌ಟಿ ಡಿಸ್‌ಪ್ಲೇ, ಬ್ಲೂಟೂತ್ ಕನೆಕ್ಟಿವಿಟಿ ಮತ್ತು ಟ್ರಾಕ್ಷನ್ ಕಂಟ್ರೋಲ್ ಒಳಗೊಂಡಂತೆ ಹಲವು ವೈಶಿಷ್ಟ್ಯಗಳನ್ನು ಪಡೆದಿದೆ. ಡಿಸ್ಕ್/ ಡ್ರಮ್ ಬ್ರೇಕ್‌ಗಳನ್ನು ತನ್ನದಾಗಿಸಿಕೊಂಡಿದೆ. ನೀವು 'ಎನ್‌ಟಾರ್ಕ್ 150'ಗೆ ಪರ್ಯಾಯವಾಗಿ ಈ 3 ಸ್ಕೂಟರ್‌ಗಳನ್ನು ಖರೀದಿ ಮಾಡಬಹುದು. ಬನ್ನಿ, ಇವುಗಳ ಬೆಲೆ ಹಾಗೂ ವಿಶೇಷತೆಗಳ ಕುರಿತಂತೆ ಒಂದಷ್ಟು ವಿವರಗಳನ್ನು ತಿಳಿಯೋಣ.

ಮುಂಬೈ ಷೇರು ಮಾರುಕಟ್ಟೆಗೆ ಸೋಮವಾರ ರಜೆ..ಯಾಕೆ ತಿಳಿಯಿರಿ!

ಮಹಾರಾಷ್ಟ್ರದಲ್ಲಿ ಸೆಪ್ಟೆಂಬರ್ 8 ರಂದು ಸಾರ್ವಜನಿಕ ರಜೆ ಇರುವುದರಿಂದ ಮುಂಬೈನಲ್ಲಿ ಷೇರು ವಹಿವಾಟಿನ ಬಗ್ಗೆ ಹೂಡಿಕೆದಾರರಿಗೆ ಅನಿಶ್ಚಿತತೆ ಉಂಟಾಗುತ್ತದೆ. ಬಿಎಸ್‌ಇ ವೆಬ್‌ಸೈಟ್‌ನಲ್ಲಿ ವಹಿವಾಟಿನ ಸ್ಥಿತಿಯನ್ನು ಪರಿಶೀಲಿಸಿ.

28.65 Km ಮೈಲೇಜ್.. ಹೊಸ ಮಾರುತಿ ಸುಜುಕಿ ವಿಕ್ಟೋರಿಸ್..

ಇದೇ ಬುಧವಾರದಂದು ಮಾರುತಿ ಸುಜುಕಿ ವಿಕ್ಟೋರಿಸ್ (Maruti Suzuki Victoris) ಎಸ್‌ಯುವಿಯನ್ನು ಅದ್ದೂರಿಯಾಗಿ ಪರಿಚಯಿಸಲಾಗಿತ್ತು. ಈ ಕಾರು ಅರೆನಾ ಡೀಲರ್‌ಶಿಪ್ ಮೂಲಕ ಗ್ರಾಹಕರ ಖರೀದಿಗೆ ಲಭ್ಯವಾಗಲಿದೆ. ಇದು ಹಲವು ಹೊಸತನಗಳಿಗೆ ಸಾಕ್ಷಿಯಾಗಿದ್ದು, ಆಕರ್ಷಕವಾದ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಅತಿ ಶೀಘ್ರದಲ್ಲಿ ಬಿಡುಗಡೆಯಾಗಲಿದ್ದು, ಕೈಗೆಟುಕುವ ಬೆಲೆಯಲ್ಲಿಯೂ ಸಿಗುವ ಸಾಧ್ಯತೆಯಿದೆ. ಹ್ಯುಂಡೈ ಕ್ರೆಟಾ, ಹೋಂಡಾ ಎಲಿವೇಟ್, ಟಾಟಾ ನೆಕ್ಸಾನ್‌, ಕಿಯಾ ಸೆಲ್ಟೋಸ್ ಹಾಗೂ ಸ್ಕೋಡಾ ಕುಶಾಕ್‌ ಎಸ್‌ಯುವಿಗಳೊಂದಿಗೂ ಸ್ಪರ್ಧಿಸಬೇಕಾಗಿದೆ.

Mahindra: ಮಹೀಂದ್ರಾ ಕಾರುಗಳಿಗೆ ಫುಲ್ ಡಿಮ್ಯಾಂಡ್

ಮಹೀಂದ್ರಾ (Mahindra) ಎಲೆಕ್ಟ್ರಿಕ್ ಕಾರುಗಳು ಗಮನಾರ್ಹ ಮೈಲಿಗಲ್ಲನ್ನು ತಲುಪಿವೆ. ಕಂಪನಿಯ ಪ್ರಮುಖ ಕಾರುಗಳಾದ XEV 9e ಮತ್ತು BE 6 ಎಲೆಕ್ಟ್ರಿಕ್ SUV ಗಳು ಬಿಡುಗಡೆಯಾದ ಕೇವಲ ಐದು ತಿಂಗಳೊಳಗೆ ಒಟ್ಟಾರೆಯಾಗಿ 20,000 ಮಾರಾಟದ ಗಡಿಯನ್ನು ದಾಟಿವೆ. ಈ ಸಾಧನೆಯು ವೇಗವಾಗಿ ಬೆಳೆಯುತ್ತಿರುವ ಭಾರತೀಯ ಎಲೆಕ್ಟ್ರಿಕ್ SUV ಮಾರುಕಟ್ಟೆಯಲ್ಲಿ ಮಹೀಂದ್ರಾದ ಬಲವಾದ ಸ್ಥಾನವನ್ನು ಒತ್ತಿಹೇಳುತ್ತದೆ. ವೈಶಿಷ್ಟ್ಯ - ಭರಿತ, ದೀರ್ಘ - ಶ್ರೇಣಿಯ ಎಲೆಕ್ಟ್ರಿಕ್ ಕಾರುಗಳಿಗೆ ಭಾರತೀಯ ಗ್ರಾಹಕರಲ್ಲಿ ಹೆಚ್ಚುತ್ತಿರುವ ಬೇಡಿಕೆಯನ್ನು ಇದು ಪ್ರತಿಬಿಂಬಿಸುತ್ತದೆ.

ಜಿಎಸ್‌ಟಿ ಕಡಿತದ ಬಳಿಕ Tata ಬಿಗ್ ಗಿಫ್ಟ್.. ಕಾರುಗಳ ಬೆಲೆ..

ಭಾರತದ ಪ್ರಮುಖ ವಾಹನ ತಯಾರಕ ಕಂಪನಿಯಾದ ಟಾಟಾ ಮೋಟಾರ್ಸ್ (Tata Motors), ತನ್ನ ಗ್ರಾಹಕರಿಗೆ ಭರ್ಜರಿ ಸಿಹಿಸುದ್ದಿ ನೀಡಿದೆ. ಕೇಂದ್ರ ಸರ್ಕಾರವು ಕಾರುಗಳ ಮೇಲಿನ ಜಿಎಸ್‌ಟಿ (GST) ಪ್ರಮಾಣವನ್ನು ದೊಡ್ಡ ಮಟ್ಟದಲ್ಲಿ ಕಡಿತಗೊಳಿಸಿದೆ. ಇದರ ಸಂಪೂರ್ಣ ಪ್ರಯೋಜನವನ್ನು ಗ್ರಾಹಕರಿಗೆ ವರ್ಗಾಯಿಸುವುದಾಗಿ ಶುಕ್ರವಾರ ಕಂಪನಿಯು ಅಧಿಕೃತವಾಗಿ ಘೋಷಣೆ ಮಾಡಿದೆ. ಇದು ಸೆಪ್ಟೆಂಬರ್ 22 ರಿಂದ ಅನ್ವಯವಾಗಲಿದೆ. ಅಂದರೆ ಜಿಎಸ್‌ಟಿ ಪರಿಷ್ಕೃತ ದರಗಳು ಜಾರಿಗೆ ಬರುವ ದಿನದಿಂದಲೇ ಮಾನ್ಯವಾಗಲಿದೆ.

ITR ಸಲ್ಲಿಕೆ: ಕೊನೆಯ ಕ್ಷಣದ ತಪ್ಪುಗಳು ತಪ್ಪಿಸಿ!

2024-25ನೇ ಸಾಲಿನ ಐಟಿಆರ್ ಸಲ್ಲಿಸುವಾಗ ವೈಯಕ್ತಿಕ ತೆರಿಗೆದಾರರು ಮಾಡುವ ಸಾಮಾನ್ಯ ತಪ್ಪುಗಳನ್ನು ಮತ್ತು ಸೆಪ್ಟೆಂಬರ್ 15 ರ ಗಡುವಿನ ಮೊದಲು ಅವುಗಳನ್ನು ಹೇಗೆ ತಪ್ಪಿಸುವುದು ಎಂಬುದನ್ನು ಕಂಡುಕೊಳ್ಳಿ.
Advertisement

ವೈಯಕ್ತಿಕ ಸಾಲ: 5 ಟಿಪ್ಸ್ ಜೊತೆಗೆ ಕ್ರೆಡಿಟ್ ರಕ್ಷಿಸಿ!

ಭಾರತದಲ್ಲಿ ವೈಯಕ್ತಿಕ ಸಾಲಗಳಿಗೆ ಜವಾಬ್ದಾರಿಯುತ ಸಾಲ ಮತ್ತು ಮರುಪಾವತಿ ಪದ್ಧತಿಗಳ ಮಹತ್ವವನ್ನು ಅನ್ವೇಷಿಸಿ, ಆರ್ಥಿಕ ಸ್ಥಿರತೆ ಮತ್ತು ಸಾಲದ ಸಮಗ್ರತೆಯನ್ನು ಖಚಿತಪಡಿಸಿಕೊಳ್ಳಿ.

ಒರಾವೆಲ್ ಸ್ಟೇಸ್ ಲಿಮಿಟೆಡ್ ಯೋಜನೆಗಳು ಬೋನಸ್ ಷೇರುಗಳ ಸಂಚಿಕೆ

ಒರಾವೆಲ್ ಸ್ಟೇಸ್ ಲಿಮಿಟೆಡ್, ದ್ರವ್ಯತೆಯನ್ನು ಹೆಚ್ಚಿಸಲು ಮತ್ತು ಷೇರುದಾರರಿಗೆ ಪ್ರತಿಫಲ ನೀಡಲು 1:1 ಬೋನಸ್ ಷೇರುಗಳನ್ನು ವಿತರಿಸಲು ಯೋಜಿಸಿದೆ, 2026 ರಲ್ಲಿ IPO ನಿರೀಕ್ಷಿಸಲಾಗಿದೆ.

Tesla: ಮೊದಲ ಟೆಸ್ಲಾ ಮಾಡೆಲ್ ವೈ ಕಾರು ವಿತರಣೆ.. ಇವರೇ ನೋಡಿ..

ವಿಶ್ವದ ನಂ.1 ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್ (Elon Musk) ಮಾಲೀಕತ್ವದ ಟೆಸ್ಲಾ (Tesla), ಮುಂಬೈನಲ್ಲಿ ದೇಶದ ಪ್ರಪ್ರಥಮ ಕಾರು ಶೋರೂಂನ್ನು ಜುಲೈ 15 ರಂದು ತೆರೆದಿತ್ತು. ಅದೇ ಸಮಾರಂಭದಲ್ಲಿ ಮಾಡೆಲ್ ವೈ (Model Y) ಎಲೆಕ್ಟ್ರಿಕ್ ಎಸ್‌ಯುವಿಯನ್ನು ಅದ್ದೂರಿಯಾಗಿ ಬಿಡುಗಡೆಗೊಳಿಸಿತ್ತು. ಸದ್ಯ, ಈ ಕಾರನ್ನು ಮೊದಲ ಗ್ರಾಹಕರಿಗೂ ವಿತರಿಸಿದೆ. ಅವರು ಕೂಡ ನೂತನ ಕಾರನ್ನು ಸಂಭ್ರಮದಿಂದ ಡೆಲಿವರಿ ತೆಗೆದುಕೊಂಡಿದ್ದಾರೆ.

Citroen: ಟಾಟಾ ಕರ್ವ್ ಪ್ರತಿಸ್ಪರ್ಧಿ.. ಹೊಸ ಸಿಟ್ರನ್ ಬಸಾಲ್ಟ್..

ಬಹುನಿರೀಕ್ಷಿತ ಸಿಟ್ರನ್ ಬಸಾಲ್ಟ್ ಎಕ್ಸ್ (Citroen Basalt X) ಕೂಪೆ ಎಸ್‌ಯುವಿ ಶುಕ್ರವಾರ ಅದ್ದೂರಿಯಾಗಿ ಬಿಡುಗಡೆಗೊಂಡಿದೆ. ವಿಶೇಷವಾಗಿ 'ಸಿಟ್ರನ್ 2.0 ಸ್ಟ್ರಾಟರ್ಜಿ' ಹೆಸರಿನ ಬ್ಯುಸಿನೆಸ್ ಮಾಡೆಲ್‌ ಭಾಗವಾಗಿ ಈ ಕಾರನ್ನು ಮಾರಾಟಕ್ಕೆ ತರಲಾಗಿದೆ. ವಿನ್ಯಾಸದಲ್ಲಿ ಸಣ್ಣ-ಪುಟ್ಟ ಮಾರ್ಪಾಡುಗಳನ್ನು ಹೊಂದಿದ್ದು, ಟಾಟಾ ಕರ್ವ್ ಕಾರಿಗೆ ಪ್ರಬಲವಾದ ಸ್ಪರ್ಧೆಯೊಡ್ಡಲಿದೆ. ಬನ್ನಿ, ನೂತನ 'ಬಸಾಲ್ಟ್ ಎಕ್ಸ್'ನ ಬೆಲೆ ಹಾಗೂ ವಿಶೇಷತೆಗಳ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.

10 ಕೋಟಿ ಮೌಲ್ಯದ ವೈಭವೋಪೇತ ಫೆರಾರಿ ಕಾರನ್ನು ಖರೀದಿಸಿದ ಪುಷ್ಪ..

ಫಹಾದ್ ಫಾಜಿಲ್ (Fahadh Faasil) ಜನಪ್ರಿಯ ಮಲಯಾಳಂ ನಟರಾಗಿದ್ದು, ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ತಮಿಳು ಹಾಗೂ ತೆಲುಗು ಸಿನಿಮಾಗಳಲ್ಲೂ ಫುಲ್ ಆಕ್ಟಿವ್ ಆಗಿದ್ದಾರೆ. ಅಲ್ಲು ಅರ್ಜುನ್ ಅಭಿನಯದ ಪುಷ್ಪ ಚಿತ್ರದ ಪೊಲೀಸ್ ಅಧಿಕಾರಿ 'ಭನ್ವರ್ ಸಿಂಗ್ ಶೇಖಾವತ್' ಪಾತ್ರ ಫಹಾದ್ ಫಾಜಿಲ್ ಅವರಿಗೆ ದೊಡ್ಡ ಮಟ್ಟದ ಖ್ಯಾತಿಯನ್ನು ತಂದುಕೊಟ್ಟಿತ್ತು. ಸದ್ಯ ಹಲವು ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದಾರೆ.