ಸದ್ದಿಲ್ಲದೇ Renault Kwid ಎಲೆಕ್ಟ್ರಿಕ್ ಕಾರಿನ ಪರೀಕ್ಷೆ.. ಭಾರೀ..
ಆಟೋಮೊಬೈಲ್ಸ್
- 11 month, 18 days ago
ರೆನಾಲ್ಟ್ ಇಂಡಿಯಾ (Renault India), ವಿಶ್ವಾಸಾರ್ಹ ಕಾರು ತಯಾರಕ ಕಂಪನಿಯಾಗಿದ್ದು, ದೇಶೀಯ ಮಾರುಕಟ್ಟೆಯಲ್ಲಿ ವಿವಿಧ ಹೊಸ ಕಾರುಗಳನ್ನು ಬಿಡುಗಡೆಗೊಳಿಸಲು ತಯಾರಿ ಮಾಡಿಕೊಳ್ಳುತ್ತಿದೆ. ಅದರಲ್ಲೂ ಜಾಗತಿಕವಾಗಿ ಕಂಪನಿಯ ಒಡೆತನದಲ್ಲಿರುವ 'ಡೇಸಿಯಾ ಸ್ಪ್ರಿಂಗ್ ಇವಿ' ಆಧಾರಿತ ಕ್ವಿಡ್ ಇವಿಯನ್ನು ಕೂಡ ಮಾರಾಟಕ್ಕೆ ತರಲಿದೆ. ಈ ಮೊದಲು ಚೆನ್ನೈ ವಿಮಾನ ನಿಲ್ದಾಣ ಸಮೀಪ ಟ್ರಕ್‌ವೊಂದರಲ್ಲಿ ಇದೇ 'ರೆನಾಲ್ಟ್ ಕ್ವಿಡ್' ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್‌ನ್ನು ನಿಲ್ಲಿಸಲಾಗಿತ್ತು. ಆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲೂ ಸಖತ್ ವೈರಲ್ ಆಗಿದ್ದವು. ಸದ್ಯ, ಈ ಕಾರು ಪ್ರಾಯೋಜಿಕ ಓಡಾಟದ ಸಂದರ್ಭದಲ್ಲಿ ಕ್ಯಾಮೆರಾ ಕಣ್ಣಿಗೆ ಸೆರೆ ಸಿಕ್ಕಿದೆ.