ಭಾರತೀಯ ಬ್ರಾಂಡ್‌ನಿಂದ ಅಂತರಾಷ್ಟ್ರೀಯ ಗುಣಮಟ್ಟದ ಅಗ್ಗದ ಹೆಲ್ಮೆಟ್

ಭಾರತದ ಪ್ರಮುಖ ಹೆಲ್ಮೆಟ್ ತಯಾರಕ ಕಂಪನಿಯಾಗಿರುವ ಸ್ಟೀಲ್‌ಬರ್ಡ್ ತನ್ನ ಹೊಸ ಟೊರ್ನಾಡೋ ಹೆಲ್ಮೆಟ್ ಅನ್ನು ರೂ. 1,959 ಆಕರ್ಷಕ ಬೆಲೆಯಲ್ಲಿ ಇತ್ತೀಚೆಗೆ ಬಿಡುಗಡೆ ಮಾಡಿದೆ. ಟೊರ್ನಾಡೋವನ್ನು ದಿನನಿತ್ಯದ ಸವಾರರು ಮತ್ತು ದೀರ್ಘ ಪ್ರಯಾಣ ಮಾಡುವ ಪ್ರಯಾಣಿಕರಿಗಾಗಿ ವಿನ್ಯಾಸಗೊಳಿಸಲಾಗಿದ್ದು, ಸುರಕ್ಷತೆ, ಸೌಕರ್ಯ ಮತ್ತು ಅನುಕೂಲತೆ ಒದಗಿಸಲು ನಿರ್ಮಿಸಲಾಗಿದೆ. ಇದನ್ನು ಭಾರತೀಯ (ISI) ಮತ್ತು ಅಂತರರಾಷ್ಟ್ರೀಯ (DOT) ಸುರಕ್ಷತಾ ಮಾನದಂಡಗಳ ಅಡಿಯಲ್ಲಿ ಪ್ರಮಾಣೀಕರಿಸಲಾಗಿದೆ, ಇದು ದೇಶೀಯ ಮತ್ತು ಅಂತರರಾಷ್ಟ್ರೀಯ ಸವಾರರಿಗೆ ಕಠಿಣ ಸುರಕ್ಷತಾ ಅವಶ್ಯಕತೆಗಳನ್ನು ಪೂರೈಸುತ್ತದೆ ಎಂದು ಕಂಪನಿ ಹೇಳಿದೆ.

ಬಡವರು ತೆಗೆದುಕೊಳ್ಳಬಹುದು: ಅತಿ ಕಡಿಮೆ ಬೆಲೆಗೆ ಹೊಸ Hero VIDA VX2..

ಹೀರೋ ಮೋಟೊಕಾರ್ಪ್ (Hero MotoCorp), ವಿಶ್ವಾಸಾರ್ಹ ದ್ವಿಚಕ್ರ ವಾಹನ (two wheeler) ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿದೆ. ವಿಡಾ ವಿ2 (Vida V2) ಎಲೆಕ್ಟ್ರಿಕ್ ಸ್ಕೂಟರ್‌ನ್ನು ವಿವಿಧ ರೂಪದಲ್ಲಿ ಯಶಸ್ವಿಯಾಗಿ ಮಾರಾಟಗೊಳಿಸುತ್ತಿದೆ. ಸದ್ಯ, ಬಹುನಿರಿಕ್ಷಿತ ಹೊಚ್ಚ ಹೊಸ ವಿಡಾ ವಿಎಕ್ಸ್2 (VIDA VX2) ಇ-ಸ್ಕೂಟರ್‌ನ್ನು ಅದ್ದೂರಿಯಾಗಿ ಬಿಡುಗಡೆಗೊಳಿಸಿದೆ. ಇದು ಎರಡು ವಿಧದಲ್ಲಿ ಲಭ್ಯವಿದ್ದು, ಅತಿ ಕಡಿಮೆ ಬೆಲೆಯನ್ನು ಹೊಂದಿದೆ. ಜೊತೆಗೆ ನಿರೀಕ್ಷೆಗೂ ಮೀರಿದ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ.

Yamaha: ಯಮಹಾ ಬೊಂಬಾಟ್ ಆಫರ್: ಹೈಬ್ರಿಡ್ ಸ್ಕೂಟರ್... 10,000 ಉಳಿಸಿ

ಯಮಹಾ (Yamaha) ಮೋಟಾರ್ ಕಂಪನಿ ಲಿಮಿಟೆಡ್ (YMC) ಇಂದು ತನ್ನ 70 ನೇ ಸಂಸ್ಥಾಪನಾ ದಿನವನ್ನು ಆಚರಿಸುತ್ತಿದೆ. ಈ ವಿಶೇಷ ಸಂದರ್ಭವನ್ನು ಸ್ಮರಿಸಲು, ಯಮಹಾ ಮೋಟಾರ್ ತನ್ನ ಜನಪ್ರಿಯ ರೇಝಡ್ಆರ್ 125 ಎಫ್‌ಐ (RayZR 125 Fi) ಹೈಬ್ರಿಡ್ ಮತ್ತು RayZR 125 Fi ಹೈಬ್ರಿಡ್ ಸ್ಟ್ರೀಟ್ ರ್ಯಾಲಿ ಸ್ಕೂಟರ್ ಮಾದರಿಗಳ ಮೇಲೆ ರೂ.7,000 (ಎಕ್ಸ್-ಶೋರೂಂ) ಪ್ರಯೋಜನ ನೀಡುತ್ತಿದೆ. ದಶಕಗಳಿಂದ ಗ್ರಾಹಕರ ನಿರಂತರ ನಂಬಿಕೆ ಮತ್ತು ಬೆಂಬಲಕ್ಕಾಗಿ ಧನ್ಯವಾದ ಹೇಳುವ ನಮ್ಮ ಸೀಮಿತ ಸಮಯದ ಸಂಭ್ರಮಾಚರಣೆಯ ಕೊಡುಗೆ ಇದಾಗಿದೆ ಎಂದು ಕಂಪನಿ ಹೇಳಿದೆ.

Toyota: ಟೊಯೋಟಾ ಕಾರುಗಳಿಗೆ ಇಷ್ಟೊಂದು ಬೇಡಿಕೆಯೇ?

ಟೊಯೋಟಾ (Toyota) ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ಭಾರತದಲ್ಲಿ ತನ್ನ ವೇಗವನ್ನು ಮುಂದುವರಿಸಿದೆ. ಮಾರಾಟದಲ್ಲಿ ಬಲವಾದ ಬೇಡಿಕೆ ವ್ಯಕ್ತವಾಗಿದ್ದು, ಭಾರತೀಯ ಗ್ರಾಹಕರು ಜೂನ್ ತಿಂಗಳಲ್ಲಿ ಟೊಯೋಟಾ ಕಾರುಗಳನ್ನು ಮುಗಿಬಿದ್ದು ಖರೀದಿಸಿದ್ದಾರೆ. ಕಂಪನಿಯ ಪ್ರಮುಖ ಕಾರುಗಳಾದ ಟೊಯೋಟಾ ಅರ್ಬನ್ ಕ್ರೂಸರ್ ಟೈಸರ್, ಟೊಯೋಟಾ ರೂಮಿಯನ್, ಟೊಯೋಟಾ ಇನ್ನೋವಾ ಕ್ರಿಸ್ಟಾ, ಟೊಯೋಟಾ ಗ್ಲಾಂಜಾದಂತಹ ಕಾರುಗಳು ಹೆಚ್ಚಾಗಿ ಮಾರಾಟವಾಗಿವೆ. ಇವುಗಳಿಗೆ ದೇಶದಲ್ಲಿ ಉತ್ತಮ ಬೇಡಿಕೆಯಿದ್ದು, ಜೂನ್ 2025 ರಲ್ಲಿ ಕಂಪನಿಗೆ ಭರ್ಜರಿ ಲಾಭವನ್ನು ತಂದುಕೊಟ್ಟಿವೆ. ಜೂನ್‌ ತಿಂಗಳ ಮಾರಾಟ ವರದಿಯನ್ನು ಕಂಪನಿ ಪ್ರಕಟಿಸಿದೆ.
Advertisement

Audi: ಭಾರತದಲ್ಲಿ ಪ್ರಮುಖ ಐಷಾರಾಮಿ ಕಾರು ಕಂಪನಿಗೆ ಹಿನ್ನಡೆ

ಜರ್ಮನ್ ಮೂಲದ ಐಷಾರಾಮಿ ಕಾರು ತಯಾರಕ ಕಂಪನಿಯಾದ ಆಡಿ (Audi), ಭಾರತದಲ್ಲಿ ಜನವರಿ - ಜೂನ್ (H1) 2025 ರ ಅವಧಿಯಲ್ಲಿ 2,128 ಯುನಿಟ್‌ ವಾಹನಗಳನ್ನು ಮಾರಾಟ ಮಾಡಿರುವುದಾಗಿ ಘೋಷಿಸಿದೆ. ನಾಲ್ಕು ವಲಯಗಳನ್ನು ಹೊಂದಿರುವ ಬ್ರ್ಯಾಂಡ್ ದುರ್ಬಲಗೊಳ್ಳುತ್ತಿರುವ ವಿನಿಮಯ ದರದಿಂದ ಬೆಲೆ ಏರಿಕೆ ಮತ್ತು ವಿಕಸನಗೊಳ್ಳುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳ ನಡುವೆ ಹೆಚ್ಚಿದ ಮಾರುಕಟ್ಟೆ ಅನಿಶ್ಚಿತತೆಯಿಂದ ಬೇಡಿಕೆ ಕಡಿಮೆಯಾಗಿರುವುದಾಗಿ ತಿಳಿಸಿದೆ. ಇದರಿಂದ ಮಾರಾಟ ಕಾರ್ಯಕ್ಷಮತೆಯ ಮೇಲೂ ಪರಿಣಾಮ ಬೀರುತ್ತಿರುವುದರಿಂದ - ಪ್ರತಿಕೂಲ ಪರಿಸ್ಥಿತಿಯನ್ನು ಎದುರಿಸುತ್ತಿರುವುದಾಗಿ ಆಡಿ ಹೇಳಿದೆ.

MG Cyberster: ಬಿಡುಗಡೆ ಮುನ್ನವೇ ಡೀಲರ್‌ಶಿಪ್ ತಲುಪಿದ ಎಂಜಿ ಕಾರು

ಎಂಜಿ ಸೈಬರ್‌ಸ್ಟರ್ (MG Cyberster) ಎಲೆಕ್ಟ್ರಿಕ್ ರೋಡ್‌ಸ್ಟರ್ ಭಾರತದಾದ್ಯಂತ ಶೋ ರೂಂಗಳಿಗೆ ಬರಲು ಪ್ರಾರಂಭಿಸಿದ್ದು, ತನ್ನ ಅಧಿಕೃತ ಬಿಡುಗಡೆ ಸನ್ನಿಹಿತವಾಗಿದೆ ಎಂದು ಸುಳಿವು ನೀಡಿದೆ. MG ಮೋಟಾರ್ ಇಂಡಿಯಾ ತನ್ನ ಮೊದಲ ಎಲೆಕ್ಟ್ರಿಕ್ ಎರಡು-ಬಾಗಿಲಿನ ಕನ್ವರ್ಟಿಬಲ್ ಸೈಬರ್‌ಸ್ಟರ್ ಅನ್ನು ಪರಿಚಯಿಸಲು ತಯಾರಿ ನಡೆಸುತ್ತಿದೆ. ಇದನ್ನು ಬ್ರ್ಯಾಂಡ್‌ನ ಪ್ರೀಮಿಯಂ MG ಸೆಲೆಕ್ಟ್ ಡೀಲರ್‌ಶಿಪ್‌ಗಳ ಮೂಲಕ ಮಾರಾಟ ಮಾಡಲಾಗುವುದು. ಗ್ರಾಹಕರ ಪೂರ್ವವೀಕ್ಷಣೆಗಳು (previews) ಈಗಾಗಲೇ ನಡೆಯುತ್ತಿವೆ. ಡೀಲರ್‌ಶಿಪ್ ಅಥವಾ ಚಾನಲ್ ಅನ್ನು ಅವಲಂಬಿಸಿ ರೂ. 30,000 ರಿಂದ ರೂ. 51,000 ವರೆಗಿನ ಟೋಕನ್ ಮೊತ್ತದೊಂದಿಗೆ ಪ್ರೀ-ಬುಕಿಂಗ್‌ಗಳು ಪ್ರಾರಂಭವಾಗಿವೆ.

Vinfast: ಭಾರತದಲ್ಲಿ ಹೊಸ ಕಾರು ಕಂಪನಿಯ ಜೋರು: ಶೀಘ್ರ ಬಿಡುಗಡೆಗೆ

ವಿಯೆಟ್ನಾಂ ಮೂಲದ ಪ್ರಮುಖ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಯಾದ ವಿನ್‌ಫಾಸ್ಟ್ (Vinfast) ಈ ವರ್ಷ ಭಾರತದಲ್ಲಿ ತನ್ನ ಅಧಿಕೃತ ಪಾದಾರ್ಪಣೆಯನ್ನು ಮಾಡಿದೆ. ತನ್ನ ಹೊಸ ಕಾರುಗಳನ್ನು ಇನ್ನೇನು ಶೀಘ್ರದಲ್ಲೆ ಬಿಡುಗಡೆ ಮಾಡಲಿದೆ. ಆದರೆ ಅದಕ್ಕೂ ಮುನ್ನ ಡೀಲರ್‌ನಿಂದ ಹಿಡಿದು ಉತ್ಪಾದನಾ ಸ್ಥಾವರದವರೆಗೆ ಎಲ್ಲಾ ಕಾರ್ಯಗಳನ್ನು ವೇಗವಾಗಿ ಮುಗಿಸುತ್ತಿದೆ. ಇದೀಗ ದೇಶದ ಪ್ರಮುಖ ಆಟೋಮೋಟಿವ್ ಸೇವಾ ಪೂರೈಕೆದಾರ 'ಮೈ-ಟಿವಿಎಸ್'‌ (myTVS) ನೊಂದಿಗೆ ಕಾರ್ಯತಂತ್ರದ ಸೇವಾ ಸಹಯೋಗ ಒಪ್ಪಂದವನ್ನು ಪ್ರಕಟಿಸಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

Hero: ಅಗ್ಗದ ಹೀರೋ ಇ-ಸ್ಕೂಟರ್‌ಗೆ ಮುಗಿಬಿದ್ದ ಗ್ರಾಹಕರು..

ಹೀರೋ ಮೋಟೊಕಾರ್ಪ್ (Hero MotoCorp), ನಂ.1 ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿ ಹೊರಹೊಮ್ಮಿದೆ. ವಿಡಾ (Vida) ಬ್ರ್ಯಾಂಡ್‌ನಡಿ 'ವಿ2' ಇ-ಸ್ಕೂಟರ್‌ನ್ನು ಯಶಸ್ವಿಯಾಗಿ ಮಾರಾಟಗೊಳಿಸುತ್ತಿದೆ. ಈ ಎಲೆಕ್ಟ್ರಿಕ್ ಸ್ಕೂಟರ್‌ಗೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚಾಗುತ್ತಿದ್ದು, ಗ್ರಾಹಕರು ಕೂಡ ಮುಗಿಬಿದ್ದು ಖರೀದಿ ಮಾಡುತ್ತಿದ್ದಾರೆ. ಅದರಲ್ಲೂ ಇದೇ 'ಮೇ' ತಿಂಗಳು 'ವಿಡಾ ವಿ2' ಇ-ಸ್ಕೂಟರ್ ದಾಖಲೆ ಸಂಖ್ಯೆಯಲ್ಲಿ ಮಾರಾಟಗೊಂಡಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

ಬೆಂಗಳೂರಿನಲ್ಲಿ ತಮಿಳು ನಟ ಸಿದ್ದಾರ್ಥ್ '3 BHK'ಗೆ ಜೊತೆಯಾದ ಡಾಲಿ ಧನಂಜಯ್


ಬೆಂಗಳೂರಿನ River Indie ಇ-ಸ್ಕೂಟರ್‌ಗೆ ಭಾರೀ ಬೇಡಿಕೆ, ಮುಗುಬಿದ್ದ..

ಬೆಂಗಳೂರು ಮೂಲದ ರಿವರ್ ಮೊಬಿಲಿಟಿ ಪ್ರೈವೆಟ್ ಲಿಮಿಟೆಡ್ (River Mobility Private Limited), ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಇಂಡಿ (Indie) ಇ-ಸ್ಕೂಟರ್‌ನ್ನು ಯಶಸ್ವಿಯಾಗಿ ಮಾರಾಟಗೊಳಿಸುತ್ತಿದೆ. ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿ ಮಾಡುತ್ತಿದ್ದಾರೆ. ಸದ್ಯ, ಈ ಎಲೆಕ್ಟ್ರಿಕ್ ಸ್ಕೂಟರ್ ತಯಾರಿಕೆಯಲ್ಲಿ ಕಂಪನಿಯು ಹೊಸ ಇತಿಹಾಸವೊಂದನ್ನು ಬರೆದಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

ಹೊಸ ಕಿಯಾ ಕಾರು ಅನಾವರಣಕ್ಕೆ ಸಜ್ಜು: ಬ್ಯಾಟರಿ ಚಾಲಿತ ಏಳು ಆಸನಗಳ MPV!

ಕಿಯಾ ಕಂಪನಿಯು ಜುಲೈ 15, 2025 ರಂದು ಭಾರತದಲ್ಲಿ ಕಾರೆನ್ಸ್ ಕ್ಲಾವಿಸ್ ಇವಿ ಎಂಪಿವಿಯನ್ನು ಅಧಿಕೃತವಾಗಿ ಅನಾವರಣಗೊಳಿಸಲಿದೆ. ಇದು ದೇಶದಲ್ಲಿ ಕಿಯಾದ ಮೊದಲ ಸಾಮೂಹಿಕ - ಮಾರುಕಟ್ಟೆ ಎಲೆಕ್ಟ್ರಿಕ್ ವಾಹನದ ಚೊಚ್ಚಲ ಪ್ರವೇಶವಾಗಿದೆ. ಇದು ಭಾರತದ ಮುಖ್ಯವಾಹಿನಿಯ ವಿಭಾಗದಲ್ಲಿ ಮೊದಲ ಬ್ಯಾಟರಿ ಚಾಲಿತ ಏಳು ಆಸನಗಳ MPV ಆಗಿದೆ. ಹೆಚ್ಚಿನ ಮೂಲಗಳು ಸುಮಾರು ರೂ. 16 ಲಕ್ಷ (ಎಕ್ಸ್-ಶೋರೂಂ) ಆರಂಭಿಕ ಬೆಲೆಯನ್ನು ಸೂಚಿಸುತ್ತಿವೆ, ಕೆಲವು ಅಂದಾಜಿನ ಪ್ರಕಾರ ಶ್ರೇಣಿಯು ಹೆಚ್ಚಿನ ರೂಪಾಂತರಗಳಿಗೆ ರೂ. 17 ರಿಂದ 18 ಲಕ್ಷದವರೆಗೆ ಇರಬಹುದು ಎಂದು ನಿರೀಕ್ಷಿಸಲಾಗಿದೆ.

Tata Harrier EV vs Mahindra BE 6: ಕಲ್ಲುಬಂಡೆಯಂತಿರುವ..

ದೇಶದ ವಾಹನಗಳಿಗೆ ಸುರಕ್ಷತಾ ಪರೀಕ್ಷೆ ನಡೆಸುವ ಭಾರತ್ ಎನ್‌ಸಿಎಪಿ (Bharat NCAP), ಮಹೀಂದ್ರಾ ಬಿಇ 6 ಹಾಗೂ ಟಾಟಾ ಹ್ಯಾರಿಯರ್ ಇವಿಯನ್ನು ಅತ್ಯಂತ ಸುರಕ್ಷಿತ ಕಾರೆಂದು ತೀರ್ಮಾನಿಸಿದೆ. ಇವೆರೆಡು ಎಲೆಕ್ಟ್ರಿಕ್ ಎಸ್‌ಯುವಿಗಳು 5 ಸ್ಟಾರ್ ಸೇಫ್ಟಿ ರೇಟಿಂಗ್ ಪಡೆಯುವಲ್ಲಿಯೂ ಯಶಸ್ವಿಯಾಗಿವೆ. ನಾವಿಲ್ಲಿ ಈ ಕಾರುಗಳು ಪಡೆದಿರುವ ಸುರಕ್ಷತಾ ಅಂಕಗಳನ್ನು ಹೋಲಿಕೆ ಮಾಡಿದ್ದೇವೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.
Advertisement

ನಾಳೆ ಹೊಸ ವಿಡಾ VX2 ಸ್ಕೂಟರ್ ಬಿಡುಗಡೆ: ಅತ್ಯಂತ ಕೈಗೆಟುಕುವ ಬೆಲೆ

ಹೀರೋ ಮೋಟೊಕಾರ್ಪ್ ಕಂಪನಿಯ ಅಡಿಯಲ್ಲಿ ಬರುವ ಎಲೆಕ್ಟ್ರಿಕ್ ಸ್ಕೂಟರ್ ಬ್ರಾಂಡ್ 'ವಿಡಾ' ಜುಲೈ 1 ರಂದು (ನಾಳೆ) ತನ್ನ ಹೊಸ ವಿಡಾ ವಿಎಕ್ಸ್ 2 (Vida VX2) ಎಂಬ ಹೊಸ ಸ್ಕೂಟರ್ ಅನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಬಜೆಟ್ ಪ್ರಜ್ಞೆಯ ನಗರ ಪ್ರಯಾಣಿಕರನ್ನು ಗುರಿಯಾಗಿಸಿಕೊಂಡು ಕೈಗೆಟುಕುವ, ಪ್ರಾಯೋಗಿಕ ಎಲೆಕ್ಟ್ರಿಕ್ ಸ್ಕೂಟರ್ ಆಗಿ ಇದನ್ನು ಪರಿಚಯಿಸಲು ಕಂಪನಿ ಸಿದ್ಧವಾಗಿದೆ. ವಿಡಾ ವಿಎಕ್ಸ್ 2 ನ ಸಂಪೂರ್ಣ ವಿಶೇಷಣಗಳು, ಬೆಲೆ ಮತ್ತು ಹೆಚ್ಚುವರಿ ವಿವರಗಳನ್ನು ಜುಲೈ 1, 2025 ರಂದು ಅಧಿಕೃತವಾಗಿ ಘೋಷಿಸಲಾಗುವುದು.

ಇದೇ ಟೊಯೊಟಾ ಇನ್ನೋವಾ ಹೈಕ್ರಾಸ್ ಎಂಪಿವಿಯ ತಾಕತ್ತು, ಭಾರತ್..

ಟೊಯೊಟಾ ಇನ್ನೋವಾ ಹೈಕ್ರಾಸ್ (Toyota Innova Hycross) ಪ್ರಖ್ಯಾತ ಎಂಪಿವಿಯಾಗಿ ಹೊರಹೊಮ್ಮಿದೆ. ಹೆಚ್ಚು ಅತ್ಯಾಕರ್ಷಕವಾದ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಹೊಂದಿದ್ದು, ಉತ್ತಮ ಸಂಖ್ಯೆಯಲ್ಲಿಯೂ ಮಾರಾಟವಾಗುತ್ತಿದೆ. ಗ್ರಾಹಕರು ಕೂಡ ನಾಮುಂದು - ತಾಮುಂದು ಎಂಬಂತೆ ಖರೀದಿ ಮಾಡುತ್ತಿದ್ದಾರೆ. ಸದ್ಯ ದೇಶದ ವಾಹನಗಳಿಗೆ ಸುರಕ್ಷತಾ ಪರೀಕ್ಷೆ ನಡೆಸುವ ಸಂಸ್ಥೆ ಭಾರತ್ ಎನ್‌ಸಿಎಪಿ (Bharat NCAP) ಇದೇ 'ಇನ್ನೋವಾ ಹೈಕ್ರಾಸ್'ನ್ನು ಅತ್ಯಂತ ಸುರಕ್ಷಿತ ಕಾರೆಂದು ನಿರ್ಣಯಿಸಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

Mileage cars: 7 ಲಕ್ಷಕ್ಕಿಂತ ಕಡಿಮೆ ಬೆಲೆಯ ಕಾರುಗಳು

ಭಾರತದಲ್ಲಿ ರೂ. 7 ಲಕ್ಷಕ್ಕಿಂತ ಕಡಿಮೆ ಬೆಲೆಯಲ್ಲಿ ಉತ್ತಮ ಮೈಲೇಜ್ ನೀಡುವ ಹಲವು ಕಾರುಗಳಿವೆ. ಇವು ಮೈಲೇಜ್ ಮಾತ್ರವಲ್ಲದೆ ಉತ್ತಮ ವೈಶಿಷ್ಟ್ಯಗಳನ್ನು ಸಹ ಹೊಂದಿವೆ. ರೂ. 7 ಲಕ್ಷಕ್ಕಿಂತ ಕಡಿಮೆ ಬೆಲೆಯಲ್ಲಿ ಕಾರುಗಳನ್ನು ಹುಡುಕುತ್ತಿರುವವರಿಗೆ ಈ ಲೇಖನ ತುಂಬಾ ಉಪಯುಕ್ತವಾಗಬಹುದು. ಮುಖ್ಯವಾಗಿ ಮೈಲೇಜ್ ಬಯಸುವ ಬಜೆಟ್ ಪ್ರಜ್ಞೆಯ ಖರೀದಿದಾರರಿಗೆ ಸೂಕ್ತ ಆಯ್ಕೆಗಳಾಗಿವೆ. ಟಾಟಾ, ಮಾರುತಿ, ಹ್ಯುಂಡೈನಂತಹ ಬ್ರಾಂಡ್‌ಗಳು ಈ ಬಜೆಟ್ ಸ್ನೇಹಿ ಕಾರುಗಳನ್ನು ನೀಡುತ್ತಿದ್ದು, ಅವುಗಳ ಬಗ್ಗೆ ವಿವರವಾದ ಮಾಹಿತಿ ಇಲ್ಲಿದೆ.

ಬೆಟ್ಟಗಳಲ್ಲಿ ವಾಹನ ಚಲಾಯಿಸುತ್ತಿದ್ದೀರಾ? ನಿರ್ಲಕ್ಷಿಸಿದರೆ ಅಪಾಯ ಖಚಿತ

ನೀವು ಬೆಟ್ಟಗಳಲ್ಲಿ ವಾಹನ ಚಲಾಯಿಸಲು ಯೋಜಿಸುತ್ತಿದ್ದರೆ, ಸುರಕ್ಷತೆಗೆ ಆದ್ಯತೆ ನೀಡುವುದು ಮತ್ತು ಪರ್ವತ ಪ್ರದೇಶಗಳಿಗೆ ಅನುಗುಣವಾಗಿ ನಿಮ್ಮ ಚಾಲನಾ ಶೈಲಿಯನ್ನು ಅಳವಡಿಸಿಕೊಳ್ಳುವುದು ಅತ್ಯಗತ್ಯ. ಸಾಮಾನ್ಯ ಸಿಟಿ ರಸ್ತೆಗಳಿಗೆ ಹೋಲಿಸಿದರೆ ಬೆಟ್ಟಗಳಲ್ಲಿನ ಹವಾಮಾನವು ಕ್ಲಿಷ್ಟಕರವಾಗಿರಬಹುದು, ಏಕೆಂದರೆ ಮಂಜು ಮತ್ತು ಕಡಿಮೆ ಗೋಚರತೆ ಬೆಟ್ಟಗಳಲ್ಲಿ ಸಾಮಾನ್ಯ ವಿಷಯವಾಗಿದೆ. ಅಲ್ಲದೆ, ಬೆಟ್ಟದ ಸಂಚಾರವು ದಾರಿಯುದ್ದಕ್ಕೂ ನಿಮ್ಮ ಊಹೆಯಂತೆಯೇ ಇರುತ್ತದೆ ಎಂದುಕೊಳ್ಳುವುದು ತಪ್ಪು. ಇವು ಏಕ - ಪಥ (One - way) ರಸ್ತೆಗಳಾಗಿರುವುದರಿಂದ ಜಾಗರೂಕರಾಗಿರಬೇಕು. ಹಾಗಾದ್ರೆ ಈ ರಸ್ತೆಗಳಲ್ಲಿ ಹೇಗೆ ಡ್ರೈವ್ ಮಾಡಬೇಕು? ನೀವು ನಿರ್ಲಕ್ಷಿಸಬಾರದ ಐದು ಪ್ರಮುಖ ಸಲಹೆಗಳು ಇಲ್ಲಿವೆ.

ಭಾರತದಲ್ಲಿ LPG ಸಿಲಿಂಡರ್ ಬೆಲೆಗಳು ಇಳಿಕೆಯಾಗುತ್ತಾ..?

ಜುಲೈ 2025 ರ ಹೊತ್ತಿಗೆ ಭಾರತದಲ್ಲಿ LPG ಬೆಲೆಗಳಲ್ಲಿನ ಇತ್ತೀಚಿನ ಪ್ರವೃತ್ತಿಗಳನ್ನು ಅನ್ವೇಷಿಸಿ ಮತ್ತು ಈ ಬದಲಾವಣೆಗಳ ಮೇಲೆ ಜಾಗತಿಕ ತೈಲ ಬೆಲೆಗಳ ಪರಿಣಾಮವನ್ನು ಅರ್ಥಮಾಡಿಕೊಳ್ಳಿ.

ಸಿಗಂದೂರು ಚೌಡೇಶ್ವರಿ ಭಕ್ತರಿಗೆ ಸಿಹಿಸುದ್ದಿ: ಅತಿ ಶೀಘ್ರದಲ್ಲೇ..

ಶಿವಮೊಗ್ಗ (Shivamogga) ಜಿಲ್ಲೆಯ ಜನರ ಕನಸು ಕೆಲವೇ ದಿನಗಳಲ್ಲಿ ನನಸಾಗಲಿದೆ. ಸಾಗರದ ಶರಾವತಿ ಹಿನ್ನೀರಿನಲ್ಲಿ ನಿರ್ಮಾಣವಾಗಿರುವ ಕರ್ನಾಟಕದ ಅತಿ ಉದ್ದದ ಕೇಬಲ್ ಸೇತುವೆ (Karnataka's Longest Cable Bridge), ಕೆಲವೇ ದಿನಗಳಲ್ಲಿ ಉದ್ಘಾಟನೆಗೊಳ್ಳಲಿದೆ. ಆ ಬಳಿಕ ವಾಹನ ಸಂಚಾರಕ್ಕೂ ಮುಕ್ತಾಯವಾಗಲಿದೆ. ನೂತನ ಸೇತುವೆಯಿಂದ ಸ್ಥಳೀಯರು ಮಾತ್ರವಲ್ಲದೆ, ಸಿಗಂದೂರು ಚೌಡೇಶ್ವರಿ (Sigandur Chowdeshwari) ದೇವಸ್ಥಾನಕ್ಕೆ ತೆರಳುವ ಭಕ್ತರಿಗೂ ದೊಡ್ಡ ಮಟ್ಟದಲ್ಲಿ ಅನುಕೂಲವಾಗಲಿದೆ. ಬನ್ನಿ, ಈ ಸೇತುವೆ ಕುರಿತ ವಿಶೇಷತೆಗಳು ಏನೆಂಬುದನ್ನು ತಿಳಿಯೋಣ.

Mahindra: ಮಹೀಂದ್ರಾ ಸ್ಕಾರ್ಪಿಯೋ-ಎನ್ ನೋಡುತ್ತಿದ್ದಾರಾ?

ಮಹೀಂದ್ರಾ ತನ್ನ ಜನಪ್ರಿಯ ಸ್ಕಾರ್ಪಿಯೋ-ಎನ್ ಎಸ್‌ಯುವಿಯಲ್ಲಿ, ವಿಶೇಷವಾಗಿ ಪ್ರೀಮಿಯಂ Z8L ವೇರಿಯೆಂಟ್‌ನಲ್ಲಿ ಲೆವೆಲ್ 2 ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್ (ADAS) ಅನ್ನು ಇತ್ತೀಚೆಗೆ ಪರಿಚಯಿಸಿದೆ. ಇದು ಕಾರಿಗೆ ಸುರಕ್ಷತೆ ಮತ್ತು ತಂತ್ರಜ್ಞಾನದಲ್ಲಿ ಗಮನಾರ್ಹವಾದ ಅಪ್‌ಗ್ರೇಡ್ ಅನ್ನು ಸೂಚಿಸುತ್ತದೆ. ADAS ಸೂಟ್ 12 ಸುಧಾರಿತ ವೈಶಿಷ್ಟ್ಯಗಳನ್ನು ಒಳಗೊಂಡಿದೆ ಎಂದು ಕಂಪನಿ ತಿಳಿಸಿದೆ. ಹಾಗೆಯೇ ಇದರ ಜೊತೆಗೆ ಮಹೀಂದ್ರಾ ಹೊಸ Z8T ವೇರಿಯೆಂಟ್ ಬಿಡುಗಡೆ ಮಾಡಿದೆ. ಇದು ಅಸ್ತಿತ್ವದಲ್ಲಿರುವ Z8 ಮತ್ತು Z8L ಟ್ರಿಮ್‌ಗಳ ನಡುವೆ ಇದೆ.

30 Km ಮೈಲೇಜ್.. 5-ಸೀಟರ್, 6.90 ಲಕ್ಷ.. ಈ ಜನಪ್ರಿಯ Toyota..

ಟೊಯೊಟಾ ಗ್ಲಾನ್ಜಾ (Toyota Glanza) ಜನಪ್ರಿಯ ಹ್ಯಾಚ್‌ಬ್ಯಾಕ್‌ ಆಗಿದೆ. ಇದು ಕನಿಷ್ಠ ರೂ.6.90 ಲಕ್ಷ ಹಾಗೂ ಗರಿಷ್ಠ ರೂ.10 ಲಕ್ಷ (ಎಕ್ಸ್-ಶೋರೂಂ) ದರವನ್ನು ಹೊಂದಿದೆ. 1.2-ಲೀ. ಪೆಟ್ರೋಲ್ & ಸಿಎನ್‌ಜಿ ಎಂಜಿನ್‌ ಪಡೆದಿದ್ದು, 22 ರಿಂದ 30 ಕಿ.ಮೀ ವರೆಗೆ ಮೈಲೇಜ್ ನೀಡುತ್ತದೆ. ಇದರಲ್ಲಿ 5 ಆಸನಗಳಿವೆ. 9-ಇಂಚಿರುವ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಎಂಜಿನ್ ಸ್ಟಾರ್ಟ್/ ಸ್ಟಾಪ್ ಸಿಸ್ಟಮ್, ಆಟೋ ಕ್ಲೇಮೇಟ್ ಕಂಟ್ರೋಲ್ ಮತ್ತು ಕ್ರೂಸ್ ಕಂಟ್ರೋಲ್‌ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸುರಕ್ಷತೆಗಾಗಿ 6 ಏರ್‌ಬ್ಯಾಗ್‌ಗಳನ್ನು ಒಳಗೊಂಡಿದೆ. ನೀವು 'ಗ್ಲಾನ್ಜಾ'ಗೆ ಬದಲಾಗಿ ಈ 3 ಕಾರುಗಳನ್ನು ಖರೀದಿ ಮಾಡಬಹುದು. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.
Advertisement

ಗಂಡುಗಲಿ ಮದಕರಿ ನಾಯಕನಾಗಲಿಲ್ಲವೇಕೆ ದರ್ಶನ್ ? ನಿರ್ದೇಶಕ ಎಸ್‌.ವಿ ರಾಜೇಂದ್ರ ಸಿಂಗ್‌ ಬಾಬು ಹೇಳಿದ ಸತ್ಯವೇನು ?


Honda Activa ಎಲೆಕ್ಟ್ರಿಕ್ ಸ್ಕೂಟರ್‌ನ್ನು ಕೇಳೋರಿಲ್ಲ, ಶೂನ್ಯ..

ಹೋಂಡಾ ಸ್ಕೂಟರ್ & ಮೋಟಾರ್‌ಸೈಕಲ್ ಇಂಡಿಯಾ (Honda Scooter & Motorcycle India), ಇದೇ ಜನವರಿಯಲ್ಲಿ ಹೊಚ್ಚ ಹೊಸ ಕ್ಯೂಸಿ1(QC1) ಮತ್ತು ಆಕ್ಟಿವಾ ಇ (Activa e) ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬಿಡುಗಡೆಗೊಳಿಸಿತ್ತು. ಇವು ಹೆಚ್ಚು ಆಕರ್ಷಕವಾಗಿದ್ದು, ಕೈಗೆಟುಕುವ ಬೆಲೆಯಲ್ಲಿಯೂ ಗ್ರಾಹಕರ ಖರೀದಿಗೆ ದೊರೆಯುತ್ತವೆ. ಅದರ ಹೊರತಾಗಿಯೂ ಈ ಸ್ಕೂಟರ್‌ಗಳ ಮಾರಾಟ ಸಂಖ್ಯೆ ದಿನದಿಂದ ದಿನಕ್ಕೆ ಕುಸಿತವಾಗುತ್ತಿದೆ. ಅದು ಈ 'ಮೇ' ತಿಂಗಳಲ್ಲೂ ಮುಂದುವರಿದಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

VinFast: ಭಾರತಕ್ಕೆ ಎಂಟ್ರಿ ಕೊಟ್ಟ ಹೊಸ ಕಾರು ಕಂಪನಿ

ವಿಯೆಟ್ನಂ ಮೂಲದ 'ವಿನ್‌ಫಾಸ್ಟ' (VinFast) ಕಾರು ತಯಾರಕ ಕಂಪನಿಯು ಭಾರತಕ್ಕೆ ಲಗ್ಗೆಯಿಟ್ಟಿದೆ. ಭಾರತೀಯ ಮಾರುಕಟ್ಟೆಗೆ ತನ್ನ ಮೊದಲ ಮಾಡಲ್‌ಗಳಾಗಿ VF 7 ಮತ್ತು VF 6 ಮಾಡಲ್‌ಗಳನ್ನು ಆಯ್ಕೆ ಮಾಡಿದ್ದು, ಬಿಡುಗಡೆ ಮುನ್ನವೇ ಈ ಪ್ರೀಮಿಯಂ ಎಲೆಕ್ಟ್ರಿಕ್ ಎಸ್‌ಯುವಿಗಳನ್ನು ಭಾರತದ 11 ನಗರಳ ಪ್ರಮುಖ ಶಾಪಿಂಗ್ ಮಾಲ್‌ಗಳಲ್ಲಿ ಪ್ರದರ್ಶಿಸುತ್ತಿದೆ. ಜೂನ್ 21 ರಿಂದ, ವಿನ್‌ಫಾಸ್ಟ್ ತನ್ನ ವಾಹನಗಳನ್ನು ಪ್ರಮುಖ ನಗರಗಳಲ್ಲಿನ ಪ್ರಮುಖ ಮಾಲ್‌ಗಳಲ್ಲಿ ಪ್ರದರ್ಶಿಸುತ್ತಿದೆ. ಗ್ರಾಹಕರಲ್ಲಿ ಬಲವಾದ ಪ್ರಭಾವ ಬೀರಿದ ವಿಎಫ್ 7 ಮತ್ತು ವಿಎಫ್ 6 ಅನ್ನು ಹತ್ತಿರದಿಂದ ನೋಡಲು ಅವಕಾಶವನ್ನು ನೀಡುತ್ತಿದೆ.

Ashok Leyland: ಬೃಹತ್ ಆರ್ಡರ್ ಬಾಚಿಕೊಂಡ ಅಶೋಕ್ ಲೇಲ್ಯಾಂಡ್!

ಹಿಂದೂಜಾ ಗ್ರೂಪ್‌ನ ಭಾರತದ ಪ್ರಮುಖ ವಾಣಿಜ್ಯ ವಾಹನ ತಯಾರಕ ಕಂಪನಿಯಾದ ಅಶೋಕ್ ಲೇಲ್ಯಾಂಡ್ (Ashok Leyland), ಇಂದು 200 ಅತ್ಯಾಧುನಿಕ ಟ್ರಕ್‌ಗಳನ್ನು ಭಾರತದ ಪ್ರಮುಖ ಎಕ್ಸ್‌ಪ್ರೆಸ್ ಲಾಜಿಸ್ಟಿಕ್ಸ್ ಆಗಿರುವ ಇನ್‌ಸ್ಟಂಟ್ ಟ್ರಾನ್ಸ್‌ಪೋರ್ಟ್ ಸೊಲ್ಯೂಷನ್ ಪ್ರೈವೇಟ್ ಲಿಮಿಟೆಡ್‌ಗೆ ತಲುಪಿಸುವ ಆರ್ಡರ್ ಅನ್ನು ಪಡೆದುಕೊಂಡಿದೆ ಎಂದು ಘೋಷಿಸಿದೆ. ಈ ಮೈಲಿಗಲ್ಲು ಎರಡು ಕಂಪನಿಗಳ ನಡುವಿನ ಪಾಲುದಾರಿಕೆಯನ್ನು ಬಲಪಡಿಸುವಲ್ಲಿ ಮಹತ್ವದ ಹೆಜ್ಜೆಯನ್ನು ಗುರುತಿಸುತ್ತದೆ. ವಿಶ್ವಾಸಾರ್ಹ ವಾಹನ ಪೂರೈಕೆದಾರರಾಗಿ ಅಶೋಕ್ ಲೇಲ್ಯಾಂಡ್‌ನ ಸ್ಥಾನವನ್ನು ಮತ್ತಷ್ಟು ಬಲಪಡಿಸಿದೆ.

ರೂ.90000ಕ್ಕಿಂತ ಕಡಿಮೆ ಬೆಲೆಗೆ ಲಭ್ಯವಿರುವ ಟಾಪ್ 7 ಮೋಟಾರ್‌ಸೈಕಲ್‌..

ಅತ್ಯುತ್ತಮ ಮೈಲೇಜ್ ಮತ್ತು ಆಕರ್ಷಕ ವಿನ್ಯಾಸಗಳನ್ನು ಹೊಂದಿರುವ, 90000 ರೂಪಾಯಿಗಳಿಗಿಂತ ಕಡಿಮೆ ಬೆಲೆಯಲ್ಲಿ ಭಾರತದಲ್ಲಿ ಲಭ್ಯವಿರುವ ಅತ್ಯುತ್ತಮ ಮೋಟಾರ್‌ಸೈಕಲ್‌ಗಳನ್ನು ಅನ್ವೇಷಿಸಿ.