ಬೆಂಗಳೂರಿನ Ultraviolette Tesseract ಇ-ಸ್ಕೂಟರ್‌ಗೆ 70,000..

ಬೆಂಗಳೂರು ಮೂಲದ ಅಲ್ಟ್ರಾವೈಲೆಟ್ ಆಟೋಮೋಟಿವ್ (Ultraviolette Automotive) ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿದೆ. ಇದೇ ಮಾರ್ಚ್‌ನಲ್ಲಿ ಟೆಸ್ಸೆರಾಕ್ಟ್ (Tesseract) ಎಂಬ ಎಲೆಕ್ಟ್ರಿಕ್ ಸ್ಕೂಟರ್‌ನ್ನು ಅದ್ದೂರಿಯಾಗಿ ಪರಿಚಯಿಸಿತ್ತು. ಇದು ಹೆಚ್ಚು ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಜೊತೆಗೆ ಕೈಗೆಟುಕುವ ಬೆಲೆಯಲ್ಲಿಯೂ ಲಭ್ಯವಿದೆ. ಸದ್ಯ, ಈ ಸ್ಕೂಟರ್‌ಗಾಗಿ ದಾಖಲೆ ಸಂಖ್ಯೆಯಲ್ಲಿ ಗ್ರಾಹಕರು ಬುಕ್ಕಿಂಗ್ ಮಾಡಿದ್ದಾರೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

Bajaj: ಮೊನ್ನೆಯಷ್ಟೆ ಬಿಡುಗಡೆ: ಹೊಸ ಚೇತಕ್ ಇವಿ ಸ್ಕೂಟರ್ ವಿಶೇಷತೆಗಳು

ಭಾರತದ ಜನಪ್ರಿಯ ದ್ವಿಚಕ್ರ ವಾಹನ ಕಂಪನಿಯಾದ ಬಜಾಜ್ (Bajaj), ಮುಂದಿನ ಪೀಳಿಗೆಯ ವೇದಿಕೆಯಲ್ಲಿ ನಿರ್ಮಿಸಲಾದ ಚೇತಕ್ 3001 ಇವಿ ಸ್ಕೂಟರ್ ಅನ್ನು ಮೊನ್ನೆಯಷ್ಟೆ ಬಿಡುಗಡೆ ಮಾಡಿದೆ. ಚೇತಕ್ 3001 ಎಲೆಕ್ಟ್ರಿಕ್ ಸ್ಕೂಟರ್ ದೇಶಾದ್ಯಂತ ಈಗ ರೂ. 99,990/- ಎಕ್ಸ್-ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಭಾರತೀಯ ಸ್ಕೂಟರ್ ಸವಾರರು ಬಯಸುವ ರೇಂಜ್ ಮತ್ತು ಪರ್ಫಾಮೆನ್ಸ್ ನೀಡುತ್ತದೆ. ಖಚಿತವಾದ ವಿಶ್ವಾಸಾರ್ಹತೆ ಮತ್ತು ಸೇವೆಯೊಂದಿಗೆ ಗೊಂದಲ ಮುಕ್ತ ಸವಾರಿ ಮಾಡಬಹುದು ಎಂದು ಬಜಾಜ್ ಹೇಳಿದೆ.

ಈ Maruti Suv ಕಂಡ್ರೆ ಗ್ರಾಹಕರು ಮುಗಿಬೀಳುವರು

ಮಾರುತಿ ಸುಜುಕಿ ಫ್ರಾಂಕ್ಸ್ (Maruti Suzuki Fronx) ಪ್ರಮುಖ ಎಸ್‌ಯುವಿಯಾಗಿ ಹೊರಹೊಮ್ಮಿದೆ. ಈ ಕಾರನ್ನು ಗ್ರಾಹಕರು ಕೂಡ ನಾಮುಂದು - ತಾಮುಂದು ಎಂಬಂತೆ ಖರೀದಿ ಮಾಡುತ್ತಿದ್ದಾರೆ. ದಿನದಿಂದ ದಿನಕ್ಕೆ ಬೇಡಿಕೆ ಅಧಿಕಗೊಳ್ಳುತ್ತಿದ್ದು, ಇದೇ 'ಮೇ'ನಲ್ಲೂ ಫ್ರಾಂಕ್ಸ್ ಎಸ್‌ಯುವಿ ಭಾರೀ ಸಂಖ್ಯೆಯಲ್ಲಿ ಮಾರಾಟಗೊಂಡಿದೆ. ಒಟ್ಟು 13,584 ಯುನಿಟ್‌ಗಳನ್ನು ಮಾರಲಾಗಿದೆ. 2024ರ ಮೇ ತಿಂಗಳಲ್ಲಿ 12,681 ಯುನಿಟ್‌ಗಳನ್ನು ಮಾರಾಟ ಮಾಡಲಾಗಿತ್ತು. ಅದಕ್ಕೆ ಹೋಲಿಕೆ ಮಾಡಿದರೆ, ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ (YoY) ಶೇಕಡ 7.12% ಪ್ರಗತಿಯಾಗಿದೆ.

Tata: ಮತ್ತೆರಡು ವಾಹನ ಸ್ಕ್ರ್ಯಾಪಿಂಗ್ ಸೌಲಭ್ಯಗಳ ಉದ್ಘಾಟನೆ

ಭಾರತದ ಪ್ರಮುಖ ವಾಹನ ತಯಾರಕರಾದ ಟಾಟಾ ಮೋಟಾರ್ಸ್ (Tata Motors), ಸುಸ್ಥಿರ ಸಾರಿಗೆ ವ್ಯವವಸ್ಥೆಯನ್ನು ಕಲ್ಪಿಸುವ ಮೂಲ ಉದ್ದೇಶದಿಂದ ಇಂದು ಉತ್ತರ ಪ್ರದೇಶದ ಲಕ್ನೋ ಮತ್ತು ಛತ್ತೀಸಗಡದ ರಾಯಪುರದಲ್ಲಿ ಎರಡು ಅತ್ಯಾಧುನಿಕ ವಾಹನ ಸ್ಕ್ರ್ಯಾಪಿಂಗ್ ಘಟಕಗಳಾದ Re.Wi.Re (ರೀಸೈಕಲ್ ವಿತ್ ರೆಸ್ಪೆಕ್ಟ್) ಅನ್ನು ಉದ್ಘಾಟಿಸಿದೆ. ಈ ಎರಡು ಘಟಕಗಳ ಉದ್ಘಾಟನೆಯನ್ನು ಭಾರತ ಸರ್ಕಾರದ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಅವರು ವರ್ಚುವಲ್ ಆಗಿ ನೆರವೇರಿಸಿದರು.
Advertisement

ಗುಡ್‌ನ್ಯೂಸ್: 330 Km ಮೈಲೇಜ್.. Bajaj Freedom 125 ಸಿಎನ್‌ಜಿ..

ಬಜಾಜ್ ಫ್ರೀಡಂ 125 (Bajaj Freedom 125) ವಿಶ್ವದ ಮೊಟ್ಟ ಮೊದಲ ಸಿಎನ್‌ಜಿ ಮೋಟಾರ್‌ಸೈಕಲ್‌ ಎಂದೇ ಹೆಸರುವಾಗಿದೆ. 2024ರ ಜುಲೈ 5 ರಂದು ಈ ಬೈಕ್‌ನ್ನು ಅದ್ದೂರಿಯಾಗಿ ಬಿಡುಗಡೆಗೊಳಿಸಲಾಗಿತ್ತು. ಅಂದಿನಿಂದಲೇ ಗ್ರಾಹಕರಿಂದ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಅದನ್ನು ಪುಷ್ಟಿಕರಿಸುವಂತೆ ಇದೇ ವರ್ಷದ ಮಾರ್ಚ್‌ವರೆಗೆ 50,047 ಯುನಿಟ್ ಫ್ರೀಡಂ ಸಿಎನ್‌ಜಿ ಮೋಟಾರ್‌ಸೈಕಲ್‌ಗಳನ್ನು ಮಾರಾಟಗೊಳಿಸಲಾಗಿದೆ. ವಿಶೇಷವಾಗಿ ಕರ್ನಾಟಕದಲ್ಲಿ 3,540 ಯುನಿಟ್‌ಗಳನ್ನು ಗ್ರಾಹಕರು ಕೊಂಡುಕೊಂಡಿದ್ದರು. ನೀವು ಇದೇ ಬೈಕ್‌ನ್ನು ದಿನಬಳಕೆಗಾಗಿ ಖರೀದಿ ಮಾಡಲು ಆಲೋಚಿಸಿದ್ದೀರಾ.. ಹಾಗಾದರೆ, ಇಲ್ಲಿದೆ ಸಿಹಿಸುದ್ದಿ.

ಅಂಬಾರಿ ಸೆಲಬ್ರೇಷನ್ ಎಡಿಷನ್ ಲುಕ್‌ನಲ್ಲಿ ಇತ್ತೀಚೆಗೆ ಬಿಡುಗಡೆ:

ಇತ್ತೀಚೆಗಷ್ಟೆ ಮರ್ಸಿಡಿಸ್ - ಬೆಂಝ್ ಕಂಪನಿಯು ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳಲ್ಲಿ EQS ನ ತಾಂತ್ರಿಕ ಶ್ರೇಷ್ಠತೆಯನ್ನು ಸ್ಪಷ್ಟವಾಗಿ ಪ್ರದರ್ಶಿಸು ತನ್ನ ಬುನಿರೀಕ್ಷಿತ EQS 580 4MATIC 'ಸೆಲೆಬ್ರೇಷನ್ ಎಡಿಷನ್' ಬಿಡುಗಡೆ ಮಾಡಿದೆ. ಈ ಕಾರು ರೂ. 1.30 ಕೋಟಿ (ಎಕ್ಸ್-ಶೋರೂಂ) ಬೆಲೆಗೆ ಭಾರತದಲ್ಲಿ ಖರೀರಿದಗೆ ಲಭ್ಯವಿದ್ದು, ಕೇವಲ 50 ಕಾರುಗಳನ್ನು ಮಾತ್ರ ಮಾರಾಟ ಮಾಡಲಾಗುವುದು ಎಂದು ಮರ್ಸಿಡಿಸ್ ಬೆಂಝ್ ಕಂಪನಿ ತಿಳಿಸಿದೆ. ಈ ಶ್ರೀಮಂತರ ಅಂಬಾರಿಯ ಕುರಿತ ಹೆಚ್ಚಿನ ವಿಶೇಷತೆಗಳು ಈ ಕೆಳಗಿವೆ.

Honda Activa e: ಹೊಸ ಹೋಂಡಾ ಆಕ್ಟಿವಾ ಎಲೆಕ್ಟ್ರಿಕ್ ಸ್ಕೂಟರ್..

ಹೋಂಡಾ ಆಕ್ಟಿವಾ ಇ (Honda Activa e) ಪ್ರಮುಖ ಎಲೆಕ್ಟ್ರಿಕ್ ಸ್ಕೂಟರ್ ಆಗಿ ಹೊರಹೊಮ್ಮಿದೆ. ಇದು ಹೆಚ್ಚು ಅತ್ಯಾಕರ್ಷಕವಾದ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಜೊತೆಗೆ ಬದಲಾಯಿಸಬಹುದಾದ ಬ್ಯಾಟರಿ ಪ್ಯಾಕ್ (Swappable Battery Pack) ಆಯ್ಕೆಯನ್ನು ಹೊಂದಿದೆ. ಹೀಗಾಗಿ, ಬೆಂಗಳೂರು, ದೆಹಲಿ ಹಾಗೂ ಮುಂಬೈ ಮಹಾನಗರಗಳಲ್ಲಿ ಮಾತ್ರ ಮಾರಾಟ ಮಾಡಲಾಗುತ್ತದೆ. ಸದ್ಯ, ನೂತನ ಆಕ್ಟಿವಾ ಇ ಸ್ಕೂಟರ್‌ನ್ನು ಖರೀದಿ ಮಾಡಬಯಸುವ ಗ್ರಾಹಕರಿಗೆ ಭರ್ಜರಿ ಸಿಹಿಸುದ್ದಿಯೊಂದು ಲಭ್ಯವಾಗಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

ಇತ್ತೀಚೆಗೆ ಬಿಡುಗಡೆಯಾದ ಸಿಟ್ರನ್ C3 ಸ್ಪೋರ್ಟ್ ಎಡಿಷನ್ ವಿಶೇಷತೆಗಳು!

ಸಿಟ್ರನ್ (Citroen) ಕಂಪನಿಯು ತನ್ನ ಜನಪ್ರಿಯ C3 ಲಿಮಿಟೆಡ್ ಸ್ಪೋರ್ಟ್ ಎಡಿಷನ್ ಕಾರನ್ನು ಇತ್ತೀಚೆಗೆ ಬಿಡುಗಡೆ ಮಾಡಿದೆ. ಸಾಮಾನ್ಯ ಸಿಟ್ರನ್ ಸಿ3 ಬೆಲೆಯು ರೂ.6.23 ಲಕ್ಷವಿದ್ದು, ಹೊಸದಾಗಿ ಬಿಡುಗಡೆಯಾಗಿರುವ ಸಿಟ್ರನ್ ಸಿ3 ಸ್ಪೋರ್ಟ್ ಎಡಿಷನ್ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.6.44 ಲಕ್ಷದಿಂದ ಪ್ರಾರಂಭವಾಗುತ್ತದೆ. ಕಂಪನಿಯು ಇದನ್ನು ಸ್ಪೋರ್ಟಿ ಪರ್ಫಾಮೆನ್ಸ್ ಬಯಸುವ ಗ್ರಾಹಕರಿಗಾಗಿ ವಿನ್ಯಾಸಗೊಳಿಸಲಾಗಿದೆ. ಲಿಮಿಟೆಡ್ ಕಾರುಗಳನ್ನು ಮಾರಾಟ ಮಾಡಲು ಯೋಜಿಸಲಾಗಿದ್ದು, ಹೊಸ ಸ್ಪೋರ್ಟ್ ಎಡಿಷನ್‌ಗಾಗಿ 21,000 ರೂ.ಗಳ ಹೆಚ್ಚುವರಿ ಮೊತ್ತವನ್ನು ಪಾವತಿಸಬೇಕಾಗುತ್ತದೆ.

21 Km ಮೈಲೇಜ್.. 5-ಸೀಟರ್, 5.85 ಲಕ್ಷ.. ಮಾರುತಿ ಇಗ್ನಿಸ್‌ಗೆ 3..

ಮಾರುತಿ ಸುಜುಕಿ ಇಗ್ನಿಸ್ (Maruti Suzuki Ignis) ಪ್ರಮುಖ ಹ್ಯಾಚ್‌ಬ್ಯಾಕ್ ಆಗಿದೆ. ಇದು ರೂ.5.85 ಲಕ್ಷದಿಂದ ರೂ.8.12 ಲಕ್ಷ (ಎಕ್ಸ್-ಶೋರೂಂ) ದರವನ್ನು ಹೊಂದಿದೆ. 1.2-ಲೀ. ಪೆಟ್ರೋಲ್ ಎಂಜಿನ್ ಪಡೆದಿದ್ದು, 20.89 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ. ಇದರಲ್ಲಿ 5 ಆಸನ ಆಯ್ಕೆ ವ್ಯವಸ್ಥೆಯಿದ್ದು, 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಪ್ರಯಾಣಿಕರ ರಕ್ಷಣೆಗಾಗಿ ಡುಯಲ್ ಏರ್‌ಬ್ಯಾಗ್‌ಗಳು ಹಾಗೂ ರೇರ್ ಪಾರ್ಕಿಂಗ್ ಸೇನಾರ್ಸ್ ಹೊಂದಿದೆ. ನೀವು ಇದೇ ಇಗ್ನಿಸ್‌ಗೆ ಪರ್ಯಾಯವಾಗಿ ಈ 3 ಕಾರುಗಳನ್ನು ಕೂಡ ಖರೀದಿ ಮಾಡಬಹುದು. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

Maruti Suzuki: ಈ ಕಾರು ಬೇಡವೇ ಬೇಡ ಎನ್ನುತ್ತಿದ್ದಾರೆ ಭಾರತೀಯರು

ಭಾರತದಲ್ಲಿ ಬಿಡುಗಡೆಯಾಗುವ ಮುನ್ನ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ 3-ಡೋರ್ ಸುಜುಕಿ ಜಿಮ್ನಿ ಸಖತ್ ಡಿಮ್ಯಾಂಡ್ ಪಡೆದುಕೊಂಡಿತ್ತು. ನವೆಂಬರ್ 2020 ರಿಂದ ಮಾರುತಿ ಸುಜುಕಿ ಹರಿಯಾಣದ ಗುರ್ಗಾಂವ್ ಉತ್ಪಾದನಾ ಸ್ಥಾವರದಿಂದ ಆಫ್ರಿಕಾ ಮತ್ತು ಮಧ್ಯಪ್ರಾಚ್ಯದ ದೇಶಗಳಿಗೆ ಎಡ ಮತ್ತು ಬಲಗೈ ಡ್ರೈವ್ ಮಾರುಕಟ್ಟೆಗಳಿಗೆ ರಫ್ತು ಮಾಡಲು ಪ್ರತ್ಯೇಕವಾಗಿ 3-ಡೋರ್ ಮಾಡಲ್‌ಗಳನ್ನು ಉತ್ಪಾದಿಸುತ್ತಿದೆ. ಆ ದೇಶಗಳಲ್ಲಿ ಮಾತ್ರ ಮಾರಟದಲ್ಲಿರುವ ಈ ಕಾರನ್ನು ಭಾರತದಲ್ಲೂ ಬಿಡುಗಡೆ ಮಾಡಲು ಹಲವರು ಕಾತುರದಿಂದ ಕಾಯುತ್ತಿದ್ದರು. ಆದರೆ ಒಂದೇ ಬಾರಿ ಮಾರುತಿ ಸುಜುಕಿ ಕಂಪನಿಯು ಬಹುನಿರೀಕ್ಷಿತ 5-ಡೋರ್ ಜಿಮ್ನಿಯನ್ನು ಬಿಡುಗಡೆ ಮಾಡುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿತ್ತು.

26 Km ಮೈಲೇಜ್, 5-ಸೀಟರ್.. 13 ಲಕ್ಷ, ಹೊಸ ಮಾರುತಿ ಗ್ರ್ಯಾಂಡ್..

ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ (Maruti Suzuki Grand Vitara) ಪ್ರಖ್ಯಾತ ಎಸ್‌ಯುವಿಯಾಗಿ ಹೊರಹೊಮ್ಮಿದೆ. ಇತ್ತೀಚೆಗೆ ಈ ಕಾರಿನ 2025ರ ಸಿಎನ್‌ಜಿ ಮಾಡೆಲ್‌ನ್ನು ಅದ್ದೂರಿಯಾಗಿ ಬಿಡುಗಡೆ ಮಾಡಲಾಯಿತು. ಇದರ ವಿನ್ಯಾಸ ಹಾಗೂ ವೈಶಿಷ್ಟ್ಯಗಳು ಸ್ಟ್ಯಾಂಡರ್ಡ್ ಮಾಡೆಲ್‌ನಂತೆ ಇದ್ದು, ಯಾವುದೇ ಬದಲಾವಣೆಗಳನ್ನು ಹೊಂದಿಲ್ಲ. ಆದರೆ, ಪ್ರಯಾಣಿಕರ ರಕ್ಷಣೆಗಾಗಿ 6 ಏರ್‌ಬ್ಯಾಗ್‌ಗಳನ್ನು ಸೇರ್ಪಡೆ ಮಾಡಲಾಗಿದೆ. ಬನ್ನಿ, ನೂತನ 'ಗ್ರ್ಯಾಂಡ್ ವಿಟಾರಾ ಸಿಎನ್‌ಜಿ' ಎಸ್‌ಯುವಿಯ ಬೆಲೆ ಹಾಗೂ ವಿಶೇಷತೆಗಳ ಕುರಿತಂತೆ ಪ್ರಮುಖಾಂಶಗಳನ್ನು ತಿಳಿಯೋಣ.

ರೂ. 2.05 ಲಕ್ಷಕ್ಕೆ ಹೊಸ ಟ್ರಯಂಫ್ ಸ್ಪೀಡ್ T4 ಬಾಜಾ ಆರೆಂಜ್ ಬಿಡುಗಡೆ

ಟ್ರಯಂಫ್ ಮೋಟಾರ್‌ಸೈಕಲ್ಸ್ (Triumph Motorcycles ) ಇಂಡಿಯಾವು, ಹೆಚ್ಚು ಮಾರಾಟವಾಗುವ ತನ್ನ ಸ್ಪೀಡ್ T4 ಗಾಗಿ ಹೊಚ್ಚಹೊಸ ಆಕರ್ಷಕ ಮತ್ತು ವಿಸ್ಮಯಕಾರಿ 'ಬಾಜಾ ಆರೆಂಜ್' ಬಣ್ಣವನ್ನು ಪರಿಚಯಿಸಿದೆ. ಬಾಜಾ ಆರೆಂಜ್ ಬಣ್ಣವು ಮರುಭೂಮಿಯ ಮುಂಜಾನೆಯ ಹೊಳಪಿನಿಂದ ಸ್ಫೂರ್ತಿ ಪಡೆದಿದೆ. ರೂ.2.05 ಲಕ್ಷ (ಎಕ್ಸ್ ಶೋರೂಂ) ಬೆಲೆಯಲ್ಲಿ ಬಿಡುಗಡೆಯಾಗುತ್ತಿರುವ ಬಾಜಾ ಆರೆಂಜ್ ಸ್ಪೀಡ್ T4, ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಲಿದೆ. ಈ ಐಕಾನಿಕ್ ಬಣ್ಣವನ್ನು ಹೊಂದಿರುವ ವಿಭಾಗದ ಮೊದಲ 400cc ಮೋಟಾರ್‌ಸೈಕಲ್ ಇದಾಗಿದೆ ಎಂದು ಕಂಪನಿ ಹೇಳಿದೆ.
Advertisement

16.8 Km ಮೈಲೇಜ್.. 5-ಸೀಟರ್, ಈ ಬಲಿಷ್ಠ ಕಾರಿನ ಮಾರಾಟ ಸಂಖ್ಯೆ..

ಟಾಟಾ ಹ್ಯಾರಿಯರ್ (Tata Harrier) ಪ್ರಮುಖ ಎಸ್‌ಯುವಿಯಾಗಿದ್ದು, ಹೆಚ್ಚು ಅತ್ಯಾಧುನಿಕವಾಗಿದೆ. ಅದರ ಹೊರತಾಗಿಯೂ ಮಾರಾಟ ಸಂಖ್ಯೆ ದಿನದಿಂದ ದಿನಕ್ಕೆ ಕುಸಿತವಾಗುತ್ತಿದೆ. ಅದು ಈ ಮೇ ತಿಂಗಳಲ್ಲೂ ಮುಂದುವರಿದಿದೆ. ಒಟ್ಟು 894 ಯುನಿಟ್‌ಗಳನ್ನು ಮಾರಾಟಗೊಳಿಸಲಾಗಿದೆ. 2024ರ ಇದೇ ಅವಧಿಯಲ್ಲಿ 1625 ಯುನಿಟ್‌ಗಳನ್ನು ಮಾರಾಟ ಮಾಡಲಾಗಿತ್ತು. ಈ ಅಂಕಿಸಂಖ್ಯೆಗೆ ಹೋಲಿಕೆ ಮಾಡಿದರೆ, ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ (YoY) ಶೇಕಡ 44.98% ಇಳಿಕೆಯಾಗಿದೆ.

ಭಾರತದ ವಾಹನೋದ್ಯಮಕ್ಕೆ ಕಂಟಕವಾದ ಚೀನಾ.. ಅಪರೂಪದ ಖನಿಜಗಳು ಎಂದರೇನು?

ಭಾರತದ ವಾಹನೋದ್ಯಮಕ್ಕೆ ಕಂಟಕ ಎದುರಾಗುವ ಕಾಲ ಸನಿಹವಾಗಿದೆ. ಚೀನಾ ಅಪರೂಪದ ಅಯಸ್ಕಾಂತ ಖನಿಜಗಳನ್ನು (Rare Earth Elements) ರಫ್ತು ಮಾಡುವುದನ್ನು ಸ್ಥಗಿತಗೊಳಿಸಿದೆ. ಇದು ಎರಡು - ಮೂರು ವರ್ಷಗಳಿಂದ ಎಲೆಕ್ಟ್ರಿಕ್ ವಾಹನ ವಿಭಾಗದಲ್ಲಿ ಅಂಬೆಗಾಲು ಇಡುತ್ತಿರುವ ದೇಶೀಯ ವಾಹನ ತಯಾರಕ ಕಂಪನಿಗಳನ್ನು ತೀವ್ರ ಸಂಕಷ್ಟಕ್ಕೆ ದೂಡಲಿದೆ. ಅದರಲ್ಲೂ ಬಹುನಿರೀಕ್ಷಿತ ಮಾರುತಿ ಸುಜುಕಿಯ ಮೊದಲ ಎಲೆಕ್ಟ್ರಿಕ್ ಕಾರು ಎಂದೇ ಬಣ್ಣಿಸಲಾಗಿರುವ 'ಇ-ವಿಟಾರಾ'ದ ಉತ್ಪಾದನೆಯೂ ಕೂಡ ತಡವಾಗಬಹುದು ಎನ್ನಲಾಗಿದೆ. ಅದು ಮಾತ್ರವಲ್ಲದೆ ಎಲ್ಲ ಕಂಪನಿಗಳ ಕಾರುಗಳ ತಯಾರಿಕೆ ಮೇಲು ವಿಪರೀತ ಪರಿಣಾಮ ಬೀರುವ ಸಾಧ್ಯತೆಗಳಿವೆ.

Toyota: 8-ಸೀಟರ್.. ಟೊಯೊಟಾ ಇನ್ನೋವಾ ಹೈಕ್ರಾಸ್ ಎಂಪಿವಿಗೆ 3..

ಟೊಯೊಟಾ ಇನ್ನೋವಾ ಹೈಕ್ರಾಸ್ (Toyota Innova Hycross) ಪ್ರಮುಖ ಎಂಪಿವಿಯಾಗಿ ಹೊರಹೊಮ್ಮಿದೆ. ಇದು ರೂ.19.94 ಲಕ್ಷದಿಂದ ರೂ.32.58 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ. ಪೆಟ್ರೋಲ್ ಹಾಗೂ ಹೈಬ್ರಿಡ್ (ಪೆಟ್ರೋಲ್ + ಎಲೆಕ್ಟ್ರಿಕ್) ಎಂಜಿನ್ ಆಯ್ಕೆಯನ್ನು ಹೊಂದಿದ್ದು, 21 ಕೆಎಂಪಿಎಲ್‌ವರೆಗೂ ಮೈಲೇಜ್ ನೀಡುತ್ತದೆ. ಇದರಲ್ಲಿ 7/ 8 ಆಸನಗಳಿವೆ. 10-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು 7-ಇಂಚಿನ ಡಿಜಿಟಲ್ ಡ್ರೈವರ್ಸ್ ಡಿಸ್‌ಪ್ಲೇ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸುರಕ್ಷತೆಗಾಗಿ 6 ಏರ್‌ಬ್ಯಾಗ್‌ಗಳನ್ನು ಹೊಂದಿದೆ. ನೀವು 'ಇನ್ನೋವಾ ಹೈಕ್ರಾಸ್' ಎಂಪಿವಿಗೆ ಪರ್ಯಾಯವಾಗಿ ಈ 3 ಜನಪ್ರಿಯ ಕಾರುಗಳನ್ನು ಕೊಂಡುಕೊಳ್ಳಬಹುದು. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

Hyundai: ಹೊಸ 7-ಸೀಟರ್ ಹ್ಯುಂಡೈ ಕಾರಿನ ಟಾಪ್ ವಿಶೇಷತೆಗಳು

ಹುಂಡೈ (Hyundai) ಇತ್ತೀಚೆಗೆ ತನ್ನ ಅಲ್ಕಜಾರ್ (ALCAZAR)ಗೆ ಗಮನಾರ್ಹ ಅಪ್‌ಡೇಟ್‌ಗಳನ್ನು ನೀಡಿ ಅಲ್ಕಜಾರ್ ಕಾರ್ಪೊರೇಟ್ 7-ಸೀಟರ್ ಡೀಸೆಲ್ MT ಹಾಗೂ ಪ್ರೆಸ್ಟೀಜ್ 7-ಸೀಟರ್ ಪೆಟ್ರೋಲ್ DCT ಎಂಬ ಹೊಸ ವೇರಿಯೆಂಟ್‌ಗಳನ್ನು ಬಿಡುಗಡೆ ಮಾಡಿದೆ. ಇವು 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಗಳೊಂದಿಗೆ ಲಭ್ಯವಿದೆ. ಕಂಪನಿಯು ಹ್ಯುಂಡೈ ಅಲ್ಕಜಾರ್ ಡೀಸೆಲ್ ಪವರ್‌ಟ್ರೇನ್‌ನಲ್ಲಿ ವಾಯಿಸ್-ಸಕ್ರಿಯಗೊಳಿಸಿದ ಸ್ಮಾರ್ಟ್ ಪನೋರಮಿಕ್ ಸನ್‌ರೂಫ್‌ನೊಂದಿಗೆ ಹೊಸ ಕಾರ್ಪೊರೇಟ್ ವೇರಿಯೆಂಟ್ ಪರಿಚಯಿಸಿದೆ. ಈ ಹೊಸ ವೇರಿಯೆಂಟ್‌ಗಳ ಕುರಿತು ಹೆಚ್ಚಿನ ವಿಶೇಷತೆಗಳು ಇಲ್ಲಿವೆ.

ಶತಕ ಬಾರಿಸಿದ ವೈಭವ್‌ಗೆ ಸಿಕ್ತು ಕಲ್ಲು ಬಂಡೆಯಂತಿರುವ Tata Curvv..

ಐಪಿಎಲ್ (IPL) ಟ್ವೆಂಟಿ - 20 ಟೂರ್ನಿಯ 18ನೇ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಚಾಂಪಿಯನ್ ತಂಡವಾಗಿ ಹೊರಹೊಮ್ಮಿದೆ. ಆದರೆ, 'ಸೂಪರ್ ಸ್ಟ್ರೈಕರ್ ಆಫ್ ದಿ ಸೀಸನ್' ಪ್ರಶಸ್ತಿಯೂ ರಾಜಸ್ಥಾನ್ ರಾಯಲ್ಸ್ (RR) ತಂಡದ ಯುವ ಬ್ಯಾಟ್ಸ್‌ಮನ್ ವೈಭವ್ ಸೂರ್ಯವಂಶಿ (Vaibhav Suryavanshi) ಪಾಲಾಗಿದೆ. ಈ ಮೂಲಕ ಅವರಿಗೆ ಬಲಿಷ್ಠವಾದ 'ಟಾಟಾ ಕರ್ವ್' ಕಾರು ಬಹುಮಾನವಾಗಿ ಒಲಿದಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

Ola: ಪಕ್ಕದ ಬೀದಿಗೆ ಬೈಕ್ ಬುಕ್ ಮಾಡಿದ ಯುವತಿ

ಇತ್ತೀಚೆಗೆ ಬೈಕ್ ಟ್ಯಾಕ್ಸಿಗಳು ಹೆಚ್ಚಾಗಿವೆ, ಆಟೋ ಹಾಗೂ ಬೈಕ್ ಟ್ಯಾಕ್ಸಿ ರೈಡರ್‌ಗಳ ಜಗಳ ಆಗಾಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತದೆ. ಇದೀಗ ಹೊಸ ಟ್ರೆಂಡಿಂಗ್ ವಿಡಿಯೋ ನೆಟ್ಟಿಗರನ್ನು ತುಂಬಾ ನಗಿಸುತ್ತಿದೆ. ಪಕ್ಕದ ಬೀದಿಗೆ ಹೋಗಲು ಓಲಾ ಬೈಕ್ ಬುಕ್ ಮಾಡಿದ ಯುವತಿಯನ್ನು ನೋಡಿ ಓಲಾ ರೈಡರ್ ಸಹ ನಕ್ಕಿದ್ದಾರೆ. ಪಕ್ಕದ ಬೀದಿಯಲ್ಲವೇ ನಡೆದುಕೊಂಡು ಹೋಗಿ ಎನ್ನುವುದನ್ನು ಬಿಟ್ಟು, ಯುವತಿಯ ಕಾರಣ ಕೇಳಿ.. ಸರಿ ಬನ್ನಿ ಡ್ರಾಪ್ ಮಾಡುತ್ತೇನೆ ಎಂದು ಡ್ರಾಪ್ ಮಾಡಿ ಹೋಗಿದ್ದಾರೆ.

32.85 Km ಮೈಲೇಜ್.. 6 ಲಕ್ಷ, ಜನಪ್ರಿಯ ಮಾರುತಿ ಸ್ವಿಫ್ಟ್ ಖರೀದಿಸಲು..

ಮಾರುತಿ ಸುಜುಕಿ ಸ್ವಿಫ್ಟ್ (Maruti Suzuki Swift) ಪ್ರಮುಖ ಹ್ಯಾಚ್‌ಬ್ಯಾಕ್ ಆಗಿದೆ. ದಶಕಗಳಿಂದ ದೇಶೀಯ ಮಾರುಕಟ್ಟೆಯಲ್ಲಿ ಉತ್ತಮ ಸಂಖ್ಯೆಯಲ್ಲಿ ಮಾರಾಟವಾಗುತ್ತಿದ್ದು, ಗ್ರಾಹಕರ ನೆಚ್ಚಿನ ಕಾರಾಗಿ ಹೊರಹೊಮ್ಮಿದೆ. ಇವೆಲ್ಲ ಒಂದು ಕಡೆಯಾದರೆ, ನಾನಾ ಕಾರಣಗಳಿಂದ ದಿನದಿಂದ ದಿನಕ್ಕೆ 'ಸ್ವಿಫ್ಟ್' ಹ್ಯಾಚ್‌ಬ್ಯಾಕ್ ಮಾರಾಟ ಸಂಖ್ಯೆಯೂ ಕುಸಿತವಾಗುತ್ತಿದೆ. ಅದು 'ಮೇ'ನಲ್ಲೂ ಮುಂದುವರಿದಿದೆ. ಆದರೂ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟಗೊಂಡ ಪ್ರಮುಖ 10 ಕಾರುಗಳ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ.

Range Rover: ರೇಂಜ್ ರೋವರ್ SV ಮಸಾರ ವಿಶೇಷತೆಗಳು!

ಹಿಮಾಲಯದ ಭವ್ಯ ಸೌಂದರ್ಯ ಮತ್ತು ಆ ಪ್ರದೇಶದ ಅಮೂಲ್ಯವಾದ ಅಪರೂಪದ ನೀಲಮಣಿಗಳಿಂದ ಪ್ರೇರಿತವಾದ ರೇಂಜ್ ರೋವರ್ SV ಮಸಾರ ಎಂಬ ಕಾರು ಇತ್ತೀಚೆಗೆ ಭಾರತದಲ್ಲಿ ಬಿಡುಗಡೆಯಾಗಿದೆ. ಭಾರತಕ್ಕಾಗಿ ವಿಶೇಷವಾಗಿ ರಚಿಸಲಾದ ಲಿಮಿಟೆಡ್ ಎಡಿಷನ್ ರೇಂಜ್ ರೋವರ್ SV ಮಸಾರಾ, ಈ ಎಸ್‌ಯುವಿ ವಿಶ್ವಾದ್ಯಂತ ಕೇವಲ 12 ಕಾರುಗಳಿಗೆ ಸೀಮಿತವಾಗಿದೆ. ಈ ಲಿಮಿಟೆಡ್ ಎಡಿಷನ್ ಆವೃತ್ತಿಯ ಬೆಲೆಯು 4.99 ಕೋಟಿ (ಎಕ್ಸ್ ಶೋ ರೂಂ) ಇದೆ. ಈ ಅಸಮಾನ್ಯ ಕಾರಿನ ವಿಶೇಷತೆಗಳನ್ನು ಇಲ್ಲಿ ನೋಡೋಣ.
Advertisement

ಈ ರಾಶಿಯವರಿಗೆ ಪ್ರೀತಿಯಲ್ಲಿ ಯಶಸ್ಸು.. ಇವರ ಮನಸ್ಸು ರೋಮ್ಯಾಂಟಿಕ್!


ಇದು ರಸ್ತೆ ಮೇಲಿನ ಅಂಬಾರಿ.. ಹೊಸ Yezdi Adventure ಮೋಟಾರ್‌ಸೈಕಲ್..

ಬಹುನಿರೀಕ್ಷಿತ 2025ರ ಯೆಜ್ಡಿ ಅಡ್ವೆಂಚರ್ (Yezdi Adventure) ಬೈಕ್‌ನ್ನು ಬುಧವಾರ ಬಿಡುಗಡೆ ಮಾಡಲಾಗಿದೆ. ಇದು ನವೀಕರಿಸಿದ ಮಾಡೆಲ್‌ ಆಗಿದ್ದು, ಹಲವು ಹೊಸತನಗಳಿಗೂ ಸಾಕ್ಷಿಯಾಗಿದೆ. ನೋಡುಗರ ಸೆಳೆಯುವ ವಿನ್ಯಾಸ ಹೊಂದಿದ್ದು, ಐಷಾರಾಮಿ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಹಾಗೆಯೇ ಬಜೆಟ್ ಬೆಲೆಯಲ್ಲೂ ಸಿಗುತ್ತದೆ. ನೀವು ಹೊಚ್ಚ ಹೊಸ ಯೆಜ್ಡಿ ಅಡ್ವೆಂಚರ್ ಮೋಟಾರ್‌ಸೈಕಲ್‌ನ್ನು ಖರೀದಿ ಮಾಡಲು ಆಲೋಚಿಸಿದ್ದೀರಾ.. ನಾವಿಲ್ಲಿ ಈ ನೂತನ ಬೈಕ್‌ನ ಬೆಲೆ ಹಾಗೂ ವಿಶೇಷತೆಗಳ ಕುರಿತ ಪ್ರಮುಖಾಂಶಗಳು ಏನೆಂಬುದನ್ನು ತಿಳಿಸಿಕೊಟ್ಟಿದ್ದೇವೆ.

ಬಹುಬೇಡಿಕೆಯ ಮಾರುತಿ ಬಲೆನೋ ಮುಂದೆ ಹೊಸ ಟಾಟಾ ಆಲ್ಟ್ರೋಜ್ ನಿಲ್ಲಬಲ್ಲದೆ

ಟಾಟಾ ಮೋಟಾರ್ಸ್ ಇತ್ತೀಚೆಗೆ ತನ್ನ 2025ರ ಆಲ್ಟ್ರೋಜ್ ಅನ್ನು ಆಕರ್ಷಕ ನವೀಕಣಗಳೊಂದಿಗೆ ಬಿಡುಗಡೆ ಮಾಡಿದೆ. ಇದು ಪ್ರೀಮಿಯಂ ಹ್ಯಾಚ್‌ಬ್ಯಾಕ್ ಸೆಗ್ಮೆಂಟಿನಲ್ಲಿ ಹೊಸ ಅಲೆ ಎಬ್ಬಿಸಿದ್ದು, ಈಗಿರುವ ಒಂದಷ್ಟು ಹ್ಯಾಚ್‌ಬ್ಯಾಕ್‌ಗಳಿಗೆ ನಡುಕ ಹುಟ್ಟಿಸಿದೆ. ಇದು ಪ್ರೀಮಿಯಂ ಹ್ಯಾಚ್ ಬ್ಯಾಕ್ ವಿಭಾಗದಲ್ಲಿ ಸ್ಪರ್ಧೆಯನ್ನು ತೀವ್ರಗೊಳಿಸಿದೆ. ಈ ಸೆಗ್ಮೆಂಟಿನಲ್ಲಿ ಮೊದಲಿನಿಂದಲೂ ಅಗ್ಗದ ಬೆಲೆಗೆ ಸಿಗುತ್ತಿದ್ದ ಮಾರುತಿ ಸುಜುಕಿ ಬಲೆನೊಗೆ ನೇರ ಪ್ರತಿಸ್ಪರ್ಧಿಯಾಗಿದೆ. ಹೊಸ ಟಾಟಾ ಆಲ್ಟ್ರೋಜ್ ಯಾವೆಲ್ಲಾ ವಿಷಯದಲ್ಲಿ ಬಲೆನೊಗೆ ಪೈಪೋಟಿ ನೀಡುತ್ತದೆ ಎಂಬುದನ್ನು ಹೋಲಿಕೆ ಮಾಡಿ ವಿವರಸಿದ್ದೇವೆ.

33 Km ಮೈಲೇಜ್.. 6 ಲಕ್ಷ, 5-ಸ್ಟಾರ್ ಸೇಫ್ಟಿಯ Maruti Dzire..

ಮಾರುತಿ ಸುಜುಕಿ ಡಿಜೈರ್ (Maruti Suzuki Dzire) ಪ್ರಮುಖ ಸೆಡಾನ್ ಆಗಿ ಹೊರಹೊಮ್ಮಿದ್ದು, ಸಾಮಾನ್ಯ ಹಳ್ಳಿಯಿಂದ ರಾಷ್ಟ್ರ ರಾಜಧಾನಿ ದಿಲ್ಲಿವರೆಗೆ ಮನೆ ಮಾತಾಗಿದೆ. ಸದ್ಯ, ಈ 'ಮೇ' ತಿಂಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟಗೊಂಡ ಪ್ರಮುಖ 10 ಕಾರುಗಳ ಪಟ್ಟಿ ಪ್ರಕಟಗೊಂಡಿದೆ. ಅದರಲ್ಲಿ ಇದೇ 'ಡಿಜೈರ್' ಮೊದಲ ಸ್ಥಾನದಲ್ಲಿದ್ದು, ಕಂಪನಿಯು ನಿರೀಕ್ಷೆ ಮಾಡಿದ್ದಕ್ಕಿಂತ ಉತ್ತಮ ಸಂಖ್ಯೆಯಲ್ಲಿ ಮಾರಾಟಗೊಂಡಿದೆ. ಬನ್ನಿ, ಆ ಬಗ್ಗೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.

Mahindra: ಹೊಸ ಮಹೀಂದ್ರಾ SUVಗೆ ಫುಲ್ ಡಿಮ್ಯಾಂಡ್

ಮಹೀಂದ್ರಾ ಇತ್ತೀಚೆಗೆ ಬಿಡುಗಡೆ ಮಾಡಿರುವ ಎಕ್ಸ್‌ಇವಿ 9ಇ (Mahindra XEV 9e) ಮತ್ತು ಬಿಇ 6 (BE 6) ಕಾರುಗಳು ತಮ್ಮ ಅಲ್ಟ್ರಾ-ಪ್ರೀಮಿಯಂ ಒಳಾಂಗಣ ಮತ್ತು ಆಕರ್ಷಕ ಫೀಚರ್ಸ್, ಫ್ಯೂಚಿರಿಸ್ಟಿಕ್ ಡಿಸೈನ್‌ನೊಂದಿಗೆ ದೇಶಾದ್ಯಂತ ಗ್ರಾಹಕರ ಹೃದಯಗಳನ್ನು ಗೆಲ್ಲುತ್ತಿವೆ. 2025 ಫೆಬ್ರವರಿ 14 ರಂದು ಈ ಎರಡೂ ಕಾರಿಗಳಿಗೆ ಬುಕಿಂಗ್ ತೆರೆಯಲಾಗಿದ್ದು, ಕೇವಲ 70 ದಿನಗಳಲ್ಲಿ ಹೊಸ ಎಲೆಕ್ಟ್ರಿಕ್ ಎಸ್‌ಯುವಿಗಳ 10,000 ಯುನಿಟ್ ವಾಹನಗಳನ್ನು ಡೆಲಿವರಿ ನೀಡಲಾಗಿದೆ. ಎರಡೂ ಕಾರುಗಳನ್ನು ಕಳೆದ ವರ್ಷ ನವೆಂಬರ್‌ನಲ್ಲಿ ಪರಿಚಯಿಸಲಾಗಿತ್ತು. ವಿತರಣೆಗಳು ಮಾರ್ಚ್ 2025 ರಲ್ಲಿ ಪ್ರಾರಂಭವಾಗಿದ್ದವು.