Acer Faster Awards 2026: ಹತ್ತಾರು ಪ್ರಶಸ್ತಿ ಘೋಷಣೆ..
ಆಟೋಮೊಬೈಲ್ಸ್
- 7 month, 4 hr, 56 min ago
ದೇಶದ ಆಟೋಮೋಟಿವ್ ಮಾಧ್ಯಮಗಳ ಒಕ್ಕೂಟವಾಗಿ 'ಫಾಸ್ಟರ್' ಗುರುತಿಸಿಕೊಂಡಿದೆ. ಗುರುಗ್ರಾಮದಲ್ಲಿ ಬುಧವಾರ ಪ್ರಖ್ಯಾತ ಕಾರು ಹಾಗೂ ದ್ವಿಚಕ್ರ ವಾಹನಗಳಿಗೆ ಕೊಡಲಾಗುವ 5ನೇ ಆವೃತ್ತಿ ಫಾಸ್ಟರ್ ಪ್ರಶಸ್ತಿ (Faster Awards - 2026) ಸಮಾರಂಭಕ್ಕೆ ಅದ್ದೂರಿಯಾಗಿ ತೆರೆ ಬಿದ್ದಿದೆ. ಜನಪ್ರಿಯ ಎಸ್‌ಯುವಿ ಮಹೀಂದ್ರಾ ಎಕ್ಸ್ಇವಿ 9ಇ (Mahindra XEV 9E) ವರ್ಷದ ಕಾರೆಂಬ ಪ್ರಶಸ್ತಿಯನ್ನು ಪಡೆದಿದೆ. ಟಿವಿಎಸ್ ಅಪಾಚೆ ಆರ್‌ಟಿಎಕ್ಸ್ (TVS Apache RTX) ವರ್ಷದ ಮೋಟಾರ್‌ಸೈಕಲ್ ಎಂಬ ಗೌರವಕ್ಕೆ ಪಾತ್ರವಾಗಿದೆ. ಸುಜುಕಿ ಆಕ್ಸೆಸ್ (Suzuki Access) ವರ್ಷದ ಸ್ಕೂಟರ್ ಆಗಿ ಹೊರಹೊಮ್ಮಿದೆ.