ಯಮಹಾ ಹೊಸ ಬೈಕ್ ಬಿಡುಗಡೆ: 2025ರ ಮಾಡಲ್‌ಗೆ ಸರಿಯಾದ ನವೀಕರಣ
ಆಟೋಮೊಬೈಲ್ಸ್
- 1 year, 2 month, 27 days ago
ಯಮಹಾ ಕಂಪನಿಯು ಭಾರತದಲ್ಲಿ ತನಗೆಂದೆ ವಿಶೇಷ ಅಭಿಮಾನಿಗಳನ್ನು ಹೊಂದಿದೆ. ಬ್ರಾಂಡ್‌ನಿಂದ ಹೊರಬರುವ ಬಹುತೇಕ ವಾಹನಗಳ ಬಗ್ಗೆ ಅಭಿಮಾನಿಗಳು ಕಾತುರದಿಂದ ಕಾಯುತ್ತಾರೆ. ಕಳೆದ ಹಲವು ವರ್ಷಗಳಿಂದ ಸ್ಟೈಲಿಷ್ 150 ಸಿಸಿ ಮೋಟಾರ್‌ಸೈಕಲ್ ವಿಭಾಗದಲ್ಲಿ ಸಖತ್ ಹೆಸರು ಮಾಡಿರುವ ಯಮಹಾ ಎಫ್‌ಝಡ್-ಎಸ್ ಎಫ್‌ಐ (Yamaha FZ-S FI) ಈಗ ಹೊಸ ಫೀಚರ್ ಅಪ್‌ಡೇಟ್‌ಗಳೊಂದಿಗೆ ಬಿಡುಗಡೆಯಾಗಿದೆ. ಇದು 2025ರ ಎಫ್‌ಝಡ್-ಎಸ್ ಎಫ್‌ಐ ಮಾಡಲ್ ಆಗಿದ್ದು, ಈ ಹಿಂದೆ ಇದ್ದ ಎಫ್‌ಝಡ್-ಎಸ್ ಎಫ್‌ಐ 4.0 ಮಾಡಲ್ ಅನ್ನು ಕೈಬಿಡಲಾಗಿದೆ ಎಂದು ವರದಿಯಾಗಿದೆ.