Jeep: ಮಾರುಕಟ್ಟೆಗೆ ಹೊಸ 7-ಸೀಟರ್ ಎಸ್‌ಯುವಿ ಬಿಡುಗಡೆ: ಬೆಲೆಯೆಷ್ಟು?
ಆಟೋಮೊಬೈಲ್ಸ್
- 7 month, 13 days ago
ಜೀಪ್ (Jeep) ಇಂಡಿಯಾ ಇಂದು ಮೆರಿಡಿಯನ್ ಟ್ರ್ಯಾಕ್ ಎಡಿಷನ್ (Meridian 'Track Edition') ಬಿಡುಗಡೆ ಮಾಡಿದೆ. ಇದು ಹೊಸ ಎಸ್‌ಯುವಿ ಸೀಮಿತವಾಗಿ (limited ‑ run) ಸಿಗಲಿದ್ದು, ಮೆರಿಡಿಯನ್‌ನ ಪ್ರೀಮಿಯಂ ಆಕರ್ಷಣೆಯನ್ನು ಹೆಚ್ಚಿಸಲು ನಿರ್ಮಿಸಲಾಗಿದೆ. ದಿಟ್ಟ ರಸ್ತೆ ಉಪಸ್ಥಿತಿ ಮತ್ತು ಉತ್ತಮ ಸೌಕರ್ಯ ನವೀಕರಣಗಳೊಂದಿಗೆ - ವಿಶೇಷವಾಗಿ ಹೊಸ 140 ಎಂಎಂ ಫುಲ್ಲಿ - ಫ್ರಂಟ್ ಸ್ಲೈಡಿಂಗ್ ಎರಡನೇ ಸೀಟಿನ ಸಾಲಿನೊಂದಿಗೆ ಇದುವರೆಗಿನ ಅತ್ಯಂತ ಆರಾಮದಾಯಕ ಜೀಪ್ ಮೆರಿಡಿಯನ್ ಆಗಿದೆ ಎಂದು ಕಂಪನಿ ತಿಳಿಸಿದೆ.