TATA: 7-ಸೀಟರ್‌ನ ಜನಪ್ರಿಯ ಟಾಟಾ ಕಾರಿದು.. ಬಿಸಿ ದೋಸೆಯಂತೆ ಸೇಲ್ಸ್..
ಆಟೋಮೊಬೈಲ್ಸ್
- 7 month, 18 days ago
ಟಾಟಾ ಸಫಾರಿ (Tata Safari) ಜನಮೆಚ್ಚಿದ ಎಸ್‌ಯುವಿಯಾಗಿದೆ. ಈ ಕಾರಿಗೆ ದಿನದಿಂದ ದಿನಕ್ಕೆ ಬೇಡಿಕೆಯೂ ಹೆಚ್ಚಾಗುತ್ತಿದೆ. ಗ್ರಾಹಕರು ಸಹ ಇಷ್ಟಪಟ್ಟು ಕೊಂಡುಕೊಳ್ಳುತ್ತಿದ್ದಾರೆ. ಕಳೆದ ತಿಂಗಳು (ಜನವರಿ - 2026) ಭಾರೀ ಸಂಖ್ಯೆಯೇ ಮಾರಾಟಗೊಂಡಿದೆ. ಒಟ್ಟು 2,375 ಯುನಿಟ್‌ಗಳನ್ನು ಖರೀದಿದಾರರಿಗೆ ವಿತರಿಸಲಾಗಿದೆ. 2024ರ ಇದೇ ಅವಧಿಯಲ್ಲಿ 1,548 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿ - ಅಂಶವನ್ನು ಲೆಕ್ಕ ಹಾಕಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ 53.42% ಬೆಳವಣಿಗೆಯಾಗಿದೆ.