Steelbird: ಸ್ಮಾರ್ಟ್ ರೈಡಿಂಗ್ ಬೇಸ್ ಎಕ್ಸ್ ಬಿಡುಗಡೆ
ಆಟೋಮೊಬೈಲ್ಸ್
- 8 month, 14 days ago
ದ್ವಿಚಕ್ರ ವಾಹನ ಸವಾರರ ಸುರಕ್ಷತೆಯಲ್ಲಿ ಹೆಸರು ಮಾಡಿರುವ ಹಾಗೂ ಭಾರತದ ಅತ್ಯಂತ ವಿಶ್ವಾಸಾರ್ಹ ಹೆಸರುಗಳಲ್ಲಿ ಒಂದಾದ 'ಸ್ಟೀಲ್ ಬರ್ಡ್ ಹೈ - ಟೆಕ್ ಇಂಡಿಯಾ' (Steelbird Hi-Tech India), ಇಂದು ದೈನಂದಿನ ಸವಾರಿ ಅನುಭವವನ್ನು ಹೆಚ್ಚಿಲು ವಿನ್ಯಾಸಗೊಳಿಸಲಾದ ತನ್ನ ಇತ್ತೀಚಿನ ಸ್ಮಾರ್ಟ್ ರೈಡಿಂಗ್ ತಂತ್ರಜ್ಞಾನವಾದ 'ಬೇಸ್ ಎಕ್ಸ್' (Base X) ಅನ್ನು ಬಿಡುಗಡೆ ಮಾಡಿದೆ. ಸ್ಟೀಲ್ ಬರ್ಡ್ ಫೈಟರ್ ಹೆಲ್ಮೆಟ್ ಶ್ರೇಣಿಯೊಂದಿಗೆ ಸಂಯೋಜಿಸಲ್ಪಟ್ಟ ಬೇಸ್ ಎಕ್ಸ್' ಸಂಪರ್ಕ, ನಿಯಂತ್ರಣ ಮತ್ತು ಅತ್ಯಾಧುನಿಕ ನಾವೀನ್ಯತೆಯನ್ನು ಒಟ್ಟುಗೂಡಿಸುತ್ತದೆ. ಆಧುನಿಕ ಸವಾರರಿಗೆ ಹೊಸ ಸ್ಮಾರ್ಟ್ ತಂತ್ರಜ್ಞಾನವನ್ನು ಪರಿಚಯಿಸುತ್ತದೆ ಎಂದು ಸ್ಟೀಲ್‌ಬರ್ಡ್ ಹೇಳಿದೆ.