ಸುಜುಕಿ ಆಕ್ಸೆಸ್ CNG ಅನಾವರಣ: ಹೋಂಡಾ ಆಕ್ಟೀವಾಗೆ ನಡುಕ ಶುರು

ಡ್ಯುಯಲ್ - ಟ್ಯಾಂಕ್ ಸೆಟಪ್ ಹೊಂದಿರುವ ಸುಜುಕಿ ಆಕ್ಸೆಸ್ ಸಿಎನ್‌ಜಿ/ಸಿಬಿಜಿ ಮೂಲಮಾದರಿಯನ್ನು ಸುಜುಕಿ ಕಂಪನಿ ಇತ್ತೀಚೆಗೆ ಅನಾವರಣಗೊಳಿಸಿದೆ. ಈ ಸ್ಕೂಟರ್‌ನಲ್ಲಿ ಇಂಧನ ನಮ್ಯತೆಗೆ ಒಂದು ಹೊಸ ವಿಧಾನವನ್ನು ಪರಿಚಯಿಸಲಾಗಿದೆ. ಸ್ಕೂಟರ್ ಸೀಟಿನ ಕೆಳಗೆ ಇರಿಸಲಾದ ಕಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್ (CNG) ಅಥವಾ ಕಂಪ್ರೆಸ್ಡ್ ಬಯೋಮೀಥೇನ್ ಗ್ಯಾಸ್ (CBG) ಕ್ಕಾಗಿ 6 - ಲೀಟರ್ ಟ್ಯಾಂಕ್ ಮತ್ತು ಬಾಹ್ಯ ಫಿಲ್ಲರ್ ಕ್ಯಾಪ್ ಹೊಂದಿರುವ ಸಣ್ಣ 2 - ಲೀಟರ್ ಪೆಟ್ರೋಲ್ ಟ್ಯಾಂಕ್ ಒಳಗೊಂಡಿರುವ ಡ್ಯುಯಲ್ - ಟ್ಯಾಂಕ್ ವ್ಯವಸ್ಥೆಯನ್ನು ಒಳಗೊಂಡಿದೆ.

ಸೇಲ್ಸ್‌ನಲ್ಲಿ ನಂ.1 ಕಾರಿದು.. 7 ಲಕ್ಷ, 24 Km ಮೈಲೇಜ್..

ಟಾಟಾ ನೆಕ್ಸಾನ್ (Tata Nexon) ಪ್ರಮುಖ ಎಸ್‌ಯುವಿಯಾಗಿದೆ. ಈ ಸೆಪ್ಟೆಂಬರ್​ನಲ್ಲಿ ಭಾರೀ ಸಂಖ್ಯೆಯಲ್ಲಿ ಮಾರಾಟಗೊಂಡಿದೆ. ಒಟ್ಟು 22,500 ಯುನಿಟ್‌ಗಳನ್ನು ಗ್ರಾಹಕರಿಗೆ ವಿತರಣೆ ಮಾಡಲಾಗಿದೆ. ಇದರೊಂದಿಗೆ ಮಾರಾಟದಲ್ಲಿ ಮೊದಲ ಸ್ಥಾನದಲ್ಲಿದೆ. ನೂತನ 'ನೆಕ್ಸಾನ್' ಕಾರು ರೂ.7.32 ಲಕ್ಷದಿಂದ ರೂ.14.05 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. 1.2-ಲೀಟರ್ ಟರ್ಬೊ ಪೆಟ್ರೋಲ್, 1.5-ಲೀಟರ್ ಡೀಸೆಲ್ ಹಾಗೂ 1.2-ಲೀಟರ್ ಸಿಎನ್‌ಜಿ ಎಂಜಿನ್‌ನ್ನು ಪಡೆದಿದೆ. 17 ರಿಂದ 24 ಕಿ.ಮೀವರೆಗೆ ಮೈಲೇಜ್ ನೀಡುತ್ತದೆ. 5 ಆಸನಗಳನ್ನು ಒಳಗೊಂಡಿದೆ. 10.25 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು 6 ಏರ್‌ಬ್ಯಾಗ್‌ಗಳು ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಪಡೆದಿದೆ.

Aase Actress Priyanka: ಆಸೆ ಸೀರಿಯಲ್ ಮೀನಮ್ಮ ಮನೆಗೆ ಹೊಸ..

ಕನ್ನಡದ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುವ ಜನಪ್ರಿಯ ಧಾರಾವಾಹಿ 'ಆಸೆ'ಯಲ್ಲಿ ನಟಿ ಪ್ರಿಯಾಂಕಾ (Priyanka) ಅಭಿನಯಿಸುತ್ತಿದ್ದಾರೆ. ನಾಯಕಿ ಮೀನಾ ಪಾತ್ರಕ್ಕೆ ಬಣ್ಣ ಹಚ್ಚಿದ್ದು, ದೊಡ್ಡ ಮಟ್ಟದಲ್ಲಿ ಖ್ಯಾತಿಯನ್ನು ಗಳಿಸಿದ್ದಾರೆ. ಈ ಧಾರವಾಹಿಯನ್ನು ನಟ ರಮೇಶ್ ಅರವಿಂದ್ ನಿರ್ಮಾಣ ಮಾಡಿದ್ದಾರೆ. ಸದ್ಯ ಪ್ರಿಯಾಂಕಾ 24ನೇ ವಸಂತಕ್ಕೆ ಕಾಲಿಟ್ಟಿದ್ದು, ಹುಟ್ಟು ಹಬ್ಬವನ್ನು ಕೂಡ ಬಹಳ ಸಂಭ್ರಮ - ಸಡಗರದಿಂದ ಆಚರಿಸಿಕೊಂಡಿದ್ದಾರೆ.

ವಾರದೊಳಗೆ 1,000 ಕ್ಕೂ ಹೆಚ್ಚು ಬುಕಿಂಗ್: ಮುಗಿಬಿದ್ದ ಜನ

ಬೆಂಗಳೂರು ಮೂಲದ ಇವಿ ಸ್ಟಾರ್ಟ್ಅಪ್ ಐಗೋ ವೈಸ್ ಮೊಬಿಲಿಟಿ ತನ್ನ ಪ್ರಮುಖ ಸ್ಮಾರ್ಟ್ ಎಲೆಕ್ಟ್ರಿಕ್ ಸ್ಕೂಟರ್ ಬಿ-ಐಗೋ ಮೂಲಕ ಪ್ರಮುಖ ಮೈಲಿಗಲ್ಲು ಸಾಧಿಸಿದೆ. ಬಿಡುಗಡೆಯಾದ ಒಂದು ವಾರದೊಳಗೆ 1,000 ಕ್ಕೂ ಹೆಚ್ಚು ಮುಂಗಡ ಬುಕಿಂಗ್‌ಗಳನ್ನು ಗಳಿಸಿದೆ. ಕಂಪನಿಯು ಮಾರ್ಚ್ 2026 ರಿಂದ ಬೆಂಗಳೂರು ಮತ್ತು ಹೈದರಾಬಾದ್‌ನಿಂದ ಪ್ರಾರಂಭಿಸಿ ಮೊದಲ 100 ಬುಕಿಂಗ್‌ಗಳಿಗೆ ಆದ್ಯತೆಯ ವಿತರಣೆಗಳನ್ನು ಪ್ರಾರಂಭಿಸಲಿದೆ, ನಂತರ ಇತರ ಪ್ರಮುಖ ಮಾರುಕಟ್ಟೆಗಳಿಗೆ ಕ್ರಮೇಣ ವಿಸ್ತರಣೆಯನ್ನು ಮಾಡುವುದಾಗಿ ಪ್ರಕಟಣೆಯಲ್ಲಿ ತಿಳಿಸಿದೆ.
Advertisement

Suzuki: 170 Km ಮೈಲೇಜ್.. ಹೊಸ ಸುಜುಕಿ ಆಕ್ಸೆಸ್ 125 ಸಿಎನ್‌ಜಿ..

ಸುಜುಕಿ ಆಕ್ಸೆಸ್ 125 (Suzuki Access 125) ಪ್ರಮುಖ ಸ್ಕೂಟರ್ ಆಗಿದೆ. ಇದು ದಿನಬಳಕೆಗೆ ಹೆಚ್ಚು ಸೂಕ್ತವಾಗಿದ್ದು, ಉತ್ತಮ ಸಂಖ್ಯೆಯಲ್ಲಿಯೂ ಮಾರಾಟವಾಗುತ್ತದೆ. ತುಂಬಾ ಚೆನ್ನಾಗಿರುವ ವಿನ್ಯಾಸ ಹೊಂದಿದ್ದು, ಹಲವು ಆಕರ್ಷಕ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಕೈಗೆಟುಕುವ ಬೆಲೆಯಲ್ಲಿಯೂ ಲಭ್ಯವಿದೆ. ಗ್ರಾಹಕರು ಕೂಡ ನಾ ಮುಂದು - ತಾ ಮುಂದು ಎಂಬಂತೆ ಖರೀದಿ ಮಾಡುತ್ತಿದ್ದಾರೆ. ಸದ್ಯ, ಇದೇ ಸ್ಕೂಟರ್ ಸಿಎನ್‌ಜಿ ರೂಪದಲ್ಲಿ ಮಾರಾಟಕ್ಕೆ ಬರಲು ಸಿದ್ಧವಾಗಿದೆ. ಬನ್ನಿ.. ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

ನಿಸ್ಸಾನ್ ಕಾರುಗಳಿಗೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಫುಲ್ ಡಿಮ್ಯಾಂಡ

ನಿಸ್ಸಾನ್ ಮೋಟಾರ್ ಇಂಡಿಯಾ ಭಾರತದಿಂದ 1.2 ಮಿಲಿಯನ್ (ಸುಮಾರು 12 ಲಕ್ಷ ) ವಾಹನಗಳನ್ನು ರಫ್ತು ಮಾಡುವ ಮೂಲಕ ತನ್ನ ರಫ್ತು ಕಾರ್ಯಾಚರಣೆಯಲ್ಲಿ ಮಹತ್ವದ ಮೈಲಿಗಲ್ಲು ಸಾಧಿಸಿರುವುದಾಗಿ ಘೋಷಿಸಿದೆ. ಈ ಸಾಧನೆಯು ನಿಸ್ಸಾನ್ ತನ್ನ 'ಮೇಕ್ ಇನ್ ಇಂಡಿಯಾ, ಮೇಕ್ ಫಾರ್ ದಿ ವರ್ಲ್ಡ್' ತತ್ವಶಾಸ್ತ್ರಕ್ಕೆ ದೃಢವಾದ ಬದ್ಧತೆಯನ್ನು ಒತ್ತಿಹೇಳುತ್ತದೆ. AMIEO (ಆಫ್ರಿಕಾ, ಮಧ್ಯಪ್ರಾಚ್ಯ, ಭಾರತ ಮತ್ತು ಯುರೋಪ್) ದೇಶದಲ್ಲಿ ಕಂಪನಿಗೆ ಕಾರ್ಯತಂತ್ರದ ರಫ್ತು ಕೇಂದ್ರವಾಗಿ ಭಾರತದ ಪ್ರಮುಖ ಪಾತ್ರವನ್ನು ಪುನರುಚ್ಚರಿಸುತ್ತದೆ ಎಂದು ನಿಸ್ಸಾನ್ ಕಂಪನಿ ಹೆಮ್ಮೆ ವ್ಯಕ್ತಪಡಿಸಿದೆ.

Toyota: ಥಾರ್ & ಜಿಮ್ನಿಗೆ ಶಾಕ್.. ರಗಡ್ ಲುಕ್, ಹೊಸ ಟೊಯೊಟಾ..

ಟೊಯೊಟಾ ಮೋಟಾರ್ ಕಾರ್ಪೊರೇಷನ್ (Toyota Motor Corporation), ಟೋಕಿಯೋದಲ್ಲಿ ಏರ್ಪಡಿಸಿರುವ 2025ರ ಜಪಾನ್ ಮೊಬಿಲಿಟಿ ಶೋನಲ್ಲಿ ವಿವಿಧ ಕಾರುಗಳನ್ನು ಪ್ರದರ್ಶಿಸುತ್ತಿದೆ. ಬುಧವಾರ ಹೊಚ್ಚ ಹೊಸ 'ಎಫ್‌ಜೆ ಕ್ರೂಸರ್' ಹೆಸರಿನ ಎಸ್‌ಯುವಿಯನ್ನು ಅನಾವರಣಗೊಳಿಸಿದೆ. ಇದು ತುಂಬಾ ಅಚ್ಚುಕಟ್ಟಾದ ವಿನ್ಯಾಸ ಹೊಂದಿದ್ದು, ಹತ್ತಾರು ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ನೂತನ ಕಾರನ್ನು ವಾಹನ ಪ್ರಿಯರು ಕೂಡ ತೀವ್ರ ಕುತೂಹಲದಿಂದ ವೀಕ್ಷಣೆ ಮಾಡಿದ್ದಾರೆ.

ಎಂಜಿ ಮೋಟಾರ್ ಕಾರುಗಳಲ್ಲಿ PM 2.5 ಏರ್ ಫಿಲ್ಟರ್‌

ಈ ಬಾರಿಯ ಹಬ್ಬಗಳು ಭಾರತದಾದ್ಯಂತ ಸಂತೋಷವನ್ನು ತಂದಿವೆ, ಜೊತೆಗೆ ಪಟಾಕಿ ಸಿಡಿಸುವಿಕೆಯಿಂದ ಉಂಟಾಗುವ ವಾಯು ಮಾಲಿನ್ಯದಲ್ಲಿ ತೀವ್ರ ಏರಿಕೆಯೂ ಆಗಿದೆ. ಪರಿಣಾಮವಾಗಿ ಉಂಟಾಗುವ ಹೊಗೆಯು ಗಾಳಿಯನ್ನು ಮಾಲಿನ್ಯಕಾರಕಗಳಿಂದ ತುಂಬಿಸಿದೆ, ಇದು ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಹಾನಿ ಮಾಡುತ್ತದೆ. ಈ ಬೆಳೆಯುತ್ತಿರುವ ಕಳವಳವನ್ನು ಗುರುತಿಸಿ, JSW MG ಮೋಟಾರ್ ಇಂಡಿಯಾ ತನ್ನ ಕಾರುಗಳಲ್ಲಿ ಸುಧಾರಿತ PM 2.5 ಏರ್ ಫಿಲ್ಟರ್‌ಗಳು ಮತ್ತು ಏರ್ ಪ್ಯೂರಿಫೈಯರ್‌ಗಳ ಮೂಲಕ ಗ್ರಾಹಕರು ತಮ್ಮ ವಾಹನಗಳ ಒಳಗೆ ಶುದ್ಧ ಗಾಳಿಯನ್ನು ಉಸಿರಾಡಲು ಸಹಾಯ ಮಾಡುತ್ತಿದೆ.

ಹೋಂಡಾ ಮಾಸ್ಟರ್ ಪ್ಲಾನ್‌ಗೆ ವಿಶ್ವ ಆಟೋ ವಲಯ ಶಾಕ್

ಹೋಂಡಾ ಮೋಟಾರ್ ಕಂಪನಿ ಲಿಮಿಟೆಡ್ ಇಂದು ಜಪಾನ್ ಮೊಬಿಲಿಟಿ ಶೋ 2025 ರಲ್ಲಿ ಹೋಂಡಾ 0 α (ಆಲ್ಫಾ) ಎಂಬ ಮುಂದಿನ ಪೀಳಿಗೆಯ EV ಮೂಲಮಾದರಿಯ (prototype) ವಿಶ್ವ ಪ್ರಥಮ ಪ್ರದರ್ಶನವನ್ನು ಪ್ರಸ್ತುತಪಡಿಸಲಿದೆ. ಈ ಮೂಲಮಾದರಿಯು ಪ್ರದರ್ಶನದ ಅವಧಿಯಲ್ಲಿ ಹೋಂಡಾ ಬೂತ್‌ನಲ್ಲಿ ಪ್ರದರ್ಶಿಸಲ್ಪಡುತ್ತದೆ ಎಂದು ತಿಳಿಸಿದೆ. ಮಾದ್ಯಮಗಳಿಗಾಗಿ ಅಕ್ಟೋಬರ್ 29 - 30 ರಂದು ಮುಕ್ತವಾಗಿರಲಿದೆ, ಸಾರ್ವಜನಿಕರಿಗಾಗಿ ಅಕ್ಟೋಬರ್ 31 ರಿಂದ ನವೆಂಬರ್ 9 ರವರೆಗೆ ಪ್ರದರ್ಶನಕ್ಕೆ ಇಡಲಾಗುವುದು ಎಂದು ಹೋಂಡಾ ತಿಳಿಸಿದೆ.

Suzuki: ಜನ ಕ್ಯೂ ನಿಲ್ಲುವರು.. ಖರ್ಚು ಕಮ್ಮಿ, ದುಡ್ಡು ಉಳಿತಾಯ..

ಮಾರುತಿ ಸುಜುಕಿ ಇಂಡಿಯಾದ ಮಾತೃ ಸಂಸ್ಥೆ ಸುಜುಕಿ ಮೋಟಾರ್ ಕಾರ್ಪೊರೇಷನ್ (Suzuki Motor Corporation), ಸ್ವಂತ ದೇಶ ಜಪಾನ್‌ನಲ್ಲಿ ಆಯೋಜಿಸರುವ 'ಮೋಟಾರ್ ಶೋ'ನಲ್ಲಿ ವಿವಿಧ ಕಾರುಗಳನ್ನು ಪ್ರದರ್ಶಿಸುತ್ತಿದೆ. ಅದರ ಭಾಗವಾಗಿ, ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿರುವ 'ಮಾರುತಿ ಸುಜುಕಿ ವಿಕ್ಟೋರಿಸ್' ಎಸ್‌ಯುವಿಯನ್ನು ಹೊಸ ಇಂಧನ ಆಯ್ಕೆಯಲ್ಲಿ ಅನಾವರಣಗೊಳಿಸಿದೆ. ನೂತನ ಕಾರಿಗೆ 'ಸುಜುಕಿ ವಿಕ್ಟೋರಿಸ್' ಎಂಬ ಹೆಸರನ್ನು ಇಡಲಾಗಿದೆ.

ಸುಧಾರಿತ 2-ವೇ ಮತ್ತು 3-ವೇ ಕಾರ್ ಡ್ಯಾಶ್ ಕ್ಯಾಮ್ DVR ಬಿಡುಗಡೆ

ಭಾರತೀಯ ರಸ್ತೆಗಳಲ್ಲಿ ಹೆಚ್ಚುತ್ತಿರುವ ವಾಹನಗಳ ಸಂಖ್ಯೆಯೊಂದಿಗೆ, ರಸ್ತೆ ಸುರಕ್ಷತೆಯು ಪ್ರಮುಖ ಕಳವಳಕಾರಿಯಾಗಿ ಮುಂದುವರೆದಿದೆ. ಬ್ಲೈಂಡ್ ಸ್ಪಾಟ್‌ಗಳು, ಅಜಾಗರೂಕ ಚಾಲನೆ ಮತ್ತು ವಿವಿಧ ಕೋನಗಳಲ್ಲಿ ಸೀಮಿತ ಗೋಚರತೆಯಿಂದಾಗಿ ಅಪಘಾತಗಳು ಹೆಚ್ಚಾಗಿ ಸಂಭವಿಸುತ್ತವೆ. ಕಾರಿನೊಳಗಿನ ಸುರಕ್ಷತಾ ತಂತ್ರಜ್ಞಾನದ ಬಗ್ಗೆ ಅರಿವು ಬೆಳೆದಂತೆ, ಅಪಘಾತಗಳ ಸಂದರ್ಭದಲ್ಲಿ ವೈಯಕ್ತಿಕ ಸುರಕ್ಷತೆ ಮತ್ತು ವಿಶ್ವಾಸಾರ್ಹ ಪುರಾವೆ ಎರಡಕ್ಕೂ ಡ್ಯಾಶ್ ಕ್ಯಾಮ್‌ಗಳು ಅತ್ಯಗತ್ಯ ಪರಿಕರವಾಗಿವೆ. ಜಾಗತಿಕ ಡ್ಯಾಶ್ ಕ್ಯಾಮ್ ಮಾರುಕಟ್ಟೆ ವೇಗವಾಗಿ ವಿಸ್ತರಿಸುತ್ತಿದೆ, ಮಲ್ಟಿ-ಆಂಗಲ್ ರೆಕಾರ್ಡಿಂಗ್, ವೈಫೈ ಸಂಪರ್ಕ ಮತ್ತು ಸುಧಾರಿತ ಸೆನ್ಸಾರ್‌ಗಳಂತಹ ವೈಶಿಷ್ಟ್ಯಗಳಿಂದ ಬೇಡಿಕೆ ಹೆಚ್ಚುತ್ತಿದೆ.

ಭಾರತದ ಸ್ಕೂಟರ್‌ಗಳ ರಾಜ! ನಂ.1 ಹೋಂಡಾ ಆಕ್ಟಿವಾಗೆ ಫುಲ್ ಡಿಮ್ಯಾಂಡ್..

ಹೋಂಡಾ ಆಕ್ಟಿವಾ (Honda Activa) ನಂಬರ್ 1 ಸ್ಕೂಟರ್ ಎಂದೇ ಮನೆ ಮಾತಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ. ಇದು ಅತ್ಯಾಕರ್ಷಕವಾದ ವಿನ್ಯಾಸ ಹೊಂದಿದ್ದು, ಹತ್ತಾರು ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಕೈಗೆಟುಕುವ ಬೆಲೆಯಲ್ಲಿಯೂ ಸಿಗುತ್ತದೆ. ಗ್ರಾಹಕರು ಕೂಡ ನಾ ಮುಂದು - ತಾ ಮುಂದು ಎಂಬಂತೆ ಖರೀದಿ ಮಾಡುತ್ತಿದ್ದಾರೆ. ಸದ್ಯ, ಈ ಸ್ಕೂಟರ್ ಮಾರಾಟದಲ್ಲಿ ಹೊಸ ಇತಿಹಾಸ ಬರೆಯಲಾಗಿದೆ. ಬನ್ನಿ.. ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.
Advertisement

34 Km ಮೈಲೇಜ್, 4.99 ಲಕ್ಷ.. ಹೊಸ Maruti WagonR ಖರೀದಿಸಬೇಕೇ..

ಮಾರುತಿ ಸುಜುಕಿ ವ್ಯಾಗನ್ಆರ್ (Maruti Suzuki WagonR) ಪ್ರಮುಖ ಹ್ಯಾಚ್‌ಬ್ಯಾಕ್ ಆಗಿದೆ. ಇದು ಪ್ರತಿ ತಿಂಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿಯೂ ಮಾರಾಟವಾಗುತ್ತದೆ. ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿ ಮಾಡುತ್ತಿದ್ದಾರೆ. ರೂ.4.99 ಲಕ್ಷದಿಂದ ರೂ.6.95 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ನೀವು ಹೊಚ್ಚ ಹೊಸ ಕಾರೊಂದನ್ನು ಕೊಂಡುಕೊಳ್ಳಲು ಆಲೋಚಿದ್ದೀರಾ.. ಹಾಗಾದರೆ 'ವ್ಯಾಗನ್ಆರ್' ಅತ್ಯುತ್ತಮ ಆಯ್ಕೆಯಾಗಿದೆ. ಇಲ್ಲಿ ಈ ಹ್ಯಾಚ್‌ಬ್ಯಾಕ್‌ನ ಆನ್-ರೋಡ್ ಬೆಲೆ, ಸಾಲ, ಬಡ್ಡಿ ದರ ಮತ್ತು ತಿಂಗಳ ಇಎಂಐ ಆಯ್ಕೆಯ ಕುರಿತಂತೆ ಸಂಕ್ಷಿಪ್ತವಾಗಿ ತಿಳಿಸಿಕೊಟ್ಟಿದ್ದೇವೆ.

ಎರಡನೇ ಅತಿದೊಡ್ಡ 12 ಮೀಟರ್ ಎಲೆಕ್ಟ್ರಿಕ್ ಬಸ್ಸುಗಳು ಸೇವೆಗೆ ಸಜ್ಜು

ಮುಂಬೈನ ಸುಸ್ಥಿರ ಸಾರ್ವಜನಿಕ ಸಾರಿಗೆ ಪರಿವರ್ತನೆಯನ್ನು ಬಲಪಡಿಸುವ ಸಲುವಾಗಿ, PMI ಎಲೆಕ್ಟ್ರೋ ಮೊಬಿಲಿಟಿಯ ಮುಂಬಾದೇವಿ ಮೊಬಿಲಿಟಿ, ಬೆಸ್ಟ್ ಜೊತೆಗಿನ ಪಾಲುದಾರಿಕೆಯಲ್ಲಿ ನಗರಕ್ಕಾಗಿ ಎರಡನೇ ಬ್ಯಾಚ್ ಎಲೆಕ್ಟ್ರಿಕ್ ಬಸ್‌ಗಳನ್ನು ಬಿಡುಗಡೆ ಮಾಡಿದೆ. ಕೊಲಾಬಾ ಡಿಪೋದ ಬೆಸ್ಟ್ ಕಚೇರಿಯಲ್ಲಿ ನಡೆದ ಅಧಿಕೃತ ಸಮಾರಂಭದಲ್ಲಿ, ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮತ್ತು ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಸಮ್ಮುಖದಲ್ಲಿ ಇಂದು ನಾಲ್ಕು ಸಂಪೂರ್ಣ ವಿದ್ಯುತ್ ಚಾಲಿತ 12-ಮೀಟರ್ ಉದ್ದದ ಬಸ್‌ಗಳಿಗೆ ಹಸಿರು ನಿಶಾನೆ ತೋರಿಸಲಾಯಿತು.

ಮಹೀಂದ್ರಾ ಕಾರನ್ನು ಬಳಸಲು ಸ್ಯಾಮ್‌ಸಂಗ್ ಫೋನ್ ಇದ್ದರೆ ಸಾಕು

ಭಾರತದ ಅತಿದೊಡ್ಡ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ ಆಗಿರುವ ಸ್ಯಾಮ್‌ಸಂಗ್, ಇಂದು ಸ್ಯಾಮ್‌ಸಂಗ್ ವಾಲೆಟ್ ಮೂಲಕ ಮಹೀಂದ್ರಾ ಎಲೆಕ್ಟ್ರಿಕ್ ಒರಿಜಿನ್ ಎಸ್‌ಯುವಿಗಳೊಂದಿಗೆ ಡಿಜಿಟಲ್ ಕಾರ್ ಕೀ ಹೊಂದಾಣಿಕೆಯನ್ನು ಬಿಡುಗಡೆ ಮಾಡಿದೆ. ಇದು ಹೆಚ್ಚಿನ ಕಾರು ಮಾಲೀಕರಿಗೆ ತಮ್ಮ ಗ್ಯಾಲಕ್ಸಿ ಸ್ಮಾರ್ಟ್‌ಫೋನ್‌ಗಳನ್ನು ಅನ್‌ಲಾಕ್ ಮಾಡಲು, ಲಾಕ್ ಮಾಡಲು ಮತ್ತು ಸ್ಟಾರ್ಟ್ ಮಾಡಲು ಬಳಸಲು ಸುಲಭವಾದ ಮಾರ್ಗವನ್ನು ನೀಡುತ್ತದೆ. ಗ್ಯಾಲಕ್ಸಿ ಫೋನ್‌ಗಳಲ್ಲಿ ನೇರವಾಗಿ ನಿರ್ಮಿಸಲಾದ ಸ್ಯಾಮ್‌ಸಂಗ್ ವಾಲೆಟ್‌ನ ಡಿಜಿಟಲ್ ಕಾರ್ ಕೀ ಬಳಕೆದಾರರಿಗೆ ಭೌತಿಕ ಕೀ ಇಲ್ಲದೆ ವಾಹನವನ್ನು ಲಾಕ್ ಮಾಡಲು, ಅನ್‌ಲಾಕ್ ಮಾಡಲು ಮತ್ತು ಸ್ಟಾರ್ಟ್ ಮಾಡಲು ಅನುಮತಿಸುತ್ತದೆ ಎಂದು ಕಂಪನಿ ತಿಳಿಸಿದೆ.

Ducati: ಕಾರನ್ನು ಮೀರಿಸುವ ಫೀಚರ್ಸ್.. ಹೊಸ ಡುಕಾಟಿ ಪ್ಯಾನಿಗೇಲ್..

ಇಟಾಲಿ ಮೂಲದ ಡುಕಾಟಿ (Ducati) ಜನಪ್ರಿಯ ಮೋಟಾರ್‌ಸೈಕಲ್‌ ಬ್ರ್ಯಾಂಡ್ ಆಗಿದೆ. ದೇಶೀಯ ಮಾರುಕಟ್ಟೆಯಲ್ಲಿ ದುಬಾರಿ ಬೆಲೆಯ ವಿವಿಧ ಬೈಕ್‌ಗಳನ್ನು ಮಾರಾಟಗೊಳಿಸುತ್ತಿದೆ. ಶ್ರೀಮಂತ ಗ್ರಾಹಕರು ನಾ ಮುಂದು - ತಾ ಮುಂದು ಎಂಬಂತೆ ಖರೀದಿ ಮಾಡುತ್ತಿದ್ದಾರೆ. ಸದ್ಯ, ಕಂಪನಿಯು ಒಂದಷ್ಟು ನವೀಕರಣಕ್ಕೆ ಒಳಪಡಿಸಲಾದ 2025ರ ಹೊಚ್ಚ ಹೊಸ 'ಪ್ಯಾನಿಗೇಲ್ ವಿ2' ಮೋಟಾರ್‌ಸೈಕಲ್‌ನ್ನು ಅದ್ದೂರಿಯಾಗಿ ಬಿಡುಗಡೆಗೊಳಿಸಿದೆ. ಬನ್ನಿ, ಈ ಬೈಕ್‌ನ ಬೆಲೆ ಎಷ್ಟು.. ಕಾರ್ಯಕ್ಷಮತೆ ಹೇಗಿದೆ.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.

Driverless Car: ಬೆಂಗಳೂರಿನಲ್ಲಿ ಜನರಿದ್ದ ಚಾಲಕ ರಹಿತ ಕಾರು..

ಇಲ್ಲೊಂದು ಕಾರು ಡ್ರೈವರ್ ಇಲ್ಲದೆಯೇ ಚಲಿಸಿದೆ. ಈ ದೃಶ್ಯಗಳನ್ನು ಕಂಡ ಅಲ್ಲಿದ್ದವರೂ ಕ್ಷಣಕಾಲ ಆಶ್ಚರ್ಯಚಕಿತರಾಗಿದ್ದಾರೆ. ಅಷ್ಟಕ್ಕೂ ಈ ಕಾರು ಕಾಣಿಸಿಕೊಂಡಿರುವುದು ಎಲ್ಲಿ ಅಂದುಕೊಂಡಿದ್ದೀರಾ.. ಅದುವೇ ನಮ್ಮ ಐಟಿ ಸಿಟಿ ಬೆಂಗಳೂರಿನ ಆರ್‌ವಿ ಎಂಜಿನಿಯರಿಂಗ್‌ ಕಾಲೇಜು ಆವರಣದಲ್ಲಿ.. ಸದ್ಯ ಅದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲೂ ಸಖತ್ ವೈರಲ್ ಆಗುತ್ತಿದ್ದು, ನೋಡುಗರಲ್ಲೂ ತೀವ್ರ ಕುತೂಹಲವನ್ನು ಹುಟ್ಟು ಹಾಕುತ್ತಿದೆ.

ಬೆಂಗಳೂರಿಗೆ ಟನಲ್‌ ರೋಡ್ ಬೇಡವಂತೆ! ಸಂಸದರ ಮಾಸ್ಟರ್ ಪ್ಲಾನ್!

ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಆಧುನಿಕ ಪರಿಹಾರವಾಗಿ ಟ್ರಾಮ್‌ಗಳನ್ನು ಪರಿಚಯಿಸುವ ಪ್ರಸ್ತಾಪವನ್ನು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಪ್ರಸ್ತಾಸಿದ್ದಾರೆ. ಇದಕ್ಕಾಗಿ ನಗರ ಮತ್ತು ಹೊರ ವರ್ತುಲ ರಸ್ತೆ (ORR) ಮೇಲೆ ನಿರ್ದಿಷ್ಟ ಗಮನ ಹರಿಸಲಾಗಿದೆ. ಈ ಉಪಕ್ರಮವು ನಗರದ ಚೌಕಟ್ಟಿನಲ್ಲಿ ಟ್ರಾಮ್‌ಗಳನ್ನು ಪರಿಚಯಿಸುವ ಮೂಲಕ ನಿರಂತರ ಸಾರಿಗೆ ಸವಾಲುಗಳು ಮತ್ತು ದಟ್ಟಣೆಯನ್ನು ಪರಿಹರಿಸುವ ಗುರಿಯನ್ನು ಹೊಂದಿದೆ. ತೇಜಸ್ವಿ ಸೂರ್ಯ ಮತ್ತು ನಗರ/ರಾಜ್ಯ ಅಧಿಕಾರಿಗಳ ನಡುವೆ ಚರ್ಚೆಗಳು ನಡೆಯುತ್ತಿವೆ, ಬೆಂಗಳೂರಿನ ಚಲನಶೀಲತಾ ಕಾರ್ಯತಂತ್ರವನ್ನು ಪರಿಷ್ಕರಿಸಲು ಮತ್ತಷ್ಟು ಪಾಲುದಾರರ ಸಭೆಗಳನ್ನು ಯೋಜಿಸಲಾಗಿದೆ ಎಂದು ವರದಿಯಾಗಿದೆ.

Hyundai: ನವೆಂಬರ್ 4ಕ್ಕೆ ಬಿಡುಗಡೆಯಾಗಲಿದೆ ರಗಡ್ SUV

ಪ್ರಮುಖ ಕಾರು ತಯಾರಕರಾದ ಹುಂಡೈ ಕಂಪನಿಯು ತನ್ನ ಹೊಸ ಜೆನ್ ಹುಂಡೈ ವೆನ್ಯೂ (Hyundai VENUE) ಅನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಹೊಸ ಹುಂಡೈ ವೆನ್ಯೂ ನವೆಂಬರ್ 4, 2025 ರಂದು ದೇಶದಲ್ಲಿ ಅಧಿಕೃತವಾಗಿ ಪಾದಾರ್ಪಣೆ ಮಾಡಲಿದೆ ಎಂದು ಕಂಪನಿ ಘೋಷಿಸಿದೆ. ಸಂಸ್ಕರಿಸಿದ ಪರ್ಫಾಮೆನ್ಸ್ ಮತ್ತು ಬಹು ಪವರ್‌ಟ್ರೇನ್ ಆಯ್ಕೆಗಳೊಂದಿಗೆ ಸಾಟಿಯಿಲ್ಲದ ಚಾಲನಾ ಅನುಭವವನ್ನು ನೀಡಲು ವಿನ್ಯಾಸಗೊಳಿಸಲಾದ ಹೊಸ ಹುಂಡೈ ವೆನ್ಯೂವನ್ನು ಉಲ್ಲಾಸಕರ ಅನುಭವವನ್ನು ನೀಡಲು ನಿರ್ಮಿಸಲಾಗಿದೆ. ಇದು ಪ್ರತಿ ಡ್ರೈವ್ ಅನ್ನು ಆಟದ ಮೈದಾನವನ್ನಾಗಿ ಪರಿವರ್ತಿಸುತ್ತದೆ ಎಂದು ಹ್ಯುಂಡೈ ಹೇಳಿದೆ.

Tata: ಜನ ಶೋರೂಂ ಕ್ಯೂ ನಿಲ್ಲುವರು.. ಈ ನವೆಂಬರ್‌ನಲ್ಲಿ ಟಾಟಾದಿಂದ..

ಟಾಟಾ ಮೋಟಾರ್ಸ್ (Tata Motors), ಜನಪ್ರಿಯ ಸ್ವದೇಶಿ ವಾಹನ ತಯಾರಕ ಕಂಪನಿಯಾಗಿದೆ. ದೇಶೀಯವಾಗಿ ಟಿಯಾಗೊ, ಟಿಗೂರ್, ಅಲ್ಟೋಜ್, ಪಂಚ್ ಹಾಗೂ ಕರ್ವ್ ಸೇರಿದಂತೆ ವಿವಿಧ ಕಾರುಗಳ ಯಶಸ್ವಿಯಾಗಿ ಮಾರಾಟಗೊಳಿಸುತ್ತಿದೆ. ಈ ನವೆಂಬರ್‌ನಲ್ಲಿ 3 ಹೊಚ್ಚ ಹೊಸ ಕಾರುಗಳನ್ನು ಬಿಡುಗಡೆಗೊಳಿಸಲು ಕಂಪನಿಯು ತಯಾರಿ ಮಾಡಿಕೊಳ್ಳುತ್ತಿದೆ. ಸಿಯೆರಾದೊಂದಿಗೆ ಪೆಟ್ರೋಲ್ ಚಾಲಿತ ಸಫಾರಿ ಹಾಗೂ ಹ್ಯಾರಿಯರ್ ಎಸ್‌ಯುವಿಗಳನ್ನು ಅದ್ದೂರಿಯಾಗಿ ಬಿಡುಗಡೆಗೊಳಿಸಲಿದೆ ಎಂದು ವರದಿಯಾಗಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.
Advertisement

1,000 ಜನರಿಗೆ 1,600 ಕ್ಕೂ ಹೆಚ್ಚು ಕಾರುಗಳಿವೆ

"ಕಾರು ಸಾಂದ್ರತೆ" ಎಂದರೆ ಒಂದು ದೇಶದಲ್ಲಿ ಪ್ರತಿ 1,000 ಜನರಿಗೆ ಇರುವ ಪ್ರಯಾಣಿಕ ಕಾರುಗಳ ಸಂಖ್ಯೆಯನ್ನು ಸೂಚಿಸುತ್ತದೆ. ರಾಷ್ಟ್ರೀಯ ಸಂಪತ್ತು, ಭೂಪ್ರದೇಶ, ಮೂಲಸೌಕರ್ಯ ಮತ್ತು ಸ್ಥಳೀಯ ನಿಯಮಗಳಂತಹ ಅಂಶಗಳಿಂದ ನಡೆಸಲ್ಪಡುವ ಕಾರು ಸಾಂದ್ರತೆಯಲ್ಲಿನ ಗಮನಾರ್ಹ ವ್ಯತ್ಯಾಸಗಳನ್ನು ದತ್ತಾಂಶವು ಬಹಿರಂಗಪಡಿಸುತ್ತದೆ. ಕಾರು ಸಾಂದ್ರತೆಯ ಶ್ರೇಯಾಂಕಗಳ ಪಟ್ಟಿಯಲ್ಲಿ ಸಣ್ಣ ದೇಶಗಳಾದರೂ ಶ್ರೀಮಂತ ಯುರೋಪಿಯನ್ ಸಂಸ್ಥಾನಗಳು ಮತ್ತು ದ್ವೀಪ ರಾಷ್ಟ್ರಗಳು ಅಗ್ರಸ್ಥಾನ ಪಡೆದಿವೆ. ಪ್ರಸ್ತುತ 2025 ರಲ್ಲಿ ಅತಿ ಹೆಚ್ಚು ಕಾರು ಸಾಂದ್ರತೆ ಹೊಂದಿರುವ ದೇಶಗಳನ್ನು ನೋಡೋಣ.

Suzuki: ಕೆಲವೇ ದಿನಗಳಲ್ಲಿ ಅಗ್ಗದ ಸುಜುಕಿ ಆಕ್ಸೆಸ್ ಇ-ಸ್ಕೂಟರ್..

ಸುಜುಕಿ ಆಕ್ಸೆಸ್ 125 (Suzuki Access 125) ಜಗಮೆಚ್ಚಿದ ಎಲೆಕ್ಟ್ರಿಕ್ ಸ್ಕೂಟರ್ ಆಗಿದ್ದು, ಪ್ರತಿ ತಿಂಗಳು ಉತ್ತಮ ಸಂಖ್ಯೆಯಲ್ಲಿಯೂ ಮಾರಾಟವಾಗುತ್ತಿದೆ. ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿ ಮಾಡುತ್ತಿದ್ದಾರೆ. ಇದೇ ಸ್ಕೂಟರ್‌ನ್ನು ಎಲೆಕ್ಟ್ರಿಕ್ ರೂಪದಲ್ಲೂ ಮಾರಾಟಕ್ಕೆ ತರಲು ಕಂಪನಿಯು ಹಣಿಯಾಗಿದೆ. ಎಲ್ಲವು ಅಂದುಕೊಂಡಂತೆ ನಡೆದರೆ, ಕೆಲವೇ ದಿನಗಳಲ್ಲಿ 'ಹೋಂಡಾ ಆಕ್ಟಿವಾ ಇ' ಪ್ರತಿಸ್ಪರ್ಧಿಯಾದ ಹೊಚ್ಚ ಹೊಸ 'ಸುಜುಕಿ ಇ ಆಕ್ಸೆಸ್' ಅದ್ದೂರಿಯಾಗಿಯೂ ಬಿಡುಗಡೆಯಾಗಲಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

ಹೊಸದಾಗಿ ಬಿಡುಗಡೆಯಾದ ಕಿಯಾ ಕಾರೆನ್ಸ್ ಸಿಎನ್‌ಜಿ ವಿಶೇಷತೆಗಳು

ಹೊಸದಾಗಿ ಬಿಡುಗಡೆಯಾದ ಕಿಯಾ ಕಾರೆನ್ಸ್ ಸಿಎನ್‌ಜಿ ಭಾರತದಲ್ಲಿ ಜನಪ್ರಿಯತೆ ಪಡೆಯುತ್ತಿದೆ. ಕಾರೆನ್ಸ್ ಪ್ರೀಮಿಯಂ (ಒ) ಪೆಟ್ರೋಲ್ ಟ್ರಿಮ್‌ನಲ್ಲಿ ಡೀಲರ್-ಫಿಗೇಟೆಡ್ ಆಯ್ಕೆಯಾಗಿ ನೀಡಲಾಗುತ್ತದೆ. ಇದು 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಯಾಗಿರುವ 1.5-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್‌ನೊಂದಿಗೆ ಬರುತ್ತದೆ. ಗಮನಾರ್ಹವಾಗಿ, ಸಿಎನ್‌ಜಿ ಕಿಟ್ ಅನ್ನು ಲೊವಾಟೋ ಪೂರೈಸಲಿದ್ದು, ಕಿಯಾ ಡೀಲರ್ ಶಿಪ್ ಗಳು ಅವನ್ನು ಅಳವಡಿಸುತ್ತವೆ. 3-ವರ್ಷ/1,00,000 ಕಿ.ಮೀ ಥರ್ಡ್-ಪಾರ್ಟಿ ವಾರಂಟಿಯೊಂದಿಗೆ ಬರುತ್ತದೆ. ಪ್ರಮುಖ ಮುಖ್ಯಾಂಶಗಳು ಈ ಕೆಳಗಿನವುಗಳನ್ನು ಒಳಗೊಂಡಿವೆ.

34 Km ಮೈಲೇಜ್.. 3.70 ಲಕ್ಷ, ಬಡವರ ಬಂಡಿ ಮಾರುತಿ ಆಲ್ಟೊ ಕೆ10ಗೆ..

ಮಾರುತಿ ಸುಜುಕಿ ಆಲ್ಟೊ ಕೆ10 (Maruti Suzuki Alto K10), ಪ್ರಮುಖ ಹ್ಯಾಚ್‌ಬ್ಯಾಕ್ ಎಂದೇ ಹೆಸರುವಾಸಿಯಾಗಿದೆ. ಇದು ರೂ.3.70 ಲಕ್ಷದಿಂದ ರೂ.5.45 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. 1-ಲೀಟರ್ ಪೆಟ್ರೋಲ್ ಮತ್ತು ಸಿಎನ್‌ಜಿ ಎಂಜಿನ್‌ನ್ನು ಆಯ್ಕೆಯನ್ನು ಒಳಗೊಂಡಿದೆ. 24 ರಿಂದ 34 ಕಿ.ಮೀವರೆಗೆ ಮೈಲೇಜ್ ಕೊಡುತ್ತದೆ. 5 ಆಸನಗಳನ್ನು ಒಳಗೊಂಡಿದೆ. ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ (7 ಇಂಚು), ಸೆಮಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, 4-ಸ್ಪೀಕರ್‌ ಮ್ಯೂಸಿಕ್ ಸಿಸ್ಟಮ್ ಹಾಗೂ ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್‌ಗಳು ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ. ಸುರಕ್ಷತೆಗಾಗಿ 6 ಏರ್‌ಬ್ಯಾಗ್‌ಗಳು ಮತ್ತು 3-ಪಾಯಿಂಟ್ ಸೀಟ್ ಬೆಲ್ಟ್‌ಗಳನ್ನು ತನ್ನದಾಗಿಸಿಕೊಂಡಿದೆ.

ಇದೇ ಬಲಭೀಮ.. ರಗಡ್ ಲುಕ್‌ನ ಟೊಯೊಟಾ ಕಾರು ಖರೀದಿಸಿದ ಖ್ಯಾತ ನಟ!

ಬಾಲಿವುಡ್‌ ಹಿರಿಯ ನಟ ಜಾಕಿ ಶ್ರಾಫ್ (Jackie Shroff) ಅವರು, 68ರ ವಯಸ್ಸಿನಲ್ಲೂ ಫುಲ್ ಆಕ್ಟಿವ್ ಆಗಿದ್ದಾರೆ. ಹಿಂದಿ ಮಾತ್ರವಲ್ಲದೆ ತಮಿಳು, ತೆಲುಗು, ಮಲಯಾಳಂ, ಬಂಗಾಳಿ, ಮರಾಠಿ, ಪಂಜಾಬಿ ಸೇರಿದಂತೆ 13 ಭಾರತೀಯ ಭಾಷೆಗಳ ಸಿನಿಮಾಗಳಲ್ಲಿಯೂ ಅಭಿನಯಿಸಿದ್ದಾರೆ. ಜಾಕಿ ಶ್ರಾಫ್ ಅವರಿಗೆ ಕಾರುಗಳ ಮೇಲೆಯೂ ವಿಶೇಷ ಪ್ರೀತಿಯಿದೆ. ದುಬಾರಿ ಬೆಲೆಯ ಐಷಾರಾಮಿ ಬಿಎಂಡಬ್ಲ್ಯು ಎಂ5, ಜೀಪ್ ಕಂಪಾಸ್, ಫಿಯೆಟ್ 1000, ಜಾಗ್ವಾರ್ ಎಕ್ಸ್‌ಕೆ ಹಾಗೂ ಇಸುಜು ವಿ-ಕ್ರಾಸ್‌ನ ಮಾಲೀಕರಾಗಿದ್ದಾರೆ.