ದೀಪಾವಳಿಗೆ ಸಿಕ್ಕ ಬೋನಸ್‌ ಅನ್ನು ಎಲ್ಲಿ ಹೂಡಿಕೆ ಮಾಡ್ಬೇಕು ಗೊತ್ತಾ?

2025 ರ ದೀಪಾವಳಿಯ ನಂತರ ನಿಮ್ಮ 10 ಲಕ್ಷ ಬೋನಸ್‌ಗಾಗಿ ಉತ್ತಮ ಹೂಡಿಕೆ ಆಯ್ಕೆಗಳನ್ನು ಅನ್ವೇಷಿಸಿ. ವೈವಿಧ್ಯೀಕರಣ ಮತ್ತು ದೀರ್ಘಾವಧಿಯ ತಂತ್ರಗಳ ಬಗ್ಗೆ ತಜ್ಞರಿಂದ ತಿಳಿಯಿರಿ.

ಆನ್‌ಲೈನ್‌ನಲ್ಲಿ ಈಸಿಯಾಗಿ ಪಿಪಿಎಫ್‌ ಹಣ ಹೀಗೆ ಹಿಂಪಡೆಯಿರಿ!

ಪರಿಣಾಮಕಾರಿ ನಿರ್ವಹಣೆಗಾಗಿ ಪ್ರಮುಖ ನಿಯಮಗಳು ಮತ್ತು ಮಾರ್ಗಸೂಚಿಗಳನ್ನು ಒಳಗೊಂಡಂತೆ, ಭಾರತದಲ್ಲಿ ನಿಮ್ಮ PPF ಖಾತೆಯಿಂದ ಹಿಂಪಡೆಯುವ ಹಂತ-ಹಂತದ ಪ್ರಕ್ರಿಯೆಯನ್ನು ಅನ್ವೇಷಿಸಿ.

ಸ್ಪೋರ್ಟಿ ಲುಕ್... ಹೆಚ್ಚಿನ ಮೈಲೇಜ್... ಬಜಾಜ್ ಪಲ್ಸರ್ NS125

2025 ಬಜಾಜ್ ಪಲ್ಸರ್ NS125 ತನ್ನ ಸ್ಪೋರ್ಟಿ ಪರ್ಫಾಮೆನ್ಸ್, ಆಧುನಿಕ ತಂತ್ರಜ್ಞಾನ ಮತ್ತು 125 ಸಿಸಿ ವಿಭಾಗದಲ್ಲಿ ಮೌಲ್ಯಯುತ ವೈಶಿಷ್ಟ್ಯಗಳನ್ನು ಹೊಂದಿದೆ. ಅಲ್ಲದೆ ಹೊಸ ಅಪ್‌ಡೇಟ್‌ಗಳೊಂದಿಗೆ 125 ಸಿಸಿ ವಿಭಾಗದಲ್ಲಿ, ಬಜಾಜ್ ಪಲ್ಸರ್ NS125 ಮೋಟಾರ್‌ಸೈಕಲ್ ಈಗ ಬ್ಲೂಟೂತ್ ಮತ್ತು ABS ನಂತಹ ಆಧುನಿಕ ತಂತ್ರಜ್ಞಾನದ ನವೀಕರಣಗಳೊಂದಿಗೆ TVS ರೈಡರ್ 125, ಹೀರೋ ಎಕ್ಸ್‌ಟ್ರೀಮ್ 125R, ಮತ್ತು ಹೋಂಡಾ SP125 ನಂತಹ ಬೈಕ್‌ಗಳಿಗೆ ಪ್ರಮುಖ ಪ್ರತಿಸ್ಪರ್ಧಿಯಾಗಿದೆ. ಈ ಬೈಕ್ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.

ಭಾರತದಲ್ಲಿ ಹೊಸ ಕಾರು ಕಂಪನಿಯ ಜೋರು: ಡೆಲಿವರಿ ಆರಂಭ

ವಿನ್‌ಫಾಸ್ಟ್ (VinFast) ತನ್ನ ಎಲೆಕ್ಟ್ರಿಕ್ ಎಸ್‌ಯುವಿಗಳಾದ ವಿಎಫ್6 ಮತ್ತು ವಿಎಫ್7 ಕಾರುಗಳ ವಿತರಣೆಯನ್ನು ಭಾರತದಲ್ಲಿ ಪ್ರಾರಂಭಿಸಿದೆ. ಎರಡೂ ಮಾಡಲ್‌ಗಳನ್ನು ತಮಿಳುನಾಡಿನ ತೂತುಕುಡಿಯಲ್ಲಿರುವ ವಿನ್‌ಫಾಸ್ಟ್ ಸ್ಥಾವರದಲ್ಲಿ ಸ್ಥಳೀಯವಾಗಿ ಜೋಡಿಸಲಾಗುತ್ತದೆ. ಇದು ಭಾರತವನ್ನು ಕಂಪನಿಯ 17ನೇ ಜಾಗತಿಕ ಮಾರುಕಟ್ಟೆಯನ್ನಾಗಿ ಮಾಡಿದೆ. ಭಾರತದ ಬೆಳೆಯುತ್ತಿರುವ EV ಮಾರುಕಟ್ಟೆಯಲ್ಲಿ ಹಿಡಿತ ಸಾಧಿಸಲು ಈ ಎರಡು ಮಾಡಲ್‌ಗಳ ಬೆಲೆಯನ್ನು ಆಕ್ರಮಣಕಾರಿಯಾಗಿ ನಿಗದಿಪಡಿಸಿದೆ, VF6 ಕೈಗೆಟುಕುವ ಬೆಲೆ ಮತ್ತು ರೇಂಜ್ ಮೇಲೆ ಕೇಂದ್ರೀಕರಿಸುತ್ತದೆ ಮತ್ತು VF7 ಪ್ರೀಮಿಯಂ ಮಧ್ಯಮ ಗಾತ್ರದ ಎಲೆಕ್ಟ್ರಿಕ್ SUV ವಿಭಾಗವನ್ನು ಗುರಿಯಾಗಿರಿಸಿಕೊಂಡಿದೆ.
Advertisement

ಭಾರತದಲ್ಲಿ ಸ್ಕೂಟರ್‌ಗಳ ಕಿಂಗ್: 25 ವರ್ಷಗಳಿಂದ ನಂ.1 ಸ್ಥಾನ

ಭಾರತದಲ್ಲಿ ಸ್ಕೂಟರ್ ವಿಭಾಗವನ್ನು ಆಳುತ್ತಿರುವ ಏಕೈಕ ವಾಹನವೆಂದರೆ ಹೋಂಡಾ ಆಕ್ಟಿವಾ (Honda Activa), ಇದು ಬಿಡುಗಡೆಯಾದಾಗಿನಿಂದ ಇಲ್ಲಿಯವರೆಗೆ ಮಾರುಕಟ್ಟೆಯಲ್ಲಿ ನಂ.1 ಸ್ಕೂಟರ್ ಆಗಿ ಮುಂದುವರೆಯುತ್ತಿದೆ. ಈ ಸ್ಕೂಟರ್ ಮಾರುಕಟ್ಟೆಗೆ ಬಂದು 25 ವರ್ಷಗಳಾಗಿದ್ದು, ಇಂದಿಗೂ ತನ್ನ ಬೇಡಿಕೆಯಲ್ಲಿ ಕುಸಿತ ಕಂಡಿಲ್ಲ. ನೀವು ಕೂಡ ಹೋಂಡಾ ಆಕ್ಟಿವಾ ಸ್ಕೂಟರ್ ಖರೀದಿಸಲು ಪ್ಲಾನ್ ಮಾಡುತ್ತಿದ್ದರೆ ಸದ್ಯ 2025 ರ ಹೋಂಡಾ ಆಕ್ಟಿವಾ 125 ಬಗ್ಗೆ ತಿಳಿದುಕೊಳ್ಳಬೇಕಾದ ಪ್ರಮುಖ ವಿಷಯಗಳು ಇಲ್ಲಿವೆ.

2025ರ ಅತ್ಯಂತ ನಿರೀಕ್ಷಿತ 5 ಹೊಸ SUVಗಳಿವು: ಹ್ಯುಂಡೈ, ಟಾಟಾ..

2025 ಮುಕ್ತಾಯಗೊಳ್ಳಲು ಎರಡೇ ತಿಂಗಳು ಬಾಕಿಯಿದೆ. ನೂತನ ಕಾರುಗಳನ್ನು ಬಿಡುಗಡೆಗೊಳಿಸುವ ಸಂಬಂಧ ಜನಪ್ರಿಯ ವಾಹನ ತಯಾರಕ ಕಂಪನಿಗಳಾದ ಹ್ಯುಂಡೈ, ಟಾಟಾ, ಮಾರುತಿ ಕಿಯಾ ಹಾಗೂ ಮಹೀಂದ್ರಾ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿದೆ. ಈ ಕಂಪನಿಗಳಿಂದ 5 ಪ್ರಮುಖ ಎಸ್‌ಯುವಿಗಳು ಮಾರಾಟಕ್ಕೆ ಬರಲಿವೆ. ಒಂದಕ್ಕಿಂದ ಒಂದು ಚೆನ್ನಾಗಿರಲಿದ್ದು, ಹತ್ತಾರು ವೈಶಿಷ್ಟ್ಯಗಳಿಗೂ ಸಾಕ್ಷಿಯಾಗಿರಲಿವೆ. ಬನ್ನಿ.. ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

ಬಡವರಿಗೆ ಪರ್ಫೆಕ್ಟ್ ಕಾರಿದು.. 33 ಕಿ.ಮೀ ಮೈಲೇಜ್, 3.50 ಲಕ್ಷ..

ಮಾರುತಿ ಸುಜುಕಿ ಎಸ್-ಪ್ರೆಸ್ಸೊ (Maruti Suzuki S-Presso) ಎಂಟ್ರಿ ಲೆವೆಲ್ ಹ್ಯಾಚ್‌ಬ್ಯಾಕ್ ಆಗಿದೆ. ಇದು ಆಕರ್ಷಕವಾಗಿರುವ ವಿನ್ಯಾಸವನ್ನು ಒಳಗೊಂಡಿದ್ದು, ಕಣ್ಮನ ಸೆಳೆಯುವ ವಿವಿಧ ವೈಶಿಷ್ಟ್ಯಗಳಿಗೂ ಸಾಕ್ಷಿಯಾಗಿದೆ. ಕನಿಷ್ಠ ರೂ.3.50 ಲಕ್ಷ ಹಾಗೂ ಗರಿಷ್ಠ ರೂ.5.25 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. ನೀವು ನೂತನ ಕಾರೊಂದನ್ನು ಖರೀದಿ ಮಾಡಲು ಆಲೋಚಿಸಿದ್ದೀರಾ.. ಹಾಗಾದರೆ, 'ಎಸ್-ಪ್ರೆಸ್ಸೊ' ಅತ್ಯುತ್ತಮ ಆಯ್ಕೆಯಾಗಲಿದೆ. ಇಲ್ಲಿ ದೇಶದ 5 ಪ್ರಮುಖ ನಗರಗಳಲ್ಲಿ ಈ ಹ್ಯಾಚ್‌ಬ್ಯಾಕ್‌ನ ಸ್ಟ್ಯಾಂಡರ್ಡ್ ಮಾಡೆಲ್ ಹೊಂದಿರುವ ಆನ್-ರೋಡ್ ಬೆಲೆ ಹಾಗೂ ಇಎಂಐ ಕುರಿತಂತೆ ಒಂದಷ್ಟು ವಿವರಗಳನ್ನು ತಿಳಿಸಿಕೊಟ್ಟಿದ್ದೇವೆ.

VinFast: ಸದ್ದಿಲ್ಲದೇ ಹೊಸ ಬ್ರ್ಯಾಂಡ್ ವಿನ್‌ಫಾಸ್ಟ್‌ನ VF6 & VF7..

ವಿಯೆಟ್ನಾಂ ಮೂಲದ ವಿನ್‌ಫಾಸ್ಟ್‌ (VinFast) ಜನಪ್ರಿಯ ವಾಹನ ತಯಾರಕ ಕಂಪನಿಯಾಗಿದೆ. ಇದೇ ಸೆಪ್ಟೆಂಬರ್ ತಿಂಗಳಲ್ಲಿ ಹೊಚ್ಚ ಹೊಸ ವಿಎಫ್6 ಹಾಗೂ ವಿಎಫ್7 ಎಲೆಕ್ಟ್ರಿಕ್ ಎಸ್‌ಯುವಿಯನ್ನು ಅದ್ದೂರಿಯಾಗಿ ಬಿಡುಗಡೆಗೊಳಿಸಿತ್ತು. ಈಗ ಮೊದಲ ಬ್ಯಾಚ್‍ನ ಕಾರುಗಳ ವಿತರಣೆ ಶುರು ಮಾಡಲಾಗಿದ್ದು, ನೂತನ ಎಸ್‌ಯುವಿಗಳನ್ನು ಕೊಚ್ಚಿ ಹಾಗೂ ಜೈಪುರ ಸೇರಿದಂತೆ ವಿವಿಧ ನಗರಗಳ ಗ್ರಾಹಕರಿಗೂ ತಲುಪಿಸಲಾಗುತ್ತಿದೆ. ಅವರು ಕೂಡ ಖುಷಿ ಖುಷಿಯಾಗಿ ವಿಎಫ್6 & ವಿಎಫ್7 ಕಾರುಗಳನ್ನು ಮನೆಗೆ ಕೊಂಡೊಯ್ಯುತ್ತಿದ್ದಾರೆ. ಅದಕ್ಕೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲೂ ಹರಿದಾಡುತ್ತಿವೆ.

ಸೋಮವಾರ ಖರೀದಿಸಬಹುದಾದ ಶೇರುಗಳು!

ಗಳಿಕೆ ಕುಸಿತ, ವ್ಯಾಪಾರ ಕಳವಳಗಳು ಮತ್ತು ತೈಲ ಬೆಲೆ ಏರಿಕೆಯಿಂದಾಗಿ ಭಾರತೀಯ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಕುಸಿತ ಕಂಡಿವೆ. ವಿಶ್ಲೇಷಕರ ಷೇರುಗಳು ಶಿಫಾರಸುಗಳನ್ನು ಖರೀದಿಸುತ್ತವೆ.

34 Km ಮೈಲೇಜ್.. 5-ಸೀಟರ್, ಬೆಲೆಯೂ ಕಮ್ಮಿ.. ಆದ್ರೂ ಈ ಮಾರುತಿ ಕಾರು..

ಮಾರುತಿ ಸುಜುಕಿ ಸೆಲೆರಿಯೊ (Maruti Suzuki Celerio) ಪ್ರಮುಖ ಹ್ಯಾಚ್‌ಬ್ಯಾಕ್ ಆಗಿದೆ. ಇದು ತುಂಬಾ ಅಚ್ಚುಕಟ್ಟಾದ ವಿನ್ಯಾಸ ಹೊಂದಿದ್ದು, ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿದೆ. ಆದರೂ ಕಾರಿನ ಮಾರಾಟ ಸಂಖ್ಯೆ ದಿನದಿಂದ ದಿನಕ್ಕೆ ಕುಸಿತವಾಗಿದೆ. ಸೆಪ್ಟೆಂಬರ್ ತಿಂಗಳಲ್ಲೂ ಅದು ಮುಂದುವರಿದಿದೆ. ಒಟ್ಟು 1,033 ಯುನಿಟ್‌ಗಳನ್ನು ಮಾತ್ರ ಗ್ರಾಹಕರಿಗೆ ವಿತರಣೆ ಮಾಡಲಾಗಿದೆ. 2024ರ ಇದೇ ಅವಧಿಯಲ್ಲಿ 3,241 ಯುನಿಟ್‌ಗಳನ್ನು ಮಾರಾಟ ಮಾಡಲಾಗಿತ್ತು. ಈ ಅಂಕಿಅಂಶವನ್ನು ವಿಶ್ಲೇಷಣೆ ಮಾಡಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ -68% ಇಳಿಮುಖವಾಗಿದೆ.

MG ZS EV: 5-ಸೀಟರ್.. ಹಬ್ಬದ ಋತುವಿನಲ್ಲಿ ಖರೀದಿಸಿ ಎಂಜಿ ಜಡ್ಎಸ್..

ದಸರಾ ಹಾಗೂ ದೀಪಾವಳಿ ಹಬ್ಬಗಳು ಮುಗಿದಿದ್ದು, ಇನೇನು ಜನವರಿಯಲ್ಲಿ ಸಂಕ್ರಾಂತಿ ಹಬ್ಬವು ಬರಲಿದೆ. ನೀವು ವಾರಾಂತ್ಯ ಹಾಗೂ ರಜಾದಿನಗಳಲ್ಲಿ ದೂರದ ಊರುಗಳಿಗೆ ಪ್ರಯಾಣಿಸಲು ಸಾಧ್ಯವಾಗುವಂತೆ ಹೊಚ್ಚ ಹೊಸ ಕಾರೊಂದನ್ನು ಖರೀದಿ ಮಾಡಲು ಆಲೋಚಿಸಿದ್ದೀರಾ.. ಹಾಗಾದರೆ, ಎಂಜಿ ಜಡ್ಎಸ್ ಇವಿ (MG ZS EV) ಅತ್ಯುತ್ತಮ ಆಯ್ಕೆಯಾಗಲಿದೆ. ಇದು ಪರಿಸರ ಸ್ನೇಹಿಯಾಗಿ ಎಸ್‌ಯುವಿಯಾಗಿದ್ದು, ಪ್ರತಿಯೊಂದು ಪ್ರವಾಸವನ್ನು ಸುಗಮ ಹಾಗೂ ಶಾಂತವಾಗಿರುತ್ತದೆ.
Advertisement

ICE, ಹೈಬ್ರಿಡ್‌, ಎಲೆಕ್ಟ್ರಿಕ್ ಮೂರು ವಿಭಾಗಗಳಲ್ಲಿ ಎಂಜಿ ಮೋಟಾರ್

ಪ್ರಮುಖ ವಾಹನ ತಯಾರಕ ಕಂಪನಿಯಾಗಿರುವ ಎಂಜಿ ಮೋಟಾರ್ (MG Motor) ತನ್ನ ಪೋರ್ಟ್‌ಫೋಲಿಯೊದಲ್ಲಿ ಇಂಧನ ಚಾಲಿತ (ICE) ವಾಹನಗಳು, ಹೈಬ್ರಿಡ್‌ಗಳು ಮತ್ತು ಎಲೆಕ್ಟ್ರಿಕ್ ವಾಹನಗಳು (EV ಗಳು) ಒಟ್ಟಿಗೆ ಇರುವುದನ್ನು ಮುಂದುವರಿಸುತ್ತದೆ ಎಂದು ದೃಢಪಡಿಸಿದೆ. ಇದು ವಿದ್ಯುದ್ದೀಕರಣಕ್ಕೆ ಸಂಪೂರ್ಣ ಬದಲಾವಣೆಗಿಂತ ಸಹಬಾಳ್ವೆಯನ್ನು ಒತ್ತಿಹೇಳುತ್ತದೆ. ಸದ್ಯ ಎಂಜಿ ಮೋಟಾರ್‌ನ ಎಲೆಕ್ಟ್ರಿಕ್ ವಾಹನಗಳು ಹೆಚ್ಚು ಮಾರಾಟ ಕಾಣುತ್ತಿವೆ. ಹಾಗೆಂದು ICE ವಾಹನಗಳನ್ನು ಕಡೆಗಣಿಸುವುದಿಲ್ಲ, ಇದರ ಜೊತೆಗೆ EV ಶ್ರೇಣಿಯ ಮೇಲೂ ಬಲವಾಗಿ ಗಮನಹರಿಸುವುದಾಗಿ ಹೇಳಿಕೊಂಡಿದೆ.

90 ಕಿ.ಮೀ ಮೈಲೇಜ್! 65,000.. ಈ ಬೈಕ್​ ಖರೀದಿಸಲು ಮುಗಿಬಿದ್ದ..

ಬಜಾಜ್ ಪ್ಲಾಟಿನಾ (Bajaj Platina) ಮಧ್ಯಮ ವರ್ಗದ ಗ್ರಾಹಕರ ನೆಚ್ಚಿನ ಬೈಕ್ ಆಗಿದ್ದು, ದಿನನಿತ್ಯದ ಬಳಕೆಗೆ ಹೆಚ್ಚು ಸೂಕ್ತವಾಗಿದೆ. ಗ್ರಾಹಕರು ಕೂಡ ನಾ ಮುಂದು - ತಾ ಮುಂದು ಎಂಬಂತೆ ಖರೀದಿ ಮಾಡುತ್ತಿದ್ದಾರೆ. ಈ ಈ ಸೆಪ್ಟೆಂಬರ್ ತಿಂಗಳಲ್ಲೂ 'ಪ್ಲಾಟಿನಾ' ದೊಡ್ಡ ಸಂಖ್ಯೆಯಲ್ಲಿ ಮಾರಾಟಗೊಂಡಿದೆ. ಸರಿ ಸುಮಾರು 62,260 ಯುನಿಟ್‌ಗಳನ್ನು ಗ್ರಾಹಕರಿಗೆ ವಿತರಿಸಲಾಗಿದೆ. 2024ರ ಇದೇ ಅವಧಿಯಲ್ಲಿ 49,774 ಯುನಿಟ್‌ಗಳನ್ನು ಮಾರಲಾಯಿತ್ತು. ಈ ಅಂಕಿಸಂಖ್ಯೆಯನ್ನು ಲೆಕ್ಕ ಹಾಕಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ 25.09% ಬೆಳವಣಿಗೆಯಾಗಿದೆ.

Diesel Cars: ಅಗ್ಗದ ಬೆಲೆಗೆ ಸಿಗುವ 5 ಪ್ರಮುಖ ಡೀಸೆಲ್ ಕಾರುಗಳಿವು..

ಹೊಸ ಕಾರು ಖರೀದಿ ಮಾಡಬೇಕೆಂಬುದು ಹಲವರ ಕನಸಾಗಿರುತ್ತದೆ. ಅದರಲ್ಲೂ ಡೀಸೆಲ್ ಕಾರುಗಳು (Diesel Cars) ಉತ್ತಮವಾದ ಕಾರ್ಯಕ್ಷಮತೆಯಿಂದಲೂ ಮನೆ ಮಾತಾಗಿವೆ. ಕಟ್ಟುನಿಟ್ಟಿನ 'ಬಿಎಸ್6' ಎಮಿಷನ್ ಮಾನದಂಡಗಳು ಜಾರಿಯಾದ ಬಳಿಕ, ಅನೇಕ ವಾಹನ ತಯಾರಕ ಕಂಪನಿಗಳು ಈ ಕಾರುಗಳ ಉತ್ಪಾದನೆಯನ್ನೇ ಹಂತ ಹಂತವಾಗಿ ಸ್ಥಗಿತಗೊಳಿಸಿವೆ. ಆದರೂ ಒಂದಷ್ಟು ಕಂಪನಿಗಳು ಮಾತ್ರ ಮಾರಾಟಗೊಳಿಸುತ್ತಿದೆ. ನಾವಿಲ್ಲಿ ಅಗ್ಗದ ದರದಲ್ಲಿ ಗ್ರಾಹಕರ ಖರೀದಿಗೆ ಲಭ್ಯವಿರುವ 5 ಪ್ರಮುಖ ಡೀಸೆಲ್ ಕಾರುಗಳ ವಿಶೇಷತೆಗಳ ಕುರಿತಂತೆ ಸಂಕ್ಷಿಪ್ತವಾಗಿ ತಿಳಿಸಿಕೊಟ್ಟಿದ್ದೇವೆ.

ಸ್ಪೋರ್ಟಿ ಸ್ಟೈಲಿಷ್ 125 ಸಿಸಿ ಬೈಕ್ ಇದು... ವಿಭಾಗದಲ್ಲಿಯೇ ಬೆಸ್ಟ್

2025 ಟಿವಿಎಸ್ ರೈಡರ್ 125 ಜನಪ್ರಿಯ 125 ಸಿಸಿ ಪ್ರಯಾಣಿಕ ಮೋಟಾರ್‌ಸೈಕಲ್ ಆಗಿದ್ದು, ಇದರ ಬೆಲೆಯು ರೂ. 80,500 ರಿಂದ ರೂ. 95,600 ರವರೆಗೆ ಎಕ್ಸ್ - ಶೋರೂಂ ಬೆಲೆಯನ್ನು ಹೊಂದಿದೆ. ಸ್ಥಳವನ್ನು ಅವಲಂಬಿಸಿ ಆನ್ - ರೋಡ್ ಬೆಲೆಗಳು ಸುಮಾರು ರೂ. 99,000 ದಿಂದ ರೂ. 1.19 ಲಕ್ಷದವರೆಗೆ ಇರುತ್ತವೆ. ಇದು ಮುಂಭಾಗ ಮತ್ತು ಹಿಂಭಾಗದ ಡಿಸ್ಕ್ ಬ್ರೇಕ್‌ಗಳನ್ನು ಹೊಂದಿರುವ ಹೊಸ ಡ್ಯುಯಲ್-ಡಿಸ್ಕ್ ಮಾಡಲ್‌ಗಳು, ಸಿಂಗಲ್ - ಚಾನೆಲ್ ಎಬಿಎಸ್, ವರ್ಧಿತ ಸುರಕ್ಷತೆ ಮತ್ತು ಪರ್ಫಾಮೆನ್ಸ್‌ಗಾಗಿ ಅಗಲವಾದ ಟೈರ್‌ಗಳನ್ನು ಒಳಗೊಂಡಂತೆ 7 ವೇರಿಯೆಂಟ್‌ಗಳಲ್ಲಿ ಲಭ್ಯವಿದೆ.

TATA: ಅತಿ ಶೀಘ್ರದಲ್ಲೇ ಹೊಸ ಟಾಟಾ ಸಿಯೆರಾ ಎಸ್‌ಯುವಿ ಬಿಡುಗಡೆ..

ನವೆಂಬರ್ ಮೊದಲ ಅಥವಾ ಎರಡನೇ ವಾರದಲ್ಲಿ ಹೊಚ್ಚ ಹೊಸ ಟಾಟಾ ಸಿಯೆರಾ (Tata Sierra) ಎಸ್‌ಯುವಿಯಾಗಿ ಅದ್ದೂರಿಯಾಗಿ ಬಿಡುಗಡೆಯಾಗುವ ಎಲ್ಲ ಲಕ್ಷಣಗಳಿವೆ. ಇದು ರೂ.11 ಲಕ್ಷದಿಂದ ರೂ.20 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿರುವ ನಿರೀಕ್ಷೆಯಿದೆ. 1.5-ಲೀ. ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್, 1.5-ಲೀ. ಟರ್ಬೊಚಾರ್ಜ್ಡ್ ಪೆಟ್ರೋಲ್, 1.5-ಲೀ. ಟರ್ಬೊ ಡೀಸೆಲ್ ಎಂಜಿನ್‌ನ್ನು ಹೊಂದಿರಲಿದೆ. ಜೊತೆಗೆ ಎಲೆಕ್ಟ್ರಿಕ್ ಪವರ್‌ಟ್ರೇನ್‌ ಆಯ್ಕೆಯಲ್ಲಿಯೂ ಮಾರಾಟಕ್ಕೆ ಬರಬಹುದು ಎನ್ನಲಾಗಿದೆ. 5 ಆಸನಗಳನ್ನು ಒಳಗೊಂಡಿರಲಿದೆ. ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಸನ್‌ರೂಫ್, 6 ಏರ್‌ಬ್ಯಾಗ್‌ಗಳು, ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಹಾಗೂ 360 ಡಿಗ್ರಿ ಕ್ಯಾಮೆರಾ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದುಕೊಡಿರುವ ಸಾಧ್ಯತೆಯಿದೆ.

ಬೆಂಗಳೂರು - ಮುಂಬೈ ನಡುವೆ ಹೊಸ ಸೂಪರ್‌ಫಾಸ್ಟ್ ರೈಲು

ಬೆಂಗಳೂರು ಮತ್ತು ಮುಂಬೈ ನಡುವೆ ಹೊಸ ಸೂಪರ್‌ಫಾಸ್ಟ್ ರೈಲನ್ನು ಪರಿಚಯಿಸಲು ಜೋರು ತಯಾರಿ ನಡೆಯುತ್ತಿದೆ. ಈ ರೈಲು, ಪ್ರಯಾಣದ ಸಮಯವನ್ನು 6 ಗಂಟೆಗಳಷ್ಟು ಕಡಿಮೆ ಮಾಡಲಿದ್ದು, ಒಟ್ಟಾರೆ ಪ್ರಯಾಣದ ಸಮಯವನ್ನು 23 ಗಂಟೆಗಳಿಂದ 18 ಗಂಟೆಗಳಿಗೆ ಇಳಿಸಲಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ಮಧ್ಯ ಕರ್ನಾಟಕದ ಮೂಲಕ ಹುಬ್ಬಳ್ಳಿ, ದಾವಣಗೆರೆ, ಬೆಳಗಾವಿ ಮತ್ತು ತುಮಕೂರು ಮುಂತಾದ ಮಾರ್ಗಗಳ ಮೂಲಕ ಚಲಿಸುವ ಹೊಸ ರೈಲು, ಪ್ರಯಾಣಿಕರಿಗೆ ವೇಗವಾದ ಮತ್ತು ಹೆಚ್ಚು ಅನುಕೂಲಕರ ಸಂಪರ್ಕ ಆಯ್ಕೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ.

Hero: ಶೋರೂಂ ಮುಂದೆ ಸಾಲು ಕಟ್ಟಿದ ಗ್ರಾಹಕರು.. 70 ಕಿ.ಮೀ ಮೈಲೇಜ್..

ಹೀರೋ ಸ್ಪ್ಲೆಂಡರ್‌ (Hero Splendor) ನಂಬರ್ 1 ಬೈಕ್ ಆಗಿದೆ. ಗ್ರಾಹಕರು ಕೂಡ ನಾ ಮುಂದು - ತಾ ಮುಂದು ಎಂಬಂತೆ ಖರೀದಿ ಮಾಡುತ್ತಿದ್ದಾರೆ. ಈ ಸೆಪ್ಟೆಂಬರ್ ತಿಂಗಳಲ್ಲೂ 'ಸ್ಪ್ಲೆಂಡರ್‌' ಭಾರೀ ಸಂಖ್ಯೆಯಲ್ಲಿ ಮಾರಾಟಗೊಂಡಿದೆ. ಒಟ್ಟು 3,82,383 ಯುನಿಟ್‌ಗಳನ್ನು ಗ್ರಾಹಕರಿಗೆ ವಿತರಣೆ ಮಾಡಲಾಗಿದೆ. 2024ರ ಇದೇ ಅವಧಿಯಲ್ಲಿ 3,75,886 ಯುನಿಟ್‌ಗಳನ್ನು ಮಾರಲಾಯಿತ್ತು. ಈ ಅಂಕಿಅಂಶವನ್ನು ವಿಶ್ಲೇಷಣೆ ಮಾಡಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ (YoY) ಶೇಕಡ 1,73% ಪ್ರಗತಿಯಾಗಿದೆ.

ಹೊಸ ಹ್ಯುಂಡೈ ಸ್ಟೈಲಿಷ್ SUV ಅನಾವರಣ: ಬುಕಿಂಗ್ ಪ್ರಾರಂಭ

ಹುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ (HMIL) ಇಂದು ತನ್ನ ಬಹುನಿರೀಕ್ಷಿತ ಕಾಂಪ್ಯಾಕ್ಟ್ ಎಸ್‌ಯುವಿಯಾದ ಹೊಚ್ಚ ಹೊಸ ಹುಂಡೈ ವೆನ್ಯೂ (VENUE) ಅನ್ನು ಬಹಿರಂಗಪಡಿಸಿದೆ. ಈ ಕಾರಿಗಾಗಿ ಬುಕಿಂಗ್ ‌ಗಳನ್ನು ಕೂಡ ತೆರೆದಿರುವುದಾಗಿ ಘೋಷಿಸಿದೆ. ಆಸಕ್ತ ಗ್ರಾಹಕರು ಭಾರತದಾದ್ಯಂತದ ಯಾವುದೇ ಹುಂಡೈ ಡೀಲರ್‌ಶಿಪ್‌ನಲ್ಲಿ ರೂ. 25,000 ಆರಂಭಿಕ ಬುಕಿಂಗ್ ಮೊತ್ತದೊಂದಿಗೆ ಹೊಚ್ಚ ಹೊಸ ಹುಂಡೈ ವೆನ್ಯೂ ಅನ್ನು ಬುಕ್ ಮಾಡಬಹುದು. ಹೊಸ ಹುಂಡೈ ವೆನ್ಯೂ ನವೆಂಬರ್ 04, 2025 ರಂದು ಬಿಡುಗಡೆಯಾಗಲಿದೆ.
Advertisement

ಪೆಟ್ರೋಲ್ ಬೇಡ.. 900 ಕಿ.ಮೀ ಮೈಲೇಜ್, 1 ರೂಪಾಯಿ ಖರ್ಚಿಲ್ಲ..

ಯಾವುದೇ ವಾಹನ ಓಡಲು ಇಂಧನ ತುಂಬಾ ಅವಶ್ಯಕ. ಅದರಲ್ಲೂ ಪೆಟ್ರೋಲ್, ಡೀಸೆಲ್ ಅಥವಾ ಸಿಎನ್‌ಜಿ ಗ್ಯಾಸ್ ಬೇಕೇ ಬೇಕು. ಸದ್ಯ, ಒಂದೆಡರು ವರ್ಷಗಳಿಂದ ವಿದ್ಯುತ್ (ಎಲೆಕ್ಟ್ರಿಕ್) ಚಾಲಿತ ವಾಹನಗಳು ಕೂಡ ಭಾರೀ ಸಂಖ್ಯೆಯಲ್ಲಿ ಮಾರಾಟವಾಗುತ್ತಿವೆ. ಪೆಟ್ರೋಲ್/ ಡೀಸೆಲ್ (Petrol/ Diesel) ಬೆಲೆ ದುಬಾರಿಯಾಗಿದ್ದು, ಪರಿಸರಕ್ಕೂ ಮಾರಕವಾಗಿದೆ. ಹೀಗಾಗಿ, ಪರ್ಯಾಯ ಇಂಧನಗಳ ಬಳಕೆ ಕುರಿತಂತೆ ಹಲವು ಸಂಶೋಧನೆಗಳು ನಡೆಯುತ್ತಿವೆ. ಇವೆಲ್ಲದರ ನಡುವೆ ಇರಾನ್ ದೇಶದ ವಿಜ್ಞಾನಿಯೊಬ್ಬರು ನೀರಿನಿಂದ ಚಲಿಸಬಲ್ಲ ಕಾರನ್ನು ಆವಿಷ್ಕರಿಸಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಅದಕ್ಕೆ ಸಂಬಂಧಿಸಿದಂತೆ 2 ವರ್ಷಗಳ ಹಳೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಮತ್ತೊಮ್ಮೆ ವೈರಲ್ ಆಗುತ್ತಿದೆ.

ಅತ್ಯಂತ ಅಗ್ಗದ ಬೆಲೆಯ ರಾಯಲ್ ಎನ್‌ಫೀಲ್ಡ್ ಬೈಕ್

2025 ರ ರಾಯಲ್ ಎನ್‌ಫೀಲ್ಡ್ ಹಂಟರ್ 350 ಭಾರತದಲ್ಲಿ ಅತ್ಯಂತ ಕೈಗೆಟುಕುವ ಮತ್ತು ವೈಶಿಷ್ಟ್ಯ-ಭರಿತ 350 ಸಿಸಿ ಬೈಕ್‌ಗಳಲ್ಲಿ ಒಂದಾಗಿದೆ. ಜಿಎಸ್‌ಟಿ 2.0 ದರ ಕಡಿತದಿಂದಾಗಿ ಬೆಲೆ ನವೀಕರಿಸಲಾಗಿದೆ. ಬೇಸ್‌ ರೆಟ್ರೊ ವೇರಿಯೆಂಟ್ ಎಕ್ಸ್-ಶೋರೂಂ ಬೆಲೆ ಈಗ ರೂ. 1,37,640 ರಿಂದ ಟಾಪ್ ಮೆಟ್ರೋ ರೆಬೆಲ್ ವೇರಿಯೆಂಟ್ ರೂ. 1,67,000 (ಎಕ್ಸ್‌ ಶೋರೂಂ) ವರೆಗೆ ಇದೆ. ಆನ್-ರೋಡ್ ಬೆಲೆಗಳು ನಗರವನ್ನು ಅವಲಂಬಿಸಿ ರೂ. 2.14 ಲಕ್ಷದವರೆಗೆ ಇದೆ. 2025 ರಲ್ಲಿ ರಾಯಲ್ ಎನ್‌ಫೀಲ್ಡ್ ಹಂಟರ್ 350 ಯಾವೆಲ್ಲ ಅಪ್‌ಡೇಟ್‌ಗಳನ್ನು ಪಡೆದಿದೆ ನೋಡೋಣ.

Honda Activa: ನಂ.1.. ಆದರೂ ಹೋಂಡಾ ಆಕ್ಟಿವಾ ಸ್ಕೂಟರ್ ಖರೀದಿಸಲು..

ಹೋಂಡಾ ಆಕ್ಟಿವಾ (Honda Activa) ನಂಬರ್ 1 ಸ್ಕೂಟರ್ ಆಗಿದೆ. ಇದನ್ನು ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿ ಮಾಡುತ್ತಿದ್ದಾರೆ. ಆದರೂ ಈ ಸ್ಕೂಟರ್ ಮಾರಾಟ ಸಂಖ್ಯೆ ದಿನದಿಂದ ದಿನಕ್ಕೆ ಕುಸಿತವಾಗುತ್ತಿದೆ. ಅದು ಈ ಸೆಪ್ಟೆಂಬರ್ ತಿಂಗಳಲ್ಲೂ ಮುಂದುವರಿದೆ. ಒಟ್ಟು 2,37,716 ಯುನಿಟ್‌ಗಳನ್ನು ಗ್ರಾಹಕರಿಗೆ ವಿತರಿಸಲಾಗಿದೆ. 2024ರ ಇದೇ ಅವಧಿಯಲ್ಲಿ 2,62,316 ಯುನಿಟ್‌ಗಳನ್ನು ಮಾರಲಾಯಿತ್ತು. ಈ ಅಂಕಿಸಂಖ್ಯೆಯನ್ನು ಲೆಕ್ಕ ಹಾಕಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ (YoY) ಶೇಕಡ 9.37% ಇಳಿಮುಖವಾಗಿದೆ. ಹಾಗೆಯೇ ಇದೇ ಆಗಸ್ಟ್‌ನಲ್ಲಿ 2,44,271 ಯುನಿಟ್‌ಗಳನ್ನು ಮಾರಾಟ ಮಾಡಲಾಗಿತ್ತು. ಈ ಮೂಲಕ ತಿಂಗಳಿಂದ ತಿಂಗಳ (MoM) ಮಾರಾಟವು ಶೇಕಡ 2.68% ಕುಂಠಿತವಾಗಿದೆ.

ಸ್ಪೋರ್ಟಿ ಲುಕ್, ಸಖತ್ ಫೀಚರ್ಸ್ ಇದ್ದರು ಯಾರೂ ಖರೀದಿಸುತ್ತಿಲ್ಲ

ಭಾರತದಲ್ಲಿ 'ಸ್ಕೋಡಾ ಕೈಲಾಕ್' ಕಾರು ಸಬ್-4 ಮೀಟರ್‌ ಎಸ್‌ಯುವಿ ವಿಭಾಗದಲ್ಲಿ ಮುಂಚೂಣಿಯಲ್ಲಿದ್ದು, ಇದೇ ವಿಭಾಗದಲ್ಲಿ ಹೆಸರು ಮಾಡಿರುವ 'ಕಿಯಾ ಸೈರಸ್' ಕಾರು ಸದ್ಯ ಮಾರಾಟದಲ್ಲಿ ಗಣನೀಯ ಕುಸಿತ ಕಂಡಿದೆ. 2025 ರ ಮೊದಲ ಎಂಟು ತಿಂಗಳ ಹೊತ್ತಿಗೆ, ಕೈಲಾಕ್ ಸುಮಾರು 34,588 ಯೂನಿಟ್‌ ಕಾರುಗಳನ್ನು ಮಾರಾಟ ಮಾಡಿದ್ದರೆ, ಸರಾಸರಿ ಮಾಸಿಕ ಮಾರಾಟ 4,000 ಯೂನಿಟ್‌ಗಳಿಗೆ ಹತ್ತಿರವಾಗಿದೆ. ಈ ಮೂಲಕ ಸ್ಕೋಡಾ ಕೈಲಾಕ್ ಶೇ3.4 ವಿಭಾಗದ ಪಾಲನ್ನು ಹೊಂದಿರುವ ಬಲವಾದ ಸ್ಥಾನವನ್ನು ಪಡೆದುಕೊಂಡಿದೆ.

TATA: ಇನ್ನು 2 ವಾರದಲ್ಲಿ ಹೊಸ ಟಾಟಾ ಕಾರು ಬಿಡುಗಡೆ?

ಟಾಟಾ ಮೋಟಾರ್ಸ್ (Tata Motors), ದಶಕಗಳ ಬಳಿಕ, ಹೊಸ ರೂಪದಲ್ಲಿ 'ಸಿಯೆರಾ' ಎಸ್‌ಯುವಿಯನ್ನು ಬಿಡುಗಡೆಗೊಳಿಸಲು ತಯಾರಿ ಮಾಡಿಕೊಳ್ಳುತ್ತಿದೆ. ಎಲ್ಲವು ಅಂದುಕೊಂಡಂತೆ ನಡೆದರೆ, ಈ ಕಾರು ನವೆಂಬರ್ ಮೊದಲ ಅಥವಾ ಎರಡನೇ ವಾರದಲ್ಲಿ ಮಾರಾಟಕ್ಕೂ ಬರಲಿದೆ. ಇದು ತುಂಬಾ ಚೆನ್ನಾಗಿರುವ ವಿನ್ಯಾಸ ಹೊಂದಿರಲಿದ್ದು, ಹತ್ತಾರು ವೈಶಿಷ್ಟ್ಯಗಳನ್ನು ಪಡೆದುಕೊಂಡಿರಲಿದೆ. ಕೈಗೆಟುಕುವ ದರದಲ್ಲೂ ಪರಿಚಯಿಸಬಹುದು. ಬನ್ನಿ, ನೂತನ 'ಸಿಯೆರಾ'ದ ಬೆಲೆ ಎಷ್ಟಿರಲಿದೆ.. ವಿಶೇಷತೆಗಳೇನು ಎಂಬುದರ ಕುರಿತಂತೆ ಪ್ರಮುಖಾಂಶಗಳು ಏನೆಂಬುದನ್ನು ತಿಳಿಯೋಣ.