ದೀಪಾವಳಿಗೆ ಪರಿಸರ ಸ್ನೇಹಿ 7-ಸೀಟರ್ ಹುಡುಕುತ್ತಿದ್ದೀರಾ?
ಆಟೋಮೊಬೈಲ್ಸ್
- 11 month, 15 days ago
ದೇಶದ ಪ್ರಮುಖ ಕಾರು ತಯಾರಕರಲ್ಲಿ ಒಂದಾದ ಕಿಯಾ, ತನ್ನ ಕ್ಯಾರೆನ್ಸ್ ಕ್ಲಾವಿಸ್ EV ಮಾಡಲ್ ಶ್ರೇಣಿಯನ್ನು ವಿಸ್ತರಿಸಿದ್ದು, ಹೊಸ ಟ್ರಿಮ್‌ಗಳಾದ HTX E ಮತ್ತು HTX E [ER] ಗಳನ್ನು ಪರಿಚಯಿಸಿದೆ. ಇವು ಕ್ರಮವಾಗಿ 19.99 ಲಕ್ಷ ರೂ. (ಎಕ್ಸ್ - ಶೋರೂಂ) ಮತ್ತು 21.99 ಲಕ್ಷ ರೂ. (ಎಕ್ಸ್ - ಶೋರೂಂ) ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. 7 ಮಂದಿ ಆರಾಮವಾಗಿ ಪ್ರಯಾಣಿಸಬಹುದಾದ ಕಾರಾಗಿದೆ. ಕ್ಯಾರೆನ್ಸ್ ಕ್ಲಾವಿಸ್ ಇವಿಯ ಹೊಸ ಟ್ರಿಮ್‌ಗಳು ದೇಶಾದ್ಯಂತ ಕಿಯಾ ಶೋರೂಮ್‌ಗಳಲ್ಲಿ ಈಗ ಲಭ್ಯವಿದೆ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.