330 ಕಿ.ಮೀ ಮೈಲೇಜ್.. 90,000 ರೂಪಾಯಿ, ಚೆಂದದ ಬೈಕ್..
ಆಟೋಮೊಬೈಲ್ಸ್
- 1 year, 1 month, 7 days ago
ಬಜಾಜ್ ಫ್ರೀಡಂ 125 (Bajaj Freedom 125) ವಿಶ್ವದ ಪ್ರಪಥಮ ಸಿಎನ್‌ಜಿ ಮೋಟಾರ್‌ಸೈಕಲ್ ಎಂದೇ ಮನೆ ಮಾತಾಗಿದೆ. ತುಂಬಾ ಅಚ್ಚುಕಟ್ಟಾದ ವಿನ್ಯಾಸ ಹಾಗೂ ಹತ್ತಾರು ವೈಶಿಷ್ಟ್ಯಗಳನ್ನು ಪಡೆದುಕೊಂಡಿದ್ದು, ದಿನಬಳಕೆಗೆ ಹೆಚ್ಚು ಸೂಕ್ತವಾಗಿದೆ. ನೀವು ಆಫೀಸ್‌ಗೆ ತೆರಳಲು ಹೊಚ್ಚ ಹೊಸ ಬೈಕ್‌ವೊಂದನ್ನು ಖರೀದಿ ಮಾಡಲು ಆಲೋಚಿಸಿದ್ದೀರಾ.. ಹಾಗಾದರೆ, ಇದೇ 'ಫ್ರೀಡಂ 125' ಅತ್ಯುತ್ತಮವಾದ ಆಯ್ಕೆಯಾಗಲಿದೆ. ನಾವಿಲ್ಲಿ ಈ ಮೋಟಾರ್‌ಸೈಕಲ್‌ನ ಬೆಲೆ, ವಿನ್ಯಾಸ, ಕಾರ್ಯಕ್ಷಮತೆ ಹಾಗೂ ವೈಶಿಷ್ಟ್ಯಗಳ ಕುರಿತಂತೆ ಸಂಪೂರ್ಣವಾಗಿ ತಿಳಿಸಿಕೊಟ್ಟಿದ್ದೇವೆ.