ಬಿಡುಗಡೆಯಾಗಿ ಕೇವಲ 18 ತಿಂಗಳಷ್ಟೇ.. ಗ್ರಾಹಕರು ಖರೀದಿಸುತ್ತಿಲ್ಲ..
ಆಟೋಮೊಬೈಲ್ಸ್
- 1 year, 1 month, 29 days ago
ಹೀರೋ ಮೋಟೋಕಾರ್ಪ್ (Hero MotoCorp) ಪ್ರೀಮಿಯಂ ಮೋಟಾರ್‌ಸೈಕಲ್ ವಿಭಾಗದಲ್ಲಿ ತನ್ನದೇಯಾದ ಛಾಪನ್ನು ಮೂಡಿಸಲು ಹಲವು ಪ್ರಯತ್ನಗಳನ್ನು ಮಾಡುತ್ತಿದೆ. ಅದರ ಭಾಗವಾಗಿ ಅಮೆರಿಕದ ಹಾರ್ಲೆ-ಡೇವಿಡ್ಸನ್ (Harley-Davidson) ಪಾಲುದಾರಿಕೆಯಲ್ಲಿ 'ಮಾವ್ರಿಕ್ 440' ಹೆಸರಿನ ಬೈಕ್‌ನ್ನು ಅಭಿವೃದ್ಧಿಪಡಿಸಿತ್ತು. ಇದನ್ನು 2024ರ ಆರಂಭದಲ್ಲಿ ದೇಶೀಯ ಮಾರುಕಟ್ಟೆಯಲ್ಲಿಯೂ ಅದ್ದೂರಿಯಾಗಿ ಮಾರಾಟಕ್ಕೆ ತರಲಾಗಿತ್ತು. ಆದರೂ ಗ್ರಾಹಕರನ್ನು ಸೆಳೆಯುವಲ್ಲಿ ಅಂದುಕೊಂಡ ಮಟ್ಟಿಗೆ ಸಫಲವಾಗಿಲ್ಲ.