ರೂ. 2.05 ಲಕ್ಷಕ್ಕೆ ಹೊಸ ಟ್ರಯಂಫ್ ಸ್ಪೀಡ್ T4 ಬಾಜಾ ಆರೆಂಜ್ ಬಿಡುಗಡೆ

ಟ್ರಯಂಫ್ ಮೋಟಾರ್‌ಸೈಕಲ್ಸ್ (Triumph Motorcycles ) ಇಂಡಿಯಾವು, ಹೆಚ್ಚು ಮಾರಾಟವಾಗುವ ತನ್ನ ಸ್ಪೀಡ್ T4 ಗಾಗಿ ಹೊಚ್ಚಹೊಸ ಆಕರ್ಷಕ ಮತ್ತು ವಿಸ್ಮಯಕಾರಿ 'ಬಾಜಾ ಆರೆಂಜ್' ಬಣ್ಣವನ್ನು ಪರಿಚಯಿಸಿದೆ. ಬಾಜಾ ಆರೆಂಜ್ ಬಣ್ಣವು ಮರುಭೂಮಿಯ ಮುಂಜಾನೆಯ ಹೊಳಪಿನಿಂದ ಸ್ಫೂರ್ತಿ ಪಡೆದಿದೆ. ರೂ.2.05 ಲಕ್ಷ (ಎಕ್ಸ್ ಶೋರೂಂ) ಬೆಲೆಯಲ್ಲಿ ಬಿಡುಗಡೆಯಾಗುತ್ತಿರುವ ಬಾಜಾ ಆರೆಂಜ್ ಸ್ಪೀಡ್ T4, ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಲಿದೆ. ಈ ಐಕಾನಿಕ್ ಬಣ್ಣವನ್ನು ಹೊಂದಿರುವ ವಿಭಾಗದ ಮೊದಲ 400cc ಮೋಟಾರ್‌ಸೈಕಲ್ ಇದಾಗಿದೆ ಎಂದು ಕಂಪನಿ ಹೇಳಿದೆ.

16.8 Km ಮೈಲೇಜ್.. 5-ಸೀಟರ್, ಈ ಬಲಿಷ್ಠ ಕಾರಿನ ಮಾರಾಟ ಸಂಖ್ಯೆ..

ಟಾಟಾ ಹ್ಯಾರಿಯರ್ (Tata Harrier) ಪ್ರಮುಖ ಎಸ್‌ಯುವಿಯಾಗಿದ್ದು, ಹೆಚ್ಚು ಅತ್ಯಾಧುನಿಕವಾಗಿದೆ. ಅದರ ಹೊರತಾಗಿಯೂ ಮಾರಾಟ ಸಂಖ್ಯೆ ದಿನದಿಂದ ದಿನಕ್ಕೆ ಕುಸಿತವಾಗುತ್ತಿದೆ. ಅದು ಈ ಮೇ ತಿಂಗಳಲ್ಲೂ ಮುಂದುವರಿದಿದೆ. ಒಟ್ಟು 894 ಯುನಿಟ್‌ಗಳನ್ನು ಮಾರಾಟಗೊಳಿಸಲಾಗಿದೆ. 2024ರ ಇದೇ ಅವಧಿಯಲ್ಲಿ 1625 ಯುನಿಟ್‌ಗಳನ್ನು ಮಾರಾಟ ಮಾಡಲಾಗಿತ್ತು. ಈ ಅಂಕಿಸಂಖ್ಯೆಗೆ ಹೋಲಿಕೆ ಮಾಡಿದರೆ, ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ (YoY) ಶೇಕಡ 44.98% ಇಳಿಕೆಯಾಗಿದೆ.

ಭಾರತದ ವಾಹನೋದ್ಯಮಕ್ಕೆ ಕಂಟಕವಾದ ಚೀನಾ.. ಅಪರೂಪದ ಖನಿಜಗಳು ಎಂದರೇನು?

ಭಾರತದ ವಾಹನೋದ್ಯಮಕ್ಕೆ ಕಂಟಕ ಎದುರಾಗುವ ಕಾಲ ಸನಿಹವಾಗಿದೆ. ಚೀನಾ ಅಪರೂಪದ ಅಯಸ್ಕಾಂತ ಖನಿಜಗಳನ್ನು (Rare Earth Elements) ರಫ್ತು ಮಾಡುವುದನ್ನು ಸ್ಥಗಿತಗೊಳಿಸಿದೆ. ಇದು ಎರಡು - ಮೂರು ವರ್ಷಗಳಿಂದ ಎಲೆಕ್ಟ್ರಿಕ್ ವಾಹನ ವಿಭಾಗದಲ್ಲಿ ಅಂಬೆಗಾಲು ಇಡುತ್ತಿರುವ ದೇಶೀಯ ವಾಹನ ತಯಾರಕ ಕಂಪನಿಗಳನ್ನು ತೀವ್ರ ಸಂಕಷ್ಟಕ್ಕೆ ದೂಡಲಿದೆ. ಅದರಲ್ಲೂ ಬಹುನಿರೀಕ್ಷಿತ ಮಾರುತಿ ಸುಜುಕಿಯ ಮೊದಲ ಎಲೆಕ್ಟ್ರಿಕ್ ಕಾರು ಎಂದೇ ಬಣ್ಣಿಸಲಾಗಿರುವ 'ಇ-ವಿಟಾರಾ'ದ ಉತ್ಪಾದನೆಯೂ ಕೂಡ ತಡವಾಗಬಹುದು ಎನ್ನಲಾಗಿದೆ. ಅದು ಮಾತ್ರವಲ್ಲದೆ ಎಲ್ಲ ಕಂಪನಿಗಳ ಕಾರುಗಳ ತಯಾರಿಕೆ ಮೇಲು ವಿಪರೀತ ಪರಿಣಾಮ ಬೀರುವ ಸಾಧ್ಯತೆಗಳಿವೆ.

Toyota: 8-ಸೀಟರ್.. ಟೊಯೊಟಾ ಇನ್ನೋವಾ ಹೈಕ್ರಾಸ್ ಎಂಪಿವಿಗೆ 3..

ಟೊಯೊಟಾ ಇನ್ನೋವಾ ಹೈಕ್ರಾಸ್ (Toyota Innova Hycross) ಪ್ರಮುಖ ಎಂಪಿವಿಯಾಗಿ ಹೊರಹೊಮ್ಮಿದೆ. ಇದು ರೂ.19.94 ಲಕ್ಷದಿಂದ ರೂ.32.58 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ. ಪೆಟ್ರೋಲ್ ಹಾಗೂ ಹೈಬ್ರಿಡ್ (ಪೆಟ್ರೋಲ್ + ಎಲೆಕ್ಟ್ರಿಕ್) ಎಂಜಿನ್ ಆಯ್ಕೆಯನ್ನು ಹೊಂದಿದ್ದು, 21 ಕೆಎಂಪಿಎಲ್‌ವರೆಗೂ ಮೈಲೇಜ್ ನೀಡುತ್ತದೆ. ಇದರಲ್ಲಿ 7/ 8 ಆಸನಗಳಿವೆ. 10-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು 7-ಇಂಚಿನ ಡಿಜಿಟಲ್ ಡ್ರೈವರ್ಸ್ ಡಿಸ್‌ಪ್ಲೇ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸುರಕ್ಷತೆಗಾಗಿ 6 ಏರ್‌ಬ್ಯಾಗ್‌ಗಳನ್ನು ಹೊಂದಿದೆ. ನೀವು 'ಇನ್ನೋವಾ ಹೈಕ್ರಾಸ್' ಎಂಪಿವಿಗೆ ಪರ್ಯಾಯವಾಗಿ ಈ 3 ಜನಪ್ರಿಯ ಕಾರುಗಳನ್ನು ಕೊಂಡುಕೊಳ್ಳಬಹುದು. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.
Advertisement

Hyundai: ಹೊಸ 7-ಸೀಟರ್ ಹ್ಯುಂಡೈ ಕಾರಿನ ಟಾಪ್ ವಿಶೇಷತೆಗಳು

ಹುಂಡೈ (Hyundai) ಇತ್ತೀಚೆಗೆ ತನ್ನ ಅಲ್ಕಜಾರ್ (ALCAZAR)ಗೆ ಗಮನಾರ್ಹ ಅಪ್‌ಡೇಟ್‌ಗಳನ್ನು ನೀಡಿ ಅಲ್ಕಜಾರ್ ಕಾರ್ಪೊರೇಟ್ 7-ಸೀಟರ್ ಡೀಸೆಲ್ MT ಹಾಗೂ ಪ್ರೆಸ್ಟೀಜ್ 7-ಸೀಟರ್ ಪೆಟ್ರೋಲ್ DCT ಎಂಬ ಹೊಸ ವೇರಿಯೆಂಟ್‌ಗಳನ್ನು ಬಿಡುಗಡೆ ಮಾಡಿದೆ. ಇವು 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಗಳೊಂದಿಗೆ ಲಭ್ಯವಿದೆ. ಕಂಪನಿಯು ಹ್ಯುಂಡೈ ಅಲ್ಕಜಾರ್ ಡೀಸೆಲ್ ಪವರ್‌ಟ್ರೇನ್‌ನಲ್ಲಿ ವಾಯಿಸ್-ಸಕ್ರಿಯಗೊಳಿಸಿದ ಸ್ಮಾರ್ಟ್ ಪನೋರಮಿಕ್ ಸನ್‌ರೂಫ್‌ನೊಂದಿಗೆ ಹೊಸ ಕಾರ್ಪೊರೇಟ್ ವೇರಿಯೆಂಟ್ ಪರಿಚಯಿಸಿದೆ. ಈ ಹೊಸ ವೇರಿಯೆಂಟ್‌ಗಳ ಕುರಿತು ಹೆಚ್ಚಿನ ವಿಶೇಷತೆಗಳು ಇಲ್ಲಿವೆ.

ಶತಕ ಬಾರಿಸಿದ ವೈಭವ್‌ಗೆ ಸಿಕ್ತು ಕಲ್ಲು ಬಂಡೆಯಂತಿರುವ Tata Curvv..

ಐಪಿಎಲ್ (IPL) ಟ್ವೆಂಟಿ - 20 ಟೂರ್ನಿಯ 18ನೇ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಚಾಂಪಿಯನ್ ತಂಡವಾಗಿ ಹೊರಹೊಮ್ಮಿದೆ. ಆದರೆ, 'ಸೂಪರ್ ಸ್ಟ್ರೈಕರ್ ಆಫ್ ದಿ ಸೀಸನ್' ಪ್ರಶಸ್ತಿಯೂ ರಾಜಸ್ಥಾನ್ ರಾಯಲ್ಸ್ (RR) ತಂಡದ ಯುವ ಬ್ಯಾಟ್ಸ್‌ಮನ್ ವೈಭವ್ ಸೂರ್ಯವಂಶಿ (Vaibhav Suryavanshi) ಪಾಲಾಗಿದೆ. ಈ ಮೂಲಕ ಅವರಿಗೆ ಬಲಿಷ್ಠವಾದ 'ಟಾಟಾ ಕರ್ವ್' ಕಾರು ಬಹುಮಾನವಾಗಿ ಒಲಿದಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

Ola: ಪಕ್ಕದ ಬೀದಿಗೆ ಬೈಕ್ ಬುಕ್ ಮಾಡಿದ ಯುವತಿ

ಇತ್ತೀಚೆಗೆ ಬೈಕ್ ಟ್ಯಾಕ್ಸಿಗಳು ಹೆಚ್ಚಾಗಿವೆ, ಆಟೋ ಹಾಗೂ ಬೈಕ್ ಟ್ಯಾಕ್ಸಿ ರೈಡರ್‌ಗಳ ಜಗಳ ಆಗಾಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತದೆ. ಇದೀಗ ಹೊಸ ಟ್ರೆಂಡಿಂಗ್ ವಿಡಿಯೋ ನೆಟ್ಟಿಗರನ್ನು ತುಂಬಾ ನಗಿಸುತ್ತಿದೆ. ಪಕ್ಕದ ಬೀದಿಗೆ ಹೋಗಲು ಓಲಾ ಬೈಕ್ ಬುಕ್ ಮಾಡಿದ ಯುವತಿಯನ್ನು ನೋಡಿ ಓಲಾ ರೈಡರ್ ಸಹ ನಕ್ಕಿದ್ದಾರೆ. ಪಕ್ಕದ ಬೀದಿಯಲ್ಲವೇ ನಡೆದುಕೊಂಡು ಹೋಗಿ ಎನ್ನುವುದನ್ನು ಬಿಟ್ಟು, ಯುವತಿಯ ಕಾರಣ ಕೇಳಿ.. ಸರಿ ಬನ್ನಿ ಡ್ರಾಪ್ ಮಾಡುತ್ತೇನೆ ಎಂದು ಡ್ರಾಪ್ ಮಾಡಿ ಹೋಗಿದ್ದಾರೆ.

32.85 Km ಮೈಲೇಜ್.. 6 ಲಕ್ಷ, ಜನಪ್ರಿಯ ಮಾರುತಿ ಸ್ವಿಫ್ಟ್ ಖರೀದಿಸಲು..

ಮಾರುತಿ ಸುಜುಕಿ ಸ್ವಿಫ್ಟ್ (Maruti Suzuki Swift) ಪ್ರಮುಖ ಹ್ಯಾಚ್‌ಬ್ಯಾಕ್ ಆಗಿದೆ. ದಶಕಗಳಿಂದ ದೇಶೀಯ ಮಾರುಕಟ್ಟೆಯಲ್ಲಿ ಉತ್ತಮ ಸಂಖ್ಯೆಯಲ್ಲಿ ಮಾರಾಟವಾಗುತ್ತಿದ್ದು, ಗ್ರಾಹಕರ ನೆಚ್ಚಿನ ಕಾರಾಗಿ ಹೊರಹೊಮ್ಮಿದೆ. ಇವೆಲ್ಲ ಒಂದು ಕಡೆಯಾದರೆ, ನಾನಾ ಕಾರಣಗಳಿಂದ ದಿನದಿಂದ ದಿನಕ್ಕೆ 'ಸ್ವಿಫ್ಟ್' ಹ್ಯಾಚ್‌ಬ್ಯಾಕ್ ಮಾರಾಟ ಸಂಖ್ಯೆಯೂ ಕುಸಿತವಾಗುತ್ತಿದೆ. ಅದು 'ಮೇ'ನಲ್ಲೂ ಮುಂದುವರಿದಿದೆ. ಆದರೂ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟಗೊಂಡ ಪ್ರಮುಖ 10 ಕಾರುಗಳ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ.

Range Rover: ರೇಂಜ್ ರೋವರ್ SV ಮಸಾರ ವಿಶೇಷತೆಗಳು!

ಹಿಮಾಲಯದ ಭವ್ಯ ಸೌಂದರ್ಯ ಮತ್ತು ಆ ಪ್ರದೇಶದ ಅಮೂಲ್ಯವಾದ ಅಪರೂಪದ ನೀಲಮಣಿಗಳಿಂದ ಪ್ರೇರಿತವಾದ ರೇಂಜ್ ರೋವರ್ SV ಮಸಾರ ಎಂಬ ಕಾರು ಇತ್ತೀಚೆಗೆ ಭಾರತದಲ್ಲಿ ಬಿಡುಗಡೆಯಾಗಿದೆ. ಭಾರತಕ್ಕಾಗಿ ವಿಶೇಷವಾಗಿ ರಚಿಸಲಾದ ಲಿಮಿಟೆಡ್ ಎಡಿಷನ್ ರೇಂಜ್ ರೋವರ್ SV ಮಸಾರಾ, ಈ ಎಸ್‌ಯುವಿ ವಿಶ್ವಾದ್ಯಂತ ಕೇವಲ 12 ಕಾರುಗಳಿಗೆ ಸೀಮಿತವಾಗಿದೆ. ಈ ಲಿಮಿಟೆಡ್ ಎಡಿಷನ್ ಆವೃತ್ತಿಯ ಬೆಲೆಯು 4.99 ಕೋಟಿ (ಎಕ್ಸ್ ಶೋ ರೂಂ) ಇದೆ. ಈ ಅಸಮಾನ್ಯ ಕಾರಿನ ವಿಶೇಷತೆಗಳನ್ನು ಇಲ್ಲಿ ನೋಡೋಣ.

ಈ ರಾಶಿಯವರಿಗೆ ಪ್ರೀತಿಯಲ್ಲಿ ಯಶಸ್ಸು.. ಇವರ ಮನಸ್ಸು ರೋಮ್ಯಾಂಟಿಕ್!


ಇದು ರಸ್ತೆ ಮೇಲಿನ ಅಂಬಾರಿ.. ಹೊಸ Yezdi Adventure ಮೋಟಾರ್‌ಸೈಕಲ್..

ಬಹುನಿರೀಕ್ಷಿತ 2025ರ ಯೆಜ್ಡಿ ಅಡ್ವೆಂಚರ್ (Yezdi Adventure) ಬೈಕ್‌ನ್ನು ಬುಧವಾರ ಬಿಡುಗಡೆ ಮಾಡಲಾಗಿದೆ. ಇದು ನವೀಕರಿಸಿದ ಮಾಡೆಲ್‌ ಆಗಿದ್ದು, ಹಲವು ಹೊಸತನಗಳಿಗೂ ಸಾಕ್ಷಿಯಾಗಿದೆ. ನೋಡುಗರ ಸೆಳೆಯುವ ವಿನ್ಯಾಸ ಹೊಂದಿದ್ದು, ಐಷಾರಾಮಿ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಹಾಗೆಯೇ ಬಜೆಟ್ ಬೆಲೆಯಲ್ಲೂ ಸಿಗುತ್ತದೆ. ನೀವು ಹೊಚ್ಚ ಹೊಸ ಯೆಜ್ಡಿ ಅಡ್ವೆಂಚರ್ ಮೋಟಾರ್‌ಸೈಕಲ್‌ನ್ನು ಖರೀದಿ ಮಾಡಲು ಆಲೋಚಿಸಿದ್ದೀರಾ.. ನಾವಿಲ್ಲಿ ಈ ನೂತನ ಬೈಕ್‌ನ ಬೆಲೆ ಹಾಗೂ ವಿಶೇಷತೆಗಳ ಕುರಿತ ಪ್ರಮುಖಾಂಶಗಳು ಏನೆಂಬುದನ್ನು ತಿಳಿಸಿಕೊಟ್ಟಿದ್ದೇವೆ.

ಬಹುಬೇಡಿಕೆಯ ಮಾರುತಿ ಬಲೆನೋ ಮುಂದೆ ಹೊಸ ಟಾಟಾ ಆಲ್ಟ್ರೋಜ್ ನಿಲ್ಲಬಲ್ಲದೆ

ಟಾಟಾ ಮೋಟಾರ್ಸ್ ಇತ್ತೀಚೆಗೆ ತನ್ನ 2025ರ ಆಲ್ಟ್ರೋಜ್ ಅನ್ನು ಆಕರ್ಷಕ ನವೀಕಣಗಳೊಂದಿಗೆ ಬಿಡುಗಡೆ ಮಾಡಿದೆ. ಇದು ಪ್ರೀಮಿಯಂ ಹ್ಯಾಚ್‌ಬ್ಯಾಕ್ ಸೆಗ್ಮೆಂಟಿನಲ್ಲಿ ಹೊಸ ಅಲೆ ಎಬ್ಬಿಸಿದ್ದು, ಈಗಿರುವ ಒಂದಷ್ಟು ಹ್ಯಾಚ್‌ಬ್ಯಾಕ್‌ಗಳಿಗೆ ನಡುಕ ಹುಟ್ಟಿಸಿದೆ. ಇದು ಪ್ರೀಮಿಯಂ ಹ್ಯಾಚ್ ಬ್ಯಾಕ್ ವಿಭಾಗದಲ್ಲಿ ಸ್ಪರ್ಧೆಯನ್ನು ತೀವ್ರಗೊಳಿಸಿದೆ. ಈ ಸೆಗ್ಮೆಂಟಿನಲ್ಲಿ ಮೊದಲಿನಿಂದಲೂ ಅಗ್ಗದ ಬೆಲೆಗೆ ಸಿಗುತ್ತಿದ್ದ ಮಾರುತಿ ಸುಜುಕಿ ಬಲೆನೊಗೆ ನೇರ ಪ್ರತಿಸ್ಪರ್ಧಿಯಾಗಿದೆ. ಹೊಸ ಟಾಟಾ ಆಲ್ಟ್ರೋಜ್ ಯಾವೆಲ್ಲಾ ವಿಷಯದಲ್ಲಿ ಬಲೆನೊಗೆ ಪೈಪೋಟಿ ನೀಡುತ್ತದೆ ಎಂಬುದನ್ನು ಹೋಲಿಕೆ ಮಾಡಿ ವಿವರಸಿದ್ದೇವೆ.
Advertisement

33 Km ಮೈಲೇಜ್.. 6 ಲಕ್ಷ, 5-ಸ್ಟಾರ್ ಸೇಫ್ಟಿಯ Maruti Dzire..

ಮಾರುತಿ ಸುಜುಕಿ ಡಿಜೈರ್ (Maruti Suzuki Dzire) ಪ್ರಮುಖ ಸೆಡಾನ್ ಆಗಿ ಹೊರಹೊಮ್ಮಿದ್ದು, ಸಾಮಾನ್ಯ ಹಳ್ಳಿಯಿಂದ ರಾಷ್ಟ್ರ ರಾಜಧಾನಿ ದಿಲ್ಲಿವರೆಗೆ ಮನೆ ಮಾತಾಗಿದೆ. ಸದ್ಯ, ಈ 'ಮೇ' ತಿಂಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟಗೊಂಡ ಪ್ರಮುಖ 10 ಕಾರುಗಳ ಪಟ್ಟಿ ಪ್ರಕಟಗೊಂಡಿದೆ. ಅದರಲ್ಲಿ ಇದೇ 'ಡಿಜೈರ್' ಮೊದಲ ಸ್ಥಾನದಲ್ಲಿದ್ದು, ಕಂಪನಿಯು ನಿರೀಕ್ಷೆ ಮಾಡಿದ್ದಕ್ಕಿಂತ ಉತ್ತಮ ಸಂಖ್ಯೆಯಲ್ಲಿ ಮಾರಾಟಗೊಂಡಿದೆ. ಬನ್ನಿ, ಆ ಬಗ್ಗೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.

Mahindra: ಹೊಸ ಮಹೀಂದ್ರಾ SUVಗೆ ಫುಲ್ ಡಿಮ್ಯಾಂಡ್

ಮಹೀಂದ್ರಾ ಇತ್ತೀಚೆಗೆ ಬಿಡುಗಡೆ ಮಾಡಿರುವ ಎಕ್ಸ್‌ಇವಿ 9ಇ (Mahindra XEV 9e) ಮತ್ತು ಬಿಇ 6 (BE 6) ಕಾರುಗಳು ತಮ್ಮ ಅಲ್ಟ್ರಾ-ಪ್ರೀಮಿಯಂ ಒಳಾಂಗಣ ಮತ್ತು ಆಕರ್ಷಕ ಫೀಚರ್ಸ್, ಫ್ಯೂಚಿರಿಸ್ಟಿಕ್ ಡಿಸೈನ್‌ನೊಂದಿಗೆ ದೇಶಾದ್ಯಂತ ಗ್ರಾಹಕರ ಹೃದಯಗಳನ್ನು ಗೆಲ್ಲುತ್ತಿವೆ. 2025 ಫೆಬ್ರವರಿ 14 ರಂದು ಈ ಎರಡೂ ಕಾರಿಗಳಿಗೆ ಬುಕಿಂಗ್ ತೆರೆಯಲಾಗಿದ್ದು, ಕೇವಲ 70 ದಿನಗಳಲ್ಲಿ ಹೊಸ ಎಲೆಕ್ಟ್ರಿಕ್ ಎಸ್‌ಯುವಿಗಳ 10,000 ಯುನಿಟ್ ವಾಹನಗಳನ್ನು ಡೆಲಿವರಿ ನೀಡಲಾಗಿದೆ. ಎರಡೂ ಕಾರುಗಳನ್ನು ಕಳೆದ ವರ್ಷ ನವೆಂಬರ್‌ನಲ್ಲಿ ಪರಿಚಯಿಸಲಾಗಿತ್ತು. ವಿತರಣೆಗಳು ಮಾರ್ಚ್ 2025 ರಲ್ಲಿ ಪ್ರಾರಂಭವಾಗಿದ್ದವು.

Tata Harrier EV vs Hyundai Creta Electric: ಗುರು.. ಇವೆರೆಡು..

ಇತ್ತೀಚೆಗೆ ನೂತನ 'ಟಾಟಾ ಹ್ಯಾರಿಯರ್ ಇವಿ'ಯನ್ನು ಮಾರಾಟಕ್ಕೆ ತರಲಾಯಿತು. ಈ ಎಲೆಕ್ಟ್ರಿಕ್ ಎಸ್‌ಯುವಿಗೆ 'ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್' ಪ್ರಬಲವಾದ ಸ್ಪರ್ಧೆಯೊಡ್ಡಬಲ್ಲದು. ಇವೆರೆಡು ಕಾರುಗಳು ಒಂದಕ್ಕಿಂತ ಒಂದು ಅದ್ಬುತವಾಗಿವೆ. ನೀವು ಹ್ಯಾರಿಯರ್ ಇವಿ ಅಥವಾ ಕ್ರೆಟಾ ಇವಿಯನ್ನು ಖರೀದಿ ಮಾಡಲು ಬಯಸುತ್ತಿದ್ದೀರಾ.. ನಾವಿಲ್ಲಿ ಈ ಎಲೆಕ್ಟ್ರಿಕ್ ಎಸ್‌ಯುವಿಗಳ ಬೆಲೆ, ಕಾರ್ಯಕ್ಷಮತೆ ಹಾಗೂ ವೈಶಿಷ್ಟ್ಯಗಳನ್ನು ಕುರಿತಂತೆ ಸಂಕ್ಷಿಪ್ತವಾಗಿ ಹೋಲಿಕೆ ಮಾಡಿದ್ದೇವೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

Hyundai: ಹೊಸ ಹ್ಯುಂಡೈ ಕಾರು ಬಿಡುಗಡೆ: ನವೀನ ವೇರಿಯೆಂಟ್ ಪರಿಚಯ

ಹುಂಡೈ ಮೋಟಾರ್ ಕಂಪನಿಯು ತನ್ನ ವರ್ನಾ (Verna) ಕಾರಿಗೆ ಹೊಸ SX+ ವೇರಿಯೆಂಟ್ ಅನ್ನು ಪರಿಚಯಿಸಿ ಬಿಡುಗಡೆ ಮಾಡಿದೆ. ಈ ಮೂಲಕ ರೂಪಾಂತರ ಶ್ರೇಣಿಯನ್ನು ಮತ್ತಷ್ಟು ಹೆಚ್ಚಿಸಲಾಗಿದೆ. ಹುಂಡೈ ವರ್ನಾದ ಮ್ಯಾನುವಲ್ ಮತ್ತು ವ್ಯಾಪಕವಾಗಿ ಮೆಚ್ಚುಗೆ ಪಡೆದ iVT (Intelligent Variable Transmission) ಟ್ರಾನ್ಸ್‌ಮಿಷನ್ ಎರಡರಲ್ಲೂ ಈ ಹೊಸ SX+ ವೇರಿಯೆಂಟ್ ಈಗ ಲಭ್ಯವಿದೆ. ಇದು ಗ್ರಾಹಕರಿಗೆ ಹೆಚ್ಚು ಬಹುಮುಖ ಮತ್ತು ವೈಶಿಷ್ಟ್ಯ - ಭರಿತ ಚಾಲನಾ ಅನುಭವವನ್ನು ನೀಡುತ್ತದೆ ಎಂದು ಹ್ಯುಂಡೈ ಮೋಟಾರ್ ಭರವಸೆ ನೀಡಿದೆ.

ವಿಶ್ವ ಪರಿಸರ ದಿನ: ಪೆಟ್ರೋಲ್‌ಗೆ ಹೇಳಿ No.. ಈ ಅಗ್ಗದ ಎಲೆಕ್ಟ್ರಿಕ್..

ಇಂದು ಭಾರತವು ಸೇರಿದಂತೆ ಪ್ರಪಂಚದಾದ್ಯಂತ ವಿಶ್ವ ಪರಿಸರ ದಿನ (World Environment Day) ಆಚರಿಸಲಾಗುತ್ತಿದೆ. ಈ ದಿನದಂದು ನಮ್ಮ ಸುತ್ತಲಿನ ಪರಿಸರ ಸಂರಕ್ಷಣೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತದೆ. ವಿಶ್ವಸಂಸ್ಥೆಯು 1973ರಲ್ಲಿ ಮೊದಲ ಬಾರಿಗೆ ವಿಶ್ವ ಪರಿಸರ ದಿನವನ್ನು ಆಚರಿಸಿತು. ಅಂದಿನಿಂದ ಪ್ರತಿ ವರ್ಷ ಜೂನ್ 5ರಂದು ಚಾಚೂ ತಪ್ಪದೆ ಈ ದಿನವನ್ನು ಆಯೋಜಿಸುತ್ತಾ ಬರಲಾಗಿದೆ. ವಾಯು ಮಾಲಿನ್ಯವೆಂಬುದು ಪರಿಸರಕ್ಕೆ ಹೆಚ್ಚು ಮಾರಕವಾಗಿದೆ. ಪೆಟ್ರೋಲ್ ಚಾಲಿತ ವಾಹನಗಳು ಹೆಚ್ಚು ಇಂಗಾಲವನ್ನು ಹೊರಸೂಸುತ್ತವೆ. ಹಾಗಾಗಿ, ವಿವಿಧೆಡೆಗಳಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಬಳಕೆ ಮಾಡುವಂತೆ ವಾಹನ ಸವಾರರಿಗೂ ಮನವರಿಕೆ ಮಾಡಿಕೊಡಲಾಗುತ್ತದೆ.

World Environment Day: 6 ಹೊಸ ಪರಿಸರ ಸ್ನೇಹಿ ಸ್ಕೂಟರ್‌ಗಳು ಬಿಡುಗಡ

ಇಂದು ವಿಶ್ವಪರಿಸರ (5 ಜೂನ್) ದಿನವನ್ನು ಜಾಗತಿಕವಾಗಿ ಹಲವು ದೇಶಗಳು ಆಚರಿಸುತ್ತಿದ್ದು, ನಿನ್ನೆ 6 ಎಲೆಕ್ಟ್ರಿಕ್ ವಾಹನಗಳನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ. ದೇಶದಲ್ಲಿ ವೇಗವಾಗಿ ಬೆಳೆಯುತ್ತಿರುವ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಬ್ರಾಂಡ್‌ಗಳಲ್ಲಿ ಒಂದಾದ 'ವಾರಿವೊ ಮೋಟಾರ್ಸ್', ನೋವಾ ಮತ್ತು ಎಡ್ಜ್ ಎಂಬ ಎರಡು ಸೀರೀಸ್ ಅಡಿಯಲ್ಲಿ ಆರು ಹೊಚ್ಚ ಹೊಸ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬಿಡುಗಡೆ ಮಾಡಿದೆ. ಹಗುರವಾದ ವಿನ್ಯಾಸದೊಂದಿಗೆ ಸ್ಟೈಲಿಷ್ ಲುಕ್‌ನಲ್ಲಿ ಪರಿಚಯಿಸಲಾದ ಈ ಸ್ಕೂಟರ್‌ಗಳ ಮೇಲೆ 3 ವರ್ಷಗಳ ಸಮಗ್ರ ವಾರಂಟಿ ನೀಡುತ್ತಿರುವುದಾಗಿ ಕಂಪನಿ ಹೇಳಿದೆ.

ಬಿಡುಗಡೆಗೂ ಮುನ್ನವೇ ಡಿಮ್ಯಾಂಡ್.. ಭಾರತದಲ್ಲಿ ತಯಾರಿಸಿದ ಈ Maruti..

ಹೊಚ್ಚ ಹೊಸ ಮಾರುತಿ ಸುಜುಕಿ ಇ-ವಿಟಾರಾ (Maruti Suzuki e Vitara) ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆಗೆ ಕೌಂಟ್‌ಡೌನ್ ಶುರುವಾಗಿದ್ದು, ಇದೇ ಸೆಪ್ಟೆಂಬರ್‌ನಲ್ಲಿ ಅದ್ದೂರಿಯಾಗಿಯೂ ಮಾರಾಟಕ್ಕೆ ಬರಲಿದೆ. ಈ ಕಾರನ್ನು ಗುಜರಾತ್‌ನಲ್ಲಿರುವ ಕಂಪನಿಯ ಉತ್ಪಾದನಾ ಘಟಕದಲ್ಲಿ ತಯಾರಿಸಲು ಕೂಡ ತೀರ್ಮಾನಿಸಲಾಗಿದೆ. ಭಾರತದಲ್ಲಿ ಸಿದ್ದಗೊಂಡ ಇದೇ ಎಲೆಕ್ಟ್ರಿಕ್ ಎಸ್‌ಯುವಿಯನ್ನು 'ಮಾರುತಿ ಸುಜುಕಿ' ಮಾತೃ ಸಂಸ್ಥೆ ಸುಜುಕಿ ಮೋಟಾರ್ ಕಾರ್ಪೊರೇಷನ್ (Suzuki Motor Corporation), ಜಪಾನ್ ಮಾರುಕಟ್ಟೆಯಲ್ಲಿಯೂ ಪರಿಚಯಿಸಲು ಎಲ್ಲ ರೀತಿಯ ತಯಾರಿ ಮಾಡಿಕೊಳ್ಳುತ್ತಿದೆ ಎಂದು ವರದಿಯಾಗಿದೆ.

Yamaha: ಭಾರತೀಯರ ಪ್ರೀತಿಗೆ ಮನಸೋತ ಯಮಹಾ ಅಧ್ಯಕ್ಷ

ಪ್ರಮುಖ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿರುವ ಯಮಹಾ (Yamaha), ತನ್ನ ಚೆನ್ನೈ ಕಾರ್ಖಾನೆಯಲ್ಲಿ 10 ವರ್ಷಗಳ ಕಾರ್ಯಾಚರಣೆಯನ್ನು ಪೂರ್ಣಗೊಳಿಸಿದ್ದು, ತನ್ನ ಉತ್ಪಾದನಾ ಪ್ರಯಾಣದಲ್ಲಿ ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ. ದೇಶೀಯ ಮತ್ತು ಜಾಗತಿಕ ಮಾರುಕಟ್ಟೆಗಳಿಗೆ ನಿರ್ಣಾಯಕ ಉತ್ಪಾದನಾ ನೆಲೆಯಾಗಿ ತನ್ನ ಪಾತ್ರವನ್ನು ಬಲಪಡಿಸಿಕೊಂಡಿರುವ ಕಂಪನಿಯು, ಈ ಅತ್ಯಾಧುನಿಕ ಸೌಲಭ್ಯದಿಂದ ತನ್ನ 5 ಮಿಲಿಯನ್ (50 ಲಕ್ಷ) ದ್ವಿಚಕ್ರ ವಾಹನಗಳನ್ನು ಉತ್ಪಾದನೆ ಮಾಡಿ ಹೊರತಂದಿದೆ. ಈ ಮೈಲಿಗಲ್ಲಿನ್ನು ಪೂರ್ಣಗೊಳಿಸಿ ಹೊರಬಂದ ವಾಹನವಾಗಿ ಯಮಹಾ ಏರೋಕ್ಸ್ 155 ಸ್ಕೂಟರ್ ಗುರ್ತಿಸಿಕೊಂಡಿದೆ.
Advertisement

Tata: 5-ಸೀಟರ್.. 627 Km ರೇಂಜ್.. ಹೊಸ ಟಾಟಾ ಹ್ಯಾರಿಯರ್ ಇವಿಗೆ 3..

ನೂತನ ಟಾಟಾ ಹ್ಯಾರಿಯರ್ ಇವಿ (Tata Harrier EV) ಮೊನ್ನೆಯಷ್ಟೇ ಬಿಡುಗಡೆಗೊಂಡಿದೆ. ಇದು ರೂ.21.49 ಲಕ್ಷ ಪರಿಚಯಾತ್ಮಕ ಬೆಲೆಯನ್ನು ಹೊಂದಿದೆ. 65 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) & 75 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಒಳಗೊಂಡಿದೆ. ಸಂಪೂರ್ಣ ಚಾರ್ಜ್‌ನಲ್ಲಿ 627 ಕಿಲೋಮೀಟರ್‌ವರೆಗೂ ರೇಂಜ್ (ಮೈಲೇಜ್) ನೀಡುತ್ತದೆ. ಇದರಲ್ಲಿ 5-ಆಸನಗಳಿವೆ. 14.5-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸುರಕ್ಷತೆಯ ದೃಷ್ಟಿಯಿಂದ 7-ಏರ್‌ಬ್ಯಾಗ್‌ಗಳನ್ನು ಹೊಂದಿದೆ. ನೀವು 'ಹ್ಯಾರಿಯರ್ ಇವಿ'ಗೆ ಪರ್ಯಾಯವಾಗಿ ಈ 3 ಪ್ರಮುಖ ಎಲೆಕ್ಟ್ರಿಕ್ ಕಾರುಗಳನ್ನು ಖರೀದಿ ಮಾಡಬಹುದು. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

Yezdi Adventure: 2025ರ ಯೆಜ್ಡಿ ಅಡ್ವೆಂಚರ್ ಬೈಕ್ ಬಿಡುಗಡೆ

ಯೆಜ್ಡಿ ಅಡ್ವೆಂಚರ್ (Yezdi Adventure) ಪ್ರೀಮಿಯಂ ಮೋಟಾರ್‌ಸೈಕಲ್ ಆಗಿದ್ದು, ಯುವ ಗ್ರಾಹಕರು ಇಷ್ಟಪಟ್ಟು ಖರೀದಿ ಮಾಡುತ್ತಿದ್ದಾರೆ. ಇಂದು ಈ ಬೈಕ್‌ನ ನವೀಕರಿಸಿದ 2025ರ ಮಾಡೆಲ್‌ನ್ನು ಅದ್ದೂರಿಯಾಗಿ ಬಿಡುಗಡೆಗೊಳಿಸಿದ್ದು, ಹೆಚ್ಚು ಅತ್ಯಾಧುನಿಕವಾದ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಕೈಗೆಟುಕುವ ಬೆಲೆಯಲ್ಲಿಯೂ ಮಾರಾಟಕ್ಕೆ ಬಂದಿದೆ. ಬನ್ನಿ, ನೂತನ ಮೋಟಾರ್‌ಸೈಕಲ್‌ನ ದರವೆಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.

Steelbird: ಅಂತರಾಷ್ಟ್ರೀಯ ಗುಣಮಟ್ಟದ ಸ್ವದೇಶಿ ಹೆಲ್ಮೆಟ್ ಬಿಡುಗಡೆ

ಭಾರತದ ಪ್ರಮುಖ ಹೆಲ್ಮೆಟ್ ತಯಾರಕರಲ್ಲಿ ಒಂದಾದ ಸ್ಟೀಲ್ ಬರ್ಡ್ ಹೆಲ್ಮೆಟ್ಸ್, ಬೇಸಿಗೆಯ ಸವಾರಿಯ ಸವಾಲುಗಳನ್ನು ನಿಭಾಯಿಸಲು ವಿನ್ಯಾಸಗೊಳಿಸಲಾದ ಅತ್ಯಾಧುನಿಕ ಅರ್ಧ - ಮುಖದ ಹೆಲ್ಮೆಟ್ SBH - 23 AVA ಗ್ಲಾಸಿಯನ್ನು ಬಿಡುಗಡೆ ಮಾಡಿದೆ. ಆರು ಅಂತರ್ನಿರ್ಮಿತ ಏರ್ ವೆಂಟ್‌ಗಳೊಂದಿಗೆ, ಈ ಹೊಸ ಮಾದರಿಯು ಅಸಾಧಾರಣ ಗಾಳಿಯ ಹರಿವು, ಸೌಕರ್ಯ ಮತ್ತು ರಕ್ಷಣೆಯನ್ನು ನೀಡುತ್ತದೆ. ಇದು ನಗರ ಪ್ರಯಾಣಿಕರು ಮತ್ತು ವಾರಾಂತ್ಯದ ಸವಾರರಿಗೆ ಪರಿಪೂರ್ಣ ಒಡನಾಡಿಯಾಗಿದೆ ಎಂದು ಸ್ಟೀಲ್ ಬರ್ಡ್ ಹೇಳಿದೆ.

Hyundai: ಹೊಸ 7-ಸೀಟರ್ ಹ್ಯುಂಡೈ ಕಾರು ಬಿಡುಗಡೆ

ಹುಂಡೈ (Hyundai) ಇಂದು ತನ್ನ ಪ್ರೀಮಿಯಂ SUV ಆಗಿರುವ ಅಲ್ಕಜಾರ್ (ALCAZAR)ಗೆ ಗಮನಾರ್ಹ ಅಪ್‌ಡೇಟ್‌ಗಳನ್ನು ನೀಡಿ ಹೊಸ ವೇರಿಯೆಂಟ್‌ಗಳನ್ನು ಬಿಡುಗಡೆ ಮಾಡಿದೆ. ಕಂಪನಿಯು ಹ್ಯುಂಡೈ ಅಲ್ಕಜಾರ್ ಡೀಸೆಲ್ ಪವರ್‌ಟ್ರೇನ್‌ನಲ್ಲಿ ವಾಯಿಸ್-ಸಕ್ರಿಯಗೊಳಿಸಿದ ಸ್ಮಾರ್ಟ್ ಪನೋರಮಿಕ್ ಸನ್‌ರೂಫ್‌ನೊಂದಿಗೆ ಹೊಸ ಕಾರ್ಪೊರೇಟ್ ವೇರಿಯೆಂಟ್ ಪರಿಚಯಿಸಿದೆ. ಇದು 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಗಳೊಂದಿಗೆ ಲಭ್ಯವಿದೆ. ಹೊಸ ಹುಂಡೈ ಅಲ್ಕಜಾರ್ ಕಾರ್ಪೊರೇಟ್ ವೇರಿಯೆಂಟ್ ಭಾರತೀಯ ಗ್ರಾಹಕರ ಆದ್ಯತೆಗಳಿಗೆ ತಕ್ಕಂತೆ ಹೊಸ ಅಪ್‌ಡೇಟ್‌ಗಳನ್ನು ಪಡೆದುಕೊಂಡಿದೆ ಎಂದು ಹ್ಯುಂಡೈ ಹೇಳಿದೆ.

Suzuki: ಸುಜುಕಿ ಟೂ-ವೀಲರ್‌ಗಳಿಗೆ ಐ ಲೈಕ್ ಇಟ್ ಎಂದ ಗ್ರಾಹಕರು..

ಜಪಾನ್ ಮೂಲದ ಸುಜುಕಿ ಮೋಟಾರ್‌ಸೈಕಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (Suzuki Motorcycle India Pvt. Ltd), ಪ್ರಮುಖ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿ ಹೊರಹೊಮ್ಮಿದೆ. ದೇಶೀಯ ಮಾರುಕಟ್ಟೆಯಲ್ಲಿ ವಿವಿಧ ಬೈಕ್ ಹಾಗೂ ಸ್ಕೂಟರ್‌ಗಳನ್ನು ಯಶಸ್ವಿಯಾಗಿ ಮಾರಾಟಗೊಳಿಸುತ್ತಿದೆ. ಅದಕ್ಕೆ ತಕ್ಕಂತೆ ಗ್ರಾಹಕರು ಕೂಡ ಮುಗಿಬಿದ್ದು ಕೊಂಡುಕೊಳ್ಳುತ್ತಿದ್ದಾರೆ. ಸದ್ಯ, ಕಂಪನಿಯು ಈ 'ಮೇ' ತಿಂಗಳ ಮಾರಾಟದ ಅಂಕಿಅಂಶಗಳ ವರದಿ ಪ್ರಕಟಿಸಿದ್ದು, ನಿರೀಕ್ಷೆಗೂ ಮೀರಿದ ಪ್ರಗತಿ ಸಾಧಿಸಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.