ಟೊಯೋಟಾ ಅಂದ್ರೆ ಭಾರತೀಯರಿಗೆ ಇಷ್ಟೊಂದು ಇಷ್ಟವೇ?

ಟೊಯೋಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ತನ್ನ ಮಾರಾಟದ ವೇಗವನ್ನು ಕಾಯ್ದುಕೊಂಡಿದ್ದು, ಕಳೆದ ವರ್ಷದ ಇದೇ ಅವಧಿಯಲ್ಲಿ ಮಾರಾಟವಾದ ಕಾರುಗಳಿಗೆ ಹೋಲಿಸಿದರೆ ಶೇ 22 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಕಳೆದ ಮೇ ತಿಂಗಳಲ್ಲಿ ಕಂಪನಿಯು ಬರೋಬ್ಬರಿ 30,864 ಯುನಿಟ್‌ ಕಾರುಗಳನ್ನು ಮಾರಾಟ ಮಾಡಿದೆ. ಇದರ ದೇಶೀಯ ಮಾರಾಟದಲ್ಲಿ 29,280 ಯುನಿಟ್‌ ಕಾರುಗಳು ಮತ್ತು ರಫ್ತು ಮಾಡಿದ 1,584 ಯುನಿಟ್‌ ಕಾರುಗಳು ಸೇರಿವೆ. ಅಂದಹಾಗೆ ಕಳೆದ ವರ್ಷ ಇದೇ ಅವಧಿಯಲ್ಲಿ (ಮೇ 2024 ರಲ್ಲಿ) ಕಂಪನಿಯು 25,273 ಯುನಿಟ್‌ ಕಾರುಗಳನ್ನು ಮಾರಾಟ ಮಾಡಿತ್ತು.

TATA: 5-ಸೀಟರ್.. ನಾಳೆ ಬಲಿಷ್ಠವಾದ ಟಾಟಾ ಹ್ಯಾರಿಯರ್ ಇವಿ ಬಿಡುಗಡೆ!

ಭಾರತ ಕಾರು ಮಾರುಕಟ್ಟೆಯಲ್ಲಿ ನಾಳೆ ಹೊಚ್ಚ ಹೊಸ ಟಾಟಾ ಹ್ಯಾರಿಯರ್ ಇವಿ (Tata Harrier EV) ಅದ್ದೂರಿಯಾಗಿ ಬಿಡುಗಡೆಗೊಳ್ಳಲಿದೆ. ಇದೊಂದು ಎಲೆಕ್ಟ್ರಿಕ್ ಎಸ್‌ಯುವಿಯಾಗಿದೆ. ಹೆಚ್ಚು ಆಕರ್ಷಕವಾದ ಐಷಾರಾಮಿ ವೈಶಿಷ್ಟ್ಯಗಳನ್ನು ಪಡೆದುಕೊಂಡಿರಲಿದ್ದು, ಕೊಂಚ ದುಬಾರಿ ಬೆಲೆಯಲ್ಲಿ ಮಾರಾಟಕ್ಕೆ ಬರುವ ನಿರೀಕ್ಷೆಯಿದೆ. ಬನ್ನಿ.. ನೂತನ 'ಹ್ಯಾರಿಯರ್ ಇವಿ'ಯ ನಿರೀಕ್ಷಿತ ದರ ಎಷ್ಟಿರಲಿದೆ.. ಯಾವೆಲ್ಲ ವಿಶೇಷತೆಗಳಿಗೆ ಸಾಕ್ಷಿಯಾಗಿರಲಿದೆ ಎಂಬುದರ ಕುರಿತಂತೆ ಒಂದಷ್ಟು ವಿವರಗಳನ್ನು ತಿಳಿಯೋಣ.

MG Motor: ಬ್ರ್ಯಾಂಡ್‌ನ ಭವಿಷ್ಯ ಬದಲಿಸಿದೆ ಈ ಒಂದು ಕಾರು!

ಜೆಎಸ್‌ಡಬ್ಲ್ಯು ಎಂಜಿ ಮೋಟಾರ್ (JSW MG Motor) ಮೋಟಾರ್ ಇಂಡಿಯಾ ಮೇ 2025 ರಲ್ಲಿ 6,304 ಯುನಿಟ್‌ ಕಾರುಗಳ ಮಾಸಿಕ ಮಾರಾಟವನ್ನು ವರದಿ ಮಾಡಿದೆ. ಇದು ಮೇ 2024 ರಲ್ಲಿ ಮಾರಾಟವಾಗಿದ್ದ 4,510 ಯುನಿಟ್‌ ಕಾರುಗಳಿಗೆ ಹೋಲಿಸಿದರೆ ವರ್ಷದಿಂದ ವರ್ಷಕ್ಕೆ ಶೇ40 ರಷ್ಟು ಬೆಳವಣಿಗೆ ಸಾಧಿಸಿದೆ. ಇದಕ್ಕೆ ಮೂಲ ಕಾರಣ ಕಂಪನಿಯ ಹೊಸ ಎಲೆಕ್ಟ್ರಿಕ್ ಕಾರಾಗಿದೆ. ಎಂಜಿ ಮೋಟಾರ್‌ನ ಇಂಧನ ಚಾಲಿತ ಕಾರುಗಳು ಅಷ್ಟೇನು ಜನಪ್ರಿಯತೆ ಪಡೆದಿಲ್ಲವಾದರೂ ಹೊಸ 'ಎಂಜಿ ವಿಂಡ್ಸರ್' ಮಾರಾಟದಲ್ಲಿ ಧೂಳೆಬ್ಬಿಸುತ್ತಿದೆ. ಕಂಪನಿಗೆ ಭಾರತದಲ್ಲಿ ಬೇಡಿಕೆಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ.

Kia: ಕಿಯಾ ಕಾರುಗಳಿಗೆ ಮುಗಿಬಿದ್ದ ಗ್ರಾಹಕರು.. ಫುಲ್ ಡಿಮ್ಯಾಂಡ್..

ಕಿಯಾ ಮೋಟಾರ್ಸ್ (Kia Motors) ಜನಪ್ರಿಯ ವಾಹನ ತಯಾರಕ ಕಂಪನಿಯಾಗಿ ಹೊರಹೊಮ್ಮಿದೆ. ಸೆಲ್ಟೋಸ್, ಸೋನೆಟ್ ಮತ್ತು ಸೈರಸ್ ಒಳಗೊಂಡಂತೆ ಹಲವು ಕಾರುಗಳನ್ನು ಯಶಸ್ವಿಯಾಗಿಯೂ ಮಾರಾಟಗೊಳಿಸುತ್ತಿದೆ. ಗ್ರಾಹಕರು ಕೂಡ ನಾಮುಂದು - ತಾಮುಂದು ಎಂಬಂತೆ ಕೊಂಡುಕೊಳ್ಳುತ್ತಿದ್ದಾರೆ. ಸದ್ಯ, ಕಂಪನಿಯು 'ಮೇ' ತಿಂಗಳ ಕಾರು ಮಾರಾಟದ ಅಂಕಿಅಂಶಗಳ ವರದಿಯನ್ನು ಪ್ರಕಟಿಸಿದ್ದು, ನಿರೀಕ್ಷೆಗೂ ಮೀರಿದ ಪ್ರಗತಿ ಸಾಧಿಸಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.
Advertisement

Ola: 1ರೂ. ಖರ್ಚಿಲ್ಲದೆ 501 ಕಿ.ಮೀ ಓಡುವ ಓಲಾ ಬೈಕ್ ಡೆಲಿವರಿ ಪ್ರಾರಂಭ

ಭಾರತದ ಪ್ರಮುಖ EV ತಯಾರಕ ಕಂಪನಿಯಾದ ಓಲಾ ಎಲೆಕ್ಟ್ರಿಕ್ (Ola Electric), ತನ್ನ ರೋಡ್‌ಸ್ಟರ್ ಎಕ್ಸ್‌ (Roadster X) ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ಗಳ ವಿತರಣೆಯನ್ನು ಬೆಂಗಳೂರು ಸೇರಿದಂತೆ ಭಾರತದ ಪ್ರಮುಖ ನಗರಗಳಲ್ಲಿ ಪ್ರಾರಂಭಿಸಿದೆ. ಕಂಪನಿಯು ತನ್ನ 'ರೈಡ್ ದಿ ಫ್ಯೂಚರ್' ಅಭಿಯಾನದ ಭಾಗವಾಗಿ ವಿಸ್ತೃತ ವಾರೆಂಟಿ, ಮೂವ್‌ಓಎಸ್+ ಮತ್ತು ಎಸೆನ್ಷಿಯಲ್ ಕೇರ್ ಅನ್ನು ಉಚಿತವಾಗಿ ಪಡೆಯುವ ಮೊದಲ 5,000 ಗ್ರಾಹಕರಿಗೆ ರೂ. 10,000 ಮೌಲ್ಯದ ಆಫರ್‌ಗಳನ್ನು ಘೋಷಿಸಿದೆ. ಈ ಹೊಸ ಮೋಟಾರ್‌ಸೈಕಲ್ ಕುರಿತ ಹೆಚ್ಚಿನ ವಿವಿರಗಳನ್ನು ಇಲ್ಲಿ ನೋಡೋಣ.

Hyundai: ಅಗ್ಗದ ಹ್ಯುಂಡೈ ಔರಾ ಸೆಡಾನ್‌ಗೆ 3 ಜಬರ್ದಸ್ತ್ ಪರ್ಯಾಯ..

ಹ್ಯುಂಡೈ ಔರಾ (Hyundai Aura) ಪ್ರಮುಖ ಸೆಡಾನ್ ಆಗಿದೆ. ಇದು ರೂ.6.54 ಲಕ್ಷದಿಂದ ರೂ.9.11 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ. ಪೆಟ್ರೋಲ್ & ಸಿಎನ್‌ಜಿ ಎಂಜಿನ್ ಆಯ್ಕೆಯನ್ನು ಹೊಂದಿದೆ. 17 ರಿಂದ 28.4 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ. ಇದರಲ್ಲಿ 5 ಆಸನಗಳಿವೆ. ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ. ಸುರಕ್ಷತೆಗಾಗಿ 6 ಏರ್‌ಬ್ಯಾಗ್‌ಗಳನ್ನು ಹೊಂದಿದೆ. ನೀವು 'ಹ್ಯುಂಡೈ ಔರಾ'ಗೆ ಬದಲಾಗಿ ಈ 3 ಪ್ರಮಖ ಸೆಡಾನ್‌ಗಳನ್ನು ಖರೀದಿ ಮಾಡಬಹುದು. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

'ಸ್ಪ್ಲೆಂಡರ್ ಪ್ಲಸ್'ಗಿಂತ ಉತ್ತಮವಾಗಿರುವ ಬೈಕ್‌ಗಳಿವು.. ಹಳ್ಳಿಗರು..

ಹೀರೋ ಸ್ಪ್ಲೆಂಡರ್ ಪ್ಲಸ್ (Hero Splendor Plus) ಪ್ರಮುಖ ಮೋಟಾರ್‌ಸೈಕಲ್ ಆಗಿದೆ. ಇದು ಅತ್ಯಂತ ಕಡಿಮೆ ಬೆಲೆಯಲ್ಲಿ ದೊರೆಯಲಿದ್ದು, 70 ಕಿಲೋಮೀಟರ್ ಮೈಲೇಜ್ ನೀಡುತ್ತದೆ. ಹೀಗಾಗಿ ಗ್ರಾಮೀಣ ಭಾಗದ ಜನರು ಮುಗಿಬಿದ್ದು ಕೊಂಡುಕೊಳ್ಳುತ್ತಿದ್ದಾರೆ. ನಿತ್ಯ ಜಮೀನಿಗೆ ಹೋಗಲು.. ಮೇವು ತರಲು ಈ ಬೈಕ್‌ನ್ನು ಬಳಕೆ ಮಾಡುತ್ತಾರೆ. ಅದರ ಹೊರತಾಗಿಯೂ ಹಳ್ಳಿಯಲ್ಲಿ ವಾಸಿಸುವವರೂ 'ಸ್ಪ್ಲೆಂಡರ್ ಪ್ಲಸ್'ಗೆ ಬದಲಾಗಿ ಬಜಾಜ್ ಪ್ಲಾಟಿನಾ 100 (Bajaj Platina 100), ಹೀರೋ ಹೆಚ್ಎಫ್ ಡಿಲಕ್ಸ್ (Hero HF Deluxe) ಹಾಗೂ ಬಜಾಜ್ ಪಲ್ಸರ್ 125 (Bajaj Pulsar 125) ಮೋಟಾರ್‌ಸೈಕಲ್‌ಗಳನ್ನು ಖರೀದಿ ಮಾಡಬಹುದು. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

ಮೊನ್ನೆಯಷ್ಟೆ ಬಿಡುಗಡೆಯಾದ MY25 ಕವಾಸಕಿ ನಿಂಜಾ 300 ಹೇಗಿದೆ ಗೊತ್ತಾ?

ಕವಾಸಕಿ ಮೋಟಾರ್ಸ್ ಭಾರತದ ಅತ್ಯಂತ ಪ್ರಸಿದ್ಧ ಆರಂಭಿಕ ಮಟ್ಟದ ಸ್ಪೋರ್ಟ್ಸ್ ಮೋಟಾರ್‌ಸೈಕಲ್‌ಗಳಲ್ಲಿ ಒಂದಾದ MY25 ನಿಂಜಾ 300 ಬೈಕ್‌ನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ನಿಂಜಾ 300 "ಲೈಮ್ ಗ್ರೀನ್", "ಕ್ಯಾಂಡಿ ಲೈಮ್ ಗ್ರೀನ್", "ಮೆಟಾಲಿಕ್ ಮೂನ್‌ಡಸ್ಟ್ ಗ್ರೇ" ಎಂಬ 3 ಬಣ್ಣಗಳಲ್ಲಿ ಲಭ್ಯವಿದ್ದು, ಬೆಲೆಯು ರೂ. 3,43,000 (ಎಕ್ಸ್-ಶೋರೂಮ್) ನಿಂದ ಪ್ರಾರಂಭವಾಗುತ್ತದೆ. ಇದು ಕವಾಸಕಿ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದ್ದು, ಹೊಸ ಬೈಕ್ ಯಾವೆಲ್ಲಾ ಅಪ್‌ಡೇಟ್‌ಗಳನ್ನು ಪಡೆದಿದೆ ಎಂಬುದರ ಬಗ್ಗೆ ಕುತೂಹಲ ಹೆಚ್ಚಾಗಿದೆ.

ಡಬಲ್ ಕಲರ್‌ನಲ್ಲಿ ಬಿಡುಗಡೆಯಾದ ಹೊಸ TVS Jupiter 125 ವಿಶೇಷತೆಗಳು

ಭಾರತೀಯ ಸ್ಕೂಟರ್ ವಿಭಾಗದಲ್ಲಿ ಆಕ್ಟೀವಾದಷ್ಟೇ ಜನಪ್ರಿಯತೆ ಪಡೆದಿರುವ ಟಿವಿಎಸ್ ಜೂಪಿಟರ್ 125 (TVS Jupiter 125) ಸ್ಕೂಟರ್ ಈಗ ಹೊಸ ಡಿಸೈನ್ ಹಾಗೂ ಫೀಚರ್ಸ್‌ನೊಂದಿಗೆ ಮೊನ್ನೆ ಬಿಡುಗಡೆಯಾಗಿದೆ. ಈಗ ಹೊಸ ಟಿವಿಎಸ್ ಜೂಪಿಟರ್ 125 ಸ್ಮಾರ್ಟ್ ಸ್ಮಾರ್ಟ್‌ ಎಕ್ಸ್‌ ಕನೆಕ್ಟ್ (TVS Jupiter 125 Dual Tone SmartXonnect) ಸ್ಕೂಟರ್ ರೂ. 88942/- (ಎಕ್ಸ್-ಶೋರೂಂ) ಆಕರ್ಷಕ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಆಧುನಿಕ ವೈಶಿಷ್ಟ್ಯಗಳೊಂದಿಗೆ ಐವರಿ ಗ್ರೇ ಮತ್ತು ಐವರಿ ಬ್ರೌನ್ ಎಂಬ ಎರಡು ಆಕರ್ಷಕ ಡ್ಯುಯಲ್ - ಟೋನ್ ಬಣ್ಣದ ಆಯ್ಕೆಗಳನ್ನು ಸಹ ಪರಿಚಯಿಸಲಾಗಿದೆ.

16.92 ಕಿ.ಮೀ ಮೈಲೇಜ್.. 5-ಸೀಟರ್, 11 ಲಕ್ಷದ 'ಹೋಂಡಾ ಎಲಿವೇಟ್'ಗೆ..

ಹೋಂಡಾ ಎಲಿವೇಟ್ (Honda Elevate) ಪ್ರಮುಖ ಎಸ್‌ಯುವಿಯಾಗಿದೆ. ಇದು ರೂ.11 ಲಕ್ಷದಿಂದ ರೂ.17 ಲಕ್ಷವರೆಗೆ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. ಪೆಟ್ರೋಲ್ ಎಂಜಿನ್‌ನ್ನು ಪಡೆದಿದ್ದು, 15.31 ರಿಂದ 16.92 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ. ಇದರಲ್ಲಿ 5 ಆಸನಗಳಿವೆ. 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, ವೈರ್‌ಲೆಸ್ ಫೋನ್ ಚಾರ್ಜರ್ ಮತ್ತು ಸನ್‌ರೂಫ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ. ಸುರಕ್ಷತೆಗಾಗಿ 6 ಏರ್‌ಬ್ಯಾಗ್‌ಗಳನ್ನು ಒಳಗೊಂಡಿದೆ. ನೀವು, ಇದೇ 'ಎಲಿವೇಟ್' ಎಸ್‌ಯುವಿಗೆ ಪರ್ಯಾಯವಾಗಿ ಈ 3 ಕಾರುಗಳನ್ನು ಸಹ ಖರೀದಿ ಮಾಡಬಹುದು. ಬನ್ನಿ, ಆ ಬಗ್ಗೆ ಇಲ್ಲಿದೆ ಹೆಚ್ಚಿನ ವಿವರಗಳನ್ನು ತಿಳಿಯೋಣ. ಮಾರುತಿ ಗ್ರ್ಯಾಂಡ್ ವಿಟಾರಾ (Maruti Grand Vitara): ಈ ಎಸ್‌ಯುವಿಯು 'ಹೋಂಡಾ ಎಲಿವೇಟ್'ಗೆ ಅತ್ಯುತ್ತಮ ಬದಲಿ ಆಯ್ಕೆಯಾಗಲಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಇದು ರೂ.11 ಲಕ್ಷದಿಂದ ರೂ.21 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. ಇದರಲ್ಲಿ 5 ಆಸನಗಳಿದ್ದು, ಪ್ರಯಾಣಿಕರು ಆರಾಮದಾಯಕವಾಗಿ ಕುಳಿತುಕೊಂಡು ದೂರದ ಊರುಗಳಿಗೆ ಸಂಚರಿಸಬಹುದು.

7-ಸೀಟರ್.. ಈ ಜನಪ್ರಿಯ 'Mahindra Suv'ಗೆ ಮುಗಿಬಿದ್ದ ಗ್ರಾಹಕರು..

ಮಹೀಂದ್ರಾ ಎಕ್ಸ್‌ಯುವಿ700 (Mahindra XUV700) ಪ್ರಮುಖ ಎಸ್‍ಯುವಿಯಾಗಿದೆ. ಈ ಕಾರನ್ನು ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿ ಮಾಡುತ್ತಿದ್ದಾರೆ. ಅದಕ್ಕೆ ತಕ್ಕಂತೆ ದಿನದಿಂದ ದಿನಕ್ಕೆ ಬೇಡಿಕೆಯೂ ಹೆಚ್ಚಾಗುತ್ತಿದ್ದು, ದೊಡ್ಡ ಸಂಖ್ಯೆಯಲ್ಲಿಯೇ ಮಾರಾಟವಾಗುತ್ತಿದೆ. ಈ ಮೇನಲ್ಲಿ 'ಎಕ್ಸ್‌ಯುವಿ700'ನ್ನು ವಿತರಣೆ ಪಡೆಯಲು ಗ್ರಾಹಕರು ಒಂದಷ್ಟು ಸಮಯ ಕಾಯಬೇಕಾಗಿತ್ತು. ಅದು ಜೂನ್ ತಿಂಗಳಲ್ಲೂ ಯಥಾಸ್ಥಿತಿಯಲ್ಲಿ ಮುಂದುವರಿಯುವ ಸಾಧ್ಯತೆಯಿದೆ. ಬನ್ನಿ.. ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

Ola: ಕಹಿಸುದ್ದಿ.. 39,999 ಆರಂಭಿಕ ಬೆಲೆ.. ಓಲಾದ ಹೊಸ ಎಲೆಕ್ಟ್ರಿಕ್..

ಓಲಾ ಎಲೆಕ್ಟ್ರಿಕ್ (Ola Electric) ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿದ್ದು, ಬೆಂಗಳೂರಿನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ. ದೇಶೀಯ ಮಾರುಕಟ್ಟೆಯಲ್ಲಿಯಲ್ಲಿ ಇ-ಬೈಕ್ ಹಾಗೂ ಸ್ಕೂಟರ್‌ಗಳನ್ನು ಮಾರಾಟಗೊಳಿಸುತ್ತಿದೆ. ಇವುಗಳು ಹೆಚ್ಚು ಆಕರ್ಷಕವಾದ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿದ್ದು, ಗ್ರಾಹಕರು ಕೂಡ ಇಷ್ಟಪಟ್ಟು ಕೊಂಡುಕೊಳ್ಳುತ್ತಿದ್ದಾರೆ. ಕಳೆದ ವರ್ಷ (2025) ಮತ್ತಷ್ಟು ಖರೀದಿದಾರರಿಗೆ ಹತ್ತಿರವಾಗಲು ಕಂಪನಿಯು ಗಿಗ್ (Gig) ಹಾಗೂ ಎಎಸ್1 ಝಡ್ (S1 Z) ಎಂಬ ಎರಡು ಹೊಚ್ಚ ಹೊಸ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಪರಿಚಯಿಸಿತ್ತು.
Advertisement

ಇತ್ತೀಚೆಗೆ ಬಿಡುಗಡೆಯಾದ ನಿಸ್ಸಾನ್ ಮ್ಯಾಗ್ನೈಟ್ CNG ವಿಶೇಷತೆಗಳು

ಭಾರತದಲ್ಲಿ ಸಿಎನ್‌ಜಿ ಕಾರುಗಳಿಗೆ ಬೇಡಿಕೆ ಹೆಚ್ಚಾಗಿದೆ, ಹೆಚ್ಚಿನ ಮೈಲೇಜ್ ನೀಡುವ ಈ ಸಿಎನ್‌ಜಿ ಕಾರುಗಳು ಪರಿಸರ ಸ್ನೇಹಿಯೂ ಹೌದು. ಇದೇ ಕಾರಣಕ್ಕೆ ಭಾರತದಲ್ಲಿ ಬಹುತೇಕ ಎಲ್ಲಾ ಬ್ರಾಂಡ್‌ಗಳು ತಮ್ಮ ಇಂಧನ ಚಾಲಿತ ಕಾರುಗಳ ಸಿಎನ್‌ಜಿ ಆವೃತ್ತಿಗಳನ್ನು ಪರಿಚಯಿಸುತ್ತಿವೆ. ಇದೀಗ ಈ ಸಾಲಿಗೆ ನಿಸ್ಸಾನ್ ಕೂಡ ಸೇರಿದೆ, ತನ್ನ ಜನಪ್ರಿಯ ಹ್ಯಾಚ್‌ಬ್ಯಾಕ್ ಹಾಗೂ ಕಂಪನಿಗೆ ಉತ್ತಮ ಲಾಭ ತಂದುಕೊಡುತ್ತಿರುವ ಮ್ಯಾಗ್ನೈಟ್ ಅನ್ನು ಈಗ ಸಿಎನ್‌ಜಿ ಕಿಟ್‌ನೊಂದಿಗೆ ಪರಿಚಯಿಸಿದೆ. ಹೊಸ ನಿಸ್ಸಾನ್ ಮ್ಯಾಗ್ನೈಟ್ ಈಗ ಸರ್ಕಾರಿ ಅನುಮೋದಿತ CNG ರೆಟ್ರೋಫಿಟ್‌ಮೆಂಟ್ ಕಿಟ್‌ನೊಂದಿಗೆ ಲಭ್ಯವಿದೆ.

ಇತ್ತೀಚೆಗೆ ಹೋಂಡಾದ ಎರಡು ಪವರ್‌ಫುಲ್ ಬೈಕ್‌ಗಳ ವಿಶೇಷತೆಗಳು

ಭಾರತದಲ್ಲಿ ಇತ್ತೀಚೆಗೆ ಹೋಂಡಾ (Honda) ಕಂಪನಿಯು ತನ್ನ ಅಂತರಾಷ್ಟ್ರೀಯ ಪ್ರೀಮಿಯಂ ಮೋಟಾರ್‌ಸೈಕಲ್‌ಗಳಾದ CB750 ಹಾರ್ನೆಟ್ ಮತ್ತು CB1000 ಹಾರ್ನೆಟ್ SP ಗಳನ್ನು ಬಿಡುಗಡೆ ಮಾಡಿದೆ. CB1000 ಹಾರ್ನೆಟ್ SP ಭಾರತದಲ್ಲಿನ ಬಿಗ್‌ವಿಂಗ್ ಟಾಪ್‌ಲೈನ್ ಡೀಲರ್‌ಶಿಪ್‌ಗಳ ಮೂಲಕ ಪ್ರತ್ಯೇಕವಾಗಿ ಮಾರಾಟವಾಗುತ್ತದೆ. ಹಾಗೆಯೇ CB750 ಹಾರ್ನೆಟ್ ಎಲ್ಲಾ ಬಿಗ್‌ವಿಂಗ್ ಟಾಪ್‌ಲೈನ್ ಮತ್ತು ಬಿಗ್‌ವಿಂಗ್ ಡೀಲರ್‌ಶಿಪ್‌ಗಳಲ್ಲಿ ಖರೀದಿಗೆ ಲಭ್ಯವಿರುತ್ತದೆ. ಎರಡೂ ಮೋಟಾರ್‌ಸೈಕಲ್‌ಗಳ ಬುಕಿಂಗ್‌ಗಳನ್ನು ಪ್ರಾರಂಭವಾಗಿದ್ದು, ವಿತರಣೆಗಳು ಜೂನ್ 2025 ರಿಂದ ಪ್ರಾರಂಭವಾಗಲಿವೆ ಎಂದು ಹೋಂಡಾ ಹೇಳಿದೆ.

ಬಡವರ ಬಂಡಿ.. ಅಗ್ಗದ 'Honda QC1' ಎಲೆಕ್ಟ್ರಿಕ್ ಸ್ಕೂಟರ್..

ಹೋಂಡಾ ಕ್ಯೂಸಿ1 (Honda QC1) ಪ್ರಮುಖ ಎಲೆಕ್ಟ್ರಿಕ್ ಸ್ಕೂಟರ್ ಆಗಿದೆ. ಇದು ತುಂಬಾ ಸರಳವಾದ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿದ್ದು, ಅತ್ಯಂತ ಕಡಿಮೆ ಬೆಲೆಯಲ್ಲಿಯೂ ಗ್ರಾಹಕರ ಖರೀದಿಗೆ ದೊರೆಯುತ್ತದೆ. ನೀವು ಹೊಚ್ಚ ಹೊಸ 'ಕ್ಯೂಸಿ' ಇ-ಸ್ಕೂಟರ್‌ನ್ನು ಖರೀದಿಸಲು ಪ್ಲ್ಯಾನ್ ಮಾಡಿದ್ದೀರಾ.. ನಾವಿಲ್ಲಿ ಈ ನೂತನ ಸ್ಕೂಟರ್‌ನ ಆನ್-ರೋಡ್ ಬೆಲೆ (On-Road Price) ಮತ್ತು ಇಎಂಐ (EMI) ಆಯ್ಕೆಯ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಿಕೊಟ್ಟಿದ್ದೇವೆ.

ಪತಾಂಜಲಿಯಿಂದ ಬೃಹತ್ ಆರ್ಡರ್ ಬಾಚಿಕೊಂಡ ಅಶೋಕ್‌ ಲೇಲ್ಯಾಂಡ್!

ಹಿಂದೂಜಾ ಗ್ರೂಪ್‌ನ ಭಾರತದ ಪ್ರಮುಖ ಕಂಪನಿ ಮತ್ತು ದೇಶದ ಪ್ರಮುಖ ವಾಣಿಜ್ಯ ವಾಹನ ತಯಾರಕ ಬ್ರಾಂಡ್ ಆಗಿರುವ ಅಶೋಕ್ ಲೇಲ್ಯಾಂಡ್ (Ashok Leyland), ತಮ್ಮ ಅತ್ಯಾಧುನಿಕ ಟ್ರಕ್‌ಗಳನ್ನು ಪ್ರಮುಖ ಲಾಜಿಸ್ಟಿಕ್ಸ್ ಆದ M/S ಪತಂಜಲಿ ಪರಿವಾಹನ್ ಪ್ರೈವೇಟ್ ಲಿಮಿಟೆಡ್‌ಗೆ ತಲುಪಿಸಲು ಬೃಹತ್ ಆರ್ಡರ್ ಪಡೆದುಕೊಂಡಿದೆ. ಈ ಮೈಲಿಗಲ್ಲು ಎರಡು ಕಂಪನಿಗಳ ನಡುವಿನ ಪಾಲುದಾರಿಕೆಯನ್ನು ಬಲಪಡಿಸುವಲ್ಲಿ ಮಹತ್ವದ ಹೆಜ್ಜೆಯಾಗಿದೆ. ವಿಶ್ವಾಸಾರ್ಹ ಪೂರೈಕೆದಾರರಾಗಿ ಅಶೋಕ್ ಲೇಲ್ಯಾಂಡ್‌ನ ಸ್ಥಾನವನ್ನು ಬಲಪಡಿಸುತ್ತದೆ ಎಂದು ಹಿಂದೂಜಾ ಗ್ರೂಪ್‌ ಹೇಳಿಕೊಂಡಿದೆ.

TATA ನಂ.1 ಆಗುತ್ತಾ?.. ಬಿಡುಗಡೆಗೆ ಸಿದ್ದಗೊಳ್ಳುತ್ತಿವೆ 3 ಹೊಸ..

ಟಾಟಾ ಮೋಟಾರ್ಸ್ (Tata Motors) ಪ್ರಖ್ಯಾತ ಸ್ವದೇಶಿ ವಾಹನ ತಯಾರಕ ಕಂಪನಿಯಾಗಿದ್ದು, ದೇಶೀಯ ಮಾರುಕಟ್ಟೆಯಲ್ಲಿ ವಿವಿಧ ಕಾರುಗಳನ್ನು ಯಶಸ್ವಿಯಾಗಿ ಮಾರಾಟಗೊಳಿಸುತ್ತಿದೆ. ಇವುಗಳು ಸುರಕ್ಷತೆಗಾಗಿ ಹೆಸರುವಾಸಿಯಾಗಿದ್ದು, ಗ್ರಾಹಕರು ಕೂಡ ಮುಗಿಬಿದ್ದು ಕೊಂಡುಕೊಳ್ಳುತ್ತಿದ್ದಾರೆ. ಸದ್ಯ ಕಂಪನಿಯು 3 ಹೊಚ್ಚ ಹೊಸ ಎಸ್‌ಯುವಿಗಳನ್ನು ಅದ್ದೂರಿಯಾಗಿ ಮಾರಾಟಕ್ಕೆ ತರಲು ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳುತ್ತಿದೆ. ಇದರೊಂದಿಗೆ ಪ್ರಯಾಣಿಕ ವಾಹನ (Passenger Vehicle) ವಿಭಾಗದಲ್ಲಿ ನಂಬರ್ 1 ಸ್ಥಾನಕ್ಕೂ ಬರಲು ಹಣಿಯಾಗುತ್ತಿದೆ. ಬನ್ನಿ, ನೂತನ ಕಾರುಗಳ ಬೆಲೆ ಎಷ್ಟಿರಲಿದೆ.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಕ್ಷಿಪ್ತವಾದ ವಿವರಗಳನ್ನು ತಿಳಿಯೋಣ.

70ರಲ್ಲೂ 20ರಂತೆ ಕಾಣಬೇಕೆ? ಈ ಅಭ್ಯಾಸ ನಿಮ್ಮ ಬ್ಯೂಟಿ ಕಾಪಾಡುತ್ತೆ!


ವಿಶ್ವದಲ್ಲೇ ಇದೇ ಮೊದಲು: ಜನಪ್ರಿಯ ಎಸ್‌ಯುವಿನಲ್ಲಿ 'ಡಾಲ್ಬಿ ಅಟ್ಮೋಸ್'

ಮನರಂಜನಾ ಅನುಭವಗಳಲ್ಲಿ ಜಾಗತಿಕವಾಗಿ ಮುಂಚೂಣಿಯಲ್ಲಿರುವ ಡಾಲ್ಬಿ ಲ್ಯಾಬೋರೇಟರೀಸ್ ಮತ್ತು ಭಾರತದ ಪ್ರಮುಖ ಎಸ್‌ಯುವಿ ತಯಾರಕರಾದ ಮಹೀಂದ್ರಾ, ಇಂದು ಮಹೀಂದ್ರಾ ಥಾರ್ ರೋಕ್ಸ್ ಎಎಕ್ಸ್‌7ಎಲ್ (Thar ROXX AX7L) ವೇರಿಯೆಂಟ್‌ನಲ್ಲಿ ಡಾಲ್ಬಿ ಅಟ್ಮೋಸ್‌ನ ಪಾದಾರ್ಪಣೆಯನ್ನು ಘೋಷಿಸಿವೆ. ಜಾಗತಿಕ SUV ಮಾರುಕಟ್ಟೆಯಲ್ಲಿ ಡಾಲ್ಬಿ ಅಟ್ಮೋಸ್‌ನಿಂದ ನಡೆಸಲ್ಪಡುವ 4-ಚಾನೆಲ್ ಇಮ್ಮರ್ಸಿವ್ ಆಡಿಯೊವನ್ನು ವಾಹನಕ್ಕೆ ಸಂಯೋಜಿಸುತ್ತಿರುವುದು ಇದೇ ಮೊದಲ ಬಾರಿಯಾಗಿದೆ. ಈ ಮೂಲಕ ಥಾರ್ ರೋಕ್ಸ್ ಎಸ್‌ಯುವಿಯೊಳಗೆ ಥಿಯೇಟರ್ ಸೌಂಡ್ ಅನ್ನು ಅನುಭವಿಸಬಹುದು ಎಂದು ಕಂಪನಿ ಹೇಳಿದೆ.

ಆಕರ್ಷಕ ಫೀಚರ್ಸ್.. 2 ಲಕ್ಷ ಯುನಿಟ್ ಸೇಲ್ ಆಯ್ತು Nissan Suv!

ನಿಸ್ಸಾನ್ ಮ್ಯಾಗ್ನೈಟ್ (Nissan Magnite) ಪ್ರಮುಖ ಕಾಂಪ್ಯಾಕ್ಟ್ ಎಸ್‍ಯುವಿಯಾಗಿದೆ. ಪ್ರತಿ ತಿಂಗಳು ಉತ್ತಮ ಸಂಖ್ಯೆಯಲ್ಲಿ ಮಾರಾಟವಾಗುವುದರೊಂದಿಗೆ 'ಗೇಮ್ ಚೇಂಜರ್' ಕಾರಾಗಿಯೂ ಹೊರಹೊಮ್ಮಿದೆ. ಇದು ಹೆಚ್ಚು ಅತ್ಯಾಧುನಿಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿದ್ದು, ಕೈಗೆಟುಕುವ ಬೆಲೆಯಲ್ಲಿಯೂ ಸಿಗುವುದರಿಂದ ಗ್ರಾಹಕರು ಕೂಡ ಮುಗಿಬಿದ್ದು ಕೊಂಡುಕೊಳ್ಳುತ್ತಿದ್ದಾರೆ. ಸದ್ಯ, ಕಂಪನಿಯು 'ಮ್ಯಾಗ್ನೈಟ್' ಎಸ್‍ಯುವಿ ಮಾರಾಟದಲ್ಲಿ ಹೊಸ ಇತಿಹಾಸ ಬರೆದಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.
Advertisement

Suzuki e-Access: ಎಲೆಕ್ಟ್ರಿಕ್ ಆಕ್ಸಿಸ್ ಕನ್ನಡ ರಿವ್ಯೂ ವಿಡಿಯೋ...

ಭಾರತದಲ್ಲಿ ಈಗಾಗಲೇ ಬಹುತೇಕ ಎಲ್ಲಾ ಜನಪ್ರಿಯ ದ್ವಿಚಕ್ರ ವಾಹನ ಬ್ರಾಂಡ್‌ಗಳು ಎಲೆಕ್ಟ್ರಿಕ್ ವಾಹನಗಳನ್ನು ಹೊಂದಿವೆ. ಇತ್ತೀಚೆಗೆ ಹೋಂಡಾ ಕೂಡ ತನ್ನ ಆಕ್ಟೀವಾ ಎಲೆಕ್ಟ್ರಿಕ್ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಆದರೆ ಸುಜುಕಿ ಮಾತ್ರ ಈವೆರೆಗೆ ಎಲೆಕ್ಟ್ರಿಕ್ ವಾಹನವನ್ನು ಬಿಡುಗಡೆ ಮಾಡಿಲ್ಲ. ಇದೀಗ ತನ್ನ ಜನಪ್ರಿಯ ಆಕ್ಸಿಸ್ ಸ್ಕೂಟರ್ ಅನ್ನು ಎಲೆಕ್ಟ್ರಿಕ್ ಆವೃತ್ತಿಯಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದೆ. ಇದೆ ವರ್ಷದ ಆರಂಭದಲ್ಲಿ ನಡೆದ ಆಟೋ ಎಕ್ಸ್‌ಪೋ 2025 ರಲ್ಲಿ ಎಲೆಕ್ಟ್ರಿಕ್ ಆಕ್ಸಿಸ್ ಅನ್ನು ಬಹಿರಂಗಪಡಿಸಿತ್ತು. ಇನ್ನೇನು ಬಿಡುಗಡೆಗೆ ಸಜ್ಜಾಗಿರುವ ಸಮಯದಲ್ಲಿ ಆಕ್ಸಿಸ್ ಎಲೆಕ್ಟ್ರಿಕ್ ಸ್ಕೂಟರ್ ರಿವ್ಯೂ ಮಾಡಲು ನಮನ್ನು ಆಹ್ವಾನಿಸಿದೆ.

Honda: 11 ವರ್ಷಗಳಿಂದ ಬಡವರ ಬಂಡಿ: ಈಗ ಯಾರೂ ಖರೀದಿಸುತ್ತಿಲ್ಲ

ಹೋಂಡಾ ಕಂಪನಿಯು ತನ್ನ ಅತ್ಯಂತ ಕೈಗೆಟುಕುವ ಎಂಟ್ರಿ ಲೆವೆಲ್ ಮೋಟಾರ್ ಸೈಕಲ್‌ಗಳಲ್ಲಿ ಒಂದಾದ ಸಿಡಿ 110 ಡ್ರೀಮ್ ಮಾರಾಟವನ್ನು ಅಧಿಕೃತವಾಗಿ ಸ್ಥಗಿತಗೊಳಿಸಿದೆ. ಈ ಬೈಕ್ ಕಳೆದ ಹನ್ನೊಂದು ವರ್ಷಗಳಿಂದ ದೇಶಿಯ ಮಾರುಕಟ್ಟೆಯಲ್ಲಿ ಜನಪ್ರಿಯತೆ ಗಳಿಸಿದೆ. ಬಜೆಟ್ ಸ್ನೇಹಿ ಬೆಲೆ ಮತ್ತು ಉತ್ತಮ ಫೀಚರ್ಸ್ ಹೊರತಾಗಿಯೂ, ಸಿಡಿ 110 ಡ್ರೀಮ್ ಇತ್ತೀಚಿನ ವರ್ಷಗಳಲ್ಲಿ ಖರೀದಿದಾರರನ್ನು ಆಕರ್ಷಿಸುವಲ್ಲಿ ವಿಫಲವಾಗಿದೆ. ಇದು ಹೋಂಡಾ ಕಂಪನಿಯಿಂದ ಖರೀದಿಗೆ ಲಭ್ಯವಿರುವ ಅತ್ಯಂತ ಕೈಗೆಟುಕುವ ವಾಹನಗಳಲ್ಲಿ ಒಂದಾಗಿದ್ದರೂ ಸರಿಯಾದ ಮಾರಾಟವಿಲ್ಲದಿರುವುದರಿಂದ ಬೈಕ್ ಅನ್ನು ಸ್ಥಗಿತಗೊಳಿಸಿರುವುದಾಗಿ ತಿಳಿದುಬಂದಿದೆ.

21 Km ಮೈಲೇಜ್.. 5 ಸೀಟರ್.. ಈ 'Mahindra Suv' ಬೇಕೆಂದು ಹಠ ಹಿಡಿದ..

ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್ಒ (Mahindra XUV 3XO) ಜನಪ್ರಿಯ ಎಸ್‌ಯುವಿಯಾಗಿ ಹೊರಹೊಮ್ಮಿದ್ದು, ದಿನದಿಂದ ದಿನಕ್ಕೆ ಉತ್ತಮ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ. ಗ್ರಾಹಕರು ಕೂಡ ನಾಮುಂದು - ತಾಮುಂದು ಎಂಬಂತೆ ಖರೀದಿ ಮಾಡುತ್ತಿದ್ದಾರೆ. ಅದನ್ನು ಪುಷ್ಟಿಕರಿಸುವಂತೆ ಏಪ್ರಿಲ್‌ನಲ್ಲಿ 7,568 ಯುನಿಟ್, ಮಾರ್ಚ್‌ನಲ್ಲಿ 7,055 ಯುನಿಟ್, ಫೆಬ್ರವರಿಯಲ್ಲಿ 7,861 ಯುನಿಟ್ ಹಾಗೂ ಜನವರಿಯಲ್ಲಿ 8,454 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ. ಈ ಮೇ ತಿಂಗಳಲ್ಲೂ 'ಎಕ್ಸ್‌ಯುವಿ 3ಎಕ್ಸ್ಒ'ಗೆ ಭಾರೀ ಬೇಡಿಕೆಯಿದ್ದು, ಇದರ ವಿವಿಧ ರೂಪಾಂತರಗಳನ್ನು (ವೇರಿಯೆಂಟ್) ವಿತರಣೆ ಪಡೆಯಲು ಒಂದಷ್ಟು ಸಮಯ ಕಾಯಲೇಬೇಕು.

Suzuki e-Access: ಸುಜುಕಿ ಎಲೆಕ್ಟ್ರಿಕ್ ಆಕ್ಸಿಸ್ ರಿವ್ಯೂ

ಇದೆ ವರ್ಷದ ಆರಂಭದಲ್ಲಿ ನಡೆದ ಆಟೋ ಎಕ್ಸ್‌ಪೋ 2025 ರಲ್ಲಿ ಹಲವು ಬ್ರ್ಯಾಂಡ್‌ಗಳು ಎಲೆಕ್ಟ್ರಿಕ್ ವಾಹನಗಳನ್ನು ಬಹಿರಂಗಪಡಿಸಿದ್ದವು. ಜಪಾನಿನ ದ್ವಿಚಕ್ರ ವಾಹನ ತಯಾರಕ ಸುಜುಕಿ ಗಿಕ್ಸರ್ 250 ಫ್ಲೆಕ್ಸ್-ಫ್ಯೂಲ್ ಆವೃತ್ತಿ ಸಹ ಬಹಿರಂಗಗೊಂಡಿತ್ತು. ಹೊಸ ಆಕ್ಸಿಸ್ 125 ಎಲೆಕ್ಟ್ರಿಕ್ ಆವೃತ್ತಿ ಕೂಡ ಅನಾವರಣಗೊಂಡಿತ್ತು. ಇದೀಗ 4 ತಿಂಗಳ ನಂತರ, ಸುಜುಕಿ ಇ-ಆಕ್ಸೆಸ್ ಬಿಡುಗಡೆಯಾಗಲು ಸಜ್ಜಾಗಿದೆ. ಈ ಆಕರ್ಷಕ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಓಡಿಸಿ ರಿವ್ಯೂ ನೀಡಲು ಕಂಪನಿ ನಮ್ಮನ್ನು ಆಹ್ವಾನಿಸಿದೆ. ಆದ್ದರಿಂದ, ಬೆಂಗಳೂರಿನಲ್ಲಿ ಕೆಲವು ಗಂಟೆಗಳ ಕಾಲ ಸುಜುಕಿ ಇ-ಆಕ್ಸಿಸ್ ಅನ್ನು ಪರೀಕ್ಷಿಸಿದ ಬಳಿಕ ನಮ್ಮ ಅಭಿಪ್ರಾಯಗಳನ್ನು ಇಲ್ಲಿ ವಿವರಿಸಿದ್ದೇವೆ.

TVS: ಪ್ರಖ್ಯಾತ 'ಟಿವಿಎಸ್ ಅಪಾಚೆ' ಬೈಕ್‌ಗಾಗಿ ಕ್ಯೂ ನಿಂತ ಗ್ರಾಹಕರು..

ಟಿವಿಎಸ್ ಅಪಾಚೆ (TVS Apache) ಜನಪ್ರಿಯ ಪ್ರೀಮಿಯಂ ಮೋಟಾರ್‌ಸೈಕಲ್ ಆಗಿ ಹೊರಹೊಮ್ಮಿದೆ. ಇದು ಹೆಚ್ಚು ಆಕರ್ಷಕವಾಗಿದ್ದು, ಗ್ರಾಹಕರು ಕೂಡ ಮುಗಿಬಿದ್ದು ಖರೀದಿ ಮಾಡುತ್ತಿದ್ದಾರೆ. ಈ ಏಪ್ರಿಲ್ ತಿಂಗಳಲ್ಲೂ ಇದೇ 'ಅಪಾಚೆ' ಬೈಕ್ ಉತ್ತಮ ಸಂಖ್ಯೆಯಲ್ಲಿಯೂ ಮಾರಾಟಗೊಂಡಿದೆ. ಅದಕ್ಕೆ ಸಾಕ್ಷಿ ಎಂಬಂತೆ ದೇಶೀಯ ಮಾರುಕಟ್ಟೆಯಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾದ ಪ್ರಮುಖ 10 ಮೋಟಾರ್‌ಸೈಕಲ್‌ಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಮೊದಲ ಸ್ಥಾನದಲ್ಲಿ ಹೀರೋ ಸ್ಪ್ಲೆಂಡರ್, ಎರಡನೇ ಸ್ಥಾನದಲ್ಲಿ ಹೋಂಡಾ ಶೈನ್ ಹಾಗೂ ಮೂರನೇ ಸ್ಥಾನದಲ್ಲಿ ಪಲ್ಸರ್ ಬೈಕ್ ಇದೆ.