250 ಸಿಸಿ ಸಾಮರ್ಥ್ಯದ ಬೈಕ್‌ಗಳಿವು.. ಯುವಕರು ಲೈಕ್ ಮಾಡುವರು..

ಭಾರತದಲ್ಲಿನ ಬಹುತೇಕ ಯುವಕರು ಪ್ರೀಮಿಯಂ ಮೋಟಾರ್‌ಸೈಕಲ್‌ಗಳನ್ನು ಇಷ್ಟಪಡುತ್ತಾರೆ. ಆದರೆ, ಹಲವರಿಗೆ ಯಾವ ಬೈಕ್‌ನ್ನು ಖರೀದಿ ಮಾಡಬೇಕು.. ಅದು ಕೈಗೆಟುಕುವ ದರದಲ್ಲಿ ಖರೀದಿಗೆ ದೊರೆಯುತ್ತದೆಯೇ.. ಗರಿಷ್ಠ ಮೈಲೇಜ್ ನೀಡುತ್ತದೆಯೇ.. ಜೊತೆಗೆ ಏನಿಲ್ಲ ವೈಶಿಷ್ಟ್ಯಗಳನ್ನು ಹೊಂದಿರುತ್ತದೆ ಎಂಬ ಹಲವು ಗೊಂದಲಗಳಿರುತ್ತವೆ. ನಾವಿಲ್ಲಿ 250 ಸಿಸಿ ಸಾಮರ್ಥ್ಯದ ಜನಪ್ರಿಯ ಕಂಪನಿಗಳ ಪ್ರಮುಖ ಮೋಟಾರ್‌ಸೈಕಲ್‌ಗಳ ಬೆಲೆ ಹಾಗೂ ವಿಶೇಷತೆಗಳ ಕುರಿತಂತೆ ಒಂದಷ್ಟು ವಿವರಗಳನ್ನು ತಿಳಿಸಿಕೊಟ್ಟಿದ್ದೇವೆ.

ಸಿಟ್ರನ್ - ಜೀಪ್ 2025 ರ ಬೇಸಿಗೆ ಅಭಿಯಾನ ಪ್ರಾರಂಭ

ಸ್ಟೆಲ್ಲಾಂಟಿಸ್ ಒಡೆತನದ ಬ್ರ್ಯಾಂಡ್‌ಗಳಾದ ಸಿಟ್ರನ್ ಮತ್ತು ಜೀಪ್ ಕಂಪನಿಗಳು, ತಮ್ಮ ಮೀಸಲಾದ ಸೇವಾ ಅಭಿಯಾನಗಳಾದ ಜೀಪ್ ಸಮ್ಮರ್ ಸ್ಪ್ಲಾಶ್ 2025 ಮತ್ತು ಸಿಟ್ರನ್ ಸಮ್ಮರ್ ಕ್ರೂಸ್ 2025 ಅನ್ನು ಪ್ರಾರಂಭಿಸಿವೆ. ಮೇ 2 ರಿಂದ ಮೇ 31, 2025 ರವರೆಗೆ ಅನ್ವಯವಾಗುವ ಈ ಸೀಮಿತ ಅವಧಿಯ ಉಪಕ್ರಮಗಳು ವಾಹನ ಸಿದ್ಧತೆಯನ್ನು ಹೆಚ್ಚಿಸಲು, ಕಾಲೋಚಿತ ಮೌಲ್ಯವನ್ನು ನೀಡಲು ಮತ್ತು ಭಾರತಾದ್ಯಂತದ ಎಲ್ಲಾ ಅಧಿಕೃತ ಜೀಪ್ ಮತ್ತು ಸಿಟ್ರನ್ ಡೀಲರ್‌ಶಿಪ್‌ಗಳು ಮತ್ತು ಕಾರ್ಯಾಗಾರಗಳಲ್ಲಿ ಗ್ರಾಹಕರಿಗೆ ಉತ್ತಮ ಸೇವಾ ಅನುಭವವನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದೆ.

50+ Km ಮೈಲೇಜ್.. ಅಗ್ಗದ 'Hero Super Splendor XTEC'ಗೆ ಬದಲಿ..

ಹೀರೋ ಸೂಪರ್ ಸ್ಪ್ಲೆಂಡರ್ ಎಕ್ಸ್‌ಟೆಕ್ (Hero Super Splendor XTEC) ಪ್ರಮುಖ ಬೈಕ್ ಆಗಿದೆ. ಇದು ರೂ.88,000 ರಿಂದ ರೂ.92,000 (ಎಕ್ಸ್-ಶೋರೂಂ) ದರವನ್ನು ಪಡೆದಿದೆ. 124.7 ಸಿಸಿ ಪೆಟ್ರೋಲ್ ಎಂಜಿನ್‌ ಆಯ್ಕೆಯನ್ನು ಒಳಗೊಂಡಿದ್ದು, 50 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ. ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಬ್ಲೂಟೂತ್ ಕನೆಕ್ಟಿವಿಟಿ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಯ ದೃಷ್ಟಿಯಿಂದ ಡ್ರಮ್/ ಡಿಸ್ಕ್ ಬ್ರೇಕ್‌ಗಳನ್ನು ಪಡೆದಿದೆ. ನೀವು 'ಸೂಪರ್ ಸ್ಪ್ಲೆಂಡರ್ ಎಕ್ಸ್‌ಟೆಕ್' ಬದಲಾಗಿ ಈ 3 ಜನಪ್ರಿಯ ಮೋಟಾರ್‌ಸೈಕಲ್‌ಗಳನ್ನು ಕೂಡ ಖರೀದಿ ಮಾಡಬಹುದು. ಬನ್ನಿ, ಇವುಗಳ ಬೆಲೆ ಹಾಗೂ ವಿಶೇಷತೆಗಳ ಕುರಿತಂತೆ ಒಂದಷ್ಟು ವಿವರಗಳನ್ನು ತಿಳಿಯೋಣ.

24 ಕಿ.ಮೀ ಮೈಲೇಜ್.. 8 ಲಕ್ಷ, 5-ಸೀಟರ್.. ಈ ಜನಪ್ರಿಯ 'Tata Suv'ಗೆ..

ಟಾಟಾ ನೆಕ್ಸಾನ್ (Tata Nexon) ಜನಪ್ರಿಯ ಕಾಂಪ್ಯಾಕ್ಟ್ ಎಸ್‌ಯುವಿಯಾಗಿ ಹೊರಹೊಮ್ಮಿದ್ದು, ಹಳ್ಳಿಯಿಂದ ದಿಲ್ಲಿವರೆಗೆ ಮನೆ ಮಾತಾಗಿದೆ. ಈ ಕಾರು ಹೆಚ್ಚು ಆಕರ್ಷಕವಾದ ವಿನ್ಯಾಸ & ವೈಶಿಷ್ಟ್ಯಗಳನ್ನು ಪಡೆದುಕೊಂಡಿದ್ದು, ಅತಿ ಹೆಚ್ಚಿನ ಸಂಖ್ಯೆಯಲ್ಲಿಯೂ ಮಾರಾಟವಾಗುತ್ತಿದೆ. ಖರೀದಿದಾರರು ಕೂಡ ಮುಗಿಬಿದ್ದು ಕೊಂಡುಕೊಳ್ಳುತ್ತಿದ್ದಾರೆ. ಈ ಏಪ್ರಿಲ್ ತಿಂಗಳಲ್ಲೂ ಇದೇ 'ನೆಕ್ಸಾನ್' ಎಸ್‌ಯುವಿ ಭಾರೀ ಪ್ರಮಾಣದಲ್ಲಿ ಮಾರಾಟಗೊಂಡಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
Advertisement

ಅಮ್ಮಂದಿರ ದಿನಕ್ಕೆ ಶುಭ ಕೋರಲು ಇಲ್ಲಿದೆ ಶುಭಾಶಯಗಳು ಮತ್ತು ಸಂದೇಶಗಳು

ತಾಯಂದಿರ ದಿನ ವರ್ಷದ ವಿಶೇಷ ದಿನ. ನಿಮ್ಮ ಮೊದಲ ಗೆಳತಿ,ನಿಮ್ಮ ಮೊದಲ ಸ್ನೇಹಿತೆಗೆ ವಿಶೇಷ ಗೌರವ ಸಲ್ಲಿಸುವ ದಿನ. ನಿಮಗೆ ಯಾವುದೋ ವಿಚಾರಕ್ಕೆ ಸಲಹೆ ಬೇಕಿದ್ದರೆ ಮೊದಲು ಮುಖ ಮಾಡುವುದೇ ತಾಯಿಯ ಎಡೆಗೆ.

ತಾಯಿಯೇ ಭೂಮಿಯಲ್ಲಿ ಕಾಣುವ ಮೊದಲ ದೇವರು. ನಿಮಗೆ ತಿಳಿದಿರುವ ತಾಯಂದಿರನ್ನು ನೀವು ಗೌರವಿಸುವ ಈ ಸುದಿನದಂದು ನಾವಿಲ್ಲಿ ತಾಯಂದಿರ ಬಗೆಗೆ ಹಿರಿಯ ಜೀವಗಳು ಹೇಳಿರುವ ಕೆಲವು ಅಧ್ಬುತ ಮಾತುಗಳನ್ನು ನಿಮಗಾಗಿ ತಿಳಿಸುತ್ತಿದ್ದೇವೆ.

"ತಾಯಿಯೇ ನಿಮ್ಮ ಮೊದಲ ಸ್ನೇಹಿತೆ, ಉತ್ತಮ ಸ್ನೇಹಿತೆ, ನಿಮ್ಮ ಶಾಶ್ವತ ಸ್ನೇಹಿತೆ."

ಮೊನ್ನೆಯಷ್ಟೆ ಬಿಡುಗಡೆಯಾದ 2025 TRK ಅಡ್ವೆಂಚರ್ ಬೈಕ್ ಸೀರೀಸ್

ಪ್ರಮುಖ ಮೋಟಾರ್‌ಸೈಕಲ್ ತಯಾರಕ ಬೆನೆಲ್ಲಿ ಇಂಡಿಯಾ, ತನ್ನ ಹೊಸ TRK 2025 ಸಿರೀಸ್ ಮೋಟಾರ್‌ಸೈಕಲ್‌ಗಳನ್ನು ಇತ್ತೀಚೆಗೆ ಭಾರತದಲ್ಲಿ ಬಿಡುಗಡೆ ಮಾಡಿದೆ. ಹೊಸ TRK 2025 ಸಿರೀಸ್ ಮೋಟಾರ್‌ಸೈಕಲ್‌ಗಳು 2 ವರ್ಷಗಳ ಅನಿಯಮಿತ ಕಿ.ಮೀ ವಾರಂಟಿ ಮತ್ತು ಗ್ರಾಹಕರಿಗೆ 24x7 ರಸ್ತೆಬದಿಯ ಸಹಾಯದ ಸೌಲಭ್ಯದೊಂದಿಗೆ ಬರುತ್ತದೆ. ಉತ್ಸಾಹಭರಿತ ಸವಾರರಿಗೆ ಅತ್ಯುತ್ತಮ ಮೌಲ್ಯವನ್ನು ಸಂಯೋಜಿಸುವ ಮೋಟಾರ್‌ಸೈಕಲ್‌ಗಳನ್ನು ತಲುಪಿಸುವ ಬೆನೆಲ್ಲಿಯ ಬದ್ಧತೆಯನ್ನು ಇದು ಪ್ರತಿಬಿಂಬಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

ಮೊನ್ನೆಯಷ್ಟೆ ಅನಾವರಣ: ಕಿಯಾ 'ಕ್ಲಾವಿಸ್' ಎಂಪಿವಿ ಸಂಪೂರ್ಣ ಮಾಹಿತಿ

ಪ್ರಮುಖ ಕಾರು ತಯಾರಕ ಕಂಪನಿಯಾದ ಕಿಯಾ, ಮೊನ್ನೆಯಷ್ಟೆ ತನ್ನ ಹೊಸ ಎಂಪಿವಿ ''ಕಾರೆನ್ಸ್ ಕ್ಲಾವಿಸ್'' ಅನ್ನು ಅನಾವರಣಗೊಳಿಸಿದೆ. ಇದು ಆಧುನಿಕ ಕುಟುಂಬಗಳಿಗಾಗಿ ರಚಿಸಲಾಗಿರುವ ದೊಡ್ಡ, ದಿಟ್ಟ ಮತ್ತು ವಿಶಾಲವಾದ 3-ಸಾಲಿನ ಆಸನಗಳನ್ನು ಹೊಂದಿರುವ MPV ವಾಹನವಾಗಿದೆ. ಸೌಕರ್ಯ, ವಿಶಾಲವಾದ ಸ್ಥಳ, ಸುಧಾರಿತ ತಂತ್ರಜ್ಞಾನ, ಸುರಕ್ಷತೆ ಮತ್ತು ಫ್ಯೂಚರಿಸ್ಟಿಕ್ ಡಿಸೈನ್‌ನೊಂದಿಗೆ ಅನಾವರಣಗೊಂಡಿದೆ. "ಕ್ಲಾವಿಸ್" ಎಂಬ ಹೆಸರು ಲ್ಯಾಟಿನ್ ಪದವಾದ ಕ್ಲಾವಿಸ್ ಔರಿಯಾದಿಂದ ಬಂದಿದೆ, ಇದರರ್ಥ "ಗೋಲ್ಡನ್ ಕೀ" ಎಂದು ಕಂಪನಿ ಹೇಳಿಕೊಂಡಿದೆ. ಈ ಬೃಹತ್ ಕಾರಿನ ಕುರಿತ ವಿವರವಾದ ಮತ್ತಷ್ಟು ಮಾಹಿತಿ ಇಲ್ಲಿದೆ.

449 Km ರೇಂಜ್, 5-ಸೀಟರ್.. ಹೊಸ MG SUVಗೆ ಮುಗಿಬಿದ್ದ ಗ್ರಾಹಕರು..

ಬಹುನಿರೀಕ್ಷಿತ ಎಂಜಿ ವಿಂಡ್ಸರ್ ಇವಿ ಪ್ರೊ (MG Windsor EV Pro) ಎಲೆಕ್ಟ್ರಿಕ್ ಎಸ್‌ಯುವಿಯನ್ನು ಮಂಗಳವಾರ ಬಿಡುಗಡೆಗೊಳಿಸಲಾಗಿತ್ತು. ಈ ಕಾರು ಹಲವು ಹೊಸತನಗಳಿಗೆ ಸಾಕ್ಷಿಯಾಗಿದೆ. ಇದು ಟಾಟಾ ಕರ್ವ್, ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್ ಮತ್ತು ಟಾಟಾ ನೆಕ್ಸಾನ್ ಇವಿಗಳಿಗೆ ಪ್ರಬಲವಾಗಿ ಸ್ಪರ್ಧೆಯೊಡ್ಡಬಲ್ಲದು. ಸದ್ಯ ದೇಶೀಯ ಗ್ರಾಹಕರಿಂದ 'ವಿಂಡ್ಸರ್ ಇವಿ ಪ್ರೊ'ಗಾಗಿ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ನಾಮುಂದು - ತಾಮುಂದು ಎಂಬಂತೆ ಬುಕ್ಕಿಂಗ್ ಮಾಡಿದ್ದಾರೆ. ಬನ್ನಿ, ಆ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಬಿಡುಗಡೆ ಮುನ್ನವೆ ಡೀಲರ್‌ಶಿಪ್ ತಲುಪಿದ MG M9 ಲಿಮೋಸಿನ್ ಕಾರು

ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್ ಪೋ 2025 ರಲ್ಲಿ ಎಂಜಿ ಮೋಟಾರ್ ತನ್ನ ಬಹುನಿರೀಕ್ಷಿತ ಎಂ9 ಲಿಮೋಸಿನ್ ಕಾರನ್ನು ಪ್ರದರ್ಶಿಸಿತ್ತು. ಈ ಕಾರು ಭಾರತದಲ್ಲಿ ಇದೀಗ ಮಾರಾಟವಾಗಲು ಸಜ್ಜಾಗಿದೆ. ಇತ್ತೀಚೆಗಷ್ಟೆ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಎಂ9 ಎಲೆಕ್ಟ್ರಿಕ್ ಲಿಮೋಸಿನ್ ಕಾರಿನ ಬುಕಿಂಗ್ ಅನ್ನು ರೂ. 51,000 ಟೋಕನ್ ಮೊತ್ತದೊಂದಿಗೆ ಅಧಿಕೃತವಾಗಿ ಪ್ರಾರಂಭಿಸಿತ್ತು. ಅಷ್ಟರಲ್ಲಾಗಲೆ ಕಾರು ಡೀಲರ್‌ಶಿಪ್‌ಗಳನ್ನು ತಲುಪುತ್ತಿರುವುದು ಹಲವರನ್ನು ಅಚ್ಚರಿಗೊಳಿಸಿದೆ. ಎಂಜಿ ಎಂ 9 ಲಿಮೋಸಿನ್ ಇತ್ತೀಚಿನ ವೀಡಿಯೊದಲ್ಲಿ ಡೀಲರ್ ಶಿಪ್‌ಗೆ ಆಗಮಿಸುತ್ತಿರುವುದು ಕಂಡುಬಂದಿದೆ.

Mother's Day: ನಿಮ್ಮ ಹೆತ್ತಮ್ಮನಿಗೆ ಸರ್ಪ್ರೈಸ್‌ ಗಿಫ್ಟ್ ಕೊಡಲು..

ಅಮ್ಮ ಎಂದರೆ ಪ್ರೀತಿ, ನಂಬಿಕೆ, ತ್ಯಾಗ.. ಪ್ರತಿ ಕ್ಷಣ ಬದಲಾಗುವ ಭೂಮಿಯಲ್ಲಿ ಎಂದು ಬದಲಾಗದೆ ಹಾಗೆಯೇ ಉಳಿಯುವುದು ಒಂದೇ ಒಂದು ಅದು ತಾಯಿಯ ಪ್ರೀತಿ.. ಪ್ರತಿ ವರ್ಷ ವಿಶ್ವದಾದ್ಯಂತ ಮೇ ತಿಂಗಳ ಎರಡನೇ ಭಾನುವಾರದಂದು ತಾಯಂದಿರ ದಿನವನ್ನು (Mother's Day) ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ವರ್ಷ ಇದೇ 11ರಂದು ಅಮ್ಮಂದಿರ ದಿನ ಬಂದಿದೆ. ಆ ದಿನ ನಿಮ್ಮ ತಾಯಿಗೆ ಹೊಚ್ಚ ಹೊಸ ಸ್ಕೂಟರ್‌ವೊಂದನ್ನು ಸರ್ಪ್ರೈಸ್‌ ಗಿಫ್ಟ್ ನೀಡಲು ಆಲೋಚಿದ್ದೀರಾ.. ಹಾಗಾದರೆ, ಹೀರೋ ಪ್ಲೆಷರ್ ಪ್ಲಸ್, ಟಿವಿಎಸ್ ಜೆಸ್ಟ್ 110, ಹೀರೋ ಡೆಸ್ಟಿನಿ 125, ಹೋಂಡಾ ಆಕ್ಟಿವಾ ಇ ಹಾಗೂ ಎಥರ್ ರಿಜ್ಟಾ ಮಾಡೆಲ್‌ಗಳು ಹೆಚ್ಚು ಸೂಕ್ತವಾಗಲಿವೆ. ನಾವಿಲ್ಲಿ ಇವುಗಳ ಬೆಲೆ ಹಾಗೂ ವಿಶೇಷತೆಗಳ ಕುರಿತಂತೆ ಸಂಕ್ಷಿಪ್ತವಾದ ವಿವರವನ್ನು ತಿಳಿಸಿಕೊಟ್ಟಿದ್ದೇವೆ.

ಹೊಸದಾಗಿ ಬಿಡುಗಡೆಯಾಗಿದೆ ಖರ್ಚಿಲ್ಲದೆ ನಿತ್ಯ 89 ಕಿ.ಮೀ ಓಡುವ ಸ್ಕೂಟರ್

ಮುಂಬೈ ಮೂಲದ ಇವಿ ತಯಾರಕ ಕಂಪನಿಯಾದ ಒಡಿಸ್ಸೆ ಎಲೆಕ್ಟ್ರಿಕ್ ವೆಹಿಕಲ್ಸ್ 'ಹೈಫೈ' ಎಂಬ ಕಡಿಮೆ ವೇಗದ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಿದೆ. ಇದು ತೀರ ಅಗ್ಗದ ಬೆಲೆ ರೂ. 42,000 (ಎಕ್ಸ್-ಶೋರೂಂ) ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಆರಂಭಿಕ ಹಂತದ ಗ್ರಾಹಕರು ವಿಶೇಷ ರಿಯಾಯಿತಿಗಳು ಮತ್ತು ವಾರೆಂಟಿ ಪ್ರಯೋಜನಗಳನ್ನು ಪಡೆಯಬಹುದು. ಈ ಹೊಸ ಸ್ಕೂಟರ್ ನಾಳೆಯಿಂದ (ಮೇ 10, 2025) ಒಡಿಸ್ಸೆಯ ಡೀಲರ್‌ಶಿಪ್ ನೆಟ್‌ವರ್ಕ್ ಮತ್ತು ಇ - ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಭಾರತದಾದ್ಯಂತ ಖರೀದಿಗೆ ಲಭ್ಯವಿರುತ್ತದೆ ಎಂದು ಕಂಪನಿ ತಿಳಿಸಿದೆ.

5 ಲಕ್ಷದ ಈ Maruti Suzuki ಕಾರಂದ್ರೆ ಗ್ರಾಹಕರಿಗೆ ಬಲು ಪ್ರೀತಿ..

ಮಾರುತಿ ಸುಜುಕಿ ವ್ಯಾಗನ್ಆರ್ (Maruti Suzuki WagonR) ಪ್ರಮುಖ ಹ್ಯಾಚ್‌ಬ್ಯಾಕ್ ಆಗಿದೆ. ಇದು ಹೆಚ್ಚು ಆಕರ್ಷಕವಾಗಿದ್ದು, ಕೈಗೆಟುಕುವ ಬೆಲೆಯಲ್ಲಿಯೂ ಖರೀದಿಗೆ ದೊರೆಯುತ್ತದೆ. ಶ್ರೀಮಂತರಿಂದ ಹಿಡಿದು ಎಲ್ಲ ವರ್ಗದ ಗ್ರಾಹಕರು ಕೂಡ ಮುಗಿಬಿದ್ದು ಕೊಂಡುಕೊಳ್ಳುತ್ತಾರೆ. ಆದರೂ ತಿಂಗಳಿಂದ ತಿಂಗಳಿಗೆ 'ವ್ಯಾಗನ್ಆರ್' ಮಾರಾಟ ಸಂಖ್ಯೆ ಕುಸಿತವಾಗುತ್ತಲೇ ಇದೆ. ಅದಕ್ಕೆ ಈ ಏಪ್ರಿಲ್‌ ಸಹ ಹೊರತಾಗಿಲ್ಲ. ಬನ್ನಿ, ಆ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ. ಕಳೆದ ತಿಂಗಳು (ಏಪ್ರಿಲ್-2025) ಮಾರುತಿ ಸುಜುಕಿ ಕಂಪನಿಯು ಸರಿ ಸುಮಾರು 13,413 ಯುನಿಟ್ ವ್ಯಾಗನ್ಆರ್ ಹ್ಯಾಚ್‌ಬ್ಯಾಕ್‌ಗಳನ್ನು ಮಾರಾಟಗೊಳಿಸಿದೆ. ಅದೇ ಮಾರ್ಚ್ ತಿಂಗಳಲ್ಲಿ ಮಾರಲ್ಪಟ್ಟ 17,175 ಯುನಿಟ್‌ಗಳಿಗೆ ಹೋಲಿಕೆ ಮಾಡಿದರೆ, ಮಾರಾಟ ಪ್ರಮಾಣವು ಸಾಕಷ್ಟು ಇಳಿಕೆಯಾಗಿದೆ. ಆದರೂ ಏಪ್ರಿಲ್‌ನಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟಗೊಂಡ ಪ್ರಮುಖ 10 ಕಾರುಗಳ ಪಟ್ಟಿಯಲ್ಲಿ ಇದೇ 'ವ್ಯಾಗನ್ಆರ್' 9ನೇ ಸ್ಥಾನದಲ್ಲಿದೆ.
Advertisement

Yamaha: ಇತ್ತೀಚೆಗೆ ಬಿಡುಗಡೆಯಾಗಿದೆ ಪವರ್‌ಫುಲ್ ಯಮಹಾ ಸ್ಕೂಟರ್

ಯಮಹಾ (Yamaha) ರೇಸಿಂಗ್ ಡಿಎನ್‌ಎಯನ್ನು ಪ್ರತಿಬಿಂಬಿಸುವ ಬಾಡಿ ಮತ್ತು ಸೈಡ್ ಫೇರಿಂಗ್‌ಗಳಲ್ಲಿ ನವೀಕರಿಸಿದ ಡಿಸೈನ್‌ನೊಂದಿಗೆ ಇತ್ತೀಚೆಗೆ 2025 ರ ಏರೋಕ್ಸ್ 155 ಆವೃತ್ತಿ S ಮಾದರಿಗೆ ಗಮನಾರ್ಹವಾದ ಹೊಸ ಬಣ್ಣಗಳನ್ನು ಪರಿಚಯಿಸಿ ಬಿಡುಗಡೆ ಮಾಡಿದೆ. ಯಮಹಾ ತನ್ನ ಪ್ರೀಮಿಯಂ ಬ್ರ್ಯಾಂಡ್ ಅಭಿಯಾನ - ದಿ ಕಾಲ್ ಆಫ್ ದಿ ಬ್ಲೂ ಅಡಿಯಲ್ಲಿ 2025 ರ ಏರೋಕ್ಸ್ 155 ಆವೃತ್ತಿ S ಅನ್ನು ಬಿಡುಗಡೆ ಮಾಡಲಾಗಿದೆ. ಈ ಸ್ಕೂಟರ್ ಯುವ ಗ್ರಾಹಕರನ್ನು ಆಕರ್ಷಿಸುವುದು ಪಕ್ಕಾ ಎಂದು ಕಂಪನಿ ಭರವಸೆ ನೀಡಿದೆ.

ಟೊಯೊಟಾ ಇನ್ನೋವಾ ಕ್ರಿಸ್ಟಾಗೆ ನಡುಕ ಹುಟ್ಟಿಸಿದೆ ಹೊಸದಾಗಿ ಬಿಡುಗಡೆ

ಕಿಯಾ ತನ್ನ ಹೊಸ ಕ್ಲಾವಿಸ್ ಎಂಪಿವಿಯನ್ನು ಕೊನೆಗೂ ನಿನ್ನೆ ಅನಾವರಣಗೊಳಿಸಿದ್ದು, ಕಿಯಾ ಕಾರೆನ್ಸ್ ಕ್ಲಾವಿಸ್ ಎಂಬ ಹೆಸರಿನಲ್ಲಿ ಭಾರತದಲ್ಲಿ ಪರಿಚಯಿಸಿದೆ. ಇದು ತುಸು ಪ್ರೀಮಿಯಂ ಎಂಪಿವಿಯಾಗಿದ್ದು, ಬೆಲೆಗಳನ್ನು ಘೋಷಿಸಿದ ಬಳಿಕ ಕಾರು ಬೆಲೆಗೆ ತಕ್ಕ ಮಾದರಿಯಾಗಿದೆಯೇ ಎಂಬುದನ್ನು ಹೇಳಬಹುದು. ನಮ್ಮ ಪ್ರಕಾರ ಬೆಲೆಗಳನ್ನು ಮುಂದಿನ ತಿಂಗಳು ಘೋಷಿಸಬಹುದು. ಸದ್ಯ ಭಾರತದಲ್ಲಿ ಈ ಕಾರು ಟೊಯೋಟಾ ಇನ್ನೋವಾ ಕ್ರಿಸ್ಟಾಗೆ ಪರ್ಯಾಯ ಆಯ್ಕೆಯಾಗಿದೆ. ಹಾಗಾದರೆ ವಿಶೇಷಣಗಳ ವಿಷಯದಲ್ಲಿ ಎರಡೂ ಕಾರುಗಳು ಹೇಗಿವೆ ಎಂಬುದನ್ನು ಇಲ್ಲಿ ನೋಡೋಣ.

ಎಲೆಕ್ಟ್ರಿಕ್ ಕಾರು ಮಾರಾಟದಲ್ಲಿ ನಮ್ಮ ಟಾಟಾ ಕಂಪನಿಯೇ ನಂ.1..

ಭಾರತದಲ್ಲಿ ಎಲೆಕ್ಟ್ರಿಕ್ ಕಾರು ಮಾರುಕಟ್ಟೆ ವೇಗವಾಗಿ ಬೆಳವಣಿಗೆಯಾಗುತ್ತಿದೆ. ಹತ್ತಾರು ಕಂಪನಿಗಳು ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಹೊಂದಿರುವ ವಿವಿಧ ಎಲೆಕ್ಟ್ರಿಕ್ ಕಾರುಗಳನ್ನು ಯಶಸ್ವಿಯಾಗಿ ಮಾರಾಟಗೊಳಿಸುತ್ತಿವೆ. ಇವುಗಳನ್ನು ಗ್ರಾಹಕರು ಕೂಡ ನಾಮುಂದು - ತಾಮುಂದು ಎಂಬಂತೆ ಖರೀದಿಗೆ ಮಾಡುತ್ತಿದ್ದಾರೆ. ಸದ್ಯ, ಈ ಏಪ್ರಿಲ್ ತಿಂಗಳಲ್ಲಿ ಜನಪ್ರಿಯ ವಾಹನ ತಯಾರಕ ಕಂಪನಿಗಳು ಮಾರಲ್ಪಟ್ಟ ಒಟ್ಟಾರೆ ಎಲೆಕ್ಟ್ರಿಕ್ ಕಾರುಗಳ ಅಂಕಿಅಂಶದ ವರದಿ ಪ್ರಕಟಗೊಂಡಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

Tata: ಇದೇ ತಿಂಗಳ 22ಕ್ಕೆ ಹೊಸ ಟಾಟಾ ಹ್ಯಾಚ್‌ಬ್ಯಾಕ್ ಬಿಡುಗಡೆ

ಟಾಟಾ ಮೋಟಾರ್ಸ್ (Tata Motors) ಶೀಘ್ರದಲ್ಲೇ ಹೊಸ ಆಲ್ಟ್ರೋಜ್ ಅನ್ನು ಬಿಡುಗಡೆ ಮಾಡಲು ಸಜ್ಜಾಗುತ್ತಿದೆ. ಮೂಲಗಳ ಪ್ರಕಾರ ಇದು ಕೆಲ ವಿನ್ಯಾಸ ಬದಲಾವಣೆಗಳು ಹಾಗೂ ಹೊಸ ಫೀಚರ್ಸ್‌ಗಳ ಜೋಡಣೆ ಸೇರಿದಂತೆ ಇಂಟೀರಿಯರ್‌ನಲ್ಲಿ ಹೊಸ ಬದಲಾವಣೆಗಳೊಂದಿಗೆ ಬಿಡುಗಡೆಯಾಗಲಿದೆ. ಬಿಡುಗಡೆಗೂ ಮುನ್ನ ಕಾರು ಹೇಗಿರಲಿದೆ ಎಂದು ತೋರಿಸುವ ಟೀಸರ್‌ಗಳು ಈಗಾಗಲೇ ಹೊಸ ಟಾಟಾ ಆಲ್ಟ್ರೋಜ್ ಮೇಲೆ ನಿರೀಕ್ಷೆಗಳನ್ನು ಹೆಚ್ಚಿಸಿವೆ. ಕಂಪನಿ ಹೇಳಿಕೊಂಡಿರುವಂತೆ ಈ ಹೊಸ ಫೇಸ್‌ಲಿಫ್ಟ್ ಆವೃತ್ತಿಯನ್ನು ಇದೇ ತಿಂಗಳ 22 ರಂದು ಬಿಡುಗಡೆ ಮಾಡಲಾಗುವುದು.

ದಿನಾಲೂ ಕೆಲಸಕ್ಕೆ ಹೋಗಬೇಕೇ.. ಬೆಸ್ಟ್ ಮೈಲೇಜ್‌ನ 7..

ಪ್ರತಿನಿತ್ಯ ಕಚೇರಿ ಕೆಲಸಕ್ಕೆ ತೆರಳುವವರಿಗೆ ಮೋಟಾರ್‌ಸೈಕಲ್‌ಗಳು ತೀರಾ ಅನಿವಾರ್ಯವಾಗಿವೆ. ಆದರೆ, ಹಲವರಿಗೆ ಯಾವ ಬೈಕ್ ತೆಗೆದುಕೊಂಡರೆ ಹೆಚ್ಚು ಒಳಿತು. ಅದು ದೀರ್ಘಕಾಲ ಬಾಳಿಕೆ ಬರುತ್ತದೆಯೇ.. ಬಜೆಟ್ ಬೆಲೆಯಲ್ಲಿ ಸಿಗುತ್ತಾ.. ಗರಿಷ್ಠ ಮೈಲೇಜ್ ನೀಡುತ್ತದೆಯೇ ಎಂಬಿತ್ಯಾದಿ ಗೊಂದಲಗಳಿರುತ್ತವೆ. ನಾವಿಲ್ಲಿ ದಿನಬಳಕೆಗೆ ಹೆಚ್ಚು ಸೂಕ್ತವಾರುವುದರೊಂದಿಗೆ ಜಾಸ್ತಿ ಮೈಲೇಜ್ ಕೊಡಬಲ್ಲ 7 ಪ್ರಮುಖ ಮೋಟಾರ್‌ಸೈಕಲ್‌ಗಳ ಬೆಲೆ ಹಾಗೂ ವಿಶೇಷತೆಗಳ ಕುರಿತಂತೆ ಒಂದಷ್ಟು ವಿವರಗಳನ್ನು ತಿಳಿಸಿಕೊಟ್ಟಿದ್ದೇವೆ.

ಪಕ್ಕಾ ಫ್ಯಾಮಿಲಿ ಸ್ಕೂಟರ್: ಆಕ್ಟಿವಾಗೆ ಸರಿಯಾದ ಪ್ರತಿಸ್ಪರ್ಧಿ

ಪ್ರಸ್ತುತ ಯುವಜನತೆ ಪರ್ಫಾಮೆನ್ಸ್ ಮೋಟಾರ್‌ಸೈಕಲ್‌ಗಳ ಬದಲಾಗಿ ಪವರ್‌ಫುಲ್‌ ಎಂಜಿನ್‌ ಜೊತೆಗೆ ಉತ್ತಮ ಮೈಲೇಜ್ ನೀಡುವ ಸ್ಕೂಟರ್‌ಗಳನ್ನು ಹೆಚ್ಚಾಗಿ ಇಷ್ಟಪಡುತ್ತಿದ್ದಾರೆ. ಇವು ಗೇರ್‌ ಬದಲಿಸುವ ಮೋಟಾರ್‌ಸೈಕಲ್‌ಗಳಿಗಿಂತ ಆರಾಮದಾಯಕವಾದ ಚಾಲನಾ ಅನುಭವ ನೀಡುತ್ತವೆ. ಹಾಗೆಯೇ ಉತ್ತಮ ಪರ್ಫಾಮೆನ್ಸ್ ಕೂಡ ಇರುವುದರಿಂದ ನಗರದ ಟ್ರಾಫಿಕ್‌ ಜಾಮ್‌ಗಳಲ್ಲಿ ಉತ್ತಮವಾಗಿ ಓಡಿಸಬಹುದು. ಇಂತಹ ಸ್ಕೂಟರ್‌ಗಳಲ್ಲಿ ಕೆಲವೇ ಜನಪ್ರಿಯತೆ ಪಡೆದಿದ್ದು, ಅವುಗಳಲ್ಲಿ ಮುಖ್ಯವಾಗಿ ಸುಜುಕಿ ಆಕ್ಸೆಸ್ 125 ಸಿಸಿ ಸ್ಕೂಟರ್ ಬಗ್ಗೆ ಹೇಳಲೇಬೇಕು. ಇದು ಪಕ್ಕಾ ಫ್ಯಾಮಿಲಿ ಸ್ಕೂಟರ್ ಆಗಿದ್ದರೂ ಪರ್ಫಾಮೆನ್ಸ್ ವಿಷಯದಲ್ಲೂ ಹೇಳಿಮಾಡಿಸಿದಂತಿರುತ್ತದೆ.

20 ಕಿ.ಮೀ ಮೈಲೇಜ್.. 5-ಸೀಟರ್, 6 ಲಕ್ಷದ ಈ ಪ್ರಮುಖ ಕಾರಿಗೆ 90,000..

ನಿಸ್ಸಾನ್ ಮ್ಯಾಗ್ನೈಟ್ (Nissan Magnite) ವಿಶ್ವಾಸಾರ್ಹ ಎಸ್‌ಯುವಿಯಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಈ ಕಾರನ್ನು ಕೆಲವು ನವೀಕರಣಗಳಿಗೆ ಒಳಪಡಿಸಿ, 2024ರ ಅಕ್ಟೋಬರ್‌ನಲ್ಲಿ ಅದ್ದೂರಿಯಾಗಿ ಬಿಡುಗಡೆಗೊಳಿಸಲಾಗಿತ್ತು. ಇದು ಸಾಕಷ್ಟು ಆಕರ್ಷಕ ವೈಶಿಷ್ಟ್ಯಗಳನ್ನು ಪಡೆದುಕೊಂಡಿದ್ದು, ಗ್ರಾಹಕರು ಕೂಡ ನಾಮುಂದು - ತಾಮುಂದು ಎಂಬಂತೆ ಕೊಂಡುಕೊಳ್ಳುತ್ತಾರೆ. ಈ ಮೇ ತಿಂಗಳು ಇದೇ 'ಮ್ಯಾಗ್ನೈಟ್' ಎಸ್‌ಯುವಿ ಖರೀದಿ ಮೇಲೆ ದೊಡ್ಡ ಮಟ್ಟದಲ್ಲಿ ರಿಯಾಯಿತಿ ಘೋಷಣೆ ಮಾಡಲಾಗಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಆಗರ್ಭ ಶ್ರೀಮಂತನಾದ ಬಸ್‌ ಕಂಡಕ್ಟರ್

ಬಸ್ ಕಂಡಕ್ಟರ್ ಆಗಿ ಜೀವನ ಪ್ರಾರಂಭಿಸಿ ಇಂದು ವಿಶ್ವದ ದುಬಾರಿ ಕಾರುಗಳಲ್ಲಿ ಒಂದಾಗಿರುವ ರೋಲ್ಸ್ ರಾಯ್ಸ್ ಫ್ಯಾಂಟಮ್‌ನಲ್ಲಿ ಓಡಾಡುವವರೆಗೆ ನಟ ರಜನಿಕಾಂತ್ ಕಾರು ಸಂಗ್ರಹವು ಅವರ ಜೀವನವನ್ನು ಪ್ರತಿಬಿಂಬಿಸುತ್ತದೆ. ಅವರ ಗ್ಯಾರೇಜ್‌ನಲ್ಲಿ ಹಳೆಯ ಪ್ರೀಮಿಯರ್ ಪದ್ಮಿನಿಯಿಂದ ಹಿಡಿದು ಹೈಪರ್ - ಆಧುನಿಕ ಪರ್ಫಾಮೆನ್ಸ್ ಕಾರುಗಳವರಗೆ ಎಲ್ಲಾ ಮಾದರಿಗಳು ಇವೆ. ಹೆಚ್ಚಿನ ಸೆಲೆಬ್ರಿಟಿಗಳು ತಮ್ಮ ಇತ್ತೀಚಿನ ಕಾರುಗಳೊಂದಿಗೆ ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡರೆ, ರಜನಿ ಮಾತ್ರ ಪಿಸುಮಾತು ಇಲ್ಲದೆ ಮೌನವಾಗಿ ಬಂದುಹೋಗಿದ್ದು ಗೊತ್ತಿಲ್ಲದಂತೆ ವ್ಯವಹರಿಸುತ್ತಾರೆ. ಸೂಪರ್‌ಸ್ಟಾರ್‌ ಜೀವನದಲ್ಲಿ ಇಲ್ಲಿಯವರೆಗೆ ಖರೀದಿಸಿದ ಹಾಗೂ ಯಾರಿಗೂ ಗೊತ್ತಿರದ ಕಾರುಗಳ ಪಟ್ಟಿ ಇಲ್ಲಿದೆ.
Advertisement

Suzuki Access 125ಗೆ ಬದಲಾಗಿ ಈ 3 ಎಲೆಕ್ಟ್ರಿಕ್ ಸ್ಕೂಟರ್‌..

ಸುಜುಕಿ ಆಕ್ಸೆಸ್ 125 (Suzuki Access 125) ಜನಪ್ರಿಯ ಪ್ರಯಾಣಿಕ ಸ್ಕೂಟರ್ ಆಗಿದ್ದು, ದಿನಬಳಕೆಗೆ ಹೆಚ್ಚು ಸೂಕ್ತವಾಗಲಿದೆ. ಮಧ್ಯಮ ವರ್ಗದ ಗ್ರಾಹಕರು ಕೂಡ ಸುಲಭವಾಗಿ ಖರೀದಿ ಮಾಡಬಹದು. ಈ ಸ್ಕೂಟರ್ ರೂ.87,000 ರಿಂದ ರೂ.98,000 (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ಬೆಲೆಗೆ ತಕ್ಕಂತೆ ಶಕ್ತಿಯುತವಾದ ಪವರ್‌ಟ್ರೇನ್‌ನ್ನು ಹೊಂದಿದೆ. 124 ಸಿಸಿ ಸಾಮರ್ಥ್ಯದ ಪೆಟ್ರೋಲ್ ಎಂಜಿನ್ ಒಳಗೊಂಡಿದ್ದು, 45 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ. ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ ಹಾಗೂ ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ನಾವಿಲ್ಲಿ 'ಸುಜುಕಿ ಆಕ್ಸೆಸ್ 125'ಗೆ ಬದಲಿ ಆಯ್ಕೆಯಾಗಬಲ್ಲ ಪ್ರಮುಖ 3 ಎಲೆಕ್ಟ್ರಿಕ್ ಸ್ಕೂಟರ್‌ಗಳ ಬೆಲೆ ಹಾಗೂ ವಿಶೇಷತೆಗಳ ಕುರಿತಂತೆ ಸಂಕ್ಷಿಪ್ತವಾಗಿ ವಿವರಿಸಿದ್ದೇವೆ.

ಹೊಸ ಕಿಯಾ ಕ್ಲಾವಿಸ್ ಎಂಪಿವಿ ಅನಾವರಣ: ಕೇವಲ 25,000 ರೂ. ಬುಕಿಂಗ್

ಕಿಯಾ ಇಂಡಿಯಾ ಇಂದು ಕ್ಯಾರೆನ್ಸ್ ಎಂಪಿವಿಯ ಪ್ರೀಮಿಯಂ ಫೇಸ್ ಲಿಫ್ಟ್ ಆವೃತ್ತಿಯಾದ ಕಿಯಾ ಕ್ಲಾವಿಸ್ ಅನ್ನು ಅನಾವರಣಗೊಳಿಸಿದೆ. ಅಸ್ತಿತ್ವದಲ್ಲಿರುವ ಕ್ಯಾರೆನ್ಸ್ ಜೊತೆಗೆ ಹೆಚ್ಚು ಪ್ರೀಮಿಯಂ ಕೊಡುಗೆಯಾಗಿ ದಿಟ್ಟ ವಿನ್ಯಾಸ, ಸುಧಾರಿತ ತಂತ್ರಜ್ಞಾನ ಮತ್ತು ವರ್ಧಿತ ಸುರಕ್ಷತೆಯೊಂದಿಗೆ ಪರಿಚಯಿಸಲಾಗಿದೆ. ಇದು ಭಾರತೀಯ ಮಾರುಕಟ್ಟೆಗೆ ಪ್ರೀಮಿಯಂ ಕೊಡುಗೆಯಾಗಿದ್ದು, ಕಂಪನಿಯ ಪ್ರಮುಖ ಎಂಪಿವಿ ಆಗಿ ಮುಂದುವರಿಯಲಿದೆ ಎಂದು ಕಂಪನಿ ಹೇಳಿದೆ. ಮೇ 9, 2025 ರಂದು ಕಿಯಾ ಅಧಿಕೃತ ವೆಬ್‌ಸೈಟ್ ಅಥವಾ ಡೀಲರ್‌ಶಿಪ್‌ಗಳ ಮೂಲಕ 25,000 ರೂ.ಗಳಿಗೆ ಬುಕಿಂಗ್ ಪ್ರಾರಂಬವಾಗಲಿದೆ.

Mahindra: ಕಹಿಸುದ್ದಿ.. ಸದ್ದಿಲ್ಲದೇ ಈ ಜನಪ್ರಿಯ ಮಹೀಂದ್ರಾ..

ಮಹೀಂದ್ರಾ ಎಕ್ಸ್‌ಯುವಿ700 (Mahindra XUV700) ಜನಪ್ರಿಯ ಫ್ಯಾಮಿಲಿ ಎಸ್‌ಯುವಿಯಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಈ ಕಾರನ್ನು ಟಾಟಾ ಸಫಾರಿಗೆ ಎದುರುಳಿಯಾಗಿ ಮಾರಾಟಗೊಳಿಸಲಾಗುತ್ತದೆ. ಇದು ಅತ್ಯುತ್ತಮವಾದ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದಿದೆ. ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ 'ಎಕ್ಸ್‌ಯುವಿ700' ಎಸ್‌ಯುವಿಯನ್ನು 5, 6 ಹಾಗೂ 7 ಆಸನ ಆಯ್ಕೆ ವ್ಯವಸ್ಥೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಗ್ರಾಹರು ಕೂಡ ಮುಗಿಬಿದ್ದು ಖರೀದಿ ಮಾಡುತ್ತಾರೆ.

ವಾಹನ ಲೋಕದ ಸುರ-ಸುಂದರನಿವನು: ಅರಮನೆಯಂತಹ ಇಂಟೀರಿಯರ್

ಭಾರತದಲ್ಲಿ ಅಗ್ಗದ ಕಾರುಗಳನ್ನು ನೀಡುವ ಮಾರುತಿ ಸುಜುಕಿ ಕಂಪನಿಗೆ ಬಡ ಹಾಗೂ ಮಧ್ಯಮ ವರ್ಗದಲ್ಲಿ ಭಾರೀ ಬೇಡಿಕೆ ಇದೆ. ಹಾಗೆಯೇ ಶ್ರೀಮಂತರು ಇಷ್ಟಪಡುವ ಕೆಲ ಐಷಾರಾಮಿ ಕಾರುಗಳಿವೆ, ಅದರಲ್ಲೂ ತುಂಬಾ ಆರಾಮ ಹಾಗೂ ಐಷಾರಾಮಿತನವನ್ನು ಈಡೇರಿಸುವ ಪ್ರಮುಖ ಕಾರುಗಳಲ್ಲಿ ಒಂದಾಗಿರುವ ಲೆಕ್ಸಸ್ ಎಲ್‌ಎಂ 350ಹೆಚ್ (Lexus LM 350h) ಅತ್ಯಂತ ಡಿಮ್ಯಾಂಡ್ ಹೊಂದಿರುವ ಕಾರಾಗಿದೆ. ಸೆಲೆಬ್ರಿಟಿಗಳಿಂದ ಹಿಡಿದು ಉದ್ಯಮಿಗಳವರೆಗೆ ಬಹುತೇಕರ ಫೇವರೆಟ್ ಕಾರು ಕೂಡ ಹೌದು. ಶ್ರೀಮಂತರು ಅಷ್ಟು ಇಷ್ಟಪಡಲು ಈ ಕಾರಿನಲ್ಲಿ ಅಂತಹದ್ದೇನಿದೆ?

449 Km ರೇಂಜ್, ಲಕ್ಸುರಿ ಫೀಚರ್ಸ್.. ಇಂದಿನಿಂದ ಬುಕ್ಕಿಂಗ್, ಹೊಸ..

ಭಾರತದ ಕಾರು ಮಾರುಕಟ್ಟೆಯಲ್ಲಿ ಮಂಗಳವಾರ ಹೊಚ್ಚ ಹೊಸ ಎಂಜಿ ವಿಂಡ್ಸರ್ ಇವಿ ಪ್ರೊ (MG Windsor EV Pro) ಎಲೆಕ್ಟ್ರಿಕ್ ಎಸ್‌ಯುವಿಯನ್ನು ಬಿಡುಗಡೆಗೊಳಿಸಲಾಯಿತು. ಈ ಕಾರು ಹೆಚ್ಚು ಆಕರ್ಷಕವಾಗಿದೆ. ಆದರೂ ಕೊಂಚ ಮಟ್ಟಿಗೆ ದುಬಾರಿ ಬೆಲೆಯನ್ನೇ ಹೊಂದಿದೆ. ಹೊಸದಾದ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಪಡೆದಿದ್ದು, ಗರಿಷ್ಠ ದೂರ ಕೂಡ ಕ್ರಮಿಸಬಲ್ಲದು. ನಾವಿಲ್ಲಿ ಈ ನೂತನ 'ವಿಂಡ್ಸರ್ ಇವಿ ಪ್ರೊ' ಎಲೆಕ್ಟ್ರಿಕ್ ಎಸ್‌ಯುವಿಯ ಬೆಲೆ ಹಾಗೂ ವಿಶೇಷತೆಗಳ ಕುರಿತಾದ ಪ್ರಮುಖಾಂಶಗಳು ಏನೆಂಬುದನ್ನು ತಿಳಿಸಿಕೊಟ್ಟಿದ್ದೇವೆ.