ಸ್ಕೋಡಾಗೆ ಜೊತೆಯಾದ ಖ್ಯಾತ ನಟ.. ಕೈಲಾಕ್ ಕಾರಿನ ಯಶಸ್ಸಿನ ಬಳಿಕ..
ಆಟೋಮೊಬೈಲ್ಸ್
- 1 year, 7 month, 14 days ago
ಭಾರತ ವಿಶ್ವದಲ್ಲಿಯೇ ಅತಿದೊಡ್ಡ ಕಾರು ಮಾರುಕಟ್ಟೆಯನ್ನು ಹೊಂದಿದೆ. ಸ್ಕೋಡಾ ಆಟೋ ಇಂಡಿಯಾ (Skoda Auto India) ಸಹ ಹೆಚ್ಚಿನ ಪ್ರಾಬಲ್ಯವನ್ನು ಸಾಧಿಸಲು ಕಾರ್ಯಪ್ರವೃತವಾಗಿದೆ. ಅದರ ಭಾಗವಾಗಿ ಬಾಲಿವುಡ್ ಖ್ಯಾತ ನಟ ರಣವೀರ್ ಸಿಂಗ್ (Ranveer Singh) ಅವರನ್ನು ಕಂಪನಿಯ ಮೊದಲ ರಾಯಭಾರಿಯಾಗಿ ನೇಮಕ ಮಾಡಿಕೊಳ್ಳಲಾಗಿದೆ. ದೇಶದಲ್ಲಿ ಸ್ಕೋಡಾ ಕಳೆದ 23 ವರ್ಷಗಳಿಂದಲೂ ಕಾರ್ಯಾಚರಣೆ ನಡೆಸುತ್ತಿದೆ. ಇತ್ತೀಚೆಗೆ ಹೊಚ್ಚ ಹೊಸ ಸಬ್-4 ಮೀಟರ್ ಎಸ್‌ಯುವಿ 'ಕೈಲಾಕ್' ಯಶಸ್ಸು ಕಂಪನಿಗೆ ಹೊಸ ಹುರುಪನ್ನು ತಂದುಕೊಟ್ಟಿದೆ.