ಯಾರಿಗೂ ತಿಳಿಯದ ಬೆಸ್ಟ್ ಮೈಲೇಜ್ ಡೀಸೆಲ್ ಕಾಂಪ್ಯಾಕ್ಟ್ ಎಸ್‌ಯುವಿಗಳು!

ಭಾರತದಲ್ಲಿ ಬಹುತೇಕ ಕಂಪನಿಗಳು ಡೀಸೆಲ್ ಎಂಜಿನ್‌ ಕಾರುಗಳನ್ನು ಸ್ಥಗಿತಗೊಳಿಸಿವೆ. ಆದರೂ ಟಾಟಾ ಮೋಟಾರ್ಸ್, ಮಹೀಂದ್ರಾದಂತಹ ದೇಶೀಯ ಬ್ರಾಂಡ್‌ಗಳು ಸೇರಿದಂತೆ ಒಂದೆರಡು ವಿದೇಶಿ ಕಂಪನಿಗಳು ಡೀಸೆಲ್ ಎಂಜಿನ್‌ಗಳನ್ನು ಮುಂದುವರೆಸುತ್ತಿವೆ. ಪ್ರಸ್ತುತ ಭಾರತದಲ್ಲಿ ಡೀಸೆಲ್ ಎಂಜಿನ್‌ ಹೊಂದಿರುವ ಬೆಸ್ಟ್ ಕಾಂಪ್ಯಾಕ್ಟ್ ಎಸ್‌ಯುವಿಗಳಿವೆ. ಟಾಟಾ ಮೋಟಾರ್ಸ್ ಮತ್ತು ಹ್ಯುಂಡೈ ಇಲ್ಲಿ ನೆಕ್ಸಾನ್ ಮತ್ತು ವೆನ್ಯೂನಂತಹ ಕಾರುಗಳನ್ನು ಹೊಂದಿದ್ದರೆ, ಮಹೀಂದ್ರಾ ಎರಡು ಡೀಸೆಲ್ ಕಾಂಪ್ಯಾಕ್ಟ್ ಎಸ್‌ಯುವಿಗಳನ್ನು ನೀಡುತ್ತಿದೆ. ಮಾರಾಟದಲ್ಲಿರುವ ಡೀಸೆಲ್ ಕಾಂಪ್ಯಾಕ್ಟ್ ಎಸ್‌ಯುವಿಗಳ ಬೆಲೆ ಹಾಗೂ ಮೈಲೇಜ್ ವಿವರಗಳನ್ನು ನೋಡೋಣ.

Skoda: ಬುಕ್ಕಿಂಗ್‌ನಲ್ಲಿ ಸುನಾಮಿ.. ಸ್ಕೋಡಾ ಕೈಲಾಕ್ ಕಾರಿಗೆ ಕ್ಯೂ..

ಸ್ಕೋಡಾ (Skoda) ವಿಶ್ವಾಸಾರ್ಹ ಕಾರು ತಯಾರಕ ಕಂಪನಿಯಾಗಿ ಗುರುತಿಕೊಂಡಿದೆ. ಇತ್ತೀಚೆಗೆ, ದೇಶೀಯ ಮಾರುಕಟ್ಟೆಯಲ್ಲಿ ಕಂಪನಿಯು ಹೊಸ 'ಕೈಲಾಕ್' ಎಸ್‌ಯುವಿಯನ್ನು ಮಾರಾಟಕ್ಕೆ ತಂದಿತ್ತು. ನೂತನ ಕಾರು ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿದ್ದು, ಕೈಗೆಟುಕುವ ಬೆಲೆಯಲ್ಲಿಯೂ ಖರೀದಿಗೆ ದೊರೆಯುತ್ತದೆ. ಡಿಸೆಂಬರ್ 2 ರಿಂದ ಈ ಸಬ್ 4-ಮೀಟರ್‌ ಕಾಂಪ್ಯಾಕ್ಟ್ ಎಸ್‌ಯುವಿಗಾಗಿ ಬುಕ್ಕಿಂಗ್‌ ತೆಗೆದುಕೊಳ್ಳುವ ಪ್ರಕ್ರಿಯೆಗೂ ಸ್ಕೋಡಾ ಕಂಪನಿಯು ಅಧಿಕೃತವಾಗಿ ಚಾಲನೆ ನೀಡಿತ್ತು. ಅಂದಿನಿಂದಲೇ ಗ್ರಾಹಕರಿಂದಲೂ ಕೂಡ ಉತ್ತಮವಾದ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಹೊಸ ಇಂಧನದಲ್ಲಿ ಚಲಿಸುವ ಸುಜುಕಿ ಅಗ್ಗದ ಬೈಕ್‌ನ ವಿಶೇಷತೆಗಳು

ಇದೇ ತಿಂಗಳ ಆಟೋ ಎಕ್ಸ್‌ 2025 ರಲ್ಲಿ ಸುಜುಕಿ ಮೋಟಾರ್ ಸೈಕಲ್ ಕಂಪನಿಯು ತನ್ನ ಬಹುನಿರೀಕ್ಷಿತ ಜಿಕ್ಸರ್ ಎಸ್‌ಎಫ್ 250 (GIXXER SF 250) ಎಥೆನಾಲ್ ಬೈಕ್ ಅನ್ನು ಬಿಡುಗಡೆ ಮಾಡಿತ್ತು. ಈ ಬೈಕ್ ಶೇ85 ಎಥೆನಾಲ್ ಮಿಶ್ರಿತದಲ್ಲಿ ಚಲಿಸಲಿದೆ. ಅಂದರೆ ಜಿಕ್ಸರ್ ಎಸ್‌ಎಫ್ 250 ಬೈಕ್ e85 ಕಂಪ್ಲೈಂಟ್ ಆವೃತ್ತಿಯಾಗಿದ್ದು, ಪೆಟ್ರೋಲ್ ಮತ್ತು ಎಥೆನಾಲ್ ಮಿಶ್ರಣದಲ್ಲಿ ಚಲಿಸುವ ಸಾಮರ್ಥ್ಯವನ್ನು ಹೊಂದಿದೆ. ಹೊಸ ಸುಜುಕಿ ಜಿಕ್ಸರ್ ಎಸ್‌ಎಫ್ 250 ಬೈಕ್ ರೂ. 2,16,500/- (ಎಕ್ಸ್-ಶೋರೂಂ) ಆರಂಭಿಕ ಬೆಲೆಯಲ್ಲಿ ಲಭ್ಯವಿದೆ.

ಬಡವರ ಮಕ್ಕಳು ಮಿಂಚಬೇಕು: ಕಡಿಮೆ ಬೆಲೆಯಲ್ಲಿ ಸೂಪರ್ ಬೈಕಿನ ಲುಕ್‌...

ಜನಪ್ರಿಯ ಮತ್ತು ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಹೀರೋ ಮೋಟೋಕಾರ್ಪ್ (Hero MotoCorp) ತನ್ನ ಹೊಸ ಹೀರೋ ಎಕ್ಸ್‌ಟ್ರೀಮ್ 250ಆರ್ ಬೈಕ್ ಅನ್ನು 2025ರ ಆಟೋ ಎಕ್ಸ್‌ಪೋದಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಹೀರೋ ಎಕ್ಸ್‌ಟ್ರೀಮ್ 250ಆರ್ ಬೈಕ್ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.1.80 ಲಕ್ಷವಾಗಿದೆ. ಭಾರತೀಯ ಮಾರುಕಟ್ಟೆಯಲ್ಲಿ 250cc ಬೈಕುಗಳ ವಿಭಾಗವಾಗಿ ವೇಗವಾಗಿ ಬೆಳೆಯುತ್ತಿದೆ. ಬ್ರ್ಯಾಂಡ್‌ಗಳು ಈಗ ಪ್ರೀಮಿಯಂ ಬೈಕ್‌ಗಳ ಟ್ರೆಂಡ್‌ನಲ್ಲಿ ಸಿಲುಕಿಕೊಂಡಿವೆ.
Advertisement

Hero: ಹೀರೋದ ಈ ಹೊಸ ಸ್ಕೂಟರ್ 3 ರೂಪದಲ್ಲಿ ಖರೀದಿ ಲಭ್ಯ..

ಭಾರತದ ಜನಪ್ರಿಯ ದ್ವಿಚಕ್ರ ವಾಹನ (Two Wheeler) ಕಂಪನಿಯಾಗಿ ಹೀರೋ ಮೋಟೋಕಾರ್ಪ್ (Hero MotoCorp) ಗುರುತಿಸಿಕೊಂಡಿದ್ದು, ಹಳ್ಳಿಯಿಂದ ದಿಲ್ಲಿವರೆಗೆ ಮನೆ ಮಾತಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಕಂಪನಿ ಮಾರಾಟಗೊಳಿಸುವ 'ಸ್ಪ್ಲೆಂಡರ್' ಪ್ರಖ್ಯಾತ ಬೈಕ್ ಆಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿಯೂ ಮಾರಾಟವಾಗುತ್ತಿದೆ. ಸದ್ಯ, ಹೀರೋ ಸ್ಕೂಟರ್ ವಿಭಾಗದಲ್ಲೂ ನಿಧಾನವಾಗಿ ಖ್ಯಾತಿ ಗಳಿಸುತ್ತಿದ್ದು, ಮಧ್ಯಮ ವರ್ಗದ ಜನರಿಗೆ ಹೆಚ್ಚಿನ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ 'ಜೂಮ್' ಸ್ಕೂಟರ್‌ನ್ನು ವಿವಿಧ ರೂಪದಲ್ಲಿ ಮಾರಾಟಕ್ಕೆ ತಂದಿದೆ. ಬನ್ನಿ.. ಈ ನೂತನ ಸ್ಕೂಟರ್‌ ಮಾಡೆಲ್‌ಗಳ ಬೆಲೆ ಹಾಗೂ ವಿಶೇಷತೆ ಕುರಿತಂತೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಯೋಣ.

ರಾಕೆಟ್ ವೇಗದಲ್ಲಿ ಮಿಂಚಲು ಬಂದ ಹೊಸ ಬಿಎಂಡಬ್ಲ್ಯು ಬೈಕ್ ವಿಶೇಷತೆಗಳು

ಐಷಾರಾಮಿ ವಾಹನ ತಯಾರಕ ಕಂಪನಿಯಾದ ಬಿಎಂಡಬ್ಲ್ಯು ಮೊಟೊರಾಡ್ (BMW Motorrad) ತನ್ನ ಬಿಎಂಡಬ್ಲ್ಯು ಎಸ್ 1000 ಆರ್‌ಆರ್‌ ಬೈಕ್ ಅನ್ನು ಬಿಡುಗಡೆಗೊಳಿಸಿದೆ. ಈ ಹೊಸ ಬಿಎಂಡಬ್ಲ್ಯು ಎಸ್ 1000 ಆರ್‌ಆರ್‌ ಬೈಕ್ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.21.10 ಲಕ್ಷವಾಗಿದೆ. 2024ರ ಅಕ್ಟೋಬರ್ ತಿಂಗಳಿನಲ್ಲಿ ಜಾಗತಿಕವಾಗಿ ಈ ಹೊಸ ಬೈಕ್ ಅನಾವರಣಗೊಂಡಿತು. ಈ ಹೊಸ ಬಿಎಂಡಬ್ಲ್ಯು ಎಸ್ 1000 ಆರ್‌ಆರ್‌ (BMW S 1000 RR) ಬೈಕಿನಲ್ಲಿ 999 cc ಇನ್‌ಲೈನ್-ಫೋರ್ ಎಂಜಿನ್‌ ಅನ್ನು ಮುಂದುವರೆಸಿದೆ.

ವಿಡಿಯೋ ನೋಡಿ ಪಡ್ಡೆಗಳ ತಲೆ ತಿರುಗಿತು.. ಪ್ರಖ್ಯಾತ ಕಾರಿನಲ್ಲಿ ಬಂದು..

ಬಾಲಿವುಡ್ ನಟಿ ಕಂಗನಾ ಶರ್ಮಾ (kangana sharma), ಕೆಲ ದಿನಗಳಿಂದ ಸಖತ್ ಸುದ್ದಿಯಲ್ಲಿದ್ದಾರೆ. ಆಕೆಯ ಎಕ್ಸ್‌ಪೋಸಿಂಗ್‌ ಫೋಟೋ ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಭಾರೀ ಹಲ್‌ಚಲ್ ಸೃಷ್ಟಿಸಿದ್ದು, ಪಡ್ಡೆಗಳ ತಲೆ ತಿರುಗುವಂತೆ ಮಾಡುತ್ತಿದೆ. 'ಗ್ರೇಟ್ ಗ್ರ್ಯಾಂಡ್ ಮಸ್ತಿ' ಸಿನಿಮಾ ಮೂಲಕ ಬೆಳ್ಳಿ ತೆರೆಗೆ ಎಂಟ್ರಿ ಕೊಟ್ಟ ಕಂಗನಾ, ತೂ ಸೂರಜ್ ಮೇನ್ ಸಾಂಜ್ ಪಿಯಾಜಿ ಹಾಗೂ ದಿ ಕಪಿಲ್ ಶರ್ಮಾ ಶೋನಲ್ಲಿ ಕೂಡ ಮಿಂಚಿದ್ದರು.

ಸಣ್ಣ ಕುಟುಂಬಗಳಿಗೆ ಬೆಸ್ಟ್ ಕಾರು: ಈ ಮಾರುತಿ ಕಾರಿನ ಬೆಲೆ ಏರಿಕೆ ಶಾಕ್

ದೇಶದ ಅತಿದೊಡ್ಡ ವಾಹನ ತಯಾರಕ ಸಂಸ್ಥೆಯಾಗಿ ಮಾರುತಿ ಸುಜುಕಿ (Maruti Suzuki) ಹಳ್ಳಿಯಿಂದ ದಿಲ್ಲಿವರೆಗೆ ಮನೆ ಮಾತಾಗಿರುವುದರಿಂದ ಇವರ ಕಾರಿಗಳು ಮುಂಚೂಣಿಯಲ್ಲಿದೆ. ಮಾರುತಿ ಸುಜುಕಿ ಕಂಪನಿಯು ಆಲ್ಟೊ ಕೆ10, ಸೆಲರಿಯೊ, ವ್ಯಾಗನ್ಆರ್, ಇಗ್ನಿಸ್, ಸ್ವಿಫ್ಟ್, ಬ್ರೆಝಾ, ಎರ್ಟಿಗಾ, ಡಿಜೈರ್, ಫ್ರಾಂಕ್ಸ್ ಹಾಗೂ ಜಿಮ್ನಿ ಸೇರಿದಂತೆ ಹಲವು ಕಾರುಗಳನ್ನು ಮಾರಾಟ ಮಾಡುತ್ತಿದೆ. ಮಾರುತಿ ಸುಜುಕಿ ಕಂಪನಿಯು ಅರೆನಾ (Arena) ಹಾಗೂ ನೆಕ್ಸಾ (Nexa) ಡೀಲರ್‌ಶಿಪ್ ಮೂಲಕ ವಿವಿಧ ಕಾರುಗಳನ್ನು ಮಾರಾಟಗೊಳಿಸುತ್ತಿದೆ.

ಭರ್ಜರಿ ಮಾರಾಟ ಕಾಣುವ ಸರಿಯಾದ ಪ್ರತಿಸ್ಪರ್ಧಿ ಕಾರುಗಳು

ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ (Maruti Grand Vitara) ಮತ್ತು ಹ್ಯುಂಡೈ ಕ್ರೆಟಾ (Hyundai Creta) ಭಾರತದಲ್ಲಿ ಸದ್ಯ ಅತ್ಯಂತ ಬೇಡಿಕೆಯ ಎಸ್‌ಯುವಿಗಳಾಗಿದ್ದು, ಎರಡರಲ್ಲಿ ಯಾವುದು ಬೆಸ್ಟ್ ಎಂದು ಕೇಳಿದರೆ ಹೇಳುವುದು ತುಸು ಕಷ್ಟವಾಗಬಹುದು. ಆದರೆ ಎರಡೂ ಕಾರುಗಳ ನಡುವೆ ಹೋಲಿಕೆ ಮಾಡಿ ಇಲ್ಲಿ ವಿವರಿಸಿದ್ದೇವೆ. ಈ ಮಾಹಿತಿ ನೊಡಿದರೆ ಯಾವುದೆ ಬೆಸ್ಟ್ ಎಂಬದನ್ನು ನೀವೆ ಕಂಡುಕೊಳ್ಳಬಹುದು. ಬೆಲೆಯಿಂದ ಹಿಡಿದು ಫೀಚರ್ಸ್, ಮೈಲೇಜ್, ಎಂಜಿನ್ ವಿವರಗಳವರೆಗೆ ಎಲ್ಲವನ್ನು ಇಲ್ಲಿ ಪಟ್ಟಿ ಮಾಡಿದ್ದೇವೆ.

Maruti Suzuki: ಆಯ್ದ ಶೋರೂಂಗಳಲ್ಲಿ ಮಾರುತಿ ಸುಜುಕಿ ಇ ವಿಟಾರಾ..

ಮಾರುತಿ ಸುಜುಕಿ ಇಂಡಿಯಾ (Maruti Suzuki India) ನಂ.1 ಕಾರು ತಯಾರಕ ಕಂಪನಿಯಾಗಿದೆ. ದೇಶೀಯ ಎಲೆಕ್ಟ್ರಿಕ್ ಕಾರು ಮಾರುಕಟ್ಟೆಯಲ್ಲಿಯೂ ತನ್ನದೇಯಾದ ಛಾಪನ್ನು ಮೂಡಿಸಲು ಮುಂದಾಗಿದೆ. ಇತ್ತೀಚೆಗೆ ಮುಕ್ತಾಯಗೊಂಡ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋದಲ್ಲಿ ಕಂಪನಿಯು ಹೊಚ್ಚ ಹೊಸ 'ಇ ವಿಟಾರಾ' ಎಲೆಕ್ಟ್ರಿಕ್ ಎಸ್‌ಯುವಿಯನ್ನು ಬಹಿರಂಗಗೊಳಿಸಿತ್ತು. ಈ ಕಾರು ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿದ್ದು, ಅತಿ ಶೀಘ್ರದಲ್ಲಿಯೇ ಮಾರಾಟಕ್ಕೂ ಬರಲಿದೆ.

Maruti Suzuki: ಬಡವರ ಪಾಲಿಗೆ ಬಂಗಾರವಾಗಲಿದೆ ಮಾರುತಿ ಹೊಸ ಹೈಬ್ರಿಡ್

ಮಾರುತಿ ಸುಜುಕಿ (Maruti Suzuki) ಕಾರುಗಳು ಭಾರತದಲ್ಲಿ ಮೊದಲಿನಿಂದಲು ಮಧ್ಯಮ ವರ್ಗದ ಫೇವರೆಟ್ ಕಾರುಗಳಾಗಿವೆ. ಅಗ್ಗದ ಬೆಲೆಗೆ ಆಕರ್ಷಕ ಫೀಚರ್ಸ್, ಅತ್ಯುತ್ತಮ ಮೈಲೇಜ್ ಸೇರಿದಂತೆ ಉತ್ತಮ ಡಿಸೈನ್ ಹೊಂದಿರುವ ಕಾರುಗಳನ್ನು ನೀಡುವ ಮೂಲಕ ಭಾರತೀಯರ ಮನಗೆದ್ದಿದೆ. ಇದೀಗ ತಂತ್ರಜ್ಞಾನ ಬೆಳೆಯುತ್ತಿದ್ದಂತೆ ಹೈಬ್ರಿಡ್ ಕಾರುಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಇವುಗಳ ಬೆಲೆ ಕೂಡ ದುಬಾರಿಯಾಗಿದೆ. ಈ ಹೈಬ್ರಿಡ್ ಕಾರುಗಳನ್ನು ಕೈಗೆಟುಕುವ ದರದಲ್ಲಿ ನೀಡಲು ಮಾರುತಿ ಸುಜುಕಿ ಕೆಲಸ ಮಾಡುತ್ತಿದೆ. ಇತ್ತೀಚೆಗೆ 'ಹೈಬ್ರಿಡ್' ಬ್ಯಾಡ್ಜ್ ಧರಿಸಿದ ಮಾರುತಿ ಸುಜುಕಿ ಫ್ರಾಂಕ್ಸ್ (Maruti Suzuki Fronx) ಟೆಸ್ಟಿಂಗ್ ಕಾರು ಗುರುಗ್ರಾಮದಲ್ಲಿ ಕಾಣಿಸಿಕೊಂಡಿದೆ.

ಜನಪ್ರಿಯ ಸಿಟಿ ಕಾರಿನ ಗ್ರಾಹಕರಿಗೆ ಶಾಕ್ ನೀಡಿದ ಹೋಂಡಾ

ಜಪಾನ್ ಮೂಲದ ಜನಪ್ರಿಯ ಕಾರು ತಯಾರಕ ಕಂಪನಿಯಾದ ಹೋಂಡಾ ಕಾರ್ಸ್ ಇಂಡಿಯಾ (Honda Cars India ) ತನ್ನ ಸರಣಿಯಲ್ಲಿರುವ ಜನಪ್ರಿಯ ಕಾರ್ ಆದ ಸಿಟಿ ಮಾದರಿಯ ಬೆಲೆಗಳನ್ನು 20,000 ರೂ.ವರೆಗೆ ಹೆಚ್ಚಿಸಿದೆ. ಈ ಹೆಚ್ಚಳವು ಸರಣಿಯಲ್ಲಿರುವ ನಿರ್ದಿಷ್ಟ ರೂಪಾಂತರಗಳಿಗೆ ಅನ್ವಯಿಸುತ್ತದೆ. ಈ ಬೆಲೆ ಏರಿಕೆಯು ಹೋಂಡಾ ಸಿಟಿ (Honda City) ಕಾರಿನ SV MT, V MT, VX MT, VX CVT, ZX MT, ಮತ್ತು ZX CVT ರೂಪಂತರಗಳು ಸೇರಿವೆ.
Advertisement

ಭಾರತದಲ್ಲಿ ಈ ಕಾರನ್ನು ಕೇಳೋರಿಲ್ಲ.. ಆದರೆ, ವಿದೇಶಿಕರಿಗೆ ನಮ್ಮಲ್ಲಿ..

ಭಾರತದಲ್ಲಿ ಮಾರುತಿ ಸುಜುಕಿ ಜಿಮ್ನಿ (Maruti Suzuki Jimny) ಪ್ರಖ್ಯಾತ ಆಫ್-ರೊಡ್ ಎಸ್‌ಯುವಿಯಾಗಿದೆ. ಇದು ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಹೊಂದಿದ್ದು, ಕೈಗೆಟುಕುವ ಬೆಲೆಯಲ್ಲಿಯೂ ಖರೀದಿಗೆ ದೊರೆಯುತ್ತದೆ. ಅದರ ಹೊರತಾಗಿಯೂ ಮಾರಾಟ ಪ್ರಮಾಣ ದಿನದಿಂದ ದಿನಕ್ಕೆ ಕುಸಿತವಾಗುತ್ತಿದೆ. ಸದ್ಯ, ದೇಶದಲ್ಲಿ ತಯಾರಿಸಿದ ಇದೇ 5-ಡೋರ್ ಜಿಮ್ನಿಯನ್ನು ಜಪಾನ್‌ಗೂ ಕಂಪನಿಯು ಅತಿ ಹೆಚ್ಚಿನ ಸಂಖ್ಯೆಯಲ್ಲಿ ರಫ್ತು ಮಾಡಲಿದೆ. ಅಲ್ಲಿಯೂ ಶೀಘ್ರದಲ್ಲೇ ಈ ಎಸ್‌ಯುವಿ ಅದ್ದೂರಿಯಾಗಿ ಬಿಡುಗಡೆಯಾಗಲಿದೆ ಎಂದು ವರದಿಯಾಗಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

Mahindra: ಹೊಸ ಮಹೀಂದ್ರಾ ವೀರೋ ಸಿಎನ್‌ಜಿ... 8.99 ಲಕ್ಷ ಬೆಲೆ

ಭಾರತದ ಪ್ರಮುಖ ವಾಣಿಜ್ಯ ವಾಹನ ತಯಾರಕ ಕಂಪನಿಗಳಲ್ಲಿ ಒಂದಾಗಿರುವ ಮಹೀಂದ್ರಾ, ತನ್ನ ಹೊಸ ವೀರೋ ಲೈಟ್ ಕಮರ್ಷಿಯಲ್ ವೆಹಿಕಲ್ (LCV)ನ CNG ವೇರಿಯೆಂಟ್ ಬೆಲೆಯನ್ನು ಪ್ರಕಟಿಸಿದೆ. ವೀರೋ CNG ಎರಡು ಟ್ರಿಮ್‌ಗಳಲ್ಲಿ ಲಭ್ಯವಿದ್ದು, ಬೇಸ್ ವೇರಿಯೆಂಟ್ 1.4 XXL SD V2 CNG ಬೆಲೆಯು ರೂ. 8.99 ಲಕ್ಷದಿಂದ(ಎಕ್ಸ್-ಶೋರೂಂ) ಪ್ರಾರಂಭವಾಗುತ್ತದೆ. ಮತ್ತೊಂದು 1.4 XXL SD V4 (A) CNG ರೂ. 9.39 ಲಕ್ಷ (ಎಕ್ಸ್-ಶೋರೂಂ)ದಿಂದ ಪ್ರಾರಂಭವಾಗುತ್ತದೆ. ಸೆಪ್ಟೆಂಬರ್ 2024 ರಲ್ಲಿ ಮೊದಲು ಪ್ರದರ್ಶಿಸಲಾದ ವೀರೋ CNG ಮಾರಾಟವು ಇದೀಗ ಅಧಿಕೃತವಾಗಿ ಪ್ರಾರಂಭವಾಗಿದೆ ಎಂದು ಕಂಪನಿ ತಿಳಿಸಿದೆ.

ಟಾಟಾಗೆ ನಡುಕ ಹುಟ್ಟಿಸಿದ ಮಾರುತಿಯ ಮೊದಲ ಎಲೆಕ್ಟ್ರಿಕ್ ಕಾರು

ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಬೇಡಿಕೆಯು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರಿಂದ ದೇಶದ ಅತಿದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ (Maruti Suzuki) ಕಂಪನಿಯು ತಡವಾದರೂ ಭಾರತದಲ್ಲಿ ತನ್ನ ಮೊದಲ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆಗೊಳಿಸಿ ಎಲೆಕ್ಟ್ರಿಕ್ ವಾಹನ ರಂಗಕ್ಕೆ ಪ್ರವೇಶಿಸಲು ರೆಡಿಯಾಗಿದ್ದಾರೆ. ಇತ್ತೀಚೆಗೆ 2025ರ ಆಟೋ ಎಕ್ಸ್‌ಪೋದಲ್ಲಿ ಮಾರುತಿ ಸುಜುಕಿ ಕಂಪನಿಯು ತನ್ನ ಈ ಹೊಸ ಇ-ವಿಟಾರಾ ಕಾರನ್ನು ಅನಾವರಣಗೊಳಿಸಿತು. ಈ ಮಾರುತಿ ಸುಜುಕಿ ಇ-ವಿಟಾರಾ ಎಲೆಕ್ಟ್ರಿಕ್ ಕಾರು ಹಲವು ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿರಲಿದೆ.

Mumbai: ಮುಂಬೈನಲ್ಲಿ ಪೆಟ್ರೋಲ್ & ಡೀಸೆಲ್ ವಾಹನಗಳು ಬ್ಯಾನ್ ಆಗುತ್ತಾ?

ದೇಶದ ವಾಣಿಜ್ಯ ರಾಜಧಾನಿ ಎಂದೇ ಹೆಸರುವಾಸಿಯಾಗಿರುವ ಮುಂಬೈನಲ್ಲಿ ದಿನದಿಂದ ದಿನಕ್ಕೆ ವಾಯು ಮಾಲಿನ್ಯ ಪ್ರಯಾಣ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಮಹಾರಾಷ್ಟ್ರ ಸರ್ಕಾರ (Maharashtra Government) ದಿಟ್ಟ ಹೆಜ್ಜೆ ಇಟ್ಟಿದೆ. ಮುಂಬೈ ಮಹಾನಗರ (Mumbai Metropolitan) ಪದೇಶದ ವ್ಯಾಪ್ತಿಯಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ವಾಹನಗಳ ಬಳಕೆಯನ್ನು ನಿಷೇಧಿಸಿ, ಪರಿಸರ ಸ್ನೇಹಿ ಸಿಎನ್‌ಜಿ ಮತ್ತು ಎಲೆಕ್ಟ್ರಿಕ್ ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ನೀಡುವ ಸಂಬಂಧ ಅಧ್ಯಯನ ನಡೆಸಲು 7 ಜನ ಸದಸ್ಯರ ಸಮಿತಿಯನ್ನು ರಚಿಸಿದೆ.

Maruti: ಕಲ್ಲುಬಂಡೆಯಂತಹ ನಿರ್ಮಾಣ ಗುಣಮಟ್ಟವನ್ನು ಸಾಭೀತುಪಡಿಸಿದ ಕಾರು

ಮಾರುತಿ ಕಾರುಗಳಿಗೆ ಮಾರುಕಟ್ಟೆಯಲ್ಲಿ ಫುಲ್‌ ಡಿಮ್ಯಾಂಡ್ ಇದೆಯಾದರೂ ಗುಣಮಟ್ಟದ ವಿಷಯದಲ್ಲಿ ಹಿಂದುಳಿದಿರುವುದು ಎಲ್ಲರಿಗೂ ತಿಳಿದಿದೆ. ಅದರಲ್ಲೂ ಸ್ವಿಫ್ಟ್ ಬಹಳ ಹಗುರವಾದ ಮತ್ತು ಅಸುರಕ್ಷಿತ ವಾಹನವಾಗಿದ್ದು, ಅಪಘಾತವಾದರೆ ಪ್ರಯಾಣಿಕರನ್ನು ರಕ್ಷಿಸುವಲ್ಲಿ ಅಸಮರ್ಥ ಕಾರೆನಿಸಿಕೊಂಡಿದೆ. ಆದರೆ ಇತ್ತೀಚೆಗೆ ನಡೆದ ಭೀಕರ ಅಪಘಾತವೊಂದರಲ್ಲಿ ಮಾರುತಿ ಸುಜುಕಿ ಸ್ವಿಫ್ಟ್ ಕಾರು ಎಲ್ಲರನ್ನು ಅಚ್ಚರಿಗೊಳಿಸಿದೆ. ಇತ್ತೀಚಿನ ನಾಲ್ಕನೇ ತಲೆಮಾರಿನ ಸ್ವಿಫ್ಟ್ ಹ್ಯಾಚ್‌ಬ್ಯಾಕ್ ಕಾರನ್ನು ಮಾರುತಿ ಸುಜುಕಿ ಕಂಪನಿಯು ಪ್ರಮುಖ ಸುಧಾರಣೆಗಳನ್ನು ಮಾಡಿದ್ದು, ಇದಕ್ಕೆ ಸಾಕ್ಷಿಯೆಂಬಂತೆ ಇತ್ತೀಚಿನ ಘಟನೆ ಸಾಭೀತುಪಡಿಸಿದೆ.

Honda Activa: ಅಗ್ಗದ ದರ.. 2025ರ ನೂತನ ಹೋಂಡಾ ಆಕ್ಟಿವಾ 110..

ಭಾರತದ ರಸ್ತೆಯನ್ನು ಹೋಂಡಾ ಆಕ್ಟಿವಾ (Honda Activa) ದಶಕಗಳಿಂದ ಆಳುತ್ತಿದೆ. ಇದು ಆಕರ್ಷಕವಾದ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿರುವುದರಿಂದ ಉತ್ತಮ ಸಂಖ್ಯೆಯಲ್ಲಿಯೂ ಮಾರಾಟವಾಗುತ್ತಿದೆ. ಇತ್ತೀಚೆಗೆ, ದೇಶೀಯ ಮಾರುಕಟ್ಟೆಯಲ್ಲಿ ಕಂಪನಿಯು 2025ರ ನವೀಕರಿಸಿದ ಹೊಚ್ಚ ಹೊಸ 'ಆಕ್ಟಿವಾ 110' ಸ್ಕೂಟರ್‌ನ್ನು ಬಿಡುಗಡೆಗೊಳಿಸಿತ್ತು. ಬನ್ನಿ.. ಈ ನೂತನ ಸ್ಕೂಟರ್ ಬೆಲೆ, ಕಾರ್ಯಕ್ಷಮತೆ ಹಾಗೂ ವಿಶೇಷತೆಗಳ ಕುರಿತಂತೆ ಪ್ರಮುಖಾಂಶಗಳನ್ನು ತಿಳಿಯೋಣ.

ಸೆಲ್ಯೂಟ್..! ವಿಶೇಷ ಚೇತನ ಸಾಧಕಿ ಪ್ರತಿಭೆಗೆ ಮಾರುಹೋದ ಆನಂದ್..

ಮಹೀಂದ್ರಾ ಗ್ರೂಪ್ ಮುಖ್ಯಸ್ಥ ಆನಂದ್ ಮಹೀಂದ್ರಾ (Anand Mahindra), ಯಶಸ್ವಿ ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ. ಸದಾ ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರಗಳ ಸಾಧಕರ ಬೆಳಕಿಗೆ ತರುವ ಪ್ರಯತ್ನವನ್ನು ಮಾಡುತ್ತಿರುತ್ತಾರೆ. ಅವರ ಪ್ರತಿಭೆಯನ್ನು ಪ್ರೋತ್ಸಾಹಿಸಲು ತಮ್ಮ ಕಂಪನಿಯ ಜನಪ್ರಿಯ ಕಾರುಗಳನ್ನು ಉಡೊಗೊರೆಯಾಗಿಯೂ ಕೊಡುತ್ತಿರುತ್ತಾರೆ. ಇದೀಗ 18ರ ಯುವ ವಿಶೇಷಚೇತನ ಸಾಧಕಿ, ಅರ್ಜುನ ಪ್ರಶಸ್ತಿ ವಿಜೇತೆಯಾಗಿರುವ ಪ್ಯಾರಾ ಬಿಲ್ಲುಗಾರ್ತಿ ಶೀತಲ್ ದೇವಿ (Sheetal Devi) ಅವರಿಗೆ ದುಬಾರಿ ಬೆಲೆಯ 'ಸ್ಕಾರ್ಪಿಯೋ ಎನ್' ಎಸ್‌ಯುವಿಯನ್ನು ಗಿಫ್ಟ್ ನೀಡಿದ್ದಾರೆ.

ಹೊಸ ಕಿಯಾ ಸೈರಸ್ ರಿವ್ಯೂ ವಿಡಿಯೋ: ಭರ್ಜರಿ ಪರ್ಫಾಮೆನ್ಸ್

ಕಿಯಾ ಕಂಪನಿಯು ಸಾನೆಟ್ ಮತ್ತು ಸೆಲ್ಟೋಸ್ ನಡುವೆ ಇರಿಸಲು ಮತ್ತೊಂದು ಎಸ್‌ಯುವಿಯನ್ನು ಬಿಡುಗಡೆ ಮಾಡಿದೆ. ಅದೇ ಎತ್ತರದ ಬಾಕ್ಸಿ ಮತ್ತು ವಿಭಿನ್ನವಾಗಿ ಕಾಣುವ 'ಸೈರಸ್' ಎಸ್‌ಯುವಿ. ಕಿಯಾ ಸೈರಸ್‌ನ ವಿನ್ಯಾಸವು ಕಂಪನಿಯ ಅಂತರರಾಷ್ಟ್ರೀಯ ಎಲೆಕ್ಟ್ರಿಕ್ ಕಾರುಗಳಾದ 'ಇವಿ9' ಮತ್ತು ಸಣ್ಣ 'ಇವಿ3' ಗಳಿಂದ ಪ್ರೇರಿತವಾಗಿದೆ. ಇದು ಆಕರ್ಷಕ ಲುಕ್ ಮತ್ತು ವಿಶಿಷ್ಟ್ ವೈಶಿಷ್ಟ್ಯಗಳನ್ನು ಹೊಂದಿದೆ. ಈ ಹೊಸ ವಾಹನವನ್ನು ಓಡಿಸುವ ಅವಕಾಶ ನಮಗೆ ಸಿಕ್ಕಿದ್ದು, ವಿವರವಾದ ಕಿಯಾ ಸೈರಸ್ ರಿವ್ಯೂ ವಿಡಿಯೋ (Kia Syros Review) ಇಲ್ಲಿದೆ.
Advertisement

ಹೈಡ್ರಾ X 29T ಹೈ ಪರ್ಫಾಮೆನ್ಸ್ ಬೈಕ್ ಬಿಡುಗಡೆ

ಆಲ್ಫಾವೆಕ್ಟರ್ಸ್ ಪ್ರೈವೇಟ್ ಲಿಮಿಟೆಡ್ ಬ್ರ್ಯಾಂಡ್ ನೈಂಟಿ ಒನ್ ತನ್ನ ಹೈಡ್ರಾ ಎಕ್ಸ್ 29 ಟಿ 21-ಸ್ಪೀಡ್ ಮೌಂಟೇನ್ (Hydra X 29T 21-Speed) ಬೈಕ್ ಅನ್ನು ಬಿಡುಗಡೆಗೊಳಿಸಿದೆ. ಇದು ಪವರ್, ಪರ್ಫಾಮೆನ್ಸ್ ಮತ್ತು ವಿನ್ಯಾಸದ ಪರಿಪೂರ್ಣ ಸಮ್ಮಿಲನವಾಗಿದೆ. ಅಡ್ವೆಂಚರ್ ಉತ್ಸಾಹಿಗಳು, ಟ್ರಯಲ್ ಬ್ಲೇಜರ್‌ಗಳು ಮತ್ತು ಹೊರಾಂಗಣ ಅನ್ವೇಷಕರಿಗಾಗಿ ರಚಿಸಲಾದ 'ಹೈಡ್ರಾ ಎಕ್ಸ್ 29 ಟಿ' ಬೈಕನ್ನು ಅತ್ಯಂತ ಸವಾಲಿನ ಭೂಪ್ರದೇಶಗಳನ್ನು ಸಹ ಸುಲಭವಾಗಿ ನಿಭಾಯಿಸಲು ನಿರ್ಮಿಸಲಾಗಿದೆ. ಈ ಬೈಕ್ ಪವರ್, ನಿಖರತೆ ಮತ್ತು ವಿಶ್ವಾಸಾರ್ಹತೆಯನ್ನು ಸಂಯೋಜಿಸುವ ತಡೆರಹಿತ ಅನುಭವವನ್ನು ಖಚಿತಪಡಿಸುತ್ತದೆ ಎಂದು ಕಂಪನಿ ಹೇಳಿದೆ.

Kia Syros Review: ಹೊಚ್ಚ ಹೊಸ ಕಿಯಾ ಸೈರಸ್ ರಿವ್ಯೂ

ದಕ್ಷಿಣ ಕೊರಿಯಾದ ಕಾರು ತಯಾರಕ ಕಂಪನಿಯಾದ ಕಿಯಾ ಈಗಾಗಲೇ ಬಿ-ಸೆಗ್ಮೆಂಟ್ ಎಸ್‌ಯುವಿ ಮಾರುಕಟ್ಟೆಯಲ್ಲಿ ಸಬ್-4-ಮೀಟರ್ ಸಾನೆಟ್ ಮತ್ತು 4-ಮೀಟರ್+ ಕಾರಾದ ಸೆಲ್ಟೋಸ್ ಮಾದರಿಗಳೊಂದಿಗೆ ಉತ್ತಮ ಬೇಡಿಕೆ ಪಡೆದುಕೊಂಡಿದೆ. ಇವು ಮಾತ್ರವಲ್ಲದೆ ಕಂಪನಿಯು ಸಾನೆಟ್ ಮತ್ತು ಸೆಲ್ಟೋಸ್ ನಡುವೆ ಇರಿಸಲು ಮತ್ತೊಂದು ಎಸ್‌ಯುವಿಯನ್ನು ಬಿಡುಗಡೆ ಮಾಡಿದೆ. ಅದೇ ಎತ್ತರದ ಬಾಕ್ಸಿ ಮತ್ತು ವಿಭಿನ್ನವಾಗಿ ಕಾಣುವ 'ಸೈರಸ್' ಎಸ್‌ಯುವಿ. ಇದು ಆಕರ್ಷಕ ಲುಕ್ ಮತ್ತು ವಿಶಿಷ್ಟ್ ವೈಶಿಷ್ಟ್ಯಗಳನ್ನು ಹೊಂದಿದೆ. ಈ ಹೊಸ ವಾಹನವನ್ನು ಓಡಿಸುವ ಅವಕಾಶ ನಮಗೆ ಸಿಕ್ಕಿದ್ದು, ವಿವರವಾದ ಕಿಯಾ ಸೈರಸ್ ರಿವ್ಯೂ (Kia Syros Review) ಇಲ್ಲಿದೆ.

5-ಸ್ಟಾರ್ ಸೇಫ್ಟಿ ರೇಟಿಂಗ್‌ನ ನೂತನ ಸ್ಕೋಡಾ ಕೈಲಾಕ್ ಕಾರಿನ ಮೊದಲ..

ಜೆಕ್ ರಿಪಬ್ಲಿಕ್‌ ಮೂಲದ ಸ್ಕೋಡಾ (Skoda) ಜನಪ್ರಿಯ ಕಾರು ತಯಾರಕ ಕಂಪನಿ ಗುರುತಿಸಿಕೊಂಡಿದೆ. ಡಿಸೆಂಬರ್ 2ರಂದು ದೇಶೀಯ ಮಾರುಕಟ್ಟೆಯಲ್ಲಿ ಹೊಚ್ಚ ಹೊಸ ಕೈಲಾಕ್ (Kylaq) ಎಸ್‌ಯುವಿಯನ್ನು ಅದ್ದೂರಿಯಾಗಿ ಬಿಡುಗಡೆಗೊಳಿಸಿತ್ತು. ಈ ಕಾರಿಗೆ ಖರೀದಿದಾರರು ಕೂಡ ಮನಸೋತಿದ್ದು, ಬರೋಬ್ಬರಿ 10,000ಕ್ಕೂ ಅಧಿಕ ಬುಕ್ಕಿಂಗ್‌ಗಳನ್ನು ಪಡೆದುಕೊಂಡಿದೆ. ಈ ಕಾರು ಸುರಕ್ಷತೆಗೂ ಹೆಸರುವಾಸಿಯಾಗಿದ್ದು, 'ಭಾರತ್ ಎನ್‌ಸಿಎಪಿ' ಪರೀಕ್ಷೆಯಲ್ಲಿ 5-ಸ್ಟಾರ್ ಸೇಫ್ಟಿ ರೇಟಿಂಗ್‌ನ್ನು ಗಳಿಸಿದೆ. ಇತ್ತೀಚೆಗೆ ಕೈಲಾಕ್ ಕಾರಿನ ಮೊದಲ ಅಪಘಾತ ವರದಿಯಾಗಿದೆ.

Hero: ನೂತನ ಹೀರೋ ಜೂಮ್ 160 ಸ್ಕೂಟರ್ ಕುರಿತ ಪ್ರಮುಖಾಂಶಗಳು..

ಭಾರತದ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಹೀರೋ ಮೋಟೋಕಾರ್ಪ್ (Hero MotoCorp), ನಂ.1 ಸ್ಥಾನದಲ್ಲಿದೆ. 'ಸ್ಪ್ಲೆಂಡರ್' ಬೈಕ್ ಮಾರಾಟದ ಮೂಲದ ಹಳ್ಳಿಯಿಂದ ದಿಲ್ಲಿವರೆಗೆ ಮನೆ ಮಾತಾಗಿದೆ. ಸ್ಕೂಟರ್ ವಿಭಾಗದಲ್ಲಿಯೂ ನಿಧಾನವಾಗಿ ತನ್ನದೆಯಾದ ಛಾಪನ್ನು ಮೂಡಿಸಲು ಮುಂದಾಗಿದೆ. ಇತ್ತೀಚೆಗೆ ಮುಕ್ತಾಯಗೊಂಡ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋದಲ್ಲಿ ಹೊಚ್ಚ ಹೊಸ 'ಜೂಮ್ 160' ಸ್ಕೂಟರ್‌ನ್ನು ಅದ್ದೂರಿಯಾಗಿ ಬಿಡುಗಡೆಗೊಳಿಸಿತ್ತು. ಬನ್ನಿ.. ಈ ಸ್ಕೂಟರ್ ಬೆಲೆ ಹಾಗೂ ವಿಶೇಷತೆಗಳ ಕುರಿತಂತೆ ಪ್ರಮುಖಾಂಶಗಳನ್ನು ತಿಳಿಯೋಣ.

2-seater car: ಬೈಕ್ ಬೆಲೆಯ ಹೊಸ 2-ಸೀಟರ್ ಕಾರು ಖರೀದಿಸಬೇಕೆ?

ಭಾರತ್ ಮೊಬಿಲಿಟಿ ಎಕ್ಸ್‌ಪೋ 2025 (Bharat Mobility Expo 2025) ರಲ್ಲಿ ಕೆಲವು ಆಸಕ್ತಿದಾಯಕ ವಾಹನಗಳು ಕಾಣಿಸಿಕೊಂಡಿವೆ. ಇದರಲ್ಲಿ ಭಾರತದ ಮೊದಲ ಸೋಲಾರ್ ಕಾರಾಗಿರುವ ವೇವ್ ಇವಾ ಕೂಡ ಒಂದಾಗಿದ್ದು, ಎಲ್ಲರ ಗಮನ ಸೆಳೆದಿದೆ. ಈ ಕಾರು ಸಂಪೂರ್ಣ ಎಲೆಕ್ಟ್ರಿಕ್ ಪವರ್‌ನಲ್ಲಿ ಚಲಿಸಲಿದ್ದು, ಹೆಚ್ಚುವರಿಯಾಗಿ ಸೋಲಾರ್ ಪ್ಯಾನಲ್‌ಗಳನ್ನು ಅಳವಡಿಸಿರುವುದರಿಂದಾಗಿ ಚಾರ್ಜ್‌ ಖಾಲಿಯಾದಾಗ ಸೋಲಾರ್ ಎನರ್ಜಿಯನ್ನು ಬಳಸಿಕೊಂಡು ಚಲಿಸುವಂತೆ ನಿರ್ಮಿಸಲಾಗಿದೆ. ಈ 2-ಸೀಟರ್ (2-seater car) ಕಾರನ್ನು ಆಟೋ ಎಕ್ಸ್‌ಪೋದಲ್ಲಿ 3.25 ಲಕ್ಷ ರೂ.ಗಳ ಎಕ್ಸ್ ಶೋರೂಂ ಬೆಲೆಯಲ್ಲಿ ಬಿಡುಗಡೆ ಮಾಡಲಾಗಿದೆ.