ಬಡವರ ಕನಸು ನನಸು.. ಮಾರುತಿಯಿಂದ ಬರಲಿವೆ ಈ ಜಬರ್ದಸ್ತ್ ಕಾರುಗಳು..

ಮಾರುತಿ ಸುಜುಕಿ ಇಂಡಿಯಾ (Maruti Suzuki India) ನಂಬರ್ 1 ಕಾರು ತಯಾರಕ ಕಂಪನಿಯಾಗಿದೆ. ಕೈಗೆಟುಕುವ ಬೆಲೆಯ ಕಾರುಗಳನ್ನು ಮಾರಾಟಗೊಳಿಸುವ ಮೂಲಕ ಹಳ್ಳಿಯಿಂದ ದಿಲ್ಲಿವರೆಗೆ ಮನೆ ಮಾತಾಗಿದೆ. ಇತ್ತೀಚೆಗೆ ಮುಕ್ತಾಯಗೊಂಡ ಭಾರತ್ ಮೊಬಿಲಿಟಿ ಎಕ್ಸ್‌ಪೋದಲ್ಲಿ ಇ ವಿಟಾರಾ (e Vitara) ಎಲೆಕ್ಟ್ರಿಕ್ ಎಸ್‌ಯುವಿಯನ್ನು ಅನಾವರಣಗೊಳಿಸಿತ್ತು. ಕೆಲವೇ ತಿಂಗಳಲ್ಲಿ ಈ ಕಾರು ಬಿಡುಗಡೆಯಾಗುವ ನಿರೀಕ್ಷೆಯಿದೆ. ಇದೇ ವರ್ಷ ಅಥವಾ ಮುಂದಿನ ವರ್ಷ ವಿವಿಧ ಹೊಚ್ಚ ಹೊಸ ಹ್ಯಾಚ್‌ಬ್ಯಾಕ್, ಎಸ್‌ಯುವಿ ಹಾಗೂ ಎಂಪಿವಿಯನ್ನು ಮಾರಾಟಕ್ಕೆ ತರಲು ಸಿದ್ಧತೆ ನಡೆಸುತ್ತಿದೆ ಎಂದು ವರದಿಯಾಗಿದೆ.

Kia syros: ಡೀಲರ್‌ಶಿಪ್ ತಲುಪಿದ ಹೊಸ 'ಕಿಯಾ ಸೈರಸ್'

ಕಿಯಾ ಮೋಟಾರ್ಸ್ (Kia Motors) ಡಿಸೆಂಬರ್ 19 ರಂದು ತನ್ನ ಹೊಸ 'ಸೈರಸ್' (Kia syros) ಎಸ್‌ಯುವಿಯನ್ನು ಅನಾವರಣಗೊಳಿಸಿತ್ತು. ಇತ್ತೀಚೆಗೆ, ಕಂಪನಿಯು ಈ ಕಾರಿನ ಬುಕ್ಕಿಂಗ್ ಅನ್ನು ಕೂಡ ತೆರೆದಿತ್ತು. ಇದೀಗ ಅಧಿಕೃತ ಬಿಡುಗಡೆ ಮುನ್ನವೇ ಈ ಕಾರು ಶೋರೂಂಗಳನ್ನು ತಲುಪಲು ಆರಂಭಿಸಿದೆ. ಕೇರಳದ ಕೊಚ್ಚಿಯಲ್ಲಿರುವ ಇಂಚಿಯಾನ್ ಕಿಯಾ ಶೋರೂಮ್‌ನಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಹೊಸ ಕಿಯಾ ಸೈರಸ್ ಎಸ್‌ಯುವಿಯನ್ನು ಅನಾವರಣಗೊಳಿಸಲಾಯಿತು. ಕಾರನ್ನು ನೋಡಿದ ಅಲ್ಲಿನ ಸಿಬ್ಬಂದಿ ಹೊಸ ಎಸ್‌ಯುವಿ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.

ಇತ್ತೀಚೆಗೆ ಬಿಡುಗಡೆಯಾದ 2025ರ 'ಸುಜುಕಿ ಆಕ್ಸೆಸ್ 125' ಸ್ಕೂಟರ್..

ಸುಜುಕಿ ಮೋಟಾರ್‌ಸೈಕಲ್ ಇಂಡಿಯಾ (Suzuki Motorcycle India), ಪ್ರಖ್ಯಾತ ದ್ವಿಚಕ್ರ ವಾಹನ (Two-wheeler) ತಯಾರಕ ಕಂಪನಿಯಾಗಿದ್ದು, ಹಳ್ಳಿಯಿಂದ ದಿಲ್ಲಿವರೆಗೆ ಮನೆ ಮಾತಾಗಿದೆ. ಇತ್ತೀಚೆಗೆ ಮುಕ್ತಾಯಗೊಂಡ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ (Bharat Mobility Global Expo) ವಾಹನ ಪ್ರದರ್ಶನದಲ್ಲಿ ನವೀಕರಿಸಿದ 2025ರ ಹೊಚ್ಚ ಹೊಸ 'ಆಕ್ಸೆಸ್ 125' ಸ್ಕೂಟರ್‌ನ್ನು ಬಿಡುಗಡೆಗೊಳಿಸಿತ್ತು. ಬನ್ನಿ.. ನೂತನ ಈ ಸ್ಕೂಟರ್ ಬೆಲೆ ಹಾಗೂ ವಿಶೇಷತೆಗಳ ಕುರಿತಂತೆ ಪ್ರಮುಖಾಂಶಗಳನ್ನು ತಿಳಿಯೋಣ.

Keeway K300 SF: ಹೊಸ 300cc ಪ್ರೀಮಿಯಂ ಬೈಕ್ ಬಿಡುಗಡೆ

ಆದೀಶ್ವರ್ ಆಟೋ ರೈಡ್ ಇಂಡಿಯಾ ಅಡಿಯಲ್ಲಿ ಬರುವ 'ಕೀವೇ ಇಂಡಿಯಾ' (Keyway India) ಕಂಪನಿಯು, ತನ್ನ ಜನಪ್ರಿಯ K300 ಮೋಟಾರ್‌ಸೈಕಲ್ ಸಿರೀಸ್‌ನ ವಿಶೇಷ ಆವೃತ್ತಿಯಾದ ಕೀವೇ ಕೆ300 ಎಸ್‌ಎಫ್‌ (Keeway K300 SF) ಬೈಕ್ ಬಿಡುಗಡೆ ಮಾಡಿದೆ. ಈ K300 SF ಮೋಟಾರ್‌ಸೈಕಲ್‌ K300N ಬೈಕ್‌ನ ನವೀಕರಿಸಿದ ಆವೃತ್ತಿಯಾಗಿದೆ. ವಿಶೇಷ ಆಫರ್ ಭಾಗವಾಗಿ, ಮೊದಲ 100 ಗ್ರಾಹಕರು ಈ ಅದ್ಭುತ ಮೋಟಾರ್‌ಸೈಕಲ್ ಅನ್ನು ಕೇವಲ ರೂ. 1.69 ಲಕ್ಷ (ಎಕ್ಸ್-ಶೋರೂಂ) ವಿಶೇಷ ಬೆಲೆಯಲ್ಲಿ ಖರೀದಿಸಿಬಹುದು.
Advertisement

ಹೊಸ ಬಿಎಂಡಬ್ಲ್ಯು ಎಲೆಕ್ಟ್ರಿಕ್ ಕಾರಿನ ವಿಶೇಷತೆಗಳು

ಐಷಾರಾಮಿ ಕಾರು ತಯಾರಕ ಕಂಪನಿಯಾದ ಬಿಎಂಡಬ್ಲ್ಯು ಇಂಡಿಯಾ ತನ್ನ ಬಿಎಂಡಬ್ಲ್ಯು ಎಕ್ಸ್1 ಲಾಂಗ್ ವೀಲ್‌ಬೇಸ್ ಆಲ್ ಎಲೆಕ್ಟ್ರಿಕ್ ಕಾರನ್ನು 2025ರ ಆಟೋ ಎಕ್ಸ್ ಪೋದಲ್ಲಿ ಬಿಡುಗಡೆಗೊಳಿಸಿತು. ಈ ಹೊಸ ಬಿಎಂಡಬ್ಲ್ಯು ಎಕ್ಸ್1 ಲಾಂಗ್ ವೀಲ್‌ಬೇಸ್ (BMW X1 Long Wheelbase) ಎಲೆಕ್ಟ್ರಿಕ್ ಕಾರಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.49 ಲಕ್ಷವಾಗಿದೆ. ಇನ್ನು ಈ ಹೊಸ ಬಿಎಂಡಬ್ಲ್ಯು ಕಾರನ್ನು ಸ್ಥಳೀಯವಾಗಿ ಬಿಎಂಡಬ್ಲ್ಯು ಕಂಪನಿಯ ಚೆನ್ನೈ ಘಟಕದಲ್ಲಿ ಉತ್ಪಾದಿಸಲಾಗುತ್ತದೆ. ಇದು eDrive20L ಡ್ರೈವ್‌ಟ್ರೇನ್‌ನೊಂದಿಗೆ ಬರುತ್ತದೆ ಮತ್ತು ಭಾರತದಾದ್ಯಂತ ಬಿಎಂಡಬ್ಲ್ಯು ಡೀಲರ್‌ಶಿಪ್‌ಗಳಲ್ಲಿ ಬುಕಿಂಗ್‌ಗೆ ಲಭ್ಯವಿದೆ.

Honda Activa 110: ಲಕ್ಷುರಿ ಲುಕ್.. 2025ರ ಹೋಂಡಾ ಆಕ್ಟಿವಾ 110..

ಹೋಂಡಾ ಸ್ಕೂಟರ್ & ಮೋಟಾರ್‌ಸೈಕಲ್ ಇಂಡಿಯಾ (Honda Scooter & Motorcycle India), ನಂ.1 ಸ್ಕೂಟರ್ ತಯಾರಕ ಕಂಪನಿಯಾಗಿದೆ. ಅದರಲ್ಲೂ 1999ರಲ್ಲಿ ಬಿಡುಗಡೆಯಾದ 'ಆಕ್ಟಿವಾ 110' ಕಳೆದ 2 ದಶಕಗಳಿಂದ ಕಂಪನಿಯ ಬೆಸ್ಟ್ ಸೇಲರ್ ಸ್ಕೂಟರ್ ಆಗಿದೆ. ಈ ಕಾರಣಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿ ಮಾಡುತ್ತಿದ್ದಾರೆ. ಸದ್ಯ, ಇದೇ ಆಕ್ಟಿವಾ 110 ಸ್ಕೂಟರ್ ಒಂದಷ್ಟು ನವೀಕರಣಗಳನ್ನು ಪಡೆದುಕೊಂಡು ಮಾರಾಟಕ್ಕೆ ಬಂದಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

ಟಾಟಾ ಎಂದು ಸುಮ್ಮನೆ ಹೇಳುವುದಿಲ್ಲ... ಇದೇ ಸಾಕ್ಷಿ!

ಹೊಸ ಕಾರನ್ನು ಖರೀದಿಸುವ ಮುನ್ನ ನಿರ್ಮಾಣ ಗುಣಮಟ್ಟ ಹೆಚ್ಚಾಗಿ ಪರಿಶೀಲಿಸಲಾಗುತ್ತದೆ. ನಂತರ ವಾಹನದ ಡಿಸೈನ್, ಫೀಚರ್ಸ್ ಹಾಗೂ ಮೈಲೇಜ್ ಅನ್ನು ನೋಡಿ ಖರೀದಿಸುತ್ತಾರೆ. ಇಲ್ಲಿ ಮುಖ್ಯವಾಗಿ ವಾಹನಗಳ ಗುಣಮಟ್ಟವನ್ನು ನಿರ್ಣಯಿಸುವ ಸುರಕ್ಷತಾ ರೇಟಿಂಗ್ ನೀಡುವ ಏಜೆನ್ಸಿಗಳು ಪ್ರಮುಖ ಪಾತ್ರ ವಹಿಸುತ್ತವೆ. ಸುರಕ್ಷತಾ ರೇಟಿಂಗ್ ನೀಡುವ ಮೂಲಕ ಖರೀದಿದಾರರಿಗೆ ವಾಹನಗಳ ಬಗ್ಗೆ ಅರಿವು ಮೂಡಿಸುತ್ತವೆ. ಪ್ರತಿ ಬಾರಿ ನಿರ್ಮಾಣ ಗುಣಮಟ್ಟದ ಬಗ್ಗೆ ಮಾತನಾಡುವಾಗ, ಟಾಟಾ ಮತ್ತು ಮಹೀಂದ್ರಾದಂತಹ ಭಾರತೀಯ ಬ್ರಾಂಡ್‌ಗಳು ಹೆಚ್ಚಾಗಿ ನೆನಪಿಗೆ ಬರುತ್ತವೆ. ಸದ್ಯ ಈ ಎರಡು ಬ್ರಾಂಡ್‌ಗಳೆ ಟಾಪ್ ಸುರಕ್ಷಿತ ಕಾರುಗಳನ್ನು ಮಾರಾಟ ಮಾಡುತ್ತಿವೆ.

ದುಡಿಯುವ ವರ್ಗಗಾಗಿ ಬರುವ ಹೊಸ ಟಾಟಾ ಟ್ರಕ್ ವಿಶೇಷತೆಗಳು

ಜನಪ್ರಿಯ ಮತ್ತು ಸ್ವದೇಶಿ ವಾಹನ ತಯಾರಕ ಕಂಪನಿಯಾದ ಟಾಟಾ ಮೋಟಾರ್ಸ್ ಇತ್ತೀಚೆಗೆ ಪ್ರೈಮಾ G.55S ಟ್ರಕ್ ಅನ್ನು 2025ರ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಳಿಸಿತು. ಈ ಹೊಸ ಟಾಟಾ ಪ್ರೈಮಾ G.55S (Tata Prima G.55S) ಟ್ರಕ್ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲಿದೆ. ಈ ವಾಹನದ ರೇಂಜ್ ವಿಷಯದಲ್ಲಿ ಹೊಸ ದಾಖಲೆಯನ್ನು ಬರೆದಿದಿದೆ. ಇಂಧನ ತುಂಬದೇ 2400 ಕಿಮೀ ದೂರವನ್ನು ಕ್ರಮಿಸುವ ಸಾಮರ್ಥ್ಯ ಹೊಂದಿದೆ. ಎಲ್‌ಎನ್‌ಜಿಯ ಏಕೀಕರಣದಿಂದಾಗಿ ಈ ಸರಣಿಯ ಏರಿಕೆಯು ಟಾಟಾ ಪ್ರೈಮಾ ಜಿ.55 ಗಳು ಪರಿಸರಕ್ಕೆ ಹೆಚ್ಚಿನ ತೊಂದರೆಯನ್ನು ಉಂಟುಮಾಡದೆ ಹೆಚ್ಚು ದೂರವನ್ನು ಕ್ರಮಿಸಲು ಸಹಾಯ ಮಾಡುತ್ತದೆ.

TVS: ಮೊನ್ನೆಯಷ್ಟೆ ಬಿಡುಗಡೆಯಾದ ಪ್ರೀಮಿಯಂ ಆಟೋ ವಿಶೇಷತೆಗಳು

ಪ್ರಮುಖ ವಾಹನ ತಯಾರಕರಾಗಿರುವ ಟಿವಿಎಸ್ ಮೋಟಾರ್, ತನ್ನ ಹೊಸ ತ್ರಿಚಕ್ರ ವಾಹನವನ್ನು ಇತ್ತೀಚೆಗೆ ಬಿಡುಗಡೆ ಮಾಡಿದೆ. ಈ ವಾಹನವು ಫ್ಲೀಟ್ ಆಪರೇಟರ್‌ಗಳು ಸೇರಿದಂತೆ ಗ್ರಾಹಕರಿಗೆ ಗಳಿಕೆಯ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ವಾಹನವನ್ನು ಯುಪಿ, ಬಿಹಾರ, ಜಮ್ಮು ಮತ್ತು ಕಾಶ್ಮೀರ, ದೆಹಲಿ ಮತ್ತು ಪಶ್ಚಿಮ ಬಂಗಾಳದಲ್ಲಿ ಸದ್ಯ ಬಿಡುಗಡೆ ಮಾಡಲಾಗಿದೆ. ಮುಂಬರುವ ತಿಂಗಳುಗಳಲ್ಲಿ ಇದು ದೇಶಾದ್ಯಂತ ಲಭ್ಯವಿರುತ್ತದೆ ಎಂದು ಟಿವಿಎಸ್ ಕಂಪನಿ ತಿಳಿಸಿದೆ. ಈ ಹೊಸ ಟಿವಿಎಸ್ ಕಿಂಗ್ ಇವಿ ಮ್ಯಾಕ್ಸ್ (TVS King EV Max) ಕುರಿತ ಹೆಚ್ಚಿನ ವಿವರಗಳು ಇಲ್ಲಿವೆ.

TATA: 6.20 ಲಕ್ಷ.. 5-ಸೀಟರ್, ಮಧ್ಯಮ ವರ್ಗದವರ ನೆಚ್ಚಿನ ಟಾಟಾ..

ಟಾಟಾ ಮೋಟಾರ್ಸ್ (Tata Motors) ಜನ ಮೆಚ್ಚಿದ ವಾಹನ ತಯಾರಕ ಕಂಪನಿಯಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಕಂಪನಿಯು ಹಲವು ಕಾರುಗಳನ್ನು ಮಾರಾಟಗೊಳಿಸುತ್ತದೆ. ಅವುಗಳಲ್ಲಿ ಪಂಚ್ (Punch) ಜನಪ್ರಿಯ ಮೈಕ್ರೋ ಎಸ್‌ಯುವಿಯಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಖರೀದಿದಾರರು ಕೂಡ ಇಷ್ಟಪಟ್ಟು ಕೊಂಡುಕೊಳ್ಳುತ್ತಿದ್ದಾರೆ. ಸದ್ಯ ಇದೇ ಕಾರಿನ ಉತ್ಪಾದನೆಯಲ್ಲಿ ಟಾಟಾ ಕಂಪನಿಯು ಹೊಸ ಇತಿಹಾಸವನ್ನು ಬರೆದಿದೆ. ಬನ್ನಿ.. ಆ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಜನಪ್ರಿಯ ಸ್ಕೋಡಾ 7-ಸೀಟರ್ ಎಸ್‍ಯುವಿ ವಿಶೇಷತೆಗಳು

ಜನಪ್ರಿಯ ಕಾರು ತಯಾರಕ ಕಂಪನಿಯಾದ ಸ್ಕೋಡಾ ತನ್ನ ಎರಡನೇ ತಲೆಮಾರಿನ ಸ್ಕೋಡಾ ಕೊಡಿಯಾಕ್ (Skoda Kodiaq) ಎಸ್‍ಯುವಿಯನ್ನು 2025ರ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋದಲ್ಲಿ ಅನಾವರಣಗೊಳಿಸಿದೆ. ಈ ಹೊಸ ಸ್ಕೋಡಾ ಕೊಡಿಯಾಕ್ ಎಸ್‍ಯುವಿಯು MQB EVO ಆರ್ಕಿಟೆಕ್ಚರ್‌ನ ಫ್ಲಾಟ್ ಫಾರ್ಮ್ ಅನ್ನು ಆಧರಿಸಿದೆ. ಸ್ಕೋಡಾ ಕೊಡಿಯಾಕ್ ಎಸ್‍ಯುವಿಯ ಹಿಂದಿನ ಮಾದರಿಗೆ ಹೋಲಿಸಿದರೆ ಸುಧಾರಿತ ತಂತ್ರಜ್ಞಾನ ಮತ್ತು ಹೊಸ ಫೀಚರ್ಸ್ ಗಳೊಂದಿಗೆ ಬರುತ್ತದೆ.

Maruti Suzuki: ಹೊಸ ಕಾರು ಖರೀದಿಸಬೇಕೇ.. ಮಾರುತಿ ಸುಜುಕಿಯಿಂದ..

ಮಾರುತಿ ಸುಜುಕಿ (Maruti Suzuki) ನಂ.1 ಕಾರು ತಯಾರಕ ಕಂಪನಿಯಾಗಿದೆ. ಅರೆನಾ (Arena) ಹಾಗೂ ನೆಕ್ಸಾ (Nexa) ಡೀಲರ್‌ಶಿಪ್ ಮೂಲಕ ವಿವಿಧ ಕಾರುಗಳನ್ನು ಮಾರಾಟಗೊಳಿಸುತ್ತಿದೆ. ಇವುಗಳು ಹೆಚ್ಚು ಆಕರ್ಷಕ ವಿನ್ಯಾಸ ಮತ್ತು ವೈಶಿಷ್ಟ್ಯಗಳನ್ನು ಪಡೆದುಕೊಂಡಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಕೂಡ ಮುಗಿಬಿದ್ದು ಖರೀದಿ ಮಾಡುತ್ತಿದ್ದಾರೆ. ಸದ್ಯ, ಕಂಪನಿಯು ಎಲ್ಲ ಕಾರುಗಳ ದರವನ್ನು ಹೆಚ್ಚಿಸುವುದಾಗಿ ತಿಳಿಸಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.
Advertisement

ವಿಮಾನದಂತೆ ಸೌಕರ್ಯವಿರುವ ಈ ಅದ್ಭುತ ಕಾರಿನ ವಿಶೇಷತೆಗಳು

ಜನಪ್ರಿಯ ವಾಹನ ತಯಾರಕ ಕಂಪನಿಯಾದ ಬಿವೈಡಿ (BYD) ತನ್ನ ಹೊಸ ಸೀಲಿಯನ್ 7 ಕಾರನ್ನು ಇತ್ತೀಚೆಗೆ 2025ರ ಭಾರತ್ ಮೊಬಿಲಿಟಿ ಎಕ್ಸ್‌ಪೋದಲ್ಲಿ ಅನಾವರಣಗೊಳಿಸಿದೆ. 2025ರ ಮಾರ್ಚ್ ತಿಂಗಳಿನಲ್ಲಿ ಈ ಹೊಸ ಬಿವೈಡಿ ಎಲೆಕ್ಟ್ರಿಕ್ ಕಾರಿನ ವಿತರಣೆಗಳು ಪ್ರಾರಂಭವಾಗಲಿದೆ. ಈ ಹೊಸ ಬಿವೈಡಿ ಸೀಲಿಯನ್ 7 ಕಾರಿನ ಖರೀದಿಗಾಗಿ ಬುಕ್ಕಿಂಗ್ ಅನ್ನು ಪ್ರಾರಂಭಿಸಿದೆ. ಈ ಹೊಸ ಬಿವೈಡಿ ಎಸ್‍ಯುವಿ ಮಾದರಿಯನ್ನು ಖರೀದಿಸಲು ಬಯಸುವ ಗ್ರಾಹಕರು ರೂ.70,000 ಪಾವತಿಸಿ ಬುಕ್ಕಿಂಗ್ ಮಾಡಿಕೊಳ್ಳಬಹುದು.

Swift: ಹೊಸ ಮಾರುತಿ ಸ್ವಿಫ್ಟ್ ಕಾರಿನ ಪರೀಕ್ಷೆ.. 26 ಕಿ.ಮೀ..

ಮಾರುತಿ ಸುಜುಕಿ ಸ್ವಿಫ್ಟ್‌ (Maruti Suzuki Swift) ಜನಪ್ರಿಯ ಹ್ಯಾಚ್‌ಬ್ಯಾಕ್ ಆಗಿದೆ. ಈ ಕಾರು ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯವನ್ನು ಪಡೆದುಕೊಂಡಿರುವುದರಿಂದ ಉತ್ತಮ ಸಂಖ್ಯೆಯಲ್ಲಿಯೂ ಮಾರಾಟವಾಗುತ್ತದೆ. ಕಳೆದ ವರ್ಷ ನಾಲ್ಕನೇ ತಲೆಮಾರಿನ (4th Generation) ಸ್ವಿಫ್ಟ್ ಕಾರನ್ನು ಅದ್ದೂರಿಯಾಗಿ ಬಿಡುಗಡೆಗೊಳಿಸಲಾಗಿತ್ತು. ಆದರೆ, ಈ ಹ್ಯಾಚ್‌ಬ್ಯಾಕ್ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ 'ಸುಜುಕಿ ಸ್ವಿಫ್ಟ್‌'ನಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿರಲಿಲ್ಲ.

ಅದ್ಭುತ ಹ್ಯುಂಡೈ ಕ್ರೆಟಾ ಫ್ಲೆಕ್ಸ್ ಫ್ಯುಯೆಲ್ ಎಸ್‍ಯುವಿ ಅನಾವರಣ

ಜನಪ್ರಿಯ ಕಾರು ತಯಾರಕ ಕಂಪನಿಯಾದ ಹ್ಯುಂಡೈ 2025ರ ಆಟೋ ಎಕ್ಸ್‌ಪೋದಲ್ಲಿ ಸಂಪೂರ್ಣವಾಗಿ E100 ಎಥೆನಾಲ್‌ನಲ್ಲಿ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿರುವ ಕ್ರೆಟಾ ಎಸ್‍ಯುವಿಯನ್ನು ಪ್ರದರ್ಶಿಸಿದೆ. ಈ ನಿರ್ದಿಷ್ಟ ಮಾದರಿಯು ಕ್ರೆಟಾ 1.0 ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಹ್ಯುಂಡೈ ವೆನ್ಯೂ ಮತ್ತು i20 ನೊಂದಿಗೆ ಹಂಚಿಕೊಳ್ಳುತ್ತದೆ. ಆದರೆ ಕ್ರೆಟಾ ಶುದ್ಧ ಎಥೆನಾಲ್ನಲ್ಲಿ ಕಾರ್ಯನಿರ್ವಹಿಸುವ ಸಾಮರ್ಥ್ಯದಿಂದ ತನ್ನನ್ನು ಪ್ರತ್ಯೇಕಿಸುತ್ತದೆ. ಈ ಹ್ಯುಂಡೈ ಕ್ರೆಟಾ ಎಥೆನಾಲ್ ಎಸ್‍ಯುವಿಯು ಮಾರುಕಟ್ಟೆಯಲ್ಲಿ ಹೊಸ ಸಂಚಲನವನ್ನು ಸೃಷ್ಟಿಸಲಿದೆ.

Kia: ಬುಕ್ಕಿಂಗ್‌ನಲ್ಲಿ ಸುನಾಮಿ.. ಶೋರೂಂಗೆ ಬಂದೇ ಬಿಡ್ತು ಹೊಸ..

ದ.ಕೊರಿಯಾ ಮೂಲದ ಕಿಯಾ ಮೋಟಾರ್ಸ್ (Kia Motors) ಜನಪ್ರಿಯ ಕಾರು ತಯಾರಕ ಕಂಪನಿಯಾಗಿದೆ. ಡಿ.19ರಂದು ಕಂಪನಿಯು ನೂತನ 'ಸೈರಸ್' ಎಸ್‌ಯುವಿಯನ್ನು ಅದ್ದೂರಿಯಾಗಿ ಅನಾವರಣಗೊಳಿಸಿತ್ತು. ಕೆಲವೇ ದಿನಗಳ ಹಿಂದೆ ಈ ಕಾರಿನ ಬುಕ್ಕಿಂಗ್‌ನ್ನು ಆರಂಭಿಸಿದ್ದು, ಗ್ರಾಹಕರಿಂದಲೂ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ವ್ಯಕ್ತವಾಗಿದೆ. ದಾಖಲೆ ಸಂಖ್ಯೆಯಲ್ಲಿ ಆರ್ಡರ್‌ಗಳನ್ನು ಪಡೆದುಕೊಳ್ಳುತ್ತಿದೆ.  ಈ ಕಾರಿನ ಬುಕ್ಕಿಂಗ್‌ ಸಂಖ್ಯೆ 10,000 ಯುನಿಟ್ ಗಡಿಯನ್ನು ಕೂಡ ದಾಟಿದೆ. ಈಗಲೂ ಖರೀದಿದಾರರು ಹೊಚ್ಚ ಹೊಸ ಸೈರಸ್ ಎಸ್‌ಯುವಿಯನ್ನು ತಾಮುಂದು - ನಾಮುಂದು ಎಂಬಂತೆ ಕಾಯ್ದಿರಿಸುತ್ತಿದ್ದಾರೆ.

2025ರ ಆಟೋ ಎಕ್ಸ್‌ಪೋಗೆ ತೆರೆ: ಜುಪಿಟರ್ CNG & ಟಾಟಾ ಸಿಯೆರಾ..

ವಾಹನ ಪ್ರಿಯರ ನೆಚ್ಚಿನ 'ಆಟೋ ಎಕ್ಸ್‌ಪೋ'ಗೆ ಆದ್ದೂರಿಯಾಗಿ ತೆರೆ ಬಿದ್ದಿದೆ. ಈ ಬಾರಿ ಜನವರಿ 17 ರಿಂದ 22 ರವರೆಗೆ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ-2025 (Bharat Mobility Global Expo-2025) ಹೆಸರಿನಲ್ಲಿ ಆಟೋ ಎಕ್ಸ್‌ಪೋವನ್ನು ಆಯೋಜಿಸಲಾಗಿತ್ತು. ನವದೆಹಲಿಯಲ್ಲಿ ನಡೆದ ಈ ಬೃಹತ್ ವಾಹನ ಪ್ರದರ್ಶನವನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಉದ್ಘಾಟಿಸಿದ್ದರು. ಕೇಂದ್ರ ಬೃಹತ್ ಕೈಗಾರಿಕೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ಕೂಡ ಪಾಲ್ಗೊಂಡಿದ್ದರು.

ರಸ್ತೆ ಮೇಲಿನ ಅರಮನೆಯಂತಿರುವ ಹೊಸ ಎಂಜಿ ಕಾರಿನ ವಿಶೇಷತೆಗಳು

ಜನಪ್ರಿಯ ವಾಹನ ತಯಾರಕ ಕಂಪನಿಯಾದ JSW ಎಂಜಿ ಮೋಟಾರ್ (MG Motor) ತನ್ನ ಪ್ರೀಮಿಯಂ ಎಲೆಕ್ಟ್ರಿಕ್ ಕಾರು ಸರಣಿಗಾಗಿ ತನ್ನ ಎರಡನೇ ಮಾದರಿಯನ್ನು 2025ರ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಳಿಸಿದೆ. ಹೊಸ ಎಂಜಿ M9 ಎಂಪಿವಿಯು ಪ್ರೀಮಿಯಂ ಸೆಲೆಕ್ಟ್ ಡೀಲರ್‌ಶಿಪ್ ನೆಟ್‌ವರ್ಕ್‌ನಲ್ಲಿ ಸೈಬರ್‌ಸ್ಟರ್ ಎಲೆಕ್ಟ್ರಿಕ್ ಸ್ಪೋರ್ಟ್ಸ್ ಕಾರನ್ನು ಅನಾವರಣಗೊಳಿಸಲಾಗಿದೆ. 2025ರ ಮಾರ್ಚ್ ತಿಂಗಳಿನಲ್ಲಿ ಬಿಡುಗಡೆಯಾಗಲಿರುವ ಎಂಜಿ M9 (MG M9) ಪ್ರೀಮಿಯಂ ಎಂಪಿವಿ ಭಾರತೀಯ ಮಾರುಕಟ್ಟೆಯಲ್ಲಿ ಕಿಯಾ ಕಾರ್ನಿವಲ್ ಮತ್ತು ಟೊಯೋಟಾ ವೆಲ್‌ಫೈರ್‌ ಕಾರುಗಳಿಗೆ ಪೈಪೋಟಿ ನೀಡುತ್ತದೆ.

ಟಾಟಾದ ತಾಕತ್ತು: 42 ಟನ್ ತೂಕದ 3 ಟ್ರಕ್‌ಗಳನ್ನು ಸುಲಭವಾಗಿ ಎಳೆದ..

ಟಾಟಾ ಮೋಟಾರ್ಸ್ (Tata Motors), ವಿಶ್ವಾಸಾರ್ಹತೆಗೆ ಹೆಸರುವಾಸಿಯಾಗಿದ್ದು, ಸುರಕ್ಷಿತ ಕಾರು ತಯಾರಿಕೆ ಮೂಲಕವೇ ಮನೆ ಮಾತಾಗಿದೆ. ಕಳೆದ ವರ್ಷ ದೇಶೀಯ ಮಾರುಕಟ್ಟೆಯಲ್ಲಿ ಕಂಪನಿಯು ಬಹುನಿರೀಕ್ಷಿತ ಕರ್ವ್ (Curvv) ಕೂಪೆ ಎಸ್‌ಯುವಿಯನ್ನು ಅದ್ದೂರಿಯಾಗಿ ಮಾರಾಟಕ್ಕೆ ತಂದಿತ್ತು. ಈ ಕಾರು, ವಿದೇಶಿ ಕಂಪನಿಗಳ ಐಷಾರಾಮಿ ಕಾರುಗಳಿಗೆ ಸವಾಲೆಸೆಯುವ ರೀತಿಯಲ್ಲಿದ್ದು, ಹತ್ತಾರು ಆಕರ್ಷಕ ವೈಶಿಷ್ಟ್ಯಗಳನ್ನು ಹೊಂದಿದೆ. ಸದ್ಯ, ಕಂಪನಿಯು ಇದೇ 'ಕರ್ವ್' ಎಸ್‌ಯುವಿ ಸಾಮರ್ಥ್ಯವನ್ನು ಪರೀಕ್ಷಿಸಿದೆ. ಅದಕ್ಕೆ ಸಂಬಂಧಿಸಿದ ವಿಡಿಯೋವೊಂದನ್ನು ಕೂಡ ತನ್ನ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದೆ.

ಹೊಸ ಬಿಎಂಡಬ್ಲ್ಯು ಅಡ್ವೆಂಚರ್ ಬೈಕ್ ವಿಶೇಷತೆಗಳು

ಜರ್ಮನಿ ಮೂಲದ ಐಷಾರಾಮಿ ವಾಹನ ತಯಾರಕ ಕಂಪನಿಯಾದ ಬಿಎಂಡಬ್ಲ್ಯು ಬಿಎಂಡಬ್ಲ್ಯು ಮೊಟೊರಾಡ್ (BMW Motorrad) ತನ್ನ 2025ರ ಬಿಎಂಡಬ್ಲ್ಯು ಆರ್ 1300 GS ಅಡ್ವೆಂಚರ್ ಬೈಕ್ ಅನ್ನು ಆಟೋ ಎಕ್ಸ್ ಪೋದಲ್ಲಿ ಬಿಡುಗಡೆಗೊಳಿಸಲಾಗಿದೆ. ಈ ಹೊಸ ಬಿಎಂಡಬ್ಲ್ಯು ಆರ್ 1300 GS ಅಡ್ವೆಂಚರ್ ಬೈಕ್ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.22.95 ಲಕ್ಷವಾಗಿದೆ. ಈ ಹೊಸ ಬಿಎಂಡಬ್ಲ್ಯು ಆರ್ 1300 GS ಅಡ್ವೆಂಚರ್ ಬೈಕ್ 30-ಲೀಟರ್ ಫ್ಯೂಯಲ್ ಟ್ಯಾಂಕ್ ಅನ್ನು ಚೆನ್ನಾಗಿ ಸಂಯೋಜಿಸಿದ್ದು, ಇದು ಬಾಕ್ಸಿ ಲುಕ್ ಅನ್ನು ನೀಡುತ್ತದೆ.
Advertisement

ಹೊಸ ಎಂಜಿ ಎಸ್‍ಯುವಿ ವಿಶೇಷತೆಗಳು

ಜನಪ್ರಿಯ ವಾಹನ ತಯಾರಕ ಕಂಪನಿಯಾದ JSW ಎಂಜಿ ಮೋಟಾರ್ (MG Motor) ತನ್ನ ಹೊಸ ಫುಲ್ ಸೈಜ್ ಎಸ್‍ಯುವಿಯಾದ ಮೆಜೆಸ್ಟರ್ ಮಾದರಿಯನ್ನು ಅನಾವರಣಗೊಳಿಸಲಾಗಿದೆ. ಇದು ಗ್ಲೋಸ್ಟರ್‌ನ ನವೀಕರಿಸಿದ ಹೆಚ್ಚು ಪ್ರೀಮಿಯಂ ರೂಪಾಂತರವಾಗಿದೆ. ಈ ಎಂಜಿ ಎಂಜಿ ಎಸ್‍ಯುವಿಯು ವಿನ್ಯಾಸವು ಜಾಗತಿಕವಾಗಿ ಮಾರಾಟವಾದ Maxus D90 ನಿಂದ ಹೆಚ್ಚು ಪ್ರೇರಿತವಾಗಿದೆ ಮತ್ತು ಈ ಎಲೆಕ್ಟ್ರಿಕ್ ಎಸ್‍ಯುವಿಯ ಒಳಭಾಗದಲ್ಲಿ ಹೊಸ ವಿನ್ಯಾಸವನ್ನು ಹೊಂದಿದೆ. ಈ ಹೊಸ ಎಂಜಿ ಮೆಜೆಸ್ಟರ್ ಎಸ್‍ಯುವಿಯು ಮುಂಬರುವ ತಿಂಗಳುಗಳಲ್ಲಿ ಬಿಡುಗಡೆಯಾಗಲು ರೆಡಿಯಾಗಿದೆ.

ಪಂಚೆಯುಟ್ಟು ಬಂದ ಕನ್ನಡದ ಖ್ಯಾತ ಯೂಟ್ಯೂಬರ್.. ದುಬಾರಿ 'ಟೊಯೊಟಾ..

ಕನ್ನಡದ ಜನಪ್ರಿಯ ಯೂಟ್ಯೂಬರ್ ಆಗಿ ಜೀವ ವಿನಯ್ (Jeeva Vinay) ಗುರುತಿಸಿಕೊಂಡಿದ್ದಾರೆ. ಯೂಟ್ಯೂಬ್‌ನಲ್ಲಿ ವಿಭಿನ್ನ ಶೈಲಿಯ ವಿಡಿಯೋ ಮಾಡುವ ವಿನಯ್ ಅವರಿಗೆ ಪ್ರತೇಕವಾದ ಅಭಿಮಾನಿ ಬಳಗವೇ ಇದೆ. ಅವರ ಜಾಯಿಂಟ್ ಕನ್ನಡ (Joint Kannada) ಹೆಸರಿನ ಯೂಟ್ಯೂಬ್‌ ಚಾನೆಲ್‌ಗೆ ಸರಿ ಸುಮಾರು 2.66 ಲಕ್ಷ ಸಬ್‌ಸ್ಕ್ರೈಬ್‌ ಇದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿಯೂ 84 ಸಾವಿರ ಫಾಲೋವರ್‌ಗಳನ್ನು ಹೊಂದಿದ್ದಾರೆ.

Royal Enfield: ಸದ್ದಿಲ್ಲದೇ ಹೊಸ ರಾಯಲ್ ಎನ್‌ಫೀಲ್ಡ್ ಸ್ಕ್ರಾಮ್..

ರಾಯಲ್ ಎನ್‌ಫೀಲ್ಡ್ (Royal Enfield) ಪ್ರೀಮಿಯಂ ಮೋಟಾರ್‌ಸೈಕಲ್‌ ತಯಾರಿಕೆಗೆ ಹೆಸರುವಾಸಿಯಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಹೊಂದಿರುವ ವಿವಿಧ ಬೈಕ್‌ಗಳನ್ನು ಮಾರಾಟಗೊಳಿಸುತ್ತಿದೆ. ಇವುಗಳು ಕೈಗೆಟುಕುವ ಬೆಲೆಯಲ್ಲಿ ಲಭ್ಯವಿರುವುದರಿಂದ ದೊಡ್ಡ ಸಂಖ್ಯೆಯಲ್ಲಿ ಗ್ರಾಹಕರು ಸಹ ಇಷ್ಟಪಟ್ಟು ಕೊಂಡುಕೊಳ್ಳುತ್ತಿದ್ದಾರೆ. ಇದೀಗ, ಯುವ ಖರೀದಿದಾರರು ಸೆಳೆಯಲು ಕಂಪನಿಯು 'ಸ್ಕ್ರಾಮ್ 440' ಮೋಟಾರ್‌ಸೈಕಲ್‌ನ್ನು ಬಿಡುಗಡೆಗೊಳಿಸಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

ಹೊಸ ಯಮಹಾ FZ-S ಹೈಬ್ರಿಡ್ ಬೈಕ್ ಅನಾವರಣ

ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಯಮಹಾ (Yamaha) ಭಾರತೀಯ ಮಾರುಕಟ್ಟೆಯಲ್ಲಿ ತಮ್ಮ 40 ವರ್ಷಗಳ ಅಸ್ತಿತ್ವವನ್ನು ಆಚರಿಸುತ್ತಿದೆ. 2025ರ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋದಲ್ಲಿ ಯಮಹಾ ತನ್ನ ಪೆವಿಲಿಯನ್‌ನಲ್ಲಿ ಪರಂಪರೆಯ ಐಕಾನಿಕ್ ಮಾದರಿಗಳನ್ನು ಪ್ರದರ್ಶಿಸಿತು. ಯಮಹಾ ತನ್ನ ಐಕಾನಿಕ್ ಮಾದರಿಗಳಾದ RX100 ಮತ್ತು RD350 ಮೋಟಾರ್‌ಸೈಕಲ್‌ಗಳ ಜೊತೆಗೆ, ಜಪಾನೀಸ್ ಬ್ರ್ಯಾಂಡ್ YZF R15 ಮತ್ತು FZ ಸರಣಿಯ ಬೈಕುಗಳ ಮೊದಲ ತಲೆಮಾರಿನ ಮಾದರಿಗಳನ್ನು ಸಹ ಪ್ರದರ್ಶಿಸಿತು. ಇದರೊಂದಿಗೆ ಯಮಹಾ ಕಂಪನಿಯು ಯಮಹಾ ಹೈಬ್ರಿಡ್ ತಂತ್ರಜ್ಞಾನದೊಂದಿಗೆ ಭಾರತದ ಮೊದಲ 150 ಸಿಸಿ ಪ್ರಯಾಣಿಕ ಬೈಕು FZ-S ಅನ್ನು ಪರಿಚಯಿಸಿತು.

Delhi Assembly Election 2025: ಡಿಸಿಎಂ ಏಕನಾಥ ಶಿಂಧೆ ಮಹತ್ವದ ಘೋಷಣೆ