MG Motor: ಟಾಪ್ ಸ್ಪೋರ್ಟ್ಸ್ ಕಾರ್ ಆಗಿ ಹೊರಹೊಮ್ಮಿದೆ ಸೈಬರ್ಸ್ಟರ್
ಆಟೋಮೊಬೈಲ್ಸ್
- 9 month, 1 day ago
ಭಾರತದಲ್ಲಿ ಪ್ರಮುಖ ಕಾರು ತಯಾರಕ ಕಂಪನಿಯಾಗಿ ಗುರ್ತಿಸಿಕೊಂಡಿರುವ ಜೆಎಸ್ಡಬ್ಲ್ಯೂ ಎಂಜಿ ಮೋಟಾರ್ ಇಂಡಿಯಾ (JSW MG Motor India), ತನ್ನ ಐಷಾರಾಮಿ ಎಲೆಕ್ಟ್ರಿಕ್ ಸ್ಪೋರ್ಟ್ಸ್ ಕಾರಾಗಿರುವ 'ಸೈಬರ್ಸ್ಟರ್' (MG Cyberster) ಅನ್ನು 2025 ರಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್ ಸ್ಪೋರ್ಟ್ಸ್ ಕಾರ್ ಆಗಿ ಹೊರಹೊಮ್ಮಿದೆ ಎಂದು ಘೋಷಿಸಿದೆ. ಕೇವಲ 6 ತಿಂಗಳಲ್ಲಿ 500 ಕ್ಕೂ ಹೆಚ್ಚು ಯುನಿಟ್ಗಳ ಸೈಬರ್ಸ್ಟರ್ ಮಾರಾಟದೊಂದಿಗೆ, ಐಷಾರಾಮಿ ಬ್ರ್ಯಾಂಡ್ ಚಾನೆಲ್ - ಎಂಜಿ ಸೆಲೆಕ್ಟ್ ಭಾರತದ ಐಷಾರಾಮಿ ಇವಿ ವಿಭಾಗದಲ್ಲಿ ಎರಡನೇ ಅತಿದೊಡ್ಡದಾಗಿ ಹೊರಹೊಮ್ಮಿದೆ ಎಂದು ತಿಳಿಸಿದೆ.