Maruti: 33.73 ಕಿ.ಮೀ ಮೈಲೇಜ್.. 6.26 ಲಕ್ಷ, ಈ ಜನಪ್ರಿಯ ಮಾರುತಿ..

ಮಾರುತಿ ಸುಜುಕಿ ಡಿಜೈರ್ (Maruti Suzuki Dzire) ಪ್ರಖ್ಯಾತ ಸೆಡಾನ್ ಎಂದೇ ಹೆಸರುವಾಸಿಯಾಗಿದೆ. ಇದು ನೋಡಲು ತುಂಬಾ ಚೆನ್ನಾಗಿದ್ದು, ಹತ್ತಾರು ನವೀನ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಎಲ್ಲ ವರ್ಗದ ಗ್ರಾಹಕರು ಕೂಡ ಇಷ್ಟಪಟ್ಟು ಕೊಂಡುಕೊಳ್ಳುತ್ತಿದ್ದಾರೆ. ಅದಕ್ಕೆ ತಕ್ಕಂತೆ ಪ್ರತಿ ತಿಂಗಳು ಉತ್ತಮ ಸಂಖ್ಯೆಯಲ್ಲಿಯೂ ಮಾರಾಟವಾಗುತ್ತಿದೆ. ನೀವು ಹೊಚ್ಚ ಹೊಸ ಕಾರೊಂದನ್ನು ಖರೀದಿಸಬೇಕೇ.. ಹಾಗಾದರೆ 'ಡಿಜೈರ್' ಸೆಡಾನ್ ಅತ್ಯುತ್ತಮವಾದ ಆಯ್ಕೆಯಾಗಲಿದೆ. ನಾವಿಲ್ಲಿ ಈ ಕಾರಿನ ಬೆಲೆ ಹಾಗೂ ವಿಶೇಷತೆಗಳ ಕುರಿತ ಪ್ರಮುಖಾಂಶಗಳು ಏನೆಂಬುದನ್ನು ತಿಳಿಸಿಕೊಟ್ಟಿದ್ದೇವೆ.

330 Km ಮೈಲೇಜ್.. 90,000 ರೂಪಾಯಿ, ಈ ಬಜಾಜ್ CNG ಬೈಕ್..

ಬಜಾಜ್ ಫ್ರೀಡಂ 125 (Bajaj Freedom 125) ಪ್ರಮುಖ ಸಿಎನ್‌ಜಿ ಮೋಟಾರ್‌ಸೈಕಲ್‌ ಆಗಿದೆ. ಇದು ನೋಡಲು ತುಂಬಾ ಚೆನ್ನಾಗಿದ್ದು, ಹಲವು ಆಕರ್ಷಕ ವೈಶಿಷ್ಟ್ಯಗಳನ್ನು ಪಡೆದಿದೆ. ಅದಕ್ಕೆ ತಕ್ಕಂತೆ ಸ್ಪರ್ಧಾತ್ಮಕ ಬೆಲೆಯಲ್ಲಿಯೂ ಸಿಗುತ್ತದೆ. ಪ್ರತಿ ತಿಂಗಳು ಉತ್ತಮ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ. ಗ್ರಾಹಕರು ಕೂಡ ಇಷ್ಟಪಟ್ಟು ತೆಗೆದುಕೊಳ್ಳುತ್ತಿದ್ದಾರೆ. ನಾವಿಲ್ಲಿ ಇದೇ 'ಫ್ರೀಡಂ 125' ಬೈಕ್‌ನ್ನು ಏಕೆ ಖರೀದಿಸಬೇಕು ಎಂಬುದರ ಕುರಿತಂತೆ 5 ಪ್ರಮುಖ ಕಾರಣಗಳನ್ನು ತಿಳಿಸಿಕೊಟ್ಟಿದ್ದೇವೆ.

Kia: 8.67 ಲಕ್ಷ.. 20 ಕಿ.ಮೀ ಮೈಲೇಜ್, ಹೊಸ ಕಿಯಾ ಸೈರಸ್‌ಗೆ 5 ಬದಲಿ..

ಕಿಯಾ ಸೈರಸ್‌ (Kia Syros) ಪ್ರಮುಖ ಎಸ್‌ಯುವಿಯಾಗಿದೆ. ಕನಿಷ್ಠ ರೂ.8.67 ಲಕ್ಷ ಹಾಗೂ ಗರಿಷ್ಠ ರೂ.15.94 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ಅತ್ಯುತ್ತಮವಾದ ವಿನ್ಯಾಸವನ್ನು ಒಳಗೊಂಡಿದೆ. ಅರೋರಾ ಬ್ಲ್ಯಾಕ್ ಪರ್ಲ್, ಫ್ರಾಸ್ಟ್ ಬ್ಲೂ, ಗ್ಲೇಸಿಯರ್ ವೈಟ್ ಪರ್ಲ್, ಗ್ರಾವಿಟಿ ಗ್ರೇ, ಇಂಪೀರಿಯಲ್ ಬ್ಲೂ, ಇಂಟೆನ್ಸ್ ರೆಡ್, ಪ್ಯೂಟರ್ ಆಲಿವ್ ಹಾಗೂ ಸ್ಪಾರ್ಕ್ಲಿಂಗ್ ಸಿಲ್ವರ್ ಎಂಬ ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ. 3,995 ಮಿ.ಮೀ ಉದ್ದ, 1,800 ಮಿ.ಮೀ ಅಗಲ ಮತ್ತು 1,665 ಮಿ.ಮೀ ಎತ್ತರವಿದೆ.

ಯಮಹಾ R3 70ನೇ ಆನಿವರ್ಸರಿ ಸ್ಪೆಷಲ್ ಎಡಿಷನ್ ಅನಾವರಣ

ಯಮಹಾ ಕಂಪನಿಯು ಜಾಗತಿಕ ಮಾರುಕಟ್ಟೆಗಳಿಗಾಗಿ 'R3 ಸೂಪರ್‌ಸ್ಪೋರ್ಟ್ 70ನೇ ವಾರ್ಷಿಕೋತ್ಸವ ಆವೃತ್ತಿ'ಯನ್ನು (R3 Supersport 70th Anniversary Edition) ಅನಾವರಣಗೊಳಿಸಿದೆ. ಇದು 2026 ರಲ್ಲಿ ಅಮೇರಿಕಾ ಸೇರಿದಂತೆ ಆಯ್ದ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಲಭ್ಯವಿರುತ್ತದೆ. ಬ್ರ್ಯಾಂಡ್‌ನ ಅತ್ಯಂತ ಯಶಸ್ವಿ ಪ್ರವೇಶ ಮಟ್ಟದ ಸೂಪರ್‌ಸ್ಪೋರ್ಟ್ ಬೈಕ್‌ಗಳಲ್ಲಿ ಒಂದಾದ R3, ಈಗ 70ನೇ ವಾರ್ಷಿಕೋತ್ಸವದ ವಿಶೇಷ ಆವೃತ್ತಿಯಾಗಿ ಬರುತ್ತಿದೆ, ಇದನ್ನು ಸೀಮಿತ ಸಂಖ್ಯೆಯಲ್ಲಿ ಮಾರಾಟ ಮಾಡಲಾಗುವುದು. ಈ ಬೈಕ್ ಕುರಿತ ಪ್ರಮುಖ ವಿಶೇಷತೆಗಳು ಇಲ್ಲಿವೆ.
Advertisement

ಹೊಸ ಟಾಟಾ ಸಿಯೆರಾ ಕಾರಿನಲ್ಲಿದೆ ಮಾರುತಿ ವಿಕ್ಟೋರಿಸ್‌ನ್ನು ಮೀರಿಸುವ..

ಇತ್ತೀಚೆಗೆ ನೂತನ ಟಾಟಾ ಸಿಯೆರಾ (Tata Sierra) ಎಸ್‌ಯುವಿಯನ್ನು ಅದ್ದೂರಿಯಾಗಿ ಬಿಡುಗಡೆಗೊಳಿಸಲಾಗಿತ್ತು. ಇದು ರೂ.11.49 ಲಕ್ಷ ಪರಿಚಯಾತ್ಮಕ ದರವನ್ನು ಪಡೆದಿದೆ. ಸೆಪ್ಟೆಂಬರ್ 3ರಂದು ಮಾರುತಿ ಸುಜುಕಿ ವಿಕ್ಟೋರಿಸ್ (Maruti Suzuki Victoris) ಕಾರನ್ನು ಮಾರಾಟಕ್ಕೆ ತರಲಾಗಿತ್ತು. ಈ ಎಸ್‌ಯುವಿಯು ರೂ.10.50 ಲಕ್ಷದಿಂದ ರೂ.19.99 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ. ಇವೆರೆಡು ಕಾರುಗಳು ಒಂದಕ್ಕಿಂತ ಒಂದು ಚೆನ್ನಾಗಿವೆ. ಆದರೂ ವಿಕ್ಟೋರಿಸ್‌ನ್ನು ಮೀರಿಸುವಂತೆ ಸಿಯೆರಾವು 5 ಅತ್ಯುತ್ತಮವಾದ ವೈಶಿಷ್ಟ್ಯಗಳನ್ನು ಹೊಂದಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

ಬೈಕ್‌ನಂತೆ ಮೈಲೇಜ್.. ರೂ.5.50 ಲಕ್ಷದಿಂದ ಶುರು, ಜನ ಮೆಚ್ಚಿದ..

ಭಾರತದಲ್ಲಿ ಎಸ್‌ಯುವಿಗಳಿಗೆ ವಿಪರೀತ ಬೇಡಿಕೆಯಿದೆ. ಗ್ರಾಹಕರು ಕೂಡ ನಾ ಮುಂದು - ತಾ ಮುಂದು ಎಂಬಂತೆ ಖರೀದಿ ಮಾಡುತ್ತಿದ್ದಾರೆ. ನೀವು ಹೊಚ್ಚ ಹೊಸ ಕಾರೊಂದನ್ನು ಖರೀದಿ ಮಾಡಲು ಆಲೋಚಿದ್ದೀರಾ.. ಹಾಗಾದರೆ ಟಾಟಾ ಪಂಚ್, ನಿಸ್ಸಾನ್ ಮ್ಯಾಗ್ನೈಟ್, ರೆನಾಲ್ಟ್ ಕೈಗರ್, ಹ್ಯುಂಡೈ ಎಕ್ಸ್‌ಟರ್ ಹಾಗೂ ಮಾರುತಿ ಸುಜುಕಿ ಫ್ರಾಂಕ್ಸ್ ಎಸ್‌ಯುವಿಗಳು ಅತ್ಯುತ್ತಮವಾದ ಆಯ್ಕೆಯಾಗಲಿವೆ. ಬನ್ನಿ, ಇವುಗಳ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಕ್ಷಿಪ್ತವಾದ ವಿವರಗಳನ್ನು ತಿಳಿಯೋಣ.

ಹೊಸ ಮಹೀಂದ್ರಾ XEV 9S ಎಲೆಕ್ಟ್ರಿಕ್ ಎಸ್‌ಯುವಿ ರಿವ್ಯೂ

ಮಹೀಂದ್ರಾದಿಂದ ಎಂಟ್ರಿಕೊಟ್ಟಿರುವ ಹೊಸ ಎಲೆಕ್ಟ್ರಿಕ್ ಎಸ್‌ಯುವಿ XEV 9S ಭಾರೀ ಸದ್ದು ಮಾಡುತ್ತಿದೆ. ಇದು 7 ಸೀಟುಗಳ ಹೊಸ ಮಾದರಿಯಾಗಿದ್ದು, INGLO ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾಗಿದೆ. ಅತ್ಯಾಧುನಿಕ ತಂತ್ರಜ್ಞಾನ, ವಿಶಾಲವಾದ ಒಳಾಂಗಣ ಮತ್ತು ಉತ್ತಮ ಕಾರ್ಯಕ್ಷಮತೆಯ ಸಂಯೋಜನೆಯನ್ನು ನೀಡುತ್ತದೆ. ಈ ಕಾರನ್ನು ದೊಡ್ಡ ಕುಟುಂಬಗಳಿಗಾಗಿ ವಿನ್ಯಾಸಗೊಳಿಸಲಾಗಿದ್ದು, ಸಮರ್ಥ ಎಲೆಕ್ಟ್ರಿಕ್ ವಾಹನವನ್ನು ಬಯಸುವವರರಿಗೆ ಸೂಕ್ತವಾಗಿರುತ್ತದೆ. ನಾವು ಇತ್ತೀಚೆಗೆ ಮಹೀಂದ್ರ XEV 9S ಅನ್ನು ಓಡಿಸಿ ಪರೀಕ್ಷಿಸಿದ್ದೇವೆ, ರಸ್ತೆಯಲ್ಲಿ ಇದರ ಪರ್ಫಾಮೆನ್ಸ್ ಹೇಗಿದೆ ಎಂಬುದನ್ನು ಇಲ್ಲಿ ನೋಡೋಣ.

2026ರ ಆರಂಭದಲ್ಲಿ ಬುಲೆಟ್ 650 ಬಿಡುಗಡೆಗೆ ಸಜ್ಜು

ರಾಯಲ್ ಎನ್‌ಫೀಲ್ಡ್ ತನ್ನ ಬುಲೆಟ್ 650 ಬೈಕ್ ಅನ್ನು 2026 ರ ಆರಂಭದಲ್ಲಿ ಭಾರತದಲ್ಲಿ ಬಿಡುಗಡೆ ಮಾಡಲು ಸಜ್ಜುಗೊಳಿಸುತ್ತಿದೆ. ಈ ಬೈಕ್ ಮಿಲನ್‌ನಲ್ಲಿ ನಡೆದ EICMA 2025 ರಲ್ಲಿ ಜಾಗತಿಕವಾಗಿ ಅನಾವರಣಗೊಂಡ ನಂತರ, ತನ್ನ ಬುಲೆಟ್ 650 ಬೈಕ್ ಅನ್ನು 650cc ವಿಭಾಗಕ್ಕೆ ವಿಸ್ತರಿಸಿದೆ. ಈ ಮೋಟಾರ್‌ಸೈಕಲ್ ಬ್ರ್ಯಾಂಡ್‌ನ ಸಾಬೀತಾದ ಪ್ಯಾರಲಲ್-ಟ್ವಿನ್ ಎಂಜಿನ್‌ ಪಡೆದುಕೊಂಡಿದೆ. ಸಣ್ಣ 350cc ಮಾಡಲ್‌ಗಳಂತೆಯೇ ಬುಲೆಟ್ 650 ರಾಯಲ್ ಎನ್‌ಫೀಲ್ಡ್‌ನ ಶ್ರೇಣಿಯಲ್ಲಿ ಕ್ಲಾಸಿಕ್ 650 ಗಿಂತ ಕೆಳಗಿರುತ್ತದೆ.
Advertisement

ಸಿಯೆರಾ ಬಗ್ಗೆ ತಿಳಿಯದ ಅದೆಷ್ಟೋ ವಿಷಯಗಳಿವೆ ಬನ್ನಿ ನೋಡೋಣ

ಭಾರತದ ಬಹುನಿರೀಕ್ಷಿತ ಕಾರುಗಳಲ್ಲಿ ಒಂದಾದ ಟಾಟಾ ಸಿಯೆರಾ ಮೊನ್ನೆಯಷ್ಟೆ ಬಿಡುಗಡೆಯಾಗಿ ದೇಶದಲ್ಲಿ ಭಾರೀ ಚರ್ಚಿಸಲ್ಪಡುತ್ತಿದೆ. ಇದು ಮೊದಲ ಬಾರಿಗೆ 1991 ರಲ್ಲಿ ಭಾರತದಲ್ಲಿ ಬಿಡುಗಡೆಯಾಗಿತ್ತು, ಅದರ ಪ್ರಗತಿಪರ ವಿನ್ಯಾಸ ಮತ್ತು ವೈಶಿಷ್ಟ್ಯಗಳಿಗೆ ಹೆಸರುವಾಸಿಯಾಗಿತ್ತು. ಭಾರತೀಯರನ್ನು ಅಂದಿನ ಕಾಲಕ್ಕೆ ತನ್ನ ಆಕರ್ಷಕ ಲುಕ್‌ನೊಂದಿಗೆ ಸೆಳೆದಿತ್ತು, ಅದೇ ಡಿಸೈನ್‌ನೊಂದೆಗೆ ಈಗ ಹೊಸ ಯುಗಕ್ಕೆ ಕಾಲಿಟ್ಟು ತಂತ್ರಜ್ಞಾನ, ಸುರಕ್ಷತೆ, ಕರಕುಶಲತೆ ಮತ್ತು ವಿನ್ಯಾಸದೊಂದಿಗೆ ಜನರ ಮನಗೆದ್ದಿದೆ. ಅಷ್ಟಕ್ಕೂ ಸಿಯೆರಾ ಯಾವೆಲ್ಲಾ ವಿಶೇಷತೆಗಳನ್ನು ಒಳಗೊಂಡಿದೆ ನೋಡೋಣ.

ಓಲಾ ಸ್ಕೂಟರ್ ಬೇಡವೆಂದ ಜನ... ಬಜಾಜ್, ಟಿವಿಎಸ್, ಎಥರ್ ಬೆಸ್ಟ್!

ದೇಶದಲ್ಲಿ ಇಂಧನ ಬೆಲೆಗಳ ಏರಿಕೆಯಿಂದಾಗಿ ಜನ ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಆಸಕ್ತಿ ತೋರುತ್ತಿದ್ದಾರೆ. ಕಳೆದ ಒಂದು ವರ್ಷದಲ್ಲಿ ಇವಿಗಳ ಮಾರಾಟದಲ್ಲಿ ತುಂಬಾ ಏರಿಕೆ ಕಂಡುಬಂದಿದೆ. ಇದೇ ನವೆಂಬರ್ ತಿಂಗಳಲ್ಲಿ ಭಾರತದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ (EV 2W) ವಿಭಾಗವು ಉತ್ತಮ ಲಾಭವನ್ನು ಕಂಡಿದೆ. ಈ ಬಾರಿ TVS ಮೋಟಾರ್ ಕಂಪನಿಯು ಇವಿ ಮಾರುಕಟ್ಟೆಯಲ್ಲಿ ತನ್ನ ಪ್ರಾಬಲ್ಯವನ್ನು ತೋರಿಸಿದೆ. ಮತ್ತೊಂದೆಡೆ ಹೀರೋ ಮೋಟೊಕಾರ್ಪ್‌ನ ವಿಡಾ ಇವಿ' ಓಲಾ ಎಲೆಕ್ಟ್ರಿಕ್ ಅನ್ನು ಹಿಂದಿಕ್ಕಿದೆ.

ಮಹೀಂದ್ರಾ XEV 9S VS ಕಿಯಾ ಕ್ಯಾರೆನ್ಸ್ ಕ್ಲಾವಿಸ್ EV

ಭಾರತದ ಬೆಳೆಯುತ್ತಿರುವ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಯಲ್ಲಿ 7 - ಸೀಟರ್ ಇವಿಗಳನ್ನು ಹುಡುಕುತ್ತಿರುವವರಿಗೆ ಮಹೀಂದ್ರಾ XEV 9S ಮತ್ತು ಕಿಯಾ ಕ್ಯಾರೆನ್ಸ್ ಕ್ಲಾವಿಸ್ EV ಎರಡು ಆಕರ್ಷಕ ಆಯ್ಕೆಗಳಾಗಿವೆ. ಎರಡೂ ವಾಹನಗಳು ಪ್ರಾಯೋಗಿಕತೆ ಮತ್ತು ಮೌಲ್ಯವನ್ನು ಒತ್ತಿಹೇಳುತ್ತವೆ. ಗಮನಾರ್ಹವಾಗಿ ಡಿಸೈನ್, ಆಸನ ಸಂರಚನೆ ಮತ್ತು ಒಟ್ಟಾರೆ ಸ್ಥಾನೀಕರಣದಲ್ಲಿ ಭಿನ್ನವಾಗಿವೆ. ಎರಡೂ ಎಲೆಕ್ಟ್ರಿಕ್ 7-ಸೀಟರ್ ಕಾರುಗಳ ನಡುವಿನ ಬೆಲೆ, ವಿನ್ಯಾಸ, ವೈಶಿಷ್ಟ್ಯ, ಸೌಕರ್ಯದ ವಿಷಯದಲ್ಲಿ ಹೇಗಿವೆ ಎಂಬುದನ್ನು ಇಲ್ಲಿ ನೋಡೋಣ.

ಬೈಕ್ ಬೆಲೆಗೆ ಕಾರು..! 3.50 ಲಕ್ಷ ಅಷ್ಟೇ, 34 ಕಿ.ಮೀ ಮೈಲೇಜ್..

ಮಾರುತಿ ಸುಜುಕಿ ಎಸ್-ಪ್ರೆಸ್ಸೊ (Maruti Suzuki S-Presso) ಪ್ರಮುಖ ಕಾರಾಗಿದೆ. ಇದು ದೇಶೀಯ ಮಾರುಕಟ್ಟೆಯಲ್ಲಿ ಎಂಟ್ರಿ ಲೆವೆಲ್ ಮಾಡೆಲ್ ಎಂದೇ ಹೆಸರುವಾಸಿಯಾಗಿದೆ. ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿ ಮಾಡುತ್ತಿದ್ದಾರೆ. ಅದಕ್ಕೆ ತಕ್ಕಂತೆ ಪ್ರತಿ ತಿಂಗಳು ಸ್ಪರ್ಧಾತ್ಮಕ ಸಂಖ್ಯೆಯಲ್ಲಿಯೂ ಮಾರಾಟವಾಗುತ್ತಿದೆ. ನಾವಿಲ್ಲಿ ಇದೇ 'ಎಸ್-ಪ್ರೆಸ್ಸೊ' ಕಾರನ್ನು ಏಕೆ ಖರೀದಿಸಬೇಕು ಎಂಬುದರ ಕುರಿತಂತೆ 5 ಪ್ರಮುಖ ಕಾರಣಗಳನ್ನು ತಿಳಿಸಿಕೊಟ್ಟಿದ್ದೇವೆ.
Advertisement

Tata: ಹ್ಯಾರಿಯರ್ ಇವಿ ಜೊತೆಗೆ ರೆಡ್‌ ಬುಲ್ ಅಡ್ವೆಂಚರ್

ಭಾರತದ ಪ್ರಮುಖ ವಾಹನ ತಯಾರಕ ಕಂಪನಿಯಾದ ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವೆಹಿಕಲ್ಸ್ ಲಿಮಿಟೆಡ್ (TMPVL) ಇಂದು ರೆಡ್ ಬುಲ್ ಇಂಡಿಯಾ ಜೊತೆಗೆ ಸಹಯೋಗವನ್ನು ಘೋಷಿಸಿದೆ. ಈ ಸಹಯೋಗದ ಮೂಲಕ, ಟಾಟಾ ಮೋಟಾರ್ಸ್ ತನ್ನ ಸಮರ್ಥ ಕಾರುಗಳೊಂದಿಗೆ ಮತ್ತು ರೆಡ್ ಬುಲ್ (Red Bull) ತನ್ನ ಅದ್ಭುತ ಕ್ರೀಡಾಪಟುಗಳೊಂದಿಗೆ ಸಂಯೋಜಿಸಿ, ರೋಮಾಂಚಕಾರಿ ಸಾಹಸಗಳನ್ನು ಎದುರಿಸಲಿವೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿವೆ. ಈ ಎರಡೂ ಕಂಪನಿಗಳು ಈ ಬಾರಿ ಭಾರತದಲ್ಲಿ ಎಲ್ಲರ ಹುಬ್ಬೇರಿಸುವಂತಹ ಸಾಹಸ ಮಾಡಲು ಕೈಜೋಡಿಸಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಈ ಜನಪ್ರಿಯ ಹ್ಯುಂಡೈ SUVಗೆ 10 ಲಕ್ಷ ರಿಯಾಯಿತಿ ಘೋಷಣೆ..

ಹ್ಯುಂಡೈ ಐಯೋನಿಕ್ 5 (Hyundai IONIQ 5) ಪ್ರೀಮಿಯಂ ಎಲೆಕ್ಟ್ರಿಕ್ ಎಸ್‌ಯುವಿ ಎಂದೇ ಹೆಸರುವಾಗಿದೆ. ಆದರೂ ಈ ಕಾರಿನ ಮಾರಾಟ ಸಂಖ್ಯೆ ಮಾತ್ರ ದಿನದಿಂದ ದಿನಕ್ಕೆ ಕುಸಿತವಾಗಿದೆ. ಈ ಅಕ್ಟೋಬರ್ ತಿಂಗಳಲ್ಲೂ ಅದು ಮುಂದುವರಿದಿದೆ. ಒಟ್ಟು 6 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ. 2024ರ ಇದೇ ಅವಧಿಯಲ್ಲಿ 32 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿ ಸಂಖ್ಯೆಯನ್ನು ಲೆಕ್ಕ ಹಾಕಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ -81.25 ಕುಸಿತವಾಗಿದೆ.

Renault: 24 ಕಿ.ಮೀ ಮೈಲೇಜ್! ಬಿಡುಗಡೆಗೂ ಮುನ್ನವೇ ಸದ್ದು..

ಬಹುನಿರೀಕ್ಷಿತ ರೆನಾಲ್ಟ್ ಡಸ್ಟರ್‌ (Renault Duster) ಎಸ್‌ಯುವಿಯ ಮರು ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಈ ಕಾರಿನ ಬರುವಿಕೆಗಾಗಿ ಗ್ರಾಹಕರು ಕೂಡ ತುದಿಗಾಲಿನಲ್ಲಿ ನಿಂತುಕೊಂಡು ಕಾಯುತ್ತಿದ್ದಾರೆ. ನೂತನ 'ಡಸ್ಟರ್‌'ನ್ನು ಜನವರಿ 26ರ ಗಣರಾಜ್ಯೋತ್ಸವದಂದು ಅದ್ದೂರಿಯಾಗಿ ಅನಾವರಣಗೊಳಿಸಲಾಗುತ್ತದೆ. ದೇಶೀಯ ಮಾರುಕಟ್ಟೆಯಲ್ಲಿ ಇದೇ ಎಸ್‌ಯುವಿಯನ್ನು 2012ರಲ್ಲಿ ಮಾರಾಟಕ್ಕೆ ತರಲಾಗಿತ್ತು. ಆದರೆ, 2022ರಲ್ಲಿ ನಾನಾ ಕಾರಣಗಳಿಂದ ಮಾರಾಟದಿಂದ ಸ್ಥಗಿತಗೊಳಿಲಾಯಿತು.

ಸ್ವದೇಶಿ AI-ಚಾಲಿತ ಆ್ಯಂಟಿ-ಡ್ರೋನ್ ವಾಹನ ಅನಾವರಣ: ವಿಶೇಷತೆಗಳೇನು?

2023 ರಲ್ಲಿ ಸ್ಥಾಪನೆಯಾದ ಹೈದರಾಬಾದ್ ಮೂಲದ ರಕ್ಷಣಾ ತಂತ್ರಜ್ಞಾನ ಸ್ಟಾರ್ಟ್ಅಪ್ ಕಂಪನಿಯಾದ 'ಇಂದ್ರಜಾಲ್', ನವೆಂಬರ್ 26, 2025 ರಂದು ಇಂದ್ರಜಾಲ್ ರೇಂಜರ್ ಎಂಬ ಹೆಸರಿನ ಭಾರತದ ಮೊದಲ AI-ಚಾಲಿತ ಆ್ಯಂಟಿ-ಡ್ರೋನ್ ಪೆಟ್ರೋಲ್ ವೆಹಿಕಲ್ (ADPV) ಅನ್ನು ಅನಾವರಣಗೊಳಿಸಿದೆ. ಈ ಸಂಪೂರ್ಣ ಮೊಬೈಲ್ ವಾಹನವು ನಗರ ಮತ್ತು ಗಡಿ ಪ್ರದೇಶಗಳಲ್ಲಿ ಜಾಮ್, ವಂಚನೆ, ಅತಿಕ್ರಮ ಸಾಗಾಣೆ ಮತ್ತು ಹೈಜಾಕ್‌ಗಳನ್ನು ಪತ್ತೆ ಮಾಡಬಲ್ಲದು. ಅನಾವರಣದ ವೇಳೆ ಇದರ ಬಗ್ಗೆ ತಿಳಿಸಲಾದ ಹೈಲೆಟ್‌ಗಳು ಇಲ್ಲಿವೆ.
Advertisement

ಸುರಕ್ಷತೆಯಲ್ಲಿ ತನ್ನ ಗತ್ತು ತೋರಿಸಿದ ಪುಟ್ಟ ಹೋಂಡಾ ಕಾರು

ಪ್ರಮುಖ ಕಾರು ತಯಾರಕರಾದ ಹೋಂಡಾ ಕಾರ್ಸ್ ಇಂಡಿಯಾ ಲಿಮಿಟೆಡ್ (HCIL), ಇತ್ತೀಚಿನ 3ನೇ ತಲೆಮಾರಿನ ಹೋಂಡಾ ಅಮೇಜ್‌ಗೆ ಭಾರತ್ NCAP (ಭಾರತ್ ಹೊಸ ಕಾರು ಮೌಲ್ಯಮಾಪನ ಕಾರ್ಯಕ್ರಮ)ನಿಂದ ವಯಸ್ಕ ಪ್ರಯಾಣಿಕರ ರಕ್ಷಣೆಯಲ್ಲಿ 5-ಸ್ಟಾರ್ ಸುರಕ್ಷತಾ ರೇಟಿಂಗ್ ಮತ್ತು ಮಕ್ಕಳ ರಕ್ಷಣೆಯಲ್ಲಿ 4-ಸ್ಟಾರ್ ಸುರಕ್ಷತಾ ರೇಟಿಂಗ್ ನೀಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಈ ಮಹತ್ವದ ಮೈಲಿಗಲ್ಲು ಸುರಕ್ಷತೆಯ ಕಡೆಗೆ ಕಂಪನಿಯ ಅಚಲ ಬದ್ಧತೆಯನ್ನು ಒತ್ತಿಹೇಳುತ್ತದೆ, ಕಾಂಪ್ಯಾಕ್ಟ್ ಸೆಡಾನ್ ವಿಭಾಗದಲ್ಲಿ ಅಮೇಜ್ ಕಾರನ್ನು ಸುರಕ್ಷಿತ ವಾಹನಗಳಲ್ಲಿ ಒಂದಾಗಿ ತನ್ನ ಸ್ಥಾನವನ್ನು ಬಲಪಡಿಸಿದೆ.

Bajaj: ಬೆಲೆಯೂ ಅಗ್ಗ.. ಗಟ್ಟಿಮುಟ್ಟಾದ ಬಜಾಜ್ ಚೇತಕ್ ಇ-ಸ್ಕೂಟರ್‌ಗೆ..

ಬಜಾಜ್ ಚೇತಕ್ (Bajaj Chetak) ಪ್ರಮುಖ ಸ್ಕೂಟರ್ ಆಗಿದೆ. ದಿನದಿಂದ ದಿನಕ್ಕೆ ಬೇಡಿಕೆಯೂ ಹೆಚ್ಚಾಗುತ್ತಿದೆ. ಗ್ರಾಹಕರು ಕೂಡ ನಾ ಮುಂದು - ತಾ ಮುಂದು ಎಂಬಂತೆ ಖರೀದಿ ಮಾಡುತ್ತಿದ್ದಾರೆ. ಈ ಅಕ್ಟೋಬರ್ ತಿಂಗಳು 'ಚೇತಕ್' ಭಾರೀ ಸಂಖ್ಯೆಯಲ್ಲಿ ಮಾರಾಟಗೊಂಡಿದೆ. ಒಟ್ಟು 34,900 ಯುನಿಟ್‌ಗಳನ್ನು ಖರೀದಿದಾರರಿಗೆ ವಿತರಿಸಲಾಗಿದೆ. 2024ರ ಇದೇ ಅವಧಿಯಲ್ಲಿ 30,644 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿಸಂಖ್ಯೆಯನ್ನು ಲೆಕ್ಕ ಹಾಕಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ 13.89% ಪ್ರಗತಿಯಾಗಿದೆ.

ಹೊಸ ಟಾಟಾ ಸಿಯೆರಾ ಬಗ್ಗೆ ಜನರಿಗಿವೆ ಹಲವು ಗೊಂದಲಗಳು

2025 ರ ಟಾಟಾ ಸಿಯೆರಾ ಸದ್ಯ ಭಾರತದಲ್ಲಿ ಭಾರೀ ಸದ್ದು ಮಾಡುತ್ತಿದೆ, ಗ್ರಾಹಕರಲ್ಲಿ ಈ ಎಸ್‌ಯುವಿ ಬಗ್ಗೆ ಹಲವು ಗೊಂದಲಗಳಿವೆ. ಡ್ರೈವ್ ಟ್ರೈನ್ ಆಯ್ಕೆಗಳು, ವೇರಿಯೆಂಟ್, ಡೆಲಿವರಿ ಮತ್ತು ಫೀಚರ್ಸ್ ಮುಖ್ಯಾಂಶಗಳ ಬಗ್ಗೆ ಜನರು ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಈ ಮಿಡ್ ಸೈಜ್ ಎಸ್‌ಯುವಿ ಅತಿ ವೇಗವಾಗಿ ಭಾರತದಲ್ಲಿ ಹೆಚ್ಚು ಚರ್ಚಿಸಲ್ಪಡುತ್ತಿದೆ, ಪ್ರೀಮಿಯಂ, ವೈಶಿಷ್ಟ್ಯ-ಸಮೃದ್ಧ ಒಳಾಂಗಣ ಮತ್ತು ವ್ಯಾಪಕ ಶ್ರೇಣಿಯ ಪವರ್ ಟ್ರೇನ್ ಆಯ್ಕೆಗಳ ಜೊತೆಗೆ ಸ್ಪೋರ್ಟಿ ಲುಕ್ ಹೊಂದಿರುವ ಹೊಸ ಟಾಟಾ ಸಿಯೆರಾ ಕಾರಿನ ಬಗ್ಗೆ ಜನರಿಗಿರುವ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

Maruti: 500 ಕಿ.ಮೀ ಓಡುತ್ತೆ.. ಬರುವ ಮಂಗಳವಾರದಂದೇ ಹೊಸ ಮಾರುತಿ..

ಹೊಚ್ಚ ಹೊಸ ಮಾರುತಿ ಸುಜುಕಿ ಇ-ವಿಟಾರಾ (Maruti Suzuki e Vitara) ಬಿಡುಗಡೆಗೆ ಕಾಲ ಕೂಡಿಬಂದಿದೆ. ಇದೇ ಡಿಸೆಂಬರ್ 2 ರಂದು (ಮಂಗಳವಾರ) ಈ ಎಲೆಕ್ಟ್ರಿಕ್ ಎಸ್‌ಯುವಿಯನ್ನು ಅದ್ದೂರಿಯಾಗಿ ಮಾರಾಟಕ್ಕೆ ತರಲಾಗುತ್ತಿದೆ. ನೂತನ 'ಇ-ವಿಟಾರಾ' ಮೇಲೆ ಖರೀದಿದಾರರು ಕೂಡ ದೊಡ್ಡ ಮಟ್ಟದಲ್ಲಿ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಬನ್ನಿ, ಈ ಕಾರಿನ ಬೆಲೆ ಎಷ್ಟಿರಲಿದೆ.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.
Advertisement

ನಿನ್ನೆಯಷ್ಟೆ ಬಿಡುಗಡೆಯಾದ ಮಹೀಂದ್ರಾ 7-ಸೀಟರ್ SUV ವಿಶೇಷತೆಗಳು

ಬಹುನಿರೀಕ್ಷಿತ ಮಹೀಂದ್ರಾ XEV 9S ಭಾರತದಲ್ಲಿ ನಿನ್ನೆಯಷ್ಟೆ (27 ನವೆಂಬರ್) ಬಿಡುಗಡೆಯಾಗಿದ್ದು, ಇದರ ಆರಂಭಿಕ ಬೆಲೆ ರೂ. 19.95 ಲಕ್ಷ (ಎಕ್ಸ್-ಶೋರೂಂ) ವಿದೆ. ಕಂಪನಿಯ ಪ್ರಕಾರ ಇದು ಭಾರತದ ಮೊದಲ ಅಧಿಕೃತ ಎಲೆಕ್ಟ್ರಿಕ್ 7-ಸೀಟರ್ SUV ಆಗಿದ್ದು, ಬುಕಿಂಗ್ ಜನವರಿ 14, 2026 ರಿಂದ ಪ್ರಾರಂಭವಾಗಲಿದೆ. ವಿತರಣೆಯು ಜನವರಿ 23, 2026 ರಿಂದ ಪ್ರಾರಂಭವಾಗಲಿದೆ. ವಿಸ್ತಾರವಾದ ಕ್ಯಾಬಿನ್, ಮೂರು-ಸಾಲಿನ ವಿನ್ಯಾಸ ಹಾಗೂ ನಿಶ್ಯಬ್ಧ ಡ್ರೈವ್ ಅನುಭವ ನೀಡುವ XEV 9S ಪ್ರಯಾಣಿಕರಿಗೆ ವಿಮಾನದಲ್ಲಿ ಪ್ರಯಾಣಿಸಿಂದತಹ ಅನುಭವ ನೀಡುತ್ತದೆ ಎಂದು ಕಂಪನಿ ಹೇಳಿದೆ.

Tata Sierra: 11.49 ಲಕ್ಷ.. 5-ಸೀಟರ್, ಹೊಸ ಟಾಟಾ ಸಿಯೆರಾಗೆ 3..

ಇತ್ತೀಚೆಗೆ ನೂತನ ಟಾಟಾ ಸಿಯೆರಾ (Tata Sierra) ಎಸ್‌ಯುವಿಯನ್ನು ಮಾರಾಟಕ್ಕೆ ತರಲಾಗಿದೆ. ಇದು ರೂ.11.49 ಲಕ್ಷ (ಎಕ್ಸ್-ಶೋರೂಂ) ಪರಿಚಯಾತ್ಮಕ ಬೆಲೆಯಲ್ಲಿ ಬಿಡುಗಡೆಗೊಂಡಿದೆ. ಅತ್ಯುತ್ತಮವಾದ ವಿನ್ಯಾಸವನ್ನು ಹೊಂದಿದೆ. ಅಂಡಮಾನ್ ಅಡ್ವೆಂಚರ್ (ಯೆಲ್ಲೋ), ಬೆಂಗಾಲ್ ರೂಜ್ (ರೆಡ್), ಕೂರ್ಗ್ ಕ್ಲೌಡ್ಸ್ (ಸಿಲ್ವರ್), ಮುನ್ನಾರ್ ಮಿಸ್ಟ್ (ಗ್ರೀನ್), ಮಿಂಟಲ್ ಗ್ರೇ ಹಾಗೂ ಪ್ರಿಸ್ಟೀನ್ ವೈಟ್ ಎಂಬ ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ. 205 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 2730 ಮಿ.ಮೀ ವೀಲ್‌ಬೇಸ್‌ನ್ನು ಪಡೆದಿದೆ.

BMW ಬ್ರಾಂಡ್‌ ಜೊತೆಗೂಡಿ ದಾಖಲೆ ನಿರ್ಮಿಸಿದ TVS

ಟಿವಿಎಸ್ ಮೋಟಾರ್ ಕಂಪನಿ (ಟಿವಿಎಸ್ಎಂ) ಮತ್ತು ಬಿಎಂಡಬ್ಲ್ಯು ಮೋಟರ್‌ರಾಡ್ ಇಂದು ತಮ್ಮ ದೀರ್ಘಕಾಲೀನ ಪಾಲುದಾರಿಕೆಯಡಿಯಲ್ಲಿ 2,00,000 ಯುನಿಟ್‌ ವಾಹನಗಳ ಉತ್ಪಾದನಾ ಮೈಲಿಗಲ್ಲನ್ನು ದಾಟಿರುವುದಾಗಿ ಘೋಷಿಸಿವೆ. ಈ ಮೈಲಿಗಲ್ಲು ಇಂಡೋ-ಜರ್ಮನ್ ಸಹಯೋಗದ ಯಶಸ್ಸನ್ನು ಎತ್ತಿ ತೋರಿಸುತ್ತದೆ, ಇದು 500 ಸಿಸಿ ಗಿಂತ ಕಡಿಮೆ ದ್ವಿಚಕ್ರ ವಾಹನ ವಿಭಾಗದಲ್ಲಿ ನಿರಂತರವಾಗಿ ಹೊಸ ಮಾನದಂಡಗಳನ್ನು ಸ್ಥಾಪಿಸಿದೆ. ವಿಶ್ವಾದ್ಯಂತ ಗ್ರಾಹಕರಿಗೆ ವಿಶ್ವ ದರ್ಜೆಯ ಮೋಟಾರ್‌ಸೈಕಲ್‌ಗಳನ್ನು ತಲುಪಿಸಿದೆ. 2013 ರಲ್ಲಿ ಕಾರ್ಯತಂತ್ರದ ಮೈತ್ರಿಕೂಟವನ್ನು ರಚಿಸಿದಾಗಿನಿಂದ, ಪಾಲುದಾರರು ಹಲವಾರು ಮೈಲಿಗಲ್ಲುಗಳನ್ನು ಸಾಧಿಸಿರುವುದಾಗಿ ಟಿವಿಎಸ್ - ಬಿಎಂಡಬ್ಲ್ಯು ಹೇಳಿವೆ.

ಮಹೀಂದ್ರಾ BE 6 ಫಾರ್ಮುಲಾ ಇ ಎಡಿಷನ್ ವಿಶೇಷತೆಗಳು

ಭಾರತದ ಜನಪ್ರಿಯ ವಾಹನ ತಯಾರಕ ಕಂಪನಿ ಮಹೀಂದ್ರಾ ತನ್ನ ಹೊಸ ಎಲೆಕ್ಟ್ರಿಕ್ ಎಸ್‌ಯುವಿ BE 6 ಅನ್ನು ಇದೀಗ ಫಾರ್ಮುಲಾ-ಇ ಎಡಿಷನ್‌ನಲ್ಲಿ ಬಿಡುಗಡೆ ಮಾಡಿದೆ. ಇದರ ಬೆಲೆಯು ರೂ.23.69 ಲಕ್ಷದಿಂದ ರೂ.24.49 ಲಕ್ಷ (ಎಕ್ಸ್-ಶೋರೂಂ) ವರೆಗೆ ಇದೆ, ಎಫ್ಇ2 (FE2) ಹಾಗೂ ಎಫ್ಇ3 (FE3) ಎಂಬ ವೇರಿಯೆಂಟ್‌ಗಳಲ್ಲಿ ಸಿಗುತ್ತದೆ. ಜನವರಿ 14, 2026 ರಿಂದ ಬುಕ್ಕಿಂಗ್ ತೆರೆಯಲಾಗುವುದು ಹಾಗೆಯೇ ಫೆಬ್ರವರಿ 14, 2026 ರಿಂದ ವಿತರಣೆಯನ್ನು ಪ್ರಾರಂಭಿಸಲಾಗುತ್ತದೆ ಎಂದು ಮಹೀಂದ್ರಾ ಕಂಪನಿ ತಿಳಿಸಿದೆ.
Advertisement

ಚೀನಾ ಕಾರನ್ನು ಜನ ಮುಗಿಬಿದ್ದು ಖರೀದಿ: ಪ್ರಶಸ್ತಿ ಗೆದ್ದ ವಿಂಡ್ಸರ್

ಪ್ರಮುಖ ಕಾರು ತಯಾರಕ ಕಂಪನಿಯಾದ ಎಂಜಿ ಮೋಟಾರ್‌ನ 'ವಿಂಡ್ಸರ್ ಇವಿ' ಲೇಹ್‌ನಿಂದ ಕನ್ಯಾಕುಮಾರಿಯವರೆಗಿನ ಸವಾಲಿನ ಪ್ರಯಾಣವನ್ನು ಕೇವಲ 83 ಗಂಟೆ 43 ನಿಮಿಷಗಳಲ್ಲಿ ಪೂರ್ಣಗೊಳಿಸಿದೆ. ಬರೋಬ್ಬರಿ 3,757 ಕಿಲೋಮೀಟರ್‌ಗಳನ್ನು ಕ್ರಮಿಸುವುದರೊಂದಿಗೆ JSW MG ಮೋಟಾರ್ ಇಂಡಿಯಾ ಇಂದು ಪ್ರಶಸ್ತಿ ವಿಜೇತ ಸಾಧನೆಯನ್ನು ಘೋಷಿಸಿದೆ. ಅತಿ ಕಡಿಮೆ ಸಮಯದಲ್ಲಿ ಈ ವೈವಿಧ್ಯಮಯ ಮಾರ್ಗವನ್ನು ಕ್ರಮಿಸದ EV ಆಗಿ MG ವಿಂಡ್ಸರ್ ಜನಪ್ರಿಯತೆ ಪಡೆದಿದೆ. ಈ ಸಾಧನೆಯನ್ನು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಮತ್ತು ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಗುರುತಿಸಿದೆ.