ಮತ್ತೊಮ್ಮೆ ತನ್ನ ಗತ್ತು ತೋರಿಸಿದ ಹ್ಯುಂಡೈ

ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ (HMIL) ಅಕ್ಟೋಬರ್ 2025 ರಲ್ಲಿ ಒಟ್ಟು 69,894 ಯುನಿಟ್ ಕಾರುಗಳನ್ನು ಮಾರಾಟ ಮಾಡುವ ಮೂಲಕ ಅಸಾಧಾರಣ ಕಾರ್ಯಕ್ಷಮತೆಯನ್ನು ದಾಖಲಿಸಿದೆ. ಇದು ಇತ್ತೀಚಿನ ತಿಂಗಳುಗಳಲ್ಲಿ ಹ್ಯುಂಡೈಗೆ ಅತ್ಯಧಿಕ ಮಾರಾಟವಾಗಿದೆ. ಇದರಲ್ಲಿ 53,792 ಕಾರುಗಳನ್ನು ದೇಶೀಯವಾಗಿ ಮಾರಾಟ ಮಾಡಿದ್ರೆ, 16,102 ಕಾರುಗಳನ್ನು ರಫ್ತು ಮಾಡಲಾಗಿದೆ. ಇದು ರಫ್ತು ಸಾಗಣೆಯಲ್ಲಿ ವರ್ಷದಿಂದ ವರ್ಷಕ್ಕೆ ಶೇ11 ರಷ್ಟು ಬೆಳವಣಿಗೆಯನ್ನು ತಂದುಕೊಟ್ಟಿದೆ. ಮಧ್ಯಮ ಗಾತ್ರದ ಎಸ್‌ಯುವಿ ವಿಭಾಗದಲ್ಲಿ ಪ್ರಾಬಲ್ಯ ಹೊಂದಿರುವ ಕ್ರೆಟಾ ಮತ್ತು ಕಾಂಪ್ಯಾಕ್ಟ್ ಎಸ್‌ಯುವಿ ವೆನ್ಯೂ ಕಾರುಗಳು ಅಗ್ರಸ್ಥಾನದಲ್ಲಿವೆ.

TATA: ಶೋರೂಂ ಮುಂದೆ ಸಾಲು ಕಟ್ಟಿದ ಗ್ರಾಹಕರು..

ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವೆಹಿಕಲ್ಸ್ ಲಿಮಿಟೆಡ್ (Tata Motors Passenger Vehicles Ltd), ದೇಶೀಯ ಮಾರುಕಟ್ಟೆಯಲ್ಲಿ ವಿವಿಧ ಕಾರುಗಳನ್ನು ಮಾರಾಟಗೊಳಿಸುತ್ತಿದೆ. ಗ್ರಾಹಕರು ಕೂಡ ಇಷ್ಟಪಟ್ಟು ಕೊಂಡುಕೊಳ್ಳುತ್ತಿದ್ದಾರೆ. ಈ ಅಕ್ಟೋಬರ್ ತಿಂಗಳು 61,134 ಯುನಿಟ್‌ಗಳನ್ನು ಖರೀದಿದಾರರಿಗೆ ವಿತರಣೆ ಮಾಡಲಾಗಿದೆ. 2024ರ ಇದೇ ಅವಧಿಯಲ್ಲಿ 48,423 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿಸಂಖ್ಯೆಯನ್ನು ಲೆಕ್ಕ ಹಾಕಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ 27% ಪ್ರಗತಿಯಾಗಿದೆ.

ಭಾರತಕ್ಕೆ ಮರಳಿ ಬರಲು ಹೊಸ ರೆನಾಲ್ಟ್ ಡಸ್ಟರ್ ಸಜ್ಜು

ಹೊಸ ರೆನಾಲ್ಟ್ ಡಸ್ಟರ್ ಜನವರಿ 26, 2026 ರಂದು ಭಾರತದಲ್ಲಿ ಅಧಿಕೃತವಾಗಿ ಪಾದಾರ್ಪಣೆ ಮಾಡಲಿದ್ದು, ಇದು ಭಾರತೀಯ ಮಾರುಕಟ್ಟೆಯಲ್ಲಿ ಈ ಐಕಾನಿಕ್ SUV ಗೆ ಗಮನಾರ್ಹ ಪುನರಾಗಮನವನ್ನು ಸೂಚಿಸುತ್ತದೆ. ಹೊಸ ಡಸ್ಟರ್ ಆಧುನಿಕ ವಿನ್ಯಾಸ, ಸುಧಾರಿತ ತಂತ್ರಜ್ಞಾನ, ಟರ್ಬೊ - ಪೆಟ್ರೋಲ್ ಮತ್ತು ಹೈಬ್ರಿಡ್ ವೇರಿಯೆಂಟ್ ಸೇರಿದಂತೆ ಹಲವಾರು ಎಂಜಿನ್ ಆಯ್ಕೆಗಳನ್ನು ಒಳಗೊಂಡಿರುತ್ತದೆ. ಅಧಿಕೃತ ಅನಾವರಣಕ್ಕೂ ಮುಂಚಿತವಾಗಿ ಬುಕಿಂಗ್ ‌ಗಳು ಪ್ರಾರಂಭವಾಗುವ ನಿರೀಕ್ಷೆಯಿದೆ. ಹೊಸ ಡಸ್ಟರ್‌ನ ಬೆಲೆಗಳು ಸುಮಾರು ರೂ. 10 ಲಕ್ಷ (ಎಕ್ಸ್‌ - ಶೋರೂಂ) ಗಳಿಂದ ಪ್ರಾರಂಭವಾಗುವ ಸಾಧ್ಯತೆಯಿದೆ.

Maruti Suzuki: 29 ಕಿ.ಮೀ ಮೈಲೇಜ್.. 5-ಸೀಟರ್, 10.50 ಲಕ್ಷ..

ಸೆಪ್ಟೆಂಬರ್ 16 ರಂದು ಬಹುನಿರೀಕ್ಷಿತ ಮಾರುತಿ ಸುಜುಕಿ ವಿಕ್ಟೋರಿಸ್ (Maruti Suzuki Victoris) ಎಸ್‌ಯುವಿಯನ್ನು ಅದ್ದೂರಿಯಾಗಿ ಬಿಡುಗಡೆಗೊಳಿಸಲಾಯಿತು. ಈ ಕಾರು ನೋಡಲು ತುಂಬಾ ಚೆನ್ನಾಗಿದ್ದು, ಹಲವು ಆಕರ್ಷಕವಾದ ವೈಶಿಷ್ಟ್ಯಗಳನ್ನು ಪಡೆದಿದೆ. ಅದಕ್ಕೆ ತಕ್ಕಂತೆ ಸ್ಪರ್ಧಾತ್ಮಕ ಬೆಲೆಯಲ್ಲಿಯೂ ಲಭ್ಯವಾಗಿದೆ. ಗ್ರಾಹಕರು ಕೂಡ ನಾ ಮುಂದು - ತಾ ಮುಂದು ಎಂಬಂತೆ ಖರೀದಿ ಮಾಡುತ್ತಿದ್ದಾರೆ. ಸದ್ಯ, ಈ 'ವಿಕ್ಟೋರಿಸ್' ಬುಕ್ಕಿಂಗ್‌ನಲ್ಲಿ ಹೊಸ ಇತಿಹಾಸ ಬರೆಯಲಾಗಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.
Advertisement

ಕಿಯಾ ಸೋನೆಟ್‌ಗೆ ಫುಲ್ ಡಿಮ್ಯಾಂಡ್... 12,745 ಕಾರುಗಳು ಉಡೀಸ್

ಕಿಯಾ ಇಂಡಿಯಾ ಅಕ್ಟೋಬರ್ 2025 ರಲ್ಲಿ ದಾಖಲೆಯ ಮಾರಾಟವನ್ನು ಸಾಧಿಸಿದೆ, ಒಟ್ಟು 29,556 ಯುನಿಟ್‌ ಕಾರುಗಳನ್ನು ಮಾರಾಟ ಮಾಡಿರುವುದಾಗಿ ವರದಿಯಾಗಿದೆ. ಇದು ಅಕ್ಟೋಬರ್ 2024 ರಲ್ಲಿ ಮಾರಾಟವಾದ 22,735 ಯುನಿಟ್‌ಗಳಿಗೆ ಹೋಲಿಸಿದರೆ ವರ್ಷದಿಂದ ವರ್ಷಕ್ಕೆ ಗಮನಾರ್ಹ 30% ಬೆಳವಣಿಗೆಯನ್ನು ಸಾಧಿಸಿದೆ. ಈ ಮೈಲಿಗಲ್ಲು ಕಿಯಾ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದ ನಂತರದ ಅತ್ಯಧಿಕ ಮಾಸಿಕ ಮಾರಾಟವನ್ನು ಪ್ರತಿನಿಧಿಸುತ್ತದೆ. ಜನಪ್ರಿಯ ಕಿಯಾ ಸೋನೆಟ್ ಕಾಂಪ್ಯಾಕ್ಟ್ ಎಸ್‌ಯುವಿ ಬಲವಾದ ಮಾರಾಟದ ಏರಿಕೆಯು ಒಟ್ಟಾರೆ ಮಾರಾಟದಲ್ಲಿ ಬಹುದೊಡ್ಡ ಕೊಡುಗೆಯಾಗಿದೆ.

ಮಹೀಂದ್ರಾ ಪವರ್‌ಫುಲ್ SUV ಬರ್ತಿದೆ... ಹೆಸರು ಅನಾವರಣ

ಮಹೀಂದ್ರಾ ತನ್ನ ಮುಂಬರಲಿರುವ ಆಲ್-ಎಲೆಕ್ಟ್ರಿಕ್ SUV - XEV 9S ನ ಹೆಸರನ್ನು ಅಧಿಕೃತವಾಗಿ ಅನಾವರಣಗೊಳಿಸಿದೆ, ಇದು ಮಹೀಂದ್ರಾದ ಮುಂದುವರಿದ INGLO ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾದ ದೊಡ್ಡ 7-ಸೀಟರ್ ಎಲೆಕ್ಟ್ರಿಕ್ SUV ಆಗಿದೆ. ಪವರ್, ಉಪಸ್ಥಿತಿ ಮತ್ತು ಶುದ್ಧ ಎಲೆಕ್ಟ್ರಿಕ್ ಪರ್ಫಾಮೆನ್ಸ್ ಒಟ್ಟುಗೂಡಿಸಲು ವಿನ್ಯಾಸಗೊಳಿಸಲಾದ XEV 9S ಮಹೀಂದ್ರಾದ ಎಲೆಕ್ಟ್ರಿಕ್ ಕಾರು ವಿಭಾಗದಲ್ಲಿ ಹೊಸ ಅಧ್ಯಾಯವನ್ನು ಗುರುತಿಸುತ್ತದೆ. ಮಹೀಂದ್ರಾದ ಸುಧಾರಿತ ಇಂಧನ ಚಾಲಿತ ವಾಹನಗಳಿಗಿಂತ ಭಿನ್ನವಾಗಿ, XEV 9S ಮಹೀಂದ್ರಾದ INGLO ಸ್ಕೇಟ್‌ಬೋರ್ಡ್ ನಲ್ಲಿ ನಿರ್ಮಿಸಲಾಗಿದೆ.

5-ಸ್ಟಾರ್ ಸುರಕ್ಷತಾ ರೇಟಿಂಗ್ ಪಡೆದುಕೊಂಡ ಫ್ರಾಂಕ್ಸ್

ಇತ್ತೀಚಿನ ASEAN NCAP (ಆಗ್ನೇಯ ಏಷ್ಯಾ ದೇಶಗಳ ಹೊಸ ಕಾರು ಮೌಲ್ಯಮಾಪನ ಕಾರ್ಯಕ್ರಮ) ಕ್ರ್ಯಾಶ್ ಪರೀಕ್ಷೆಗಳಲ್ಲಿ ಸುಜುಕಿ ಫ್ರಾಂಕ್ಸ್ ಪ್ರಭಾವಶಾಲಿ 5-ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಸಾಧಿಸಿದೆ. ಇದು ಆಗ್ನೇಯ ಏಷ್ಯಾದ ಮಾರುಕಟ್ಟೆಗಳಲ್ಲಿ ಸುರಕ್ಷಿತ ಕಾರಾಗಿ ಗುರ್ತಿಸಿಕೊಂಡಿದೆ. ಪರೀಕ್ಷಿಸಲಾದ ಮಾಡಲ್ ಇಂಡೋನೇಷ್ಯಾದಲ್ಲಿ ತಯಾರಾದ MY25 ಆವೃತ್ತಿಯಾಗಿದ್ದು, SUV ಪ್ರಮುಖ ಸುರಕ್ಷತಾ ವಿಭಾಗಗಳಲ್ಲಿ ಒಟ್ಟು 77.70 ಅಂಕಗಳನ್ನು ಗಳಿಸಿದೆ, ಪ್ರಯಾಣಿಕರು ಮತ್ತು ಇತರ ರಸ್ತೆ ಬಳಕೆದಾರರಿಗೆ ದೃಢವಾದ ರಕ್ಷಣೆಯನ್ನು ಪ್ರದರ್ಶಿಸಿರುವುದಾಗಿ ವರದಿಯಾಗಿದೆ.

ದಸರಾ, ದೀಪಾವಳಿ ಜೋರು: ಹೋಂಡಾಗೆ ಭರ್ಜರಿ ಗಿಫ್ಟ್ ಕೊಟ್ಟ ಗ್ರಾಹಕರು

ಭಾರತದಲ್ಲಿ ಜನಪ್ರಿಯ ಕಾರು ತಯಾರಕರಾದ ಹೋಂಡಾ ಕಾರ್ಸ್ ಇಂಡಿಯಾ ಲಿಮಿಟೆಡ್ (HCIL), ಅಕ್ಟೋಬರ್ 2025 ರಲ್ಲಿ 6,394 ಯುನಿಟ್‌ ಕಾರುಗಳ ದೇಶೀಯ ಮಾರಾಟವನ್ನು ದಾಖಲಿಸಿರುವುದಾಗಿ ಘೋಷಿಸಿದೆ. ಕಂಪನಿಯು 4,124 ಯುನಿಟ್‌ ಕಾರುಗಳನ್ನು ರಫ್ತು ಮಾಡಿದ್ದು, ಒಟ್ಟಾರೆ ಈ ತಿಂಗಳ ಒಟ್ಟು ಮಾರಾಟವು 10,518 ಯುನಿಟ್‌ ಕಾರುಗಳಿಗೆ ತಲುಪಿದೆ. ಇದು ಕಳೆದ ವರ್ಷದ ಇದೇ ತಿಂಗಳಲ್ಲಿ ಮಾರಾಟವಾದ ಕಾರುಗಳಿಗಿಂತ ಶೇ 15.3 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ, ಹೋಂಡಾದ ಎಲ್ಲಾ ಕಾರುಗಳಲ್ಲಿ ಅಮೇಜ್ ಬಲವಾದ ಕಾರ್ಯಕ್ಷಮತೆ ತೋರಿಸಿದ್ದು, ಅತಿಹೆಚ್ಚು ಕಾರುಗಳು ಮಾರಾಟವಾಗಿವೆ.
Advertisement

TATA: ಲಕ್ಷುರಿ ಫೀಚರ್ಸ್! ಹೊಸ ಟಾಟಾ SUV ಬಿಡುಗಡೆಗೂ ಮೊದಲೇ..

ಬಹುನಿರೀಕ್ಷಿತ ಟಾಟಾ ಸಿಯೆರಾ (Tata Sierra) ಕಾರಿನ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಇದೊಂದು ಎಸ್‌ಯುವಿಯಾಗಿದೆ. ಈ ಕಾರಿನ ಬರುವಿಕೆಗಾಗಿ ಗ್ರಾಹಕರು ತುದಿಗಾಲಿನಲ್ಲಿ ನಿಂತುಕೊಂಡು ಕಾಯುತ್ತಿದ್ದಾರೆ. ನೂತನ 'ಸಿಯೆರಾ' ನೋಡಲು ತುಂಬಾ ಚೆನ್ನಾಗಿದೆ. ಹತ್ತಾರು ಆಕರ್ಷಕ ವೈಶಿಷ್ಟ್ಯಗಳನ್ನು ಪಡೆದುಕೊಂಡಿರಲಿದೆ. ಕೈಗೆಟುಕುವ ಬೆಲೆಯಲ್ಲಿಯೂ ಖರೀದಿಗೆ ದೊರೆಯುವ ನಿರೀಕ್ಷೆಯಿದೆ. ಶನಿವಾರ ಇದೇ ಕಾರಿನ ಪ್ರಪ್ರಥಮ ಟೀಸರ್ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲೂ ಪೋಸ್ಟ್ ಮಾಡಲಾಗಿದೆ.

Toyota: ಹೊಸ ಟೊಯೊಟಾ ಕಾರುಗಳಿಗೆ ಫುಲ್ ಡಿಮ್ಯಾಂಡ್..

ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (Toyota Kirloskar Motor) ಪ್ರಮುಖ ವಾಹನ ತಯಾರಕ ಕಂಪನಿಯಾಗಿದೆ. ದೇಶೀಯವಾಗಿ ವಿವಿಧ ಕಾರುಗಳನ್ನು ಯಶಸ್ವಿಯಾಗಿ ಮಾರಾಟಗೊಳಿಸುತ್ತಿದೆ. ಗ್ರಾಹಕರು ತಾ ಮುಂದು - ನಾ ಮುಂದು ಎಂಬಂತೆ ಖರೀದಿ ಮಾಡುತ್ತಿದ್ದಾರೆ. ಈ ಅಕ್ಟೋಬರ್ ತಿಂಗಳಲ್ಲೂ ಕಂಪನಿಯ ಕಾರುಗಳು ಭಾರೀ ಸಂಖ್ಯೆಯಲ್ಲಿ ಮಾರಾಟಗೊಂಡಿದೆ. ಒಟ್ಟು 42,892 ಯುನಿಟ್‌ಗಳನ್ನು ಖರೀದಿದಾರರಿಗೆ ವಿತರಣೆ ಮಾಡಲಾಗಿದೆ. 2024ರ ಇದೇ ಅವಧಿಯಲ್ಲಿ 30,845 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿಸಂಖ್ಯೆಯಲ್ಲಿ ವಿಶ್ಲೇಷಣೆ ಮಾಡಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ (YoY) ಶೇಕಡ 39% ಪ್ರಗತಿಯಾಗಿದೆ.

Toyota: 23 ಕಿ.ಮೀ ಮೈಲೇಜ್.. 8-ಸೀಟರ್, ಹೊಸ ಟೊಯೊಟಾ ಇನ್ನೋವಾ..

ಟೊಯೊಟಾ ಇನ್ನೋವಾ ಹೈಕ್ರಾಸ್ (Toyota Innova Hycross) ಪ್ರಮುಖ ಎಂಪಿವಿಯಾಗಿದೆ. ಇದು ನೋಡಲು ತುಂಬಾ ಚೆನ್ನಾಗಿದ್ದು, ಹಲವು ನವೀನ ವೈಶಿಷ್ಟ್ಯಗಳನ್ನು ಪಡೆದಿದೆ. ಸಾಮಾನ್ಯರಿಂದ ಸೆಲೆಬ್ರಿಟಿಗಳವರೆಗೆ ಎಲ್ಲರು ಇಷ್ಟಪಟ್ಟು ಕೊಂಡುಕೊಳ್ಳುತ್ತಾರೆ. ನೀವು ಹೊಚ್ಚ ಹೊಸ ಕಾರೊಂದನ್ನು ಖರೀದಿ ಮಾಡಲು ಪ್ಲ್ಯಾನ್ ಮಾಡಿದ್ದೀರಾ.. ಹಾಗಾದರೆ 'ಇನ್ನೋವಾ ಹೈಕ್ರಾಸ್' ಅತ್ಯುತ್ತಮವಾದ ಆಯ್ಕೆಯಾಗಲಿದೆ. ನಾವಿಲ್ಲಿ ಈ ಎಂಪಿವಿಯ ಬೆಲೆ, ವಿನ್ಯಾಸ, ಕಾರ್ಯಕ್ಷಮತೆ ಮತ್ತು ವೈಶಿಷ್ಟ್ಯಗಳ ಕುರಿತ ಪ್ರಮುಖಾಂಶಗಳು ಏನೆಂಬುದನ್ನು ತಿಳಿಸಿಕೊಟ್ಟಿದ್ದೇವೆ.

ಭಾರತದಲ್ಲಿ ವೇಗ ಹೆಚ್ಚಿಸಿದ ಹೊಸ ಕಾರು ಕಂಪನಿ

ಭಾರತಕ್ಕೆ ಇತ್ತೀಚೆಗೆ ಲಗ್ಗೆಯಿಟ್ಟಿರುವ ಹೊಸ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಯಾದ ವಿನ್‌ಫಾಸ್ಟ್‌, ತನ್ನ ಜಾಲ ವಿಸ್ತರಣೆಯಲ್ಲಿ ಪ್ರಮುಖ ಮುನ್ನಡೆಯನ್ನು ಸಾಧಿಸಿದೆ. ಈಗ ಭಾರತದ ಪ್ರಮುಖ ನಗರಗಳಲ್ಲಿ 24 ಡೀಲರ್‌ಶಿಪ್‌ಗಳು ಕಾರ್ಯನಿರ್ವಹಿಸುತ್ತಿವೆ. ಭಾರತೀಯ ಗ್ರಾಹಕರಿಗೆ ಪ್ರೀಮಿಯಂ ಎಲೆಕ್ಟ್ರಿಕ್ ಮೊಬಿಲಿಟಿ ಅನುಭವಗಳನ್ನು ತಲುಪಿಸುವ ತನ್ನ ಧ್ಯೇಯದ ಭಾಗವಾಗಿ, 2025 ರ ಅಂತ್ಯದ ವೇಳೆಗೆ ದೇಶಾದ್ಯಂತ 35 ಡೀಲರ್‌ಶಿಪ್‌ಗಳನ್ನು ಸ್ಥಾಪಿಸುವುದಾಗಿ ಹೇಳಿದೆ. ಗ್ರಾಹಕರು ಈಗ ಹೊಸದಾಗಿ ಬಿಡುಗಡೆಯಾದ ಪ್ರೀಮಿಯಂ ಎಲೆಕ್ಟ್ರಿಕ್ ಕಾರುಗಳಾದ VF 6 ಮತ್ತು VF 7 ಎಸ್‌ಯುವಿಗಳನ್ನು ತಮ್ಮ ಹತ್ತಿರದ ಡೀಲರ್‌ಶಿಪ್‌ನಲ್ಲಿ ಖರೀದಿಸಬಹುದಾಗಿದೆ.
Advertisement

34 KM ಮೈಲೇಜ್, 4.99 ಲಕ್ಷ.. ಬಡವರ ಐರಾವತ ಮಾರುತಿ..

ಮಾರುತಿ ಸುಜುಕಿ ವ್ಯಾಗನ್ಆರ್ (Maruti Suzuki WagonR) ಜಗಮೆಚ್ಚಿದ ಹ್ಯಾಚ್‌ಬ್ಯಾಕ್ ಆಗಿದೆ. ಇದು ರೂ.4.99 ಲಕ್ಷದಿಂದ ರೂ.6.95 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. 1-ಲೀ. ಪೆಟ್ರೋಲ್, 1.2-ಲೀ. ಪೆಟ್ರೋಲ್ & 1-ಲೀ. ಪೆಟ್ರೋಲ್+ಸಿಎನ್‌ಜಿ ಎಂಜಿನ್‌ನ್ನು ಒಳಗೊಂಡಿದೆ. 23 ರಿಂದ 34 ಕಿ.ಮೀವರೆಗೆ ಮೈಲೇಜ್ ಕೊಡುತ್ತದೆ. 5 ಆಸನಗಳನ್ನು ಹೊಂದಿದೆ. ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ (7 ಇಂಚು), ಕೀಲೆಸ್ ಎಂಟ್ರಿ, ಪವರ್ ವಿಂಡೋಗಳು, ಐಡಲ್ ಸ್ಟಾರ್ಟ್/ಸ್ಟಾಪ್ ಸಿಸ್ಟಮ್ ಹಾಗೂ ಸ್ಟೀರಿಂಗ್ ಮೌಂಟೆಡ್ ಕಂಟೋಲ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ. 6 ಏರ್‌ಬ್ಯಾಗ್‌ಗಳು, ಸೀಟ್ ಬೆಲ್ಟ್ ವಾರ್ನಿಂಗ್ ಮತ್ತು ರೇರ್ ಪಾರ್ಕಿಂಗ್ ಸೆನ್ಸರ್‌ಗಳನ್ನು ಒಳಗೊಂಡಿದೆ.

BMW: ಪವರ್‌ಫುಲ್ ಚಾರ್ಜಿಂಗ್ ಸ್ಟೇಷನ್‌ಗಳ ನಿರ್ಮಾಣಕ್ಕೆ ಒಪ್ಪಂದ

ಭಾರತದ ಪ್ರಮುಖ ಇವಿ ಚಾರ್ಜಿಂಗ್ ನೆಟ್‌ವರ್ಕ್ ಪೂರೈಕೆದಾರರಾದ ಸ್ಟ್ಯಾಟಿಕ್, ಬಿಎಂಡಬ್ಲ್ಯು ಗ್ರೂಪ್ ಇಂಡಿಯಾದೊಂದಿಗೆ ಒಂದು ಹೆಗ್ಗುರುತು ಪಾಲುದಾರಿಕೆಯನ್ನು ಘೋಷಿಸಿದೆ. ಈ ಒಪ್ಪಂದದ ಮೂಲಕ ಭಾರತದಲ್ಲಿ ಪ್ರತಿ 300 ರಿಂದ 350 ಕಿಲೋಮೀಟರ್‌ಗಳಲ್ಲಿ ಕನಿಷ್ಠ 120 ಕಿಲೋವ್ಯಾಟ್‌ನ ಚಾರ್ಜಿಂಗ್ ಸ್ಟೇಷನ್‌ಗಳನ್ನು ನಿರ್ಮಿಸಲು ಸಜ್ಜಾಗಿವೆ. ಹಾಗೆಯೇ ಈ ಸಹಯೋಗದ ಮೂಲಕ, ಬಿಎಂಡಬ್ಲ್ಯು ಗ್ರೂಪ್ ಇಂಡಿಯಾ ಮತ್ತು ಸ್ಟ್ಯಾಟಿಕ್ ಜಮ್ಮುವಿನಿಂದ ಮಧುರೈವರೆಗೆ 4,000 ಕಿಲೋಮೀಟರ್‌ಗಳಿಗಿಂತ ಹೆಚ್ಚು ವ್ಯಾಪ್ತಿಯನ್ನು ಹೊಂದಿರುವ ದೃಢವಾದ ಚಾರ್ಜಿಂಗ್ ಕಾರಿಡಾರ್ ಅನ್ನು ಸ್ಥಾಪಿಸುವುದಾಗಿ ಘೋಷಿಸಿವೆ.

ಅಗ್ಗದ ಬೆಲೆಗೆ ಸಿಗುವ 5 ಜನಪ್ರಿಯ ಸೆಡಾನ್ ಕಾರುಗಳಿವು..

ಹೊಸ ಕಾರು ಖರೀದಿಸಬೇಕೆಂಬುದು ಲಕ್ಷಾಂತರ ಜನರ ಕನಸಾಗಿರುತ್ತದೆ. ಹ್ಯಾಚ್‌ಬ್ಯಾಕ್, ಸೆಡಾನ್ ಹಾಗೂ ಎಸ್‌ಯುವಿಗಳಲ್ಲಿ ಯಾವುದನ್ನು ತೆಗೆದುಕೊಂಡರೆ, ಹೆಚ್ಚು ಒಳಿತು ಎಂಬ ಗೊಂದಲದಲ್ಲಿ ಹಲವಾರು ಇರುತ್ತಾರೆ. ನೀವು ಹೆಚ್ಚು ಕಂಫರ್ಟ್ ಜರ್ನಿ ಒದಗಿಸಬಲ್ಲ ಹೊಚ್ಚ ಹೊಸ ಕಾರೊಂದನ್ನು ಖರೀದಿ ಮಾಡಲು ಆಲೋಚಿಸಿದ್ದೀರಾ.. ಹಾಗಾದರೆ ಮಾರುತಿ ಸುಜುಕಿ ಡಿಜೈರ್, ಹೋಂಡಾ ಅಮೇಜ್, ಹ್ಯುಂಡೈ ಔರಾ, ಸ್ಕೋಡಾ ಸ್ಲಾವಿಯಾ & ಟಾಟಾ ಟಿಗೂರ್ ಸೆಡಾನ್‌ಗಳು ಅತ್ಯುತ್ತಮವಾದ ಆಯ್ಕೆಯಾಗಲಿವೆ. ಇಲ್ಲಿ ಈ ಕಾರುಗಳ ಬೆಲೆ ಹಾಗೂ ವಿಶೇಷತೆಗಳ ಕುರಿತಂತೆ ಸಂಕ್ಷಿಪ್ತವಾಗಿ ತಿಳಿಸಿಕೊಟ್ಟಿದ್ದೇವೆ.

ಕರ್ನಾಟಕ ರಾಜ್ಯೋತ್ಸವದಂದು ಎಥರ್ ಬಂಪರ್ ಫೀಚರ್ ಘೋಷಣೆ

ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ, ಭಾರತದ ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕರಾದ ಎಥರ್ ಎನರ್ಜಿ, ತನ್ನ ಪ್ರಮುಖ ಫ್ಯಾಮಿಲಿ ಸ್ಕೂಟರ್ ಆಗಿರುವ 'ರಿಜ್ಟಾ'ದ ಡ್ಯಾಶ್‌ಬೋರ್ಡ್‌ನಲ್ಲಿ ಕನ್ನಡ ಭಾಷೆಯನ್ನು ಪರಿಚಯಿಸುತ್ತಿದೆ. ಈ ನವೀಕರಣವು ರಿಜ್ಟಾ Z ಮಾಲೀಕರು ತಮ್ಮ ಡ್ಯಾಶ್‌ಬೋರ್ಡ್ ಇಂಟರ್ಫೇಸ್ ಭಾಷೆಯನ್ನು ಕನ್ನಡಕ್ಕೆ ಬದಲಾಯಿಸಲು ಅನುವು ಮಾಡಿಕೊಡುತ್ತದೆ. ಇದು ಕನ್ನಡ ಮಾತನಾಡುವ ರಿಜ್ಟಾ ಮಾಲೀಕರಿಗೆ ತನ್ನ ಪ್ರಯಾಣ ಅನುಭವವನ್ನು ಇನ್ನಷ್ಟು ಅರ್ಥಗರ್ಭಿತ ಮತ್ತು ಸುಗಮಗೊಳಿಸುತ್ತದೆ. 1 ನವೆಂಬರ್ 2025 ರಿಂದ ಹಂತ ಹಂತವಾಗಿ ಓವರ್-ದಿ-ಏರ್ (OTA) ನವೀಕರಣವಾಗಿ ಮಾಡಲಾಗುತ್ತದೆ ಎಂದು ಕಂಪನಿ ಘೋಷಿಸಿದೆ.
Advertisement

Maruti Suzuki: 5-ಸೀಟರ್.. ಡಿ.2ಕ್ಕೆ ಹೊಸ ಮಾರುತಿ SUV ಬಿಡುಗಡೆ..

ಬಹುನಿರೀಕ್ಷಿತ ಮಾರುತಿ ಸುಜುಕಿ ಇ-ವಿಟಾರಾ (Maruti Suzuki e Vitara) ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಇದೊಂದು ಎಲೆಕ್ಟ್ರಿಕ್ ಚಾಲಿತ ಎಸ್‌ಯುವಿಯಾಗಿದೆ. ದೇಶಾದ್ಯಂತ ಈ ಕಾರಿನ ಬರುವಿಕೆಗಾಗಿ ಗ್ರಾಹಕರು ಕೂಡ ತುದಿಗಾಲಿನಲ್ಲಿ ನಿಂತುಕೊಂಡು ಕಾಯುತ್ತಿದ್ದಾರೆ. ಹೊಚ್ಚ ಹೊಸ 'ಇ-ವಿಟಾರಾ' ಆಕರ್ಷಕವಾದ ವಿನ್ಯಾಸ ಹೊಂದಿದ್ದು, ಹತ್ತಾರು ನವೀನ ವೈಶಿಷ್ಟ್ಯಗಳಿಗೂ ಸಾಕ್ಷಿಯಾಗಿದೆ. ಕೈಗೆಟುಕುವ ಬೆಲೆಯಲ್ಲಿಯೂ ಲಭ್ಯವಾಗುವ ನಿರೀಕ್ಷೆಯಿದೆ.

Toyota: ಹೊಸ ಟೊಯೊಟಾ ಕಾರಿನ ಕುರಿತ ಪ್ರಮುಖಾಂಶಗಳಿವು..

ಟೋಕಿಯೋದಲ್ಲಿ ಏರ್ಪಡಿಸಿದ್ದ 2025ರ ಜಪಾನ್ ಮೊಬಿಲಿಟಿ ಶೋನಲ್ಲಿ ಟೊಯೊಟಾ ಮೋಟಾರ್ ಕಾರ್ಪೊರೇಷನ್, ವಿವಿಧ ಕಾರುಗಳನ್ನು ಪ್ರದರ್ಶಿಸಿದೆ. ವಿಶೇಷವಾಗಿ 'ಬೇಬಿ ಲ್ಯಾಂಡ್ ಕ್ರೂಸರ್' ಎಂದೇ ಬಣ್ಣಿಸಲಾದ ಹೊಚ್ಚ ಹೊಸ ಟೊಯೊಟಾ ಎಫ್‌ಜೆ ಕ್ರೂಸರ್ (Toyota FJ Cruiser) ಎಸ್‌ಯುವಿಯನ್ನು ಅನಾವರಣಗೊಳಿಸಲಾಗಿದೆ. ಇದು ದೇಶೀಯ ಮಾರುಕಟ್ಟೆಯಲ್ಲಿಯೂ ಬಿಡುಗಡೆಯಾಗಲಿದೆ ಎನ್ನಲಾಗಿದೆ. ಈ ಕಾರಿನ ನಿರೀಕ್ಷಿತ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಪ್ರಮುಖಾಂಶಗಳು ಏನೆಂಬುದನ್ನು ತಿಳಿಯೋಣ.

ಮೊದಲ ಭಾರತೀಯ ಮಹಿಳೆ: ಪುರುಷ ಪ್ರಾಬಲ್ಯದ ಕ್ಷೇತ್ರದಲ್ಲಿ ದಾಖಲೆ

ಮಹಾರಾಷ್ಟ್ರದ ಪುಣೆ ಮೂಲದ 'ಡಯಾನಾ ಪುಂಡೋಲ್' ಎಂಬ ಮಹಿಳೆ ಜಾಗತಿಕ ಫೆರಾರಿ ರೇಸಿಂಗ್ ಸರಣಿಯಲ್ಲಿ ಭಾಗವಹಿಸಿದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 32ನೇ ವಯಸ್ಸಿನಲ್ಲಿ, ಅವರು ನವೆಂಬರ್ 2025 ರಿಂದ ಏಪ್ರಿಲ್ 2026 ರವರೆಗೆ ಫೆರಾರಿ ಕ್ಲಬ್ ಚಾಲೆಂಜ್ ಮಧ್ಯಪ್ರಾಚ್ಯದಲ್ಲಿ ಸ್ಪರ್ಧಿಸಲಿದ್ದಾರೆ. ದುಬೈ, ಅಬುಧಾಬಿ, ಬಹ್ರೇನ್, ಕತಾರ್ ಮತ್ತು ಸೌದಿ ಅರೇಬಿಯಾದಲ್ಲಿ ಫಾರ್ಮುಲಾ ಒನ್ ಸರ್ಕ್ಯೂಟ್‌ಗಳಲ್ಲಿ ಫೆರಾರಿ 296 ಚಾಲೆಂಜ್ ಕಾರನ್ನು ಒಡಿಸಲಿದ್ದಾರೆ. ಇದು ಭಾರತೀಯ ಮೋಟಾರ್‌ಸ್ಪೋರ್ಟ್‌ಗೆ ಮತ್ತು ಅಂತರರಾಷ್ಟ್ರೀಯ ರೇಸಿಂಗ್‌ನಲ್ಲಿ ಮಹಿಳೆಯರ ಪ್ರಾತಿನಿಧ್ಯಕ್ಕೆ ಮಹತ್ವದ ಮೈಲಿಗಲ್ಲನ್ನು ಸೂಚಿಸುತ್ತದೆ.

LNG ಟ್ರಕ್‌ಗಳಿಗಾಗಿ ಟಾಟಾ ಮೋಟಾರ್ಸ್ ಹೊಸ ಒಪ್ಪಂದ

ಭಾರತದ ಅತಿದೊಡ್ಡ ವಾಣಿಜ್ಯ ವಾಹನ ತಯಾರಕರಾದ ಟಾಟಾ ಮೋಟಾರ್ಸ್, ದೇಶದಲ್ಲಿ ದೀರ್ಘ-ಪ್ರಯಾಣದ ಮತ್ತು ಹೆವಿ-ಡ್ಯೂಟಿ ಟ್ರಕ್ಕಿಂಗ್‌ಗಾಗಿ LNG (ದ್ರವೀಕೃತ ನೈಸರ್ಗಿಕ ಅನಿಲ) ಇಂಧನ ತುಂಬುವ ಪರಿಸರ ವ್ಯವಸ್ಥೆಯನ್ನು ಬಲಪಡಿಸಲು ಭಾರತದ ಪ್ರಮುಖ ನಗರ ಅನಿಲ ವಿತರಣಾ ಕಂಪನಿಯಾದ ಥಿಂಕ್ ಗ್ಯಾಸ್ ಜೊತೆ ಒಪ್ಪಂದ (MoU)ಕ್ಕೆ ಸಹಿ ಹಾಕಿದೆ. ಈ ಪಾಲುದಾರಿಕೆಯು ಮೂಲಸೌಕರ್ಯ ಸಿದ್ಧತೆಯನ್ನು ಹೆಚ್ಚಿಸುವುದು, ಇಂಧನ ಗುಣಮಟ್ಟದ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುವುದು ಮತ್ತು LNG-ಚಾಲಿತ ವಾಣಿಜ್ಯ ವಾಹನಗಳ ವ್ಯಾಪಕ ಅಳವಡಿಕೆಗೆ ಅನುವು ಮಾಡಿಕೊಡುವುದು, ಸ್ವಚ್ಛ ಮತ್ತು ಹೆಚ್ಚು ಇಂಗಾಲರಹಿತ ಸರಕು ಸಾಗಣೆ ಕಾರ್ಯಾಚರಣೆಗಳತ್ತ ಪರಿವರ್ತನೆಯನ್ನು ವೇಗಗೊಳಿಸುವ ಗುರಿ ಹೊಂದಿದೆ.
Advertisement

270 Km ರೇಂಜ್.. ಸುಜುಕಿ ವಿಷನ್ ಇ-ಸ್ಕೈ ಪರಿಚಯ..

ಮಾರುತಿ ಸುಜುಕಿ ಇಂಡಿಯಾದ ಮಾತೃ ಸಂಸ್ಥೆ ಸುಜುಕಿ ಮೋಟಾರ್ ಕಾರ್ಪೊರೇಷನ್ (Suzuki Motor Corporation), ಟೋಕಿಯೋದಲ್ಲಿ ಆಯೋಜಿಸಿದ್ದ 2025ರ ಜಪಾನ್ ಮೊಬಿಲಿಟಿ ಶೋನಲ್ಲಿ ಹಲವು ಕಾರುಗಳನ್ನು ಪ್ರದರ್ಶಿಸಿದೆ. ವಿಶೇಷವಾಗಿ ವಿಷನ್ ಇ-ಸ್ಕೈ (Vision e-Sky) ಕಾನ್ಸೆಪ್ಟ್ ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್‌ನ್ನು ಅನಾವರಣಗೊಳಿಸಿದೆ. ಈ ಕಾರು ವಾಹನ ಪ್ರಿಯರ ಕಣ್ಮನವನ್ನು ಸೆಳೆಯುವಲ್ಲಿಯೂ ಯಶಸ್ವಿಯಾಗಿದೆ. ಇದನ್ನು ದೇಶೀಯ ಮಾರುಕಟ್ಟೆಯಲ್ಲಿ ಮಾರುತಿ ವ್ಯಾಗನ್ಆರ್ ಇವಿ (Maruti WagonR EV) ಹೆಸರಿನಲ್ಲಿ ಪರಿಚಯಿಸಬಹುದು ಎನ್ನಲಾಗಿದೆ.

ಸುಜುಕಿ ಆಕ್ಸೆಸ್ CNG ಅನಾವರಣ: ಹೋಂಡಾ ಆಕ್ಟೀವಾಗೆ ನಡುಕ ಶುರು

ಡ್ಯುಯಲ್ - ಟ್ಯಾಂಕ್ ಸೆಟಪ್ ಹೊಂದಿರುವ ಸುಜುಕಿ ಆಕ್ಸೆಸ್ ಸಿಎನ್‌ಜಿ/ಸಿಬಿಜಿ ಮೂಲಮಾದರಿಯನ್ನು ಸುಜುಕಿ ಕಂಪನಿ ಇತ್ತೀಚೆಗೆ ಅನಾವರಣಗೊಳಿಸಿದೆ. ಈ ಸ್ಕೂಟರ್‌ನಲ್ಲಿ ಇಂಧನ ನಮ್ಯತೆಗೆ ಒಂದು ಹೊಸ ವಿಧಾನವನ್ನು ಪರಿಚಯಿಸಲಾಗಿದೆ. ಸ್ಕೂಟರ್ ಸೀಟಿನ ಕೆಳಗೆ ಇರಿಸಲಾದ ಕಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್ (CNG) ಅಥವಾ ಕಂಪ್ರೆಸ್ಡ್ ಬಯೋಮೀಥೇನ್ ಗ್ಯಾಸ್ (CBG) ಕ್ಕಾಗಿ 6 - ಲೀಟರ್ ಟ್ಯಾಂಕ್ ಮತ್ತು ಬಾಹ್ಯ ಫಿಲ್ಲರ್ ಕ್ಯಾಪ್ ಹೊಂದಿರುವ ಸಣ್ಣ 2 - ಲೀಟರ್ ಪೆಟ್ರೋಲ್ ಟ್ಯಾಂಕ್ ಒಳಗೊಂಡಿರುವ ಡ್ಯುಯಲ್ - ಟ್ಯಾಂಕ್ ವ್ಯವಸ್ಥೆಯನ್ನು ಒಳಗೊಂಡಿದೆ.

ಸೇಲ್ಸ್‌ನಲ್ಲಿ ನಂ.1 ಕಾರಿದು.. 7 ಲಕ್ಷ, 24 Km ಮೈಲೇಜ್..

ಟಾಟಾ ನೆಕ್ಸಾನ್ (Tata Nexon) ಪ್ರಮುಖ ಎಸ್‌ಯುವಿಯಾಗಿದೆ. ಈ ಸೆಪ್ಟೆಂಬರ್​ನಲ್ಲಿ ಭಾರೀ ಸಂಖ್ಯೆಯಲ್ಲಿ ಮಾರಾಟಗೊಂಡಿದೆ. ಒಟ್ಟು 22,500 ಯುನಿಟ್‌ಗಳನ್ನು ಗ್ರಾಹಕರಿಗೆ ವಿತರಣೆ ಮಾಡಲಾಗಿದೆ. ಇದರೊಂದಿಗೆ ಮಾರಾಟದಲ್ಲಿ ಮೊದಲ ಸ್ಥಾನದಲ್ಲಿದೆ. ನೂತನ 'ನೆಕ್ಸಾನ್' ಕಾರು ರೂ.7.32 ಲಕ್ಷದಿಂದ ರೂ.14.05 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. 1.2-ಲೀಟರ್ ಟರ್ಬೊ ಪೆಟ್ರೋಲ್, 1.5-ಲೀಟರ್ ಡೀಸೆಲ್ ಹಾಗೂ 1.2-ಲೀಟರ್ ಸಿಎನ್‌ಜಿ ಎಂಜಿನ್‌ನ್ನು ಪಡೆದಿದೆ. 17 ರಿಂದ 24 ಕಿ.ಮೀವರೆಗೆ ಮೈಲೇಜ್ ನೀಡುತ್ತದೆ. 5 ಆಸನಗಳನ್ನು ಒಳಗೊಂಡಿದೆ. 10.25 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು 6 ಏರ್‌ಬ್ಯಾಗ್‌ಗಳು ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಪಡೆದಿದೆ.

Aase Actress Priyanka: ಆಸೆ ಸೀರಿಯಲ್ ಮೀನಮ್ಮ ಮನೆಗೆ ಹೊಸ..

ಕನ್ನಡದ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುವ ಜನಪ್ರಿಯ ಧಾರಾವಾಹಿ 'ಆಸೆ'ಯಲ್ಲಿ ನಟಿ ಪ್ರಿಯಾಂಕಾ (Priyanka) ಅಭಿನಯಿಸುತ್ತಿದ್ದಾರೆ. ನಾಯಕಿ ಮೀನಾ ಪಾತ್ರಕ್ಕೆ ಬಣ್ಣ ಹಚ್ಚಿದ್ದು, ದೊಡ್ಡ ಮಟ್ಟದಲ್ಲಿ ಖ್ಯಾತಿಯನ್ನು ಗಳಿಸಿದ್ದಾರೆ. ಈ ಧಾರವಾಹಿಯನ್ನು ನಟ ರಮೇಶ್ ಅರವಿಂದ್ ನಿರ್ಮಾಣ ಮಾಡಿದ್ದಾರೆ. ಸದ್ಯ ಪ್ರಿಯಾಂಕಾ 24ನೇ ವಸಂತಕ್ಕೆ ಕಾಲಿಟ್ಟಿದ್ದು, ಹುಟ್ಟು ಹಬ್ಬವನ್ನು ಕೂಡ ಬಹಳ ಸಂಭ್ರಮ - ಸಡಗರದಿಂದ ಆಚರಿಸಿಕೊಂಡಿದ್ದಾರೆ.
Advertisement

ವಾರದೊಳಗೆ 1,000 ಕ್ಕೂ ಹೆಚ್ಚು ಬುಕಿಂಗ್: ಮುಗಿಬಿದ್ದ ಜನ

ಬೆಂಗಳೂರು ಮೂಲದ ಇವಿ ಸ್ಟಾರ್ಟ್ಅಪ್ ಐಗೋ ವೈಸ್ ಮೊಬಿಲಿಟಿ ತನ್ನ ಪ್ರಮುಖ ಸ್ಮಾರ್ಟ್ ಎಲೆಕ್ಟ್ರಿಕ್ ಸ್ಕೂಟರ್ ಬಿ-ಐಗೋ ಮೂಲಕ ಪ್ರಮುಖ ಮೈಲಿಗಲ್ಲು ಸಾಧಿಸಿದೆ. ಬಿಡುಗಡೆಯಾದ ಒಂದು ವಾರದೊಳಗೆ 1,000 ಕ್ಕೂ ಹೆಚ್ಚು ಮುಂಗಡ ಬುಕಿಂಗ್‌ಗಳನ್ನು ಗಳಿಸಿದೆ. ಕಂಪನಿಯು ಮಾರ್ಚ್ 2026 ರಿಂದ ಬೆಂಗಳೂರು ಮತ್ತು ಹೈದರಾಬಾದ್‌ನಿಂದ ಪ್ರಾರಂಭಿಸಿ ಮೊದಲ 100 ಬುಕಿಂಗ್‌ಗಳಿಗೆ ಆದ್ಯತೆಯ ವಿತರಣೆಗಳನ್ನು ಪ್ರಾರಂಭಿಸಲಿದೆ, ನಂತರ ಇತರ ಪ್ರಮುಖ ಮಾರುಕಟ್ಟೆಗಳಿಗೆ ಕ್ರಮೇಣ ವಿಸ್ತರಣೆಯನ್ನು ಮಾಡುವುದಾಗಿ ಪ್ರಕಟಣೆಯಲ್ಲಿ ತಿಳಿಸಿದೆ.