Budget Cars: 5 ಲಕ್ಷಕ್ಕಿಂತ ಕಮ್ಮಿ ಬೆಲೆಗೆ ಸಿಗಲಿವೆ 5 ಕಾರುಗಳು

Budget Cars: ಭಾರತದಲ್ಲಿ ಕೈಗೆಟುಕುವ ಮತ್ತು ಇಂಧನ-ಸಮರ್ಥ ಕಾರುಗಳನ್ನು ಹುಡುಕುವ ಬಜೆಟ್ ಪ್ರಜ್ಞೆಯ ಖರೀದಿದಾರರಿಗೆ, ರೂ.5 ಲಕ್ಷ ಬೆಲೆಯ ಕಾರು ವಿಭಾಗದಲ್ಲಿ ಹಲವಾರು ಅತ್ಯುತ್ತಮ ಆಯ್ಕೆಗಳಿವೆ. GST ಕಡಿತಗಳು ಮತ್ತು ಸ್ಪರ್ಧಾತ್ಮಕ ಬೆಲೆಗಳೊಂದಿಗೆ, ಈ ಮಾಡಲ್‌ಗಳು ಉತ್ತಮ ಮೈಲೇಜ್, ಕಡಿಮೆ ನಿರ್ವಹಣಾ ವೆಚ್ಚಗಳು ಮತ್ತು ವಿಶ್ವಾಸಾರ್ಹ ಪರ್ಫಾಮೆನ್ಸ್ ಒದಗಿಸುತ್ತವೆ. ಇವು ನಗರ ಪ್ರಯಾಣಿಕರಿಗೆ ಅಥವಾ ಮೊದಲ ಬಾರಿಗೆ ಕಾರು ಖರೀದಿಸುತ್ತಿರುವವರಿಗೆ ಬೆಸ್ಟ್‌ ಆಯ್ಕೆಯಾಗಲಿವೆ. ಇಂಧನ ದಕ್ಷತೆ ಮತ್ತು ಮೌಲ್ಯದಲ್ಲಿ ಎದ್ದು ಕಾಣುವ ರೂ. 5 ಲಕ್ಷಕ್ಕಿಂತ ಕಡಿಮೆ ಬೆಲೆಯ ಐದು ಕಾರುಗಳು ಇಲ್ಲಿವೆ.

ಬ್ರೋ.. ಪ್ರಚಂಡ ಮೈಲೇಜ್ ನೀಡಬಲ್ಲ Bike ಹುಡುಕುತ್ತಿದ್ದೀರಾ..

ನಗರವೇ ಆಗಿರಲಿ.. ಹಳ್ಳಿಯೇ ಆಗಿರಲಿ.. ದಿನನಿತ್ಯದ ಬಳಕೆಗೆ ದ್ವಿಚಕ್ರ ವಾಹನಗಳು (Two Wheelers) ತೀರಾ ಅನಿವಾರ್ಯವಾಗಿವೆ. ಅದರಲ್ಲೂ ಬೈಕ್‌ಗಳನ್ನು ಪ್ರತಿಯೊಬ್ಬರು ಇಷ್ಟಪಡುವರು. ನೀವು ಗರಿಷ್ಠ ಮೈಲೇಜ್ ನೀಡಬಲ್ಲ ಮೋಟಾರ್‌ಸೈಕಲ್‌ವೊಂದನ್ನು ಖರೀದಿ ಮಾಡಲು ಹುಡುಕಾಟ ನಡೆಸುತ್ತಿದ್ದೀರಾ.. ಹಾಗಾದರೆ, ಬಜಾಜ್ ಫ್ರೀಡಂ, ಹೋಂಡಾ ಶೈನ್ 100 ಡಿಎಕ್ಸ್, ಬಜಾಜ್ ಪ್ಲಾಟಿನಾ 100, ಹೀರೋ ಸೂಪರ್ ಸ್ಪ್ಲೆಂಡರ್ ಎಕ್ಸ್‌ಟೆಕ್ ಹಾಗೂ ಟಿವಿಎಸ್ ಸ್ಪೋರ್ಟ್ ಮಾಡೆಲ್‌ಗಳು ಅತ್ಯುತ್ತಮವಾದ ಆಯ್ಕೆಯಾಗಲಿವೆ. ನಾವಿಲ್ಲಿ ಈ ಬೈಕ್‌ಗಳ ಬೆಲೆ ಹಾಗೂ ವಿಶೇಷತೆಗಳ ಕುರಿತಂತೆ ಒಂದಷ್ಟು ಪ್ರಮುಖ ವಿವರಗಳನ್ನು ತಿಳಿಸಿಕೊಟ್ಟಿದ್ದೇವೆ.

ರೆನಾಲ್ಟ್ ಕ್ವಿಡ್ ಎಲೆಕ್ಟ್ರಿಕ್ ಕಾರು ಅನಾವರಣ: ಬೆಲೆ ಇಷ್ಟೇನಾ?

ಅಧಿಕೃತವಾಗಿ ಕ್ವಿಡ್ ಇ-ಟೆಕ್ ಎಂದು ಕರೆಯಲ್ಪಡುವ ರೆನಾಲ್ಟ್ ಕ್ವಿಡ್ ಇವಿಯನ್ನು ಬ್ರೆಜಿಲ್‌ನಲ್ಲಿ ಅನಾವರಣಗೊಳಿಸಲಾಗಿದೆ. ಇದು ಬ್ರೆಜಿಲ್‌ನ ಅತ್ಯಂತ ಕೈಗೆಟುಕುವ ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್ ಆಗಿ ಸ್ಥಾನ ಪಡೆದಿದ್ದು, ಇದರ ಬೆಲೆ BRL 99,990 (ಸುಮಾರು ರೂ. 16 ಲಕ್ಷ) ಇದೆ. ಈ ಕಾರನ್ನು ಪರಾನಾದ ಸಾವೊ ಜೋಸ್ ಡಾಸ್ ಪಿನ್ಹೈಸ್‌ನಲ್ಲಿರುವ ರೆನಾಲ್ಟ್‌ನ ಐರ್ಟನ್ ಸೆನ್ನಾ ಕೈಗಾರಿಕಾ ಸಂಕೀರ್ಣದಲ್ಲಿ ಉತ್ಪಾದಿಸಲಾಗುತ್ತದೆ. ಈ ಕಾರಿನ ವಿಶೇಷತೆಗಳು ಹಾಗೂ ಭಾರತಕ್ಕೆ ಯಾವಾಗ ಲಗ್ಗೆ ಇಡುತ್ತದೆ ಎಂಬುದರ ಕುರಿತ ಮಾಹಿತಿ ಇಲ್ಲಿದೆ.

28 ಕಿ.ಮೀ ಮೈಲೇಜ್.. 5-ಸೀಟರ್, 7 ಲಕ್ಷ.. ಈ ಜನಪ್ರಿಯ ಟೊಯೊಟಾ..

ಟೊಯೊಟಾ ಅರ್ಬನ್ ಕ್ರೂಸರ್ ಟೈಸರ್ (Toyota Urban Cruiser Taisor), ವಿಶ್ವಾಸಾರ್ಹ ಎಸ್‌ಯುವಿಯಾಗಿದೆ. ಇದು 'ಮಾರುತಿ ಸುಜುಕಿ ಫ್ರಾಂಕ್ಸ್' ಕಾರಿನ ರೀ-ಬ್ಯಾಡ್ಜ್ ಮಾಡೆಲ್ ಆಗಿದೆ. ತುಂಬಾ ಅಚ್ಚುಕಟ್ಟಾದ ವಿನ್ಯಾಸ ಹೊಂದಿದ್ದು, ನೋಡುಗರ ಕಣ್ಣು ಕುಕುವಂತಿದೆ. ಹಲವು ಆಕರ್ಷಕ ವೈಶಿಷ್ಟ್ಯಗಳನ್ನು ಹೊಂದಿದ್ದು, ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿ ಮಾಡುತ್ತಿದ್ದಾರೆ. ಈ ಸೆಪ್ಟೆಂಬರ್ ತಿಂಗಳಲ್ಲೂ 'ಟೈಸರ್' ಭಾರೀ ಸಂಖ್ಯೆಯಲ್ಲಿ ಮಾರಾಟಗೊಂಡಿದೆ. ಒಟ್ಟು 2,297 ಯುನಿಟ್‌ಗಳನ್ನು ವಿತರಿಸಲಾಗಿದೆ. 2024ರ ಇದೇ ಅವಧಿಯಲ್ಲಿ 2,278 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿಸಂಖ್ಯೆಯಲ್ಲಿ ಲೆಕ್ಕಹಾಕಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ 1% ಪ್ರಗತಿಯಾಗಿದೆ.
Advertisement

5-ಸೀಟರ್.. ವಿಶ್ವವೇ ತಿರುಗಿ ನೋಡುವಂತಹ SUV ಭಾರತದಲ್ಲಿ ಬಿಡುಗಡೆ..

ಜರ್ಮನಿ ಮೂಲದ ಮರ್ಸಿಡಿಸ್ ಬೆಂಜ್ (Mercedes Benz) ಐಷಾರಾಮಿ ವಾಹನ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿದೆ. ಭಾರತದ ಮಾರುಕಟ್ಟೆಯಲ್ಲಿಯೂ ಹಲವು ಕಾರುಗಳನ್ನು ಯಶಸ್ವಿಯಾಗಿ ಮಾರಾಟಗೊಳಿಸುತ್ತಿದೆ. ವಿಶೇಷವಾಗಿ ಶ್ರೀಮಂತ ಗ್ರಾಹಕರು ಜನಪ್ರಿಯ ಜಿ-ಕ್ಲಾಸ್ (G-Class) ಎಸ್‌ಯುವಿಯನ್ನು ಇಷ್ಟಪಟ್ಟು ಖರೀದಿ ಮಾಡುತ್ತಾರೆ. ಇದು ಪೆಟ್ರೋಲ್ & ಎಲೆಕ್ಟ್ರಿಕ್ ರೂಪದಲ್ಲಿ ಸಿಗುತ್ತದೆ. ಸದ್ಯ, ಈ ಕಾರಿನ ಪೋರ್ಟ್‌ಫೋಲಿಯೋವನ್ನು ವಿಸ್ತರಿಸಲಾಗಿದ್ದು, ಹೊಚ್ಚ ಹೊಸ ಡೀಸೆಲ್ ಚಾಲಿತ '450ಡಿ' ಮಾಡೆಲ್‌ನ್ನು ಅದ್ದೂರಿಯಾಗಿ ಬಿಡುಗಡೆಗೊಳಿಸಲಾಗಿದೆ. ಬನ್ನಿ, ನೂತನ ಎಸ್‌ಯುವಿಯ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಒಂದಷ್ಟು ವಿವರಗಳನ್ನು ತಿಳಿಯೋಣ.

ಕೇವಲ ರೂ.5.99 ಲಕ್ಷಕ್ಕೆ 1 ಟನ್ ಎಲೆಕ್ಟ್ರಿಕ್ ಮಿನಿ ಟ್ರಕ್ ಬಿಡುಗಡೆ

ಎಲೆಕ್ಟ್ರಿಕ್ ವಾಣಿಜ್ಯ ವಾಹನ ತಯಾರಕರಾದ ಯೂಲರ್ ಮೋಟಾರ್ಸ್, ಬೆಂಗಳೂರಿನಲ್ಲಿ 1 ಟನ್ 4ಡಬ್ಲ್ಯು ಇಸಿವಿ ಯೂಲರ್ ಟರ್ಬೊ ಇವಿ 1000 ಅನ್ನು ಬಿಡುಗಡೆ ಮಾಡಿದೆ. ನಗರದ ಸಂಚಾರವನ್ನು ನಿಭಾಯಿಸಬಲ್ಲ, ಭಾರವಾದ ಹೊರೆಗಳನ್ನು ಹೊತ್ತೊಯ್ಯಬಲ್ಲ ಮತ್ತು ದೈನಂದಿನ ಚಾಲನಾ ವೆಚ್ಚವನ್ನು ಉಳಿಸಬಲ್ಲ ಟ್ರಕ್ ಅಗತ್ಯವಿರುವ ಚಾಲಕರು ಮತ್ತು ವ್ಯವಹಾರಗಳಿಗಾಗಿ ಈ ವಾಹನವನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ರೂ.5.99 ಲಕ್ಷದಿಂದ (ಎಕ್ಸ್-ಶೋರೂಂ) ಬೆಲೆ ಆರಂಭವಾಗುತ್ತದೆ, ಟರ್ಬೊ ಇವಿ 1000 ವಿಶ್ವದ ಅತ್ಯಂತ ಕೈಗೆಟುಕುವ 1-ಟನ್ ಇವಿಯಾಗಿದ್ದು, ಡೀಸೆಲ್ ಪ್ರತಿರೂಪಗಳಿಗೆ ಹೋಲಿಸಿದರೆ ರೂ.1.15 ಲಕ್ಷ ವಾರ್ಷಿಕ ಉಳಿತಾಯವನ್ನು ನೀಡುತ್ತದೆ ಎಂದು ಕಂಪನಿ ತಿಳಿಸಿದೆ.

ಬೈಕ್‌ನಂತೆ 32.85 ಕಿ.ಮೀ ಮೈಲೇಜ್.. ರೂ.5.79 ಲಕ್ಷ.. ಈ ಮಾರುತಿ..

ಮಾರುತಿ ಸುಜುಕಿ ಸ್ವಿಫ್ಟ್ (Maruti Suzuki Swift), ದಶಕಗಳಿಂದ ವಿಶ್ವಾಸಾರ್ಹ ಹ್ಯಾಚ್‌ಬ್ಯಾಕ್‌ ಆಗಿದೆ. ಇದು ಅತ್ಯಾಧುನಿಕವಾದ ವಿನ್ಯಾಸವನ್ನು ಹೊಂದಿದ್ದು, ಹತ್ತಾರು ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಕೈಗೆಟುಕುವ ಬೆಲೆಯಲ್ಲಿಯೂ ಗ್ರಾಹಕರು ಕೂಡ ನಾ ಮುಂದು - ತಾ ಮುಂದು ಎಂಬಂತೆ ಖರೀದಿ ಮಾಡುತ್ತಿದ್ದಾರೆ. ಈ ಸೆಪ್ಟೆಂಬರ್ ತಿಂಗಳಲ್ಲೂ ಉತ್ತಮ ಸಂಖ್ಯೆಯಲ್ಲಿ ಮಾರಾಟಗೊಂಡಿದೆ. ಒಟ್ಟು 15,547 ಯುನಿಟ್‌ಗಳನ್ನು ಖರೀದಿದಾರರಿಗೆ ವಿತರಣೆ ಮಾಡಲಾಗಿದೆ. 2024ರ ಇದೇ ಅವಧಿಯಲ್ಲಿ 16,241 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿಸಂಖ್ಯೆಯನ್ನು ವಿಶ್ಲೇಷಣೆ ಮಾಡಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಸ್ವಲ್ಪ ಮಟ್ಟಿಗೆ ಅಂದರೆ ಶೇಕಡ -4% ಇಳಿಕೆಯಾಗಿದೆ.

Hero: ಇಟಲಿಯಲ್ಲಿ ಧೂಳೆಬ್ಬಿಸಲಿವೆ ಹೀರೋ ಬೈಕ್‌ಗಳು

ವಿಶ್ವದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕರಾದ ಹೀರೋ ಮೋಟೋಕಾರ್ಪ್ (Hero Motocorp), ಇಂದು ಇಟಲಿ ಗಣರಾಜ್ಯಕ್ಕೆ (Republic of Italy) ಅಧಿಕೃತ ಪ್ರವೇಶವನ್ನು ಘೋಷಿಸಿದೆ. 24 ವರ್ಷಗಳಿಗೂ ಹೆಚ್ಚು ಕಾಲ ದ್ವಿಚಕ್ರ ವಾಹನ ತಯಾರಕರಾಗಿ, ಜಾಗತಿಕವಾಗಿ 125 ಮಿಲಿಯನ್ ಗ್ರಾಹಕರ ನೆಲೆಯನ್ನು ಹೊಂದಿರುವ ಹೀರೋ ಮೋಟೋಕಾರ್ಪ್, ಇದೀಗ ತನ್ನ 49ನೇ ಅಂತರರಾಷ್ಟ್ರೀಯ ಮಾರುಕಟ್ಟೆಗೆ ಪ್ರವೇಶಮಾಡಿದೆ. ಜರ್ಮನಿ ಮತ್ತು ಭಾರತದಲ್ಲಿ ಎರಡು ಅತ್ಯಾಧುನಿಕ ಆರ್ & ಡಿ ಸೌಲಭ್ಯಗಳೊಂದಿಗೆ, ಕಂಪನಿಯು ಜಾಗತಿಕವಾಗಿ ವೈವಿಧ್ಯಮಯ ರೈಡರ್ ಆದ್ಯತೆಗಳನ್ನು ಸಬಲೀಕರಣಗೊಳಿಸುವ ಭವಿಷ್ಯ ಸಿದ್ಧ ಸ್ಮಾರ್ಟ್ ವಾಹನಗಳನ್ನು ತಲುಪಿಸಲು ಬದ್ಧವಾಗಿದೆ ಎಂದು ಹೇಳಿದೆ.
Advertisement

Maruti: ಎಲೆಕ್ಟ್ರಿಕ್ ಅವತಾರದಲ್ಲಿ ಬರುತ್ತಿದೆ ವ್ಯಾಗನ್-ಆರ್‌

ಸುಜುಕಿ ತನ್ನ ಎಲೆಕ್ಟ್ರಿಕ್ ವ್ಯಾಗನ್-ಆರ್‌ ಅನ್ನು ಪರಿಚಯಿಸಲು ಸಜ್ಜಾಗುತ್ತಿದೆ. ಇದನ್ನು ವಿಷನ್ ಇ-ಸ್ಕೈ ಕಾನ್ಸೆಪ್ಟ್ ಆಗಿ ಜಾಗತಿಕ ಮಾರುಕಟ್ಟೆಗಳಿಗೆ ಮುಂದಿನ ಪೀಳಿಗೆಯ ಎಲೆಕ್ಟ್ರಿಕ್ ವ್ಯಾಗನ್‌ಆರ್ ಆಗಿ ಪರಿಚಯಿಸುವುದಾಗಿ ಹೇಳಲಾಗುತ್ತಿದೆ. ಇದನ್ನು ಒಮ್ಮೆ ಚಾರ್ಜ್‌ ಮಾಡಿದರೆ 270 ಕಿ.ಮೀ.ಗಿಂತ ಹೆಚ್ಚಿನ ರೇಂಜ್ ನೀಡುತ್ತದೆ. ವಿಷನ್ ಇ-ಸ್ಕೈ ಅನ್ನು 2025 ಜಪಾನ್ ಮೊಬಿಲಿಟಿ ಶೋನಲ್ಲಿ ಅನಾವರಣಗೊಳಿಸಬೇಕಿತ್ತು, ಆದರೆ ಅದಕ್ಕಿಂತ ಮೊದಲೇ ಬಹಿರಂಗಪಡಿಸಲಾಯಿತು. ಇದು ನಗರ ಎಲೆಕ್ಟ್ರಿಕ್ ವಾಹನಗಳಿಗಾಗಿ ಸುಜುಕಿಯ ಹೊಸ ವಿನ್ಯಾಸ ನಿರ್ದೇಶನವನ್ನು ಪ್ರತಿನಿಧಿಸುತ್ತದೆ.

682 ಕಿ.ಮೀ ರೇಂಜ್.. 5-ಸೀಟರ್, ಸ್ವದೇಶಿ Mahindra SUV..

ಗೋವಾ ಮೂಲದ ಕ್ರಿಕೆಟಿಗ ಗಣೇಶರಾಜ್ ನಾರ್ವೇಕರ್ (Ganeshraj Narvekar), ಹೊಚ್ಚ ಹೊಸ ಮಹೀಂದ್ರಾ ಬಿಇ 6 ಬ್ಯಾಟ್‌ಮ್ಯಾನ್ ಎಡಿಷನ್ (Mahindra BE 6 Batman Edition) ಎಲೆಕ್ಟ್ರಿಕ್ ಎಸ್‌ಯುವಿಯನ್ನು ಖರೀದಿ ಮಾಡಿದ್ದಾರೆ. ಶೋರೂಂಗೆ ತೆರಳಿ ನೂತನ ಕಾರನ್ನು ಖುಷಿಯಿಂದ ವಿತರಣೆ ಪಡೆದಿದ್ದಾರೆ. ಅದಕ್ಕೆ ಸಂಬಂಧಿಸಿದಂತೆ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿಯೂ ಪೋಸ್ಟ್ ಮಾಡಿದ್ದು, ಸ್ನೇಹಿತರು ಹಾಗೂ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

ಕ್ರೆಟಾವನ್ನು ಮಕಾಡೆ ಮಲಗಿಸಲು ಬಿಡುಗಡೆಗೆ ಸಜ್ಜಾಗಿದೆ ನಿಸ್ಸಾನ್ ಕಾರು!

ನಿಸ್ಸಾನ್ ಕಂಪನಿಯು ಕ್ರೆಟಾಗೆ ನೇರ ಪ್ರತಿಸ್ಪರ್ಧಿಯಾಗಿ ಹೊಸ ಟೆಕ್ಟನ್ ಎಂಬ ಎಸ್‌ಯುವಿಯನ್ನು ತರುತ್ತಿದೆ. ಇದು ಹೊಚ್ಚ ಹೊಸ ಮಧ್ಯಮ ಗಾತ್ರದ SUV ಆಗಿದ್ದು, ಹುಂಡೈ ಕ್ರೆಟಾವನ್ನು ದಿಟ್ಟ ವಿನ್ಯಾಸ, ಸುಧಾರಿತ ವೈಶಿಷ್ಟ್ಯಗಳು ಮತ್ತು ಜಾಗತಿಕ ಮಹತ್ವಾಕಾಂಕ್ಷೆಗಳೊಂದಿಗೆ ಸವಾಲು ಹಾಕಲು ಸಿದ್ಧವಾಗಿದೆ. ಜೊತೆಗೆ ಇದು ಅತ್ಯಾಧುನಿಕ ಸುರಕ್ಷತಾ ತಂತ್ರಜ್ಞಾನದೊಂದಿಗೆ ಮಧ್ಯಮ ಗಾತ್ರದ SUV ವಿಭಾಗವನ್ನು ವಿಸ್ಮಯಗೊಳಿಸಲು ಬರುತ್ತಿದೆ. 2026 ರಲ್ಲಿ ಭಾರತದಲ್ಲಿ ಬಿಡುಗಡೆಗೆ ಸಜ್ಜಾಗಿರುವ ಅತ್ಯಂತ ನಿರೀಕ್ಷಿತ ಹೊಸ ಎಸ್‌ಯುವಿಗಳಲ್ಲಿ ಇದು ಒಂದಾಗಿದೆ.
Advertisement

ಎತ್ತಿನಗಾಡಿಯಲ್ಲಿ ಬಂದು ರೂ. 1.5 ಕೋಟಿಯ ಕಾರು ಖರೀದಿಸಿದ ರೈತ!

ರೈತನೊಬ್ಬ ವಿಶ್ವದ ಐಷಾರಾಮಿ ಕಾರುಗಳಲ್ಲಿ ಒಂದಾಗಿರುವ ಟೊಯೊಟಾ ವೆಲ್‌ಫೈರ್ (Toyota Vellfire) ಕಾರಿನ ಡೆಲಿವರಿ ಪಡೆದುಕೊಳ್ಳುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ತುಂಬಾ ವೈರಲ್ ಆಗಿದೆ. ಇಲ್ಲಿ ವಿಶೇಷವೆಂದರೆ ರೈತ ಎತ್ತಿನ ಗಾಡಿಯಲ್ಲಿ ಶೋರೂಂಗೆ ತಲುಪಿರುವುದು, ಇದು ಎಲ್ಲರಿಗೂ ಆಶ್ಚರ್ಯವನ್ನುಂಟು ಮಾಡಿದೆ. ರೈತನಿಗೆ ಡೀಲರ್‌ಶಿಪ್ ನಲ್ಲಿ ಭವ್ಯ ಸ್ವಾಗತ ದೊರೆತಿದ್ದು, ಸಾಂಪ್ರದಾಯಿಕ ಪದ್ಧತಿಗಳೊಂದಿಗೆ ಹೊಸ ಕಾರನ್ನು ಬರಮಾಡಿಕೊಂಡರು. ಅಷ್ಟಕ್ಕೂ ಈ ರೈತ ಯಾರು? ಕಾರನ್ನು ಪಡೆಯಲು ಎತ್ತಿನಗಾಡಿಯಲ್ಲಿ ಏಕೆ ಹೋದರು ಎಂಬುದನ್ನು ಇಲ್ಲಿ ತಿಳಿಯೋಣ.

80+ ಕಿ.ಮೀ ಮೈಲೇಜ್.. ಈ 5 ಬೈಕ್‌ಗಳಿಂದ ಪೆಟ್ರೋಲ್‌ಗೆ..

ಬೆಂಗಳೂರು, ಮುಂಬೈ, ನವದೆಹಲಿ, ಹೈದರಾಬಾದ್ ಹಾಗೂ ಚೆನ್ನೈನಂತಹ ಮಹಾನಗರಗಳಲ್ಲಿ ಕಚೇರಿ ಕೆಲಸಕ್ಕೆ ತೆರಳಲು ಬೈಕ್‌ಗಳು ತೀರಾ ಅನಿವಾರ್ಯವಾಗಿವೆ. ನೀವು ಬಜೆಟ್ ಬೆಲೆಗೆ ಗರಿಷ್ಠ ಮೈಲೇಜ್ ನೀಡಬಲ್ಲ ಮೋಟಾರ್‌ಸೈಕಲ್‌ವೊಂದನ್ನು ಖರೀದಿ ಮಾಡಲು ಆಲೋಚಿಸಿದ್ದೀರಾ.. ಹಾಗಾದರೆ, ಟಿವಿಎಸ್ ರೇಡಿಯನ್, ಯಮಹಾ ಎಫ್‌ಝಡ್‌ಎಸ್ ಎಫ್‌ಐ ವಿ4, ಹೀರೋ ಎಕ್ಸ್‌ಟ್ರೀಮ್ 125ಆರ್, ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ ಹಾಗೂ ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್‌ಗಳು ಅತ್ಯುತ್ತಮವಾದ ಆಯ್ಕೆಯಾಗಿವೆ. ನಾವಿಲ್ಲಿ ಈ ಬೈಕ್‌ಗಳ ಬೆಲೆ ಹಾಗೂ ವಿಶೇಷತೆಗಳ ಕುರಿತಂತೆ ಸಂಕ್ಷಿಪ್ತವಾಗಿ ತಿಳಿಯೋಣ.

Best mileage cars: 7 ಲಕ್ಷಕ್ಕಿಂತ ಕಡಿಮೆ ಬೆಲೆ... 24 ಕಿ.ಮೀ ಓಡಿಸಿ

ಪ್ರತಿ ಲೀಟರ್‌ಗೆ 20 ಕಿ.ಮೀ ಮೈಲೇಜ್ ಹೊಂದಿರುವ ಏಳು ಲಕ್ಷಕ್ಕಿಂತ ಕಡಿಮೆ ಬೆಲೆಯ ಅಗ್ರ ಐದು ಕಾರುಗಳನ್ನು ನಾವು ಇಲ್ಲಿ ಪಟ್ಟಿ ಮಾಡಿದ್ದೇವೆ. ಇದರಿಂದ ಕಾಲಕಾಲಕ್ಕೆ ನಿಮ್ಮ ಕಾರಿನಲ್ಲಿ ಇಂಧನವನ್ನು ಮರುಭರ್ತಿ ಮಾಡುವ ಒತ್ತಡವಿಲ್ಲದೆ ಆರಾಮದಾಯಕ ಚಾಲನಾ ಅನುಭವ ಪಡೆಯಬಹುದು. ಟಾಟಾ ಹಾಗೂ ಮಾರುತಿ ಸುಜುಕಿ ಕಂಪನಿಗಳ ಆಯ್ದ ಕಾರುಗಳು ಲೀಟರ್‌ಗೆ 20.52 ಕಿ.ಮೀ ನಿಂದ 24.80 ಕಿ.ಮೀ ಮೈಲೇಜ್ ಅನ್ನು ನೀಡುತ್ತವೆ. ಬನ್ನಿ ಹಾಗಾದ್ರೆ ಭಾರತದಲ್ಲಿ ಕಡಿಮೆ ಬೆಲೆಗೆ ಸಿಗುವ ಬೆಸ್ಟ್ ಮೈಲೇಜ್ ಕಾರುಗಳನ್ನು ಇಲ್ಲಿ ನೋಡೋಣ.

34 ಕಿ.ಮೀ ಮೈಲೇಜ್.. 3.70 ಲಕ್ಷ, ಈ ಜನಪ್ರಿಯ ಮಾರುತಿ ಕಾರನ್ನು..

ಮಾರುತಿ ಸುಜುಕಿ ಆಲ್ಟೊ ಕೆ10 (Maruti Suzuki Alto K10), ಮಧ್ಯಮ ವರ್ಗದ ಗ್ರಾಹಕರ ನೆಚ್ಚಿನ ಕಾರಾಗಿ ಹೊರಹೊಮ್ಮಿದೆ. ನೋಡುಗರ ಕಣ್ಣು ಕುಕ್ಕುವಂತಹ ಸರಳವಾದ ವಿನ್ಯಾಸವನ್ನು ಹೊಂದಿದೆ. ಅದಕ್ಕೆ ತಕ್ಕಂತೆ ಹತ್ತಾರು ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಆದರೂ ಈ ಕಾರಿನ ಮಾರಾಟ ಸಂಖ್ಯೆ ದಿನದಿಂದ ದಿನಕ್ಕೆ ಕುಸಿತವಾಗುತ್ತಿದ್ದು, ಅದು ಈ ಸೆಪ್ಟೆಂಬರ್‌ ತಿಂಗಳಲ್ಲೂ ಮುಂದುವರಿದಿದೆ. ಒಟ್ಟು 5,434 ಯುನಿಟ್‌ಗಳನ್ನು ಗ್ರಾಹಕರಿಗೆ ವಿತರಣೆ ಮಾಡಲಾಗಿದೆ. 2024ರ ಇದೇ ಅವಧಿಯಲ್ಲಿ 8,655 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿಸಂಖ್ಯೆಯನ್ನು ವಿಶ್ಲೇಷಣೆ ಮಾಡಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ -37% ಇಳಿಮುಖವಾಗಿದೆ.
Advertisement

Mahindra: 7.99 ಲಕ್ಷ, 2025ರ ಹೊಸ ಮಹೀಂದ್ರಾ ಬೊಲೆರೊ ಖರೀದಿಸಬೇಕೇ..

ಇತ್ತೀಚೆಗೆ 2025ರ ನೂತನ ಮಹೀಂದ್ರಾ ಬೊಲೆರೊ ಫೇಸ್‌ಲಿಫ್ಟ್ (Mahindra Bolero Facelift) ಎಸ್‌ಯುವಿಯನ್ನು ಬಿಡುಗಡೆಗೊಳಿಸಲಾಗಿತ್ತು. ಇದು ವಿನ್ಯಾಸ ಹಾಗೂ ವೈಶಿಷ್ಟ್ಯಗಳಲ್ಲಿ ಸಾಕಷ್ಟು ಬದಲಾವಣೆಗಳನ್ನು ಪಡೆದುಕೊಂಡಿದೆ. ಕನಿಷ್ಠ ರೂ.7.99 ಲಕ್ಷ ಮತ್ತು ಗರಿಷ್ಠ ರೂ.9.69 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ನೀವು ಹೊಸ ಕಾರೊಂದನ್ನು ಕೊಂಡುಕೊಳ್ಳಲು ಆಲೋಚಿಸಿದ್ದೀರಾ.. ಹಾಗಾದರೆ, 'ಬೊಲೆರೊ' ಅತ್ಯುತ್ತಮ ಆಯ್ಕೆಯಾಗಲಿದೆ. ನಾವಿಲ್ಲಿ ಇದೇ ಎಸ್‌ಯುವಿಯ ಆನ್-ರೋಡ್ ದರ (On-Road Price) ಹಾಗೂ ಇಎಂಐ (EMI) ಕುರಿತಂತೆ ಪ್ರಮುಖ ವಿವರಗಳನ್ನು ತಿಳಿಸಿಕೊಟ್ಟಿದ್ದೇವೆ.

Maruti: 5-ಸ್ಟಾರ್ ಸೇಫ್ಟಿಯೊಂದಿಗೆ ಮಿಂಚುತ್ತಿದೆ ಹೊಸ ಮಾರುತಿ ಕಾರು!

ಹೊಸ ಮಾರುತಿ ವಿಕ್ಟೋರಿಸ್ ನಿಜಕ್ಕೂ ಭಾರತ್ ನ್ಯೂ ಕಾರ್ ಅಸೆಸ್ಮೆಂಟ್ ಪ್ರೋಗ್ರಾಂ (BNCAP) ನಿಂದ 5-ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಗಳಿಸಿದೆ. ಈ ಮೌಲ್ಯಮಾಪನಗಳಲ್ಲಿ ವಯಸ್ಕ ಮತ್ತು ಮಕ್ಕಳ ಪ್ರಯಾಣಿಕರಿಬ್ಬರಿಗೂ ಪೂರ್ಣ 5-ಸ್ಟಾರ್ ಸುರಕ್ಷತಾ ರೇಟಿಂಗ್‌ಗಳನ್ನು ಸಾಧಿಸಿದ ಡಿಜೈರ್ ನಂತರ ಇದು ಎರಡನೇ ಮಾರುತಿ ಕಾರಾಗಿದೆ. ಹಾಗೆಯೆ ಭಾರತೀಯ ಮಾರುಕಟ್ಟೆಯಲ್ಲಿ ಅತ್ಯಂತ ಸುರಕ್ಷಿತ ಮಧ್ಯಮ ಗಾತ್ರದ SUV ಗಳಲ್ಲಿ ಒಂದಾಗಿಸಿದೆ. ಇದು ಇತ್ತೀಚಿನ ಮಾಡಲ್‌ಗಳಲ್ಲಿ ವಾಹನ ಸುರಕ್ಷತೆಗೆ ಮಾರುತಿ ಸುಜುಕಿಯ ಬಲವಾದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.

7-ಸೀಟರ್ Mpv ಹುಡುಕುತ್ತಿದ್ದೀರಾ.. ಈ 5 ಕಾರುಗಳು ಬೆಸ್ಟ್..

ನೂತನ ಕಾರನ್ನು ಖರೀದಿ ಮಾಡಬೇಕೆಂದು ಸಾವಿರಾರು ಜನರ ಕನಸಾಗಿರುತ್ತದೆ. ವಿಶೇಷವಾಗಿ ಬಹುತೇಕರು ತಮ್ಮ ಕುಟುಂಬಕ್ಕಾಗಿ ಹೆಚ್ಚು ಆಸನಗಳ ಹೊಚ್ಚ ಹೊಸ ಎಂವಿಪಿ (ಮಲ್ಟಿ-ಪರ್ಪಸ್ ವೆಹಿಕಲ್) ಖರೀದಿಸಲು ಹುಡುಕಾಟ ನಡೆಸುತ್ತಿರುತ್ತಾರೆ. ಅಂತಹವರಿಗೆ ಕಿಯಾ ಕ್ಯಾರೆನ್ಸ್ ಕ್ಲಾವಿಸ್, ರೆನಾಲ್ಟ್ ಟ್ರೈಬರ್, ಮಾರುತಿ ಸುಜುಕಿ ಎರ್ಟಿಗಾ, ಟೊಯೊಟಾ ರೂಮಿಯನ್ ಹಾಗೂ ಮಾರುತಿ ಇಕೋ ಕಾರುಗಳು ಅತ್ಯುತ್ತಮವಾದ ಆಯ್ಕೆಯಾಗಲಿವೆ. ನಾವಿಲ್ಲಿ ಈ ಎಂಪಿವಿಗಳ ಬೆಲೆ ಹಾಗೂ ವಿಶೇಷತೆಗಳ ಕುರಿತಂತೆ ಒಂದಷ್ಟು ವಿವರಗಳನ್ನು ತಿಳಿಸಿಕೊಟ್ಟಿದ್ದೇವೆ.

ತುಂಬಿವೆ ಶೋರೂಂ.. 29 Km ಮೈಲೇಜ್, ಹೊಸ ಮಾರುತಿ ಕಾರಿಗೆ..

ಇತ್ತೀಚೆಗೆ ನೂತನ ಮಾರುತಿ ಸುಜುಕಿ ವಿಕ್ಟೋರಿಸ್ (Maruti Suzuki Victoris) ಎಸ್‌ಯುವಿಯನ್ನು ಅದ್ದೂರಿಯಾಗಿ ಬಿಡುಗಡೆಗೊಳಿಲಾಗಿತ್ತು. ಇದು ತುಂಬಾ ಅಚ್ಚುಕಟ್ಟಾದ ವಿನ್ಯಾಸ ಹೊಂದಿದ್ದು, ಹತ್ತಾರು ವೈಶಿಷ್ಟ್ಯಗಳಿಗೂ ಸಾಕ್ಷಿಯಾಗಿದೆ. ಕೈಗೆಟುಕುವ ಬೆಲೆಯಲ್ಲಿ ಸಿಗುತ್ತದೆ. ಗ್ರಾಹಕರು ಕೂಡ ನಾ ಮುಂದು - ತಾ ಮುಂದು ಎಂಬಂತೆ ಖರೀದಿ ಮಾಡುತ್ತಿದ್ದಾರೆ. ಈ ಕಾರು ಮಾರಾಟಕ್ಕೆ ಬಂದು 1 ತಿಂಗಳು ಕಳೆಯುವ ಮೊದಲೇ ಭಾರೀ ಸಂಖ್ಯೆಯಲ್ಲಿ ಮಾರಾಟಗೊಂಡಿದೆ. ಇದೇ ಸೆಪ್ಟೆಂಬರ್‌ನಲ್ಲಿ ಒಟ್ಟು 4,261 ಯುನಿಟ್‌ಗಳನ್ನು ಖರೀದಿದಾರರಿಗೆ ವಿತರಣೆ ಮಾಡಲಾಗಿದೆ.
Advertisement

30 ಕಿ.ಮೀ ಮೈಲೇಜ್.. 5-ಸೀಟರ್, ಅಗ್ಗದ ಟೊಯೊಟಾ ಕಾರಿಗೆ ಫುಲ್..

ಟೊಯೊಟಾ ಗ್ಲಾನ್ಜಾ (Toyota Glanza) ವಿಶ್ವಾಸಾರ್ಹ ಹ್ಯಾಚ್‌ಬ್ಯಾಕ್‌ ಎಂದೇ ಹೆಸರುವಾಸಿಯಾಗಿದೆ. ಇದು ಮಾರುತಿ ಸುಜುಕಿ ಬಲೆನೊದ ರೀ-ಬ್ಯಾಡ್ಜ್ ಮಾಡೆಲ್ ಆಗಿದೆ. ನೋಡುಗರ ಕಣ್ಣು ಕುಕ್ಕುವಂತಹ ವಿನ್ಯಾಸವನ್ನು ಹೊಂದಿದ್ದು, ಹಲವು ಅತ್ಯಾಧುನಿಕವಾದ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿ ಮಾಡುತ್ತಿದ್ದಾರೆ. ಈ ಸೆಪ್ಟೆಂಬರ್ ತಿಂಗಳಲ್ಲೂ'ಗ್ಲಾನ್ಜಾ' ಕಾರು ಭಾರೀ ಸಂಖ್ಯೆಯಲ್ಲಿ ಮಾರಾಟಗೊಂಡಿದೆ. ಒಟ್ಟು 3,299 ಯುನಿಟ್‌ಗಳನ್ನು ವಿತರಿಸಲಾಗಿದೆ. 2024ರ ಇದೇ ಅವಧಿಯಲ್ಲಿ 3,246 ಮಾರಲಾಗಿತ್ತು. ಈ ಅಂಕಿ ಸಂಖ್ಯೆಯನ್ನು ವಿಶ್ಲೇಷಣೆ ಮಾಡಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ 2% ಪ್ರಗತಿಯಾಗಿದೆ.

ಬಡವರ ಬಂಡಿ.. ರೂ.3.50 ಲಕ್ಷ, 33 Km ಮೈಲೇಜ್.. 5-ಸೀಟರ್..

ಮಾರುತಿ ಸುಜುಕಿ ಎಸ್-ಪ್ರೆಸ್ಸೊ (Maruti Suzuki S-Presso) ಜನಪ್ರಿಯ ಹ್ಯಾಚ್‌ಬ್ಯಾಕ್ ಎಂದೇ ಮನೆ ಮಾತಾಗಿದೆ. ತುಂಬಾ ಅಚ್ಚುಕಟ್ಟಾದ ವಿನ್ಯಾಸ ಹೊಂದಿದ್ದು, ಹಲವು ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಎಲ್ಲ ವರ್ಗದ ಗ್ರಾಹಕರ ನೆಚ್ಚಿನ ಕಾರಾಗಿ ಹೊರಹೊಮ್ಮಿದೆ. ನೀವು ಹೊಚ್ಚ ಹೊಸ ಹ್ಯಾಚ್‌ಬ್ಯಾಕ್‌ನ್ನು ಕೊಂಡುಕೊಳ್ಳಲು ಆಲೋಚಿಸಿದ್ದೀರಾ.. ಹಾಗಾದರೆ 'ಎಸ್-ಪ್ರೆಸ್ಸೊ' ಅತ್ಯುತ್ತಮವಾದ ಆಯ್ಕೆಯಾಗಲಿದೆ. ನಾವಿಲ್ಲಿ ಈ ಕಾರಿನ ಬೆಲೆ ಹಾಗೂ ವಿಶೇಷತೆಗಳ ಕುರಿತ ಪ್ರಮುಖಾಂಶಗಳು ಏನೆಂಬುದನ್ನು ತಿಳಿಸಿಕೊಟ್ಟಿದ್ದೇವೆ.

2026 ರಲ್ಲಿ ಬಿಡುಗಡೆಗೆ ಸಜ್ಜಾಗಿವೆ 7 ಬೊಂಬಾಟ್ ಎಸ್‌ಯುವಿಗಳು

2026 ರಲ್ಲಿ ಭಾರತೀಯ SUV ಮಾರುಕಟ್ಟೆಯು ವಿಶೇಷವಾಗಿ ಟಾಟಾ ಮತ್ತು ಮಹೀಂದ್ರಾದಿಂದ ಅತ್ಯಾಕರ್ಷಕ ಬಿಡುಗಡೆಗಳ ಅಲೆಗೆ ಸಜ್ಜಾಗಿದೆ. ಎಲೆಕ್ಟ್ರಿಕ್, ಹೈಬ್ರಿಡ್ ಮತ್ತು ಇಂಧನ ಚಾಲಿತ ಕಾರುಗಳು ಶೀಘ್ರದಲ್ಲೆ ಬರಲಿವೆ. ಈ ಬಿಡುಗಡೆಗಳು SUV ವಿನ್ಯಾಸಗಳು ಮತ್ತು ತಂತ್ರಜ್ಞಾನದೊಂದಿಗೆ ಹೊಸತನವನ್ನು ಮುಂದುವರಿಸುವುದರ ಜೊತೆಗೆ ವಿದ್ಯುದೀಕರಣದ ಕಡೆಗೆ ರೂಪಾಂತರವನ್ನು ಪ್ರತಿಬಿಂಬಿಸುತ್ತವೆ. 2026 ರಲ್ಲಿ ಬಿಡುಗಡೆಯಾಗಲಿರುವ ಪ್ರಮುಖ ಏಳು SUV ಗಳ ಅವಲೋಕನವನ್ನು ಕೆಳಗೆ ನೀಡಲಾಗಿದೆ. ಅವುಗಳ ನಿರೀಕ್ಷಿತ ಬೆಲೆ ಮತ್ತು ವೈಶಿಷ್ಟ್ಯಗಳ ಕುರಿತು ಪ್ರಮುಖ ವಿವರಗಳನ್ನು ತಿಳಿಯೋಣ.

ಕಾರು ಬಂದು 10 ವರ್ಷ ಕಳೆದರು ಅದೇ ಡಿಮ್ಯಾಂಡ್

ಇತ್ತೀಚೆಗಷ್ಟೆ ರೆನಾಲ್ಟ್ ಕ್ವಿಡ್ ಭಾರತದಲ್ಲಿ ಬಿಡುಗಡೆಯಾಗಿ 10 ವರ್ಷಗಳನ್ನು ಪೂರ್ಣಗೊಳಿಸಿದೆ. ಇದನ್ನು ಆಚರಿಸಲು ಕಂಪನಿಯು ಕ್ವಿಡ್‌ನ 10ನೇ ವಾರ್ಷಿಕೋತ್ಸವ ಆವೃತ್ತಿ (10th Anniversary Edition) ಯನ್ನು ಬಿಡುಗಡೆ ಮಾಡಿದೆ. ಈಗ ಈ ವಿಶೇಷ ಆವೃತ್ತಿಯೊಂದಿಗೆ ಕಾರು ತಯಾರಕರು ಹೆಚ್ಚುವರಿ ವಿಶೇಷತೆ ಮತ್ತು ಪ್ರೀಮಿಯಂ ಸ್ಪರ್ಶಗಳೊಂದಿಗೆ ಹತ್ತು ವರ್ಷಗಳ ಯಶಸ್ಸನ್ನು ಗುರುತಿಸುತ್ತಿದ್ದಾರೆ. ಈ ಜನಪ್ರಿಯ ಹ್ಯಾಚ್‌ಬ್ಯಾಕ್‌ನ ದಶಕವನ್ನು ಗುರುತಿಸುವ ವಿಶಿಷ್ಟ, ಸೊಗಸಾದ ಮತ್ತು ವಿಶೇಷ ಆಚರಣೆಯ ಪ್ರಮುಖಾಂಶಗಳ ಬಗ್ಗೆ ಇಲ್ಲಿ ನೋಡೋಣ.
Advertisement

ಎಸ್‌ಯುವಿ ಎಲೆಕ್ಟ್ರಿಕ್ ಸ್ಕೂಟರ್: ಖರ್ಚಿಲ್ಲದೆ 163 ಕಿ.ಮೀ ಓಡಬಲ್ಲದು

ರಿವರ್ ಇಂಡೀ ಜೆನ್ 3 ಇವಿ ಸಿಟಿ ರೈಡ್‌ಗಾಗಿ ಸುಸಜ್ಜಿತ, ವೈಶಿಷ್ಟ್ಯಗಳಿಂದ ತುಂಬಿದ ಎಲೆಕ್ಟ್ರಿಕ್ ಸ್ಕೂಟರ್ ಆಗಿ ಸ್ಥಾನ ಪಡೆದಿದ್ದು, ಪ್ರಾಯೋಗಿಕ ಶ್ರೇಣಿ, ಉತ್ತಮ ಕಾರ್ಯಕ್ಷಮತೆ ಮತ್ತು ಸುಧಾರಿತ ತಂತ್ರಜ್ಞಾನದೊಂದಿಗೆ, ಸ್ಪರ್ಧಾತ್ಮಕ ಬೆಲೆ ರೂ.1.46 ಲಕ್ಷದಲ್ಲಿ ಖರೀದಿಗೆ ಲಭ್ಯವಿದೆ. ಉಪಯುಕ್ತತೆ ಮತ್ತು ತಾಂತ್ರಿಕ ಏಕೀಕರಣವನ್ನು ಸುಧಾರಿಸುವ ಗುರಿಯನ್ನು ಹೊಂದಿರುವ ಹಲವಾರು ನವೀಕರಣಗಳನ್ನು ಈ ಸ್ಕೂಟರ್ ಪಡೆದುಕೊಂಡಿದೆ. ಇದನ್ನು ಬ್ರ್ಯಾಂಡ್‌ನ ವೆಬ್‌ಸೈಟ್‌ನಲ್ಲಿ ಅಥವಾ ಸ್ಥಳೀಯ ಡೀಲರ್‌ಶಿಪ್‌ನಲ್ಲಿ ಬುಕ್‌ ಮಾಡಿಕೊಳ್ಳಬಹುದು.