Duster: 24 ಕಿ.ಮೀ ಮೈಲೇಜ್.. ಲಕ್ಷುರಿ ಫೀಚರ್, ಬೆಂಗಳೂರಿನಲ್ಲಿ..

ರೆನಾಲ್ಟ್ ಇಂಡಿಯಾ (Renault India), ಅತ್ಯಂತ ಜನಪ್ರಿಯ ಎಸ್‌ಯುವಿಯಾದ 'ಡಸ್ಟರ್'ನ್ನು ಹೊಸ ಅವತಾರದಲ್ಲಿ ಮಾರಾಟಕ್ಕೆ ತರಲು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. 'ಕೈಗರ್ ಫೇಸ್‌ಲಿಫ್ಟ್' ಬಿಡುಗಡೆ ಸಮಾರಂಭದಲ್ಲೂ ಶೀಘ್ರದಲ್ಲೇ ನೂತನ 'ರೆನಾಲ್ಟ್ ಡಸ್ಟರ್'ನ್ನು ಪರಿಚಯಿಸಲಾಗುತ್ತದೆ ಎಂದು ಕಂಪನಿಯೇ ಅಧಿಕೃತವಾಗಿ ಘೋಷಣೆ ಮಾಡಿತ್ತು. ಇದೇ ಕಾರು ದೇಶೀಯ ಮಾರುಕಟ್ಟೆಯಲ್ಲಿ 2012 ರಿಂದ 2020 ರವರೆಗೆ ಭರ್ಜರಿಯಾಗಿ ಮಾರಾಟಗೊಂಡಿತ್ತು.

ಟಾಟಾ ಏಸ್ ಗೋಲ್ಡ್ ಪ್ಲಸ್ ಡೀಸೆಲ್ ಮಿನಿ-ಟ್ರಕ್ ವಿಶೇಷತೆಗಳು

ದೇಶದ ಪ್ರಮುಖ ವಾಣಿಜ್ಯ ವಾಹನ ತಯಾರಕ ಕಂಪನಿಯಾದ ಟಾಟಾ ಮೋಟಾರ್ಸ್, ಮೊನ್ನೆಯಷ್ಟೆ ತನ್ನ ಅತ್ಯಂತ ಜನಪ್ರಿಯ ಏಸ್ ಸರಣಿಯ ಕೈಗೆಟಕುವ ಬೆಲೆಯ ಡೀಸೆಲ್ ಏಸ್ ಗೋಲ್ಡ್+ ವಾಹನವನ್ನು ಬಿಡುಗಡೆ ಮಾಡಿದೆ. ಕೇವಲ ರೂ. 5.52 ಲಕ್ಷ (ಎಕ್ಸ್-ಶೋರೂಂ) ಬೆಲೆಯಲ್ಲಿ ಖರೀದಿಗೆ ಲಭ್ಯವಿದ್ದು, ಉನ್ನತ ಕಾರ್ಯಕ್ಷಮತೆಯನ್ನು ನೀಡಲು ವಿನ್ಯಾಸಗೊಳಿಸಲಾಗಿದೆ. ಇದು ಸುಧಾರಿತ ಲೀನ್ ಎನ್ಓಎಕ್ಸ್ ಟ್ರ್ಯಾಪ್ (LNT) ತಂತ್ರಜ್ಞಾನ ಹೊಂದಿರುವ ಏಸ್ ಗೋಲ್ಡ್+ ಡೀಸೆಲ್ ಎಕ್ಸಾಸ್ಟ್ ಫ್ಲೂಯಿಡ್ (ಡಿಇಎಫ್) ಅಗತ್ಯವನ್ನು ತೆಗೆದುಹಾಕುತ್ತದೆ ಎಂದು ಟಾಟಾ ತಿಳಿಸಿದೆ. ಈ ವಾಹನದ ಇನ್ನೂ ಹಲವು ವಿಶೆಷತೆಗಳು ಇಲ್ಲಿವೆ.

TVS: ಟಿವಿಎಸ್ ಎಕ್ಸ್ಎಲ್ 100ನ ಹೊಸ ವೇರಿಯೆಂಟ್ ಮಾರಾಟಕ್ಕೆ..

ಟಿವಿಎಸ್ ಎಕ್ಸ್ಎಲ್ 100 (TVS XL 100) ಜಗಮೆಚ್ಚಿದ ಮೊಪೆಡ್ ಆಗಿದೆ. ನಗರ ಹಾಗೂ ಗ್ರಾಮೀಣ ಭಾಗದಲ್ಲಿ ದೊಡ್ಡ ಮಟ್ಟದ ಜನಪ್ರಿಯತೆ ಗಳಿಸದೆ. ಹೊಸ ಕಾಲಘಟ್ಟಕ್ಕೆ ತಕ್ಕಂತೆ ಯುವ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಈ ಮೊಪೆಡ್‌ನ್ನು ಮೇಲ್ದರ್ಜೆರಿಸಲಾಗಿದೆ. ಇತ್ತೀಚೆಗೆ ನೂತನ ರೂಪಾಂತರವಾದ (ವೇರಿಯೆಂಟ್) 'ಹೆವಿ ಡ್ಯೂಟಿ ಅಲಾಯ್'ನ್ನು ಬಿಡುಗಡೆಗೊಳಿಸಲಾಗಿದೆ. ನಾವಿಲ್ಲಿ ನೂತನ ಮಾಡೆಲ್‌ನ ಬೆಲೆ, ಕಾರ್ಯಕ್ಷಮತೆ ಹಾಗೂ ವಿಶೇಷತೆಗಳ ಕುರಿತಂತೆ ಪ್ರಮುಖಾಂಶಗಳು ಏನೆಂಬುದನ್ನು ತಿಳಿಸಿಕೊಟ್ಟಿದ್ದೇವೆ.

ಕೇವಲ 20 ಸಾವಿರ ಬೆಲೆ: ಹೊಸ ಡೋಪ್ ಇ - ಸೈಕಲ್ ವಿಶೇಷತೆಗಳು

ಪ್ರಮುಖ ಎಲೆಕ್ಟ್ರಿಕ್ ಸೈಕಲ್ ಬ್ರ್ಯಾಂಡ್ ಆಗಿರುವ ಇಮೊಟೊರಾಡ್, ನವೀನ ಸಸ್ಪೆನ್ಷನ್ - ಸಜ್ಜಿತ 'ಡೋಪ್ ಇ - ಸೈಕಲ್' ಅನ್ನು ಇತ್ತೀಚೆಗೆ ಬಿಡುಗಡೆ ಮಾಡಿದೆ. ಈ ಸೈಕಲ್ ಅನ್ನು ರೂ. 19,999 ಬೆಲೆಯಲ್ಲಿ ಈ ಸೈಕಲ್ ಖರೀದಿಗೆ ಲಭ್ಯವಿದೆ. ಇದು ಭಾರತದ ಮೊದಲ 24T ಎಲೆಕ್ಟ್ರಿಕ್ ಸೈಕಲ್ ಆಗಿದ್ದು, ವಿಶೇಷವಾಗಿ ಯುವ ಸವಾರರಿಗಾಗಿ ವಿನ್ಯಾಸಗೊಳಿಸಲಾಗಿದ್ದು, ಸುಧಾರಿತ ಸಸ್ಪೆನ್ಷನ್ ತಂತ್ರಜ್ಞಾನವನ್ನು ಹೊಂದಿದೆ. ಗುಣಮಟ್ಟ ಅಥವಾ ಸುರಕ್ಷತೆಯ ಮೇಲೆ ರಾಜಿ ಮಾಡಿಕೊಳ್ಳದ ಬೆಲೆಯಲ್ಲಿ, ಮಕ್ಕಳ ಬೆಳವಣಿಗೆಗೆ ಸಹಕರಿಸುವ ಸೈಕಲ್ ಆಗಿದೆ ಎಂದು ಕಂಪನಿ ಭರವಸೆ ನೀಡಿದೆ.
Advertisement

ಭಾರತದಲ್ಲಿ ಮತ್ತೊಮ್ಮೆ ತನ್ನ ಗತ್ತು ತೋರಿಸಿದ ಬಜಾಜ್ ಚೇತಕ್

ಬಜಾಜ್ ಚೇತಕ್ ಭಾರತದಲ್ಲಿ 5 ಲಕ್ಷ (500,000) ಮಾರಾಟದ ಮೈಲಿಗಲ್ಲನ್ನು ದಾಟಿದೆ, ಜನವರಿ 2020 ರಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಆಗಿ ಬಿಡುಗಡೆಯಾದಾಗಿನಿಂದ ಸೆಪ್ಟೆಂಬರ್ 2025 ರ ಹೊತ್ತಿಗೆ ಒಟ್ಟು ಮಾರಾಟವು 5,10,000 ಯೂನಿಟ್‌ ವಾಹನಗಳನ್ನು ತಲುಪಿದೆ. ಈ ಸಾಧನೆಯು ವೇಗವಾಗಿ ಬೆಳೆಯುತ್ತಿರುವ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಬಜಾಜ್‌ನ ಬಲವಾದ ಕಾರ್ಯಕ್ಷಮತೆಯನ್ನು ಎತ್ತಿ ತೋರಿಸುತ್ತದೆ. ಚೇತಕ್‌ನ ಯಶಸ್ಸು ಬಹು ವೇರಿಯೆಂಟ್‌ಗಳು, ಸ್ಪರ್ಧಾತ್ಮಕ ಬೆಲೆ ಮತ್ತು ಭಾರತದಲ್ಲಿ ಬಜಾಜ್‌ನ ವ್ಯಾಪಕ ಜನಪ್ರಿಯತೆಯಿಂದಾಗಿದೆ.

ಬುಲೆಟ್ ರೈಲು 2027ರ ವೇಳೆಗೆ 50 ಕಿ.ಮೀ ವ್ಯಾಪ್ತಿಯಲ್ಲಿ ಕಾರ್ಯಾಚರಣೆ!

ಭಾರತದ ಮೊದಲ ಹೈಸ್ಪೀಡ್ ರೈಲು ಯೋಜನೆಯಾಗಿರುವ ಮುಂಬೈ-ಅಹಮದಾಬಾದ್ ಬುಲೆಟ್ ರೈಲು - ಸೆಪ್ಟೆಂಬರ್ 2025 ರಲ್ಲಿ 4.88 ಕಿ.ಮೀ ಸುರಂಗ ಮಾರ್ಗವನ್ನು ಯಶಸ್ವಿಯಾಗಿ ಪೂರ್ಣಗೊಳಿಸುವುದರೊಂದಿಗೆ ಪ್ರಮುಖ ನಿರ್ಮಾಣ ಮೈಲಿಗಲ್ಲನ್ನು ಸಾಧಿಸಿದೆ. ಇದು ಕಾರಿಡಾರ್‌ನ ಮುಂದಿನ ಹಂತಕ್ಕೆ ದಾರಿ ಮಾಡಿಕೊಡುತ್ತದೆ. ಈ ಪ್ರಗತಿಯ ಆಧಾರದ ಮೇಲೆ ದೇಶದ ಮೊದಲ ಬುಲೆಟ್ ರೈಲು 2027 ರ ವೇಳೆಗೆ ಆರಂಭಿಕ 50 ಕಿ.ಮೀ. ವ್ಯಾಪ್ತಿಯಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಲಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಶನಿವಾರ ಘೋಷಿಸಿದರು.

ಕಳಪೆ ಗುಣಮಟ್ಟದ ಕಾರುಗಳ ತಂಟೆಗೆ ಹೋಗಬೇಡಿ

2025 ರಲ್ಲಿ ಭಾರತದ ಪ್ರಮುಖ ಕಾರು ಬ್ರ್ಯಾಂಡ್‌ಗಳು ತಮ್ಮ ಕಾರುಗಳನ್ನು ಸುರಕ್ಷತಾ ಪರೀಕ್ಷೆಗೆ ಒಳಪಡಿಸಿ ತಮ್ಮ ಗುಣಮಟ್ಟವನ್ನು ಸಾಭೀತುಪಡಿಸಿಕೊಂಡಿವೆ. ಇತ್ತೀಚಿನ ಭಾರತ್ NCAP ಮತ್ತು ಗ್ಲೋಬಲ್ NCAP ಕ್ರ್ಯಾಶ್ ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶ ಗಳಿಸಿರುವ ಪ್ರಮುಖ ಕಾರುಗಳು ಈಗ ಫುಲ್ ಡಿಮ್ಯಾಂಡ್ ಪಡೆದುಕೊಂಡಿವೆ. ಮಾರುತಿ ಸುಜುಕಿ ವಿಕ್ಟೋರಿಸ್, ಡಿಜೈರ್ ಮತ್ತು ಇತರ ಹೊಸ ಕಾರುಗಳು ಸುಧಾರಿತ 5-ಸ್ಟಾರ್ ರೇಟಿಂಗ್‌ಗಳನ್ನು ಪಡೆದುಕೊಂಡಿವೆ. ಈ ಸೇಫ್ಟಿ ರೇಟಿಂಗ್‌ನಲ್ಲಿ 3-ಸ್ಟಾರ್‌ಗಿಂತ ಕೆಳಗಿರುವ ಕಾರುಗಳ ತಂಟೆಗೆ ಹೋಗಬೇಡಿ. ಹಾಗಾದ್ರೆ 5 - ಸ್ಟಾರ್ ರೇಟಿಂಗ್ ಕಾರುಗಳು ಯಾವುವು?

ಟಾಟಾ ಏಸ್ ಗೋಲ್ಡ್ ಪ್ಲಸ್ ಡೀಸೆಲ್ ಮಿನಿ-ಟ್ರಕ್ ಬಿಡುಗಡೆ

ಭಾರತದ ಅತಿದೊಡ್ಡ ವಾಣಿಜ್ಯ ವಾಹನ ತಯಾರಕರಾದ ಟಾಟಾ ಮೋಟಾರ್ಸ್, ತನ್ನ ಐಕಾನಿಕ್ ಏಸ್ ಸೀರೀಸ್‌ನಲ್ಲಿ ಅತ್ಯಂತ ಕೈಗೆಟುಕುವ ಡೀಸೆಲ್ ವೇರಿಯೆಂಟ್ ಆಗಿರುವ ಏಸ್ ಗೋಲ್ಡ್+ ಅನ್ನು ಬಿಡುಗಡೆ ಮಾಡಿದೆ. ಕೇವಲ ರೂ.5.52 ಲಕ್ಷ (ಎಕ್ಸ್-ಶೋರೂಂ) ಬೆಲೆಯಲ್ಲಿ, ಏಸ್ ಗೋಲ್ಡ್+ ಅಸಾಧಾರಣ ಕಾರ್ಯಕ್ಷಮತೆಯನ್ನು ನೀಡಲು ವಿನ್ಯಾಸಗೊಳಿಸಲಾಗಿದೆ. ಇದರ ವರ್ಗದಲ್ಲಿ ಕಡಿಮೆ ಒಟ್ಟು ಮಾಲೀಕತ್ವದ ವೆಚ್ಚವನ್ನು (TCO) ಖಚಿತಪಡಿಸುತ್ತದೆ, ಇದು ಇಂದಿನ ಮೌಲ್ಯ ಪ್ರಜ್ಞೆಯ ಉದ್ಯಮಿಗಳಿಗೆ ಸೂಕ್ತ ಆಯ್ಕೆಯಾಗಿದೆ ಎಂದು ಕಂಪನಿ ಭರವಸೆ ನೀಡಿದೆ.
Advertisement

ಸಿನಿಮಾ ಹಿಟ್ ಆಯ್ತು.. 100 ಕೋಟಿ ಕಲೆಕ್ಷನ್, 4 ಕೋಟಿ ಮೌಲ್ಯದ..

ಸನ್ನಿ ಡಿಯೋಲ್ (Sunny Deol) ಜನಪ್ರಿಯ ಬಾಲಿವುಡ್ ನಟರಾಗಿದ್ದು, 67ನೇ ವಯಸ್ಸಿನಲ್ಲೂ ಸಿನಿರಂಗದಲ್ಲಿ ಫುಲ್ ಆಕ್ಟಿವ್ ಇದ್ದಾರೆ. 100ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇದರೊಟ್ಟಿಗೆ ರಾಜಕಾರಣಿಯಾಗಿ ಗುರುತಿಸಿಕೊಂಡಿದ್ದಾರೆ. ಈಚೆಗೆ ಅವರ ನಟನೆಯ 'ಜಾಟ್' ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ರೂ.102 ಕೋಟಿ ಕಲೆಕ್ಷನ್ ಮಾಡಿತ್ತು. ಈ ಸಿನಿಮಾವನ್ನು ಮೈತ್ರಿ ಮೂವಿ ಮೇಕರ್ಸ್ & ಪೀಪಲ್ ಮೀಡಿಯಾ ಫ್ಯಾಕ್ಟರಿ ನಿರ್ಮಿಸಿದ್ದು, ಗೋಪಿಚಂದ್ ಮಲಿನೇನಿ ಆಕ್ಷನ್ ಕಟ್ ಹೇಳಿದ್ದಾರೆ.

ಶೋರೂಂ ಮುಂದೆ ಸಾಲು ಕಟ್ಟಿದ ಗ್ರಾಹಕರು! 24 ಕಿ.ಮೀ ಮೈಲೇಜ್..

ಟಾಟಾ ನೆಕ್ಸಾನ್ (Tata Nexon) ಜನಮೆಚ್ಚಿದ ಕಾರೆಂದು ಹೆಸರುವಾಸಿಯಾಗಿದೆ. ಇದು ಕಾಂಪ್ಯಾಕ್ಟ್ ಎಸ್‌ಯುವಿಯಾಗಿದೆ. ಅಚ್ಚುಕಟ್ಟಾದ ವಿನ್ಯಾಸ ಹಾಗೂ ಹಲವು ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಗ್ರಾಹಕರು ಕೂಡ ನಾ ಮುಂದು - ತಾ ಮುಂದು ಎಂಬಂತೆ ಖರೀದಿ ಮಾಡುತ್ತಿದ್ದಾರೆ. ಈ ಆಗಸ್ಟ್ ತಿಂಗಳು 'ನೆಕ್ಸಾನ್' ಕಾರು ಭಾರೀ ಸಂಖ್ಯೆಯಲ್ಲಿ ಮಾರಾಟಗೊಂಡಿದೆ. ಒಟ್ಟು 14,004 ಯುನಿಟ್‌ಗಳನ್ನು ವಿತರಣೆ ಮಾಡಲಾಗಿದೆ. 2024ರ ಇದೇ ಅವಧಿಯಲ್ಲಿ 12,289 ಯುನಿಟ್‌ಗಳನ್ನು ಮಾರಾಟಗೊಳಿಸಲಾಗಿತ್ತು. ಈ ಅಂಕಿಅಂಶಗಳನ್ನು ವಿಶ್ಲೇಷಣೆ ಮಾಡಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ 14% ಪ್ರಗತಿಯಾಗಿದೆ.

656 ಕಿ.ಮೀ ರೇಂಜ್.. 5-ಸೀಟರ್, ಈ ಶಕ್ತಿಶಾಲಿ Mahindra SUV..

ಯುವ ಕ್ರಿಕೆಟಿಗ ತಿಲಕ್ ವರ್ಮ (Tilak Varma), ಏಷ್ಯಾ ಕಪ್‌ ಟೂರ್ನಿಯಲ್ಲಿ ಆಡುತ್ತಿದ್ದು, ಟೀಮ್ ಇಂಡಿಯಾ ಗೆಲುವಿಗೂ ನೆರವಾಗಿದ್ದಾರೆ. 2023ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಪಂದ್ಯದ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ದೇಶೀಯ ಕ್ರಿಕೆಟ್‌ನಲ್ಲಿ ಹೈದರಾಬಾದ್ ಹಾಗೂ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡುತ್ತಾರೆ. ಸದ್ಯ, 22ರ ಹರೆಯದ ತಿಲಕ್ ವರ್ಮ ತಮ್ಮ ತಂದೆಗೆ ಹೊಚ್ಚ ಹೊಸ ಮಹೀಂದ್ರಾ ಎಕ್ಸ್ಇವಿ 9ಇ (Mahindra XEV 9e) ಎಲೆಕ್ಟ್ರಿಕ್ ಎಸ್‌ಯುವಿಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಅದಕ್ಕೆ ಸಂಬಂಧಿಸಿದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲೂ ಕೂಡ ವೈರಲ್ ಆಗಿವೆ.

ಗುಡ್‌ನ್ಯೂಸ್‌: ಶೋರೂಂಗೆ ಹೋಗುವ ಅಗತ್ಯವಿಲ್ಲ.. ಸೆ.22ರಿಂದ..

ರಾಯಲ್ ಎನ್‌ಫೀಲ್ಡ್ (Royal Enfield), ಪ್ರೀಮಿಯಂ ಮೋಟಾರ್‌ಸೈಕಲ್ ತಯಾರಕ ಕಂಪನಿಯಾಗಿದ್ದು, ತನ್ನ ಗ್ರಾಹಕರಿಗೆ ಭರ್ಜರಿ ಸಿಹಿಸುದ್ದಿ ನೀಡಿದೆ. ಇನ್ಮುಂದೆ ಕಂಪನಿಯ ಬೈಕ್‌ಗಳನ್ನು ಖರೀದಿ ಮಾಡಲು ಶೋರೂಂಗೆ ಹೋಗುವ ಅಗತ್ಯವಿಲ್ಲ. ಮನೆಯಲ್ಲೇ ಕುಳಿತು ಇಷ್ಟದ ಮೋಟಾರ್‌ಸೈಕಲ್‌ನ್ನು ಆರ್ಡರ್ ಮಾಡಬಹುದು. ಅದಕ್ಕಾಗಿ ಇ-ಕಾಮರ್ಸ್ ದೈತ್ಯ ಫ್ಲಿಪ್‌ಕಾರ್ಟ್‌ (Flipkart) ಜೊತೆಗೆ ಮಹತ್ವದ ಒಪ್ಪಂದ ಮಾಡಿಕೊಂಡಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.
Advertisement

29 ಕಿ.ಮೀ ಮೈಲೇಜ್.. ಕ್ಯೂ ನಿಂತ ಗ್ರಾಹಕರು, ಸೋಮವಾರದಿಂದ ಹೊಸ..

ಇತ್ತೀಚೆಗೆ ನೂತನ ಮಾರುತಿ ಸುಜುಕಿ ವಿಕ್ಟೋರಿಸ್ (Maruti Suzuki Victoris) ಮಿಡ್-ಸೈಜ್ ಎಸ್‌ಯುವಿಯನ್ನು ಬಿಡುಗಡೆಗೊಳಿಸಲಾಯಿತು. ಇದು ಅತ್ಯಾಕರ್ಷಕವಾದ ವಿನ್ಯಾಸ ಹಾಗೂ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ. ಕೈಗೆಟುಕುವ ಬೆಲೆಯಲ್ಲಿಯೂ ಸಿಗುತ್ತದೆ. ಈಗಾಗಲೇ ಬುಕ್ಕಿಂಗ್ ಪ್ರಕ್ರಿಯೆ ಶುರುವಾಗಿದ್ದು, ಆಸಕ್ತ ಖರೀದಿದಾರರು ರೂ.11,000 ಮುಂಗಡ ಹಣ ಪಾವತಿಸುವುದರೊಂದಿಗೆ ಆರ್ಡರ್ ಮಾಡಬಹುದು. ಸದ್ಯ, ಪ್ರತಿ ದಿನ 1000 ಸಂಖ್ಯೆಯಲ್ಲಿ ಬುಕ್ಕಿಂಗ್‌ಗಳನ್ನು ಪಡೆದುಕೊಳ್ಳುತ್ತಿದೆ.

ಭಾರತ ನಿರ್ಮಿತ ನಿಸ್ಸಾನ್ ಕಾರುಗಳಲ್ಲಿ ಸಮಸ್ಯೆ: 1,552 ಕಾರುಗಳ ರೀಕಾಲ್

ನಿಸ್ಸಾನ್ ಕಂಪನಿಯು ಭಾರತದಲ್ಲಿ ನಿರ್ಮಾಣವಾಗಿರುವ ನಿಸ್ಸಾನ್ ಮ್ಯಾಗ್ನೈಟ್ ಕಾರುಗಳನ್ನು ವಿದೇಶಗಳಿಗೂ ರಫ್ತು ಮಾಡುತ್ತಿದೆ. ಅದರಲ್ಲಿ ಸೌದಿ ಅರೇಬಿಯಾ ಕೂಡ ಒಂದು, ಈ ದೇಶಕ್ಕೆಂದೆ ವಿಶೇಷವಾಗಿ ಭಾರತದಲ್ಲಿ ಎಡಗೈ ಸ್ಟೀರಿಂಗ್ ವೀಲ್ ಹೊಂದಿರುವ ಕಾರುಗಳನ್ನು ನಿರ್ಮಿಸಿ ರಫ್ತು ಮಾಡಲಾಗುತ್ತಿದೆ. ಆದರೆ ಇದೀಗ ಕಂಪನಿ ಸೌದಿಗೆ ರಫ್ತು ಮಾಡಿದ 2025ರ ನಿಸ್ಸಾನ್ ಮ್ಯಾಗ್ನೈಟ್ ಮಾಡಲ್‌ನ 1,552 ಕಾರುಗಳನ್ನು ಹಿಂಪಡೆಯುವುದಾಗಿ ಘೋಷಿಸಿರುವುದಾಗಿ ವರದಿಯಾಗಿದೆ. ಕಾರಿನಲ್ಲಿ ಪ್ರಮುಖ ಸಮಸ್ಯೆಗಳನ್ನು ಇತ್ತೀಚಗೆ ಕಂಪನಿ ಕಂಡುಕೊಂಡಿದ್ದು, ಉಚಿತವಾಗಿ ಗ್ರಾಹಕರಿಗೆ ಸರಿಪಡಿಸಿ ಹಿಂದಿರುಗಿಸುವುದಾಗಿ ಹೇಳಿದೆ. ಈ ಬಗ್ಗೆ ಹೆಚ್ಚಿನ ವಿವರಗಳು ಇಲ್ಲಿವೆ.

33 Km ಮೈಲೇಜ್.. 5-ಸೀಟರ್, ಈ ಮಾರುತಿ ಕಾರಿಗೆ ಡಿಮ್ಯಾಂಡ್ ಇಲ್ಲ..

ಮಾರುತಿ ಸುಜುಕಿ ಎಸ್-ಪ್ರೆಸ್ಸೊ (Maruti Suzuki S-Presso) ಜಗಮೆಚ್ಚಿದ ಹ್ಯಾಚ್‌ಬ್ಯಾಕ್ ಎಂದೇ ಹೆಸರುವಾಸಿಯಾಗಿದೆ. ಇದು ಅತ್ಯಾಕರ್ಷಕವಾದ ವಿನ್ಯಾಸ ಹಾಗೂ ಹತ್ತಾರು ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಕೈಗೆಟುಕುವ ಬೆಲೆಯಲ್ಲಿಯೂ ಸಿಗುತ್ತದೆ. ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿ ಮಾಡುತ್ತಿದ್ದಾರೆ. ಈ ಆಗಸ್ಟ್ ತಿಂಗಳು 'ಎಸ್-ಪ್ರೆಸ್ಸೊ' ಮಾರಾಟ ಸಂಖ್ಯೆ ಇಳಿಕೆಯಾಗಿದೆ. ಒಟ್ಟು 1,333 ಯುನಿಟ್‌ಗಳನ್ನು ವಿತರಣೆ ಮಾಡಲಾಗಿದೆ. 2024ರ ಇದೇ ಅವಧಿಯಲ್ಲಿ 2,102 ಯುನಿಟ್‌ಗಳನ್ನು ಮಾರಲಾಗಿತ್ತು. ಅದಕ್ಕೆ ಹೋಲಿಕೆ ಮಾಡಿದರೆ, ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ -37% ಕುಸಿತವಾಗಿದೆ.

ಆಂಪಿಯರ್ ಮ್ಯಾಗ್ನಸ್ ಗ್ರ್ಯಾಂಡ್ ಸ್ಕೂಟರ್ ವಿಶೇಷತೆಗಳು

ಗ್ರೀವ್ಸ್ ಎಲೆಕ್ಟ್ರಿಕ್ ಮೊಬಿಲಿಟಿಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಬ್ರಾಂಡ್ ಆಗಿರುವ ಆಂಪಿಯರ್, ಭಾರತದಲ್ಲಿ ಹೊಸ ಮ್ಯಾಗ್ನಸ್ ಗ್ರ್ಯಾಂಡ್ ಇ-ಸ್ಕೂಟರ್ ಅನ್ನು ಇತ್ತೀಚೆಗೆ ಬಿಡುಗಡೆ ಮಾಡಿದೆ. ಇದು ನಗರ ಕುಟುಂಬಗಳು ಮತ್ತು ದೈನಂದಿನ ಪ್ರಯಾಣಿಕರನ್ನು ತನ್ನ ಪ್ರೀಮಿಯಂ ವೈಶಿಷ್ಟ್ಯಗಳು ಮತ್ತು ನವೀಕರಿಸಿದ ತಂತ್ರಜ್ಞಾನದೊಂದಿಗೆ ಸೆಳೆಯುವುದಾಗಿ ಕಂಪನಿ ಹೇಳಿದೆ. ರೂ. 89,999 (ಎಕ್ಸ್-ಶೋರೂಂ) ಬೆಲೆಯಲ್ಲಿ, ಮ್ಯಾಗ್ನಸ್ ಗ್ರ್ಯಾಂಡ್ ಮ್ಯಾಗ್ನಸ್ ಖರೀದಿಗೆ ಲಭ್ಯವಿದೆ. ಫ್ಯಾಮಿಲಿ ಎಲೆಕ್ಟ್ರಿಕ್ ಸ್ಕೂಟರ್ ವಿಭಾಗದಲ್ಲಿ ಮಾಲೀಕತ್ವದ ಅನುಭವವನ್ನು ಹೆಚ್ಚಿಸುವ ಗುರಿಯನ್ನು ಈ ಸ್ಕೂಟರ್ ಹೊಂದಿದೆ.
Advertisement

ಜಿಎಸ್‌ಟಿ ಪರಿಷ್ಕರಣೆ: Suzuki ಗುಡ್‌ನ್ಯೂಸ್.. Access ಸೇರಿ..

ಸುಜುಕಿ ಮೋಟಾರ್‌ಸೈಕಲ್ ಇಂಡಿಯಾ (Suzuki Motorcycle India), ತನ್ನ ಗ್ರಾಹಕರಿಗೆ ಭರ್ಜರಿ ಸಿಹಿಸುದ್ದಿ ನೀಡಿದೆ. ಕೇಂದ್ರ ಸರ್ಕಾರ ದ್ವಿಚಕ್ರ ವಾಹನಗಳ (ಸ್ಕೂಟರ್ & ಬೈಕ್‌ಗಳು) ಖರೀದಿ ಮೇಲಿನ 'ಜಿಎಸ್‌ಟಿ' ಪರಿಷ್ಕರಣೆ ಮಾಡಿದೆ. ಅದರ ಸಂಪೂರ್ಣ ಲಾಭ ಗ್ರಾಹಕರಿಗೆ ವರ್ಗಾಯಿಸಲು ಕಂಪನಿಯು ತೀರ್ಮಾನ ಮಾಡಿದೆ. ಇದರಿಂದ ನಗರ ಹಾಗೂ ಗ್ರಾಮೀಣ ಪ್ರದೇಶದ ಖರೀದಿದಾರರಿಗೆ ದೊಡ್ಡ ಮಟ್ಟದಲ್ಲಿ ಅನುಕೂಲವಾಗಲಿದೆ.

TVS: ಬಡವರ ಬಂಡಿ.. ಟಿವಿಎಸ್ ಎಕ್ಸ್ಎಲ್ 100ನ ಹೊಸ ವೇರಿಯೆಂಟ್ ಬಿಡುಗಡೆ

ಟಿವಿಎಸ್ ಮೋಟಾರ್ (TVS Motor), ಜಗಮೆಚ್ಚಿದ ದ್ವಿಚಕ್ರ ವಾಹನ (Two Wheeler) ತಯಾರಕ ಕಂಪನಿಯಾಗಿ ಹೊರಹೊಮ್ಮಿದೆ. ದೇಶೀಯ ಮಾರುಕಟ್ಟೆಯಲ್ಲಿ 'ಬಡವರ ಬಂಡಿ' ಎಂದೇ ಹೆಸರುವಾಸಿಯಾಗಿರುವ 'ಎಕ್ಸ್ಎಲ್100' ಮೊಪೆಡ್‌ನ್ನು ಯಶಸ್ವಿಯಾಗಿ ಮಾರಾಟಗೊಳಿಸುತ್ತಿದೆ. ಇದು ಅತಿ ಕಡಿಮೆ ಬೆಲೆಗೆ ಖರೀದಿಗೆ ಲಭ್ಯವಿದ್ದು, ಗ್ರಾಹಕರು ಕೂಡ ನಾ ಮುಂದು - ತಾ ಮುಂದು ಎಂಬಂತೆ ಖರೀದಿ ಮಾಡುತ್ತಿದ್ದಾರೆ. ಸದ್ಯ, ಕಂಪನಿಯು ಈ ಮೊಪೆಡ್‌ಗಾಗಿ ಹೊಚ್ಚ ಹೊಸ ರೂಪಾಂತರವನ್ನು ಪರಿಚಯಿಸಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

ಬೆಂಗಳೂರು ಮೂಲದ ಸ್ಕೂಟರ್‌ಗೆ ಫುಲ್ ಡಿಮ್ಯಾಂಡ್

ಭಾರತದ ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕರು ಹಾಗೂ ಬೆಂಗಳೂರು ಮೂಲದ ಎಥರ್ ಎನರ್ಜಿ ಕಂಪನಿಯು, ಭಾರತದಾದ್ಯಂತ 500 ಕ್ಕೂ ಹೆಚ್ಚು ಅನುಭವ ಕೇಂದ್ರಗಳನ್ನು (Experience centers) ತೆರೆಯುವ ಮೂಲಕ ಮಹತ್ವದ ಮೈಲಿಗಲ್ಲು ದಾಟಿದೆ. ಕಂಪನಿಯ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಗ್ರಾಹಕರಿಂದ ಬೇಡಿಕೆ ಹೆಚ್ಚಾಗಿದೆ, ವಿಶೇಷವಾಗಿ ಎಥರ್‌ನ ಮೊದಲ ಫ್ಯಾಮಿಲಿ ಸ್ಕೂಟರ್ ರಿಜ್ಟಾಗೆ ಬುಕಿಂಗ್‌ಗಳ ಹೆಚ್ಚಾಗಿವೆ. ಈ ಹಿನ್ನೆಲೆಯಲ್ಲಿ ಕಳೆದ ಕೆಲವು ತಿಂಗಳುಗಳಲ್ಲಿ, ಎಥರ್ ದೇಶಾದ್ಯಂತ ತನ್ನ ಅಸ್ತಿತ್ವವನ್ನು ವೇಗವಾಗಿ ವಿಸ್ತರಿಸಿದೆ. ವಿಶೇಷವಾಗಿ ಮಧ್ಯ ಮತ್ತು ಉತ್ತರ ಭಾರತದಲ್ಲಿ ವಿಸ್ತರಣೆಯ ಮೇಲೆ ಹೆಚ್ಚು ಕೇಂದ್ರೀಕರಿಸಿದೆ.

34 ಕಿ.ಮೀ ಮೈಲೇಜ್, 5 ಲಕ್ಷ.. ಈ Maruti Car ಕೊಳ್ಳಲು ಗ್ರಾಹಕರ..

ಮಾರುತಿ ಸುಜುಕಿ ಸೆಲೆರಿಯೊ (Maruti Suzuki Celerio) ಜನಮೆಚ್ಚಿದ ಹ್ಯಾಚ್‌ಬ್ಯಾಕ್ ಎಂದೇ ಹೆಸರುವಾಸಿಯಾಗಿದೆ. ತುಂಬಾ ಅಚ್ಚುಕಟ್ಟಾದ ವಿನ್ಯಾಸ ಹಾಗೂ ಹತ್ತಾರು ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಆದರೂ ಈ ಆಗಸ್ಟ್ ತಿಂಗಳು 'ಸೆಲೆರಿಯೊ' ಮಾರಾಟ ಸಂಖ್ಯೆ ತೀವ್ರತರದಲ್ಲಿ ಕುಸಿತವಾಗಿದೆ. ಒಟ್ಟು 1,505 ಯುನಿಟ್‌ಗಳನ್ನು ಮಾತ್ರ ಗ್ರಾಹಕರಿಗೆ ವಿತರಣೆ ಮಾಡಲಾಗಿದೆ. 2024ರ ಇದೇ ಅವಧಿಯಲ್ಲಿ 3,181 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿಅಂಶವನ್ನು ವಿಶ್ಲೇಷಣೆ ಮಾಡಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ -53% ಇಳಿಕೆಯಾಗಿದೆ.
Advertisement

Bridgestone: ಬೆಲೆ ಇಳಿಕೆ ಘೋಷಿಸಿದ ಟೈರ್ ಬ್ರಾಂಡ್ ಬ್ರಿಡ್ಜ್‌ಸ್ಟೋನ್

ಸುಸ್ಥಿರ ಟೈರ್ ಉತ್ಪಾದನೆಯಲ್ಲಿ ಜಾಗತಿಕವಾಗಿ ಮುಂಚೂಣಿಯಲ್ಲಿರುವ ಬ್ರಿಡ್ಜ್‌ಸ್ಟೋನ್ ಇಂಡಿಯಾ (Bridgestone India), ಭಾರತ ಸರ್ಕಾರ ನಿರ್ಧಾರದ ಅನುಸಾರವಾಗಿ ಜಿಎಸ್‌ಟಿ ದರ ಕಡಿತದ ಪ್ರಯೋಜನಗಳನ್ನು ತನ್ನ ಗ್ರಾಹಕರಿಗೆ ವರ್ಗಾಯಿಸುವುದಾಗಿ ಇಂದು ಘೋಷಿಸಿದೆ. ಪರಿಷ್ಕೃತ ಬೆಲೆಗಳು ಸೆಪ್ಟೆಂಬರ್ 22 ರಿಂದ ಜಾರಿಗೆ ಬರಲಿದ್ದು, ವಾಣಿಜ್ಯ ಮತ್ತು ಪ್ರಯಾಣಿಕ ವಾಹನ ವಿಭಾಗಗಳಾದ್ಯಂತ ಗ್ರಾಹಕರಿಗೆ ಪ್ರಯೋಜನವನ್ನು ನೀಡುತ್ತದೆ. ಈ ಕಡಿತವು ಪ್ರೀಮಿಯಂ, ಪ್ರಮಾಣಿತ ಮತ್ತು ವಿಶೇಷ ಟೈರ್‌ಗಳು ಸೇರಿದಂತೆ ತನ್ನ ಸಂಪೂರ್ಣ ಶ್ರೇಣಿಗೆ ಅನ್ವಯಿಸುತ್ತದೆ ಎಂದು ಕಂಪನಿ ಪತ್ರಿಕಾ ಪ್ರಕಟಣೆಯಲ್ಲಿ ಘೋಷಿಸಿದೆ.

Maruti Suzuki Victoris Review: 29 ಕಿ.ಮೀ ಮೈಲೇಜ್..

Explore the Maruti Victorius review, price, specifications, and features. Is it worth buying? Find out if this SUV is the right choice for your family. | ಮಾರುತಿ ವಿಕ್ಟೋರಿಸ್ ವಿಮರ್ಶೆ, ಬೆಲೆ, ವಿಶೇಷಣಗಳು ಮತ್ತು ವೈಶಿಷ್ಟ್ಯಗಳನ್ನು ಅನ್ವೇಷಿಸಿ. ಇದು ಖರೀದಿಸಲು ಯೋಗ್ಯವಾಗಿದೆಯೇ? ಈ ಎಸ್‌ಯುವಿ ನಿಮ್ಮ ಕುಟುಂಬಕ್ಕೆ ಸರಿಯಾದ ಆಯ್ಕೆಯಾಗಿದೆಯೇ ಎಂದು ಕಂಡುಕೊಳ್ಳಿ.

TVS Orbiter Review: ಟಿವಿಎಸ್ ಆರ್ಬಿಟರ್ ರಿವ್ಯೂ

Explore the TVS Orbiter electric scooter review: range, charging, features, and performance. Is it the best electric scooter for daily commutes? | TVS ಆರ್ಬಿಟರ್ ಎಲೆಕ್ಟ್ರಿಕ್ ಸ್ಕೂಟರ್ ವಿಮರ್ಶೆಯನ್ನು ಅನ್ವೇಷಿಸಿ: ವ್ಯಾಪ್ತಿ, ಚಾರ್ಜಿಂಗ್, ವೈಶಿಷ್ಟ್ಯಗಳು ಮತ್ತು ಕಾರ್ಯಕ್ಷಮತೆ. ದೈನಂದಿನ ಪ್ರಯಾಣಕ್ಕೆ ಇದು ಅತ್ಯುತ್ತಮ ಎಲೆಕ್ಟ್ರಿಕ್ ಸ್ಕೂಟರ್ ಆಗಿದೆಯೇ?

Yamaha: ದಸರಾಗೆ ಬಂಪರ್: ರೂ. 15,734 ಬೆಲೆ ಕಡಿತ ಘೋಷಣೆ

ಪ್ರಮುಖ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿರುವ ಯಮಹಾ, ಕರ್ನಾಟಕದ ಜನತೆಗೆ ದಸರಾ ಹಬ್ಬದ ಆಫರ್ ಘೋಷಿಸಿದೆ. ಯಮಹಾ ಕರ್ನಾಟಕದ ಗ್ರಾಹಕರಿಗೆ ವಿಶೇಷ ಕೊಡುಗೆಗಳನ್ನು ತರುತ್ತಿದೆ. ಬ್ರಾಂಡ್‌ನ ಜನಪ್ರಿಯ ಮೋಟಾರ್‌ಸೈಕಲ್‌ಗಳು ಮತ್ತು ಸ್ಕೂಟರ್‌ಗಳ ಮೇಲೆ GST ಕಡಿತಗಳು, ವಿಮಾ ಕೊಡುಗೆಗಳು ಮತ್ತು ಕ್ಯಾಶ್‌ಬ್ಯಾಕ್‌ನೊಂದಿಗೆ ವಿಶೇಷ ಡೀಲ್‌ಗಳನ್ನು ಪ್ರಸ್ತುತಪಡಿಸುತ್ತಿದೆ. ಇದು ನಿಮ್ಮ ಯಮಹಾ ವಾಹನವನ್ನು ಮನೆಗೆ ಕೊಂಡೊಯ್ಯಲು ಸೂಕ್ತ ಸಮಯವಾಗಿದೆ ಎಂದು ಹೇಳಬಹುದು. ಯಾವ ವಾಹನದ ಮೇಲೆ ಎಷ್ಟು ಆಫರ್ ಇದೆ ಬನ್ನಿ ನೋಡೋಣ.
Advertisement

Maruti Suzuki: ಜಿಎಸ್‌ಟಿ ಕಡಿತ.. ಮಾರುತಿಯಿಂದ ದರ ಪರಿಷ್ಕರಣೆ..

ದೇಶದ ಅತಿದೊಡ್ಡ ಕಾರು ತಯಾರಕ ಕಂಪನಿ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ (Maruti Suzuki India Limited), ತನ್ನ ಗ್ರಾಹಕರಿಗೆ ಭರ್ಜರಿ ಸಿಹಿಸುದ್ದಿ ನೀಡಿದೆ. ಕೇಂದ್ರ ಸರ್ಕಾರವು ಹೊಸ ಕಾರುಗಳ ಖರೀದಿ ಮೇಲಿನ ಜಿಎಸ್‌ಟಿ (GST) ಪರಿಷ್ಕರಿಸಿದೆ. ಅದರ ಸಂಪೂರ್ಣ ಪ್ರಯೋಜನವನ್ನು ಗ್ರಾಹಕರಿಗೆ ವರ್ಗಾಯಿಸುವುದಕ್ಕೆ ಕಂಪನಿಯು ಮುಂದಾಗಿದೆ. ಎಲ್ಲ ಕಾರುಗಳ ಬೆಲೆಯನ್ನು ದೊಡ್ಡ ಮಟ್ಟದಲ್ಲಿ ಇಳಿಸಿದೆ. ನೂತನ ದರಗಳು ಸೆಪ್ಟೆಂಬರ್ 22ರಿಂದ ಅಧಿಕೃತವಾಗಿ ಜಾರಿಗೆ ಬರಲಿವೆ.