Ola: ಆಗಸ್ಟ್ 15 ರಂದು ಓಲಾ ಸಂಕಲ್ಪ್: ಹೊಸ ಉತ್ಪನ್ನಗಳ ನಿರೀಕ್ಷೆ!

ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚಾಗುತ್ತಲೇ ಇದೆ. ಅದರಲ್ಲೂ ಮೊದಲಿನಿಂದ ಇವಿ ಸ್ಕೂಟರ್ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಭಾರತದ ಅತಿದೊಡ್ಡ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿ 'ಓಲಾ ಎಲೆಕ್ಟ್ರಿಕ್' (Ola Electric) ಹೊಸ ಉತ್ಪನ್ನಗಳ ಬಗ್ಗೆ ಪ್ರತಿ ವರ್ಷ ತನ್ನ ವಾರ್ಷಿಕ 'ಸಂಕಲ್ಪ್' ಕಾರ್ಯಕ್ರಮದಲ್ಲಿ ಘೋಷಿಸುತ್ತದೆ. ಅದರಂತೆ ಈ ಬಾರಿಯ ಆಗಸ್ಟ್ 15 ರಂದು ಕೃಷ್ಣಗಿರಿಯಲ್ಲಿರುವ ಓಲಾ ಎಲೆಕ್ಟ್ರಿಕ್‌ನ ಗಿಗಾಫ್ಯಾಕ್ಟರಿಯಲ್ಲಿ ಈ ಸಂಕಲ್ಪ್ ಕಾರ್ಯಕ್ರಮ ನಡೆಯಲಿದೆ. ಇವಿ ಮತ್ತು ಇಂಧನ ಕ್ರಾಂತಿಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಸಂಕಲ್ಪ್ 2025 ಒಂದು ದಿಟ್ಟ ಹೆಜ್ಜೆಯಾಗಿದೆ ಎಂದು ಓಲಾ ಹೇಳಿದೆ.

7-ಸೀಟರ್.. 2 ಕುಟುಂಬ ಹೋಗಬಹುದು, 26 Km ಮೈಲೇಜ್.. 9 ಲಕ್ಷ ಬೆಲೆ..

ಮಾರುತಿ ಸುಜುಕಿ ಎರ್ಟಿಗಾ (Maruti Suzuki Ertiga) ಜನಪ್ರಿಯ ಫ್ಯಾಮಿಲಿ ಎಂಪಿವಿಯಾಗಿದೆ. ಇದು ತುಂಬಾ ಅಚ್ಚುಕಟ್ಟಾದ ವಿನ್ಯಾಸ ಹಾಗೂ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ. ಇದರೊಂದಿಗೆ ವಿಶಾಲವಾದ ಒಳಾಂಗಣ ಮತ್ತು ಉತ್ತಮವಾದ ಇಂಧನ ದಕ್ಷತೆಗೂ ಹೆಸರುವಾಸಿಯಾಗಿದೆ. ಹೀಗಾಗಿ ಗ್ರಾಹಕರು ಕೂಡ ನಾ ಮುಂದು - ತಾ ಮುಂದು ಎಂಬಂತೆ ಖರೀದಿ ಮಾಡುತ್ತಿದ್ದಾರೆ. ಈ ಜುಲೈನಲ್ಲಿಯೂ 'ಎರ್ಟಿಗಾ' ಕಾರುಗಳು ಭಾರೀ ಸಂಖ್ಯೆಯಲ್ಲಿ ಮಾರಾಟಗೊಂಡಿದ್ದು, ಒಟ್ಟು 16,604 ಯುನಿಟ್‌ಗಳನ್ನು ಖರೀದಿದಾರರು ಕೊಂಡುಕೊಂಡಿದ್ದಾರೆ.

Toyota: 20 ವರ್ಷ ಕಳೆದರು ಫುಲ್ ಡಿಮ್ಯಾಂಡ್: ಮುಗಿಬಿದ್ದು ಖರೀದಿ

ಭಾರತದಲ್ಲಿ ಟೊಯೋಟಾ ಇನ್ನೋವಾ ಬಿಡುಗಡೆಯಾಗಿ 20 ವರ್ಷಗಳನ್ನು ಪೂರ್ಣಗೊಳಿಸಿ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ ಎಂದು ಜನಪ್ರಿಯ ಕಾರು ತಯಾರಕ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ (TKM) ತಿಳಿಸಿದೆ. ಇದು ಲಕ್ಷಾಂತರ ಭಾರತೀಯ ಕುಟುಂಬಗಳು ಮತ್ತು ವ್ಯವಹಾರಗಳಿಗೆ ವಿಶ್ವಾಸಾರ್ಹ ಒಡನಾಡಿಯಾಗಿ ಬೆಳೆದಿದೆ. ಇನ್ನೋವಾ, ಇನ್ನೋವಾ ಕ್ರಿಸ್ಟಾ ಮತ್ತು ಇನ್ನೋವಾ ಹೈಕ್ರಾಸ್ ಎಂಬ ಮೂರು ಕಾರುಗಳು ಒಟ್ಟಾರೆಯಾಗಿ ಇಲ್ಲಿಯವರೆಗೆ 12 ಲಕ್ಷಕ್ಕೂ ಹೆಚ್ಚು ಘಟಕಗಳನ್ನು ಮಾರಾಟ ಮಾಡಲಾಗಿದ್ದು, ಬ್ರ್ಯಾಂಡ್ ಅಚಲ ಗ್ರಾಹಕ ನಂಬಿಕೆ ಮತ್ತು ಶಾಶ್ವತ ಮೌಲ್ಯದ ಸಂಕೇತವಾಗಿದೆ ಎಂದು ಟೊಯೋಟಾ ಹೆಮ್ಮೆ ವ್ಯಕ್ತಪಡಿಸಿದೆ.

ಡಾಕ್ಟರ್ & ಎಂಜಿನಿಯರ್‌ಗಳು ಮೆಚ್ಚಿಕೊಂಡಿದ್ದಾರೆ: 5 ಲಕ್ಷ..

ಮಾರುತಿ ಸುಜುಕಿ ವ್ಯಾಗನ್ಆರ್ (Maruti Suzuki WagonR) ವಿಶ್ವಾಸಾರ್ಹ ಹ್ಯಾಚ್‌ಬ್ಯಾಕ್ ಆಗಿದೆ. ಇದು ಹೆಚ್ಚಿನ ಇಂಧನ ದಕ್ಷತೆ ಹಾಗೂ ಕಡಿಮೆ ನಿರ್ವಹಣಾ ವೆಚ್ಚವನ್ನು ಹೊಂದಿದೆ. ಅತ್ಯಾಧುನಿಕವಾದ ವಿನ್ಯಾಸ & ವಿಶಾಲವಾದ ಒಳಾಂಗಣವನ್ನು ಪಡೆದಿದ್ದು, ನಗರ ಪ್ರವೇಶದ ಚಾಲನೆಗೆ ಹೇಳಿ ಮಾಡಿಸಿದ ರೀತಿಯಲ್ಲಿದೆ. ಡಾಕ್ಟರ್ & ಎಂಜಿನಿಯರ್‌ಗಳು ಸೇರಿದಂತೆ ಎಲ್ಲ ವರ್ಗದ ಗ್ರಾಹಕರು ಕೂಡ ಇಷ್ಟಪಟ್ಟು ಕೊಂಡುಕೊಳುತ್ತಿದ್ದಾರೆ. ಈ ಜುಲೈ ತಿಂಗಳು 'ವ್ಯಾಗನ್ಆರ್' ಉತ್ತಮ ಸಂಖ್ಯೆಯಲ್ಲಿ ಮಾರಾಟವಾಗಿದೆ. ಒಟ್ಟು 14,710 ಯುನಿಟ್‌ಗಳನ್ನು ಖರೀದಿದಾರರಿಗೆ ವಿತರಣೆ ಮಾಡಲಾಗಿದೆ.
Advertisement

ಸುಜುಕಿ ಇಕೋ ಪರ್ಫಾರ್ಮೆನ್ಸ್ ತಂತ್ರಜ್ಞಾನ: ಹೊಸ ಸ್ಕೂಟರ್ ಬಿಡುಗಡೆ

ಪ್ರಮುಖ ದ್ವಿಚಕ್ರ ವಾಹನ ತಯಾರಕರಾದ ಸುಜುಕಿ ಮೋಟಾರ್‌ಸೈಕಲ್, ಇಂದು ತನ್ನ ಸ್ಪೋರ್ಟಿ 125 ಸಿಸಿ ಸ್ಕೂಟರ್ - ಸುಜುಕಿ ಅವೆನಿಸ್‌ಗೆ ಹೊಸ ಡ್ಯುಯಲ್-ಟೋನ್ ಬಣ್ಣವನ್ನು ಪರಿಚಯಿಸಿ ಬಿಡುಗಡೆ ಮಾಡಿದೆ. ಮುಂದಿನ ಪೀಳಿಗೆಯ ಸವಾರರಿಗಾಗಿ ನಿರ್ಮಿಸಲಾದ ಹೊಸ ಮೆಟಾಲಿಕ್ ಮ್ಯಾಟ್ ಪ್ಲಾಟಿನಂ ಸಿಲ್ವರ್ ನಂ. 2 / ಗ್ಲಾಸ್ ಸ್ಪಾರ್ಕಲ್ ಬ್ಲ್ಯಾಕ್ ಬಣ್ಣವು ಸ್ಕೂಟರ್‌ನ ನೋಟವನ್ನು ಹೆಚ್ಚಿಸುತ್ತದೆ. ಇದು ಸ್ಕೂಟರ್ ಅನ್ನು ಇನ್ನಷ್ಟು ಕ್ರಿಯಾತ್ಮಕ ಮತ್ತು ಗಮನ ಸೆಳೆಯುವಂತೆ ಮಾಡುತ್ತದೆ ಎಂದು ಕಂಪನಿ ಹೇಳಿದೆ.

ಬ್ರೋ.. 26 ಕಿ.ಮೀವರೆಗೆ ಮೈಲೇಜ್, 5-ಸೀಟರ್.. ಈ ಪ್ರಮುಖ ಎಸ್‌ಯುವಿ..

ದೇಶದಲ್ಲಿ ಎಸ್‌ಯುವಿಗಳಿಗೆ (ಸ್ಪೋರ್ಟ್ ಯುಟಿಲಿಟಿ ವೆಹಿಕಲ್) ದಿನದಿಂದ ದಿನಕ್ಕೆ ಭಾರೀ ಬೇಡಿಕೆ ಸೃಷ್ಟಿಯಾಗುತ್ತಿದ್ದು, ಗ್ರಾಹಕರು ಕೂಡ ಮುಗಿಬಿದ್ದು ಕೊಂಡುಕೊಳ್ಳುತ್ತಿದ್ದಾರೆ. ಆದರೂ ಹೊಸ ಕಾರು ಖರೀದಿಸುವವರು ಗೊಂದಲಕ್ಕೊಳಗಾಗುತ್ತಾರೆ. ನೀವು ರೂ.10 ಲಕ್ಷಕ್ಕಿಂತ ಕಡಿಮೆ ಬೆಲೆಗೆ ದೊರೆಯುವ ನೂತನ ಎಸ್‌ಯುವಿವೊಂದನ್ನು ಕೊಂಡುಕೊಳ್ಳಲು ಆಲೋಚಿಸಿದ್ದೀರಾ.. ಹಾಗಾದರೆ ಮಾರುತಿ ಸುಜುಕಿ ಬ್ರೆಝಾ, ಟಾಟಾ ನೆಕ್ಸಾನ್‌, ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್ಒ, ಕಿಯಾ ಸೋನೆಟ್ ಹಾಗೂ ಹ್ಯುಂಡೈ ಎಕ್ಸ್‌ಟರ್‌ಗಳು ಅತ್ಯುತ್ತಮವಾದ ಆಯ್ಕೆಯಾಗಲಿವೆ. ಬನ್ನಿ, ಇವುಗಳ ಬೆಲೆ ಹಾಗೂ ವಿಶೇಷತೆಗಳ ಕುರಿತಂತೆ ಒಂದಷ್ಟು ವಿವರಗಳನ್ನು ತಿಳಿಯೋಣ.

Tata: ರಗಡ್ ಲುಕ್‌ನಲ್ಲಿ ಎರಡು ಹೊಸ ಟಾಟಾ ಎಸ್‌ಯುವಿಗಳು ಬಿಡುಗಡೆ

ಭಾರತದ ಪ್ರಮುಖ ಕಾರು ತಯಾರಕರಾದ ಟಾಟಾ ಮೋಟಾರ್ಸ್ (Tata Motors), ಇಂದು ತನ್ನ ಪ್ರಮುಖ SUV ಗಳಾದ ಟಾಟಾ ಹ್ಯಾರಿಯರ್ ಮತ್ತು ಟಾಟಾ ಸಫಾರಿಗಳ ಹೊಸ ಅಡ್ವೆಂಚರ್ X ಪರ್ಸೋನಾ (Adventure X Persona) ವೇರಿಯೆಂಟ್‌ಗಳನ್ನು ಬಿಡುಗಡೆಗೊಳಿಸಿದೆ. ಇಂದಿನಿಂದ ಈ ಪರ್ಸೋನಾ ಹ್ಯಾರಿಯರ್ ಅಡ್ವೆಂಚರ್ X ರೂ. 18.99 ಲಕ್ಷ ಮತ್ತು ಸಫಾರಿ ಅಡ್ವೆಂಚರ್ ಎಕ್ಸ್+ ಪರ್ಸೋನಾ ರೂ. 19.99 ಲಕ್ಷ (ಎಕ್ಸ್‌ ಶೋರೂಂ) ಪರಿಚಯಾತ್ಮಕ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಇವು ಫೀಚರ್-ಫ್ಯಾಕ್ಡ್ ಹಾಗೂ ಹೊಸ ಬಣ್ಣ ಆಯ್ಕೆಗಳೊಂದಿಗೆ ಬರುತ್ತದೆ. ಇವು ಗ್ರಾಹಕರಿಗೆ ಉತ್ತಮ ಬೆಲೆಯಲ್ಲಿ ವರ್ಧಿತ ಮೌಲ್ಯವನ್ನು ನೀಡುತ್ತವೆ ಎಂದು ಟಾಟಾ ಹೇಳಿದೆ.

20 Km ಮೈಲೇಜ್.. 7-ಸೀಟರ್, 6.29 ಲಕ್ಷ.. ರೆನಾಲ್ಟ್ ಟ್ರೈಬರ್..

ಈಚೆಗೆ 2025ರ ನೂತನ ರೆನಾಲ್ಟ್ ಟ್ರೈಬರ್ ಫೇಸ್‌ಲಿಫ್ಟ್ (Renault Triber Facelift) ಎಂಪಿವಿಯನ್ನು ಮಾರಾಟಕ್ಕೆ ತರಲಾಯಿತು. ಇದು ರೂ.6.29 ಲಕ್ಷದಿಂದ ರೂ.9.16 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. 1-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 20 ಕಿ.ಮೀ ವರೆಗೆ ಮೈಲೇಜ್ ನೀಡಬಲ್ಲದು. 7-ಆಸನಗಳನ್ನು ಹೊಂದಿದೆ. 8-ಇಂಚಿನ ಪ್ಲೋಟಿಂಗ್ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಹಾಗೂ 7-ಇಂಚಿನ ಸೆಮಿ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ ಹಾಗೂ 6-ಏರ್‌ಬ್ಯಾಗ್‌ಗಳು ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ನೀವು ಈ 'ಟ್ರೈಬರ್ ಫೇಸ್‌ಲಿಫ್ಟ್‌'ಗೆ ಬದಲಾಗಿ ಈ 3 ಕಾರುಗಳನ್ನು ಖರೀದಿ ಮಾಡಬಹುದು. ಬನ್ನಿ, ಅವುಗಳ ಬೆಲೆ ಹಾಗೂ ವಿಶೇಷತೆಗಳ ಕುರಿತಂತೆ ಒಂದಷ್ಟು ವಿವರಗಳನ್ನು ತಿಳಿಯೋಣ.
Advertisement

ಒಂದು ಪೈಸೆ ಖರ್ಚಿಲ್ಲದೆ 175 ಕಿ.ಮೀ ಓಡುವ ಬೈಕ್ ಬಿಡುಗಡೆ: ಕಡಿಮೆ ಬೆಲೆ

ಭಾರತದ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ತಯಾರಕ ಕಂಪನಿಯಾದ ಓಬೆನ್ ಎಲೆಕ್ಟ್ರಿಕ್ (Oben Electric) ತನ್ನ ರೋರ್ ಇಝಡ್ ಸಿಗ್ಮಾ (Rorr EZ Sigma) ವನ್ನು ಇಂದು ಬಿಡುಗಡೆ ಮಾಡಿದೆ. ನಗರ ಪ್ರಯಾಣಕ್ಕಾಗಿ ವಿಶೇಷವಾಗಿ ನಿರ್ಮಾಣವಾಗಿರುವ ಈ ವಾಹನವು, ಅನುಭವ ಮತ್ತು ಉಪಯುಕ್ತತೆ ಎರಡನ್ನೂ ಹೆಚ್ಚಿಸಲು ಪ್ರಮುಖ ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್ ಅಪ್‌ಗ್ರೇಡ್‌ಗಳೊಂದಿಗೆ ಬಿಡುಗಡೆಯಾಗಿದೆ. ರೂ.1.27 ಲಕ್ಷ (ಎಕ್ಸ್‌ ಶೋರೂಂ) ಪರಿಚಯಾತ್ಮಕ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಇದು ಸೀಮಿತ ಅವಧಿಯ ವಿಶೇಷ ಪರಿಚಯಾತ್ಮಕ ಬೆಲೆ ಎಂದು ಕಂಪನಿ ತಿಳಿಸಿದೆ.

ಬಿಡುಗಡೆಯಾಗಿ ಕೇವಲ 18 ತಿಂಗಳಷ್ಟೇ.. ಗ್ರಾಹಕರು ಖರೀದಿಸುತ್ತಿಲ್ಲ..

ಹೀರೋ ಮೋಟೋಕಾರ್ಪ್ (Hero MotoCorp) ಪ್ರೀಮಿಯಂ ಮೋಟಾರ್‌ಸೈಕಲ್‌ ವಿಭಾಗದಲ್ಲಿ ತನ್ನದೇಯಾದ ಛಾಪನ್ನು ಮೂಡಿಸಲು ಹಲವು ಪ್ರಯತ್ನಗಳನ್ನು ಮಾಡುತ್ತಿದೆ. ಅದರ ಭಾಗವಾಗಿ ಅಮೆರಿಕದ ಹಾರ್ಲೆ-ಡೇವಿಡ್ಸನ್ (Harley-Davidson) ಪಾಲುದಾರಿಕೆಯಲ್ಲಿ 'ಮಾವ್ರಿಕ್ 440' ಹೆಸರಿನ ಬೈಕ್‌ನ್ನು ಅಭಿವೃದ್ಧಿಪಡಿಸಿತ್ತು. ಇದನ್ನು 2024ರ ಆರಂಭದಲ್ಲಿ ದೇಶೀಯ ಮಾರುಕಟ್ಟೆಯಲ್ಲಿಯೂ ಅದ್ದೂರಿಯಾಗಿ ಮಾರಾಟಕ್ಕೆ ತರಲಾಗಿತ್ತು. ಆದರೂ ಗ್ರಾಹಕರನ್ನು ಸೆಳೆಯುವಲ್ಲಿ ಅಂದುಕೊಂಡ ಮಟ್ಟಿಗೆ ಸಫಲವಾಗಿಲ್ಲ.

ದೇಶಾದ್ಯಂತ ದಾಖಲೆಯ ಇವಿ ಸ್ಕೂಟರ್ ಮಾರಟ

ಭಾರತದ ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕರಾದ ಎಥರ್ ಎನರ್ಜಿ, FY26 (2026 ಆರ್ಥಿಕ ವರ್ಷ) ವನ್ನು ಬಲವಾಗಿ ಪ್ರಾರಂಭಿಸಿದೆ. ಕಂಪನಿಯು FY26 ರ ಮೊದಲ ತ್ರೈಮಾಸಿಕದಲ್ಲಿ 46,078 ಯೂನಿಟ್‌ ವಾಹನಗಳನ್ನು ಮಾರಾಟ ಮಾಡಿದೆ. ಈ ಮೂಲಕ ವರ್ಷದಿಂದ ವರ್ಷಕ್ಕೆ ಶೇ97 ರಷ್ಟು ಹೆಚ್ಚಳವಾಗಿದೆ. ಫ್ಯಾಮಿಲಿ ಇವಿ ಸ್ಕೂಟರ್ ಎಥರ್ ರಿಜ್ಟಾಗೆ ಬಲವಾದ ಬೇಡಿಕೆ ವ್ಯಕ್ತವಾಗಿದ್ದು, ಈ ತ್ರೈಮಾಸಿಕದಲ್ಲಿ 95 ಹೊಸ ಅನುಭವ ಕೇಂದ್ರಗಳ (Experience Centres) ಸೇರ್ಪಡೆಯಾಗಿವೆ. ಒಟ್ಟು ಆದಾಯವು ವರ್ಷದಿಂದ ವರ್ಷಕ್ಕೆ ಶೇ83 ರಷ್ಟು ಹೆಚ್ಚಾಗಿದೆ ಎಂದು ಕಂಪನಿ ತಿಳಿಸಿದೆ.

ಎಲ್ಲರ ಲೆಕ್ಕಾಚಾರ ಉಲ್ಟಾ.. ಬೈಕ್‌ನಂತೆ 33 ಕಿ.ಮೀ ಮೈಲೇಜ್..

ದೇಶೀಯ ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ಎಸ್‌ಯುವಿಗಳಿಗೆ ಭಾರೀ ಬೇಡಿಕೆ ಸೃಷ್ಟಿಯಾಗುತ್ತಿದೆ. ಆದರೆ ಎಸ್‌ಯುವಿಗಳ ವಿರುದ್ಧ ಈ ಮಾರುತಿ ಸುಜುಕಿ ಡಿಜೈರ್ (Maruti Suzuki Dzire) ಸೆಡಾನ್‌ ಬಂಡೆಯಾಗಿ ನಿಂತಿದ್ದು, ಎಲ್ಲರ ಲೆಕ್ಕಾಚಾರ ಮಾಡುವುದರೊಂದಿಗೆ ಭಾರೀ ಸಂಖ್ಯೆಯಲ್ಲಿ ಮಾರಾಟವಾಗಿದೆ. ಮೂಲ ಪ್ರಕಾರ, ಈ 2025ರ ಜುಲೈನಲ್ಲಿ ಇದೇ 'ಡಿಜೈರ್' ಅಗ್ರಸ್ಥಾನದಲ್ಲಿದೆ. ಒಟ್ಟು 20,895 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದ್ದು, ಜೂನ್‌ನಲ್ಲಿ 15,484 ಯುನಿಟ್‌ಗಳನ್ನು ಮಾರಲಾಗಿತ್ತು.
Advertisement

Hyundai: ಎಲ್ಲಾ ಕಾರುಗಳನ್ನು ಹಿಂದಿಕ್ಕಿ ಭಾರತದ ನಂ.1 ಸ್ಥಾನ

ಜನವರಿಯಿಂದ ಜುಲೈ 2025 ರವರೆಗೆ (ಎಲ್ಲಾ ವಿಭಾಗಗಳಲ್ಲಿ) ಹುಂಡೈ ಕ್ರೆಟಾ (Hyundai Creta) ಭಾರತದಲ್ಲಿ ಅತಿ ಹೆಚ್ಚು ಮಾರಾಟವಾದ ಕಾರಾಗಿ (top-selling car) ಗುರ್ತಿಸಿಕೊಂಡಿದೆ. ಈ ಅವಧಿಯಲ್ಲಿ ಗಮನಾರ್ಹವಾದ 1,17,458 ಯುನಿಟ್‌ ಕಾರುಗಳು ಮಾರಾಟವಾಗಿದ್ದು, ವರ್ಷದಿಂದ ವರ್ಷಕ್ಕೆ 8% ರಷ್ಟು ಬೆಳವಣಿಗೆಯೊಂದಿಗೆ (ಜನವರಿ-ಜುಲೈ 2024 ಕ್ಕೆ ಹೋಲಿಸಿದರೆ) ಹ್ಯುಂಡೈ ಕ್ರೆಟಾ ಭಾರತೀಯ ಕಾರು ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸಾಧಿಸುವುದನ್ನು ಮುಂದುವರೆಸಿದೆ. ಈ ಕಾರಿನ ಯಶಸ್ಸಿಗೆ ಕಾರಣವಾಗಿರುವ ಪ್ರಮುಖಾಂಶಗಳನ್ನು ಸಂಕ್ಷಿಪ್ತವಾಗಿ ತಿಳಿಯೋಣ ಬನ್ನಿ.

34 ಕಿ.ಮೀ ಮೈಲೇಜ್.. 5-ಸೀಟರ್, ಈ ಅಗ್ಗದ ಮಾರುತಿ ಕಾರನ್ನು..

ಮಾರುತಿ ಸುಜುಕಿ ಸೆಲೆರಿಯೊ (Maruti Suzuki Celerio) ವಿಶ್ವಾಸಾರ್ಹ ಹ್ಯಾಚ್‌ಬ್ಯಾಕ್ ಎಂದೇ ಹೆಸರುವಾಗಿದೆ. ತುಂಬಾ ಚೆನ್ನಾಗಿರುವ ವಿನ್ಯಾಸ & ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ. ಈ ಕಾರು ಕನಿಷ್ಠ ರೂ.5.60 ಲಕ್ಷ ಹಾಗೂ ಗರಿಷ್ಠ ರೂ.7.30 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ. ನೀವು ಹೊಚ್ಚ ಹೊಸ 'ಸೆಲೆರಿಯೊ' ಕಾರನ್ನು ಮನೆಗೆ ತರಲು ಆಲೋಚಿಸಿದ್ದೀರಾ.. ನಾವಿಲ್ಲಿ, ಈ ಹ್ಯಾಚ್‌ಬ್ಯಾಕ್‌ನ ಆನ್-ರೋಡ್ ಬೆಲೆ (On-Road Price) ಹಾಗೂ ಇಎಂಐ (EMI) ಆಯ್ಕೆಯ ಕುರಿತಂತೆ ಒಂದಷ್ಟು ತಿಳಿಸಿಕೊಟ್ಟಿದ್ದೇವೆ.

ಕಳೆಪೆ ಕಾರುಗಳ ತಂಟೆಗೆ ಹೋಗಬೇಡಿ ಎಂದವರಿಗೆ ಶಾಕ್ ಕೊಟ್ಟ ಬ್ರ್ಯಾಂಡ್!

ಎಲ್ಲಾ ಕಾರುಗಳಲ್ಲಿ ಆರು ಏರ್‌ ಬ್ಯಾಗ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡುವ ಮೂಲಕ ಪ್ರಯಾಣಿಕರ ಸುರಕ್ಷತೆಯನ್ನು ಹೆಚ್ಚಿಸುವುದು ಮಾರುತಿಯ ಇತ್ತೀಚಿನ ದೊಡ್ಡ ಪ್ರಯತ್ನವಾಗಿದೆ. ಸದ್ಯ ಮಾರುತಿ ಸುಜುಕಿ (Maruti Suzuki) ತನ್ನ 14 ಮಾಡಲ್‌ಗಳಲ್ಲಿ 6 ಏರ್‌ಬ್ಯಾಗ್‌ಗಳನ್ನು ಪ್ರಮಾಣಿತವಾಗಿ ನೀಡುತ್ತಿದೆ. ಈ ಮೂಲಕ ವಾಹನ ಸುರಕ್ಷತೆಯಲ್ಲಿ ಗಮನಾರ್ಹ ಜಿಗಿತವನ್ನು ಕಂಡಿದೆ. ಜೊತೆಗೆ ಈ ಕ್ರಮವು ಕಂಪನಿಯ ಬಹುಪಾಲು ಕಾರುಗಳಿಗೆ ಸಮಗ್ರ ಪ್ರಯಾಣಿಕರ ರಕ್ಷಣೆಯನ್ನು ತರುತ್ತದೆ, ಸುರಕ್ಷತೆಗೆ ಬ್ರ್ಯಾಂಡ್‌ನ ಬದ್ಧತೆಯನ್ನು ಬಲಪಡಿಸುತ್ತದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಪ್ರಮುಖ 5 ಬಜೆಟ್ ಕಾರುಗಳಿವು.. 10 ಲಕ್ಷದೊಳಗೆ ಲಭ್ಯ, ಮೈಲೇಜ್..

ವಿಶ್ವದಲ್ಲೇ ಭಾರತ ಅತಿದೊಡ್ಡ ಕಾರು ಮಾರುಕಟ್ಟೆಯನ್ನು ಹೊಂದಿದೆ. ಇಲ್ಲಿ ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯವನ್ನು ಹೊಂದಿರುವ ಹತ್ತಾರು ಕಾರುಗಳನ್ನು ಮಾರಾಟ ಮಾಡಲಾಗುತ್ತಿದೆ. ನೀವು ಬಜೆಟ್ ಬೆಲೆಯಲ್ಲಿ ದೊರೆಯುವ ಹೊಚ್ಚ ಹೊಸ ಕಾರೊಂದನ್ನು ಮನೆಗೆ ತರಲು ಆಲೋಚಿಸಿದ್ದೀರಾ.. ಹಾಗದರೆ, ಮಾರುತಿ ಸುಜುಕಿ ಬಲೆನೊ, ಮಾರುತಿ ಸುಜುಕಿ ಸ್ವಿಫ್ಟ್, ಟಾಟಾ ಪಂಚ್, ಹ್ಯುಂಡೈ ವೆನ್ಯೂ ಹಾಗೂ ಮಾರುತಿ ಸುಜುಕಿ ಫ್ರಾಂಕ್ಸ್ ಮಾಡೆಲ್‌ಗಳು ಅತ್ಯುತ್ತಮ ಆಯ್ಕೆಯಾಗಲಿವೆ. ಬನ್ನಿ, ಇವುಗಳ ಬೆಲೆ ಹಾಗೂ ವಿಶೇಷತೆಗಳ ಕುರಿತಂತೆ ಒಂದಷ್ಟು ವಿವರಗಳನ್ನು ತಿಳಿಯೋಣ.
Advertisement

Vinfast: ಹೊಸ ಕಾರು ಉತ್ಪಾದನಾ ಸ್ಥಾವರ ಉದ್ಘಾಟಣೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಇಂದು (ಆಗಸ್ಟ್ 4, 2025) ತೂತುಕುಡಿಯಲ್ಲಿ ವಿಯೆಟ್ನಾಂ ಮೂಲದ ಕಾರು ತಯಾರಕ ಕಂಪನಿಯ ವಿನ್‌ಫಾಸ್ಟ್‌ (Vinfast) ಎಲೆಕ್ಟ್ರಿಕ್ ವೆಹಿಕಲ್ (ಇವಿ) ಉತ್ಪಾದನಾ ಘಟಕವನ್ನು ಅಧಿಕೃತವಾಗಿ ಉದ್ಘಾಟಿಸಿದ್ದಾರೆ. ಈ ಅತ್ಯಾಧುನಿಕ ಸೌಲಭ್ಯವು ಸಿಪ್ಕಾಟ್ ಕೈಗಾರಿಕಾ ಉದ್ಯಾನವನದಲ್ಲಿದೆ. ರೂ.16,000 ಕೋಟಿ (ಸುಮಾರು $2 ಬಿಲಿಯನ್) ವರೆಗಿನ ಹಂತ ಹಂತದ ಹೂಡಿಕೆಯನ್ನು ಹೊಂದಿದೆ. ಈ ಸ್ಥಾವರವು ವಿಯೆಟ್ನಾಂನ ಹೊರಗೆ ವಿನ್‌ಫಾಸ್ಟ್‌ ಕಂಪನಿಯ ಮೊದಲ ಉತ್ಪಾದನಾ ಸೌಲಭ್ಯವಾಗಿದ್ದು, ಜಾಗತಿಕವಾಗಿ ಕಂಪನಿಯ ಮೂರನೇ ಕಾರ್ಯಾಚರಣಾ ಸ್ಥಾವರವಾಗಿದೆ.

ಧರ್ಮಸ್ಥಳಕ್ಕೆ ಮಹೀಂದ್ರಾ ಕಂಪನಿಯಿಂದ ಹೊಸ ಎಲೆಕ್ಟ್ರಿಕ್ ಕಾರು..

ಮಹೀಂದ್ರಾ & ಮಹೀಂದ್ರಾ (Mahindra & Mahindra) ಹೊಚ್ಚ ಹೊಸ 'ಬಿಇ 6ಇ' ಎಲೆಕ್ಟ್ರಿಕ್ ಎಸ್‌ಯುವಿಯನ್ನು ಧರ್ಮಸ್ಥಳಕ್ಕೆ ಕೊಡುಗೆ ನೀಡಿದೆ. ಭಾನುವಾರ ಕಂಪನಿಯ ತಯಾರಿಕಾ ವಿಭಾಗದ ಮುಖ್ಯಸ್ಥ ವಿನಯ್ ಖಾನೋಲ್ಕರ್ (Vinay Khanolkar), ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ (Dr.D.Veerendra Heggade) ಅವರಿಗೆ ನೂತನ ಕಾರಿನ ಕೀಯನ್ನು ಹಸ್ತಾಂತರ ಮಾಡಿದರು. 'ಇದು ಮಹೀಂದ್ರಾ ಕಂಪನಿಯು ಕ್ಷೇತ್ರಕ್ಕೆ ಅರ್ಪಿಸಿರುವ 3ನೇ ಕಾರಾಗಿದೆ. ಗ್ರಾಮೀಣಾಭಿವೃದ್ಧಿ ಯೋಜನಾ ಕಾರ್ಯಕ್ರಮಗಳಿಗೆ ಬಳಕೆ ಮಾಡಲಾಗುವುದು' ಎಂದು ಧರ್ಮಾಧಿಕಾರಿಗಳು ಹೇಳಿದ್ದಾರೆ.

Hyundai: ಮತ್ತೆ ನಂ.1 ಸ್ಥಾನಕ್ಕೇರಿದ ಹ್ಯುಂಡೈ ಕಾರು

ಪ್ರಮುಖ ಕಾರು ತಯಾರಕ ಕಂಪನಿ ಹ್ಯುಂಡೈ (Hyundai), ತನ್ನ ಕ್ರೆಟಾವನ್ನು ಜನವರಿಯಿಂದ ಜುಲೈ 2025 ರವರೆಗೆ (ಎಲ್ಲಾ ವಿಭಾಗಗಳಲ್ಲಿ) ದೇಶದಲ್ಲಿ ಅತಿ ಹೆಚ್ಚು ಮಾರಾಟವಾದ ಎಸ್‌ಯುವಿಯಾಗಿದೆ ಎಂದು ಘೋಷಿಸಿದೆ. ಈ ಅವಧಿಯಲ್ಲಿ ಗಮನಾರ್ಹವಾದ 1,17,458 ಯುನಿಟ್‌ ಕಾರುಗಳು ಮಾರಾಟವಾಗಿದ್ದು, ವರ್ಷದಿಂದ ವರ್ಷಕ್ಕೆ 8% ರಷ್ಟು ಬೆಳವಣಿಗೆಯೊಂದಿಗೆ (ಜನವರಿ-ಜುಲೈ 2024 ಕ್ಕೆ ಹೋಲಿಸಿದರೆ) ಹ್ಯುಂಡೈ ಕ್ರೆಟಾ ಭಾರತೀಯ ಕಾರು ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸಾಧಿಸುವುದನ್ನು ಮುಂದುವರೆಸಿದೆ. ಗ್ರಾಹಕರಲ್ಲಿ ಉನ್ನತ ಆಯ್ಕೆಯಾಗಿ ತನ್ನ ಖ್ಯಾತಿಯನ್ನು ಗಟ್ಟಿಗೊಳಿಸಿದೆ ಎಂದು ಕಂಪನಿ ಹೇಳಿದೆ.

Expressway: ಬೆಂಗಳೂರು-ಪುಣೆ ಮಧ್ಯೆ ಹೊಸ ಎಕ್ಸ್‌ಪ್ರೆಸ್‌ವೇ..

ಬಹುನಿರೀಕ್ಷಿತ ಬೆಂಗಳೂರು-ಪುಣೆ ಎಕ್ಸ್‌ಪ್ರೆಸ್‌ವೇ (Bengaluru-Pune Expressway) ಕಾಮಗಾರಿ ಅತಿ ಶೀಘ್ರದಲ್ಲೇ ಶುರುವಾಗುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ. ನೂತನ ಹೆದ್ದಾರಿ ನಿರ್ಮಾಣ ಸಂಬಂಧ ವಿಸ್ತೃತ ಯೋಜನಾ ವರದಿಗೆ (ಡಿಪಿಆರ್) ಕರ್ನಾಟಕ ಹಾಗೂ ಮಹಾರಾಷ್ಟ್ರ ಸರ್ಕಾರಗಳು ಒಪ್ಪಿಗೆ ಸೂಚಿಸಿದ್ದು, ಕೇಂದ್ರ ಸರ್ಕಾರದಿಂದ ಅಂತಿಮ ಅನುಮೋದನೆ ಮಾತ್ರ ಬಾಕಿಯಿದೆ. ಹೊಸ ಎಕ್ಸ್‌ಪ್ರೆಸ್‌ವೇಯಿಂದ ಎರಡು ರಾಜ್ಯದ ಜನರಿಗೆ ದೊಡ್ಡ ಮಟ್ಟದ ಅನುಕೂಲವಾಗಲಿದ್ದು, ಪ್ರಯಾಣದ ಅವಧಿಯು ಕಡಿಮೆಯಾಗಲಿದೆ.
Advertisement

Best cars: ಭಾರತದ ಟಾಪ್-5 ಕಾರುಗಳು: ಫುಲ್ ಡಿಮ್ಯಾಂಡ್

Best cars: ಇತ್ತೀಚಿನ ಪೂರ್ಣ - ವರ್ಷ ಮತ್ತು 2025 ರ ಮಧ್ಯದ ಮಾರಾಟದ ಡೇಟಾವನ್ನು ಆಧರಿಸಿ, 2025 ರಲ್ಲಿ ಭಾರತದಲ್ಲಿ ಹೆಚ್ಚು ಮಾರಾಟವಾದ ಟಾಪ್ 5 ಕಾರುಗಳ ಬಗ್ಗೆ ಇಲ್ಲಿ ತಿಳಿಸಿದ್ದೇವೆ. 2025ರ ಕಾರು ಮಾರಾಟವನ್ನು ಗಮನಿಸದರೆ ಹೆಚ್ಚಾಗಿ SUV ಗಳು ಮತ್ತು ಪ್ರಾಯೋಗಿಕ ಕುಟುಂಬ ವಾಹನಗಳಿಗೆ ಗ್ರಾಹಕರ ಆದ್ಯತೆ ಹೆಚ್ಚುತ್ತಿರುವುದು ಕಂಡುಬಂದಿದೆ. ಬ್ರ್ಯಾಂಡ್ ಮೇಲಿನ ನಂಬಿಕೆ ಮತ್ತು ಹಣಕ್ಕೆ ತಕ್ಕ ಮೌಲ್ಯ ನೀಡುವ ಕಾರುಗಳೇ ಖರೀದಿ ನಿರ್ಧಾರಗಳಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿವೆ. ಈ ನಿಟ್ಟಿನಲ್ಲಿ 2025 ರಲ್ಲಿ ಭಾರತದ ವಾಹನ ಮಾರುಕಟ್ಟೆಯಲ್ಲಿ ಸುಧಾರಿತ ವೈಶಿಷ್ಟ್ಯಗಳು, ಸುರಕ್ಷತೆ ಮತ್ತು ಶೈಲಿಯ ಪ್ರಾಬಲ್ಯದೊಂದಿಗೆ ಅತಿಹೆಚ್ಚು ಡಿಮ್ಯಾಂಡ್ ಪಡೆದಿರುವ ಕಾರುಗಳು ಇಲ್ಲಿವೆ.

ವರಮಹಾಲಕ್ಷ್ಮಿ ಹಬ್ಬ: ಈ ಬೈಕ್‌ಗಳನ್ನು ಮನೆಗೆ ತರಬಹುದು..

ವರಮಹಾಲಕ್ಷ್ಮಿ (Varamahalakshmi) ಹಬ್ಬಕ್ಕೆ ಕೆಲವೇ ದಿನಗಳು ಬಾಕಿಯಿದ್ದು, ಇದೇ 8ರಂದು ಹಬ್ಬ ಬಂದಿದೆ. ಅಂದು ಶ್ರದ್ಧಾ ಭಕ್ತಿಯಿಂದ ಸಂಪತ್ತನ್ನು ಕರುಣಿಸುವ ಮಹಾಲಕ್ಷ್ಮಿಯನ್ನು ಪೂಜಿಸಲಾಗುತ್ತದೆ. ನೀವು ಹಬ್ಬಕ್ಕೆ ಹೊಚ್ಚ ಹೊಸ ಬೈಕ್‌ವೊಂದನ್ನು ಖರೀದಿ ಮಾಡಲು ಪ್ಲ್ಯಾನ್ ಮಾಡಿದ್ದೀರಾ.. ಹಾಗಾದರೆ, ಬಜಾಜ್ ಪ್ಲಾಟಿನಾ 100, ಹೋಂಡಾ ಶೈನ್ 100 ಡಿಎಕ್ಸ್, ಹೀರೋ ಸ್ಪ್ಲೆಂಡರ್ ಪ್ಲಸ್, ಟಿವಿಎಸ್ ರೇಡಿಯನ್ ಹಾಗೂ ಹೋಂಡಾ ಸಿಬಿ 125 ಹಾರ್ನೆಟ್ ಮೋಟಾರ್‌ಸೈಕಲ್‌ಗಳು ಅತ್ಯುತ್ತಮವಾದ ಆಯ್ಕೆಯಾಗಲಿವೆ. ಬನ್ನಿ, ಇವುಗಳ ಬೆಲೆ ಹಾಗೂ ವಿಶೇಷತೆಗಳ ಕುರಿತಂತೆ ಒಂದಷ್ಟು ವಿವರಗಳನ್ನು ತಿಳಿಯೋಣ.

Hero: ದಾಖಲೆ ಸಂಖ್ಯೆಯಲ್ಲಿ ವಾಹನಗಳನ್ನು ರವಾನಿಸಿದ ಹೀರೋ

ಜನಪ್ರಿಯ ಮೋಟಾರ್‌ಸೈಕಲ್‌ಗಳು ಮತ್ತು ಸ್ಕೂಟರ್‌ಗಳ ತಯಾರಕರಾದ ಹೀರೋ ಮೋಟೋಕಾರ್ಪ್, ಜುಲೈ 2025 ರಲ್ಲಿ 4,49,755 ಯುನಿಟ್‌ ವಾಹನಗಳನ್ನು ರವಾನಿಸಿದೆ, ಇದು ಜುಲೈ 2024 ರಲ್ಲಿ ದಾಖಲಾದ 3,70,274 ಯುನಿಟ್‌ ವಾಹನಗಳಿಗಿಂತ 21% ಹೆಚ್ಚಳವನ್ನು ದಾಖಲಿಸಿದೆ. ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿನ ಮಾರುಕಟ್ಟೆ ಪ್ರವೃತ್ತಿಗಳಿಗೆ ಅನುಗುಣವಾಗಿ, ಹೀರೋ ಮೋಟೋಕಾರ್ಪ್ ಜುಲೈ 2025 ರಲ್ಲಿ 3,39,827 ಕ್ಕೂ ಹೆಚ್ಚು ವಾಹನ ನೋಂದಣಿಗಳನ್ನು ನೋಂದಾಯಿಸಿದೆ. ಇದು ಆಗಸ್ಟ್ 1, 2025 ರಂತೆ ತೆಲಂಗಾಣವನ್ನು ಹೊರತುಪಡಿಸಿ ಬಂದ ಡೇಟಾವಾಗಿದೆ ಎಂದು ಹೋಂಡಾ ತಿಳಿಸಿದೆ.

27 ಕಿ.ಮೀ ಮೈಲೇಜ್.. 6-ಸೀಟರ್, 5 ಲಕ್ಷ.. ಈ Maruti Van ಕೊಳ್ಳಬೇಕೇ..

ಮಾರುತಿ ಸುಜುಕಿ ಇಕೋ (Maruti Suzuki Eeco) ಜನಮೆಚ್ಚಿದ ವ್ಯಾನ್ ಆಗಿದ್ದು, ಎರಡು ಕುಟುಂಬ ಆರಾಮದಾಯಕವಾಗಿ ಕುಳಿತುಕೊಂಡು ಪ್ರಯಾಣ ಮಾಡಬಹುದು. ಇದು ರೂ.5.70 ಲಕ್ಷದಿಂದ ರೂ.6.96 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. ನೀವು ಹೊಚ್ಚ ಹೊಸ 'ಇಕೋ' ವ್ಯಾನ್‌ನ್ನು ಕೊಂಡುಕೊಳ್ಳಲು ಆಲೋಚಿಸಿದ್ದೀರಾ.. ನಾವಿಲ್ಲಿ, ಈ ಕಾರಿನ ಆನ್-ರೋಡ್ ಬೆಲೆ (On-Road Price) ಹಾಗೂ ಇಎಂಐ (EMI) ಆಯ್ಕೆಯ ಕುರಿತಂತೆ ಒಂದಷ್ಟು ತಿಳಿಸಿಕೊಟ್ಟಿದ್ದೇವೆ.
Advertisement

Suzuki: ಹೊಸ ಸುಜುಕಿ ಆಕ್ಸೆಸ್ ಎಲೆಕ್ಟ್ರಿಕ್ ಸ್ಕೂಟರ್ ಶೀಘ್ರ..

ಸುಜುಕಿ ಇಂಡಿಯಾ, 'ಆಕ್ಸೆಸ್ 125' ಸ್ಕೂಟರ್‌ನ್ನು ಮಾರಾಟ ಮಾಡುತ್ತಿದೆ. ಇದು ಶೋ ಸ್ಟಾಪರ್ ಮಾಡೆಲ್ ಆಗಿದ್ದು, ದಾಖಲೆ ಸಂಖ್ಯೆಯಲ್ಲಿಯೂ ಮಾರಾಟವಾಗುತ್ತಿದೆ. ಗ್ರಾಹಕರು ಕೂಡ ನಾ ಮುಂದು - ತಾ ಮುಂದು ಎಂಬಂತೆ ಖರೀದಿ ಮಾಡುತ್ತಿದ್ದಾರೆ. ಸದ್ಯ, ಈ ಸ್ಕೂಟರ್ ಎಲೆಕ್ಟ್ರಿಕ್ ರೂಪದಲ್ಲಿ ಬಿಡುಗಡೆಗೊಳ್ಳಲು ಸಿದ್ದಗೊಂಡಿದೆ. ಬನ್ನಿ, ನೂತನ 'ಸುಜುಕಿ ಇ ಆಕ್ಸೆಸ್'ನ ನಿರೀಕ್ಷಿತ ಬೆಲೆ ಎಷ್ಟಿರಲಿದೆ.. ವಿಶೇಷತೆಗಳೇನು ಎಂಬುದರ ಕುರಿತಂತೆ ಒಂದಷ್ಟು ವಿವರಗಳನ್ನು ತಿಳಿಯೋಣ.