ಜಿದ್ದಾಜಿದ್ದಿಗೆ ಬಿದ್ದಿವೆ ಹೋಂಡಾ & ಹೀರೋ.. ಶೀಘ್ರದಲ್ಲೇ 3 ಹೊಸ..

ಭಾರತವು ಅತಿದೊಡ್ಡ ದ್ವಿಚಕ್ರ ವಾಹನ (Two Wheeler) ಮಾರುಕಟ್ಟೆ ಹೊಂದಿದ್ದು, ಹತ್ತಾರು ಮೋಟಾರ್‌ಸೈಕಲ್‌ಗಳನ್ನು ಮಾರಾಟ ಮಾಡಲಾಗುತ್ತಿದೆ. ಅದರಲ್ಲೂ 100 ಸಿಸಿ ಹಾಗೂ 125 ಸಿಸಿ ಬೈಕ್‌ಗಳು ಹೆಚ್ಚು ಜನಪ್ರಿಯವಾಗಿದ್ದು, ಗ್ರಾಹಕರು ಕೂಡ ನಾಮುಂದು - ತಾಮುಂದು ಎಂಬಂತೆ ಖರೀದಿ ಮಾಡುತ್ತಿದ್ದಾರೆ. ಅತಿ ಶೀಘ್ರದಲ್ಲೇ ಹೋಂಡಾ ಮೋಟಾರ್‌ಸೈಕಲ್ ಇಂಡಿಯಾ ಹಾಗೂ ಹೀರೋ ಮೋಟೊಕಾರ್ಪ್ ಮೂರು ಹೊಚ್ಚ ಹೊಸ ಮೋಟಾರ್‌ಸೈಕಲ್‌ಗಳನ್ನು ಬಿಡುಗಡೆಗೊಳಿಸಲು ತಯಾರಿ ಮಾಡಿಕೊಳ್ಳುತ್ತಿವೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

Oben: ಆಗಸ್ಟ್ 5 ರಂದು ಹೊಸ ಬೈಕ್ ಬಿಡುಗಡೆ: ಸ್ವದೇಶಿ ಬ್ರಾಂಡ್‌

ಭಾರತದ ಪ್ರಮುಖ ಎಲೆಕ್ಟ್ರಿಕ್ (Oben Electric) ಮೋಟಾರ್‌ಸೈಕಲ್ ತಯಾರಕರಾದ ಒಬೆನ್ ಎಲೆಕ್ಟ್ರಿಕ್, ಮುಂದಿನ ಪೀಳಿಗೆಯ ರೋರ್ ಇಝಡ್ (Next-Gen Rorr EZ) ಮೋಟಾರ್‌ ಸೈಕಲ್ ಅನ್ನು ಆಗಸ್ಟ್ 5, 2025 ರಂದು ಬಿಡುಗಡೆ ಮಾಡಲು ಸಜ್ಜಾಗಿದೆ. ಈ ವರ್ಧಿತ ಮಾಡಲ್‌ ಅನ್ನು ಸಿಟಿ ಎಲೆಕ್ಟ್ರಿಕ್ ಪ್ರಯಾಣಕ್ಕೆ ದಿಟ್ಟ ಆಯ್ಕೆಯಾಗಿ ವಿನ್ಯಾಸಗೊಳಿಸಲಾಗಿದೆ. ಸುಧಾರಿತ ತಂತ್ರಜ್ಞಾನ ಮತ್ತು ರೈಡರ್ - ಕೇಂದ್ರಿತ ಫೀಚರ್ಸ್ ಅನ್ನು ಒಳಗೊಂಡಿದೆ. ರೋರ್ ಇಝಡ್‌ನ ಕಮ್ಯೂಟರ್ - ಫಸ್ಟ್ ಡಿಎನ್‌ಎ ಮತ್ತು ಅದರ ಪ್ರಮುಖ ಸಾಮರ್ಥ್ಯಗಳಾದ ಪರ್ಫಾಮೆನ್ಸ್, ವಿಶ್ವಾಸಾರ್ಹತೆ ಮತ್ತು ಪ್ರಾಯೋಗಿಕತೆಗೆ ಹೇಳಿಮಾಡಿಸಿದ ಆಯ್ಕೆಯಾಗಿದೆ ಎಂದು ಕಂಪನಿ ಭರವಸೆ ನೀಡಿದೆ.

627 ಕಿ.ಮೀ ರೇಂಜ್.. 5-ಸೀಟರ್.. ಕಲ್ಲು ಬಂಡೆಯಂತಹ ಹೊಸ ಟಾಟಾ..

ಟಾಟಾ ಹ್ಯಾರಿಯರ್ ಇವಿ (Tata Harrier EV) ಪ್ರಮುಖ ಎಲೆಕ್ಟ್ರಿಕ್ ಎಸ್‌ಯುವಿಯಾಗಿ ಹೊರಹೊಮ್ಮಿದೆ. ಇದು ವಿಶ್ವಾಸಾರ್ಹತೆ ಹಾಗೂ ಉತ್ತಮ ಕಾರ್ಯಕ್ಷಮತೆಯಿಂದಲೂ ಹೆಸರುವಾಸಿಯಾಗಿದೆ. ಅದಕ್ಕೆ ಸಾಕ್ಷಿ ಎಂಬಂತೆ ಬುಕ್ಕಿಂಗ್ ಪ್ರಾರಂಭಿಸಿದ 24 ಗಂಟೆಯಲ್ಲಿ ಬರೋಬ್ಬರಿ 10,000ಕ್ಕೂ ಹೆಚ್ಚಿನ ಮಂದಿ ಆರ್ಡರ್ ಮಾಡಿದ್ದರು. ಈಗಲೂ ಉತ್ತಮ ಸಂಖ್ಯೆಯಲ್ಲಿ ಬುಕ್ಕಿಂಗ್‌ನ್ನು ಪಡೆದುಕೊಳ್ಳುತ್ತಿದ್ದು, 15 ರಿಂದ 30 ವಾರಗಳ ಕಾಯುವಿಕೆ ಅವಧಿಯನ್ನು ಹೊಂದಿದೆ ಎಂಬ ವಿವರಗಳು ಲಭ್ಯವಾಗಿವೆ.

ಆಗಸ್ಟ್‌ನಲ್ಲಿ ಬಿಡುಗಡೆಗೆ ಸಜ್ಜಾಗಿವೆ ಬಹುನಿರೀಕ್ಷಿತ ಕಾರುಗಳು!

ಭಾರತದಲ್ಲಿ ಆಗಸ್ಟ್ 2025 ರಲ್ಲಿ ಹಲವಾರು ಪ್ರಮುಖ ಬ್ರಾಂಡ್‌ಗಳ ಹೊಸ ಕಾರುಗಳ ಬಿಡುಗಡೆ ಮತ್ತು ಅನಾವರಣ ಕಾರ್ಯಕ್ರಮಗಳು ನಡೆಯಲಿವೆ. ಇದರಲ್ಲಿ SUV ಗಳು, ಐಷಾರಾಮಿ ಸೆಡಾನ್‌ಗಳು, ಫೇಸ್‌ಲಿಫ್ಟ್‌ ಮಾಡಲ್‌ಗಳು ಮತ್ತು ಎಲೆಕ್ಟ್ರಿಕ್ ವಾಹನಗಳ ಮಿಶ್ರಣವಿದೆ. ಆಗಸ್ಟ್ 2025 ರಲ್ಲಿ ಎಲೆಕ್ಟ್ರಿಕ್ ವಾಹನಗಳು ಮತ್ತು ಹೊಸ ಹೈಬ್ರಿಡ್ ಮಾದರಿಗಳಿಗೆ ಒತ್ತು ನೀಡುತ್ತಿರುವುದು ಗಮನಾರ್ಹವಾಗಿದೆ, ಜೊತೆಗೆ ನಿಯಮಿತ ಐಷಾರಾಮಿ ಮತ್ತು ಫೇಸ್‌ಲಿಫ್ಟೆಡ್ ಮುಖ್ಯವಾಹಿನಿಯ ಬಿಡುಗಡೆಗಳು ಇರುವುದು ನಿರೀಕ್ಷೆಗಳನ್ನು ಹೆಚ್ಚಿಸಿದೆ. ಬನ್ನಿ ವಿವರವಾಗಿ ತಿಳಿಯೋಣ.
Advertisement

6-ಆಸನಗಳ ಎಸ್‌ಯುವಿಗಳಿವು.. 2 ಫ್ಯಾಮಿಲಿ ಹೋಗಬಹುದು, ಬೆಲೆ ಎಷ್ಟು..

ಮಹೀಂದ್ರಾ ಸ್ಕಾರ್ಪಿಯೊ ಎನ್, ಕಿಯಾ ಕ್ಯಾರೆನ್ಸ್ ಕ್ಲಾವಿಸ್ ಮತ್ತು ಟಾಟಾ ಸಫಾರಿ ಸೇರಿದಂತೆ ಭಾರತೀಯ ಮಾರುಕಟ್ಟೆಯಲ್ಲಿರುವ ಟಾಪ್ ಆರು ಆಸನಗಳ ಎಸ್ಯುವಿಗಳನ್ನು ಅನ್ವೇಷಿಸಿ. ವೈಶಿಷ್ಟ್ಯಗಳು ಮತ್ತು ಬೆಲೆಗಳ ಕುರಿತು ವಿವರಗಳನ್ನು ಕಂಡುಕೊಳ್ಳಿ.

ಆರು ಏರ್‌ಬ್ಯಾಗ್‌ಗಳ ಕಡ್ಡಾಯ ನಿಯಮ ಪ್ರಯಾಣಿಕರಿಗೆ ಸಹಾಯಕವಾಗಲಿದೆಯೇ?

ಪ್ರಯಾಣಿಕ ಕಾರುಗಳಲ್ಲಿ ಆರು ಏರ್‌ಬ್ಯಾಗ್‌ಗಳನ್ನು ಅಳವಡಿಸುವ ಬಗ್ಗೆ ಭಾರತ ಸರ್ಕಾರವು ಒತ್ತು ನೀಡುತ್ತಿದ್ದು, ಅಪಘಾತಗಳಲ್ಲಿ ಪ್ರಯಾಣಿಕರನ್ನು ರಕ್ಷಿಸುವ ಮೂಲಕ ಸುರಕ್ಷತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಅಪಘಾತಗಳ ಸಮಯದಲ್ಲಿ ಗಂಭೀರ ಗಾಯಗಳನ್ನು ಕಡಿಮೆ ಮಾಡಲು ಎಲ್ಲಾ ಪ್ರಯಾಣಿಕ ವಾಹನಗಳಲ್ಲಿ ಕನಿಷ್ಠ ಆರು ಏರ್‌ಬ್ಯಾಗ್‌ಗಳನ್ನು (ಮುಂಭಾಗದ ಚಾಲಕ ಮತ್ತು ಪ್ರಯಾಣಿಕರ ಏರ್‌ ಬ್ಯಾಗ್‌ಗಳು, ಸೈಡ್ ಏರ್‌ಬ್ಯಾಗ್‌ಗಳು ಮತ್ತು ಕರ್ಟನ್ ಏರ್‌ ಬ್ಯಾಗ್‌ಗಳು ಸೇರಿದಂತೆ) ಕಡ್ಡಾಯಗೊಳಿಸಲು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಕಠಿಣ ನಿರ್ಣಯ ತೆದೆಗುಕೊಂಡಿದೆ.

Hero: 60 ಕಿ.ಮೀ ಮೈಲೇಜ್, ಈ ಅಗ್ಗದ ಹೀರೋ ಸ್ಕೂಟರ್‌ಗೆ ಮುಗಿಬಿದ್ದ..

ಹೀರೋ ಡೆಸ್ಟಿನಿ 125 (Hero Destini 125) ಜನಪ್ರಿಯ ಸ್ಕೂಟರ್ ಆಗಿದ್ದು, ಉತ್ತಮ ಕಾರ್ಯಕ್ಷಮತೆ ಹಾಗೂ ಆಕರ್ಷಕ ವೈಶಿಷ್ಟ್ಯಗಳಿಗೂ ಹೆಸರುವಾಸಿಯಾಗಿದೆ. ಗ್ರಾಹಕರು ಕೂಡ ನಾಮುಂದು - ತಾಮುಂದು ಎಂಬಂತೆ ಖರೀದಿ ಮಾಡುತ್ತಿದ್ದಾರೆ. ಅದಕ್ಕೆ ಈ ಜೂನ್ ತಿಂಗಳು ಹೊರತಾಗಿಲ್ಲ. ಒಟ್ಟು 20,140 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ. 2024ರ ಇದೇ ಅವಧಿಯಲ್ಲಿ 11,140 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿ ಸಂಖ್ಯೆಯನ್ನು ಲೆಕ್ಕ ಹಾಕಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ 80.79% ಪ್ರಗತಿಯಾಗಿದೆ.

MG Windsor: ಎಂಜಿ ಮೋಟಾರ್ ದಿಢೀರ್ ಶಾಕ್!

ಎಂಜಿ ವಿಂಡ್ಸರ್ (MG Windsor) ಪ್ರಸ್ತುತ ಭಾರತದ ಪ್ರಮುಖ ಎಲೆಕ್ಟ್ರಿಕ್ ಕಾರುಗಳಲ್ಲಿ ಒಂದಾಗಿದೆ, ಸೆಪ್ಟೆಂಬರ್ 2024 ರಲ್ಲಿ ಬಿಡುಗಡೆಯಾದಾಗಿನಿಂದ 30,000 ಕ್ಕೂ ಹೆಚ್ಚು ಕಾರುಗಳು ಮಾರಾಟವಾಗಿವೆ. ಇಂತಹ ಬಹುಬೇಡಿಕೆಯ ಎಲೆಕ್ಟ್ರಿಕ್ ಕಾರು ಈಗ ಬೆಲೆ ಏರಿಕೆಯನ್ನು ಪಡೆದುಕೊಂಡಿದೆ. ಟಾಪ್-ಸ್ಪೆಕ್ ವಿಂಡ್ಸರ್ ಇವಿ ಎಸೆನ್ಸ್ ಪ್ರೊ ವೇರಿಯೆಂಟ್ ಬೆಲೆಯನ್ನು ರೂ.21,000 ರಷ್ಟು ಹೆಚ್ಚಿಸಿದ್ದು, ಅದರ ಹೊಸ ಎಕ್ಸ್-ಶೋರೂಂ ಬೆಲೆ ರೂ.18.31 ಲಕ್ಷಕ್ಕೆ ತಲುಪಿದೆ. ಈ ಬೆಲೆ ಏರಿಕೆ ಎಸೆನ್ಸ್ ಪ್ರೊ ವೇರಿಯೆಂಟ್‌ಗೆ ಮಾತ್ರ ಅನ್ವಯಿಸುತ್ತದೆ.
Advertisement

Hero Xoom 160: ಬಹುನಿರೀಕ್ಷಿತ ಹೀರೋ ಜೂಮ್ 160 ಸ್ಕೂಟರ್‌ಗೆ..

ನಂ.1 ದ್ವಿಚಕ್ರ ವಾಹನ (Two-Wheeler) ತಯಾರಕ ಕಂಪನಿಯಾಗಿ ಹೀರೋ ಮೋಟೋಕಾರ್ಪ್ (Hero MotoCorp) ಜನಪ್ರಿಯತೆ ಗಳಿಸಿದೆ. ಮೋಟಾರ್‌ಸೈಕಲ್ ವಿಭಾಗದಲ್ಲಿ ಮುಂಚೂಣಿಯಾಗಿದೆ. ಸ್ಕೂಟರ್ ವಿಭಾಗದಲ್ಲೂ ತನ್ನದೇಯಾದ ವಿಶಿಷ್ಟವಾದ ಛಾಪನ್ನು ಮೂಡಿಸಲು ಹಣಿಯಾಗುತ್ತಿದೆ. ಕಳೆದ ಜನವರಿಯಲ್ಲಿ ಮುಕ್ತಾಯಗೊಂಡ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋದಲ್ಲಿ ಹೊಚ್ಚ ಹೊಸ ಜೂಮ್ 160 (Xoom 160) ಮ್ಯಾಕ್ಸಿ ಸ್ಕೂಟರ್‌ನ್ನು ಬಿಡುಗಡೆಗೊಳಿಸಿತ್ತು. ಆದರೆ, 6 ತಿಂಗಳು ಕಳೆದರೂ ಬುಕ್ಕಿಂಗ್ ಹಾಗೂ ವಿತರಣೆಯನ್ನು ಶುರು ಮಾಡಿರಲಿಲ್ಲ.

ವರಮಹಾಲಕ್ಷ್ಮಿ ಹಬ್ಬ.. ಮನೆಗೆ ಹೊಸ ಸ್ಕೂಟರ್ ತರಬೇಕೇ.. ಇವು ಬೆಸ್ಟ್..

ಇದೇ ಆಗಸ್ಟ್ 8ಕ್ಕೆ ವರಮಹಾಲಕ್ಷ್ಮಿ (Varalakshmi) ಹಬ್ಬ ಬಂದಿದೆ. ಈ ದಿನ ಚಿನ್ನದ ಬದಲಿಗೆ ದಿನಬಳಕೆಗಾಗಿ ಹೊಚ್ಚ ಹೊಸ ಸ್ಕೂಟರ್‌ವೊಂದನ್ನು ಖರೀದಿ ಮಾಡಲು ಆಲೋಚಿಸಿದ್ದೀರಾ.. ಹಾಗಾದರೆ ರೂ.1 ಲಕ್ಷಕ್ಕಿಂತ ಕಡಿಮೆ (ಎಕ್ಸ್-ಶೋರೂಂ) ಬೆಲೆಯಲ್ಲಿ ಸಿಗುವ ಹೋಂಡಾ ಆಕ್ಟಿವಾ 125, ಸುಜುಕಿ ಆಕ್ಸೆಸ್ 125, ಟಿವಿಎಸ್ ಜುಪಿಟರ್ 125, ಹೀರೋ ಡೆಸ್ಟಿನಿ 125 ಹಾಗೂ ಹೋಂಡಾ ಕ್ಯೂಸಿ1 ಸ್ಕೂಟರ್‌ಗಳು ಅತ್ಯುತ್ತಮವಾದ ಆಯ್ಕೆಯಾಗಲಿವೆ. ನಾವಿಲ್ಲಿ ಇವುಗಳ ಬೆಲೆ ಹಾಗೂ ವಿಶೇಷತೆಗಳ ಕುರಿತಂತೆ ಒಂದಷ್ಟು ವಿವರಗಳನ್ನು ತಿಳಿಸಿಕೊಟ್ಟಿದ್ದೇವೆ.

Hero Splendor: ಅಪ್ಪ-ಮಗನ ಸಾಹಸಕ್ಕೆ ಮೆಚ್ಚಿ 13 ಲಕ್ಷ ಮೌಲ್ಯದ ಬೈಕ್

ಮಂಗಳೂರು ಮೂಲದ ತಂದೆ-ಮಗ ಜೋಡಿಯಾಗಿ ಹೀರೋ ಕಂಪನಿಯ ಮನಗೆದ್ದು 13 ಲಕ್ಷ ಮೌಲ್ಯದ ಲಿಮಿಟೆಡ್ ಎಡಿಷನ್ ಸೂಪರ್‌ಬೈಕ್ ಅನ್ನು ಕಂಪನಿಯಿಂದ ಉಡುಗೊರೆಯಾಗಿ ಪಡೆದಿದ್ದಾರೆ. ಇವರಿಬ್ಬರು ಸುಧೀರ್ಘ ಸವಾರಿ ಮಾಡಿ ಬೈಕಿಂಗ್ ಸಮುದಾಯವನ್ನು ಆಕರ್ಷಿಸಿದ ನಂತರ ಸೋಷಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತವಾಗಿತ್ತು. ಅವರ ಸಾಹಸದಿಂದ ಬ್ರ್ಯಾಂಡ್‌ಗೆ ಭರ್ಜರಿ ಜನಪ್ರಿಯತೆ ಕೂಡ ಸಿಕ್ಕಿದೆ. ಹೀರೋ ಜನಪ್ರಿಯತೆ ಗಳಿಸುತ್ತಿದ್ದಂತೆ ಇದನ್ನು ಗಮನಿಸಿ, ಹೀರೋ ಸೆಂಟೆನಿಯಲ್ ಎಡಿಷನ್ ಸೂಪರ್‌ಬೈಕ್ ಅನ್ನು ಉಡುಗೊರೆಯಾಗಿ ನೀಡಿ ಅವರನ್ನು ಗೌರವಿಸಿದೆ. ಅಷ್ಟಕ್ಕೂ ಅವರು ಮಾಡಿದ ಸಾಹಸವಾದ್ರು ಏನು?

Ventilated Seats: ಕೈಗೆಟುಕುವ ವೆಂಟಿಲೇಟೆಡ್ ಸೀಟುಗಳ ಕಾರುಗಳು

ಹೊಸ ಸಮೀಕ್ಷೆಯೊಂದು ವೆಂಟಿಲೇಟೆಡ್ ಸೀಟ್‌ಗಳು (Ventilated Seats) ಹೆಚ್ಚು ಅಪೇಕ್ಷಿತ ವೈಶಿಷ್ಟ್ಯವಾಗಿದೆ ಎಂದು ಬಹಿರಂಗಪಡಿಸಿದೆ. ಹಾಗಾಗಿ ಜನರ ಆಸಕ್ತಿ ಮೇರೆಗೆ ಭಾರತದಲ್ಲಿ ರೂ.15 ಲಕ್ಷಕ್ಕಿಂತ ಕಡಿಮೆ ಬೆಲೆಯ (ಎಕ್ಸ್-ಶೋರೂಂ) ವೆಂಟಿಲೇಟೆಡ್ ಸೀಟುಗಳನ್ನು ಹೊಂದಿರುವ ಟಾಪ್ 5 ಅತ್ಯಂತ ಕೈಗೆಟುಕುವ ಕಾರುಗಳನ್ನು ಇಲ್ಲಿ ಪಟ್ಟಿ ಮಾಡಿದ್ದೇವೆ. ಈ ಪಟ್ಟಿಯು ಇತ್ತೀಚಿನ 2025 ರಲ್ಲಿ ನಮಗೆ ಲಭ್ಯವಿರುವ ಕಾರುಗಳನ್ನು ಒಳಗೊಂಡಿದೆ. ವೆಂಟಿಲೇಟೆಡ್ ಸೀಟ್‌ಗಳಂತಹ ಪ್ರೀಮಿಯಂ ಫೀಚರ್ಸ್‌ಗಳಲ್ಲಿ ರಾಜಿ ಮಾಡಿಕೊಳ್ಳದೆ ಬಜೆಟ್ - ಪ್ರಜ್ಞೆಯ ಖರೀದಿದಾರರಿಗೆ ಸೌಕರ್ಯವನ್ನು ಹೆಚ್ಚಿಸುವ ಎಲೆಕ್ಟ್ರಿಕ್, ಕಾಂಪ್ಯಾಕ್ಟ್ SUV ಗಳು ಮತ್ತು ಸೆಡಾನ್‌ಗಳ ಒಟ್ಟಾರೆ ವಿವರ ಇಲ್ಲಿದೆ.
Advertisement

ಕನ್ನಡಿಗರ ನೆಚ್ಚಿನ ಬಂಡಿಗಳಿವು.. ಸ್ವಿಫ್ಟ್, ಪಂಚ್ & ವ್ಯಾಗನ್ಆರ್..

ಕರ್ನಾಟಕದ ನಗರ ಅಥವಾ ಗ್ರಾಮೀಣ ಭಾಗದ ಜನರಿಗೆ ನಿಮಿಷ್ಟದ ಕಾರು ಯಾವುದೆಂದು ಪ್ರಶ್ನಿಸಿದರೆ ತಕ್ಷಣ ಬರುವ ನೇರ ಉತ್ತರವೇ ಮಾರುತಿ ಸುಜುಕಿ ಸ್ವಿಫ್ಟ್, ಟಾಟಾ ಪಂಚ್, ಮಾರುತಿ ಸುಜುಕಿ ವ್ಯಾಗನ್ಆರ್ ಎಂದು. ಅಷ್ಟರ ಮಟ್ಟಿಗೆ ಜನಜನಿತವಾಗಿ ಬಿಟ್ಟಿವೆ. ಇವುಗಳನ್ನು ಮಧ್ಯಮ ಹಾಗೂ ಶ್ರೀಮಂತ ವರ್ಗದ ಗ್ರಾಹಕರು ಕೂಡ ಇಷ್ಟಪಟ್ಟು ಕೊಂಡುಕೊಳ್ಳುತ್ತಿದ್ದು, ಉತ್ತಮ ಸಂಖ್ಯೆಯಲ್ಲಿಯೂ ಮಾರಾಟವಾಗುತ್ತಿವೆ. ಬನ್ನಿ, ಈ ಕಾರುಗಳನ್ನು ಕನ್ನಡಿಗರೇಕೆ ಮೆಚ್ಚಿಕೊಂಡಿದ್ದಾರೆ ಎಂಬುದರ ಕುರಿತಂತೆ ಒಂದಷ್ಟು ವಿವರಗಳನ್ನು ತಿಳಿಯೋಣ.

ಕಾರಿನ ಜೀವಿತಾವಧಿಯನ್ನು ಹೆಚ್ಚಿಸುವ ನಿರ್ವಹನಾ ಸಲಹೆಗಳು

ನಿಮ್ಮ ಕಾರಿನ ಜೀವಿತಾವಧಿಯನ್ನು ಹೆಚ್ಚಿಸಲು ಮತ್ತು ವಿಶ್ವಾಸಾರ್ಹ, ದೀರ್ಘಕಾಲೀನ ಪರ್ಫಾಮೆನ್ಸ್ ಖಚಿತಪಡಿಸಿಕೊಳ್ಳಲು, ನಿಯಮಿತ ನಿರ್ವಹಣೆ ಅತ್ಯಗತ್ಯ. ತಜ್ಞರು ಶಿಫಾರಸು ಮಾಡಿದ ಅತಿ ಪ್ರಮುಖ ಸಲಹೆಗಳು ಇಲ್ಲಿವೆ. ಈ ನಿರ್ವಹಣಾ ಸಲಹೆಗಳನ್ನು ನಿರಂತರವಾಗಿ ಅನುಸರಿಸುವ ಮೂಲಕ, ನೀವು ನಿಮ್ಮ ಕಾರಿನ ಜೀವಿತಾವಧಿಯನ್ನು ಹೆಚ್ಚಿಸಬಹುದು. ದುಬಾರಿ ದುರಸ್ತಿಗಳನ್ನು ತಪ್ಪಿಸಬಹುದು. ಹಾಗೆಯೇ ಹಲವು ವರ್ಷಗಳು ಸುರಕ್ಷಿತ, ಹೆಚ್ಚು ಆನಂದದಾಯಕ ಚಾಲನೆಯನ್ನು ಆನಂದಿಸಬಹುದು. ಬನ್ನಿ ನೀವು ಪಾಲಿಸಬೇಕಾದ ಅಗತ್ಯ ಸಲಹೆಗಳನ್ನು ಇಲ್ಲಿ ವಿವರವಾಗಿ ನೋಡೋಣ.

34 Km ಮೈಲೇಜ್.. ಬಡವರ ಕಾರಿದು.. ಮಾರುತಿ ಆಲ್ಟೊ ಕೆ10 ಖರೀದಿಸಬೇಕೇ..

ಮಾರುತಿ ಸುಜುಕಿ ಆಲ್ಟೊ ಕೆ10 (Maruti Suzuki Alto K10) ಜನಮೆಚ್ಚಿನ ಹ್ಯಾಚ್‌ಬ್ಯಾಕ್ ಎಂದೇ ಹೆಸರುವಾಸಿಯಾಗಿದ್ದು, ಶ್ರೀಸಾಮಾನ್ಯರಿಗೆ ಹೇಳಿ ಮಾಡಿಸಿದ ರೀತಿಯಲ್ಲಿದೆ. ಅಗ್ಗದ ಬೆಲೆಯಲ್ಲಿ ಲಭ್ಯವಿದ್ದರೂ ಹತ್ತಾರು ಆಕರ್ಷಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ನೀವು ಹೊಚ್ಚ ಹೊಸ 'ಆಲ್ಟೊ ಕೆ10'ನ್ನು ಖರೀದಿ ಮಾಡಲು ಪ್ಲ್ಯಾನ್ ಮಾಡಿದ್ದೀರಾ.. ನಾವಿಲ್ಲಿ, ಈ ಹ್ಯಾಚ್‌ಬ್ಯಾಕ್‌ನ ಆನ್-ರೋಡ್ ಬೆಲೆ (On-Road Price) ಮತ್ತು ಇಎಂಐ (EMI) ಆಯ್ಕೆಯ ಕುರಿತಂತೆ ಸಂಕ್ಷಿಪ್ತವಾಗಿ ತಿಳಿಸಿಕೊಟ್ಟಿದ್ದೇವೆ.

Ather: ಎಲೆಕ್ಟ್ರಿಕ್ ವಾಹನಗಳ ಉತ್ಪಾದನಾ ವ್ಯವಸ್ಥೆ ಬಲಪಡಿಸಲು ಒಪ್ಪಂದ

ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆ (DPIIT)ಯು, ಭಾರತದ ಸ್ವಚ್ಛ ಚಲನಶೀಲತೆ (clean mobility) ಮತ್ತು ಮುಂದುವರಿದ ಉತ್ಪಾದನಾ ವಲಯಗಳ ಬೆಳವಣಿಗೆಯನ್ನು ವೇಗಗೊಳಿಸಲು ಭಾರತೀಯ ಎಲೆಕ್ಟ್ರಿಕ್ ವಾಹನ ತಯಾರಕರಾದ ಎಥರ್ ಎನರ್ಜಿ ಲಿಮಿಟೆಡ್‌ನೊಂದಿಗೆ ಒಪ್ಪಂದಕ್ಕೆ (MoU) ಸಹಿ ಹಾಕಿದೆ. 50 ಕ್ಕೂ ಹೆಚ್ಚು ನಾವೀನ್ಯತೆ - ಕೇಂದ್ರಿತ ಸ್ಟಾರ್ಟ್‌ಅಪ್‌ಗಳ ಒಕ್ಕೂಟವಾದ ಸ್ಟಾರ್ಟ್‌ಅಪ್ ಪಾಲಿಸಿ ಫೋರಮ್ (SPF) ನೇತೃತ್ವದ ಬಿಲ್ಡ್ ಇನ್ ಭಾರತ್ ಉಪಕ್ರಮದ ಭಾಗವಾಗಿ ಈ ಸಹಯೋಗವನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದೆ.
Advertisement

ಹ್ಯುಂಡೈ ಕ್ರೆಟಾ ಪ್ರತಿಸ್ಪರ್ಧಿ.. ಸದ್ದಿಲ್ಲದೇ ಈ ಎಂಜಿ ಕಾರಿನ ಬೆಲೆ..

ಬಲವಾದ ಮಾರುಕಟ್ಟೆ ಬೇಡಿಕೆಯ ಮಧ್ಯೆ, ಎಂಜಿ ಮೋಟಾರ್ ಇಂಡಿಯಾ ಆಸ್ಟರ್ ಎಸ್‌ಯುವಿ ಬೆಲೆಗಳನ್ನು ಪರಿಷ್ಕರಿಸಿದೆ, ₹9,000 ರಿಂದ ₹19,000 ಕ್ಕೆ ಹೆಚ್ಚಿಸಿದೆ, ಇದು ತಕ್ಷಣದಿಂದ ಜಾರಿಗೆ ಬರುತ್ತದೆ.

ಸನ್‌ರೂಫ್ ಇಷ್ಟ ಆದರೆ ಬಜೆಟ್ ಇಲ್ಲವೇ? ಆಫ್ಟರ್ ಮಾರ್ಕೆಟ್ ಹೋಗಬೇಡಿ

ಕಾರು ಮಾರುಕಟ್ಟೆಯಲ್ಲಿ ಈ ಆಫ್ಟರ್ ಮಾರ್ಕೆಟ್ ಎಂಬ ಪದವನ್ನು ಹೆಚ್ಚಾಗಿ ಕೇಳುತ್ತೇವೆ. ಅಷ್ಟಕ್ಕೂ ಆಫ್ಟರ್ ಮಾರ್ಕೆಟ್ ಎಂದರೇನು? ವಾಹನಗಳನ್ನು ಕಂಪನಿ ಮಾರಾಟ ಮಾಡಿದ ಬಳಿಕ ಕಾರಿಗೆ ಬೇಕಾಗುವ ಹೆಚ್ಚುವರಿ ಅಪ್‌ಗ್ರೇಡ್‌ಗಳನ್ನು ಕಂಪನಿಯಂತೆಯೇ ನಕಲು ಮಾಡಲಾದ ಮಾರುಕಟ್ಟೆಯನ್ನು ಆಫ್ಟರ್ ಮಾರ್ಕೆಟ್ ಎಂದು ಕರೆಯುತ್ತಾರೆ. ಈಗ ವಿಯಷಕ್ಕೆ ಬಂದರೆ ಆಫ್ಟರ್ ಮಾರ್ಕೆಟ್ ಮೂಲಕ ಸನ್‌ರೂಫ್ ಏಕೆ ಅಪ್‌ಗ್ರೇಡ್ ಮಾಡಬಾರದು? ಸುರಕ್ಷತೆ, ಬಾಳಿಕೆಯಿಲ್ಲದಂತಹ ಹಲವಾರು ಪ್ರಮುಖ ಕಾರಣಗಳಿವೆ. ಹಾಗಾಗಿ ಇದನ್ನು ಶಿಫಾರಸು ಮಾಡುವುದಿಲ್ಲ. ಇದರಿಂದ ಎದುರಾಗುವ ಸಮಸ್ಯೆಗಳನ್ನು ವಿವರವಾಗಿ ನೋಡೋಣ.

Eicher: ಹೊಸ ಲಘು-ಮಧ್ಯಮ ಶ್ರೇಣಿಯ ಟ್ರಕ್‌ಗಳನ್ನು ಪರಿಚಯಿಸಿದ ಐಷರ್

VE ಕಮರ್ಷಿಯಲ್ ವೆಹಿಕಲ್ಸ್‌ನ ವ್ಯಾಪಾರ ಘಟಕವಾದ ಐಷರ್ (Eicher) ಟ್ರಕ್ಸ್ ಮತ್ತು ಬಸ್‌ಗಳು, ಭಾರತದ ಲಘು ಮತ್ತು ಮಧ್ಯಮ (LMD) ಟ್ರಕ್ಕಿಂಗ್ ವಿಭಾಗದಲ್ಲಿ ಐಷರ್ ಪ್ರೊ ಪ್ಲಸ್ ಸಿರೀಸನ್ನು ಪರಿಚಯಿಸಿದೆ. ಈ ಐಷರ್ ಪ್ರೊ ಹೊಸ ಶ್ರೇಣಿಯು ಹವಾನಿಯಂತ್ರಿತ ಕ್ಯಾನಿನ್‌ನೊಂದಿಗೆ ಬರುತ್ತದೆ. ಹೆವಿ ಪೇಲೋಡ್, ಉತ್ತಮ ಮೈಲೇಜ್ ಮತ್ತು ಬುದ್ಧಿವಂತ ಸಂಪರ್ಕ ಸೇರಿದಂತೆ ತನ್ನ ವಿಭಾಗದಲ್ಲಿ ಗಮನಾರ್ಹ ಪ್ರಗತಿಯನ್ನು ತರುತ್ತದೆ ಎಂದು ಕಂಪನಿ ತಿಳಿಸಿದೆ. ವರ್ಧಿತ ಲಾಭದಾಯಕತೆಯನ್ನು ನೀಡಲು ವಿನ್ಯಾಸಗೊಳಿಸಲಾದ ಈ ಶ್ರೇಣಿಯು ಈ ಕೆಳಗಿನ ವೈಶಿಷ್ಟ್ಯಗಳನ್ನು ಹೊಂದಿದೆ.

Hero: ಈ ಹೀರೋ ಬೈಕ್‌ಗೆ ಬೇಡಿಕೆ ಹೆಚ್ಚಾಯಿತು.. 100% ಪ್ರಗತಿ, ಬೆಲೆ..

ಹೀರೋ ಪ್ಯಾಶನ್ ಪ್ಲಸ್ (Hero Passion Plus) ವಿಶ್ವಾಸಾರ್ಹ ಪ್ರಯಾಣಿಕ ಮೋಟಾರ್‌ಸೈಕಲ್ ಆಗಿದೆ. ಗ್ರಾಹಕರು ಕೂಡ ನಾಮುಂದು - ತಾಮುಂದು ಎಂಬಂತೆ ಖರೀದಿ ಮಾಡುತ್ತಿದ್ದಾರೆ. ಕಳೆದ ತಿಂಗಳು (ಜೂನ್ - 2025) ಬರೋಬ್ಬರಿ 26,249 ಯುನಿಟ್‌ಗಳನ್ನು ಮಾರಾಟಗೊಳಿಸಲಾಗಿದೆ. 2024ರ ಇದೇ ಅವಧಿಯಲ್ಲಿ 13,100 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿ ಸಂಖ್ಯೆಗೆ ಹೋಲಿಕೆ ಮಾಡಿದರೆ, ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ 100.37% ಪ್ರಗತಿಯಾಗಿದೆ.
Advertisement

ವರಮಹಾಲಕ್ಷ್ಮಿ ಹಬ್ಬ.. ಈ ಫೇಮಸ್ ಕಾರುಗಳನ್ನು ತೆಗೆದುಕೊಳ್ಳಬಹುದು...

ವರಮಹಾಲಕ್ಷ್ಮಿ (Varalakshmi) ಹಬ್ಬ ಸಮೀಪಿಸುತ್ತಿದ್ದು, ಇದೇ ಆಗಸ್ಟ್ 8 ರಂದು ಸಂಭ್ರಮ - ಸಡಗರದಿಂದ ಆಚರಿಸಲಾಗುತ್ತಿದೆ. ನೀವು ಹಬ್ಬಕ್ಕೆ ಹೊಚ್ಚ ಹೊಸ ಕಾರೊಂದನ್ನು ಮನೆಗೆ ತರಲು ಆಲೋಚಿಸಿದ್ದೀರಾ.. ಹಾಗಾದರೆ, ರೂ.7 ಲಕ್ಷಕ್ಕಿಂತ ಕಡಿಮೆ ಬೆಲೆಯಲ್ಲಿ ಖರೀದಿಗೆ ದೊರೆಯುವ ರೆನಾಲ್ಟ್ ಟ್ರೈಬರ್, ಟಾಟಾ ಆಲ್ಟ್ರೋಜ್, ಹ್ಯುಂಡೈ ಎಕ್ಸ್‌ಟರ್, ಟೊಯೊಟಾ ಗ್ಲ್ಯಾನ್ಜಾ ಹಾಗೂ ಮಾರುತಿ ಸುಜುಕಿ ಆಲ್ಟೊ ಕೆ10 ಕಾರುಗಳು ಅತ್ಯುತ್ತಮವಾದ ಆಯ್ಕೆಯಾಗಲಿವೆ. ನಾವಿಲ್ಲಿ ಇವುಗಳ ಬೆಲೆ ಹಾಗೂ ವಿಶೇಷತೆಗಳ ಕುರಿತಂತೆ ಸಂಕ್ಷಿಪ್ತವಾಗಿ ತಿಳಿಸಿಕೊಟ್ಟಿದ್ದೇವೆ.

Kinetik DX EV: ಐಕಾನಿಕ್ ಕೈನೆಟಿಕ್ ಫ್ಯಾಮಿಲಿ ಸ್ಕೂಟರ್ ಬಿಡುಗಡೆ

ಕೈನೆಟಿಕ್ ಡಿಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್ (Kinetik DX EV) ಭಾರತದಲ್ಲಿ ಅಧಿಕೃತವಾಗಿ ಬಿಡುಗಡೆಯಾಗಿದ್ದು, 1980 ಮತ್ತು 1990 ರ ದಶಕದ ಐಕಾನಿಕ್ ಕೈನೆಟಿಕ್ ಡಿಎಕ್ಸ್‌ನ ಪರಂಪರೆಯನ್ನು ಮುಂದುವರಿಸಲು ಆಧುನಿಕ ಎಲೆಕ್ಟ್ರಿಕ್ ಅವತಾರದಲ್ಲಿ ಮತ್ತೆ ಬಿಡುಗಡೆ ಮಾಡಲಾಗಿದೆ. ಹೊಸ ಸ್ಕೂಟರ್ ನಗರ ಪ್ರಯಾಣಿಕರು ಮತ್ತು ಫ್ಯಾಮಿಲಿಗಳನ್ನು ಗುರಿಯಾಗಿರಿಸಿಕೊಂಡಿದ್ದು, ರೆಟ್ರೊ ವಿನ್ಯಾಸ ಅಂಶಗಳನ್ನು ಸಮಕಾಲೀನ ಎಲೆಕ್ಟ್ರಿಕ್ ತಂತ್ರಜ್ಞಾನ ಮತ್ತು ಸ್ಮಾರ್ಟ್ ವೈಶಿಷ್ಟ್ಯಗಳೊಂದಿಗೆ ಸಂಯೋಜಿಸುತ್ತದೆ. ಈ ಹೊಸ ಕೈನೆಟಿಕ್ ಡಿಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್‌ನ ಪ್ರಮುಖ ವಿವರಗಳು ಇಲ್ಲಿವೆ.

226 Km ಮೈಲೇಜ್.. ಅತಿ ಶೀಘ್ರದಲ್ಲೇ ವಿಶ್ವದ ಮೊಟ್ಟ ಮೊದಲ TVS..

ಟಿವಿಎಸ್ ಜೂಪಿಟರ್ (TVS Jupiter) ವಿಶ್ವಾಸಾರ್ಹ ಸ್ಕೂಟರ್ ಎಂದೇ ಹೆಸರುವಾಸಿಯಾಗಿದೆ. ಇದು ಅಚ್ಚುಕಟ್ಟಾದ ವಿನ್ಯಾಸ ಹಾಗೂ ಹತ್ತಾರು ವೈಶಿಷ್ಟ್ಯಗಳನ್ನು ಪಡೆದುಕೊಂಡಿದ್ದು, ಗ್ರಾಹಕರು ಕೂಡ ಮುಗಿಬಿದ್ದು ಖರೀದಿ ಮಾಡುತ್ತಿದ್ದಾರೆ. ಅದಕ್ಕೆ ತಕ್ಕಂತೆ ಈ ಜೂನ್ ತಿಂಗಳಲ್ಲೂ ಬರೋಬ್ಬರಿ 1,07,980 ಯುನಿಟ್‌ಗಳನ್ನು ಮಾರಾಟಗೊಳಿಸಲಾಗಿದೆ. ಇದರೊಂದಿಗೆ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ 49.76% ಪ್ರಗತಿಯಾಗಿದೆ. 2024ರ ಇದೇ ಅವಧಿಯಲ್ಲಿ 72,100 ಯುನಿಟ್‌ಗಳನ್ನು ಮಾರಾಟ ಮಾಡಲಾಗಿತ್ತು.

ಯಾವುದೇ ಎಸ್‌ಯುವಿ ಇದುವರೆಗೆ ಸಾಧಿಸದ ಸಾಧನೆ!

ಪ್ರಮುಖ ಕಾರು ತಯಾರಕ ಕಂಪನಿಯಾದ ಸ್ಕೋಡಾ ಆಟೋ ಇಂಡಿಯಾ (Skoda Auto India), ತನ್ನ ಸ್ಕೋಡಾ ಕೊಡಿಯಾಕ್ (Skoda Kodiaq) ಮೂಲಕ ಮೌಂಟ್ ಎವರೆಸ್ಟ್‌ನ ಉತ್ತರ ಮುಖದ ಬೇಸ್ ಕ್ಯಾಂಪ್ ಅನ್ನು ತಲುಪಿದ ಭಾರತದಿಂದ ಮೊದಲ ಪೆಟ್ರೋಲ್ ಚಾಲಿತ SUV ಆಗಿ ಇತಿಹಾಸ ನಿರ್ಮಿಸಿದೆ. ಈ ಅದ್ಭುತ ಸಾಧನೆಯನ್ನು ಈಗ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಮತ್ತು ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಎರಡೂ ಅಧಿಕೃತವಾಗಿ ಗುರುತಿಸಿವೆ ಎಂದು ಸ್ಕೋಡಾ ಕಂಪನಿ ಹೇಳಿದೆ.
Advertisement

33 Km ಮೈಲೇಜ್, ಬೆಲೆಯೂ ಅಗ್ಗ, 5-ಸ್ಟಾರ್ ಸೇಫ್ಟಿಯ Maruti Dzire..

ಮಾರುತಿ ಸುಜುಕಿ ಡಿಜೈರ್ (Maruti Suzuki Dzire) ಪ್ರಮುಖ ಸೆಡಾನ್ ಆಗಿದೆ. ತುಂಬಾ ಅಚ್ಚುಕಟ್ಟಾದ ವಿನ್ಯಾಸ ಹಾಗೂ ಹತ್ತಾರು ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಸುರಕ್ಷತೆಯ ದೃಷ್ಟಿಯಿಂದ ಗ್ಲೋಬಲ್ ಎನ್‌ಸಿಎಪಿ ಮತ್ತು ಭಾರತ್ ಎನ್‌ಸಿಎಪಿಯಿಂದ 5-ಸ್ಟಾರ್ ಸೇಫ್ಟಿ ರೇಟಿಂಗ್‌ನ್ನು ಪಡೆದಿದೆ. ನೀವು ಹೊಚ್ಚ ಹೊಸ 'ಡಿಜೈರ್' ಕಾರನ್ನು ಖರೀದಿ ಮಾಡಲು ಪ್ಲ್ಯಾನ್ ಮಾಡಿದ್ದೀರಾ.. ನಾವಿಲ್ಲಿ, ಈ ಸೆಡಾನ್‌ನ ಆನ್-ರೋಡ್ ಬೆಲೆ (On-Road Price) ಮತ್ತು ಇಎಂಐ (EMI) ಆಯ್ಕೆಯ ಕುರಿತಂತೆ ಸಂಕ್ಷಿಪ್ತವಾಗಿ ತಿಳಿಸಿಕೊಟ್ಟಿದ್ದೇವೆ.