Tata: ಸದ್ದಿಲ್ಲದೇ ಟಾಟಾದ ಹೊಸ ಕಾರಿನ ಪರೀಕ್ಷೆ.. ಶೀಘ್ರ ಬಿಡುಗಡೆ?
ಆಟೋಮೊಬೈಲ್ಸ್
- 1 year, 6 month, 17 days ago
ಟಾಟಾ ಆಲ್ಟ್ರೋಜ್ (Tata Altroz) ಪ್ರೀಮಿಯಂ ಹ್ಯಾಚ್ಬ್ಯಾಕ್ ಆಗಿದೆ. ಇದು ಹೆಚ್ಚು ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿದ್ದು, ಕೈಗೆಟುಕುವ ಬೆಲೆಯಲ್ಲಿಯೂ ಸಿಗುತ್ತದೆ. ಆದರೂ ಈ ಕಾರಿನ ಮಾರಾಟ ಮಾತ್ರ ದಿನದಿಂದ ದಿನಕ್ಕೆ ಕುಸಿತವಾಗುತ್ತಿದೆ. ಅದಕ್ಕೆ ಸಾಕ್ಷಿ ಎಂಬಂತೆ ಕಳೆದ ತಿಂಗಳು (ಮಾರ್ಚ್-2025) 1,658 ಯುನಿಟ್ ಆಲ್ಟ್ರೋಜ್ ಹ್ಯಾಚ್ಬ್ಯಾಕ್ಗಳನ್ನು ಮಾರಾಟಗೊಳಿಸಲಾಗಿದೆ. 2024ರ ಇದೇ ಅವಧಿಯಲ್ಲಿ 5,985 ಯುನಿಟ್ಗಳನ್ನು ಮಾರಲಾಗಿತ್ತು. ಅದಕ್ಕೆ ಹೋಲಿಸಿದರೆ, ಮಾರಾಟ ಪ್ರಮಾಣ ವರ್ಷದಿಂದ ವರ್ಷಕ್ಕೆ ಶೇಕಡ -72% ಇಳಿಕೆಯಾಗಿದೆ.