Bajaj: 2025ರ ಬಜಾಜ್ ಪಲ್ಸರ್ NS160 ಬೈಕ್ ಬಿಡುಗಡೆ
ಆಟೋಮೊಬೈಲ್ಸ್
- 1 year, 7 month, 16 days ago
ಭಾರತದ ಪ್ರಮುಖ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಬಜಾಜ್ ಆಟೋ ತನ್ನ ಜನಪ್ರಿಯ ಸರಣಿಯಾದ ಪಲ್ಸರ್‌ನಲ್ಲಿ NS ವಿಭಾಗದ 160 ಬೈಕ್‌ಗೆ ಹೊಸ ಫೀಚರ್ಸ್ ಪರಿಚಯಿಸಿ ಬಿಡುಗಡೆ ಮಾಡಿದೆ. ಈ ಬಜಾಜ್‌ನ ಜನಪ್ರಿಯ ಪಲ್ಸರ್ 2025ರ ಎನ್‌ಎಸ್ 160 (2025 Bajaj Pulsar NS160) ಹೊಸ ಪ್ರಮುಖ ಫೀಚರ್ಸ್ ಆಗಿ ರೋಡ್, ರೈನ್ ಮತ್ತು ಆಫ್-ರೋಡ್ ರೈಡಿಂಗ್ ಮೋಡ್‌ಗಳೊಂದಿಗೆ ಬಿಡುಗಡೆ ಮಾಡಲಾಗಿದೆ. ಈ ಮೂಲಕ ವಿಭಿನ್ನ ಭೂಪ್ರದೇಶಗಳಿಗೆ ಅನುಗುಣವಾಗಿ ಒಟ್ಟಾರೆ ಉತ್ತಮ ಪರ್ಫಾಮೆನ್ಸ್ ನಿರೀಕ್ಷಿಸಬಹುದು. ಜೊತೆಗೆ ವಿಭಿನ್ನ ಭೂಪ್ರದೇಶಗಳಿಗೆ ಸರಿಹೊಂದುವಂತೆ ಎಬಿಎಸ್ ಅನ್ನು ಕೂಡ ಸರಿಹೊಂದಿಸಲಾಗಿದೆ ಎಂದು ವರದಿಯಾಗಿದೆ.