ಶಾಸಕಾಂಗ ಪಕ್ಷದ ಸಭೆ ಬಳಿಕ ಸಿದ್ದರಾಮಯ್ಯ ಹೇಳಿದ್ದೇನು?

'ಬಿಜೆಪಿಯವರು ಮಾಧ್ಯಮಗಳಿಗೆ ಸುಳ್ಳು ಮಾಹಿತಿ ನೀಡಿದ್ದಾರೆ. ಯಾವ ಶಾಸಕರು ಅವರ ಜೊತೆ ಇಲ್ಲ. 76 ಶಾಸಕರು ಶಾಸಕಾಂಗ ಪಕ್ಷದ ಸಭೆಯಲ್ಲಿ ಪಾಲ್ಗೊಂಡಿದ್ದರು' ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ತೀವ್ರ ಕುತೂಹಲ ಮೂಡಿಸಿದ್ದ ಕರ್ನಾಟಕ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಶುಕ್ರವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆಯಿತು. ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಭೆಗೆ ನಾಲ್ವರು ಶಾಸಕರು ಗೈರಾಗಿದ್ದರು. ಶುಕ್ರವಾರ ಮಧ್ಯಾಹ್ನ 3.30ಕ್ಕೆ ನಿಗದಿಯಾಗಿದ್ದ ಸಭೆ, ಸಂಜೆ 4.30ರ ಬಳಿ ಆರಂಭವಾಯಿತು. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್,

ಖಾಲಿ ಹೊಟ್ಟೆಯಲ್ಲಿ ಚಿಕ್ಕ ಚಮಚ 'ತುಪ್ಪ' ತಿಂದರೂ ದೇಹದ ತೂಕ ಇಳಿಸಬಹುದು

ತುಪ್ಪ ವಾಸ್ತವವಾಗಿ ತೂಕ ಇಳಿಯಲು ನೆರವಾಗುತ್ತದೆ. "ಇದರಲ್ಲಿರುವ ಬ್ಯೂಟೈರಿಕ್ ಆಮ್ಲ ಮತ್ತು ಮಧ್ಯಮ ಸಂಕಲೆಯ ಟ್ರೈಗ್ಲಿಸರೈಡುಗಳು ನಮ್ಮ ದೇಹದಲ್ಲಿ ಸಂಗ್ರಹವಾಗಿರುವ ಕೊಬ್ಬನ್ನು ಸಡಿಲಿಸಿ ನಿವಾರಿಸಲು ನೆರವಾಗುತ್ತದೆ. ಅಲ್ಲದೇ ತುಪ್ಪ ರಕ್ತದಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ ಆದ ಹೆಚ್ ಡಿ ಎಲ್ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸಲು ನೆರವಾಗುತ್ತದೆ" ಎಂದು ಬಾತ್ರಾರವರು ತಿಳಿಸುತ್ತಾರೆ. ಒಂದು ವೇಳೆ ತುಪ್ಪದ ಸೇವನೆಯನ್ನು ನೀವು ಪ್ರಾರಂಭಿಸಬಯಸಿದರೆ ದಿನದಲ್ಲಿ ಸುಮಾರು ಎರಡರಿಂದ ಮೂರು ಚಿಕ್ಕ ಚಮಚ (ಹತ್ತರಿಂದ ಹದಿನೈದು ಮಿಲಿಲೀಟರ್) ನಷ್ಟು ಪ್ರಮಾಣವನ್ನು ಸೇವಿಸಿದರೆ ಬೇಕಾದಷ್ಟಾಯಿತು.

ಭಾರತೀಯರು ಅತಿ ಹೆಚ್ಚು ಬಳಸುವ ಟಾಪ್ 20 ಆಪ್‌ಗಳ ಲೀಸ್ಟ್!..ಪಬ್‌ಜಿ ಟಾಪ್ 13!!

ಭಾರತೀಯರು ಬಳಸುವ ಅತ್ಯಂತ ಜನಪ್ರಿಯ ಮೊಬೈಲ್ ಅಪ್ಲಿಕೇಶನ್‌ಗಳು ಯಾವುವು ಎಂಬ ಕುತೋಹಲದ ಪ್ರಶ್ನೆಗೆ ಇತ್ತೀಚಿನ ಸಮೀಕ್ಷೆ ಒಂದು ಉತ್ತರ ನೀಡಿದೆ. ಅಪ್ಲಿಕೇಶನ್ ಅನಾಲಿಟಿಕ್ಸ್ ಸಂಸ್ಥೆಯಾಗಿರುವ 'ಆಪ್‌ಅನ್ನಿ' ಎಂಬ ಖಾಸಾಗಿ ಕಂಪೆನಿಯೊಂದು ತನ್ನ ವಾರ್ಷಿಕ ಮಾರುಕಟ್ಟೆ ವರದಿಯನ್ನು ಬಿಡುಗಡೆ ಮಾಡುವ ವೇಳೆಯಲ್ಲಿ ಇಂತಹದೊಂದು ವಿಶೇಷ ರಿಪೋರ್ಟ್ ಅನ್ನು ನೀಡಿದೆ. ಈ ರಿಪೋರ್ಟ್‌ನಲ್ಲಿ ವಿವಿಧ ರಾಷ್ಟ್ರಗಳಿಳಲ್ಲಿ ಅತಿ ಹೆಚ್ಚು ಬಳಕೆಯಲ್ಲಿರುವ ಅಪ್ಲಿಕೇಶನ್‌ಗಳು ಯಾವುವು ಎಂಬ ಪಟ್ಟಿಯನ್ನು ನೀಡಲಾಗಿದೆ.

ಬೆಂಗಳೂರಲ್ಲಿ ಮನೆಗೆ ನುಗ್ಗಿ ಮಹಿಳೆಯ ಮೇಲೆ ಅತ್ಯಾಚಾರ: ಆರೋಪಿ ಸೆರೆ

ಮನೆಗೆ ನುಗ್ಗಿ ಮಹಿಳೆಯ ಮೇಲೆ ಅತ್ಯಾಚಾರವೆಸಗಿದ್ದ ಕಾಮುಕನನ್ನು ಸ್ಥಳೀಯರೇ ಥಳಿಸಿ ಪೊಲೀಸರಿಗೆ ಒಪ್ಪಿಸಿರುವ ಘಟನೆ ಬೆಂಗಳೂರಿನ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಸಂತ್ರಸ್ತೆ ನೀಡಿರುವ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೃತ್ಯ ಎಸಗಿರುವ ಆರೋಪಿ ಸಂತ್ರಸ್ತೆಯ ತುಟಿ ತುಂಡಾಗುವಂತೆ ಕಚ್ಚಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಂತ್ರಸ್ತೆ ಹಾಗೂ ಆರೋಪಿ ಪರಸ್ಪರ ಪರಿಚಯಸ್ಥರಾಗಿದ್ದರು. ಘಟನೆಗೂ ಮುನ್ನ ಇಬ್ಬರ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿದೆ. ಆ ಸಂದರ್ಭದಲ್ಲಿ ಆರೋಪಿ ಅತ್ಯಾಚಾರ ಮಾಡಿ ಕೊಲೆಗೆ ಯತ್ನಿಸಿದ್ದಾನೆ.
Advertisement

ಇತ್ತೀಚೆಗೆ ವಿವಾಹಗಿದ್ದ ಪೊಲೀಸ್ ಪೇದೆ ರಜೆಗಾಗಿ ಬರೆದ ಪತ್ರವಿದು...

ಇತ್ತೀಚಗಷ್ಟೇ ಮದುವೆಯಾಗಿದ್ದ ಪೊಲೀಸ್ ಪೇದೆ ರಜೆಗಾಗಿ ಹಿರಿಯ ಅಧಿಕಾರಿಗೆ ಪತ್ರವೊಂದನ್ನು ಬರೆದಿದ್ದಾನೆ. ಹಾಗಾದರೆ ಆ ಪತ್ರದಲ್ಲೇನಿದೆ. ನಾನು ಹೊಸದಾಗಿ ಮದುವೆ ಆಗಿದ್ದೀನಿ. ಅಲ್ಲದೇ ಹೊಸ ಹುರುಪಿನಲ್ಲಿ ಇದ್ದೀನಿ. ಹಾಗಾಗಿ ನನಗೆ 10 ದಿನ ಪರಿವರ್ತಿತ ರಜೆ ಅಥವಾ ಗಳಿಕೆ ರಜೆ ನೀಡಿ ಎಂದು ಪೇದೆಯೊಬ್ಬರು ವಿನೂತನವಾಗಿ ರಜೆ ಪತ್ರವನ್ನು ಬರೆದಿದ್ದಾರೆ. ಪೇದೆ ಬರೆದ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಲ್ಲದೇ ಹೊಸ ಮದುವೆ ಗಂಡಿಗೆ ರಜೆ ನೀಡಿ ಎಂದು ಹಾಸ್ಯ ಮಾಡಿ ಟ್ರೋಲ್ ಮಾಡುತ್ತಿದ್ದಾರೆ.

ಮಂಡ್ಯದ ಮತದಾರರ ಪಟ್ಟಿ ಅಂತಿಮ, ಜಿಲ್ಲೆಯಲ್ಲಿ 14 ಲಕ್ಷ ಮತದಾರರು

ಭಾರತೀಯ ಚುನಾವಣಾ ಆಯೋಗದ ನಿರ್ದೇಶನದಂತೆ ಮಂಡ್ಯ ಜಿಲ್ಲಾಡಳಿತ ಮತದಾರರ ಪಟ್ಟಿಯನ್ನು ಪರಿಷ್ಕರಣೆ ಮಾಡಿದೆ. ಮಂಡ್ಯ ಜಿಲ್ಲೆಯಲ್ಲಿ ಒಟ್ಟು 14,85,065 ಮಂದಿ ಮತದಾರರಿದ್ದಾರೆ. ಮಂಡ್ಯ ಜಿಲ್ಲಾಡಳಿತ 1.1.2019ಕ್ಕೆ ಅನ್ವಯವಾಗುವಂತೆ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ಅಂತಿಮ ಮತದಾರರ ಪಟ್ಟಿಯನ್ನು ಅಂತಿಮಗೊಳಿಸಿದೆ. ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಬರುವ ಎಲ್ಲ ಮತಗಟ್ಟೆಗಳು, ಆಯಾ ತಾಲೂಕಿನ ತಹಸೀಲ್ದಾರ್ ಕಚೇರಿ ಹಾಗೂ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಪಟ್ಟಿ ಪ್ರಕಟಿಸಲಾಗಿದೆ.

ಮೋದಿಯ ಆಯುಷ್ಮಾನ್ ಭಾರತ್ ಯೋಜನೆಗೆ ಬಿಲ್ ಗೇಟ್ಸ್ ಮೆಚ್ಚುಗೆ

ಎಲ್ಲ ಬಡವರಿಗೂ ಆರೋಗ್ಯ ಸೇವೆ ಕಲ್ಪಿಸು ಆಯುಷ್ಮಾನ್ ಭಾರತ್ ಯೋಜನೆಯು ತನ್ನ ಮೊದಲ 100 ದಿನದ ಅವಧಿಯಲ್ಲಿ ಮಾಡಿರುವ ಸಾಧನೆಯನ್ನು ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಶ್ಲಾಘಿಸಿದ್ದಾರೆ. ವಿಶ್ವದ ಅತಿ ದೊಡ್ಡ ಆರೋಗ್ಯ ವಿಮಾ ಯೋಜನೆ ಎನಿಸಿರುವ ಆಯುಷ್ಮಾನ್ ಭಾರತ್ ಯೋಜನೆಯನ್ನು ಸರ್ಕಾರ ಆರಂಭಿಸಿ ಶತದಿನ ಪೂರೈಸಿದೆ. 'ಈ ಬಗ್ಗೆ ಟ್ವೀಟ್ ಮಾಡಿರುವ ಬಿಲ್ ಗೇಟ್ಸ್, ಆಯುಷ್ಮಾನ್ ಯೋಜನೆಯು ನೂರು ದಿನ ತುಂಬಿದ ಸಂದರ್ಭದಲ್ಲಿ ಭಾರತ ಸರ್ಕಾರವನ್ನು ಅಭಿನಂದಿಸುತ್ತೇನೆ.ಎಷ್ಟು ಜನರಿಗೆ ತಲುಪಿದೆ ಎಂಬುದನ್ನು ನೋಡಿ ಖುಷಿಯಾಗುತ್ತಿದೆ' ಎಂದು ಪ್ರಧಾನಿ ಕಚೇರಿಯನ್ನು ಟ್ಯಾಗ್ ಮಾಡಿರುವ ಬಿಲ್ ಗೇಟ್ಸ್ ಟ್ವೀಟ್ ಮಾಡಿದ್ದಾರೆ.

ಬರೋಬ್ಬರಿ 5 ಲೀಟರ್ ಬಿಯರ್ ಕುಡಿಸಿ ಪ್ರಾಣ ಉಳಿಸಿದ ವೈದ್ಯರು!

ವರದಿಗಳು ಹೇಳುವ ಪ್ರಕಾರ ಈ ಘಟನೆಯು ವಿಯೆಟ್ನಾಂ ನಲ್ಲಿ ನಡೆದಿದೆ ಮತ್ತು ಆ ವ್ಯಕ್ತಿಗೆ ವಿಯೆಟ್ನಾಂನ ಕ್ಯುಂಗ್ ಟ್ರಿ ಎನ್ನುವ ಪ್ರದೇಶದಲ್ಲಿರುವ ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು. 48ರ ಹರೆಯದ ವ್ಯಕ್ತಿಯ ಪ್ರಾಣ ಕಾಪಾಡಲು ಸುಮಾರು 15 ಕ್ಯಾನ್ ನಷ್ಟು ಬಿಯರ್ ನ್ನು ಹೊಟ್ಟೆಗೆ ಹಾಕಬೇಕಾಯಿತು ಎಂದು ವೈದ್ಯರು ಹೇಳಿದ್ದಾರೆ. ಆತನನ್ನು ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆತನ ಪ್ರಾಣ ಕಾಪಾಡುವ ಸಲುವಾಗಿ ವೈದ್ಯರು ಸುಮಾರು 15 ಕ್ಯಾನ್ ಗಳಷ್ಟು ಬಿಯರ್ ನ್ನು ಆತನ ಹೊಟ್ಟೆಗೆ ಹಾಕಬೇಕಾಯಿತು.

ರಾಜ್ಯ ರಾಜಕೀಯ: ಆದಿಚುಂಚನಗಿರಿ ಶ್ರೀಗಳ ಮಹತ್ವದ ಹೇಳಿಕೆ

ಸದ್ಯ ಕರ್ನಾಟಕದಲ್ಲಿ ನಡೆಯುತ್ತಿರುವ ರಾಜಕೀಯ ವಿದ್ಯಮಾನಗಳ ನಡುವೆ, ಆದಿಚುಂಚನಗಿರಿ ಸಂಸ್ಥಾನದ ಪೀಠಾಧಿಪತಿ ನಿರ್ಮಲಾನಂದನಾಥ ಸ್ವಾಮೀಜಿಯವರು ನೀಡಿದ ಹೇಳಿಕೆ ಮಹತ್ವ ಪಡಿದಿದೆ. ಆಪರೇಷನ್ ಕಮಲದ ಉಸ್ತುವಾರಿಯನ್ನು ಬೆಂಗಳೂರು ಮಲ್ಲೇಶ್ವರಂ ಶಾಸಕ ಡಾ. ಅಶ್ವಥ್ ನಾರಾಯಣ ವಹಿಸಿಕೊಂಡಿದ್ದರು, ಇದರಿಂದ ಶ್ರೀಗಳು ಶಾಸಕರ ವಿರುದ್ದ ಫುಲ್ ಗರಂ ಆಗಿದ್ದರು ಎನ್ನುವ ಸುದ್ದಿ ಭಾರೀ ವೈರಲ್ ಆಗಿತ್ತು. ಈ ಸಂಬಂಧ ಹೇಳಿಕೆ ನೀಡಿರುವ ಶ್ರೀಗಳು, ಸದ್ಯದ ರಾಜಕೀಯಕ್ಕೂ ಶ್ರೀಮಠಕ್ಕೂ ಯಾವುದೇ ಸಂಬಂಧವಿಲ್ಲ. ವಿನಾಕಾರಣ, ನಮ್ಮ ಮಠವನ್ನು ಇದಕ್ಕೆ ಎಳೆಯಬೇಡಿ ಎಂದು ಹೇಳಿದ್ದಾರೆ.

ಗರ್ಭಿಣಿಯರು ಪಪ್ಪಾಯ ದ್ರಾಕ್ಷಿ, ಅನಾನಸ್ ಹಣ್ಣುಗಳನ್ನು ತಿನ್ನಲೇಬಾರದು!

ಗರ್ಭಾವಸ್ಥೆಯಲ್ಲಿ ತಾಯಿಯ ದೇಹದಲ್ಲಿ ಸಾಕಷ್ಟು ಬದಲಾವಣೆ ಉಂಟಾಗುವುದು. ಹಾರ್ಮೋನ್ಗಳ ಬದಲಾವಣೆ ಹಾಗೂ ಬಾಯಿ ರುಚಿಯಲ್ಲಿ ವ್ಯತ್ಯಾಸವು ಸಾಮಾನ್ಯವಾಗಿರುತ್ತದೆ. ಈ ಸಂದರ್ಭದಲ್ಲಿ ತಾಯಿ ತಾನು ತಿನ್ನಲು ಬಯಸುವ ಆಹಾರಗಳ ರುಚಿಯು ಭಿನ್ನವಾಗಿರಬೇಕು ಎಂದು ಬಯಸಬಹುದು. ಕೆಲವು ಹಣ್ಣು, ತರಕಾರಿ, ಆಹಾರ ಮತ್ತು ಪಾನೀಯಗಳನ್ನು ಸೇವಿಸಬೇಕು ಎಂದು ಮನಸ್ಸಿನಲ್ಲಿ ಸಾಕಷ್ಟು ತುಡಿತ ಉಂಟಾಗುವುದು. ಅಂತಹ ಸಂದರ್ಭದಲ್ಲಿ ಸಾಮಾನ್ಯವಾಗಿ ಬಯಕೆಯ ಆಹಾರ ಸೇವಿಸುವುದು ಸಾಮಾನ್ಯ. ಈ ರೀತಿ ಮನಸ್ಸು ಬಯಸಿದ ಆಹಾರಗಳನ್ನು ಸೇವಿಸುವ ಮುನ್ನ ಸಾಕಷ್ಟು ಕಾಳಜಿ ಹಾಗೂ ಪರಿಶೀಲನೆ ನಡೆಸಬೇಕು.

ಭಾರತ vs ಆಸೀಸ್: ಮೆಲ್ಬರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ ಚಾಹಲ್ ಕಮಾಲ್!

ರಿಸ್ಟ್ ಸ್ಪಿನ್ನರ್ ಯುಜುವೇಂದ್ರ ಚಾಹಲ್ ಅವರು ಮೆಲ್ಬರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಭಾರತ-ಆಸ್ಟ್ರೇಲಿಯಾ ನಡುವಿನ 3ನೇ ಮತ್ತು ಕೊನೆಯ ಏಕದಿನ ಪಂದ್ಯದಲ್ಲಿ ಮಾರಕ ಬೌಲಿಂಗ್ ದಾಳಿ ನಡೆಸಿದ್ದ ಚಾಹಲ್ ಇತಿಹಾಸ ನಿರ್ಮಿಸಿದರು. ಶುಕ್ರವಾರ (ಜನವರಿ 18) ಎಂಸಿ ಸ್ಟೇಡಿಯಂನಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಯುಜುವೇಂದ್ರ ಚಾಹಲ್ ಭರ್ಜರಿ 6 ವಿಕೆಟ್ ಉರುಳಿಸಿದರು. ಈ ಸಾಧನೆಯಿಂದ ಚಾಹಲ್ ಎಂಸಿಜಿಯಲ್ಲಿ ನಡೆದ ಏಕದಿನ ಇನ್ನಿಂಗ್ಸ್‌ ಒಂದರಲ್ಲಿ ಅಧಿಕ ವಿಕೆಟ್ ಪಡೆದ ಸಾಧಕರಲ್ಲಿ ಮೊದಲ ಸ್ಥಾನಕ್ಕೇರಿದ್ದಾರೆ.  

ಆಹಾರದ ಬಗ್ಗೆ ದೂರಿತ್ತು ವಜಾಗೊಂಡಿದ್ದ ಸೈನಿಕನ ಮಗ ಸಾವು

ಸೇನೆಯಲ್ಲಿ ನೀಡಲಾಗುವ ಆಹಾರ ಕಳಪೆ ಮಟ್ಟದ್ದಾಗಿದೆ ಎಂದು ವಿಡಿಯೋ ಮಾಡಿ ಆರೋಪಿಸಿದ ಕಾರಣಕ್ಕೆ ಸೇವೆಯಿಂದ ವಜಾಗೊಂಡಿದ್ದ ಬಿಎಸ್‌ಎಫ್ ಯೋಧ ತೇಜ್ ಬಹದ್ದೂರ್ ಯಾದವ್ ಅವರ ಮಗನ ಮೃತದೇಹ ಶುಕ್ರವಾರ ಆತನ ನಿವಾಸದಲ್ಲಿ ಪತ್ತೆಯಾಗಿದೆ. ರೆವಾರಿ ಜಿಲ್ಲೆಯ ಶಾಂತಿ ವಿಹಾರದ ಮನೆಯಲ್ಲಿ ನೆಲೆಸಿದ್ದ 22 ವರ್ಷದ ರೋಹಿತ್ ತನಗೆ ತಾನು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. 'ರೋಹಿತ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕರೆ ಬಂದಿತ್ತು. ಘಟನಾ ಸ್ಥಳದಲ್ಲಿ ಒಳಗಿನಿಂದ ಬಾಗಿಲು ಹಾಕಿಕೊಂಡಿರುವುದು ಗಮನಕ್ಕೆ ಬಂದಿತು. ದೇಹವು ಹಾಸಿಗೆ ಮೇಲೆ ಬಿದ್ದಿತ್ತು. ಕೈಗಳಲ್ಲಿ ಪಿಸ್ತೂಲು ಇತ್ತು.

ಲೋಕಸಭೆ ಕದನ 2019: ಹಾಸನ ಲೋಕಸಭಾ ಕ್ಷೇತ್ರದ ಪರಿಚಯ

ಹಾಸನದಲ್ಲಿ ಬಹು ಸಂಖ್ಯಾತ ಒಕ್ಕಲಿಗ ಗೌಡ ಸಮುದಾಯದ್ದೇ ಕಾರುಬಾರು. ಹರದನಹಳ್ಳಿಯ ದೇವೇಗೌಡರ ಪ್ರಾಬಲ್ಯದ ಈ ಕ್ಷೇತ್ರದಲ್ಲಿ ಈ ಬಾರಿ ಯಾರು ಯಾರು ಕಣಕ್ಕಿಳಿಯಲಿದ್ದಾರೆ ಎಂಬ ಕುತೂಹಲ ಮೂಡಿಸಿದೆ. ಕಡೂರು, ಶ್ರವಣಬೆಳಗೊಳ, ಅರಸೀಕೆರೆ, ಬೇಲೂರು, ಹಾಸನ, ಹೊಳೆನರಸೀಪುರ, ಅರಕಲಗೂಡು, ಸಕಲೇಶಪುರ ಈ ಎಂಟು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಮಲೆನಾಡು, ಅರೆ ಮಲೆನಾಡು, ಬಯಲು ಸೀಮೆಯನ್ನು ಒಳಗೊಂಡ ಕ್ಷೇತ್ರದಲ್ಲಿ ಹೇಮಾವತಿ ಜೀವನದಿಯಾಗಿದೆ. ಕನ್ನಡ ನಾಡಿನ ಜೀವನದಿ ಕಾವೇರಿಯಲ್ಲದೆ, ಯಗಚಿ, ವಾಟೆಹೊಳೆ, ಎತ್ತಿನಹೊಳೆ, ಕೆಂಪುಹೊಳೆ ಹೀಗೆ ನದಿ, ತೊರೆಗಳಿಗೇನು ಕಡಿಮೆಯಿಲ್ಲ.

ಶಬರಿಮಲೆ ಪ್ರವೇಶಿಸಿದ್ದ ಇಬ್ಬರು ಮಹಿಳೆಯರಿಗೆ 24 ಗಂಟೆ ಭದ್ರತೆ ಕೊಡಿ:

ಶಬರಿ ಮಲೆ ಪ್ರವೇಶಿಸಿದ್ದ ಇಬ್ಬರು ಮಹಿಳೆಯರಿಗೆ ಭದ್ರತೆ ನೀಡಿ ಎಂದು ಸುಪ್ರೀಂಕೋರ್ಟ್ ಶುಕ್ರವಾರ ಆದೇಶ ನೀಡಿದೆ. ಶಬರಿ ಮಲೆ ಅಯ್ಯಪ್ಪ ದೇಗುಲವ ಪ್ರವೇಶಿಸಿದ್ದ ಸಾಮಾಜಿಕ ಕಾರ್ಯಕರ್ತೆ ಕನಕದುರ್ಗ(39) ಹಾಗೂ ಕೇಳದ ಕಣ್ಣೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಬಿಂದು ಅಮ್ಮನಿ ಸುಪ್ರೀಂಗೆ ಮೊರೆ ಹೋಗಿದ್ದರು. ವಿರೋಧಗಳ ನಡುವೆ ಶಬರಿಮಲೆ ಅಯ್ಯಪ್ಪ ದೇಗುವ ಪ್ರವೇಶಿಸಿ ಇತಿಹಾಸ ಸೃಷ್ಟಿಸಿದ್ದ ಇಬ್ಬರು ಮಹಿಳೆಯರಿಗೆ ಜೀವಬೆದರಿಕೆ ಇದೆ ನಮಗೆ ರಕ್ಷಣೆ ನೀಡಿ ಎಂದು ಗುರುವಾರ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಅದಕ್ಕೆ ಸ್ಪಂದಿಸಿರುವ ಸುಪ್ರೀಂಕೋರ್ಟ್ ಮಹಿಳೆಯರಿಗೆ 24 ಗಂಟೆಯೂ ಭದ್ರತೆ ನೀಡುವಂತೆ ಆದೇಶ ನೀಡಿದೆ.

ಎಸ್ ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಾಜೇಂದ್ರ ಕುಮಾರ್ ಗೆ ಸನ್ಮಾನ

ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾಗಿ ಡಾ ಎಂಎನ್ ರಾಜೇಂದ್ರ ಕುಮಾರ್ 25 ವರ್ಷ ಸೇವೆ ಸಲ್ಲಿಸಿದ್ದಾರೆ. ನಿರಂತರ 25 ವರ್ಷಗಳ ಸಾರ್ಥಕ ಅಧ್ಯಕ್ಷತೆ ವಹಿಸಿಕೊಂಡಿರುವ ಎಂ. ಎನ್‌. ರಾಜೇಂದ್ರ ಕುಮಾರ್‌ ಅವರ ರಜತ ಸಂಭ್ರಮ, ನವೋದಯ ಸ್ವಸಹಾಯಸಂಘಗಳ ವಿಂಶತಿ ಸಮಾವೇಶ ನಾಳೆ ಜ. 19 ರಂದು ಮಂಗಳೂರಿನಲ್ಲಿ ಜರುಗಲಿದೆ. ನಗರದ ನೆಹರೂ ಮೈದಾನದಲ್ಲಿ ಈ ಕಾರ್ಯಕ್ರಮ ಜರುಗಲಿದ್ದು, ಮೊದಲ ಬಾರಿಗೆ ಸಹಕಾರಿಗಳೆಲ್ಲ ಒಂದು ಕಡೆ ಸೇರಿ ತಮ್ಮ ಏಕತೆ ಮತ್ತು ಬದ್ಧತೆಯನ್ನು ಎತ್ತಿ ಹಿಡಿಯುವ ಸಹಕಾರಿ ಸಮಾವೇಶ ಇದಾಗಲಿದೆ.

'ಮರ್ಯಾದಾ ಪುರುಷೋತ್ತಮ': ಸಿದ್ದರಾಮಯ್ಯ ಲೇವಡಿ ಮಾಡಿದ ಬಿಜೆಪಿ

ಆಪರೇಷನ್ ಕಮಲದ ಆರೋಪ ಹೊರಿಸಿ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಲೇವಡಿ ಮಾಡಿ ಬಿಜೆಪಿ ಟ್ವೀಟ್ ಮಾಡಿದೆ. ಕಾಂಗ್ರೆಸ್ ವಿರುದ್ಧ ಶುಕ್ರವಾರ ಎರಡು ಟ್ವೀಟ್‌ಗಳನ್ನು ಮಾಡಿರುವ ಬಿಜೆಪಿ, ಒಂದರಲ್ಲಿ ಸಂಪೂರ್ಣವಾಗಿ ಸಿದ್ದರಾಮಯ್ಯ ಅವರನ್ನು ಗುರಿಯನ್ನಾಗಿಸಿಕೊಂಡು ಚುನಾವಣಾ ಸಂದರ್ಭದಲ್ಲಿ ಜೆಡಿಎಸ್ಅನ್ನು ಟೀಕಿಸಿ ಈಗ ಅದಕ್ಕೆ ಬೆಂಬಲ ನೀಡಿದ್ದಾರೆ ಎಂದು ವ್ಯಂಗ್ಯವಾಡಿದೆ. ಇನ್ನೊಂದು ಟ್ವೀಟ್‌ನಲ್ಲಿ ಕಾಂಗ್ರೆಸ್‌ನ ಮುಖ್ಯಮಂತ್ರಿ ಆಕಾಂಕ್ಷಿ ಎಂದು ಸಿದ್ದರಾಮಯ್ಯ ಅವರನ್ನು ಅದು ಕರೆದಿದೆ.
Advertisement

ಜ.19ರಂದು ಕೋಟಿ ಚೆನ್ನಯ ಜೋಡುಕೆರೆ ಕಂಬಳಕ್ಕೆ ಚಾಲನೆ

ಪುತ್ತೂರಿನ ಕೋಟಿ ಚೆನ್ನಯ ಜೋಡುಕೆರೆ ಕಂಬಳಕ್ಕೆ ಕ್ಷಣಗಣನೆ ಆರಂಭಗೊಂಡಿದೆ. 26 ವರ್ಷದ ಹೊನಲು ಬೆಳಕಿನ ಪುತ್ತೂರು 'ಕೋಟಿ-ಚೆನ್ನಯ' ಜೋಡುಕರೆ ಕಂಬಳ ನಾಳೆ ಜ.19ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರಿನ ದೇವರಮಾರು ಗದ್ದೆಯಲ್ಲಿ ನಡೆಯಲಿದೆ. ಮಾಜಿ ಸಚಿವ ವಿನಯಕುಮಾರ್ ಸೊರಕೆ ಗೌರವಾಧ್ಯಕ್ಷತೆಯಲ್ಲಿ 25ನೇ ವರ್ಷದಿಂದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರಿನ ದೇವರಮಾರು ಗದ್ದೆಯಲ್ಲಿ ಕಂಬಳವನ್ನು ವಿಶೇಷ ರೀತಿಯಲ್ಲಿ ನಡೆಸಲಾಗುತ್ತಿದೆ. ಈ ಬಾರಿಯ ಕಂಬಳಕ್ಕೆ ಕಂಬಳದ ಕರೆ ಸಹಿತ ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿದೆ. ಈ ಬಾರಿ 150 ಓಟದ ಕೋಣಗಳು ಭಾಗವಹಿಸುವ ನಿರೀಕ್ಷೆಯಿದೆ.

2019ರ ವರ್ಷದಲ್ಲಿ ರಾಶಿ ಚಕ್ರದ ಪ್ರಕಾರ ನಿಮ್ಮ ಭವಿಷ್ಯ ಹೇಗಿದೆ ನೋಡಿ..

ಹೊಸ ವರ್ಷ ಎಂದಾಗ ಎಲ್ಲರಿಗೂ ಒಂದು ಬಗೆಯ ಹೊಸ ಆಶಯ ಹಾಗೂ ಭರವಸೆ ಮೂಡುವುದು. ಹೊಸ ಪ್ರಾರಂಭಗಳು ಹೊಸತನವನ್ನು ಹೊತ್ತು ತರಲಿ ಎನ್ನುವ ಬಯಕೆಯಿರುತ್ತದೆ. ಹೊಸ ಹೊಸ ಕನಸುಗಳು ಚಿಗುರುವುದೇ ಎನ್ನುವ ಕುತೂಹಲವು ಸಾಕಷ್ಟು ಗೋಪುರಗಳನ್ನು ಕಟ್ಟುತ್ತವೆ. ಅಂದುಕೊಂಡ ಸಂಗತಿಗಳು ನೆರವೇರಿದರೆ ನಮಗೂ ಒಂದು ಬಗೆಯ ಸಂತೋಷ ಹಾಗೂ ವರ್ಷ ಪೂರ್ತಿ ಒಳ್ಳೆಯದು ಸಂಭವಿಸುವುದು ಎನ್ನುವ ಭರವಸೆ ಇರುತ್ತದೆ. ಅದೇ ವರ್ಷದ ಆರಂಭದಲ್ಲಿಯೇ ನೋವು, ಆಸೆಗಳು ಭಗ್ನವಾಗುವುದು ಉಂಟಾದರೆ ಸಾಕಷ್ಟು ನೋವು ಹಾಗೂ ಭರವಸೆಯು ಕುಸಿಯುವುದು.

'ಬಿಎಸ್ಎನ್ಎಲ್'ನಿಂದ ಇತಿಹಾಸದಲ್ಲೇ ಯಾರೂ ನೀಡದ ಮೊಟ್ಟ ಮೊದಲ ಭರ್ಜರಿ ಆಫರ್!!

ಲಿಕಾಂಗೆ ಜಿಯೋ ಕಾಲಿಟ್ಟ ಬಳಿಕ ಅನೇಕ ಕಂಪೆನಿಗಳ ಗ್ರಾಹಕರು ಜಿಯೋದತ್ತ ವಾಲಿದ್ದರು. ಇದಾದ ನಂತರ ಬಳಕೆದಾರರನ್ನು ಉಳಿಸಿಕೊಳ್ಳಲು ಮತ್ತು ಹೊಸ ಗ್ರಾಹಕರನ್ನು ಸೆಳೆಯಲು ಜಿಯೋದೊಂದಿಗೆ ಎಲ್ಲಾ ಟೆಲಿಕಾಂ ಕಂಪೆನಿಗಳು ಪೈಪೋಟಿಗೆ ಇಳಿದು ಜಿಯೋ ನೀಡುವ ಆಫರ್‌ಗಳಿಗೆ ಸಮನಾಗಿ ಆಫರ್ ಪ್ರಕಟಿಸಿದ್ದವು. ಆದರೆ, ಇದೀಗ ಬಿಎಸ್​ಎನ್​ಎಲ್ ಮಾತ್ರ ಜಿಯೋಗೆ ಸೆಡ್ಡು ಹೊಡೆದು ಮೂರು ಪಟ್ಟು ಹೆಚ್ಚು ಡೇಟಾ ಆಫರ್ ನೀಡಿ ಗಮನಸೆಳೆದಿದೆ.ಪ್ರಸ್ತುತ ಭಾರತದ ಟೆಲಿಕಾಂನಲ್ಲಿ ಗೇಮ್ ಚೇಂಜರ್ ಆಗಿರುವ ಜಿಯೋ ಇಲ್ಲಿಯವರೆಗೂ ಅತ್ಯಂತ ಕಡಿಮೆ ಬೆಲೆಗೆ ಹೆಚ್ಚು ಡೇಟಾ ಪ್ಲಾನ್ ನೀಡುವಲ್ಲಿ ಇಲ್ಲಿಯವರೆಗೂ ಮೊದಲ ಸ್ಥಾನದಲ್ಲೇ ಇತ್ತು. ಆದರೆ,

ಚಳಿಗಾಲದಲ್ಲಿ ಸೀತಾಫಲ ತಿಂದರೆ, ತ್ವಚೆಗೆ ತುಂಬಾನೇ ಪ್ರಯೋಜನಗಳಿವೆ

ಸೀತಾಫಲವು ಅಂನನೇಸಿ ಕುಟುಂಬಕ್ಕೆ ಸೇರಿದ ಹಣ್ಣು. ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾವು ಇದರ ತವರು. ವಿಶ್ವದ ಹೆಚ್ಚಿನ ಉಷ್ಣವಲಯ ರಾಷ್ಟ್ರಗಳಲ್ಲಿ ಇದನ್ನು ಬೆಳೆಸಲಾಗುತ್ತದೆ. ಸೀತಾಫಲವನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಹಲವಾರು ರೀತಿಯ ಸೌಂದರ್ಯ ಲಾಭಗಳು ನಿಮಗೆ ನೈಸರ್ಗಿಕವಾಗಿ ಸಿಗುವುದು. ಸೀತಾಫಲದಲ್ಲಿ ವಿಟಮಿನ್ ಎ ಸಮೃದ್ಧವಾಗಿದೆ. ಇದು ಚರ್ಮವನ್ನು ಆರೋಗ್ಯವಾಗಿಡುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಈ ಹಣ್ಣಿನಲ್ಲಿ ಕೆಲವೊಂದು ಪೋಷಕಾಂಶಗಳು ಹಾಗೂ ಚರ್ಮದ ಆರೈಕೆಗೆ ಬೇಕಾಗಿರುವ ಅದ್ಭುತ ಲಾಭಗಳು ಇವೆ.

ಕೆ.ಸಿ.ವೇಣುಗೋಪಾಲ್ ಭೇಟಿ ಮಾಡಿದ ಎಚ್.ಡಿ.ಕುಮಾರಸ್ವಾಮಿ!

ಕರ್ನಾಟಕದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕೆ.ಸಿ.ವೇಣುಗೋಪಾಲ್ ಭೇಟಿಯಾಗಿದ್ದಾರೆ. ವಿವಿಧ ಕಾರ್ಯಕ್ರಮಗಳಲ್ಲಿ ಬ್ಯುಸಿಯಾಗಿರುವ ಮುಖ್ಯಮಂತ್ರಿಗಳು ಇವುಗಳ ನಡುವೆಯೇ ಭೇಟಿ ಆಗಿರುವುದು ಕುತೂಹಲಕ್ಕೆ ಕಾರಣವಾಗಿದೆ. ಶುಕ್ರವಾರ ಬೆಳಗ್ಗೆ ಬೆಂಗಳೂರಿನ ಕುಮಾರಕೃಪ ಅತಿಥಿಗೃಹದಲ್ಲಿ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರನ್ನು ಎ.ಚ್.ಡಿ.ಕುಮಾರಸ್ವಾಮಿ ಭೇಟಿಯಾದರು. ಮಂಡ್ಯಕ್ಕೆ ತೆರಳಿರುವ ಮುಖ್ಯಮಂತ್ರಿಗಳು ಆ ಕಾರ್ಯಕ್ರಮದ ನಡುವೆಯೇ ವೇಣುಗೋಪಾಲ್ ಭೇಟಿಯಾದರು. ಇಂದು ಮಧ್ಯಾಹ್ನ 3.30ಕ್ಕೆ ವಿಧಾನಸೌಧದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ.

ನೀವು ತಿಳಿದಿರಲೇಬೇಕಾದ ಕೃಷ್ಣ ಪರಮಾತ್ಮನ ಒಲಿಸಿಕೊಳ್ಳಲು ಮಂತ್ರಗಳು

ಕೃಷ್ಣನೆಂದರೆ ಕೇವಲ ದೇವರು ಮಾತ್ರವಲ್ಲ, ಆತನೊಬ್ಬ ಸ್ನೇಹಿತ, ಬಂಧು ಹೀಗೆ ಯಾವ ರೂಪದಲ್ಲಿ ಬೇಕಾದರೂ ನೀವು ಕೃಷ್ಣನನ್ನು ಕಾಣಬಹುದು. ಕೃಷ್ಣ ಪರಮಾತ್ಮನ ಮಹಿಮೆಯೇ ಹಾಗೆ. ವಿಷ್ಣುವಿನ ಅವತಾರವಾಗಿರುವ ಕೃಷ್ಣ ಹೆಚ್ಚು ಜನಪ್ರಿಯ. ಹಿಂದೂಗಳು ತಮ್ಮ ಧರ್ಮಗ್ರಂಥ ಎಂದು ಪರಿಗಣಿಸಿರುವ ಭಗವದ್ಗೀತೆಯಲ್ಲಿ ಕೃಷ್ಣ ಪರಮಾತ್ಮನು ಧರ್ಮಕ್ಕಾಗಿ ಏನು ಮಾಡಬೇಕು, ಧರ್ಮ ಮಾರ್ಗದಲ್ಲಿ ನಡೆಯುವುದು ಹೇಗೆ ಮತ್ತು ಧರ್ಮವನ್ನು ರಕ್ಷಿಸುವುದು ಹೇಗೆ ಎನ್ನುವುದನ್ನು ಹೇಳಿಕೊಟ್ಟಿದ್ದಾರೆ. ಇದನ್ನು ಪಾಲಿಸಿಕೊಂಡು ಹೋದರೆ ಖಂಡಿತವಾಗಿಯೂ ಜೀವನದಲ್ಲಿ ಮುಕ್ತಿ ಸಿಗುವುದು.

ಸಂಗಾತಿ ಮೋಸ ಮಾಡುತ್ತಿರುವ ಬಗ್ಗೆ ತಿಳಿಯಬೇಕೇ?

ಜೀವನದಲ್ಲಿ ಕೆಲ ಬಾರಿ ಅಪರಿಚಿತರು ಹಾಗೂ ಇನ್ನೂ ಕೆಲ ಬಾರಿ ನಮ್ಮವರೇ ನಮ್ಮನ್ನು ವಂಚಿಸುತ್ತಾರೆ. ಇಂಥ ಮೋಸ ಹೋದ ಅನುಭವ ಬಹುತೇಕ ಎಲ್ಲರ ಜೀವನದಲ್ಲಿಯೂ ಒಮ್ಮೆಯಾದರೂ ಘಟಿಸಿರುತ್ತದೆ. ಹೀಗೆ ನಮ್ಮವರೇ ನಮಗೆ ಮೋಸ ಮಾಡಿದಾಗ ಆಗುವ ನೋವು ಅಷ್ಟಿಷ್ಟಲ್ಲ. ಇನ್ನು ಯಾರನ್ನು ನಂಬುವುದು ಎಂಬ ಪ್ರಶ್ನೆ ಮನದಲ್ಲಿ ಸುಳಿದು ಹೋಗುತ್ತದೆ. ಅದರಲ್ಲೂ ನಂಬಿದ ಸಂಗಾತಿಯೇ ಮೋಸ ಮಾಡಿದಾಗಲಂತೂ ತಡೆಯಲಾಗುವುದಿಲ್ಲ. ಕೆಲ ಬಾರಿ ಸಂಗಾತಿಯು ಮೋಸ ಮಾಡುತ್ತಿದ್ದಾಳೆ/ ತ್ತಿದ್ದಾನೆ ಎನಿಸಿದರೂ ಅದನ್ನು ಪ್ರಮಾಣೀಕರಿಸಲು ಕಷ್ಟವಾಗುತ್ತದೆ.

ಸಿಸಿಟಿವಿಯಲ್ಲಿ ಕಾಣಿಸುತ್ತಿದೆಯಂತೆ ಸತ್ತ ಮಗನ ದೆವ್ವದ ಆಕೃತಿಗಳು

ಕೆಲವೊಂದು ಸಲ ಮಕ್ಕಳು ತಮ್ಮ ಮುಂದೆ ಬಂದು ನಿಂತಂತೆ ಅಥವಾ ನಮ್ಮೊಂದಿಗೆ ಇರುವಂತೆ ಪೋಷಕರಿಗೆ ಭಾವನೆಯಾಗುವುದು. ಇಂತಹ ಹಲವಾರು ಘಟನೆಗಳ ಬಗ್ಗೆ ನಾವು ಕೇಳಿರಬಹುದು ಅಥವಾ ಓದಿರಬಹುದು. ಇಲ್ಲೊಂದು ಘಟನೆಯಲ್ಲಿ ಅತಿಯಾದ ಡ್ರಗ್ಸ್ ಸೇವನೆಯಿಂದ ಮೃತಪಟ್ಟ ಯುವಕನೊಬ್ಬ ತನ್ನ ಮನೆಯಲ್ಲಿ ಸತ್ತ ಬಳಿಕವೂ ಕಾಣಿಸಿಕೊಳ್ಳುತ್ತಿರುವುದು ಅಚ್ಚರಿ ಮೂಡಿಸಿದೆ. ಈ ಘಟನೆ ಬಗ್ಗೆ ಸಂಪೂರ್ಣ ವಿವರವನ್ನು ಈ ಲೇಖನದಲ್ಲಿ ನೀವು ಓದಿಕೊಳ್ಳಿ. ತಾಯಿ ಮತ್ತು ಮಗಳು ತಮ್ಮ ಮಗ/ಸೋದರ ಕಾಣಿಸಿಕೊಂಡಿದ್ದಾನೆ ಎಂದು ಹೇಳುತ್ತಿದ್ದಾರೆ. ಈ ಘಟನೆಯು ಸಿಸಿಟಿವಿಯಲ್ಲಿ ಕೂಡ ಸೆರೆಯಾಗಿದೆ.

5 ಲಕ್ಷ ವಿದ್ಯಾರ್ಥಿಗಳಿಗೆ ಕೃತಕ ಬುದ್ಧಿಮತ್ತೆ ತರಬೇತಿ: ಮೈಕ್ರೋಸಾಫ್ಟ್!

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್‌ನಲ್ಲಿ ಭಾರತೀಯ ಯುವಕರ ಕೌಶಲ್ಯ ಅಭಿವೃದ್ದಿಪಡಿಸಲು ಮೈಕ್ರೋಸಾಫ್ಟ್ ಐದು ಲಕ್ಷ ಯುವಕರಿಗೆ ತರಬೇತಿ ನೀಡಲು ತಯಾರಾಗಿದೆ. ಜಗತ್ತಿನಲ್ಲಿ ಕೃತಕ ಬುದ್ಧಿಮತ್ತೆ(ಎಐ) ತಂತ್ರಜ್ಞಾನ ಮುಂಚೂಣಿ ಸ್ಥಾನವನ್ನು ಆಕ್ರಮಿಸುತ್ತಿರುವ ಸೂಚನೆಗಳ ನಡುವೆಯೇ ದೇಶದ 10 ವಿವಿಗಳಲ್ಲಿ ಸದ್ಯವೇ ಕೃತಕ ಬುದ್ಧಿಮತ್ತೆ ಲ್ಯಾಬ್‌ಗಳು ಸ್ಥಾಪನೆಯಾಗಲಿವೆ.ಹೌದು, ತಂತ್ರಜ್ಞಾನ ದಿಗ್ಗಜ ಮೈಕ್ರೋಸಾಫ್ಟ್ ಇಂಡಿಯಾ ದೇಶಾದ್ಯಂತ 10 ವಿವಿಗಳಲ್ಲಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್‌ ಪ್ರಯೋಗಾಲಯ ಸ್ಥಾಪಿಸಿ 5 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಕಂಪನಿ ಉದ್ದೇಶಿಸಿರುವುದಾಗಿ ತಿಳಿಸಿದೆ.