ಬೋಸ್‌ ಸಂಸ್ಥೆಯಿಂದ ಹೊಸ ನಾಯಿಸ್‌ಲೆಸ್‌ ಹೆಡ್‌ಫೋನ್‌ ಲಾಂಚ್!

ಜನಪ್ರಿಯ ಆಡಿಯೊ ಉಪಕರಣ ತಯಾರಿಕಾ ಸಂಸ್ಥೆ ಬೋಸ್‌ ಇದೀಗ ಭಾರತೀಯ ಮಾರುಕಟ್ಟೆಗೆ ಹೊಸದಾಗಿ ನಾಯಿಸ್‌ಲೆಸ್‌ ಹೆಡ್‌ಫೋನ್‌ 700 ಸರಣಿಯನ್ನು ಲಾಂಚ್ ಮಾಡಿದೆ. ಬ್ಯಾಕ್‌ ಮತ್ತು ಸಿಲ್ವರ್ ಎರಡು ವೇರಿಯಂಟ್‌ ಮಾದರಿಗಳಲ್ಲಿ ಬಿಡುಗಡೆ ಆಗಿರುವ ಈ ಡಿವೈಸ್‌ 34,500ರೂ.ಗಳ ಪ್ರೈಸ್‌ಟ್ಯಾಗ್‌ ಹೊಂದಿದೆ. ಬೋಸ್‌ ಸ್ಟೋರ್‌, ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ ತಾಣಗಳಲ್ಲಿ ಲಭ್ಯವಿದ್ದು, ಗ್ರಾಹಕರು (ಅಗಷ್ಟ 22) ಪ್ರಿ-ಆರ್ಡರ್ ಮಾಡಬಹುದಾಗಿದೆ.

ಶ್ರೀಮುರಳಿ V/S ಗಣೇಶ್: ಸೆಪ್ಟಂಬರ್ ನಲ್ಲಿ ಬಾಕ್ಸ್ ಆಫೀಸ್ ವಾರ್

ಗಲ್ಲಾಪೆಟ್ಟಿಗೆಯಲ್ಲಿ ಸ್ಟಾರ್ ನಟರ ಪೈಪೋಟಿ ಏನು ಹೊಸದೇನಲ್ಲ. ಅಪರೂಪಕ್ಕೊಮ್ಮೆ ದೊಡ್ಡ ಸಿನಿಮಾಗಳು ಒಟ್ಟಿಗೆ ಎಂಟ್ರಿ ಕೊಡುತ್ತವೆ. ಈಗ ರೋರಿಂಗ್ ಸ್ಟಾರ್ ಶ್ರೀಮುರಳಿ ಮತ್ತು ಗೋಲ್ಡನ್ ಸ್ಟಾರ್ ಗಣೇಶ್ ಒಂದೆ ದಿನ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಶ್ರೀಮುರಳಿ ಅಭಿನಯದ ಬಹು ನಿರೀಕ್ಷೆಯ ಭರಾಟೆ ಮತ್ತು ಗಣೇಶ್ ಅಭಿನಯದ ಗೀತಾ ಸಿನಿಮಾ ಮುಂದಿನ ತಿಂಗಳು ಸೆಪ್ಟಂಬರ್ 27ಕ್ಕೆ ತೆರೆಗೆ ಬರುತ್ತಿವೆ. ಈಗಾಗಲೆ ಭರಾಟೆ ಚಿತ್ರತಂಡ ಸೆಪ್ಟಂಬರ್ 27ಕ್ಕೆ ತೆರೆಗೆ ಬರುವುದಾಗಿ ಈಗಾಗಲೆ ಅನೌನ್ಸ್ ಮಾಡಿದೆ.

ಗೊತ್ತಿಲ್ಲದೇ ಏನೇನೋ ಮಾತಾಡಬೇಡಿ: ನೆಟ್ಟಿಗರ ವಿರುದ್ಧ ನಿತ್ಯಾ ಮೆನನ್ ಬೇಸರ

ಜೋಶ್, ಮೈನಾ ಹಾಗೂ ಕೋಟಿಗೊಬ್ಬ-2 ಚಿತ್ರಗಳ ಮೂಲಕ ಕನ್ನಡ ಪ್ರೇಕ್ಷಕರ ಮನಸ್ಸು ಕದ್ದ ಚೋರಿ ನಿತ್ಯಾ ಮೆನನ್ ಸದ್ಯ ಪರಭಾಷೆಯಲ್ಲಿ ಹೆಚ್ಚು ಬ್ಯುಸಿಯಾಗಿದ್ದಾರೆ. ಹೈಟ್ ಕಮ್ಮಿ ಇದ್ದರೂ ಅದನ್ನ ಪ್ಲಸ್ ಮಾಡಿಕೊಂಡು ತೆಲುಗು, ತಮಿಳು ಮತ್ತು ಹಿಂದಿ ಸೂಪರ್ ಸ್ಟಾರ್ ಗಳ ಜೊತೆ ಸ್ಕ್ರೀನ್ ಶೇರ್ ಮಾಡ್ತಿದ್ದಾರೆ.

ನಿತ್ಯಾ ಮೆನನ್ ಎತ್ತರಕ್ಕೆ, ಅವರ ಸೌಂದರ್ಯಕ್ಕೆ, ಅವರ ಅಭಿನಯಕ್ಕೆ ಪ್ರತ್ಯೇಕ ಅಭಿಮಾನಿಗಳಿದ್ದಾರೆ. ಆದ್ರೆ, ಇತ್ತೀಚಿನ ದಿನಗಳಲ್ಲಿ ನಿತ್ಯಾ ಮೆನನ್ ಸ್ವಲ್ಪ ದಪ್ಪ ಆಗಿದ್ದಾರೆ. ಇದು ನಿತ್ಯಾ ಅಭಿಮಾನಿಗಳಿಗೆ ಬೇಸರ ತರಿಸಿದೆ. ಈ ಬಗ್ಗೆ ಇಂಟರ್ ನೆಟ್ ನಲ್ಲಿ ಮೈನಾ ಸುಂದರಿಯನ್ನ ಕಾಲೆಯುತ್ತಿದ್ದಾರೆ.

ಭುವಿಗಿಳಿದ ದೇವತೆ ಮದರ್ ಥೆರೇಸಾ ಸುತ್ತ ವಿವಾದಗಳ ಹುತ್ತ!

ಇತಿಹಾಸ ಕಂಡ ಮಹಾನ್ ಮಾನವತಾವಾದಿಯ ರೂಪದಲ್ಲಿ ಮದರ್ ಥೆರೇಸಾ ರವರ ಚಿತ್ರಣವು ನಮ್ಮ ಕಣ್ಣಮು೦ದೆ ಸುಳಿದಾಡುತ್ತದೆ. ಮದರ್ ಥೆರೇಸಾಳು ಅಪ್ರತಿಮ ಕಾರುಣ್ಯದೊ೦ದಿಗೆ ಎ೦ತಹವರನ್ನೂ ದ೦ಗುಬಡಿಸುವ ವ್ಯವಸ್ಥಾಪನಾ ಹಾಗೂ ನಿರ್ವಹಣಾ ಕೌಶಲ್ಯಗಳ ಸ೦ಗಮರೂಪಿಯೇ ಆಗಿದ್ದಳು. ತನ್ನ ಈ ಗುಣವಿಶೇಷಗಳ ನೆರವಿನಿ೦ದ ಮದರ್ ಥೆರೇಸಾಳು ಜಗತ್ತಿನಾದ್ಯ೦ತ ಶೋಷಿತರ ಏಳ್ಗೆಗಾಗಿಯೇ ಮೀಸಲಾಗಿರುವ೦ತಹ ಅ೦ತರಾಷ್ಟ್ರೀಯ ಮಿಶಿನರಿ ಸ೦ಘ ಸ೦ಸ್ಥೆಗಳನ್ನು ಹುಟ್ಟುಹಾಕಿದಳು. ಇಷ್ಟಾದರೂ ಕೂಡಾ, ದ೦ತಕಥೆಯ೦ತಿದ್ದ ಮದರ್ ಥೆರೇಸಾಳ ಸುತ್ತಲೂ ಅನೇಕ ವಿವಾದಾತ್ಮಕ ಸ೦ಗತಿಗಳು ಗಿರಕಿ ಹೊಡೆಯುತ್ತಿವೆ.

Advertisement

ಜನ್ಮಾಷ್ಟಮಿಯಂದು ಈ ಸ್ಥಳಗಳಿಗೆ ಭೇಟಿ ನೀಡಿದರೆ ಕಷ್ಟ ನಿವಾರಣೆಯಾಗುವುದು

  • ಜನ್ಮಾಷ್ಟಮಿಯನ್ನು ಕೃಷ್ಣನ ಹುಟ್ಟುಹಬ್ಬವಾಗಿ ಆಚರಿಸಲಾಗುತ್ತದೆ. ಬಾದ್ರಪದ ಮಾಸದ ಶುಕ್ಷ ಪಕ್ಷದಂದು ಜನ್ಮಾಷ್ಟಮಿಯನ್ನು ದೇಶಾದ್ಯಂತ ಆಚರಿಸಲಾಗುತ್ತದೆ. ಈ ಬಾರಿ ಜನ್ಮಾಷ್ಟಮಿಯು ಆಗಸ್ಟ್ 14 ರಂದು ಬರುತ್ತಿದ್ದು ವೈಷ್ಣವ ಜನ್ಮಾಷ್ಟಮಿಯನ್ನು 15 ರಂದು
  • ಆಚರಿಸಲಾಗುತ್ತದೆ. ಕೃಷ್ಣ ಭಗವಾನರ 5244 ನೇ ಹುಟ್ಟುಹಬ್ಬ ಇದಾಗಿದೆ. ಕೃಷ್ಣನು ತನ್ನ ಬಾಲ್ಯದ ದಿನಗಳನ್ನು, ಯವ್ವೌನದ ದಿನಗಳನ್ನು ಈ ಸ್ಥಳಗಳಲ್ಲಿ ಕಳೆದಿದ್ದಾರೆ.
  • ಅದರ ದ್ಯೋತಕವಾಗಿ ಇಲ್ಲಿ ವಾಸಿಸುವ ಜನರು ಕೃಷ್ಣನ ಕುರಿತಾಗಿ ಅನೇಕ ಕಥಾವಳಿಗಳನ್ನು ನಡೆಸಿ ಜನ್ಮಾಷ್ಟಮಿಯನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ.

2019ರ ಕೃಷ್ಣ ಜನ್ಮಾಷ್ಟಮಿ: ದಿನಾಂಕ, ಸಮಯ, ಮಹತ್ವ ಹಾಗೂ ಆಚರಣೆ

ದುಷ್ಟರ ಸಂಹಾರ ಹಾಗೂ ಶಿಷ್ಟರ ಸಂರಕ್ಷಣೆಗಾಗಿ ಭಗವಾನ್ ವಿಷ್ಣು ಹತ್ತು ಅವತಾರಗಳನ್ನು ಎತ್ತಿದ್ದಾನೆ, ಅದರಲ್ಲಿ ಶ್ರೀ ಕೃಷ್ಣನ ಅವತಾರವೂ ಒಂದು. ಕೃಷ್ಣ ತನ್ನ ಭಾಲ್ಯದಿಂದಲೂ ದುಷ್ಟ ಶಕ್ತಿಗಳನ್ನು ಸದೆ ಬಡಿಯುತ್ತಾ ಜಗತ್ತಿನ ಕಲ್ಯಾಣವನ್ನು ಮಾಡಿದನು. ಇವನ ಹುಟ್ಟು ವಿಶೇಷತೆಯಿಂದ ಕೂಡಿತ್ತು. ಜೊತೆಗೆ ಜೀವನದ ದಾರಿಯೂ ಸಾಕಷ್ಟು ಕಥೆ ಹಾಗೂ ಜೀವನದ ಮೌಲ್ಯಗಳಿಂದ ಕೂಡಿದೆ. ವಿಶೇಷವಾಗಿ ವ್ಯಕ್ತಿ ತನ್ನ ಜೀವನದಲ್ಲಿ ಯಾವ ಬಗೆಯ ದಾನ, ಧರ್ಮ, ಸತ್ಯ ಸಂಗತಿಗಳೊಂದಿಗೆ ಬದುಕಬೇಕು ಎನ್ನುವುದನ್ನು ತಿಳಿಸಿಕೊಡುತ್ತದೆ.

ರೆಡ್‌ಮಿ ನೋಟ್ 8 ಚಿತ್ರ ಲೀಕ್: ಅಚ್ಚರಿ ನೀಡುವ ಸನಿಹದಲ್ಲಿ ಶಿಯೋಮಿ!

ಭಾರತದ ನಂ.1 ಮೊಬೈಲ್ ಕಂಪೆನಿ ಶಿಯೋಮಿಯ ಮುಂಬರುವ ಸ್ಮಾರ್ಟ್‌ಫೋನ್ 'ರೆಡ್‌ಮಿ ನೋಟ್ 8' ಆಗಿರಲಿದೆ ಎಂಬುದು ಇತ್ತೀಚಿನ ಖಚಿತ ಮೂಲಗಳಿಂದ ಸೋರಿಕೆಯಾಗಿದೆ. ಪ್ರಸಿದ್ಧ ಟಿಪ್‌ಸ್ಟರ್ ಸ್ಲ್ಯಾಶ್‌ಲೀಕ್ಸ್ ಇತ್ತೀಚಿನ ರೆಡ್‌ಮಿ ನೋಟ್ 8 ಸ್ಮಾರ್ಟ್‌ಫೋನ್ ಚಿತ್ರವನ್ನು ಲೀಕ್ ಮಾಡಿದ್ದು, ಚಿತ್ರದಲ್ಲಿರುವಂತೆ ರೆಡ್‌ಮಿ ನೋಟ್ 8 ಸ್ಮಾರ್ಟ್‌ಪೋನ್ ಹಿಂಭಾಗದಲ್ಲಿ ಕ್ವಾಡ್-ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ ಎಂದು ತೋರಿಸುತ್ತಿದೆ. ಆದರೆ, ರೆಡ್‌ಮಿ ನೋಟ್ 8 ಮುಂಬಾಗವು ಹೇಗಿದೆ ಎಂಬುದು ಈವರೆಗೂ ರಹಸ್ಯವಾಗಿ ಉಳಿದಿದೆ.

ಬಿಸಿಗೆ ನಾಲಿಗೆ ಸುಟ್ಟಿದೆಯೇ? ಶೀಘ್ರ ಶಮನಕ್ಕೆ ಈ ಮನೆಮದ್ದುಗಳನ್ನು ಬಳಸ

ಚುಮು ಚುಮು ಚಳಿಯಲ್ಲಿ ಬಿಸಿ, ಬಿಸಿ ಕರಿದ ತಿಂಡಿಗಳು ಅಥವಾ ಕಾಫಿ, ಟೀ ಕುಡಿಯುವ ಮಜಾನೇ ಬೇರೆ. ಆದರೆ ನಮ್ಮ ನಾಲಿಗೆ ನಿಯಮಿತ ಬಿಸಿಯನ್ನು ತಡೆಯಲು ಶಕ್ತವಿದೆ, ಅದನ್ನೂ ಮೀರಿ ತಿನ್ನುವ, ಕುಡಿಯುವ ಭರದಲ್ಲಿ ಅತಿಯಾದ ಬಿಸಿಯನ್ನು ಇಟ್ಟರೆ ನಾಲಿಗೆ ಚುರ್.. ಎನ್ನುವ ನೋವು ಅಬ್ಬಬಾ ಉರಿಯೋ ಉರಿ!. ಬಿಸಿಯ ರುಚಿ ನಾಲಿಗೆಯಿಂದ ಉದರ ಸೇರುವ ಮುನ್ನವೇ ನಾಲಿಗೆಯಲ್ಲಿ ನೋವು ತಾಂಡವವಾಡುತ್ತಿರುತ್ತದೆ. ಇದಕ್ಕೆ ಚಿಕಿತ್ಸೆ ನೀಡದಿದ್ದರೆ ಒಂದೆರಡು ದಿನ ನಾಲಿಗೆಗೆ ಸಂವೇದನೆಯೇ ಇರುವುದಿಲ್ಲ. ಯಾವುದೇ ರುಚಿ ಹಿಡಿಸುವುದಿಲ್ಲ, ಖಾರ ತಿನ್ನಲು ಸಾಧ್ಯವಾಗುವುದಿಲ್ಲ, ಮತ್ತೆ ಬಿಸಿ ಪದಾರ್ಥ ತಿನ್ನಲು ಆಗುವುದಿಲ್ಲ ಒಂದೇ, ಎರಡೇ ಸಮಸ್ಯೆಗಳು.

ಗ್ರಾಹಕರಿಗೆ ಸಿಹಿಸುದ್ದಿ! 59 ನಿಮಿಷದಲ್ಲಿ ಸಾಲ ಅನುಮೋದನೆ

  • ದೇಶದ ಮಂದಗತಿಯ ಆರ್ಥಿಕತೆಗೆ ಕ್ರಾಂತಿಕಾರಕ ವೇಗ ನೀಡಲು ಕೇಂದ್ರ ಸರ್ಕಾರ ಮುಂದಾಗಿದ್ದು ತ್ವರಿತಗತಿಯ ಸಾಲ ವಿತರಣೆಗೆ ಬ್ಯಾಂಕುಗಳಿಗೆ ಸೂಚನೆ ನೀಡಿದೆ.
  • ಸಾರ್ವಜನಿಕ ವಲಯದ ಬ್ಯಾಂಕುಗಳು ತಮ್ಮ ಚಿಲ್ಲರೆ ಸಾಲ ವ್ಯವಹಾರವನ್ನು ವಿಸ್ತರಿಸುವ ಉದ್ದೇಶದಿಂದ ಗೃಹ, ಶಿಕ್ಷಣ ಮತ್ತು ವಾಹನ ಸಾಲ ಸೇರಿದಂತೆ ಚಿಲ್ಲರೆ ಉತ್ಪನ್ನಗಳನ್ನು 'psbloansin59minutes' ಪೋರ್ಟಲ್ ಮೂಲಕ ಪರಿಚಯಿಸಲು ಸಜ್ಜಾಗುತ್ತಿವೆ. ಈ ಅಂತರ್ಜಾಲ ತಾಣದ ಮೂಲಕ ಗೃಹ ಸಾಲ, ವಾಹನ ಸಾಲ, ಶೀಕ್ಷಣ, ವೈಯಕ್ತಿಕ ಸಾಲ ಸೇರಿದಂತೆ ಸೌಲಭ್ಯಗಳು ಸಿಗಲಿವೆ.

ಇಂಜಿನಿಯರಿಂಗ್‌ ಪದವೀಧರರಿಗೆ ಉದ್ಯೋಗ ಕೈತಪ್ಪುತ್ತಿರುವುದು ಏಕೆ.? ಪರಿಹಾರ ಏನು..?

ನೀವು ಎಲ್ಲಿಗಾದರೂ ಹೋಗಿ, ಅದು ಮನೆ, ಸೂಪರ್‌ ಮಾರ್ಕೆಟ್ ಅಥವಾ ಸಂಗೀತ ಕಚೇರಿ ಆಗಿರಬಹುದು. ಆ ಸ್ಥಳಕ್ಕೆ ತಕ್ಕಂತೆ ನಿಮ್ಮ ನಡವಳಿಕೆ, ಆಲೋಚನೆಗಳು ಮತ್ತು ಕಾರ್ಯಗಳನ್ನು ಬದಲಾಯಿಸಿಕೊಂಡು ಅಲ್ಲಿಗೆ ಹೊಂದಿಕೊಳ್ಳುತ್ತೀರಿ. ಅಂತೆಯೇ, ಪ್ರತಿ ಕೆಲವು ವರ್ಷಗಳಿಗೊಮ್ಮೆ ಸಾಂಸ್ಥಿಕ ಮತ್ತು ಸರ್ಕಾರಿ ಮಟ್ಟಗಳಲ್ಲಿ ರೂಪಿತವಾದ ವಿವಿಧ ನಿಯಮಗಳಿಂದ ಹಾಗೂ ಸುಗಮ ಕಾರ್ಯನಿರ್ವಹಣೆಗಾಗಿ ಹೊಸ ತಂತ್ರಜ್ಞಾನದ ಅನುಷ್ಠಾನದಿಂದ ವೃತ್ತಿಪರತೆಯಲ್ಲಿ ವಿವಿಧ ಬೆಳವಣಿಗೆಗಳು, ಬದಲಾವಣೆಗಳು ಕಾಣುತ್ತವೆ. ಈ ಬದಲಾವಣೆಗಳಿಗೆ ನೀವು ಹೊಂದಿಕೊಳ್ಳದಿದ್ದರೆ ವೃತ್ತಿ ಜೀವನದಲ್ಲಿ ನಿಮಗೆ ಹಿನ್ನಡೆಯಾಗುವ ಅಪಾಯ ಖಂಡಿತವಾಗಿಯೂ ಇರುತ್ತದೆ.

ನೀವು ಒಂದೇ ಮಗುವಿನ ಪೋಷಕರೇ; ಇರಲಿ ಈ ಬಗ್ಗೆ ಎಚ್ಚರ!

ಮಕ್ಕಳು ಉತ್ತಮ ಗುಣಗಳನ್ನು ಅಳವಡಿಸಿಕೊಂಡು ಜೀವನದಲ್ಲಿ ಯಶಸ್ವೀ ಆಗಬೇಕೆಂದು ಪ್ರತಿಯೊಬ್ಬ ಪಾಲಕರು ಇಚ್ಚಿಸುತ್ತಾರೆ. ಅದರಲ್ಲೂ ಒಂದೆ ಮಗು ಇರುವ ಪೋಷಕರಂತೂ ತಮ್ಮ ಜೀವಮಾನವಿಡೀ ಆ ಮಗುವಿನ ಲಾಲನೆ, ಪೋಷಣೆ ಪ್ರತಿಯೊಂದರಲ್ಲೂ ಅತಿಯಾದ ಕಾಳಜಿ ವಹಿಸಿ ಸಲುಹಿರುತ್ತಾರೆ. ಆದರೆ ಈ ಅತಿಯಾದ ಕಾಳಜಿ, ಅತಿಯಾದ ಸೇವೆ ಮಕ್ಕಳ ಮುಂದಿನ ಭವಿ‍ಷ್ಯಕ್ಕೆ ಖಂಡಿತ ಮಾತಕವಾದೀತು ಎಚ್ಚರ. ಒಂದೇ ಮಗುವಿನ ಆರೈಕೆಯಲ್ಲಿ ಇಂದಿನ ಪೋಷಕರು ಎಡವುತ್ತಾರೆ. ಅತಿಯಾದ, ಪ್ರೀತಿ ಕಾಳಜಿ, ಸೇವೆ ಮಾಡಿ ಮಗು ಸ್ವ ಅಭಿವೃದ್ಧಿ, ಸ್ವಯೋಚನೆಯನ್ನೇ ಮಾಡದಂಥ ಪರಿಸ್ಥಿತಿಗೆ ದೂಡಿರುತ್ತಾರೆ.

ದೇಶದ ಮಾರುಕಟ್ಟೆಗೆ ಗ್ಯಾಲಕ್ಸಿ ನೋಟ್ 10 ಮತ್ತು ನೋಟ್ 10+ ಎಂಟ್ರಿ!

ಈ ತಿಂಗಳ ಆರಂಭದಲ್ಲಿ ನ್ಯೂಯಾರ್ಕ್‌ನಲ್ಲಿ ಬಿಡುಗಡೆಯಾಗಿದ್ದ ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 10 ಮತ್ತು ಗ್ಯಾಲಕ್ಸಿ ನೋಟ್ 10+ ಎರಡೂ ಸ್ಮಾರ್ಟ್‌ಫೋನ್‌ಗಳನ್ನು ಔಪಚಾರಿಕವಾಗಿ ಭಾರತದಲ್ಲಿ ಇಂದು ಬಿಡುಗಡೆ ಮಾಡಲಾಗಿದೆ. ಬೆಂಗಳೂರಿನಲ್ಲಿ ಆಯೋಜನೆಯಾಗಿದ್ದ ಮೊಬೈಲ್ ಬಿಡುಗಡೆ ಸಮಾರಂಭದಲ್ಲಿ ಗ್ಯಾಲಕ್ಸಿ ನೋಟ್ 10 ಮತ್ತು ಗ್ಯಾಲಕ್ಸಿ ನೋಟ್ 10+ ಸ್ಮಾರ್ಟ್‌ಫೋನ್‌ಗಳನ್ನು ಸ್ಯಾಮ್‌ಸಂಗ್ ಅನಾವರಣಗೊಳಿಸಿದ್ದು, ಇಂದಿನಿಂದಲೇ ಪೂರ್ವ-ಆದೇಶಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿದೆ.

ಜನ್ಮಾಷ್ಟಮಿ 2019: ಕೃಷ್ಣಸ್ಮರಣೆಯಿಂದ ಕಷ್ಟ ಕಾರ್ಪಣ್ಯ ತ್ವರಿತ ಪರಿಹಾರ

ಕೃಷ್ಣ ಜನ್ಮಾಷ್ಟಮಿಯು ಹಿಂದೂಗಳಿಗೆ ಪ್ರಾಮುಖ್ಯ ಹಬ್ಬ. ಈ ಹಬ್ಬವನ್ನು ದೇಶದೆಲ್ಲೆಡೆ ತುಂಬಾ ಭಕ್ತಿ ಮತ್ತು ಉತ್ಸಾಹದಿಂದ ಆಚರಿಸಲಾಗುತ್ತದೆ. ಜನ್ಮಾಷ್ಟಮಿಯಂದು ಹಿಂದೂಗಳು ಕೃಷ್ಣ ಪರಮಾತ್ಮ ಭೂಮಿಯಲ್ಲಿ ಜನಿಸಿದ ಸಂಭ್ರಮವನ್ನು ಆಚರಿಸುತ್ತಾರೆ. ಹಿಂದೂ ಪಂಚಾಂಗದ ಭಾದ್ರಪದ ತಿಂಗಳ ಕೃಷ್ಣ ಪಕ್ಷದಂದು ಜನ್ಮಾಷ್ಟಮಿ ಆಚರಿಸಲಾಗುತ್ತದೆ. 2019ರಲ್ಲಿ ಆಗಸ್ಟ್ 24ರ ಶನಿವಾರದಂದು ಕೃಷ್ಣ ಜನ್ಮಾಷ್ಟಮಿ ಆಚರಿಸಲಾಗುವುದು. ಜನ್ಮಾಷ್ಟಮಿಯ ಅರ್ಥವು ತುಂಬಾ ಆಳವಾಗಿ ಬೇರೂರಿದೆ ಮತ್ತು ಪ್ರತಿಯೊಬ್ಬ ಮಾನವನ ಜೀವನದಲ್ಲಿ ಪಾಪಗಳೆಂಬ ಕತ್ತಲೆಯು ಆವರಿಸಿಕೊಂಡಿರುತ್ತದೆ ಎನ್ನುವ ಗಾಢಾರ್ಥವಿದೆ.

ಕೃಷ್ಣ ಜನ್ಮಾಷ್ಟಮಿ 2019: ಅಷ್ಟಮಿಯಂದು ಭಕ್ತರು ಯಾಕೆ ಉಪವಾಸ ಮಾಡುತ್ತಾ

ವಿಶ್ವದಾದ್ಯಂತ ಸಂತೋಷ, ಉತ್ಸಾಹ ಮತ್ತು ಹುರುಪಿನಿಂದ ಆಚರಿಸುವ ಹಿಂದೂಗಳ ಹಬ್ಬವೇ ಶ್ರೀ ಕೃಷ್ಣ ಜನ್ಮಾಷ್ಟಮಿ. ಜನ್ಮಾಷ್ಟಮಿ ಶ್ರೀ ಕೃಷ್ಣನು ಜನ್ಮ ಹೊಂದಿದ ದಿನ. ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಘಟನೆಗಳನ್ನು ಜನ್ಮಾಷ್ಟಮಿ ಪ್ರಯುಕ್ತ ಆಚರಿಸುತ್ತಾರೆ. 2019ರಲ್ಲಿ ಆಗಸ್ಟ್ 24ರ ಶನಿವಾರದಂದು ಕೃಷ್ಣ ಜನ್ಮಾಷ್ಟಮಿ ಆಚರಿಸಲಾಗುವುದು. ಜನ್ಮಾಷ್ಟಮಿಯಂದು ಅನೇಕ ಆಧ್ಯಾತ್ಮಿಕ ಆಚರಣೆ ಮತ್ತು ಸಂಪ್ರದಾಯಗಳನ್ನು ಅನುಸರಿಸುತ್ತಾರೆ. ಉದಾಹರಣೆಗೆ: ಉಪವಾಸಮಾಡುವುದು ಈ ಹಿಂದೂ ಹಬ್ಬದಲ್ಲಿ ಸಾಮಾನ್ಯ ಆಚರಣೆಯಾಗಿದೆ.

4G ನೆಟ್‌ವರ್ಕ್ ವೇಗದಲ್ಲಿ ಕಿಂಗ್ ಯಾರು?..ಜಿಯೋ ಸ್ಥಾನವೇನು?

ಜುಲೈ-2019 ತಿಂಗಳ ಟ್ರಾಯ್ ವರದಿಯ ಪ್ರಕಾರ 4G ನೆಟ್‌ವರ್ಕ್‌ ಡೌನ್‌ಲೋಡ್‌ ವೇಗದಲ್ಲಿ ಮುಂಚೂಣಿಯ ಸ್ಥಾನದಲ್ಲಿ ಜಿಯೋ ಇದೆ. ಆದ್ರೆ 4G ನೆಟ್‌ವರ್ಕ್‌ನಲ್ಲಿ ಅಪ್‌ಲೋಡ್‌ ಮಾಡುವ ವೇಗದಲ್ಲಿ ವೊಡಾಫೋನ್ ಹೆಚ್ಚು ಸ್ಪೀಡ್‌ ಹೊಂದಿದೆ. 4G ನೆಟ್‌ವರ್ಕ್‌ನಲ್ಲಿ ಜಿಯೋ ಡೌನ್‌ಲೋಡ್‌ ವೇಗದಲ್ಲಿ ಹೆಚ್ಚಳ ಕಂಡುಬಂದಿದ್ದು, ಜುಲೈನಲ್ಲಿ ಡೌನ್‌ಲೋಡ್‌ ವೇಗ 21Mbps ಆಗಿದ್ದು, ಕಳೆದ ಜೂನ್‌ನಲ್ಲಿ 17.6Mbps ದಾಖಲಾಗಿತ್ತು ಎಂದು ಟ್ರಾಯ್ ತಿಳಿಸಿದೆ.

ಶ್ರೀಕೃಷ್ಣ ಜನ್ಮಾಷ್ಟಮಿ 2019: ಆಚರಣೆಯ ಮಹತ್ವ ತಿಳಿದುಕೊಳ್ಳಿ

ಕೃಷ್ಣ ಜನ್ಮಾಷ್ಟಮಿಯು ಹಿಂದೂಗಳಿಗೆ ಪ್ರಾಮುಖ್ಯ ಹಬ್ಬ. ಈ ಹಬ್ಬವನ್ನು ದೇಶದೆಲ್ಲೆಡೆ ತುಂಬಾ ಭಕ್ತಿ ಮತ್ತು ಉತ್ಸಾಹದಿಂದ ಆಚರಿಸಲಾಗುತ್ತದೆ. ಜನ್ಮಾಷ್ಟಮಿಯಂದು ಹಿಂದೂಗಳು ಕೃಷ್ಣ ಪರಮಾತ್ಮ ಭೂಮಿಯಲ್ಲಿ ಜನಿಸಿದ ಸಂಭ್ರಮವನ್ನು ಆಚರಿಸುತ್ತಾರೆ. ಹಿಂದೂ ಪಂಚಾಂಗದ ಭಾದ್ರಪದ ತಿಂಗಳ ಕೃಷ್ಣ ಪಕ್ಷದಂದು ಜನ್ಮಾಷ್ಟಮಿ ಆಚರಿಸಲಾಗುತ್ತದೆ. ಕೃಷ್ಣನ ಮಾವ ಕಂಸನು ಕೃಷ್ಣನ ತಂದೆ-ತಾಯಿಯನ್ನು ಜೈಲಿನಲ್ಲಿ ಬಂಧಿಸಿಟ್ಟಿರುತ್ತಾನೆ. ಅಲ್ಲೇ ರಾತ್ರಿ ವೇಳೆ ಕೃಷ್ಣನ ಜನನವಾಗುತ್ತದೆ ಎಂದು ಪುರಾಣಗಳಲ್ಲಿವೆ. ಕೃಷ್ಣನ ಜನನದ ವೇಳೆ ತಂದೆ-ತಾಯಿ ಕೈಯಲ್ಲಿದ್ದ ಕೈಕೋಳಗಳು ಬಿಡುಗಡೆಯಾಗಿ, ಜೈಲಿನ ಬಾಗಿಲುಗಳು ತನ್ನಿಂದತಾನೇ ತೆರೆದುಕೊಂಡವು.

Advertisement

12 ವರ್ಷಗಳ ಡೇಟಿಂಗ್ ನಂತರ ಕೊನೆಗೂ ಮದುವೆಯಾದ ಹಾಲಿವುಡ್ ನಟ 'ದಿ ರಾಕ್'

ಹಾಲಿವುಡ್ ನಟ 'ದಿ ರಾಕ್' ಖ್ಯಾತಿಯ ಡ್ವೇನ್ ಜಾನ್ಸನ್ ಅಂತೂ ಮದುವೆ ಆಗಿದ್ದಾರೆ. ನಿನ್ನೆ (ಆಗಸ್ಟ್ 19) ಗಾಯಕಿ ಲಾರೆನ್ ಹಶಿಯಾನ್ ಜೊತೆಗೆ ಹವಾಲಿ ದ್ವೀಪದಲ್ಲಿ ರಾಕ್ ವಿವಾಹ ನೆರವೇರಿದೆ.

ಕಳೆದ 12 ವರ್ಷಗಳಿಂದ ಡ್ವೇನ್ ಜಾನ್ಸನ್ ಹಾಗೂ ಲಾರೆನ್ ಹಶಿಯಾನ್ ಡೇಟಿಂಗ್ ಮಾಡುತ್ತಿದ್ದರು. 2006 ರಲ್ಲಿ ಮೊದಲ ಬಾರಿಗೆ 'ದಿ ಗೇಮ್ ಪ್ಲಾನ್' ಸೆಟ್ ನಲ್ಲಿ ಈ ಜೋಡಿ ಭೇಟಿ ಮಾಡಿದ್ದು, ಅಲ್ಲಿಂದ ಇಬ್ಬರ ಸ್ನೇಹ ಶುರು ಆಗಿತ್ತು. ಮದುವೆಗೆ ಮುನ್ನ ಇಬ್ಬರು ಮಕ್ಕಳಿಗೆ ಲಾರೆನ್ ಹಶಿಯಾನ್ ಜನ್ಮ ನೀಡಿದ್ದರು.ಹಾಲಿವುಡ್ ನಟ 'ದಿ ರಾಕ್' ಖ್ಯಾತಿಯ ಡ್ವೇನ್ ಜಾನ್ಸನ್ ಅಂತೂ ಮದುವೆ ಆಗಿದ್ದಾರೆ. ನಿನ್ನೆ (ಆಗಸ್ಟ್ 19)

ಕೃಷ್ಣ ಜನ್ಮಾಷ್ಟಮಿ 2019: ತಿಳಿದುಕೊಳ್ಳಬೇಕಾದ ವಿಚಾರಗಳು

ಹಿಂದೂ ಧರ್ಮದಲ್ಲಿ ಶ್ರೀಕೃಷ್ಣನನ್ನು ಪ್ರಾಥಮಿಕ ದೇವತೆಯನ್ನಾಗಿ ಆರಾಧಿಸಲಾಗುವುದು. ಕೃಷ್ಣ ಜನ್ಮಿಸಿದ ದಿನವನ್ನು ಕೃಷ್ಣ ಜನ್ಮಾಷ್ಟಮಿ ಎಂದು ಆಚರಿಸಲಾಗುವುದು. ಅದನ್ನು ಕೃಷ್ಣಾಷ್ಟಮಿ, ಕೃಷ್ಣ ಜನ್ಮಾಷ್ಟಮಿ, ಭಡೋ ಅಷ್ಟಮಿ, ರೋಹಿಣಿ ಅಷ್ಟಮಿ, ಕೃಷ್ಣ ಜಯಂತಿ ಎಂದೂ ಸಹ ಕರೆಯುತ್ತಾರೆ. ದಕ್ಷಿಣ ಭಾರತೀಯರ ಪ್ರಕಾರ ಕೃಷ್ಣನು ಶ್ರಾವಣ ಮಾಸದಲ್ಲಿ ಜನಿಸಿದ್ದನು ಎಂದು ಹೇಳಲಾಗುತ್ತದೆ. ಉತ್ತರ ಭಾರತ ಹಾಗೂ ದಕ್ಷಿಣ ಭಾರತದಲ್ಲಿ ಮಾಸಗಳ ವ್ಯತ್ಯಾಸ ಬಿಟ್ಟರೆ ಒಂದೇ ದಿನದಂದು ಆಚರಣೆ ಮಾಡಲಾಗುವುದು. ಸಪ್ಟೆಂಬರ್ 2,2018 ರಂದು ಕೃಷ್ಣ ಜನ್ಮಾಷ್ಟಮಿ ಆಚರಿಸಲಾಗುವುದು.

ಕಂಗನಾ ತೊಟ್ಟಿದ್ದ ಸೀರೆ ಬೆಲೆ ಲಕ್ಷ, ಕೋಟಿ ಅಲ್ಲ ಕೇವಲ 600 ರೂಪಾಯಿ.!

ಸೆಲೆಬ್ರಿಟಿಗಳ ತೊಡುವ ಬಟ್ಟೆ ದುಬಾರಿಯಾಗಿರುತ್ತೆ ಎಂಬ ನಂಬಿಕೆ ಇದೆ. ಆ ನಂಬಿಕೆಯಂತೆ ಸಿನಿಮಾ ಸ್ಟಾರ್ ಗಳು ಕೂಡ ವಿಶೇಷವಾಗಿ ಡಿಸೈನ್ ಮಾಡಿಸಿ ಬಟ್ಟೆ ಖರೀದಿಸುತ್ತಾರೆ. ಅದರ ಬೆಲೆ ಲಕ್ಷ ಆಗಿರಬಹುದು ಅಥವಾ ಕೋಟಿ ಆಗಿರಬಹುದು.

ಅದರಲ್ಲೂ ಬಾಲಿವುಡ್ ಸ್ಟಾರ್ ಗಳ ಖರೀದಿಸಿರುವ ಬಟ್ಟೆಯ ಬೆಲೆ ಅಂತೂ ಕೋಟಿಗಟ್ಟಲೆ ಆಗಿರುವ ಉದಾಹರಣೆಯೂ ಇದೆ. ಆದ್ರೆ, ಈ ವಿಚಾರದಲ್ಲಿ ಕ್ವೀನ್ ನಟಿ ಕಂಗನಾ ರಣಾವತ್ ಹೊಸ ಹೆಜ್ಜೆ ಇಟ್ಟಿದ್ದಾರೆ.

ಸೆಲೆಬ್ರಿಟಿಗಳು ನೂರು, ಇನ್ನೂರು, ಐನೂರು ರೂಪಾಯಿ ಬಟ್ಟೆಯೂ ತೊಡಬಹುದು ಎಂಬುದನ್ನ ತೋರಿಸಿದ್ದಾರೆ. ಹೌದು, ಇತ್ತೀಚಿಗಷ್ಟೆ ಕಂಗನಾ ಅವರು 600 ಬೆಲೆಯ

'ಕುರುಕ್ಷೇತ್ರ' ಸಿನಿಮಾವನ್ನು ದರ್ಶನ್ ಎಷ್ಟುಬಾರಿ ನೋಡಿದ್ದಾರೆ ಗೊತ್ತಾ?

ಕುರುಕ್ಷೇತ್ರ ಸ್ಯಾಂಡಲ್ ವುಡ್ ನಲ್ಲಿ ಧೂಳ್ ಎಬ್ಬಿಸುತ್ತಿರುವ ಪೌರಾಣಿಕ ಸಿನಿಮಾ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 50ನೇ ಸಿನಿಮಾ ಎನ್ನುವ ವಿಶೇಷತೆ ಒಂಡೆದೆ ಆದ್ರೆ, ದೊಡ್ಡ ತಾರಾಬಳಗ, 3ಡಿ ಎಫೆಕ್ಟ್, ಅದ್ದೂರಿ ಗ್ರಾಫಿಕ್ಸ್ ಚಿತ್ರದ ಮತ್ತೊಂದು ಹೈಲೆಟ್.

ಮಹಾಭಾರತ ಕಥೆಯನ್ನು ಸಿನಿಮಾ ಮೂಲಕ ಇಂದಿನ ಯುವಜನತೆಯ ಮುಂದಿಟ್ಟು ಯುವಜನರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ ನಿರ್ಮಾಪಕ ಮುನಿರತ್ನ. ಕುರುಕ್ಷೇತ್ರ ಸಿನಿಮಾಗೆ ಎಲ್ಲಾ ಕಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ದುರ್ಯೋಧನನಾಗಿ ಮಿಂಚಿರುವ ದರ್ಶನ್ ಕುರುಕ್ಷೇತ್ರ ಸಿನಿಮಾವನ್ನು ಮೂರು ಬಾರಿ ನೋಡಿದ್ದಾರಂತೆ.

ಕಾಲಲ್ಲಿ ಚಪ್ಪಲಿ ಇಲ್ಲ, ಕೊಳಕು ಬಟ್ಟೆ, ಚೆನ್ನೈನಲ್ಲಿ ಹುಚ್ಚ ವೆಂಕಟ್ ಅಲೆದಾಟ

ಕೊಳಕು ಬಟ್ಟೆ, ಕಾಲಲ್ಲಿ ಚಪ್ಪಲಿ ಇಲ್ಲ, ಹುಚ್ಚನಂತೆ ಚೆನ್ನೈನ ಬೀದಿಯಲ್ಲಿ ನಟ ಹುಚ್ಚ ವೆಂಕಟ್ ಅಲೆದಾಡುತ್ತಿರುವ ವಿಡಿಯೋ ಮತ್ತು ಫೋಟೋ ವೈರಲ್ ಆಗಿದೆ. ಯುಎಫ್ ಓ ಕ್ಯೂಬ್ ಅಪ್ ಲೌಡ್ ವಿಚಾರವಾಗಿ ಚೆನ್ನೈಗೆ ತೆರೆಳಿದ್ದ 'ರಾಂಧವ' ಚಿತ್ರ ನಿರ್ದೇಶಕ ಮತ್ತು ನಿರ್ಮಾಪಕರಿಗೆ ವೆಂಕಟ್ ಕಾಣಿಸಿಕೊಂಡಿದ್ದಾರೆ.

ವೆಂಕಟ್ ಅವರನ್ನ ಕಂಡು ಅಚ್ಚರಿಯಾದ ನಿರ್ದೇಶಕ ಸುನೀಲ್ ಆಚಾರ್ಯ ಮತ್ತು ಸ್ನೇಹಿತರು, ಅವರನ್ನ ಮಾತನಾಡಿಸಲು ಮುಂದಾಗಿದ್ದಾರೆ. ಆದ್ರೆ, ವೆಂಕಟ್ ಅವರಿಂದ ಯಾವುದೇ ರೀತಿಯ ಸಹಕಾರ ಸಿಕ್ಕಿಲ್ಲವಂತೆ.

ಹಾಗಾಗಿ, ವೆಂಕಟ್ ಅವರ ಫೊಟೋ ಮತ್ತು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಈ ತಿಂಗಳು ಟ್ರೆಂಡ್‌ನಲ್ಲಿರುವ ಟಾಪ್ 10 ಮಧ್ಯಮ ಶ್ರೇಣಿಯ ಫೋನ್‌ಗಳ ಲೀಸ್ಟ್!

ನೀವು 20,000 ರೂಪಾಯಿಗಳಿಗಿಂತ ಕಡಿಮೆ ಬೆಲೆ ಹೊಂದಿರುವ ಅತ್ಯುತ್ತಮ ಕಾರ್ಯಕ್ಷಮತೆ, ಕ್ಯಾಮೆರಾ ಗುಣಮಟ್ಟ ಮತ್ತು ಉತ್ತಮ ವೈಶಿಷ್ಟ್ಯಗಳುಳ್ಳ ಸ್ಮಾರ್ಟ್‌ಫೋನ್ ಖರೀದಿಸಲು ನೋಡುತ್ತಿರುವಿರಾ? ಹಾಗಾದರೆ, ನಿಮಗೆ ಸಮಸ್ಯೆಯೇ ಇಲ್ಲ ಎನ್ನಬಹುದು. ಏಕೆಂದರೆ, ಈ ವರ್ಷದಲ್ಲಿ 20,000 ರೂಪಾಯಿಗಳ ಸ್ಮಾರ್ಟ್‌ಫೋನ್ ವಿಭಾಗದಲ್ಲಿ ಸಾಕಷ್ಟು ಹೊಸ ಫೋನ್ ಬಿಡುಗಡೆಯಾಗಿವೆ. ಉನ್ನತ ಮಟ್ಟದ ಪ್ರಮುಖ ಸ್ಮಾರ್ಟ್‌ಫೋನ್‌ಗಳೊಂದಿಗೆ ಪೈಪೋಟಿ ನೀಡುವಂತಹ ಭಾರೀ ಫೀಚರ್ಸ್ ಹೊತ್ತು ಇದೀಗ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿವೆ.

ಬಾಲಿವುಡ್ ನಟ ಅಜಯ್ ದೇವಗನ್ ಪತ್ನಿಯಾದ ಕನ್ನಡತಿ ಪ್ರಣೀತಾ

ಸ್ಯಾಂಡಲ್ ವುಡ್ ನಟಿ ಪ್ರಣೀತಾ ಸುಭಾಷ್ ಕನ್ನಡ ಮಾತ್ರವಲ್ಲದೆ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲೂ ಮಿಂಚುತ್ತಿದ್ದಾರೆ. ಬಟ್ಟಲುಕಣ್ಣಿನ ಈ ಸುಂದರಿ ಈಗ ಸೌತ್ ಸಿನಿ ಇಂಡಸ್ಟ್ರಿಯಿಂದ ಬಾಲಿವುಡ್ ಕಡೆ ಮುಖಮಾಡಿದ್ದಾರೆ.

ಬಾಲಿವುಡ್ ಸ್ಟಾರ್ ನಟ ಅಜಯ್ ದೇವಗನ್ ಪತ್ನಿಯಾಗಿ ಪ್ರಣೀತಾ ಕಾಣಿಸಿಕೊಳ್ಳುತ್ತಿದ್ದಾರೆ. ಬಾಲಿವುಡ್ ನ ಭುಜ್: ದಿ ಪ್ರೈಡ್ ಆಫ್ ಇಂಡಿಯಾ ಚಿತ್ರದಲ್ಲಿ ಪ್ರಣೀತಾ ಪ್ರಮುಕ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಮೂಲಕ ಬಾಲಿವುಡ್ ಪಯಣ ಪ್ರಾರಂಭಿಸಿದ್ದಾರೆ.

ಭುಜ್: ದಿ ಪ್ರೈಡ್ ಆಫ್ ಇಂಡಿಯಾ 1971ರಲ್ಲಿ ನಡೆದ ಭಾರತ-ಪಾಕಿಸ್ತಾನ ನಡುವಿನ ಯುದ್ಧವನ್ನು

ರಾಷ್ಟ್ರೀಯತೆ ಚಿತ್ರಗಳಲ್ಲಿ ಇರಲಿ, ಚಿತ್ರಮಂದಿರಗಳಲ್ಲಿ ಬೇಡ - ವಿದ್ಯಾ ಬಾಲನ್

''ಭಾರತೀಯರು ತಮ್ಮ ದೇಶದ ಬಗ್ಗೆ ಹೆಮ್ಮೆ ಪಡುವ ಅನೇಕ ವಿಷಯಗಳು ಇವೆ. ಆದರೆ, ನಾವು ಅದನ್ನು ಮಾಡುವುದೇ ಇಲ್ಲ.'' ಎಂದು ಬಾಲಿವುಡ್ ನಟಿ ವಿದ್ಯಾ ಬಾಲನ್ ಹೇಳಿದ್ದಾರೆ.

ಇತ್ತೀಚಿಗಿನ ಸಂದರ್ಶನದಲ್ಲಿ ಮಾತನಾಡಿರುವ 'ಮಿಷನ್ ಮಂಗಲ್' ನಾಯಕಿ 'ರಾಷ್ಟ್ರೀಯತೆ ಮತ್ತು ಸಿನಿಮಾ' ಬಗ್ಗೆ ಹೇಳಿಕೆ ನೀಡಿದ್ದಾರೆ. ''ರಾಷ್ಟ್ರೀಯತೆ ಸಿನಿಮಾದಲ್ಲಿ ಇರಲಿ ಆದರೆ, ಚಿತ್ರಮಂದಿರದಲ್ಲಿ ಬೇಡ.'' ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಚಿತ್ರಮಂದಿರಗಳಲ್ಲಿ ಹಾಡಿಸುವ ರಾಷ್ಟ್ರಗೀತೆಗಿಂತ ಸಿನಿಮಾಗಳಲ್ಲಿ ರಾಷ್ಟ್ರೀಯತೆ ಇರಬೇಕು ಎನ್ನುವುದು ವಿದ್ಯಾ ಬಾಲನ್ ಮಾತಿನ ಅರ್ಥವಾಗಿದೆ. ''ವಿಶ್ವವನ್ನು ಸುತ್ತಿ ಬಂದರೆ, ಭಾರತೀಯರು

ರಶ್ಮಿಕಾ ಮಂದಣ್ಣ ಮೇಲೆ ಗರಂ ಆದ ತಮಿಳು 'ಸುಲ್ತಾನ್'

ಸ್ಯಾಂಡಲ್ ವುಡ್ ನ ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಬ್ಯುಸಿಯಾಗಿರುವ ವಿಚಾರ ಕನ್ನಡಿಗರಿಗೆ ಗೊತ್ತಿರುವುದೆ. ಕನ್ನಡ ಸಿನಿಮಾಗಳಿಗಿಂತ ಹೆಚ್ಚಾಗಿ ತಮಿಳು ಮತ್ತು ತೆಲುಗು ಸಿನಿಮಾಗಳಲ್ಲಿ ಬಣ್ಣ ಹಚ್ಚುತ್ತಿರುವ ರಶ್ಮಿಕಾ ಇತ್ತೀಚಿಗಷ್ಟೆ ಕಾಲಿವುಡ್ ಪ್ರವೇಶಿಸಿದ್ದರು.

'ಸುಲ್ತಾನ'ನ ಪ್ರೇಯಸಿಯಾದ ನಟಿ ರಶ್ಮಿಕಾ ಮಂದಣ್ಣ

ತಮಿಳಿನಲ್ಲಿ ಮೊದಲ ಸಿನಿಮಾ ಮಾಡುತ್ತಿರುವ ಖುಷಿಯಲ್ಲಿದ್ದಾರೆ ರಶ್ಮಿಕಾ. ಅದೆ ಸಂತಸದಲ್ಲಿ ರಶ್ಮಿಕಾ ಮಾಡಿರುವ ಎಡವಟ್ಟು ಚಿತ್ರತಂಡದ ಕೋಪಕ್ಕೆ ಕಾರಣವಾಗಿದೆ. ಕಾಲಿವುಡ್ ಅಂಗಳದಲ್ಲಿ ಇದೇನಿದು ರಶ್ಮಿಕಾ ಹೊಸ ರಗಳೆ ಎಂದುಕೊಳ್ಳುತ್ತಿದ್ದೀರಾ? ಮುಂದೆ ಓದಿ..