ಬಿಡುಗಡೆಗೆ ಸಜ್ಜಾದ ಸುಜುಕಿ V-Strom 800 DE ಬೈಕ್

ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ಸುಜುಕಿ ಮೋಟಾರ್‌ಸೈಕಲ್ ಇಂಡಿಯಾ ತನ್ನ ಸುಜುಕಿ V-Strom 800 DE (Suzuki V-Strom 800 DE) ಬೈಕ್ ಅನ್ನು ಬಿಡುಗಡೆಗೊಳಿಸಲು ಭರ್ಜರಿಯಾಗಿ ಸಜ್ಜಾಗುತ್ತಿದೆ. ಈ ಹೊಸ ಸುಜುಕಿ V-Strom 800 DE ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಮಾರ್ಚ್ 29 ರಂದು ಬಿಡುಗಡೆಯಾಗಲಿದೆ.

Maruti Suzuki: 2024ರ ಮಾರುತಿ ಸ್ವಿಫ್ಟ್ ವಿಶೇಷತೆಗಳು

ಭಾರತದಲ್ಲಿ ಅಗ್ಗದ ಬೆಲೆಗೆ ಉತ್ತಮ ಮೈಲೇಜ್ ನೀಡುವ ಕಾರು ಬ್ರಾಂಡ್‌ ಆಗಿ ಗುರ್ತಿಸಿಕೊಂಡಿರುವ ಮಾರುತಿ ಸುಜುಕಿ, ತನ್ನ ಮುಂಬರುವ ಮಾರುತಿ ಸ್ವಿಫ್ಟ್ ಹಾಗೂ ಡಿಜೈರ್ ಮೂಲಕ ಹೊಸ ಅಲೆ ಎಬ್ಬಿಸಲು ಸಜ್ಜಾಗಿದೆ. ಈ ಬಹುನಿರೀಕ್ಷಿತ 2024ರ ಹೊಸ ಮಾರುತಿ ಸುಜುಕಿ ಸ್ವಿಫ್ಟ್ ಹಾಗೂ ಡಿಜೈರ್ ಕಾರುಗಳು ಸನ್‌ರೂಫ್‌ನೊಂದಿಗೆ ಬರಲಿವೆ.

Hyundai Creta: ಜನಪ್ರಿಯ ಹ್ಯುಂಡೈ ಕ್ರೆಟಾ ಕಾರನ್ನು ಮನೆಗೆ ತರಬೇಕೇ..

ದೇಶದಲ್ಲಿ ಹ್ಯುಂಡೈ ಕ್ರೆಟಾ ಫೇಸ್‌ಲಿಫ್ಟ್ (Hyundai Creta Facelift) ಎಸ್‌ಯುವಿಗೆ ದಿನ ಕಳೆದಂತೆ ಭಾರೀ ಬೇಡಿಕೆ ಸೃಷ್ಟಿಯಾಗುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಬುಕ್ಕಿಂಗ್ ಮಾಡುತ್ತಿದ್ದಾರೆ. ನೀವು ಈ ಕಾರನ್ನು ಖರೀದಿಸಲು ಯೋಚಿಸುತ್ತಿದ್ದರೆ ಆನ್-ರೋಡ್ ಬೆಲೆ ಹಾಗೂ ಇಎಂಐ ಆಯ್ಕೆ ಬಗ್ಗೆ ಇಲ್ಲಿದೆ ವಿವರ.

ಯುಎಸ್‌ಎ, ಕೆನಡಾಗೂ ಕಾಲಿಟ್ಟ ಭಾರತೀಯ ಬೈಕ್‌

ಭಾರತೀಯ ಕಂಪನಿಯ ಒಡೆತನದಲ್ಲಿರುವ ರಾಯಲ್‌ ಎನ್‌ಫೀಲ್ಡ್‌ ಇತ್ತೀಚಿನ ದಿನಗಳಲ್ಲಿ ಗ್ರಾಹಕರಿಗೆ ಬೇಕಾದ ರೀತಿಯಲ್ಲಿ ಬೈಕ್‌ಗಳನ್ನು ಮಾರುಕಟ್ಟೆಗೆ ತರುತ್ತಿದೆ. ಇದಕ್ಕೆ ಪ್ರಮುಖ ಉದಾಹರಣೆಗಳೆಂದರೆ ಇತ್ತೀಚೆಗೆ ರಾಯಲ್‌ ಎನ್‌ಫೀಲ್ಡ್ ಮಾರುಕಟ್ಟೆಗೆ ತಂದಿರುವ ಬೈಕ್‌ಗಳಾದ ಹಿಮಾಲಯನ್‌ 650 ಮತ್ತು ಶಾಟ್‌ಗನ್ ಎಂಬ ಬೈಕ್‌‌ಗಳು ಎಂದರೆ ತಪ್ಪಾಗಲಾರದು.
Advertisement

Honda: ಭಾರತದಲ್ಲಿ ಹೋಂಡಾ ಹೊಸ ಮೈಲಿಗಲ್ಲು

ದೇಶದ ಪ್ರಮುಖ ದ್ವಿಚಕ್ರ ವಾಹನ ತಯಾರಕ ಹೋಂಡಾ (Honda) ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ. ಕಂಪನಿಯು ಭಾರತದಲ್ಲಿ 6 ಕೋಟಿ ದೇಶೀಯ ಮಾರಾಟದ ಐತಿಹಾಸಿಕ ಸಾಧನೆಯನ್ನು ಸಾಧಿಸಿದೆ. ಈ ಸಾಧನೆಯು ಹೋಂಡಾದ ಭಾರತೀಯ ಮಾರುಕಟ್ಟೆಗೆ ಅಚಲವಾದ ಬದ್ಧತೆಯನ್ನು ಒತ್ತಿಹೇಳುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

ಜನಪ್ರಿಯ ಕಂಪನಿಗಳಿಂದ ಮುಂಬರುವ ಪುಟ್ಟ ಕಾರುಗಳಿವು..

ಭಾರತದಲ್ಲಿ ಮುಂಬರುವ ತಿಂಗಳಲ್ಲಿ ವಿವಿಧ ಕಂಪನಿಗಳು ಹೊಚ್ಚ ಹೊಸ ಕಾರುಗಳನ್ನು ಬಿಡುಗಡೆಗೊಳಿಸಲಿವೆ. ಅದರಲ್ಲೂ ಮಧ್ಯಮ ವರ್ಗದ ಜನರಿಗಾಗಿ ಪುಟ್ಟ ಹ್ಯಾಚ್‌ಬ್ಯಾಕ್‌ಗಳನ್ನು ಪರಿಚಯಿಸಲು ತಯಾರಿ ನಡೆಸಲಾಗುತ್ತಿದ್ದು, ಮಾರುತಿ ಸುಜುಕಿ ಸ್ವಿಫ್ಟ್, ಟಾಟಾ ಆಲ್ಟ್ರೋಜ್ ರೇಸರ್ ಮತ್ತು ಹ್ಯುಂಡೈ ಐ20 ಎನ್ ಲೈನ್ ಫೇಸ್‌ಲಿಫ್ಟ್ ಮಾದರಿಗಳು ಲಾಂಚ್ ಆಗಲಿವೆ.

ಬುಕ್ ಮಾಡಿದ ರೈಲಿನ ಸೀಟಿನಲ್ಲಿ ಬೇರೆಯವರು ಕೂತಿದ್ರೆ ಏನ್ ಮಾಡಬೇಕು?

ನಮ್ಮಲ್ಲಿ ಹೆಚ್ಚಿನವರು ರೈಲಿನಲ್ಲಿ (Train) ಪ್ರಯಾಣಿಸುತ್ತಾರೆ. ಆದರೆ ರೈಲು ಪ್ರಯಾಣದ ವೇಳೆ ಜನರು ನಿಮ್ಮ ರಿಸರ್ವ್ ಮಾಡಿದ ಸೀಟಿನಲ್ಲಿ ಬೇರೆವರು ಕೂತಿರುವ ಹಲವಾರು ಘಟನೆಗಳು ವರದಿಯಾಗಿವೆ. ಅಂತಹ ಸಂದರ್ಭಗಳಲ್ಲಿ ಏನು ಮಾಡಬೇಕೆಂದು ಅನೇಕರಿಗೆ ತಿಳಿದಿಲ್ಲ. ಈ ವಿಚಾರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸ್ತಾಪಿಸಿದ ಪ್ರಯಾಣಿಕರಿಗೆ ರೈಲ್ವೆ ಇಲಾಖೆ ಉತ್ತರ ನೀಡಿದೆ.

TVS iQube: ಲಕ್ಷಾಂತರ ಭಾರತೀಯರ ನೆಚ್ಚಿನ ಸ್ಕೂಟರ್‌ನ ಡೌನ್‌ಪೇಮೆಂಟ್

ಭಾರತೀಯ ಎಲೆಕ್ಟ್ರಿಕ್‌ ದ್ವಿಚಕ್ರ ವಾಹನ ಕ್ಷೇತ್ರದಲ್ಲಿ ಓಲಾ ಏಥರ್‌ ಸದ್ದು ಮಾಡುತ್ತಿದ್ದರೂ, ಸದ್ದಿಲ್ಲದಂತೆ ಸದ್ದು ಮಾಡುತ್ತಿರುವ ಕಂಪನಿ ಟಿವಿಎಸ್‌. ಈಗಾಗಲೇ ಮಾರುಕಟ್ಟೆಯಲ್ಲಿ ಟಿವಿಎಸ್‌ ಐಕ್ಯೂಬ್, ಚೇತಕ್‌ನಂತಹ ಸ್ಕೂಟರ್‌ಗಳನ್ನು ಪರಿಚಯಿಸಿದ್ದರೂ,‌ ಜನಪ್ರಿಯವಾಗುತ್ತಿರುವುದು ಟಿವಿಎಸ್‌ನ ಐಕ್ಯೂಬ್‌. ಇಂದಿನ ಲೇಖನದಲ್ಲಿ ಈ ಸ್ಕೂಟರ್‌ನ ಇಎಂಐ, ಲೋನ್‌, ಡೌನ್‌ಪೇಮೆಎಂಟ್ ಕುರಿತಾಹಿ ನೋಡೋಣ ಬನ್ನಿ.

viral video: ಬೆಂಗಳೂರಿನಲ್ಲಿ ಮಾತ್ರ ಸಾಧ್ಯ

viral video: ಸೋಷಿಯಲ್ ಮೀಡಿಯಾದಲ್ಲಿ ನಿತ್ಯ ಯಾವುದೋ ಒಂದು ವೈರಲ್ ವಿಡಿಯೋ ನೋಡುತ್ತಲೇ ಇರುತ್ತೇವೆ. ವೈರಲ್ ಆಗಿ ಸಾರ್ವಜನಿಕರಲ್ಲಿ ಗುರ್ತಿಸಿಕೊಳ್ಳಲು ಸೊಷಿಯಲ್ ಮೀಡಿಯಾ ಒಂದಿದ್ದರೇ ಸಾಕು, ಕೆಲವರು ಬೇಕಂತಲೇ ವೈರಲ್ ಆಗಲು ಶ್ರಮಿಸಿದರೇ, ಇನ್ನೂ ಕೆಲವರು ಅಕಸ್ಮಾತ್ ಆಗಿ ವೈರಲ್ ಆಗಿಬಿಡುತ್ತಾರೆ. ಇದೀಗ ಮಹಿಳೆಯೊಬ್ಬರು ಹೀಗೆಯೇ ವೈರಲ್ ಆಗಿದ್ದಾರೆ.

ಯುಗಾದಿ ಜಾತ್ರೆ: ಶ್ರೀಶೈಲ ಮಲ್ಲಿಕಾರ್ಜುನನ ಭಕ್ತರಿಗೆ ಸಿಹಿಸುದ್ದಿ

ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಎನ್‌ಡಬ್ಲ್ಯುಕೆಆರ್‌ಟಿಸಿ - NWKRTC) ತನ್ನ ಪ್ರಯಾಣಿಕರಿಗೆ ಭರ್ಜರಿ ಸಿಹಿಸುದ್ದಿ ನೀಡಿದೆ. ಯುಗಾದಿ ಜಾತ್ರೆ ಹಿನ್ನೆಲೆ, ಚಿಕ್ಕೋಡಿ ವಿಭಾಗದಿಂದ ಪ್ರಸಿದ್ಧ ಪುಣ್ಯಕ್ಷೇತ್ರವಾದ ಶ್ರೀಶೈಲಕ್ಕೆ ವಿಶೇಷ ಬಸ್ ಸೌಕರ್ಯವನ್ನು ಕಲ್ಪಿಸಲಾಗಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

ಇದು ಮಹೀಂದ್ರಾ ಥಾರ್ ಹೊಸ ಅಧ್ಯಾಯ

ಮಹೀಂದ್ರಾ ಥಾರ್ (Mahindra Thar) ಎಸ್‍ಯುವಿಯು ಬಹಳ ವರ್ಷಗಳಿಂದ ದೇಶಿಯ ಮಾರುಕಟ್ಟೆಯಲ್ಲಿ ಜನಪ್ರಿಯ ಆಫ್ ರೋಡರ್ ಎಸ್‍ಯುವಿ ಮಾದರಿಯಾಗಿದೆ. ಸದ್ಯ ದೇಶಿಯ ಮಾರುಕಟ್ಟೆಯಲ್ಲಿರುವ ಪ್ರಸ್ತುತ ಜನರೇಷನ್ ಮಹೀಂದ್ರಾ ಥಾರ್ ಮಾದರಿಯು ಬಹುಬೇಡಿಯೊಂದಿಗೆ ಭರ್ಜರಿಯಾಗಿ ಮಾರಾಟವಾಗುತ್ತಿದೆ. ಮಹೀಂದ್ರಾ ಥಾರ್ ಎಸ್‍ಯುವಿಯು ಭಾರತದಲ್ಲಿ ದೊಡ್ಡ ಅಭಿಮಾನಿ ಬಳಗವಿದೆ.

Kia EV9: 2024ರ ವಿಶ್ವ ಕಾರು ಪ್ರಶಸ್ತಿಯಲ್ಲಿ ಡಬಲ್ ಗೆಲುವು

ನ್ಯೂಯಾರ್ಕ್ ಆಟೋ ಶೋನಲ್ಲಿ ನಡೆದ ವರ್ಲ್ಡ್ ಕಾರ್ ಅವಾರ್ಡ್ಸ್ ಸಮಾರಂಭದಲ್ಲಿ ಕಿಯಾ EV9 ವರ್ಷದ ವರ್ಲ್ಡ್ ಕಾರ್ ಮತ್ತು ವರ್ಲ್ಡ್ ಎಲೆಕ್ಟ್ರಿಕ್ ವೆಹಿಕಲ್ ಎರಡಕ್ಕೂ ಪ್ರತಿಷ್ಠಿತ ಶೀರ್ಷಿಕೆಗಳನ್ನು ಪಡೆದುಕೊಂಡು, 2024 ರ ವರ್ಲ್ಡ್ ಕಾರ್ ಅವಾರ್ಡ್ಸ್‌ನಲ್ಲಿ Kia EV9 ಗಮನಾರ್ಹ ವಿಜಯವನ್ನು ಸಾಧಿಸಿದೆ.
Advertisement

Bajaj: ಯುವಕರ ಮನಗೆದ್ದಿರುವ ಪಲ್ಸರ್ ಬೈಕ್‌ಗಳಿವು, ಬೆಲೆ ರೂ.2..

ದೇಶದ ಯುವಕರಿಗೆ ನಿಮ್ಮ ಮೆಚ್ಚಿನ ಬೈಕ್ ಯಾವುದೆಂದು ಕೇಳಿದರೆ ತಕ್ಷಣ ಬರುವ ಒಂದೇ ಉತ್ತರ 'ಬಜಾಜ್ ಪಲ್ಸರ್' ಎಂದು. ಅಷ್ಟರಮಟ್ಟಿಗೆ ಈ ಮೋಟಾರ್‌ಸೈಕಲ್ ಜನಪ್ರಿಯತೆ ಗಳಿಸಿದೆ. ಇಲ್ಲಿ ರೂ.2 ಲಕ್ಷಕ್ಕಿಂತ ಕಡಿಮೆ ಬೆಲೆ ಹಾಗೂ 50 ಕಿಲೋಮೀಟರ್‌ಗೂ ಹೆಚ್ಚಿನ ಮೈಲೇಜ್ ನೀಡುವ ವಿವಿಧ ಪಲ್ಸರ್ ಮಾದರಿಗಳ ಬಗ್ಗೆ ವಿವರಿಸಿದ್ದೇವೆ.

ಥಾರ್ 5 ಡೋರ್‌ ಬಿಡುಗಡೆಗೂ ಮುನ್ನವೇ ಎದುರಾಳಿ ರೆಡಿ

ಕಾರು ಪ್ರೀಯರ ನಾಡುಗಳನ್ನು ತೆಗೆದುಕೊಂಡರೆ ನಮ್ಮ ಭಾರತ ಅದರಲ್ಲಿ ಅಗ್ರ ಪಂಕ್ತಿಯಲ್ಲಿ ನಿಲ್ಲುವುದು ಖಂಡಿತಾ. ಹಲವು ರೀತಿಯ ಭೌಗೋಳಿಕ ಪ್ರದೇಶಗಳನ್ನೊಳಗೊಂಡ ಭಾರತದಲ್ಲಿ ಅದಕ್ಕೆ ತಕ್ಕುದಾದ ರೀತಿಯಲ್ಲಿ ಕಾರುಗಳನ್ನು ನಿರ್ಮಾಣ ಮಾಡಿ ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳುವುದರಲ್ಲಿ ಕಾರು ನಿರ್ಮಾಣ ಕಂಪನಿಗಳು ಮಗ್ನವಾಗಿ ಬಿಟ್ಟಿವೆ ಎನ್ನಬಹುದು.

ಟಾಟಾ ಟಿಯಾಗೋ ಇವಿ EMI, ಆನ್ ರೋಡ್ ಬೆಲೆ ಎಷ್ಟು?

ಭಾರತದಲ್ಲಿ ಪೆಟ್ರೋಲ್ - ಡೀಸೆಲ್ ಬೆಲೆಗಳು ಗಗನಕ್ಕೆರಿದೆ. ಏರುತ್ತಿರುವ ಇಂಧನ ಬೆಲೆಗಳಿಂದ ಪಾರಾಗಲು ಜನರು ಪರ್ಯಾಯ ಆಯ್ಕೆಗಳನ್ನು ಹುಡುಕಲು ಆರಂಭಿಸಿದ್ದಾರೆ. ಇದರಿಂದ ಜನರು ನಿಧಾನವಾಗಿ ಎಲೆಕ್ಟ್ರಿಕ್ ಕಾರುಗಳ ಕಡೆ ಮುಖ ಮಾಡುತ್ತಿದ್ದಾರೆ. ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಕಾರುಗಳಿಗೆ ಭರ್ಜರಿ ಬೇಡಿಕೆಯನ್ನು ಪಡೆದುಕೊಳ್ಳುತ್ತಿದೆ. ಈ ವೇಳೆ ಟಾಟಾ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಮುಂದುವರೆಸಲು ಪ್ರಯತ್ನಿಸುತ್ತಿದೆ.

ಜಿಮ್ನಿಗೆ ಸೆಡ್ಡು ಹೊಡೆಯಲು ಎಂಜಿ ಮಾಸ್ಟರ್‌ ಪ್ಲಾನ್‌

ಮಹೀಂದ್ರಾ ಥಾರ್‌ ಅನ್ನು ಸೈಡ್‌ ಲೈನ್‌ ಮಾಡಬೇಕೆನ್ನುವ ಉದ್ದೇಶದಿಂದ ಮಾರುತಿ ಸುಜುಕಿ ಜಿಮ್ನಿ 2023 ರ ಆಟೋ ಎಕ್ಸ್ಪೋದಲ್ಲಿ ಮಾರುತಿ ಸುಜುಕಿ ಜಿಮ್ನಿಯನ್ನು ಅನಾವರಣಗೊಳಿಸಿತ್ತು. ಕಳೆದ ವರ್ಷವಷ್ಟೇ ಜಿಮ್ನಿ ಭಾರತೀಯ ಮಾರುಕಟ್ಟೆಯಲ್ಲಿ ಲಾಂಚ್ ಆಗಿದ್ದರೂ, ಇದರ ಡಿಸೈನ್‌ ಮತ್ತು ಫೀಚರ್‌ನಿಂದಾಗಿ ಎಲ್ಲರ ಗಮನ ಸೆಳೆದಿತ್ತು.

KWID: ಜನಪ್ರಿಯ ರೆನಾಲ್ಟ್ ಕ್ವಿಡ್ ಕಾರು ಖರೀದಿಸಬೇಕೇ.. ಆನ್ - ರೋಡ್..

ಪ್ರತಿಯೊಬ್ಬರಿಗೂ ಜೀವನದಲ್ಲಿ ಹೊಸ ಕಾರು ಖರೀದಿಸಬೇಕೆಂಬ ಆಸೆಯಿರುತ್ತದೆ. ಆದರೆ, ಬಜೆಟ್ ಬೆಲೆಗೆ ಯಾವ ಗಾಡಿ ಸಿಗುತ್ತದೆ ಎಂಬ ಗೊಂದಲವಿರುತ್ತದೆ. ಇಲ್ಲಿ ಅತ್ಯಾಧುನಿಕವಾಗಿರುವ ರೆನಾಲ್ಟ್ ಕ್ವಿಡ್ (Renault KWID) ಕಾರಿನ ಆನ್ - ರೋಡ್ ಬೆಲೆ ಹಾಗೂ ಇಎಂಐ ಆಯ್ಕೆ ಬಗ್ಗೆ ವಿವರಿಸಿದ್ದೇವೆ.

Citroen Basalt Vision: ಹೊಸ ಕಾಂಪ್ಯಾಕ್ಟ್ ಎಸ್‌ಯುವಿ ಅನಾವರಣ

ಸಿಟ್ರನ್ ಕಂಪನಿಯು ತನ್ನ ಹೊಸ ಕಾಂಪ್ಯಾಕ್ಟ್ ಎಸ್‌ಯುವಿ ಕೂಪೆ ಪರಿಕಲ್ಪನೆಯಾದ 'ಸಿಟ್ರನ್ ಬಸಾಲ್ಟ್ ವಿಷನ್'‌ನ ಮೊದಲ ಚಿತ್ರಗಳನ್ನು ಅನಾವರಣಗೊಳಿಸಿದೆ. ಇದು 2024 ರ ದ್ವಿತೀಯಾರ್ಧದಲ್ಲಿ ಭಾರತ ಮತ್ತು ದಕ್ಷಿಣ ಅಮೆರಿಕಾದಲ್ಲಿ ಬಿಡುಗಡೆಯಾಗಲಿದೆ. ಈ ಹೊಸ ಕಾಂಪ್ಯಾಕ್ಟ್ ಎಸ್‌ಯುವಿ ಕೂಪೆ ಕುರಿತ ಹೆಚ್ಚಿನ ವಿವರಗಳನ್ನು ಇಲ್ಲಿ ತಿಳಿಯೋಣ.

ತಂದೆಯ ಪ್ರೀತಿ: ಮಗಳಿಗೆ ರೂ.2.44 ಕೋಟಿ ಬೆಲೆಯ ಮರ್ಸಿಡಿಸ್ ಕಾರು..

ಗೋವಾದ ಬಿಜೆಪಿ ನಾಯಕ ಹಾಗೂ ಖ್ಯಾತ ಉದ್ಯಮಿ ಮೈಕಲ್ ಲೋಬೋ (Michael Lobo), ತಮ್ಮ ಮಗಳಿಗೆ ಮರ್ಸಿಡಿಸ್ ಬೆಂಜ್ ಎಸ್‌ಎಲ್ 55 ಎಎಂಜಿ (Mercedes-Benz SL55 AMG) ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಸದ್ಯ, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಅಮೆರಿಕದಲ್ಲಿ ಸೇತುವೆಗೆ ಹಡಗು ಡಿಕ್ಕಿ

ಸಾವಿರಾರು ಟನ್ ತೂಕದ ಸರಕು ಸಾಮಗ್ರಿಗಳನ್ನು ಹೊತ್ತ ಬೃಹತ್ ಗಾತ್ರದ ಹಡಗು (ship) ಅಮೆರಿಕದ ಬಾಲ್ಟಿಮೋರ್‌ನಲ್ಲಿರುವ ಸೇತುವೆಗೆ (Bridge) ಡಿಕ್ಕಿ ಹೊಡೆದ ಪರಿಣಾಮ ಸಂಪೂರ್ಣ ಸೇತುವ ಕುಸಿದು ಬಿದ್ದ ದುರಂತ ಘಟನೆ ಸಂಭವಿಸಿದೆ. ಈ ಹಡಗಿನಲ್ಲಿ 22 ಭಾರತೀಯ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದರು ಎಂಬ ಮಾಹಿತಿ ಹೊರಬಂದಿದೆ.
Advertisement

ಟಾಟಾ ಪಂಚ್‌ ಎಲೆಕ್ಟ್ರಿಕ್‌ ಕೊಳ್ಳುತ್ತಿದ್ದೀರಾ?

ನಮಗೆ ಟಾಟಾ ಪಂಚ್‌ ಕಾರಿನ ಬಗ್ಗೆ ವಿಶೇಷವಾದ ಪರಿಚಯ ಬೇಕಾಗಿಲ್ಲ ಎಂದೇ ಹೇಳಬಹುದು. ಈಗಾಗಲೇ ಐಸಿಇ ಮತ್ತು ಎಲೆಕ್ಟ್ರಿಕ್‌ ರೂಪಾಂತರದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿದೆ. ಇಂದಿನ ಈ ಲೇಖನದಲ್ಲಿಪಂಚ್‌ ಎಲೆಕ್ಟ್ರಿಕ್‌ನ ಬೆಲೆ ಎಷ್ಟು, ಈ ಕಾರಿನ ಇಎಂಐ, ಡೌನ್‌ ಪೇಮೆಂಟ್‌ ಮತ್ತು ಇನ್ನಿತರ ಲೋನ್‌ ವಿಚಾರವಾಗಿ ನೋಡೋಣ ಬನ್ನಿ.

ವೇಗದಲ್ಲಿದ್ದ ಆಟೋ ಮೇಲೆ ಬಣ್ಣ ಎರಚಿ ಪಲ್ಟಿ ಹೊಡೆಸಿದ ಪುಂಡರು!

ಹೋಳಿ ಹಬ್ಬದಂದು ಸ್ಥಳೀಯರು ಆಟೋ ಮೇಲೆ ನೀರು ತುಂಬಿದ ಬಲೂನ್‌ಗಳನ್ನು ಎಸೆದಿದ್ದು, ವೇಗವಾಗಿ ಚಲಿಸುತ್ತಿದ್ದ ಆಟೋ ಪಲ್ಟಿಯಾದ ಘಟನೆ ನಡೆದಿದೆ. ಇದು ಹಳೆಯ ವೀಡಿಯೊ, ಇದನ್ನು ಇತ್ತೀಚೆಗೆ ಕ್ರೈಮ್ ರಿಪೋರ್ಟ್ಸ್ ಇಂಡಿಯಾ ತನ್ನ ಎಕ್ಸ್ (ಟ್ವಿಟರ್) ಪ್ರೊಫೈಲ್‌ನಲ್ಲಿ ಹಂಚಿಕೊಂಡಿದೆ. ಈ ಬಗ್ಗೆ ಹೆಚ್ಚಿನ ವಿವರಗಳನ್ನು ಇಲ್ಲಿ ನೋಡೋಣ.

ದಿನನಿತ್ಯದ ಬಳಕೆಗೆ ಉತ್ತಮ ಕಾರುಗಳಿವು.. ಕೈಗೆಟುಕುವ ದರ

ಬೇಸಿಗೆಯಲ್ಲಿ ಬಿಸಿಲಿನ ಝಳ ಹೆಚ್ಚಿದೆ. ತಂಪಾಗಿ ಕಚೇರಿಗೆ ಹೋಗಲು ಅಥವಾ ಮಕ್ಕಳನ್ನು ಶಾಲೆಗೆ ಬಿಟ್ಟುಬರಲು ನೀವು ಹೊಸ ಕಾರನ್ನು ಖರೀದಿಸಲು ಯೋಚಿಸುತ್ತಿದ್ದರೆ ಆಲ್ಟೊ, ಸೆಲರಿಯೊ, ಕ್ವಿಡ್, ಟಿಯಾಗೊ ಹಾಗೂ ಗ್ರ್ಯಾಂಡ್ ಐ10 ನಿಯೋಸ್ ಉತ್ತಮ ಆಯ್ಕೆಯಾಗಬಲ್ಲವು. ಇವು ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ದೊರೆಯುವುದರೊಂದಿಗೆ ಗರಿಷ್ಠ ಮೈಲೇಜ್ ಸಹ ನೀಡಲಿವೆ.

ಅಜ್ಜಿ-ಮೊಮ್ಮಗಳಿಗಷ್ಟೇ ಉಚಿತ ಪ್ರಯಾಣ, ಪಕ್ಷಿಗಳಿಗಲ್ಲ

ಶಕ್ತಿ ಯೋಜನೆ (Shakti Scheme) ಜಾರಿಯಾದ ಬಳಿಕ ರಾಜ್ಯಾದ್ಯಂತ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ (KSRTC Bus) ಮಹಿಳೆಯರದ್ದೇ ದರ್ಬಾರ್. ವೀಕೆಂಡ್ ಶುರುವಾಗುತ್ತಲೇ ಬಸ್‌ಗಳಲ್ಲಿ ಕಾಲು ಇಡಲು ಸಾಧ್ಯವಾಗದಷ್ಟು ರಶ್. ಬಸ್‌ಗಳಲ್ಲಿ ಫ್ರೀ ಪ್ರಯಾಣ ಅಂತ ಮಹಿಳೆಯರು ಪ್ರವಾಸ, ಧಾರ್ಮಿಕ ಕ್ಷೇತ್ರಗಳಿಗೆ ಸಾಗರೋಪಾದಿಯಲ್ಲಿ ತೆರಳುತ್ತಿದ್ದಾರೆ.

Tripti Dimri: ಅನಿಮಲ್ ನಟಿಯ ರೇಂಜ್ ಬದಲಾಯ್ತು, ಬಹುಕೋಟಿ ಕಾರು ಖರೀದಿ

ಇತ್ತೀಚೆಗೆ ಬಹುಭಾಷೆಗಳಲ್ಲಿ ಬಿಡುಗಡೆಯಾಗಿ ಭಾರೀ ಸದ್ದು ಮಾಡಿದ "ಅನಿಮಲ್" ಸಿನಿಮಾವು ಹಲವು ನಟ, ನಟಿಯರಿಗೆ ಹೆಸರು ತಂದುಕೊಟ್ಟಿದೆ. ಇದರಲ್ಲಿ ಮುಖ್ಯವಾಗಿ 'Tripti Dimri' ಬಗ್ಗೆ ಹೇಳಲೇಬೇಕು. ಇವರ ಪಾತ್ರ ಸಣ್ಣದಾದ್ರು ಎಲ್ಲರ ಗಮನಸೆಳೆದು ಈಗ ಸಿನಿಮಾ ರಂಗದಲ್ಲಿ ಬೇಡಿಕೆ ಹೆಚ್ಚಿಸಿಕೊಂಡಿದ್ದಾರೆ. ಅವರ ರೇಂಜ್ ಬದಲಾಗುತ್ತಿದ್ದಂತೆ ರೇಂಜ್ ರೋವರ್ ಖರೀಸಿದ್ದಾರೆ.