Renault: 5-ಸೀಟರ್.. ಲಕ್ಷುರಿ ಫೀಚರ್‌ನ ಹೊಸ 'ಡಸ್ಟರ್' ಬಿಡುಗಡೆ..
ಆಟೋಮೊಬೈಲ್ಸ್
- 1 year, 3 month, 18 days ago
ಫ್ರಾನ್ಸ್ ದೇಶಕ್ಕೆ ಸೇರಿರುವ ರೆನಾಲ್ಟ್ (Renault) ಪ್ರಖ್ಯಾತ ಕಾರು ತಯಾರಕ ಕಂಪನಿಯಾಗಿ ಜನಮನ್ನಣೆ ಗಳಿಸಿದೆ. ಭಾರತದ ಮಾರುಕಟ್ಟೆಯಲ್ಲಿಯೂ ದಶಕಗಳಿಂದ ವಿವಿಧ ಕಾರುಗಳನ್ನು ಯಶಸ್ವಿಯಾಗಿ ಮಾರಾಟಗೊಳಿಸುತ್ತಿದೆ. ಅವುಗಳಲ್ಲಿ 'ಡಸ್ಟರ್' ಜನಪ್ರಿಯ ಎಸ್‌ಯುವಿಯಾಗಿ ಗುರುತಿಸಿಕೊಂಡಿತ್ತು. ಹಲವು ವರ್ಷಗಳ ಕಾಲ ದೇಶೀಯ ರಸ್ತೆಯಲ್ಲಿ ಅಬ್ಬರಿಸಿತ್ತು. 2012ರಲ್ಲಿ ಬಿಡುಗಡೆಗೊಂಡ ಈ ಕಾರನ್ನು 2020 ರವರೆಗೆ ಯಶಸ್ವಿಯಾಗಿ ಮಾರಾಟಗೊಳಿಸಲಾಗಿತ್ತು. ಸದ್ಯ, ಇದೇ ಡಸ್ಟರ್ ಎಸ್‌ಯುವಿಯನ್ನು ಹೊಸ ರೂಪದಲ್ಲಿ ಪರಿಚಯಿಸಲು ಕಂಪನಿಯು ತೆರೆಮರೆಯಲ್ಲಿ ತಯಾರಿ ಮಾಡಿಕೊಳ್ಳುತ್ತಿದೆ. ಬನ್ನಿ.. ಮುಂಬರಲಿರುವ ನೂತನ 'ರೆನಾಲ್ಟ್ ಡಸ್ಟರ್' ಕಾರಿನ ನಿರೀಕ್ಷಿತ ಬೆಲೆ, ಕಾರ್ಯಕ್ಷಮತೆ ಹಾಗೂ ವೈಶಿಷ್ಟ್ಯಗಳ ಕುರಿತಂತೆ ಒಂದಷ್ಟು ವಿವರಗಳನ್ನು ತಿಳಿಯೋಣ.