Ather: 1.05 ಲಕ್ಷ.. 160 Km ರೇಂಜ್, ಜನಪ್ರಿಯ ಎಥರ್ ರಿಜ್ಟಾ..

ಎಥರ್ ರಿಜ್ಟಾ (Ather Rizta) ಪ್ರಮುಖ ಎಲೆಕ್ಟ್ರಿಕ್ ಸ್ಕೂಟರ್ ಆಗಿದೆ. ದಿನದಿಂದ ದಿನಕ್ಕೆ ಬೇಡಿಕೆಯೂ ಹೆಚ್ಚಾಗುತ್ತಿದೆ. ಗ್ರಾಹಕರು ಕೂಡ ನಾ ಮುಂದು - ತಾ ಮುಂದು ಎಂಬಂತೆ ಇಷ್ಟಪಟ್ಟು ಕೊಂಡುಕೊಳ್ಳುತ್ತಿದ್ದಾರೆ. ಕಳೆದ ತಿಂಗಳು (ಡಿಸೆಂಬರ್-2025) ಭಾರೀ ಸಂಖ್ಯೆಯಲ್ಲಿಯೇ ಮಾರಾಟಗೊಂಡಿದೆ. ಒಟ್ಟು 14,282 ಯುನಿಟ್‌ಗಳನ್ನು ಖರೀದಿದಾರರಿಗೆ ವಿತರಿಸಲಾಗಿದೆ. 2024ರ ಇದೇ ಅವಧಿಯಲ್ಲಿ 7,456 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿಸಂಖ್ಯೆಯನ್ನು ಲೆಕ್ಕ ಹಾಕಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ 44.97% ಬೆಳವಣಿಗೆಯಾಗಿದೆ.

Mahindra: ಸ್ಕಾರ್ಪಿಯೋ-ಎನ್‌ ಫೇಸ್‌ಲಿಫ್ಟ್ ಬಿಡುಗಡೆಗೆ ಸಜ್ಜು

ಭಾರತದಲ್ಲಿ ಎಸ್‌ಯುವಿ ಕ್ರೇಜ್ ಹೆಚ್ಚಿಸಿದ್ದ ಸ್ಕಾರ್ಪಿಯೋ ತನ್ನ ರಗಡ್ ಲುಕ್‌ನೊಂದಿಗೆ ಹಿಂದೆಂದೂ ಕಾಣದ ಅಭಿಮಾನಿಗಳೊಂದಿಗೆ ಎಸ್‌ಯುವಿ ಮಾರುಕಟ್ಟೆಯನ್ನು ಶೇಕ್ ಮಾಡಿತ್ತು. ಎಸ್‌ಯುವಿ ಮಾರುಕಟ್ಟೆ ಬೇಡಿಕೆ ಪಡೆದುಕೊಳ್ಳುತ್ತಿದ್ದಂತೆ ಬಹುತೇಕ ಎಲ್ಲಾ ಬ್ರಾಂಡ್‌ಗಳು ಎಸ್‌ಯುವಿಗಳನ್ನು ಪರಿಚಯಿಸಲು ಮುಂದಾದವು. ಪ್ರತಿಸ್ಪರ್ಧಿಗಳನ್ನು ಹಿಂದಿಕ್ಕಲು ಮಹೀಂದ್ರಾ ಕೂಡ ತನ್ನ ಹೊಸ ಪೀಳಿಗೆಯ ಸ್ಕಾರ್ಪಿಯೋ-ಎನ್ (Mahindra Scorpio-N) ಎಸ್‌ಯುವಿಯನ್ನು ಮೊದಲ ಬಾರಿಗೆ 2022 ಜನವರಿಯಲ್ಲಿ ಬಿಡುಗಡೆ ಮಾಡಿತ್ತು. ಈಗ ಇದೇ ಎಸ್‌ಯುವಿಗೆ ಫೇಸ್‌ಲಿಫ್ಟ್ ನೀಡಲು ಕಂಪನಿ ಮುಂದಾಗಿದೆ. ಎಲ್ಲವು ಅಂದುಕೊಂಡಂತಾದರೆ 2026 ಏಪ್ರಿಲ್‌ನಲ್ಲಿ ಹೊಸ ಅಪ್‌ಡೇಟೆಡ್ ಸ್ಕಾರ್ಪಿಯೋ-ಎನ್ ಬಿಡುಗಡೆಯಾಗಲಿದೆ.

Honda: ಮಧ್ಯಮ ವರ್ಗದವರ ಸ್ಟೈಲಿಶ್ ಬೈಕ್‌ಯಿದು.. ಬೆಲೆ ಇಷ್ಟೇನಾ..

ಹೋಂಡಾ ಹಾರ್ನೆಟ್ 2.0 (Honda Hornet 2.0) ಜನಪ್ರಿಯ ಪ್ರೀಮಿಯಂ ಮೋಟಾರ್‌ಸೈಕಲ್‌ ಆಗಿದೆ. ಇದು ನೋಡಲು ತುಂಬಾ ಚೆನ್ನಾಗಿದ್ದು, ಯುವಕರು ಮೆಚ್ಚುವ ರೀತಿಯಲ್ಲಿದೆ. ಅದಕ್ಕೆ ತಕ್ಕಂತೆ ಉತ್ತಮ ಸಂಖ್ಯೆಯಲ್ಲಿಯೂ ಮಾರಾಟವಾಗುತ್ತಿದೆ. ನೀವು ಹೊಚ್ಚ ಹೊಸ ಬೈಕ್‌ವೊಂದನ್ನು ಖರೀದಿಸಲು ಪ್ಲ್ಯಾನ್ ಮಾಡಿದ್ದೀರಾ.. ಹಾಗಾದರೆ ಇದೇ 'ಹಾರ್ನೆಟ್ 2.0' ಬೆಸ್ಟ್ ಚಾಯ್ಸ್ ಆಗಲಿದೆ. ಬನ್ನಿ, ಈ ಮೋಟಾರ್‌ಸೈಕಲ್‌ನ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.

ದುಬಾರಿ ಕಾರುಗಳ ಬೆಲೆ ಇಳಿಕೆ ಖಚಿತ: ನೀವು-ನಾವು ಎಲ್ಲರು ಖರೀದಿಸಬಹುದು

ಭಾರತ ಮತ್ತು ಯುರೋಪಿಯನ್ ಒಕ್ಕೂಟ (EU) ಮುಕ್ತ ವ್ಯಾಪಾರ ಒಪ್ಪಂದಕ್ಕೆ (FTA) ಸಹಿ ಹಾಕಿರುವ ಹಿನ್ನೆಲೆಯಲ್ಲಿ, ಸ್ಕೋಡಾ ಆಟೋ ಫೋಕ್ಸ್‌ವ್ಯಾಗನ್ ಇಂಡಿಯಾ (SAVWI)ನ ಎಂಡಿ ಮತ್ತು ಸಿಇಒ ಆಗಿರುವ ಪಿಯೂಷ್ ಅರೋರಾ ಅವರು ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ. ಈ ಒಪ್ಪಂದವು ಹೊಸ ಕ್ರಾಂತಿ ತರೆಲಿದೆ, ಎರಡೂ ಪ್ರದೇಶಗಳಿಗೆ ಉತ್ತಮ ಲಾಭ ತಂದುಕೊಡಲಿದೆ. ಇದು ಆಳವಾದ ತಂತ್ರಜ್ಞಾನ ವರ್ಗಾವಣೆ, ಸಾಮರ್ಥ್ಯ ವೃದ್ಧಿ ಮತ್ತು ಭಾರತೀಯ ಆಟೋಮೋಟಿವ್ ಪರಿಸರ ವ್ಯವಸ್ಥೆಯಲ್ಲಿ ದೀರ್ಘಾವಧಿಯ ಹೂಡಿಕೆಗೆ ಸಹಕರಿಸಲಿದೆ ಎಂದು ಹೇಳಿದ್ದಾರೆ.
Advertisement

Renault: ಲೆಜೆಂಡ್ ಇಸ್ ಕಮ್ ಬ್ಯಾಕ್.. ಹೊಸ ರೆನಾಲ್ಟ್ ಡಸ್ಟರ್‌ಗೆ..

ಮೊನ್ನೆಯಷ್ಟೇ 2026ರ ಹೊಸ ರೆನಾಲ್ಟ್ ಡಸ್ಟರ್ (Renault Duster) ಎಸ್‌ಯುವಿಯನ್ನು ಪರಿಚಯಿಸಲಾಗಿದೆ. ಇದು ರೂ.9.50 ಲಕ್ಷದಿಂದ ರೂ.19 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿರಬಹುದು ಎಂದು ಹೇಳಲಾಗದೆ. ತುಂಬಾ ಅಚ್ಚುಕಟ್ಟಾದ ವಿನ್ಯಾವನ್ನು ಒಳಗೊಂಡಿದೆ. ಜೇಡ್ ಮೌಂಟೇನ್ ಗ್ರೀನ್, ಪರ್ಲ್ ವೈಟ್, ಮೂನ್‌ಲೈಟ್ ಸಿಲ್ವರ್, ಸ್ಟೆಲ್ತ್ ಬ್ಲ್ಯಾಕ್ ಮತ್ತು ರಿವರ್ ಬ್ಲೂ ಸೇರಿದಂತೆ ವಿವಿಧ ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ. 5 ಆಸನಗಳನ್ನು ಹೊಂದಿದ್ದು, ಪ್ರಯಾಣಿಕರು ಆರಾಮದಾಯಕವಾಗಿ ಕುಳಿತುಕೊಂಡು ಸಂಚಾರ ಮಾಡಬಹುದು.

Daily Horoscope: ಜನವರಿ 28ರ ದಿನ ಭವಿಷ್ಯ: ಈ ರಾಶಿಗಳಿಗೆ ಇಂದು ಅದೃಷ್ಟ, ಕೆಲವು ರಾಶಿಗಳಿಗೆ ಶುಭ ಫಲ


ಭಾರತದಲ್ಲಿ BMW & Skoda ಸೇರಿ ಈ ಕಂಪನಿ ಕಾರುಗಳು ಮತ್ತಷ್ಟು..

ಭಾರತ ಹಾಗೂ ಯುರೋಪ್ ಒಕ್ಕೂಟದ ಮಂಗಳವಾರ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿವೆ. ಈ ಕನಸು ಸಾಕಾರಗೊಳ್ಳಲು ಬರೋಬ್ಬರಿ 20 ವರ್ಷಗಳವರೆಗೆ ಕಾಯಬೇಕಾಯಿತು. ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು, ಇದೇ ಒಡಂಬಕೆಯನ್ನು 'ಮದರ್ ಆಫ್ ಆಲ್ ಡೀಲ್' ಎಂದು ಕರೆದಿದ್ದಾರೆ. ವಿಶ್ವದಲ್ಲೇ ಭಾರತವು 4ನೇ ಅತಿದೊಡ್ಡ ಆರ್ಥಿಕತೆ ಹೊಂದಿರುವ ದೇಶವಾಗಿದೆ. ಯುರೋಪ್ ಒಕ್ಕೂಟವು 2ನೇ ಅತಿದೊಡ್ಡ ಆರ್ಥಿಕತೆಯಾಗಿದೆ. ಹೀಗಾಗಿ ಈ ಒಪ್ಪಂದವು ಹೆಚ್ಚು ಮಹತ್ವದಿಂದ ಕೂಡಿದ್ದು, ಆಟೋಮೊಬೈಲ್ ಉದ್ಯಮಕ್ಕೆ ಹೆಚ್ಚಿನ ಲಾಭವಾಗುವ ನಿರೀಕ್ಷೆಯಿದೆ.

Toyota: ಟೊಯೋಟಾ ಹೈಬ್ರಿಡ್ ಎಸ್‌ಯುವಿ: 27.97 ಕಿ.ಮೀ ಮೈಲೇಜ್

ಜನಪ್ರಿಯ ಕಾರು ತಯಾರಕ ಕಂಪನಿಯಾದ ಟೊಯೋಟಾ (Toyota), ಇಂದು ತನ್ನ ಜನಪ್ರಿಯ SUV ಅರ್ಬನ್ ಕ್ರೂಸರ್ ಹೈರೈಡರ್ (Urban Cruiser Hyryder) ‌ಗಾಗಿ ಕ್ಯುರೇಟೆಡ್ ಟೆಕ್ ಪ್ಯಾಕೇಜ್ ಅನ್ನು ಪರಿಚಯಿಸಿದೆ. ದೈನಂದಿನ ಚಾಲನಾ ಸೌಕರ್ಯ ಮತ್ತು ಅನುಕೂಲತೆಯನ್ನು ಹೆಚ್ಚಿಸಲು ವಿನ್ಯಾಸಗೊಳಿಸಲಾದ ಟೆಕ್ ಪ್ಯಾಕೇಜ್, ಪ್ರತಿ ಪ್ರಯಾಣವನ್ನು ಸುರಕ್ಷಿತ, ಹೆಚ್ಚು ಸಂಪರ್ಕಿತ ಮತ್ತು ವಿಶಿಷ್ಟವಾಗಿ ಪ್ರೀಮಿಯಂ ಮಾಡುವ ಸ್ಮಾರ್ಟ್, ಅರ್ಥಗರ್ಭಿತ ತಂತ್ರಜ್ಞಾನಗಳನ್ನು ಒಟ್ಟುಗೂಡಿಸುತ್ತದೆ ಎಂದು ಟೊಯೋಟಾ ತಿಳಿಸಿದೆ. ಈ ಟೆಕ್ ಪ್ಯಾಕ್ ವಿಶೇಷತೆಗಳನ್ನು ಇಲ್ಲಿ ನೋಡೋಣ.

ಆಕ್ಟಿವಾ & ಜುಪಿಟರ್ ಪ್ರತಿಸ್ಪರ್ಧಿಯಿದು: ತಾಕತ್ತು ಪ್ರದರ್ಶಿಸಿದ..

ಸುಜುಕಿ ಆಕ್ಸೆಸ್ 125 (Suzuki Access 125) ಜನಮೆಚ್ಚಿದ ಸ್ಕೂಟರ್ ಎಂದೇ ಮನೆ ಮಾತಾಗಿದೆ. ಇದಕ್ಕೆ ಹೋಂಡಾ ಆಕ್ಟಿವಾ ಹಾಗೂ ಟಿವಿಎಸ್ ಜುಪಿಟರ್‌ಗಳು ಪ್ರಬಲವಾದ ಪ್ರತಿಸ್ಪರ್ಧಿಯಾಗಿವೆ. ಆದರೂ ಈ ಸ್ಕೂಟರ್‌ಗೆ ದೊಡ್ಡ ಮಟ್ಟದಲ್ಲಿ ಬೇಡಿಕೆಯಿದೆ. ಕಳೆದ ತಿಂಗಳು (ಡಿಸೆಂಬರ್-2025) ಸಹ 'ಆಕ್ಸೆಸ್ 125' ಭಾರೀ ಸಂಖ್ಯೆಯಲ್ಲಿಯೇ ಮಾರಾಟಗೊಂಡಿದೆ. 69,622 ಯುನಿಟ್‌ಗಳನ್ನು ಖರೀದಿದಾರರಿಗೆ ವಿತರಣೆ ಮಾಡಲಾಗಿದೆ. 2024ರ ಇದೇ ಅವಧಿಯಲ್ಲಿ 52,180 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿಅಂಶವನ್ನು ಲೆಕ್ಕ ಹಾಕಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ (YoY) ಶೇಕಡ 33.43% ಪ್ರಗತಿಯಾಗಿದೆ.

MG Majestor: ದೈತ್ಯ ಎಂಜಿ ಕಾರು ಬಿಡುಗಡೆಗೆ ಸಜ್ಜು: ಇದು D+ SUV

ಜೆಎಸ್‌ಡಬ್ಲ್ಯು ಎಂಜಿ ಮೋಟಾರ್ (JSW MG Motor) ಇಂಡಿಯಾ ಫೆಬ್ರವರಿ 12 ರಂದು ತನ್ನ ಅದ್ದೂರಿ ಅನಾವರಣಕ್ಕೆ ನಿಗದಿಯಾಗಿರುವ ಭಾರತದ ಮೊದಲ ಡಿ+ ಎಸ್‌ಯುವಿ - ಎಂಜಿ ಮೆಜೆಸ್ಟರ್ (D+ SUV - MG MAJESTOR)ನ ಅಧಿಕೃತ ಟೀಸರ್ ಅನ್ನು ಬಿಡುಗಡೆ ಮಾಡಿದೆ. ಇದು ಬ್ರಾಂಡ್‌ನಿಂದ ಮುಂಬರಲಿರುವ ಬಹುನಿರೀಕ್ಷಿತ ಕಾರಾಗಿದ್ದು, ಟೀಸರ್ ಮೂಲಕ ಗ್ರಾಹಕರಲ್ಲಿ ನಿರೀಕ್ಷೆಗಳನ್ನು ಹೆಚ್ಚಿಸಿದೆ. ಈ ಹೊಸ ಎಂಜಿ ಮೆಜೆಸ್ಟರ್ ಡಿಸೈನ್ ಮತ್ತು ಪರ್ಫಾಮೆನ್ಸ್ ಹೊಸ ಮಾನದಂಡಗಳನ್ನು ಸ್ಥಾಪಿಸಲು ಸಜ್ಜಾಗಿದೆ ಎಂದು ಎಂಜಿ ಮೋಟಾರ್‌ ಹೇಳಿಕೊಂಡಿದೆ.

ಕಳೆದ 5 ವರ್ಷದ ಬಜೆಟ್‌ಗಳ ಜೊತೆ ಈ ವರ್ಷ ನಿರೀಕ್ಷೆಗಳೇನು? ಇಲ್ಲಿದೆ ಓದಿ

ಭಾರತದಲ್ಲಿ ತೆರಿಗೆ ಸುಧಾರಣಾ ಪ್ರಗತಿ, ಮೂಲಸೌಕರ್ಯಕ್ಕಾಗಿ ಬಂಡವಾಳ ವೆಚ್ಚ, ಉತ್ಪಾದನಾ ಉತ್ತೇಜನ ಮತ್ತು ಸಾಮಾಜಿಕ ಸಹಾಯಧನಗಳೊಂದಿಗೆ 2026ರ ಬಜೆಟ್‌ನ ಅವಲೋಕನ.

Toyota: 543 ಕಿ.ಮೀ ರೇಂಜ್.. ಟೊಯೊಟಾದ ಮೊದಲ ಎಲೆಕ್ಟ್ರಿಕ್..

ಈಚೆಗೆ ಹೊಚ್ಚ ಹೊಸ ಟೊಯೊಟಾ ಅರ್ಬನ್ ಕ್ರೂಸರ್ ಎಬೆಲ್ಲಾ (Toyota Urban Cruiser Ebella) ಎಲೆಕ್ಟ್ರಿಕ್ ಎಸ್‌ಯುವಿಯನ್ನು ಪರಿಚಯಿಸಲಾಗಿದೆ. ಅತಿ ಶೀಘ್ರದಲ್ಲೇ ಈ ಕಾರನ್ನು ಮಾರಾಟಕ್ಕೂ ತರಲಾಗುತ್ತದೆ. ನೂತನ 'ಅರ್ಬನ್ ಕ್ರೂಸರ್ ಎಬೆಲ್ಲಾ' ಇ1 (E1), ಇ2 (E2) ಹಾಗೂ ಇ3 (E3) ಎಂಬ ಮೂರು ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿಯೂ ಲಭ್ಯವಾಗಲಿದೆ. ನಾವಿಲ್ಲಿ ಪ್ರತಿಯೊಂದು ರೂಪಾಂತರಗಳು ಯಾವೆಲ್ಲ ವಿಶೇಷತೆಗಳನ್ನು ಹೊಂದಿವೆ ಎಂಬುದರ ಕುರಿತಂತೆ ಸಂಕ್ಷಿಪ್ತವಾದ ವಿವರಗಳನ್ನು ತಿಳಿಸಿಕೊಟ್ಟಿದ್ದೇವೆ.
Advertisement

5 ಲಕ್ಷಕ್ಕಿಂತ ಕಮ್ಮಿ ಬೆಲೆ... ಐದು ಮಂದಿಗೆ ಆರಾಮ ಪ್ರಯಾಣ

ಒಂದು ಕಾಲದಲ್ಲಿ ಕಾರು ಖರೀದಿಸುವುದು ಎಂದರೆ ಹಲವರಿಗೆ ಕನಸಾಗಿತ್ತು, ಆದರೆ ಈಗ ಪ್ರತಿಯೊಬ್ಬರು ಕಾರು ಖರೀದಿಸಬಹುದಾಗಿದೆ. ಇದು ದೊಡ್ಡ ವಿಷಯವೇನಲ್ಲ, ನೀವು ಮಧ್ಯಮ ವರ್ಗದ ಕುಟುಂಬದವರಾಗಿದ್ದರೂ ಸುಲಭವಾಗಿ ಕಾರು ಖರೀದಿಸುವ ಹಲವಾರು ಹಣಕಾಸು ಯೋಜನೆಗಳು ಈಗ ಲಭ್ಯವಿದೆ. ಅಲ್ಲದೆ ಬಜೆಟ್ ಬೆಲೆಯಲ್ಲಿ ಸಿಗುವಂತಹ ಕಾರುಗಳನ್ನು ಈಗ ಬಹುತೇಕ ಎಲ್ಲಾ ಬ್ರಾಂಡ್‌ಗಳು ನೀಡುತ್ತಿವೆ. ಅನೇಕರು ದೈನಂದಿನ ಪ್ರಯಾಣಕ್ಕೆ ಸೂಕ್ತವಾದ ಮತ್ತು ತಮಗೆ ಹೊರೆಯಾಗದ ಕಾರುಗಳನ್ನು ಹುಡುಕುತ್ತಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು, ಕಾರು ಕಂಪನಿಗಳು ಕೆಳ ವಿಭಾಗದಲ್ಲಿ ಉತ್ತಮ ಆಯ್ಕೆಗಳನ್ನು ನೀಡುತ್ತಿವೆ.

ಬಡವರಿಗೆ ಪರ್ಫೆಕ್ಟ್ ಚಾಯ್ಸ್.. 77,678 ರೂಪಾಯಿ.. ಫುಲ್ ಟ್ಯಾಂಕ್..

ಹೀರೋ ಸ್ಪ್ಲೆಂಡರ್ ಪ್ಲಸ್ ಎಕ್ಸ್‌ಟೆಕ್ (Hero Splendor Plus Xtec) ಜನಮೆಚ್ಚಿದ ಮೋಟಾರ್‌ಸೈಕಲ್‌ ಎಂದೇ ಹೆಸರುವಾಸಿಯಾಗಿದೆ. ಇದು ದಿನಬಳಕೆಗೂ ಹೆಚ್ಚು ಸೂಕ್ತವಾಗಿದೆ. ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿಸುತ್ತಿದ್ದಾರೆ. ನೀವು ಹೊಚ್ಚ ಹೊಸ ಬೈಕ್‌ವೊಂದನ್ನು ಕೊಂಡುಕೊಳ್ಳಲು ಪ್ಲ್ಯಾನ್ ಮಾಡಿದ್ದೀರಾ.. ಹಾಗಾದರೆ ಇದೇ 'ಸ್ಪ್ಲೆಂಡರ್ ಪ್ಲಸ್ ಎಕ್ಸ್‌ಟೆಕ್' ಬೆಸ್ಟ್ ಚಾಯ್ಸ್ ಆಗಲಿದೆ. ಬನ್ನಿ, ಈ ಮೋಟಾರ್‌ಸೈಕಲ್‌ನ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.

TVS: ಪ್ರತಿ ದಿನ 365 ವಾಹನಗಳ ಮಾರಾಟ: ಡೀಲರ್‌ಗಳ ಫೇವರೆಟ್ ಸ್ಕೂಟರ್

ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳು ಈಗ ಇಂಧನ ಚಾಲಿತ ವಾಹನಗಳಿಗೆ ಪೈಪೋಟಿ ನೀಡುತ್ತಿವೆ. ಅದರಲ್ಲೂ ಬಜಾಜ್ ಚೇತಕ್ ಹಾಗೂ ಟಿವಿಎಸ್ ಐಕ್ಯೂಬ್ (TVS iQube) ಮಾರಾಟದಲ್ಲಿ ಮುನ್ನುಗ್ಗುತ್ತಿವೆ, ಗ್ರಾಹಕರು ಈ ವಾಹನಗಳನ್ನು ಮುಗಿಬಿದ್ದು ಖರೀದಿಸುತ್ತಿದ್ದಾರೆ. ಇದರಲ್ಲಿ ಮುಖ್ಯವಾಗಿ ಟಿವಿಎಸ್ ಕಂಪನಿಯ ಐಕ್ಯೂಬ್ ಬಗ್ಗೆ ಹೇಳಲೇಬೇಕು. 2020ರ ಜನವರಿಯಲ್ಲಿ ಬಿಡುಗಡೆಯಾದ ಟಿವಿಎಸ್ ಐಕ್ಯೂಬ್ ಆರಂಭದಲ್ಲಿ ಹಿನ್ನಡೆ ಅನುಭವಿಸದರೂ ಈಗ ಅದರ ಗತ್ತೇ ಬೇರೆ, ಹೆಚ್ಚುತ್ತಿರುವ ಬೇಡಿಕೆಯು ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಇವಿ ವಿಭಾಗದ ನಾಯಕನನ್ನಾಗಿ ಮಾಡಿದೆ. ಇಲ್ಲಿಯವರೆಗೆ ಬರೋಬ್ಬರಿ 8 ಲಕ್ಷ ಐಕ್ಯೂಬ್ ವಾಹನಗಳು ಭಾರತದಲ್ಲಿ ಮಾರಾಟವಾಗಿವೆ.

ಹೊಸ ರೆನಾಲ್ಟ್ ಡಸ್ಟರ್ vs ಹ್ಯುಂಡೈ ಕ್ರೆಟಾ: ಒಂದಕ್ಕಿಂತ ಒಂದು..

ನಿನ್ನೆ 2026ರ ಹೊಸ ರೆನಾಲ್ಟ್ ಡಸ್ಟರ್ (Renault Duster) ಎಸ್‌ಯುವಿಯನ್ನು ಅನಾವರಣಗೊಳಿಸಲಾಯಿತು. ಇದಕ್ಕೆ ಹ್ಯುಂಡೈ ಕ್ರೆಟಾ (Hyundai Creta) ನೇರವಾದ ಎದುರಾಳಿಯಾಗಿದೆ. ಈ ಕಾರುಗಳು ಹೆಚ್ಚು ಅತ್ಯಾಧುನಿಕವಾಗಿದ್ದು, ನಾನಾ ಬಗೆಯ ಹೊಸತನಗಳಿಗೂ ಸಾಕ್ಷಿಯಾಗಿವೆ. ನಾವಿಲ್ಲಿ ಇವೆರೆಡು ಎಸ್‌ಯುವಿಗಳ ಬೆಲೆ, ಕಾರ್ಯಕ್ಷಮತೆ ಹಾಗೂ ವೈಶಿಷ್ಟ್ಯಗಳ ಕುರಿತು ಹೋಲಿಕೆ ಮಾಡಿದ್ದೇವೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

ಕೇಂದ್ರ ಬಜೆಟ್‌ ಮಂಡನೆಯತ್ತ ಎಲ್ಲರ ಚಿತ್ತ! ಹಲವು ಘೋಷಣೆಗಳ ಸಾಧ್ಯತೆ

ಫೆಬ್ರವರಿ 1 ರ ಪ್ರಸ್ತುತಿಗೆ ಮುಂಚಿತವಾಗಿ, ಖಾಸಗಿ ಬಂಡವಾಳ, ಉತ್ಪಾದನೆ ಮತ್ತು ರಫ್ತುಗಳನ್ನು ಹೆಚ್ಚಿಸಲು 2026-27 ರ ಕೇಂದ್ರ ಬಜೆಟ್ ಅನಿಯಂತ್ರಣ ಮತ್ತು ವ್ಯವಹಾರವನ್ನು ಸುಲಭಗೊಳಿಸುವತ್ತ ಗಮನಹರಿಸುತ್ತದೆ.

ಜನವರಿ 27ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್‌, ಡೀಸೆಲ್‌ ದರ ಎಷ್ಟಿದೆ ತಿಳಿಯಿರಿ

ಜನವರಿ 27 ರಂದು ಕರ್ನಾಟಕದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ಅವಲೋಕನ, ಬೆಂಗಳೂರು ಮತ್ತು ವಿವಿಧ ಜಿಲ್ಲೆಗಳನ್ನು ಒಳಗೊಂಡಂತೆ, ಗ್ರಾಹಕರು ಮತ್ತು ವ್ಯವಹಾರಗಳಿಗೆ ಅಗತ್ಯ ವಿವರಗಳೊಂದಿಗೆ.

ಒಂದು ರಗಡ್ ಮತ್ತೊಂದು ಭಯಾನಕ:ಟಾಟಾ ಬ್ರಹ್ಮಾಸ್ತ್ರಕ್ಕೆ ಸರಿಯಾದ ಪೈಪೋಟಿ

ಭಾರತದಲ್ಲಿ ಮಿಡ್‌ಸೈಜ್ ಎಸ್‌ಯುವಿ ವಿಭಾಗವು ವೇಗವಾಗಿ ಬೆಳೆಯುತ್ತಿದೆ, ಇತ್ತೀಚೆಗೆ ಈ ವಿಭಾಗದಲ್ಲಿ ಟಾಟಾ ಮೋಟಾರ್ಸ್ ತನ್ನ ಸಿಯೆರಾ ಎಸ್‌ಯುವಿಯನ್ನು ಬಿಡುಗಡೆ ಮಾಡಿತ್ತು. ಈ ಎಸ್‌ಯುವಿ ಈಗಾಗಲೇ ದೇಶದಲ್ಲಿ ತುಂಬಾ ಸದ್ದು ಮಾಡುತ್ತಿದೆ, ಆದರೆ ಇದಕ್ಕೆ ಸರಿಯಾದ ಪೈಪೋಟಿ ನೀಡಲು ರೆನಾಲ್ಟ್ ತನ್ನ ರಗಡ್ ಎಸ್‌ಯುವಿಯನ್ನು ನಿನ್ನೆಯಷ್ಟೆ ಅನಾವರಣಗೊಳಿಸಿದೆ. ಹೌದು, 2022 ರಲ್ಲಿ ಕಾರಣಾಂತರಗಳಿಂದ ಸ್ಥಗಿತಗೊಂಡಿದ್ದ ರೆನಾಲ್ಟ್ ಡಸ್ಟರ್ ಅನ್ನು ಮತ್ತೆ ಹೊಸ ಲುಕ್‌, ಆಧುನಿಕ ಫೀಚರ್ಸ್ ಹಾಗೂ ಬಹು ಎಂಜಿನ್ ಆಯ್ಕೆಗಳೊಂದಿಗೆ ಮತ್ತೆ ಪರಿಚಯಿಸಲಾಗಿದೆ. ಟಾಟಾ ಸಿಯೆರಾ ಹಾಗೂ ರೆನಾಲ್ಟ್ ಡಸ್ಟರ್ ನಡುವಿನ ಹೋಲಿಕೆ ಇಲ್ಲಿದೆ.

Renault: ಪವರ್ ತೋರಿಸಲು ಬಂದೆ ಬಿಡ್ತು ರೆನಾಲ್ಟ್ ಡಸ್ಟರ್..

ನಿನ್ನೆ ಬಹುನಿರೀಕ್ಷಿತ 2026ರ ರೆನಾಲ್ಟ್ ಡಸ್ಟರ್ (Renault Duster) ಎಸ್‌ಯುವಿ ಅನಾವರಣಗೊಂಡಿದೆ. ಇದು ನೋಡಲು ತುಂಬಾ ಚೆನ್ನಾಗಿದ್ದು, ಹಲವು ಹೊಸತನಗಳಿಗೂ ಸಾಕ್ಷಿತಾಗಿದೆ. ಈಗಾಗಲೇ ಪ್ರಿ-ಬುಕ್ಕಿಂಗ್‌ನ್ನು ಪ್ರಾರಂಭಿಸಲಾಗಿದ್ದು, ರೂ.21,000 ಮುಂಗಡ ಹಣವನ್ನು ಪಾವತಿಸಿ, ಕಾಯ್ದಿರಿಸಬಹುದು. ನೀವು ನೂತನ ಕಾರೊಂದನ್ನು ಖರೀದಿಸಲು ಆಲೋಚಿಸಿದ್ದೀರಾ.. ಹಾಗಾದರೆ ಇದೇ 'ಡಸ್ಟರ್' ಬೆಸ್ಟ್ ಚಾಯ್ಸ್ ಆಗಲಿದೆ. ಬನ್ನಿ, ಈ ಕಾರಿನ ನಿರೀಕ್ಷಿತ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.
Advertisement

Renault Duster: ಹೊಸ ರೆನಾಲ್ಟ್ ಡಸ್ಟರ್ ಪರಿಚಯ..

ರೆನಾಲ್ಟ್ ಡಸ್ಟರ್ (Renault Duster) ಜನಪ್ರಿಯ ಎಸ್‌ಯುವಿಯಾಗಿದೆ. ಈ ಕಾರು ದೇಶೀಯ ರಸ್ತೆಯಲ್ಲಿ ಅಬ್ಬರಿಸಿತ್ತು. 2012ರಲ್ಲಿ ಮೊದಲ ಬಾರಿಗೆ ಬಿಡುಗಡೆಗೊಳಿಸಲಾಗಿತ್ತು. ಅಲ್ಲಿಂದ ಭರ್ತಿ 10 ವರ್ಷಗಳವರೆಗೆ ತನ್ನ ಪ್ರಾಬಲ್ಯ ಸಾಧಿಸಿತ್ತು. ಆದರೆ, 2022ರಲ್ಲಿ ನಾನಾ ಕಾರಣಗಳಿಗೆ ಮಾರಾಟದಿಂದ ದೂರವಾಗಿತ್ತು. ಇಂದು ಚೆನ್ನೈನಲ್ಲಿ ಜರುಗಿದ ಅದ್ದೂರಿ ಸಮಾರಂಭದಲ್ಲಿ 2026ರ ಹೊಸ ತಲೆಮಾರಿನ 'ರೆನಾಲ್ಟ್ ಡಸ್ಟರ್'ನ್ನು ಪರಿಚಯಿಸಲಾಗಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

Maruti: ಈ ಜನಪ್ರಿಯ ಮಾರುತಿ ಕಾರೇ ನಂ.1.. ಬೈಕ್‌ನ್ನು ಮೀರಿಸುವಂತೆ..

ಮಾರುತಿ ಸುಜುಕಿ ಡಿಜೈರ್ (Maruti Suzuki Dzire) ಜನಮೆಚ್ಚಿದ ಸೆಡಾನ್ ಎಂದೇ ಮನೆ ಮಾತಾಗಿದೆ. ಈ ಕಾರನ್ನು ಸಾಮಾನ್ಯರಿಂದ ಹಿಡಿದು ಶ್ರೀಮಂತ ವರ್ಗದ ಗ್ರಾಹಕರು ಇಷ್ಟಪಟ್ಟು ಕೊಂಡುಕೊಂಡಿದ್ದಾರೆ. ಇದು ದಿನಬಳಕೆಗೂ ಹೆಚ್ಚು ಸೂಕ್ತವಾಗಿದೆ. ಕಡಿಮೆ ನಿರ್ವಹಣಾ ವೆಚ್ಚ ಹೊಂದಿದ್ದು, ಉತ್ತಮ ಇಂಧನ ದಕ್ಷತೆಯನ್ನು ಒದಗಿಸಬಲ್ಲದು. ದೀರ್ಘಕಾಲ ಬಾಳಿಕೆಯೂ ಬರುತ್ತದೆ. ಅದಕ್ಕೆ ತಕ್ಕಂತೆ ಅತ್ಯಂತ ಕೈಗೆಟುಕುವ ಬೆಲೆಯಲ್ಲಿಯೂ ಲಭ್ಯವಾಗುತ್ತದೆ.

Hero Splendor: 70 Km ಮೈಲೇಜ್.. ಬಡವರ ಬಂಡಿ ಅಗ್ಗದ ಹೀರೋ..

ಹೀರೋ ಸ್ಪ್ಲೆಂಡರ್‌ (Hero Splendor) ಜಗಮೆಚ್ಚಿದ ಬೈಕ್ ಎಂದೇ ಹೆಸರುವಾಸಿಯಾಗಿದೆ. ದಿನದಿಂದ ದಿನಕ್ಕೆ ಬೇಡಿಕೆಯೂ ಹೆಚ್ಚಾಗುತ್ತಿದ್ದು, ಗ್ರಾಹಕರು ಕೂಡ ನಾ ಮುಂದು - ತಾ ಮುಂದು ಎಂಬಂತೆ ಖರೀದಿಸುತ್ತಿದ್ದಾರೆ. ಕಳೆದ ತಿಂಗಳು (ಡಿಸೆಂಬರ್-2025) ಭಾರೀ ಸಂಖ್ಯೆಯಲ್ಲಿಯೇ ಮಾರಾಟಗೊಂಡಿದೆ. ಒಟ್ಟು 2,80,760 ಯುನಿಟ್‌ಗಳನ್ನು ಗ್ರಾಹಕರಿಗೆ ವಿತರಿಸಲಾಗಿದೆ. 2024ರ ಇದೇ ಅವಧಿಯಲ್ಲಿ 1,92,438 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿಅಂಶವನ್ನು ಲೆಕ್ಕ ಹಾಕಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ 40.90% ಬೆಳವಣಿಗೆಯಾಗಿದೆ.

ಜನವರಿ 26ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್‌, ಡೀಸೆಲ್‌ ದರ ಎಷ್ಟಿದೆ ತಿಳಿಯಿರಿ

ಜನವರಿ 26 ರಂದು ಕರ್ನಾಟಕದ ಜಿಲ್ಲಾವಾರು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ಅಪ್‌ಡೇಟ್‌ಗಳನ್ನು ಪಡೆಯಿರಿ. ಪ್ರಸ್ತುತ ದರಗಳನ್ನು ಜಿಲ್ಲೆಯ ಪ್ರಕಾರ ಹುಡುಕಿ ಮತ್ತು ಪ್ರಾದೇಶಿಕ ವ್ಯತ್ಯಾಸಗಳನ್ನು ಹೋಲಿಕೆ ಮಾಡಿ.

Mahindra: ಹೊಸ ಮಹೀಂದ್ರಾ ಕ್ಯಾಂಪರ್, ಪಿಕ್-ಅಪ್ ವಿಶೇಷತೆಗಳು!

ಪ್ರಮುಖ ವಾಹನ ತಯಾರಕ ಕಂಪನಿಯಾಗಿರುವ ಮಹೀಂದ್ರಾ (Mahindra), ಇತ್ತೀಚೆಗೆ ಭಾರತದಲ್ಲಿ ತನ್ನ ಜನಪ್ರಿಯ ಬೊಲೆರೊ ಕ್ಯಾಂಪರ್ (Bolero Camper) ಮತ್ತು ಬೊಲೆರೊ ಪಿಕ್-ಅಪ್ (Bolero Pik-Up) ಶ್ರೇಣಿಯ ಅಪ್‌ಡೇಟ್ ಮಾಡಲ್‌ಗಳನ್ನು ಬಿಡುಗಡೆ ಮಾಡಿದೆ. ತಮ್ಮ ಜೀವನೋಪಾಯ ಮತ್ತು ಕಾರ್ಯಾಚರಣೆಗಳ ಅವಿಭಾಜ್ಯ ಅಂಗಗಳಾಗಿ ತಮ್ಮ ವಾಹನಗಳನ್ನು ಅವಲಂಬಿಸಿರುವ ಗ್ರಾಹಕರಿಗಾಗಿ ಈ ಮಾಡಲ್‌ಗಳನ್ನು ವಿನ್ಯಾಸಗೊಳಿಸಿರುವುದಾಗಿ ಕಂಪನಿ ತಿಳಿಸಿದೆ. ಹೊಸ ನವೀಕೃತ ವಾಹನಗಳ ಬಗ್ಗೆ ನೀವು ತಿಳಿಯಬೇಕಾಗಿರುವ ಪ್ರಮುಖಾಂಶಗಳು ಇಲ್ಲಿವೆ.