Honda: ಇದೇ ಬಜಾಜ್ ಪಲ್ಸರ್‌ಗೆ ಪ್ರತಿಸ್ಪರ್ಧಿ.. ಮಧ್ಯಮ ವರ್ಗದವರಿಗೆ..

ಹೋಂಡಾ ಸಿಬಿ 125 ಹಾರ್ನೆಟ್ (Honda CB 125 Hornet) ಪ್ರಮುಖ ಮೋಟಾರ್‌ಸೈಕಲ್‌ ಆಗಿದೆ. ಇದು ನೋಡಲು ತುಂಬಾ ಚೆನ್ನಾಗಿದ್ದು, ಹಲವು ಹೊಸತನಗಳಿಗೂ ಸಾಕ್ಷಿಯಾಗಿದೆ. ಬಜಾಜ್ ಪಲ್ಸರ್‌ಗೆ ನೇರ ಎದುರಾಳಿಯಾಗಿದ್ದು, ಯುವ ಗ್ರಾಹಕರು ಮೆಚ್ಚಿಕೊಂಡಿದ್ದಾರೆ. ನೀವು ಹೊಚ್ಚ ಹೊಸ ಬೈಕ್‌ವೊಂದನ್ನು ಕೊಂಡುಕೊಳ್ಳಲು ಆಲೋಚಿಸಿದ್ದೀರಾ.. ಹಾಗಾದರೆ ಇದೇ 'ಹಾರ್ನೆಟ್' ಉತ್ತಮವಾದ ಆಯ್ಕೆಯಾಗಲಿದೆ. ಬನ್ನಿ, ಈ ಮೋಟಾರ್‌ಸೈಕಲ್‌ನ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.

Tata: ಬಡವರು ಕೂಡ ಕಾರು ಖರೀದಿಸಿ ಹಣ ಗಳಿಸಲು ಅಗ್ಗದ ಕಾರು ಬಿಡುಗಡೆ

ಟಾಟಾ ಮೋಟಾರ್ಸ್ (Tata Motors) ದೇಶದ ಅತಿದೊಡ್ಡ ಕಾರು ತಯಾರಕ ಕಂಪನಿಯಾಗಿದ್ದು, ಮಧ್ಯಮ ವರ್ಗದವರಿಂದ ಹಿಡಿದು ಶ್ರೀಮಂತ ಗ್ರಾಹಕರವರೆಗೆ ಪ್ರತಿಯೊಬ್ಬರಿಗೆ ಅನುಕೂಲವಾಗಿರುವಂತಹ ಕಾರುಗಳನ್ನು ನೀಡುತ್ತಾ ಬಂದಿದೆ. ಇದೀಗ ಫ್ಲೀಟ್‌ಗಾಗಿ ಮುಖ್ಯವಾಗಿ ವಾಹನವನ್ನೆ ನಂಬಿಕೊಂಡು ನಿತ್ಯ ಜೀವನ ನಡೆಸುವವರಿಗಾಗಿ ಹೊಸ ಟ್ಯಾಕ್ಸಿ ಕಾರುನ್ನು ಬಿಡುಗಡೆ ಮಾಡಿದೆ. ಈ ಕಾರು ಪೆಟ್ರೋಲ್ ಹಾಗೂ ಸಿಎನ್‌ಜಿ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿದ್ದು, ಚಾಲಕರಿಗೆ ಉತ್ತ ಲಾಭ ತಂದುಕೊಡುತ್ತದೆ ಎಂದು ಟಾಟಾ ಮೊಟಾರ್ಸ್ ಭರವಸೆ ನೀಡಿದೆ.

Bajaj: ಸ್ಟೈಲಿಷ್ ಬಜಾಜ್ ಪಲ್ಸರ್ ವಿಶೇಷತೆಗಳು!

ಬಜಾಜ್ ಆಟೋ ಭಾರತದಲ್ಲಿ 2026 ಪಲ್ಸರ್ 125 (Bajaj 2026 Pulsar 125) ಅನ್ನು ಇತ್ತೀಚೆಗೆ ಬಿಡುಗಡೆ ಮಾಡಿದೆ, ಇದು ಗಮನಾರ್ಹ ನವೀಕರಣಗಳನ್ನು ಪಡೆದುಕೊಂಡಿದೆ. ಎರಡು ವೇರಿಯೆಂಟ್‌ಗಳಲ್ಲಿ ಲಭ್ಯವಿದ್ದು, ಕಡಿಮೆ ಬೆಲೆಯಲ್ಲಿ ಸ್ಪೋರ್ಟಿ ಬೈಕ್ ಹುಡುಕುತ್ತಿರುವ ಯುವಕರಿಗೆ ಬೆಸ್ಟ್ ಆಯ್ಕೆಯಾಗಿದೆ. ಹೊಸ LED ಹೆಡ್‌ಲ್ಯಾಂಪ್ ಮತ್ತು LED ಬ್ಲಿಂಕರ್‌ಗಳ ಜೊತೆಗೆ ರಿಫ್ರೆಶ್ ಮಾಡಿದ ಬಣ್ಣಗಳು ಮತ್ತು ಗ್ರಾಫಿಕ್ಸ್ ಪಡೆದುಕೊಂಡು ಬೈಕ್ ಇನ್ನಷ್ಟು ಸ್ಪೋರ್ಟಿಯಾಗಿ ಹೊರಹೊಮ್ಮಿದೆ. ನವೀಕರಿಸಿದ ಬಜಾಜ್ ಪಲ್ಸರ್ 125 ರ ಮುಖ್ಯಾಂಶಗಳು ಇಲ್ಲಿವೆ.

ಅಂದಿನ 5 ಡೀಸೆಲ್ ಹ್ಯಾಚ್‌ಬ್ಯಾಕ್‌ಗಳು ಇಂದಿಗೂ ಸೂಪರ್!

BS6 ಎಮಿಷನ್ ಮಾನದಂಡಗಳ ಆಗಮನ ಮತ್ತು ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚುತ್ತಿರುವ ಬೇಡಿಕೆಯಿಂದಾಗಿ ಡೀಸೆಲ್ ಹ್ಯಾಚ್‌ಬ್ಯಾಕ್‌ಗಳು ಸದ್ಯ ಭಾರತದಲ್ಲಿ ಸ್ಥಗಿತಗೊಂಡಿವೆ. ಒಂದು ಕಾಲದಲ್ಲಿ ಮನೆಮಾತಾಗಿದ್ದ ಈ ಕಾರುಗಳು ಈಗ ಮರೆತುಹೋದ ಪಾರ್ಕಿಂಗ್ ಸ್ಥಳಗಳಲ್ಲಿ ಧೂಳು ತುಂಬಿಕೊಂಡು ನಿಂತಿವೆ. ಆಗಿನ ಕಾಲದಲ್ಲಿ ಭಾರತದ ನಗರ ಬೀದಿಗಳ ರಾಜರಾಗಿದ್ದ ಈ ಕಾರುಗಳು, ನಗರ ಪ್ರಯಾಣ ಮತ್ತು ಲಾಂಗ್ ಡ್ರೈವ್‌ಗಳಿಗೆ ಅತ್ಯುತ್ತಮ ಮೈಲೇಜ್ ನೀಡುತ್ತಿದ್ದವು. ಹತ್ತು ವರ್ಷಗಳ ಹಿಂದೆ ರಸ್ತೆಗಳನ್ನು ಆಳುತ್ತಿದ್ದ ಐದು ಡೀಸೆಲ್ ಹ್ಯಾಚ್‌ಬ್ಯಾಕ್‌ಗಳ ನೋಟ ಇಲ್ಲಿದೆ.
Advertisement

Renault: ನಾಳೆ ಹೊಸ ತಲೆಮಾರಿನ ರೆನಾಲ್ಟ್ ಡಸ್ಟರ್ ಎಸ್‌ಯುವಿ ಬಿಡುಗಡೆ

ಹೊಸ ರೆನಾಲ್ಟ್ ಡಸ್ಟರ್ (Renault Duster) 2026 ಜನವರಿ 26 ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ, ಗಣರಾಜ್ಯೋತ್ಸವದ ಸಂದರ್ಭದಲ್ಲಿ ಭಾರತದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಕಂಪನಿ ಈಗಾಗಲೇ ದೃಢಪಡಿಸಲಾಗಿದೆ. ಇದು ಗಮನಾರ್ಹ ಮರುವಿನ್ಯಾಸ, ವರ್ಧಿತ ವೈಶಿಷ್ಟ್ಯಗಳು ಮತ್ತು ಆಧುನಿಕ ಪವರ್‌ಟ್ರೇನ್ ಆಯ್ಕೆಗಳನ್ನು ಹೊಂದಿರಲಿದ್ದು, ಕಾಂಪ್ಯಾಕ್ಟ್ SUV ವಿಭಾಗದಲ್ಲಿ ಹೆಚ್ಚು ಪೈಪೋಟಿ ನೀಡಲು ಸಜ್ಜಾಗುತ್ತಿದೆ. ನಾಳೆ ಬಿಡುಗಡೆಯಾಗಲಿರುವ ಈ ಹೊಸ ಡಸ್ಟರ್ ಎಸ್‌ಯುವಿ ವಿನ್ಯಾಸ, ವೈಶಿಷ್ಟ್ಯಗಳು ಮತ್ತು ಪವರ್‌ಟ್ರೇನ್ ಬಗೆಗಿನ ಕುರಿತ ಪ್ರಮುಖ ವಿಶೇಷತೆಗಳು ಇಲ್ಲಿವೆ.

ಅಟಲ್‌ ಪಿಂಚಣಿಯನ್ನ 5 ವರ್ಷಕ್ಕೆ ವಿಸ್ತರಿಸಿದ ಕೇಂದ್ರ! ಇನ್ಮೇಲೆ 5000

ಅರ್ಹ ಅಸಂಘಟಿತ ಕಾರ್ಮಿಕರಿಗೆ ಸ್ಥಿರ ಮಾಸಿಕ ಪಿಂಚಣಿಗಳನ್ನು ಒದಗಿಸುವ APY ಅನ್ನು ಸರ್ಕಾರವು 2030-31 ರವರೆಗೆ ವಿಸ್ತರಿಸಿದೆ ಮತ್ತು ಅರ್ಹತೆ, ಕೊಡುಗೆಗಳು ಮತ್ತು ಆನ್‌ಲೈನ್ ನೋಂದಣಿ ಕುರಿತು ವಿವರಗಳನ್ನು ನೀಡುತ್ತದೆ.

Mahindra: ಕಲ್ಲು ಬಂಡೆಯಂತಹ ನೂತನ ಮಹೀಂದ್ರಾ SUV ಕುರಿತ..

ಇದೇ ಶುಕ್ರವಾರ ನೂತನ ಮಹೀಂದ್ರಾ ಥಾರ್ ರಾಕ್ಸ್ ಸ್ಟಾರ್ ಎಡಿಷನ್ (Mahindra Thar Roxx Star Edition) ಬಿಡುಗಡೆಗೊಂಡಿದೆ. ಸ್ಟ್ಯಾಂಡರ್ಡ್ 'ಥಾರ್ ರಾಕ್ಸ್'ಗೆ ಹೋಲಿಕೆ ಮಾಡಿದರೆ, ವಿನ್ಯಾಸದಲ್ಲಿ ಹಲವು ಕಾಸ್ಮೆಟಿಕ್ ಬದಲಾವಣೆಗಳನ್ನು ಪಡೆದುಕೊಂಡಿದೆ. ನೀವು ಹೊಚ್ಚ ಹೊಸ ಕಾರೊಂದನ್ನು ಖರೀದಿಸಲು ಆಲೋಚಿಸಿದ್ದೀರಾ.. ಹಾಗಾದರೆ, ಇದೇ 'ಥಾರ್ ರಾಕ್ಸ್ ಸ್ಟಾರ್ ಎಡಿಷನ್' ಬೆಸ್ಟ್ ಚಾಯ್ಸ್ ಆಗಲಿದೆ. ಬನ್ನಿ, ಈ ಎಸ್‌ಯುವಿಯ ಬೆಲೆ ಎಷ್ಟು, ವಿಶೇಷತೆಗಳೇನು ಎಂಬುದರ ಕುರಿತಂತೆ ಪ್ರಮುಖಾಂಶಗಳನ್ನು ತಿಳಿಯೋಣ.

ಬೆಂಗಳೂರಿನಲ್ಲಿ ಅತ್ಯಾಧುನಿಕ ಐಷಾರಾಮಿ ಬೆಂಝ್ ಶೋರೂಂ ಉದ್ಘಾಟನೆ

ಅತ್ಯಂತ ಪ್ರತಿಷ್ಠಿತ ಐಷಾರಾಮಿ ಕಾರು ತಯಾರಿಕಾ ಕಂಪನಿಯಾದ ಮರ್ಸಿಡಿಸ್-ಬೆಂಜ್ ಇಂಡಿಯಾ, ಕರ್ನಾಟಕದ ಬೆಂಗಳೂರಿನಲ್ಲಿ ಅತ್ಯಾಧುನಿಕವಾದ ಹೊಸ ಐಷಾರಾಮಿ ಮಾರಾಟ ಮತ್ತು ಸೇವಾ ಘಟಕ 'ವಿವಾ ಸ್ಟಾರ್' ಅನ್ನು ಉದ್ಘಾಟಿಸಿದೆ. ಈ ಹೊಸ ಡೀಲರ್‌ ಶಿಪ್ ಬೆಂಗಳೂರು ಮತ್ತು ಕರ್ನಾಟಕದಲ್ಲಿ ಮರ್ಸಿಡಿಸ್- ಬೆಂಜ್‌ನ ಅಸ್ತಿತ್ವವನ್ನು ಮತ್ತಷ್ಟು ಬಲಪಡಿಸಲಿದೆ. ವಿವಾ ಸ್ಟಾರ್ ಮೂಲಕ ಕಾರ್ಯನಿರ್ವಹಿಸುವ ಈ ಹೊಸ ಐಷಾರಾಮಿ ಶೋರೂಂ ಸಂಸ್ಥೆಯ 'ಗೋ ಟು ಕಸ್ಟಮರ್' ಕಾರ್ಯತಂತ್ರಕ್ಕೆ ಅನುಗುಣವಾಗಿ ರೂಪುಗೊಂಡಿದ್ದು, ಘನತೆವೆತ್ತ ಗ್ರಾಹಕರಿಗೆ ಮರ್ಸಿಡಿಸ್- ಬೆಂಜ್ ಹೊಂದಿರುವ ಬದ್ಧತೆಯನ್ನು ತೋರಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

Yamaha: ಸ್ಕೂಟರ್ ಮಾಲೀಕರಿಗೆ ಬಿಗ್ ಶಾಕ್... ಕೂಡಲೇ ಬರಲು ಯಮಹಾ ಮನವಿ

ಜಾಗತಿಕ ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿರುವ ಯಮಹಾ (Yamaha) ಭಾರತದಲ್ಲಿ ತನಗೆಂದೆ ವಿಶೇಷ ಅಭಿಮಾನಿಗಳನ್ನು ಪಡೆದುಕೊಂಡಿದೆ. ಯಮಹಾ RX100 (Yamaha RX100) ನೊಂದಿಗೆ ಭಾರತವನ್ನು ಶೇಕ್ ಮಾಡಿದ್ದ ಈ ಬ್ರಾಂಡ್, ಕೇವೆಲ ಮೋಟಾರ್‌ಸೈಕಲ್‌ಗಳು ಮಾತ್ರವಲ್ಲದೆ ತನ್ನ ಆಕರ್ಷಕ ಸ್ಕೂಟರ್ ‌ಗಳನ್ನು ನೀಡುವ ಮೂಲಕ ದೇಶದಲ್ಲಿ ತುಂಬಾ ಹೆಸರು ಮಾಡಿದೆ. ಈಗ ಗ್ರಾಹಕರಿಗೆ ಸುರಕ್ಷಿತ ಮತ್ತು ಉತ್ತಮ ಗುಣಮಟ್ಟದ ವಾಹನಗಳನ್ನು ತಲುಪಿಸುವ ತನ್ನ ಬದ್ಧತೆಯ ಭಾಗವಾಗಿ ಅಚ್ಚರಿಗೊಳಿಸುವ ಪ್ರಮುಖ ನಿರ್ಧಾರವನ್ನು ತೆಗೆದುಕೊಂಡಿದೆ.

TVS: ಟಿವಿಎಸ್ ಅಬ್ಬರಕ್ಕೆ ಬೆಚ್ಚಿಬಿದ್ದ ಎದುರಾಳಿಗಳು..

'ಹೋಂಡಾ ಆಕ್ಟಿವಾ'ಗೆ ಟಿವಿಎಸ್ ಜುಪಿಟರ್ (TVS Jupiter) ಪ್ರಬಲವಾದ ಪ್ರತಿಸ್ಪರ್ಧಿಯಾಗಿದೆ. ಈ ಸ್ಕೂಟರ್‌ಗೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚಾಗುತ್ತಿದ್ದು, ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿಸುತ್ತಿದ್ದಾರೆ. ಕಳೆದ ತಿಂಗಳು (ಡಿಸೆಂಬರ್-2025) ಭಾರೀ ಸಂಖ್ಯೆಯಲ್ಲಿ ಮಾರಾಟಗೊಂಡಿದೆ. ಒಟ್ಟು 1,20,477 ಯುನಿಟ್‌ 'ಜುಪಿಟರ್'ಗಳನ್ನು ಖರೀದಿದಾರರಿಗೆ ವಿತರಿಸಲಾಗಿದೆ. 2024ರ ಇದೇ ಅವಧಿಯಲ್ಲಿ 88,668 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿ ಅಂಶವನ್ನು ಲೆಕ್ಕ ಹಾಕಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ 35.87 ಪ್ರಗತಿಯಾಗಿದೆ.

ಜನವರಿ 25ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್‌, ಡೀಸೆಲ್‌ ದರ ಎಷ್ಟಿದೆ ತಿಳಿಯಿರಿ

ಜನವರಿ 25 ರಂತೆ ಕರ್ನಾಟಕದ ಜಿಲ್ಲೆಗಳಲ್ಲಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ಇತ್ತೀಚಿನ ಅವಲೋಕನ, ಪ್ರಾದೇಶಿಕ ವ್ಯತ್ಯಾಸಗಳು ಮತ್ತು ಚಾಲಕರ ಮೇಲಿನ ಪರಿಣಾಮಗಳನ್ನು ಎತ್ತಿ ತೋರಿಸುತ್ತದೆ.

ತಾಕತ್ತು ಪ್ರದರ್ಶನಕ್ಕೆ ಟಾಟಾ, ಮಾರುತಿ & ಟೊಯೊಟಾ ಸಿದ್ಧತೆ..

ಭಾರತವು ಅತಿದೊಡ್ಡ ಕಾರು ಮಾರುಕಟ್ಟೆಯನ್ನು ಹೊಂದಿದೆ. 2026ರ ಟಾಟಾ ಮೋಟಾರ್ಸ್, ಮಾರುತಿ ಸುಜುಕಿ ಹಾಗೂ ಟೊಯೊಟಾ ಕಂಪನಿಗೆ ಮಹತ್ವದ ವರ್ಷವಾಗಿದೆ. ಅತಿ ಶೀಘ್ರದಲ್ಲೇ ಈ 3 ಕಂಪನಿಗಳು ಹೊಚ್ಚ ಹೊಸ ಸಿಯೆರಾ ಇವಿ, ಇ ವಿಟಾರಾ ಹಾಗೂ ಎಬೆಲ್ಲಾ ಹೆಸರಿನ ಕಾರುಗಳನ್ನು ಬಿಡುಗಡೆಗೊಳಿಸಲಿವೆ. ಇವುಗಳೆಲ್ಲ ಎಲೆಕ್ಟ್ರಿಕ್ ಎಸ್‌ಯುವಿಯಾಗಿವೆ. ಸಖತ್ ಸ್ಟೈಲಿಶ್ ಲುಕ್ ಹೊಂದಿದ್ದು, ಪ್ರೀಮಿಯಂ ವೈಶಿಷ್ಟ್ಯಗಳಿಗೂ ಸಾಕ್ಷಿಯಾಗಿವೆ. ಬನ್ನಿ, ಈ ಕಾರುಗಳ ನಿರೀಕ್ಷಿತ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಕ್ಷಿಪ್ತವಾದ ವಿವರಗಳನ್ನು ತಿಳಿಯೋಣ.
Advertisement

Hero: ಅಗ್ಗದ ಬೈಕ್‌ಗಳನ್ನು ಖರೀದಿಸುವವರಿಗೆ ಹೀರೋ ಕಂಪನಿಯಿಂದ..

ಹೀರೋ ಮೋಟೋಕಾರ್ಪ್ (Hero MotoCorp), ದೇಶೀಯ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಸಿಂಹಪಾಲನ್ನು ಹೊಂದಿದೆ. ಸದ್ದಿಲ್ಲದೇ ತನ್ನ ಪ್ರಯಾಣಿಕ ಮೋಟಾರ್‌ಸೈಕಲ್‌ಗಳ ಬೆಲೆಯನ್ನು ಪರಿಷ್ಕರಿಸಿದೆ. ಜನಪ್ರಿಯ ಹೆಚ್ಎಫ್ 100, ಹೆಚ್ಎಫ್ ಡಿಲಕ್ಸ್ ಹಾಗೂ ಪ್ಯಾಶನ್ ಪ್ಲಸ್‌ನಂತಹ ಬೈಕ್‌ಗಳ ಬೆಲೆಯನ್ನು ಹೆಚ್ಚಿಸಿದೆ. ಇವುಗಳ ದರವು ರೂ.250 ರಿಂದ ರೂ.750 ವರೆಗೆ ಅಧಿಕಗೊಂಡಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

ಆನ್‌ಲೈನ್ ಆರೋಗ್ಯ ವಿಮೆ: ಕ್ಷಿಪ್ರ ಖರೀದಿ, ದೊಡ್ಡ ಗೊಂದಲ!

ಆನ್‌ಲೈನ್ ಆರೋಗ್ಯ ವಿಮಾ ಖರೀದಿಗಳು ಹೇಗೆ ಕಾರ್ಯನಿರ್ವಹಿಸುತ್ತವೆ, ಪೂರ್ಣ ಬಹಿರಂಗಪಡಿಸುವಿಕೆಯ ಮಹತ್ವ ಮತ್ತು ಎಚ್ಚರಿಕೆಯ ಪರಿಶೀಲನೆಗಳು ಮತ್ತು ಸ್ಪಷ್ಟ ಮಾಹಿತಿಯೊಂದಿಗೆ ಹಕ್ಕುಗಳನ್ನು ಹೇಗೆ ರಕ್ಷಿಸುವುದು ಎಂಬುದನ್ನು ಅನ್ವೇಷಿಸಿ.

ನಿಮ್ಮ ಮಕ್ಕಳ ವಿವಾಹಕ್ಕೆ ₹50 ಲಕ್ಷ ಬೇಕ?

ವಿವಾಹ ವೆಚ್ಚಗಳಿಗಾಗಿ 20 ವರ್ಷಗಳಲ್ಲಿ ₹50 ಲಕ್ಷ ತಲುಪಲು ವಾರ್ಷಿಕ ಹೆಚ್ಚಳದೊಂದಿಗೆ ₹12,000 ರಿಂದ ಮಾಸಿಕ ಹೂಡಿಕೆಗಳನ್ನು ಸ್ಟೆಪ್-ಅಪ್ SIP ಹೇಗೆ ಹೆಚ್ಚಿಸಬಹುದು ಎಂಬುದನ್ನು ಕಲಿಯಿರಿ, ವಿವೇಚನಾಯುಕ್ತ ಅಪಾಯ ಮತ್ತು ಶಿಸ್ತಿನೊಂದಿಗೆ.

ಗೋಯಲ್ ಕೆಳಗಿಳಿದ ನಂತರ ಜೊಮಾಟೊ ನಾಯಕತ್ವ ಬದಲಾವಣೆ

ದೀಪಿಂದರ್ ಗೋಯಲ್ ಅವರು ಗ್ರೂಪ್ ಮುಖ್ಯ ಕಾರ್ಯನಿರ್ವಾಹಕ ಹುದ್ದೆಯಿಂದ ಕೆಳಗಿಳಿದು ಅಲ್ಬಿಂದರ್ ಧಿಂಡ್ಸಾ ಅಧಿಕಾರ ವಹಿಸಿಕೊಳ್ಳುವುದರೊಂದಿಗೆ ಜೊಮಾಟೊ ನಾಯಕತ್ವ ಬದಲಾವಣೆಯನ್ನು ಘೋಷಿಸಿದೆ, ಇದು ಭಾರತೀಯ ವಿತರಣಾ ವೇದಿಕೆಗೆ ಕಾರ್ಯತಂತ್ರದ ಬದಲಾವಣೆಯನ್ನು ಸೂಚಿಸುತ್ತದೆ.

ಮಾರುತಿಯ ಗತ್ತು ಹೆಚ್ಚಿಸಿದ ಕಾರಿದು.. ಬೈಕ್‌ನಂತೆ 34 Km ಮೈಲೇಜ್..

ಮಾರುತಿ ಸುಜುಕಿ ವ್ಯಾಗನ್ಆರ್ (Maruti Suzuki WagonR) ಜನಪ್ರಿಯ ಹ್ಯಾಚ್‌ಬ್ಯಾಕ್ ಎಂದೇ ಮನೆ ಮಾತಾಗಿದೆ. ಈ ಕಾರಿಗೆ ದಶಕಗಳಿಂದಲೂ ಫುಲ್ ಡಿಮ್ಯಾಂಡ್ ಇದ್ದು, ಗ್ರಾಹಕರು ಕೂಡ ಮುಗಿಬಿದ್ದು ಖರೀದಿಸುತ್ತಿದ್ದಾರೆ. ಇದು ಕಡಿಮೆ ನಿರ್ವಹಣಾ ವೆಚ್ಚ ಹೊಂದಿದ್ದು, ಉತ್ತಮ ಇಂಧನ ದಕ್ಷತೆಗೂ ಹೆಸರುವಾಸಿಯಾಗಿದೆ. ನೋಡಲು ತುಂಬಾ ಚೆನ್ನಾಗಿದ್ದು, ನಾನಾ ಬಗೆಯ ಹೊಸತನಗಳಿಗೂ ಸಾಕ್ಷಿಯಾಗಿದೆ. ಅತ್ಯಂತ ಕೈಗೆಟುಕುವ ಬೆಲೆಯಲ್ಲಿಯೂ ಲಭ್ಯವಿದೆ.

Honda: ಬಡವರ ಬೈಕ್‌ಗೆ ಮನಸೋತ ಜನ.. ಹೀರೋ ಸ್ಪ್ಲೆಂಡರ್‌ಗೆ ನಂ.1..

ಹೋಂಡಾ ಶೈನ್ (Honda Shine) ಪ್ರಮುಖ ಮೋಟಾರ್‌ಸೈಕಲ್‌ ಎಂದೇ ಖ್ಯಾತಿಗಳಿಸಿದೆ. ದಿನದಿಂದ ದಿನಕ್ಕೆ ಡಿಮ್ಯಾಂಡ್ ಹೆಚ್ಚಾಗುತ್ತಲೇ ಇದೆ. ಗ್ರಾಹಕರು ಕೂಡ ನಾ ಮುಂದು - ತಾ ಮುಂದು ಎಂಬಂತೆ ಇಷ್ಟಪಟ್ಟು ಕೊಂಡುಕೊಳ್ಳುತ್ತಿದ್ದಾರೆ. ಕಳೆದ ತಿಂಗಳು (ಡಿಸೆಂಬರ್-2025) ಉತ್ತಮ ಸಂಖ್ಯೆಯಲ್ಲಿ ಮಾರಾಟಗೊಂಡಿದೆ. ಒಟ್ಟು 1,41,602 ಯುನಿಟ್‌ಗಳನ್ನು ಖರೀದಿದಾರರಿಗೆ ವಿತರಣೆ ಮಾಡಲಾಗಿದೆ. 2024ರ ಇದೇ ಅವಧಿಯಲ್ಲಿ 1,00,841 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿಅಂಶವನ್ನು ವಿಶ್ಲೇಷಣೆ ಮಾಡಿದಾಗ, ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ 40.42% ಬೆಳವಣಿಗೆಯಾಗಿದೆ.

Best 7-Seater: 26.11 ಕಿ.ಮೀ ಮೈಲೇಜ್...ಡೀಲರ್‌ಗಳ ಫೆವರೆಟ್ 7-ಸೀಟರ್

ದೇಶದ ಅತ್ಯಂತ ಜನಪ್ರಿಯ 7-ಸೀಟರ್ (Best 7-Seater) MPV ಆಗಿರುವ ಮಾರುತಿ ಸುಜುಕಿ ಎರ್ಟಿಗಾ (Maruti Suzuki Ertiga), 2025 ರಲ್ಲೂ ತನ್ನ ಮಾರಾಟ ಪ್ರಾಬಲ್ಯವನ್ನು ತೋರಿಸಿದೆ. ದೇಶದ ಅತಿ ಹೆಚ್ಚು ಮಾರಾಟ ಕಾಣುವ 7-ಸೀಟರ್ ಕಾರಾಗಿ ಗುರ್ತಿಸಿಕೊಂಡಿದೆ. ಇದು ಪ್ರತಿ ತಿಂಗಳು ತನ್ನ ವಿಭಾಗದಲ್ಲಿ ಸ್ಥಿರವಾಗಿ ಮೊದಲ ಸ್ಥಾನದಲ್ಲಿ ಮುಂದುವರಿದಿದೆ. 2025 ರಲ್ಲಿಯೂ ಇದರ ಏಕಪಕ್ಷೀಯ ಪ್ರಾಬಲ್ಯವು ಸ್ಪಷ್ಟವಾಗಿ ಕಂಡುಬಂದಿದ್ದು, 2025 ರಲ್ಲಿ ಪ್ರತಿದಿನ 526 ಜನರು ಮಾರುತಿ ಎರ್ಟಿಗಾವನ್ನು ಖರೀದಿಸಿದ್ದಾರೆ ಎಂದು ವರದಿಯಾಗಿದೆ.

ಜನವರಿ 24ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್‌, ಡೀಸೆಲ್‌ ದರ ಎಷ್ಟಿದೆ ತಿಳಿಯಿರಿ

ಜನವರಿ 24 ರಂದು ಕರ್ನಾಟಕ ಇಂಧನ ಬೆಲೆಗಳ ಅವಲೋಕನ, ಬೆಂಗಳೂರು ಮತ್ತು ಇತರ ಜಿಲ್ಲೆಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳ ವಿವರ, ನಿಖರ ವೆಚ್ಚದ ಅರಿವಿಗಾಗಿ.
Advertisement

Mahindra Thar: ಹೊಸ ಮಹೀಂದ್ರಾ ಥಾರ್ ರಾಕ್ಸ್ ಸ್ಟಾರ್ ಎಡಿಷನ್..

ಹೊಚ್ಚ ಹೊಸ ಮಹೀಂದ್ರಾ ಥಾರ್ ರಾಕ್ಸ್ ಸ್ಟಾರ್ ಎಡಿಷನ್ (Mahindra Thar Roxx Star Edition) ಶನಿವಾರ ಅದ್ದೂರಿಯಾಗಿ ಬಿಡುಗಡೆಗೊಂಡಿದೆ. ಇದೊಂದು ಆಫ್-ರೋಡ್ ಎಸ್‌ಯುವಿಯಾಗಿದೆ. ನೋಡಲು ತುಂಬಾ ಚೆನ್ನಾಗಿದ್ದು, ಹಲವು ಹೊಸತನಗಳಿಗೂ ಸಾಕ್ಷಿಯಾಗಿದ್ದು, ಹೊರ ಹಾಗೂ ಒಳಭಾಗದ ವಿನ್ಯಾಸದಲ್ಲಿ ಕೆಲವೊಂದು ಕಾಸ್ಮೆಟಿಕ್ ಬದಲಾವಣೆಗಳನ್ನು ಪಡೆದುಕೊಂಡಿದೆ. ಬನ್ನಿ, ಈ ಕಾರಿನ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.

ಬೆಂಗಳೂರು ಟ್ರಾಫಿಕ್ ಪೊಲೀಸರಿಗೆ 100 ಎಥರ್ ಜೂನಿಯರ್ ಹೆಲ್ಮೆಟ್‌ಗಳು

ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸದ (National Road Safety Mont) ಅಂಗವಾಗಿ, ಭಾರತದ ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕರಲ್ಲಿ ಒಂದಾದ ಎಥರ್ ಎನರ್ಜಿ ಇಂದು ಬೆಂಗಳೂರು ಟ್ರಾಫಿಕ್ ಪೊಲೀಸರಿಗೆ 100 ಐಎಸ್‌ಐ ಪ್ರಮಾಣೀಕೃತ ಎಥರ್ ಜೂನಿಯರ್ ಹೆಲ್ಮೆಟ್‌ಗಳನ್ನು ಹಸ್ತಾಂತರಿಸಿದೆ. ಯುವ ದ್ವಿಚಕ್ರ ವಾಹನ ಪ್ರಯಾಣಿಕರಲ್ಲಿ ಸುರಕ್ಷಿತ ಸವಾರಿ ಅಭ್ಯಾಸವನ್ನು ಉತ್ತೇಜಿಸಲು ಎಥರ್‌ನ ಉಪಕ್ರಮದ ಒಂದು ಭಾಗವಾಗಿದೆ. ಜಾಗೃತಿ ಮೂಡಿಸಲು ಮತ್ತು ಸುರಕ್ಷಿತ ಸವಾರಿ ಅಭ್ಯಾಸಗಳ ಆರಂಭಿಕ ಅಳವಡಿಕೆಯನ್ನು ಉತ್ತೇಜಿಸಲು ಬೆಂಗಳೂರು ಸಂಚಾರ ಪೊಲೀಸರು ನಗರದಾದ್ಯಂತ ಈ ಹೆಲ್ಮೆಟ್ ‌ಗಳನ್ನು ವಿತರಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

Tata: 293 Km ರೇಂಜ್.. ಅಗ್ಗದ ಬೆಲೆಗೆ ಹೊಸ ಟಾಟಾ ಎಲೆಕ್ಟ್ರಿಕ್..

ಟಾಟಾ ಟಿಯಾಗೊ ಇವಿ (Tata Tiago EV) ಪ್ರಮುಖ ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್‌ ಆಗಿದೆ. ಪ್ರತಿ ತಿಂಗಳು ಉತ್ತಮ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ. ಗ್ರಾಹಕರು ಕೂಡ ನಾ ಮುಂದು - ತಾ ಮುಂದು ಎಂಬಂತೆ ಮುಗಿಬಿದ್ದು ಖರೀದಿಸುತ್ತಿದ್ದಾರೆ. ಸದ್ಯ, ಇದೇ ಕಾರನ್ನು ಮತ್ತಷ್ಟು ಜನರಿಗೆ ಹತ್ತಿರವಾಗಿಸಲು ಟಾಟಾ ಮುಂದಾಗಿದೆ. 2026ರ 'ಟಿಯಾಗೊ ಇವಿ ಫೇಸ್‌ಲಿಫ್ಟ್'ನ್ನು ಬಿಡುಗಡೆಗೊಳಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ ಎಂದು ವರದಿಯಾಗಿದೆ. ಬನ್ನಿ, ಈ ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್‌ನ ಬೆಲೆ ಎಷ್ಟಿರಲಿದೆ.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.

ಆಟೋ ಚಾಲಕರ ವಿರುದ್ಧ ಗೆದ್ದ ಬೈಕ್ ಟ್ಯಾಕ್ಸಿ: ಹೈಕೋರ್ಟ್ ಅಭಯ!

ಕರ್ನಾಟಕ ಹೈಕೋರ್ಟ್ ಶುಕ್ರವಾರ ರಾಜ್ಯದಲ್ಲಿ ಬೈಕ್ ಟ್ಯಾಕ್ಸಿಗಳ ಸಂಚಾರಕ್ಕೆ ಅನುಮತಿ ನೀಡಿದೆ. ಬೈಕ್ ಟ್ಯಾಕ್ಸಿ ಸೇವೆಗಳನ್ನು ನೀಡಲು ಬಯಸುವ ಬೈಕ್ ಮಾಲೀಕರು ಮತ್ತು ಸಂಗ್ರಾಹಕರಿಗೆ ಪರವಾನಗಿಗಳನ್ನು ನೀಡುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಈ ನಿರ್ಧಾರವು ರಾಜ್ಯಾದ್ಯಂತ ಪ್ರಯಾಣಿಕರು ಮತ್ತು ಬೈಕ್ ಟ್ಯಾಕ್ಸಿ ನಿರ್ವಾಹಕರಿಗೆ ಪರಿಹಾರವನ್ನು ತಂದಿದೆ. ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಸಿ.ಎಂ. ಜೋಶಿ ಅವರನ್ನೊಳಗೊಂಡ ವಿಭಾಗೀಯ ಪೀಠವು ಕಳೆದ ವರ್ಷದ ಏಪ್ರಿಲ್‌ನಲ್ಲಿ ಏಕ ಪೀಠದ ಆದೇಶವನ್ನು ರದ್ದುಗೊಳಿಸಿ ಈ ಆದೇಶವನ್ನು ಹೊರಡಿಸಿದೆ.

Honda Activa: ಪವರ್ ತೋರಿಸಿದ ಹೋಂಡಾ ಆಕ್ಟಿವಾ.. ಫುಲ್ ಡಿಮ್ಯಾಂಡ್!

ಹೋಂಡಾ ಆಕ್ಟಿವಾ (Honda Activa) ಜನಪ್ರಿಯ ಸ್ಕೂಟರ್ ಎಂದೇ ಹೆಸರುವಾಸಿಯಾಗಿದೆ. ಇದಕ್ಕೆ ಮನಸೋಲದವರೇ ಇಲ್ಲ. ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚಾಗುತ್ತಿದೆ. ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿಸುತ್ತಿದ್ದಾರೆ. ಕಳೆದ ತಿಂಗಳು (ಡಿಸೆಂಬರ್ - 2025) ಭಾರೀ ಸಂಖ್ಯೆಯಲ್ಲಿಯೂ ಮಾರಾಟಗೊಂಡಿದೆ. ಒಟ್ಟು 1,81,604 ಯುನಿಟ್‌ಗಳನ್ನು ಖರೀದಿದಾರರಿಗೆ ವಿತರಿಸಲಾಗಿದೆ. 2024ರ ಇದೇ ಅವಧಿಯಲ್ಲಿ 1,20,981 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿಅಂಶವನ್ನು ಲೆಕ್ಕ ಹಾಕಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ 50.11% ಪ್ರಗತಿಯಾಗಿದೆ.