Hero Splendor: ಈ ವರ್ಷ ಸ್ಪ್ಲೆಂಡರ್ ಖರೀದಿಸುವವರಿಗೆ ಶಾಕ್
ಆಟೋಮೊಬೈಲ್ಸ್
- 8 month, 6 days ago
ಹೀರೋ ಸ್ಪ್ಲೆಂಡರ್ (Hero Splendor) ಮೂರು ದಶಕಗಳಿಗೂ ಹೆಚ್ಚು ಕಾಲ ಭಾರತೀಯ ಮಾರುಕಟ್ಟೆಯಲ್ಲಿ ವಿಶ್ವಾಸಾರ್ಹ ಹೆಸರಾಗಿದ್ದು, ಬಡವರ ಬಂಡಿ ಎಂದೇ ಜನಪ್ರಿಯತೆ ಪಡೆದುಕೊಂಡಿದೆ. ಈಗ ಸ್ಪ್ಲೆಂಡರ್ ಖರೀದಿದಾರರಿಗೆ ಕಹಿ ಸುದ್ದಿ ಏನೆಂದರೆ ಹೀರೋ ಮೋಟೋಕಾರ್ಪ್ 2026 ಕ್ಕೆ ಹೀರೋ ಸ್ಪ್ಲೆಂಡರ್ ಪ್ಲಸ್ ಬೆಲೆ ಏರಿಕೆಯನ್ನು ಘೋಷಿಸಿದೆ. ಇದರಲ್ಲಿ ಸ್ಟ್ಯಾಂಡರ್ಡ್ ಸ್ಪ್ಲೆಂಡರ್ ಪ್ಲಸ್, ಸ್ಪ್ಲೆಂಡರ್ ಪ್ಲಸ್ i3S ಮತ್ತು ಸ್ಪ್ಲೆಂಡರ್ ಪ್ಲಸ್ Xtec ಟ್ರಿಮ್‌ಗಳಂತಹ ವೇರಿಯೆಂಟ್‌ಗಳು ಸೇರಿವೆ. ಆದರೆ ಈ ಬೆಲೆ ಏರಿಕೆಯು ಅಷ್ಟೇನೂ ಪ್ರಭಾವ ಬೀರುವುದಿಲ್ಲ, ಏಕೆಂದರೆ ಇದು ಸಣ್ಣ ಬೆಲೆ ಪರಿಷ್ಕರಣೆಯಾಗಿದೆ.